Tag: Somnath Temple

  • ಗುಜರಾತ್‌ನ ಸೋಮನಾಥದಲ್ಲಿ 9 ಅಕ್ರಮ ಮಸೀದಿಗಳ ತೆರವು

    ಗುಜರಾತ್‌ನ ಸೋಮನಾಥದಲ್ಲಿ 9 ಅಕ್ರಮ ಮಸೀದಿಗಳ ತೆರವು

    ಗಾಂಧೀನಗರ: ಗುಜರಾತ್‌ನ (Gujarat) ಸೋಮನಾಥ ದೇವಾಲಯದ ಸುತ್ತ ಅತಿಕ್ರಮಣ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, 9 ಮಸೀದಿ ಮತ್ತು ದರ್ಗಾ ಸೇರಿದಂತೆ 45 ವಸತಿ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.

    ಸೋಮನಾಥ ದೇವಾಲಯದ ಬಳಿಯ ಸರ್ಕಾರಿ ಭೂಮಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣವಾಗಿತ್ತು. ಈ ಭೂಮಿಯಲ್ಲಿ ಐವತ್ತಕ್ಕೂ ಹೆಚ್ಚು ಕಟ್ಟಡಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಶಂಕಿತ ಡೆಂಗ್ಯೂಗೆ 5 ವರ್ಷದ ಬಾಲಕ ಬಲಿ

    MOSQUE

    1.5 ಕಿಮೀ ದೂರದಲ್ಲಿರುವ ಸೋಮನಾಥ ದೇವಾಲಯದ ಬಳಿ 103 ಎಕರೆ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿರುವುದು ಪೊಲೀಸ್ ಮತ್ತು ಆಡಳಿತಾತ್ಮಕ ಕಾರ್ಯಾಚರಣೆಗೆ ಕಾರಣವಾಯಿತು. ಈ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ಭಾಗವಾಗಿ 45 ವಸತಿ ಕಟ್ಟಡಗಳ ಜೊತೆಗೆ ಒಂಬತ್ತು ಧಾರ್ಮಿಕ ಸ್ಥಳಗಳನ್ನು ಕೆಡವಲಾಯಿತು. ಸುಮಾರು 320 ಕೋಟಿ ಮೌಲ್ಯದ ಅಂದಾಜು 102 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ.

    ಜಿಲ್ಲಾಧಿಕಾರಿ ಡಿ.ಡಿ. ಸೋಮನಾಥದಲ್ಲಿನ ಅಕ್ರಮ ಒತ್ತುವರಿಯನ್ನು ತೆರವು ಮಾಡುವಂತೆ ಆಡಳಿತದಿಂದ ಬಹಳ ಹಿಂದೆಯೇ ನೋಟಿಸ್ ನೀಡಲಾಗಿತ್ತು ಎಂದು ಜಡೇಜಾ ಹೇಳಿದ್ದಾರೆ. ಆದರೆ, ಈ ಎಚ್ಚರಿಕೆಗಳ ಹೊರತಾಗಿಯೂ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಗುಜರಾತ್‌ನ ಸೋಮನಾಥದಲ್ಲಿ 9 ಅಕ್ರಮ ಮಸೀದಿಗಳ ತೆರವು

    ಉಜ್ಜಯಿನಿ ಕಾರಿಡಾರ್‌ನಂತೆಯೇ, ಸೋಮನಾಥದಲ್ಲಿ ಹೊಸ ಕಾರಿಡಾರ್ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಅನುಮೋದನೆಯನ್ನು ನೀಡಲಾಗಿದೆ. ಸೋಮನಾಥ ದೇವಾಲಯದ ವಿವಿಧ ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ.

  • ಶಿವಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಿದ ಪಾಂಡ್ಯ – ಹಿಗ್ಗಾಮುಗ್ಗಾ ಟ್ರೋಲ್‌ಗೆಳೆದ ಮುಂಬೈ ಫ್ಯಾನ್ಸ್‌

    ಶಿವಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಿದ ಪಾಂಡ್ಯ – ಹಿಗ್ಗಾಮುಗ್ಗಾ ಟ್ರೋಲ್‌ಗೆಳೆದ ಮುಂಬೈ ಫ್ಯಾನ್ಸ್‌

    – ಗೆಲುವಿನ ಖಾತೆ ತೆರೆಯಲು ಪ್ರಾರ್ಥನೆ ಸಲ್ಲಿಸಿದ್ರಾ ಹಾರ್ದಿಕ್‌?

    ಮುಂಬೈ: ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಶುಕ್ರವಾರ (ಇಂದು) ಸೋಮನಾಥ ದೇವಸ್ಥಾನಕ್ಕೆ (Somnath Temple) ಭೇಟಿ ನೀಡಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಿ, ಕೈಮುಗಿದು ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ಭಕ್ತಿಯಿಂದ ಶಿವನ ಶ್ಲೋಕ ಪಠಿಸಿದ್ದಾರೆ.

    ಹಾರ್ದಿಕ್‌ ಪಾಂಡ್ಯ ಅವರ ಈ ವಿಶಿಷ್ಟ ಕ್ಷಣದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಮುಂಬೈ (Mumbai Indians) ತಂಡದ ಅಭಿಮಾನಿಗಳು ಪಾಂಡ್ಯರನ್ನ ಟ್ರೋಲಿಗೆಳೆದಿದ್ದಾರೆ. ಇದನ್ನೂ ಓದಿ: ಸಿಕ್ಸರ್‌ ಬೌಂಡರಿ ಆಟದಲ್ಲಿ ಪಂಜಾಬ್‌ಗೆ 3 ವಿಕೆಟ್‌ಗಳ ರೋಚಕ ಜಯ – ತವರಿನಲ್ಲೇ ಟೈಟಾನ್ಸ್‌ಗೆ ಸೋಲು!

    ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL 2024) ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಗುಜರಾತ್‌ ಟೈಟಾನ್ಸ್ ಎದುರು ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್, ನಂತರ ಸನ್‌ರೈಸರ್ಸ್‌ ಹೈದರಾಬಾದ್‌ (SRH) ಹಾಗೂ ರಾಜಸ್ಥಾನ್‌ ರಾಯಲ್ಸ್‌ (RR) ವಿರುದ್ಧವೂ ಸೋಲು ಅನುಭವಿಸಿತ್ತು. ಆರಂಭಿಕ ಮೂರು ಪಂದಗಳಲ್ಲೂ ಸೋತ ಕಾರಣ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆಯದೇ ಕೊನೇ ಸ್ಥಾನಕ್ಕೆ ಕುಸಿದಿದೆ.

    ಇದರಿಂದಾಗಿ ಪಾಂಡ್ಯ ಅವರನ್ನ ಟ್ರೋಲಿಗೆಳೆದಿರುವ ಕ್ರಿಕೆಟ್‌ ಅಭಿಮಾನಿಗಳು, ಇನ್ನಾದರೂ ಮುಂಬೈ ತಂಡ ಗೆಲ್ಲಲಿ, ನನ್ನನ್ನ ಸಕ್ಸಸ್‌ಫುಲ್‌ ಕ್ಯಾಪ್ಟನ್‌ ಅಂತಾ ಒಪ್ಪಿಕೊಳ್ಳಲಿ ಎಂದು ಪಾಂಡ್ಯ ಪ್ರಾರ್ಥನೆ ಮಾಡಿರಬೇಕು. ಪಾಪ ಗೆಲ್ಲಿಸಿಬಿಡಪ್ಪ ದೇವರೆ ಅಂತಾ ಕಿಚಾಯಿಸಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್‌ ತಾಯಿ ಹೇಳಿದ್ದೇನು?

    ಇನ್ನೂ ಪಾಂಡ್ಯ ನಾಯಕತ್ವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾದ ಮಾಜಿ ಕೋಚ್‌ ರವಿಶಾಸ್ತ್ರಿ, ಮೂರು ಪಂದ್ಯಗಳಲ್ಲೂ ಸೋತಿರುವುದು ಹಾರ್ದಿಕ್‌ ಪಾಂಡ್ಯ ಅವರ ನಾಯಕತ್ವವನ್ನು ಇನ್ನಷ್ಟು ಹದಗೆಡಿಸಿದೆ. ಅವರ ವೃತ್ತಿಜೀವನದಲ್ಲೂ ಇದು ಕಠಿಣ ಹಂತ. ಪಾಂಡ್ಯ ಅವರು ಈಗ ಆಡುತ್ತಿರೋದು ಭಾರತ ಕ್ರಿಕೆಟ್‌ ತಂಡವಲ್ಲ. ಇದು ಫ್ರಾಂಚೈಸಿ ಕ್ರಿಕೆಟ್‌. ಅಧಿಕ ಹಣ ಪಾವತಿಸಿರುತ್ತಾರೆ. ಫ್ರಾಂಚೈಸಿಯ ಮುಖ್ಯಸ್ಥರು ಯಾರನ್ನ ನಾಯಕರನ್ನಾಗಿ ಮಾಡಲು ಬಯಸುತ್ತಾರೋ, ಅವರೇ ನಾಯಕರಾಗುತ್ತಾರೆ. ಪಾಂಡ್ಯ ಉತ್ತಮವಾಗಿ ತಂಡವನ್ನು ನಿರ್ವಹಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಸೂಪರ್‌ ಸಂಡೇ ಮತ್ತೊಂದು ಮ್ಯಾಚ್‌:
    ಇದೇ ಭಾನುವಾರ ಮುಂಬೈ ಇಂಡಿಯನ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಲಿದೆ. ಅಂದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಸೂರ್ಯಕುಮಾರ್‌ ಯಾದವ್‌ ಸಹ ಮುಂಬೈಗೆ ಕಂಬ್ಯಾಕ್‌ ಮಾಡಿದ್ದು, ಗೆಲ್ಲುವ ವಿಶ್ವಾಸ ಹೊಂದಿದೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಉಡೀಸ್‌ -‌ ಬರೋಬ್ಬರಿ 35 ಕೋಟಿ ಮಂದಿ ವೀಕ್ಷಣೆ!

  • ಗುಜರಾತ್‍ನ ಸೋಮನಾಥ ದೇವಸ್ಥಾನಕ್ಕೆ ಮುಖೇಶ್ ಅಂಬಾನಿ ಭೇಟಿ- 1.51 ಕೋಟಿ ರೂ. ದೇಣಿಗೆ

    ಗುಜರಾತ್‍ನ ಸೋಮನಾಥ ದೇವಸ್ಥಾನಕ್ಕೆ ಮುಖೇಶ್ ಅಂಬಾನಿ ಭೇಟಿ- 1.51 ಕೋಟಿ ರೂ. ದೇಣಿಗೆ

    ಅಹಮದಾಬಾದ್: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani) ಗುಜರಾತ್‍ನ (Gujarat) ಸೋಮನಾಥ ದೇವಾಲಯದ (Somnath Temple) ಟ್ರಸ್ಟ್‌ಗೆ 1.51 ಕೋಟಿ ರೂ. ದೇಣಿಗೆ ನೀಡಿದ್ದಾರೆ.

    ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ ಮುಖೇಶ್ ಅಂಬಾನಿ ದೇವರ ದರ್ಶನ ಪಡೆದರು. ಈ ವೇಳೆ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಭಾಗಿಯಾಗಿದ್ದರು. ಅವರನ್ನು ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸ್ವಾಗತಿಸಿದರು. ಈ ವೇಳೆ ಮುಖೇಶ್ ಅಂಬಾನಿ ಹಾಗೂ ಆಕಾಶ್ ಅಂಬಾನಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ಪ್ರಾರ್ಥಿಸಿದರು. ಇದನ್ನೂ ಓದಿ: ಪೊಲೀಸ್‌ ಸರ್ಪಗಾವಲು – ಆಳಂದ ದರ್ಗಾದಲ್ಲಿ ನಡೆಯಿತು ಉರುಸ್, ಶಿವಲಿಂಗ ಪೂಜೆ

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಖೇಶ್ ಅಂಬಾನಿ ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ 1.5 ಕೋಟಿ ರೂ. ಕಾಣಿಕೆ ಸಲ್ಲಿಸಿದ್ದರು. ಈ ವೇಳೆ ರಾಧಿಕಾ ಮರ್ಚೆಂಟ್ ಮತ್ತು ರಿಲಯನ್ಸ್ ರಿಟೇಲ್ ಲಿಮಿಟೆಡ್ ನಿರ್ದೇಶಕ ಮನೋಜ್ ಮೋದಿ ಜೊತೆಗಿದ್ದರು. ಇದನ್ನೂ ಓದಿ: ಹೆಚ್‌ಡಿಕೆ ಸಿಎಂ ಮಾಡಿದ್ದು ನಾನು: ಸಿದ್ದರಾಮಯ್ಯ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೋಮನಾಥ ಮಂದಿರದ ಕೆಳಗೆ 3 ಅಂತಸ್ತಿನ ಕಟ್ಟಡ, ಬೌದ್ಧ ಗುಹೆ ಪತ್ತೆ

    ಸೋಮನಾಥ ಮಂದಿರದ ಕೆಳಗೆ 3 ಅಂತಸ್ತಿನ ಕಟ್ಟಡ, ಬೌದ್ಧ ಗುಹೆ ಪತ್ತೆ

    – 12 ಮೀಟರ್ ಕೆಳಗಿನವರೆಗೆ ಅಧ್ಯಯನ

    ಗಾಂಧಿನಗರ: ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದ ಅಡಿಯಲ್ಲಿ ಮೂರು ಮಹಡಿಯ ಕಟ್ಟಡ ಇರೋದು ಪತ್ತೆಯಾಗಿದೆ. ಐಐಟಿ ಗಾಂಧಿನಗರ ಮತ್ತು ನಾಲ್ಕು ಸಂಸ್ಥೆಗಳ ಪುರಾತತ್ವ ತಜ್ಞರು ದೇಗುಲದ ಕೆಳಗಿನ ಕಟ್ಟಡವನ್ನ ಪತ್ತೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಮತ್ತು ದೇವಾಲಯದ ಟ್ರಸ್ಟಿ ಆಗಿರುವ ನರೇಂದ್ರ ಮೋದಿ ಅವರ ಆದೇಶದ ಮೇಲೆ ಈ ಉತ್ಖನನ ನಡೆಸಲಾಗಿತ್ತು. ಒಂದು ವರ್ಷದ ಹಿಂದೆ ದೆಹಲಿಯ ಸಭೆಯಲ್ಲಿ ಪುರಾತತ್ವ ಇಲಾಖೆಗೆ ಉತ್ಖನನ ನಡೆಸುವಂತೆ ಪ್ರಧಾನಿಗಳು ಆದೇಶಿಸಿದ್ದರು.

    ‘ಎಲ್’ ಆಕಾರದಲ್ಲಿರುವ ಕಟ್ಟಡ: ಕಳೆದ ಒಂದು ವರ್ಷದಿಂದ ಅಧ್ಯಯನ ನಡೆಸಿರುವ ಪುರಾತತ್ವ ಇಲಾಖೆ 32 ಪುಟಗಳ ವರದಿಯನ್ನ ಸಿದ್ಧಪಡಿಸಿ ಸೋಮನಾಥ್ ಟ್ರಸ್ಟ್ ಗೆ ನೀಡಿದೆ. ಮಂದಿರದ ಕೆಳಗೆ ‘ಎಲ್’ ಆಕಾರದಲ್ಲಿ ಮತ್ತೊಂದು ಕಟ್ಟಡವಿದೆ. ಸೋಮನಾಥ ದೇವಾಲಯದ ದಿಗ್ವಿಜಯ್ ದ್ವಾರ ಮತ್ತು ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಮೆಯ ಆಸುಪಾಸಿನಲ್ಲಿ ಬೌಧ್ಧ ಗುಹೆಗಳಿವೆ ಎಂದು ಉತ್ಖನನ ತಂಡ ಹೇಳಿದೆ.

    ತಜ್ಷರ ತಂಡ ಸುಮಾರು 5 ಕೋಟಿ ಮೌಲ್ಯದ ಮಶೀನ್ ಬಳಸಿ ಶೋಧನೆ ನಡೆಸಿದೆ. ಭೂಮಿಯ ಕೆಳಗೆ ಅಂದ್ರೆ 12 ಮೀಟರ್ ವರೆಗೆ ಜಿಪಿಆರ್ ಸಹಾಯದಿಂದ ಶೋಧ ನಡೆಸಿದೆ. ದೇವಾಲಯದ ಕೆಳಗೆ ಕಟ್ಟಡವಿದ್ದು, ಅದು ಪ್ರವೇಶ ದ್ವಾರವನ್ನ ಹೊಂದಿದೆ ಎಂದು ತಜ್ಞರ ತಂಡ ಹೇಳಿದೆ.

    ರಾಜರಿಂದ 5 ಬಾರಿ ಜೀರ್ಣೋದ್ಧಾರ: ಮೊದಲಿಗೆ ಇಲ್ಲಿ ಸಣ್ಣ ಮಂದಿರ ಇತ್ತು. ಏಳನೇ ಶತಮಾನದಲ್ಲಿ ವಲ್ಲಭಿಯ ಮೈತ್ರಕ ರಾಜರು ಈ ದೇವಾಲಯವನ್ನ ಜೀರ್ಣೋದ್ಧಾರ ಮಾಡಿದ್ದರು. ತದನಂತರ ಎಂಟನೇ ಶತಮಾನದಲ್ಲಿ ಅರೇಬಿಕ್ ಗವರ್ನರ್ ಜುನೇದ್ ದೇಗುಲವನ್ನ ಧ್ವಂಸಗೊಳಿಸಲು ತನ್ನ ಸೈನ್ಯವನ್ನ ಕಳುಹಿಸಿದ್ದನು. ಕ್ರಿಸ್ತ ಶಕ 815ರಲ್ಲಿ ಪ್ರತಿಹಾರದ ರಾಜ ನಾಗಭಟ್ಟ ಮೂರನೇ ಬಾರಿ ಈ ದೇವಾಲಯವನ್ನು ನಿರ್ಮಿಸಿದರು. ಇದೇ ಅವಶೇಷಗಳ ಮೇಲೆ ಮಾಲ್ವಾ ರಾಜಾ ಬೋಜ ಮತ್ತು ಗುಜರಾತಿನ ಅರಸ ಭೀಮದೇವ ಮಂದಿರವನ್ನ ಪುನರ್ ನಿರ್ಮಾಣ ಮಾಡಿದ್ದರು. 1169ರಲ್ಲಿ ರಾಜಾ ಕುಮಾರ್ ಪಾಲ್ ದೇಗುಲವನ್ನ ಪುನಶ್ಚೇತನಗೊಳಿಸಿದನು.

    ಸದ್ಯದ ದೇವಾಲಯದಲ್ಲಿ ಪಟೇಲರ ಪಾತ್ರ: 1706ರಲ್ಲಿ ಮೊಗಲ್ ಬಾದ್‍ಶಾ ಔರಂಗಜೇಬ್ ಸೋಮನಾಥ ದೇವಾಲಯವನ್ನ ಸಂಪೂರ್ಣವಾಗಿ ಕೆಡವಿದ್ದನು. ಸ್ವತಂತ್ರ ಬಳಿಕ 1947ರಲ್ಲಿ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲ್ ದೇವಸ್ಥಾನದ ನಿರ್ಮಾಣಕ್ಕೆ ಆದೇಶ ನೀಡಿದ್ದರು. 1951ರಲ್ಲಿ ಹೊಸ ಸೋಮನಾಥ ದೇಗುಲ ನಿರ್ಮಾಣವಾಗಿತ್ತು.

  • ರಾಹುಲ್ ಗಾಂಧಿ ಧರ್ಮ ಯಾವುದು? ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ ದೇವಾಲಯ ಭೇಟಿ

    ರಾಹುಲ್ ಗಾಂಧಿ ಧರ್ಮ ಯಾವುದು? ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ ದೇವಾಲಯ ಭೇಟಿ

    ಅಲಹಾಬಾದ್: ಗುಜರಾತ್ ಸೋಮನಾಥ ದೇವಾಲಯಕ್ಕೆ ಬುಧವಾರ ಭೇಟಿ ನೀಡಿದ ರಾಹುಲ್ ಗಾಂಧಿ ಹಿಂದೂಯೇತರ ಕಾಲಂನಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ ಎನ್ನಲಾದ ಸುದ್ದಿ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಈ ವಿಚಾರ ಬಿಜೆಪಿಗೆ ದೊಡ್ಡ ಅಸ್ತ್ರವೇ ಸಿಕ್ಕಿದಂತಾಗಿದ್ದು, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ರಾಹುಲ್ ಮೊದಲು ತನ್ನ ಧರ್ಮ ಯಾವುದು ಅಂತಾ ಘೋಷಿಸಿಕೊಳ್ಳಲಿ. ನನ್ನ ಪ್ರಕಾರ ಅವರು ಕ್ರಿಶ್ಚಿಯನ್ ಅವರು ಪ್ರತಿ ಭಾನುವಾರ ಚರ್ಚ್‍ಗೆ ಭೇಟಿ ನೀಡುತ್ತಾರೆ ಆರೋಪಿಸಿದ್ದಾರೆ.

    ಈ ಬೆನ್ನಲ್ಲೇ, ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯವರು ಸುಳ್ಳು ದಾಖಲೆ ತೋರಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕೆ ಮಾಡಿದೆ.

    ಆಗಿದ್ದು ಏನು?
    ಸೋಮನಾಥ ದೇವಾಲಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ಬಳಿಕ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಮನೋಜ್ ತ್ಯಾಗಿ ಪುಸ್ತಕ ನೀಡಿದ್ದಾರೆ. ಈ ಪುಸ್ತಕದಲ್ಲಿ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ಸದಸ್ಯ ಹಾಗೂ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಆಗಿರುವ ಅಹ್ಮದ್ ಪಟೇಲ್ ಸಹಿ ಹಾಕಿದ್ದಾರೆ.

    ರಾಹುಲ್ ಗಾಂಧಿ ಯಾರು?
    ಭಾರತದ ಮೊದಲ ಪ್ರಧಾನಿ ನೆಹರೂ ಅವರ ತಂದೆ ಮೋತಿಲಾಲ್ ನೆಹರೂ ಅವರು ಮೂಲತಃ ಕಾಶ್ಮೀರಿ ಬ್ರಾಹ್ಮಣರು. ಜವಾಹರ್ ಲಾಲ್ ನೆಹರೂ ಅವರ ಪುತ್ರಿ ಭಾರತದ ಮಾಜಿ ಪ್ರಧಾನಿ ಇಂದಿರಾ ಪ್ರಿಯದರ್ಶಿನಿ ಅವರು ಫಿರೋಜ್ ಅವರನ್ನು ಮದುವೆಯಾದರು. ಫಿರೋಜ್ ಮೂಲತಃ ಪಾರ್ಸಿ ಧರ್ಮಕ್ಕೆ ಸೇರಿದವರಾಗಿದ್ದು ಮದುವೆಯ ಬಳಿಕ ಗಾಂಧಿ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು. ನಂತರದ ಅವಧಿಯಲ್ಲಿ ಇಂದಿರಾ ಹೆಸರಿನ ಜೊತೆ ಗಾಂಧಿ ಸೇರಿಕೊಂಡಿತು. ಇಂದಿರಾ ಗಾಂಧಿ ಪುತ್ರ ರಾಜೀವ್ ಗಾಂಧಿ ಅವರು ಇಟಲಿ ಮೂಲದ ಸೋನಿಯಾ ಗಾಂಧಿ ಅವರನ್ನು ಪ್ರೀತಿಸಿ ಮದುವೆಯಾದರು. ಸೋನಿಯಾ ಗಾಂಧಿ ಮೂಲತಃ ಕ್ರೈಸ್ತ ಸಮುದಾಯಕ್ಕೆ ಸೇರಿದವರು. ರಾಜೀವ್ ಗಾಂಧಿ ಹಾಗೂ ಸೋನಿಯಾ ಪುತ್ರ ರಾಹುಲ್ ಗಾಂಧಿ.