Tag: somi ali

  • ನಿನ್ನ ಲೈಂಗಿಕ ಕಿರುಕುಳದ ಮುಖ ಮುಂದೊಂದು ದಿನ ಬಯಲಾಗುತ್ತೆ: ಸಲ್ಮಾನ್ ಮಾಜಿ ಗರ್ಲ್ ಫ್ರೆಂಡ್ ಯಾರಿಗೆ ಹೇಳಿದ್ದು?

    ನಿನ್ನ ಲೈಂಗಿಕ ಕಿರುಕುಳದ ಮುಖ ಮುಂದೊಂದು ದಿನ ಬಯಲಾಗುತ್ತೆ: ಸಲ್ಮಾನ್ ಮಾಜಿ ಗರ್ಲ್ ಫ್ರೆಂಡ್ ಯಾರಿಗೆ ಹೇಳಿದ್ದು?

    ಬಿಟೌನ್ ನ ಮೋಸ್ಟ್ ಬ್ಯಾಚ್ಯುಲರ್ ನಟ ಸಲ್ಮಾನ್ ಖಾನ್ ಅವರ ಮಾಜಿ ಪ್ರೇಯಸಿ ಸೋಮಿ ಅಲಿ ಶಾಕಿಂಗ್ ಪೋಸ್ಟ್ ವೊಂದನ್ನು ಇನ್ ಸ್ಟಾಗ್ರಾಮ್ ದಲ್ಲಿ ಪೋಸ್ಟ್ ಮಾಡಿ, ಆ ನಂತರ ಡಿಲಿಟ್ ಮಾಡಿದ್ದಾರೆ. ಅವರು ಹಾಕಿರುವ ಪೋಸ್ಟ್ ಸ್ಕ್ರೀನ್ ಶಾಟ್ ಈಗ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    1992 ರಿಂದ ಐದಾರು ವರ್ಷಗಳ ಕಾಲ ಸೋಮಿ ಬಾಲಿವುಡ್ ನಲ್ಲಿ ಹಲವಾರು ಚಿತ್ರಗಳನ್ನು ಮಾಡಿದ್ದಾರೆ. ಈ ವೇಳೆಯಲ್ಲೇ ಬಾಲಿವುಡ್ ಹ್ಯಾಂಡ್ ಸಮ್ ನಟ ಸಲ್ಮಾನ್ ಖಾನ್ ಜತೆ ಇವರು ರಿಲೇಶನ್ ಶಿಪ್ ನಲ್ಲಿ ಇದ್ದರು ಎಂದು ಹೇಳಲಾಗಿತ್ತು. ಪಾರ್ಟಿ ಮತ್ತು ಖಾಸಗಿ ಹೋಟೆಲ್ ಗಳಲ್ಲಿ ಆಗಾಗ್ಗೆ ಇವರು ಕಾಣಿಸಿಕೊಂಡಿದ್ದು ಹಲವು ಚರ್ಚೆಗಳಿಗೂ ಕಾರಣವಾಗಿತ್ತು. ಎಂದಿನಂತೆ ಸಲ್ಮಾನ್ ಜತೆಗಿನ ಬಾಂಧವ್ಯ ನಂತರದ ದಿನಗಳ ಕಡಿದುಕೊಂಡು ಸಿನಿಮಾ ರಂಗದಿಂದಲೇ ದೂರವಾದರು.

    ಸದ್ಯ ತಮ್ಮದೇ ಸ್ವಯಂ ಸೇವಾ ಸಂಸ್ಥೆಯೊಂದನ್ನು ಕಟ್ಟಿಕೊಂಡು ಬಾಲಿವುಡ್ ನಿಂದ ಅಂತರವನ್ನೇ ಕಾಪಾಡಿಕೊಂಡಿರುವ ಸೋಮಿ, ಏಕಾಏಕಿ ನಿಗೂಢ ವ್ಯಕ್ತಿಯ ಮೇಲೆ ಲೈಂಗಿಕ ಆರೋಪವೊಂದನ್ನು ಮಾಡಿದ್ದಾರೆ. ಈ ಹಿಂದೆ ಲೈಂಗಿಕ ಆರೋಪಕ್ಕೆ ಗುರಿಯಾಗಿ ಶಿಕ್ಷೆಯನ್ನೂ ಅನುಭವಿಸಿದ್ದ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ ಸ್ಟೀನ್ ಅವರಿಗೆ ಆ ನಿಗೂಢ ವ್ಯಕ್ತಿಯನ್ನು ಹೋಲಿಕೆ ಮಾಡಿದ್ದಾರೆ. ‘ನೀವು ಬಾಲಿವುಡ್ ಹಾರ್ವೆ ವೈನ್ ಸ್ಟೀನ್. ನಿಮ್ಮ ಬಗೆಗಿನ ಹಲವು ವಿಚಾರಗಳು ಬಹಿರಂಗಗೊಳ್ಳುತ್ತವೆ. ನಿಮ್ಮಿಂದ ತೊಂದರೆಗೆ ಒಳಗಾದ ಮಹಿಳೆಯರು ಮುಂದೊಂದು ದಿನ ಸತ್ಯದೊಂದಿಗೆ ನಿಲ್ಲುತ್ತಾರೆ, ಐಶ್ವರ್ಯ ರೈ ಅವರಂತೆ’ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ಅದಕ್ಕೆ ಹಲವರು, ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲೇ ಅದನ್ನು ಡಿಲೀಟ್ ಕೂಡ ಮಾಡಿದ್ದಾರೆ. ಆ ಬಾಲಿವುಡ್ ನ ಹಾರ್ವೆ ವೈನ್ ಸ್ಟೀನ್ ಇವರ ಮಾಜಿ ಬಾಯ್ ಫ್ರೆಂಡ್ ಎಂದೂ ಹಲವರು ಕಾಮೆಂಟ್ ಮಾಡಿದ್ದಾರೆ. ಐಶ್ವರ್ಯ ರೈ ಅವರನ್ನು ಸುಖಾಸುಮ್ಮನೆ ಎಳೆದು ತಂದಿದ್ದಕ್ಕಾಗಿ ಅವರ ಅಭಿಮಾನಿಗಳು ಸಿಟ್ಟಿಗೆದ್ದಿದ್ದರು. ಇವೆಲ್ಲ ಕಾರಣಕ್ಕಾಗಿ ಈ ಪೋಸ್ಟ್ ಡಿಲೀಟ್ ಆಗಿರಬಹುದು ಎನ್ನಲಾಗುತ್ತಿದೆ.

  • ಸಲ್ಮಾನ್ ಜೊತೆ ಮದುವೆಯ ಕನಸು ಕಂಡು ಭಾರತಕ್ಕೆ ಬಂದಿದ್ದ ಪಾಕ್ ನಟಿ!

    ಸಲ್ಮಾನ್ ಜೊತೆ ಮದುವೆಯ ಕನಸು ಕಂಡು ಭಾರತಕ್ಕೆ ಬಂದಿದ್ದ ಪಾಕ್ ನಟಿ!

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆಯಾಗಲು ಅದೆಷ್ಟೋ ಯುವತಿಯರು ತುದಿಗಾಲಲ್ಲಿ ನಿಂತಿದ್ದ ವಿಚಾರ ಎಲ್ಲರಿಗೆ ತಿಳಿದೇ ಇದೆ. ಅಂತೆಯೇ ಇದೀಗ ಪಾಕಿಸ್ತಾನದ ನಟಿಯೊಬ್ಬಳು ಸಲ್ಮಾನ್‍ಗಾಗಿ ಭಾರತಕ್ಕೆ ಬಂದಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

    ಹೌದು. ನಟಿ ಸೋಮಿ ಅಲಿಯೇ ತನ್ನ ದೇಶ ಬಿಟ್ಟು ಭಾರತಕ್ಕೆ ಬಂದ ನಟಿ. ಈಕೆ ಬಾಲಿವುಡ್ ಬಾಯ್ ಜಾನ್ ನನ್ನು ಮದುವೆಯಾಗುವ ಒಂದೇ ಉದ್ದೇಶದಿಂದ ಭಾರತಕ್ಕೆ ಬಂದಿರುವ ವಿಚಾರವನ್ನು ಇದೀಗ ಬಯಲು ಮಾಡಿದ್ದಾರೆ.

    ಹೌದು. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೋಮಿ, ತನ್ನ 16ನೇ ವಯಸ್ಸಿನಲ್ಲಿ ಸೋಮಿ ಅಲಿ ಪಾಕಿಸ್ತಾನದಿಂದ ಮುಂಬೈಗೆ ಬಂದಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. 1991ಕ್ಕೆ ನನಗೆ 16 ವರ್ಷ ವಯಸ್ಸು. ಆ ಸಂದರ್ಭದಲ್ಲಿ ಮೈನೆ ಪ್ಯಾರ್ ಕಿಯಾ ಸಿನಿಮಾ ನೋಡಿದ್ದೆ. ಚಿತ್ರ ನೋಡಿದ ಬಳಿಕ ನನಗೆ ಸಲ್ಮಾನ್ ಖಾನ್ ಅವರನ್ನು ಮದುವೆಯಾಗಬೇಕು ಎಂಬ ಆಸೆ ಹುಟ್ಟಿತ್ತು. ಅದೇ ಕನಸಿನಿಂದ ನಾನು ನಾಳೆಯೇ ಭಾರತಕ್ಕೆ ಹೋಗುವುದಾಗಿ ತಾಯಿಗೆ ತಿಳಿಸಿದೆ. ಆದರೆ ಅವರು ನನ್ನ ಮಾತಿಗೆ ಒಪ್ಪಿಗೆ ನೀಡಿಲ್ಲ. ಇದಾದ ಬಳಿಕ ನಾನು ಈ ವ್ಯಕ್ತಿಯನ್ನು ಮದುವೆಯಾಗಬೇಕು, ಅದಕ್ಕಾಗಿ ಭಾರತಕ್ಕೆ ಹೋಗುವುದಾಗಿ ಹೇಳಿ ತಂದೆಗೆ ತಿಳಿಸದೇ ಅಲ್ಲಿಂದ ಹೊರಟೇ ಬಿಟ್ಟೆ ಎಂದು ಹೇಳಿದ್ದಾರೆ.

    ಹೀಗೆ ಭಾರತಕ್ಕೆ ಬಂದ ಯುವ ನಟಿಯಾಗಿದ್ದ ಸೋಮಿ ಅಲಿ ಪಂಚತಾರಾ ಹೋಟೆಲಿನಲ್ಲಿ ಉಳಿದುಕೊಳ್ಳುತ್ತಾರೆ. ಅಲ್ಲದೆ ಹೇಗಾದರೂ ಮಾಡಿ ಸಲ್ಮಾನ್ ಖಾನ್ ಅವರನ್ನು ಪಟಾಯಿಸಲೇಬೇಕು ಎಂದು ನಟನೆ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಬಾಲಿವುಡ್ ಅಂಗಳಕ್ಕೆ ಇಳಿಯುತ್ತಾರೆ.  ಆದರೆ ಡೈರೆಕ್ಟರ್ ಹೇಳುವ ರಿಹರ್ಸಲ್ ಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಈ ಮೂಲಕ ನಾನು ಬೇರೆಯವರಿಗಿಂದ ಭಿನ್ನವಾಗಿದ್ದು, ಚಿತ್ರೋದ್ಯಮಕ್ಕೆ ನಾನು ಫಿಟ್ ಅಲ್ಲ ಅಂತ ಅನಿಸುತ್ತಿತ್ತು. ಆದರೂ ಸಲ್ಮಾನ್ ಆಸೆಯಿಂದ ನಟನೆ ಮಾಡಿದೆ ಎಂದು ಸೋಮಿ ವಿವರಿಸಿದ್ದಾರೆ.

    ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಬಳಿಕ ಒಂದು ತನ್ನ ಆಸೆಯಂತೆ ಸಲ್ಮಾನ್ ಖಾನ್ ಜೊತೆ ಸೋಮಿ ಸ್ನೇಹ ಬೆಳೆಸುತ್ತಾರೆ. ಕ್ರಮೇಣ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಬಾಲಿವುಡ್ ಅಂಗಳದಲ್ಲಿ ಹರಿದಾಡಲು ಶುರುವಾಯಿತು. ಆದರೆ ಕೊನೆಗೂ ಸೋಮಿಗೆ ಸಲ್ಮಾನ್ ನನ್ನು ಮದುವೆಯಾಗಲು ಸಾಧ್ಯವಾಗಿಲ್ಲ. ನಿಜವಾದ ಪ್ರೀತಿಯನ್ನು ಹುಡುಕಿಕೊಂಡು ಹೋಗಿ ತಪ್ಪು ಮಾಡಿದೆ. ಆದರೆ ನಾನು ಮನಸಾರೆ ಪ್ರೀತಿ ಮಾಡಿದ್ದರಿಂದ ಈ ಬಗ್ಗೆ ನನಗೆ ಪಶ್ಚಾತಾಪವಿಲ್ಲ ಎಂದು ಸೋಮಿ ಹೇಳಿದ್ದಾರೆ.

    ಇಷ್ಟೆಲ್ಲಾ ಆದ ಬಳಿಕ ಸಲ್ಮಾನ್ ನನ್ನು ವರಿಸಲು ಸಾಧ್ಯವಾಗದಿದ್ದರಿಂದ 1999ರಲ್ಲಿ ಸೋಮಿ ವಾಪಸ್ ಪಾಕಿಸ್ತಾನಕ್ಕೆ ತೆರಳಿದ್ದಾರೆ.