Tag: someshwara beach

  • ಮಂಗಳೂರು| ಸಮುದ್ರಕ್ಕೆ ಸ್ನಾನಕ್ಕೆ ಇಳಿದಿದ್ದ ಮಹಿಳೆ ಸಾವು

    ಮಂಗಳೂರು| ಸಮುದ್ರಕ್ಕೆ ಸ್ನಾನಕ್ಕೆ ಇಳಿದಿದ್ದ ಮಹಿಳೆ ಸಾವು

    – ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಂಡಿದ್ದಾಗ ದುರ್ಘಟನೆ

    ಮಂಗಳೂರು: ಸಮುದ್ರಕ್ಕೆ ಸ್ನಾನಕ್ಕೆ ಇಳಿದಿದ್ದ ಮಹಿಳೆ ಸಾವಿಗೀಡಾಗಿರುವ ಘಟನೆ ಮಂಗಳೂರು (Mangaluru) ಹೊರವಲಯದ ಸೋಮೇಶ್ವರ ಕಡಲ ತೀರದಲ್ಲಿ ನಡೆದಿದೆ.

    ದೇರೆಬೈಲ್ ನಿವಾಸಿ ಉಷಾ (72) ಮೃತ ಮಹಿಳೆ. ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಂಡು ಸಮುದ್ರಕ್ಕೆ ಸ್ನಾನಕ್ಕಿಳಿದಿದ್ದರು. ಇದನ್ನೂ ಓದಿ: ಬೆಳ್ತಂಗಡಿ| ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರುಪಾಲು

    ಇತ್ತೀಚೆಗೆ ತಂಗಿ ನಿಶಾ ಭಂಡಾರಿ ಅವರ ಪತಿ ಕರುಣಾಕರ ಭಂಡಾರಿ ನಿಧನರಾಗಿದ್ದರು. ಮೃತ ಕರುಣಾಕರ ಭಂಡಾರಿಯ ಪಿಂಡ ಪ್ರದಾನ ವಿಧಿಯಲ್ಲಿ ಉಷಾ ಭಾಗವಹಿಸಿದ್ದರು. ಪುರೋಹಿತರು ಸಮುದ್ರ ತೀರದಲ್ಲಿ ಪಿಂಡ ಪ್ರದಾನ ನೆರವೇರಿಸಿದ ಬಳಿಕ ಮಹಿಳೆ ಸಮುದ್ರಕ್ಕೆ ಇಳಿದಿದ್ದರು. ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ.

    ಮಹಿಳೆ ರಕ್ಷಣೆಗೆ ಸ್ಥಳೀಯರು ಮತ್ತು ನಾಡದೋಣಿ ಮೀನುಗಾರರು ಮುಂದಾದರು. ಆದರೆ, ಸಮುದ್ರದಲ್ಲಿ ಮುಳುಗಿ ಮಹಿಳೆ ಮೃತಪಟ್ಟಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾರಿನ ಗಾಜು ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಖದೀಮ

  • ಹನಿಮೂನ್‍ಗೆ ಹೋಗದೆ ಬೀಚ್ ಕ್ಲೀನ್ ಮಾಡಿದ್ದ ಜೋಡಿಗೆ ಗಣರಾಜ್ಯೋತ್ಸವಕ್ಕೆ ಆಮಂತ್ರಣ

    ಹನಿಮೂನ್‍ಗೆ ಹೋಗದೆ ಬೀಚ್ ಕ್ಲೀನ್ ಮಾಡಿದ್ದ ಜೋಡಿಗೆ ಗಣರಾಜ್ಯೋತ್ಸವಕ್ಕೆ ಆಮಂತ್ರಣ

    ಉಡುಪಿ: ಮದುವೆಯಾಗಿ ಹನಿಮೂನ್‍ಗೆ ಹೋಗದೆ ತಮ್ಮ ಊರಿನ ಸೋಮೇಶ್ವರ ಸಮುದ್ರ ತೀರವನ್ನು ಸ್ವಚ್ಛ ಮಾಡಿದ್ದ ಉಡುಪಿಯ ಜೋಡಿಗೆ ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ಬೈಂದೂರಿನ ಅನುದೀಪ್, ಮಿನೂಷಾ ದೆಹಲಿಗೆ ಹಾರಿದ್ದಾರೆ. ನಮ್ಮ ಪ್ರವಾಸಿ ತಾಣಗಳು ನಮ್ಮ ಸಂಪತ್ತು. ಕಡಲ ತೀರಗಳನ್ನು ಸುಂದರವಾಗಿ ಇಡೋಣ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮನ್ ಕಿ ಬಾತ್ ನಲ್ಲಿ ಕರೆ ಕೊಟ್ಟಿದ್ದರು. ಅನುದೀಪ್ ಮಿನೂಷಾ ಜೋಡಿಯ ಕೆಲಸವನ್ನು ಉಲ್ಲೇಖ ಮಾಡಿದ್ದರು.

    ಕೇಂದ್ರ ಸರ್ಕಾರದಿಂದ ಇಬ್ಬರಿಗೂ ಗಣರಾಜ್ಯೋತ್ಸವದ ಆಮಂತ್ರಣ (Republic Day Invitation) ಬಂದಿದೆ. ಉಡುಪಿ ಜಿಲ್ಲೆ ಜೋಡಿ ದೆಹಲಿ ತಲುಪಿದೆ. ನಾಳಿನ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ಈ ಸಂತೋಷವನ್ನು ಇಬ್ಬರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ಧಾಂತಕ್ಕೆ ಬದ್ಧರಾದವರು ಬೇರೆ ಪಕ್ಷಕ್ಕೆ ಒಗ್ಗಲ್ಲ: ಶೆಟ್ಟರ್ ಬಿಜೆಪಿಗೆ ಮರಳಿದ್ದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

    ಭಾರತ ಸರ್ಕಾರಕ್ಕೆ, ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಈ ಜೋಡಿ ಧನ್ಯವಾದ ಹೇಳಿದ್ದಾರೆ. 2020ರಲ್ಲಿ ಮದುವೆಯಾಗಿದ್ದ ಅನುದೀಪ್ ಮತ್ತು ಮಿನುಷಾ ಹೊರಗಡೆ ಓಡಾಡುವ ಅವಕಾಶವನ್ನು ಕಳೆದುಕೊಂಡಿದ್ದರು ಕರೋನ ಕಾಲದ ನಿರ್ಬಂಧ ಇರುವುದರಿಂದ ಎಲ್ಲೂ ಸಂಚಾರ ಮಾಡುವ ಅವಕಾಶಗಳು ಇರಲಿಲ್ಲ. ಹಾಗೆ ಸೋಮೇಶ್ವರ ಬೈಂದೂರು ಸುತ್ತಮುತ್ತ ಸುಮಾರು 700 ಮೀಟರ್ ನಷ್ಟು ಕಡಲ ತಡೆಯನ್ನ ಕ್ಲೀನ್ ಮಾಡಿದ್ದಾರೆ. ಈ ಜೋಡಿಹ ಕೆಲಸಕ್ಕೆ ಸುತ್ತಮುತ್ತಲಿನ ಯುವಕ ಯುವತಿಯರು ಕೈಜೋಡಿಸಿದ್ದರು. ಸುಮಾರು 500 ಕೆಜಿಯಷ್ಟು ಕಸ ಸಂಗ್ರಹ ಮಾಡಿದ್ದರು.

    ಪ್ರವಾಸಕ್ಕೆಂದು ಹೋಗುವ ಯಾರೂ ಪರಿಸರವನ್ನು ಕಲುಷಿತ ಮಾಡಬೇಡಿ. ತಿರುಗಾಟಕ್ಕೆ ಕೊಂಡು ಹೋದ ವಸ್ತುವನ್ನು ಎಲ್ಲೂ ಎಸೆಯಬೇಡಿ ಎಂದು ಈ ಜೋಡಿ ಕರೆ ನೀಡಿದೆ.