Tag: Somashekhar Reddy

  • ಆಂಜನೇಯ ಅನುಗ್ರಹ ಮಾಡಿದಾಗ ಮಂತ್ರಿ ಆಗುವೆ- ಸೋಮಶೇಖರ್ ರೆಡ್ಡಿ

    ಆಂಜನೇಯ ಅನುಗ್ರಹ ಮಾಡಿದಾಗ ಮಂತ್ರಿ ಆಗುವೆ- ಸೋಮಶೇಖರ್ ರೆಡ್ಡಿ

    ಬಳ್ಳಾರಿ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಆಂಜನೇಯ ಸ್ವಾಮಿ ಅನುಗ್ರಹ ಮಾಡಿದಾಗ ಮಂತ್ರಿಯಾಗುತ್ತೇನೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟುಹಬ್ಬದ ಹಿನ್ನೆಲೆ ನಗರದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಆಂಜನೇಯ ಸ್ವಾಮಿ ಅನುಗ್ರಹ ನೀಡಿದಾಗ ಆಗುತ್ತೇನೆ. ನಾನು ಮಂತ್ರಿ ಸ್ಥಾನ ಕೊಡಿ ಎಂದು ಕೇಳಲ್ಲ. ದೇವರ ಅನುಗ್ರಹ ಇದ್ದರೆ ಮಂತ್ರಿ ಆಗುವೆ. ಪಕ್ಷವೇ ನನಗೆ ಮಂತ್ರಿ ಸ್ಥಾನ ಕೊಟ್ಟರೆ ಆಗುತ್ತೇನೆ. ಆನಂದ್ ಸಿಂಗ್ ಅವರು ಸಹೋದರನ ರೀತಿ ಇದ್ದಾರೆ. ಹೀಗಾಗಿ ನನಗೆ ಸಚಿವ ಸ್ಥಾನದ ಅಗತ್ಯವಿಲ್ಲ ಎಂದರು.

    ದೇಶಾದ್ಯಂತ ಪ್ರಧಾನಿ ಮೋದಿ ಅವರ 70ನೇ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬಳ್ಳಾರಿ ನಗರ ಬಿಜೆಪಿ ಯುವ ಮಾರ್ಚಾ ವತಿಯಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ನೂರಾರು ಜನ ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡಿ ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

    ಯುವಕರು ರಕ್ತದಾನ ಮಾಡಿ ರೋಗಿಗಳ ಜೀವನ ಉಳಿಸಲು ಮುಂದಾಗಿದ್ದಾರೆ. ಯುವಕರು ದೇಶಕ್ಕೆ ಆಪತ್ತು ಬಂದಾಗ ದೇಶದ ರಕ್ಷಣೆಗೆ ಮುಂದಾಗಬೇಕು. ರಕ್ತದಾನ ಸೇರಿದಂತೆ ವಿವಿಧ ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

  • ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡದಿರೋದು ಬೇಸರವಿದೆ: ಸೋಮಶೇಖರ್ ರೆಡ್ಡಿ

    ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡದಿರೋದು ಬೇಸರವಿದೆ: ಸೋಮಶೇಖರ್ ರೆಡ್ಡಿ

    – ಸಿಎಂ ನಿರ್ಧಾರ ಸಂತಸ ತಂದಿದೆ
    – ಸಚಿವ ಆನಂದ್ ಸಿಂಗ್‍ಗೆ ಮನವಿ

    ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೇ ಇರೋದು ಬೇಸರವಿದೆ. ಇದು ಕೇವಲ ನನ್ನ ಬೇಡಿಕೆ ಅಲ್ಲ, ಬದಲಿಗೆ ನಮ್ಮ ವಾಲ್ಮೀಕಿ ಸಮುದಾಯದ ಬೇಡಿಕೆ ಎಂದು ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೊಡಬೇಕು ಎನ್ನುವ ಹೇಳಿಕೆ ನೀಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಡಿಸಿಎಂ ಸ್ಥಾನವನ್ನು ರಾಮುಲು ಅವರಿಗೆ ನೀಡಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ ಎಂದರು.

    ಆನಂದ್ ಸಿಂಗ್ ಅವರಿಗೆ ನೀಡಿದರೂ ನಾನು ಸಂತೋಷ ಪಡುವೆ. ಲಕ್ಷ್ಮಣ ಸವದಿ ಜಿಲ್ಲಾ ಉಸ್ತುವಾರಿ ಆಗಿ ಮುಂದುವರಿದರೂ ನಮಗೆ ಸಂತೋಷ. ಆದರೆ ಹೆಚ್ಚು ದಿನಗಳ ಕಾಲ ಲಕ್ಷ್ಮಣ ಸವದಿ ಜಿಲ್ಲೆಯಲ್ಲಿ ಇರಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಜಿಲ್ಲಾ ವಿಭಜನೆಯ ಬಗ್ಗೆ ಸಿಎಂ ತೆಗೆದುಕೊಂಡ ನಿರ್ಧಾರವನ್ನು ನಾವು ಸ್ವಾಗತ ಮಾಡುತ್ತೆವೆ. ಸಿಎಂ ಜಿಲ್ಲೆ ವಿಭಜನೆ ಮಾಡಲ್ಲ ಎಂಬ ಹೇಳಿಕೆ ನಮಗೆ ಸಂತಸ ತಂದಿದೆ ಎಂದಿದ್ದಾರೆ.

    ಬಳ್ಳಾರಿಯ ಜಿಲ್ಲೆ ವಿಭಜನೆ ಮಾಡುವುದು ಸರಿಯಲ್ಲ. ಈ ಹಿಂದಿನಿಂದಲೂ ವಿಭಜನೆಗೆ ನಮ್ಮ ವಿರೋಧ ಇದೆ. ಹೀಗಾಗಿ ಜಿಲ್ಲಾ ವಿಭಜನೆ ಬೇಡ ಎಂದಿದ್ದೆವೆ. ಈಗಲೂ ನಾನು ಸಚಿವ ಆನಂದ್ ಸಿಂಗ್ ಅವರಲ್ಲಿ ಜಿಲ್ಲೆ ವಿಭಜನೆ ಮಾಡದೆ ನಾವೆಲ್ಲ ಅಣ್ಣ-ತಮ್ಮಂದಿರ ಹಾಗೆ ಇರಬೇಕು ಎಂದು ಮನವಿ ಮಾಡುತ್ತೇನೆ ಎಂದರು.

  • ಜಮೀರ್ ಅಹ್ಮದ್ ಓರ್ವ ಪ್ರಚಾರ ಪ್ರಿಯ, ಬಳ್ಳಾರಿಗೆ ಬರಲಿ: ಸೋಮಶೇಖರ್ ರೆಡ್ಡಿ

    ಜಮೀರ್ ಅಹ್ಮದ್ ಓರ್ವ ಪ್ರಚಾರ ಪ್ರಿಯ, ಬಳ್ಳಾರಿಗೆ ಬರಲಿ: ಸೋಮಶೇಖರ್ ರೆಡ್ಡಿ

    ಬೆಂಗಳೂರು: ಸೋಮವಾರ ಮಾಜಿ ಸಚಿವ ಜಮೀರ್ ಅಹ್ಮದ್ ನಮ್ಮ ಮನೆಗೆ ಬರುವುದಾದರೆ ಬರಲಿ, ನಾನು ಬೇಡ ಎನ್ನಲ್ಲ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಜಮೀರ್ ಅಹ್ಮದ್ ಒಬ್ಬ ಪ್ರಚಾರ ಪ್ರಿಯ ನಾಯಕ. ಹೀಗಾಗಿ ನಾಳೆ ನಮ್ಮ ಮನೆಗೆ ಬರುತ್ತೆನೆ ಎಂದಿದ್ದಾರೆ. ಬೇಕಿದ್ರೆ ಜಮೀರ್ ಅಹ್ಮದ್ ಬಳ್ಳಾರಿಗೆ ಬರಲಿ ಅದಕ್ಕೆ ನಾನು ಬೇಡ ಅನ್ನಲ್ಲ. ನಾನು ದೇಶದ್ರೋಹಿಗಳ ಬಗ್ಗೆ ಮಾತನಾಡಿದ್ದೇನೆ. ಆದರೆ ನನ್ನ ಹೇಳಿಕೆಯನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

    ಸಿಎಎ ಪರವಾದ ಬಹಿರಂಗ ಸಭೆಯಲ್ಲಿ ಸೋಮಶೇಖರ್ ರೆಡ್ಡಿ ಅವರು ಪ್ರಚೋದನಾಕಾರಿ ಭಾಷಣ ಖಂಡಿಸಿ ಜಮೀರ್ ಅಹ್ಮದ್ ಸವಾಲ್ ಹಾಕಿ ಬಳ್ಳಾರಿಗೆ ಬಂದು ಪ್ರತಿಭಟನೆ ಮಾಡುತ್ತೇನೆ ಎಂದು ಸವಾಲ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಸೋಮವಾರ ಬಳ್ಳಾರಿಗೆ ತೆರಳುತ್ತಿದ್ದಾರೆ.

  • ಎದೆ ತಟ್ಟಿ ಪಂಥಾಹ್ವಾನ ಕೊಟ್ಟ ಜಮೀರ್

    ಎದೆ ತಟ್ಟಿ ಪಂಥಾಹ್ವಾನ ಕೊಟ್ಟ ಜಮೀರ್

    ಬೆಂಗಳೂರು: ಸಿಎಎ ಹಾಗೂ ಎನ್ ಆರ್ ಸಿ ಸಂಬಂಧ ಪ್ರತಿಭಟನಾ ಸಮಾವೇಶದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟ ಶಾಸಕ ಸೋಮಶೇಖರ್ ರೆಡ್ಡಿಗೆ ಮಾಜಿ ಸಚಿವ ಜಮೀರ್ ಅಹಮ್ಮದ್ ಎದೆ ತಟ್ಟಿ ಪಂಥಾಹ್ವಾನ ಕೊಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಜಮೀರ್ ಅಹಮ್ಮದ್ ಇವತ್ತು ಸೋಮವಾರ ಮುಂದಿನ ಸೋಮವಾರದ ಒಳಗೆ ಸೋಮಶೇಖರ್ ರೆಡ್ಡಿಯನ್ನ ಬಂಧಿಸಬೇಕು. ಅವರ ಶಾಸಕ ಸ್ಥಾನವನ್ನ ವಜಾಗೊಳಿಸಬೇಕು. ಇಲ್ಲಾ ಅಂದರೆ ಮುಂದಿನ ಸೋಮವಾರ ನಾನೇ ಬಳ್ಳಾರಿಗೆ ಹೋಗಿ ಸೋಮಶೇಖರ್ ರೆಡ್ಡಿ ಮನೆ ಮುಂದೆ ಧರಣಿ ಕೂರುತ್ತೇನೆ ಎಂದು ಏಕವಚನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು.

    ನಾನು ಬಳ್ಳಾರಿಗೆ ಬರುತ್ತೇನೆ ತಾಕತ್ತಿದ್ದರೆ ಏನು ಮಾಡ್ತಿಯೋ ಮಾಡ್ಕೋ. ನೀನು ಖಡ್ಗ ತರ್ತಿಯೋ ಏನು ತರ್ತಿಯೋ ತಗೊಂಡು ಬಾ. ನಾವೇನು ಕೈಗೆ ಬಳೆ ತೊಟ್ಟುಕೊಂಡು ಕೂತಿಲ್ಲ. ನೀನು ಉಫ್ ಅನ್ನೋದಾದರೆ ಮೊದಲು ನನಗೆ ಅನ್ನು. ನೀನು ಖಡ್ಗ ಬೀಸೋದಾದರೆ ನನಗೆ ಮೊದಲು ಬೀಸು ಆಮೇಲೆ ಸಮುದಾಯದ ವಿಷಯಕ್ಕೆ ಬಾ.. ಮಿಸ್ಟರ್ ಸೋಮಶೇಖರ್ ರೆಡ್ಡಿ I Am Coming ಎಂದು ಸವಾಲೆಸೆದರು. ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ಮಾಡಿದ್ದಾರೆ.

    ಸೋಮಶೇಖರ್ ರೆಡ್ಡಿಗೆ ಮಾನ ಮರ್ಯಾದೆ ಇಲ್ಲಾ. 2013 ರಲ್ಲಿ ಹೇಡಿ ತರ ಹೆದರಿ ಚುನಾವಣೆಗೆ ನಿಂತಿಲ್ಲ ಅವನು ಜಮೀರ್ ಅಹ್ಮದ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

  • ಸೋಮಶೇಖರ್ ರೆಡ್ಡಿ ಯೂ ಟರ್ನ್

    ಸೋಮಶೇಖರ್ ರೆಡ್ಡಿ ಯೂ ಟರ್ನ್

    ಬೆಂಗಳೂರು: ಸಿಎಎ ಸಂಬಂಧ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ವಾಗ್ದಾಳಿ ನಡೆಸಿದ್ದ ಶಾಸಕ ಸೋಮಶೇಖರ್ ರೆಡ್ಡಿ ಈಗ ಯು ಟರ್ನ್ ಹೊಡೆದಿದ್ದಾರೆ. ಬಳ್ಳಾರಿಯಲ್ಲಿ ಶ್ರೀರಾಮುಲು ಸಮ್ಮುಖದಲ್ಲಿ ಮುಸ್ಲಿಂ ಮುಖಂಡರ ಜೊತೆ ಮಾತುಕತೆ ನಡೆಸಿದ ವಿಡಿಯೋ ಈಗ ವೈರಲ್ ಆಗಿದೆ.

    ಬಳ್ಳಾರಿಯಲ್ಲಿ ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮುಖಂಡರು ಹಾಗೂ ಸೋಮಶೇಖರ್ ರೆಡ್ಡಿ ನಡುವೆ ಶ್ರೀರಾಮುಲು ಸಂಧಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಸೋಮಶೇಖರ್ ಪ್ರಚೋದನಾಕಾರಿ ಹೇಳಿಕೆ ತಪ್ಪು: ಡಿಸಿಎಂ ಅಶ್ವಥ್ ನಾರಾಯಣ್

    ಶ್ರೀರಾಮುಲು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ, ಆತಂಕ ಬೇಡ. ದೇಶದಲ್ಲಿರುವರಿಗೆ ಯಾವುದೇ ದಾಖಲೆ ಕೇಳಲ್ಲ. ಅಕ್ರಮವಾಗಿ ಬಂದವರಿಗೆ ಮಾತ್ರ ದಾಖಲೆ ಕೇಳುತ್ತಾರೆ. ನೀವು ಹಿರಿಯರು, ಇದನ್ನು ಮನವರಿಕೆ ಮಾಡಬೇಕು ಎಂದು ಮುಸ್ಲಿಂ ಧರ್ಮಗುರುವೊಬ್ಬರೊಂದಿಗೆ ಮಾತಾಡಿದ್ದಾರೆ. ಇದನ್ನೂ ಓದಿ: ಸೋಮಶೇಖರ್ ರೆಡ್ಡಿ ಶಾಸಕತ್ವ ಸ್ಥಾನ ಅಮಾನತ್ತಿಗೆ ಆಗ್ರಹಿಸಿ ರಾಯಚೂರಿನಲ್ಲಿ ಹೋರಾಟ

    ಅದಕ್ಕೆ ಮುಸ್ಲಿಂ ಧರ್ಮಗುರು ಜನರ ಮನಸ್ಸು ಕಲುಷಿತವಾಗುವಂತೆ ಬಿಂಬಿತವಾಗಿದೆ. ನಿಮ್ಮ ಶರೀರ ರೋಗಗ್ರಸ್ತವಾಗಿಲ್ಲ. ನಿಮ್ಮ ಮನಸ್ಸುಗಳು ರೋಗಗ್ರಸ್ಥವಾಗಿದೆ ಎಂದು ಸೋಮಶೇಖರ್ ರೆಡ್ಡಿ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ:  ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ರಾಯಚೂರಿನಲ್ಲಿ ಸೋಮಶೇಖರ್ ರೆಡ್ಡಿ ವಿರುದ್ಧ ದೂರು

    ಶಾಸಕ ಸೋಮಶೇಖರ್ ರೆಡ್ಡಿ ನಾವು 130 ಕೋಟಿ ಜನರನ್ನೂ ಭಾರತೀಯರು ಎಂದು ಹೇಳುತ್ತೇವೆ. ಹಿಂದೂಗಳು ಬೇರೆ, ಮುಸ್ಲಿಮರು ಬೇರೆ ಎಂದಿಲ್ಲ ಎಂದು ಸಮಜಾಯಿಶಿ ನೀಡಿದ್ದಾರೆ. ಜನರಲ್ಲಿ ಪ್ರತಿದಿನ ಗೊಂದಲ ಮೂಡಿಸುತ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಒಳ್ಳೆಯ ಆಡಳಿತ ನಡೆಸುವುದನ್ನು ಸಹಿಸಲಾರದವರು ಮಾಡುತ್ತಿರುವ ಅಪಪ್ರಚಾರ. ಒಂದೆರಡು ದಿನ ಈ ವಿಚಾರದಲ್ಲಿ ಮೌನವಾದರೆ ಎಲ್ಲವೂ ಸರಿಹೋಗುತ್ತೆ ಎಂದು ರಾಮುಲು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಮುಸ್ಲಿಂ ಧರ್ಮಗುರು ಈಗ ನಿಮಗಾಗಿರುವುದು ದೇಹಕ್ಕೆ ಆಗಿರುವ ರೋಗವಲ್ಲ. ನಿಮ್ಮ ಮನಸ್ಸಿಗೆ ಅಂಟಿರುವ ರೋಗ ಎಂದಿದ್ದಾರೆ. ಶ್ರೀರಾಮುಲು, ಸೋಮಶೇಖರ ರೆಡ್ಡಿ ಇಬ್ಬರು ಗುರುಗಳೇ ನೀವು ಸತ್ಯವನ್ನು ಜನರಿಗೆ ಹೇಳಿ ಎಂದು ಕೇಳಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

  • ಸೋಮಶೇಖರ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಿ: ಕಾಂಗ್ರೆಸ್‍ನಿಂದ ಆಯುಕ್ತರಿಗೆ ಮನವಿ

    ಸೋಮಶೇಖರ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಿ: ಕಾಂಗ್ರೆಸ್‍ನಿಂದ ಆಯುಕ್ತರಿಗೆ ಮನವಿ

    ಬೆಳಗಾವಿ: ನಿರ್ದಿಷ್ಟ ಪಕ್ಷ ಹಾಗೂ ಸಮುದಾಯವನ್ನು ಗುರುತಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‍ನ ಕಾರ್ಯಕರ್ತರು ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮನಬಂದಂತೆ ಮಾತನಾಡಿದ್ದಾರೆ. ಇತ್ತೀಚಿಗೆ ಸಿಎಎ ಬೆಂಬಲಿಸಿ ನಡೆಸಿದ ಜಾಗೃತಿ ಸಭೆಯಲ್ಲಿ ನಿರ್ದಿಷ್ಟ ಸಮುದಾಯನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ. ದೇಶ ಒಂದೇ ಜಾತಿ, ಭಾಷೆಗೆ ಸಿಮಿತವಾಗಿಲ್ಲ. ಸಾರ್ವಜನಿಕ ಸಭೆಯಲ್ಲಿ ಈ ರೀತಿ ಹೇಳಿರುವುದು ಸರಿಯಲ್ಲ. ಇದು ಸಮಾಜದ ಶಾಂತಿ ಹಾಳು ಮಾಡುವಂತೆ ಹೇಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೇಶದಲ್ಲಿ ಎಲ್ಲ ಧರ್ಮದವರು ಸಹೋದರರಂತೆ ಬಾಳುತ್ತಿದ್ದಾರೆ. ಆದರೆ ಶಾಸಕ ಸೋಮಶೇಖರ್ ರೆಡ್ಡಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿ ಕದಡಲು ಯತ್ನಿಸಿದ್ದಾರೆ. ಅವರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಸಲೀಂ ಖತಿಬ್, ರಸುಲ್ ಮುಲ್ಲಾ, ಎಂ.ಎಂ.ಅತ್ತಾರ, ಎಂ.ಬಿ.ಜಮಾದಾರ, ಪರಶುರಾಮ ವಗ್ಗಣ್ಣನವರ, ಗಜಾನನ ಧರನಾಯಕ ಹಾಗೂ ಇತರರು ಇದ್ದರು.

  • ಸೋಮಶೇಖರ್ ಪ್ರಚೋದನಾಕಾರಿ ಹೇಳಿಕೆ ತಪ್ಪು: ಡಿಸಿಎಂ ಅಶ್ವಥ್ ನಾರಾಯಣ್

    ಸೋಮಶೇಖರ್ ಪ್ರಚೋದನಾಕಾರಿ ಹೇಳಿಕೆ ತಪ್ಪು: ಡಿಸಿಎಂ ಅಶ್ವಥ್ ನಾರಾಯಣ್

    ಬೆಂಗಳೂರು: ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ನೀಡಿದ್ದ ಪ್ರಚೋದನಾಕಾರಿ ಹೇಳಿಕೆ ತಪ್ಪು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸೋಮಶೇಖರ್ ಮಾತನಾಡಿರೋದು ಸರಿಯಲ್ಲ. ಆ ರೀತಿ ಪ್ರಚೋದನಾತ್ಮಕವಾಗಿ ಸೋಮಶೇಖರ್ ಮಾತನಾಡಬಾರದಿತ್ತು. ನಾವೆಲ್ಲರೂ ಸಹೋದರರಾಗಿದ್ದು, ನಮಗೆ ಯಾರ ಮೇಲೂ ವೈರತ್ವ ಇಲ್ಲ. ವಸುದೈವ ಕುಟುಂಬ ಅನ್ನೊ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಈ ಬಗ್ಗೆ ಸೋಮಶೇಖರ್ ಜೊತೆ ಮಾತನಾಡುತ್ತೇನೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.

    ಸೋಮಶೇಖರ್ ನೀಡಿದ ಹೇಳಿಕೆಯಿಂದಾಗಿ ಈಗಾಗಲೇ ಬಳ್ಳಾರಿಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಅಲ್ಲದೇ ನಿನ್ನೆ ಕಾಂಗ್ರೆಸ್ ನಿಯೋಗ ಐಜಿಪಿಯವರನ್ನ ಭೇಟಿಯಾಗಿ ಸೋಮಶೇಖರ್ ವಿರುದ್ಧ ದೂರು ನೀಡಿತ್ತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮಶೇಖರ್ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ.

  • ಸೋಮಶೇಖರ್ ರೆಡ್ಡಿ ಶಾಸಕತ್ವ ಸ್ಥಾನ ಅಮಾನತ್ತಿಗೆ ಆಗ್ರಹಿಸಿ ರಾಯಚೂರಿನಲ್ಲಿ ಹೋರಾಟ

    ಸೋಮಶೇಖರ್ ರೆಡ್ಡಿ ಶಾಸಕತ್ವ ಸ್ಥಾನ ಅಮಾನತ್ತಿಗೆ ಆಗ್ರಹಿಸಿ ರಾಯಚೂರಿನಲ್ಲಿ ಹೋರಾಟ

    ರಾಯಚೂರು: ಸಿಎಎ ಬೆಂಬಲಿಸಿ ಬಳ್ಳಾರಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಬಳ್ಳಾರಿನಗರ ಶಾಸಕ ಸೋಮಶೇಖರ್ ರೆಡ್ಡಿ ನೀಡಿದ್ದ ಪ್ರಚೋದನಾತ್ಮಕ ಹೇಳಿಕೆಯನ್ನ ಖಂಡಿಸಿ ರಾಯಚೂರಿನಲ್ಲಿ ಪ್ರತಿಭಟನೆ ಮಾಡಲಾಯಿತು.

    ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರಾಯಚೂರು ನಾಗರೀಕ ಸಮಿತಿ ಕಾರ್ಯಕರ್ತರು ಕೂಡಲೇ ಸೋಮಶೇಖರ್ ರೆಡ್ಡಿಯನ್ನ ಬಂಧಿಸುವಂತೆ ಆಗ್ರಹಿಸಿದರು. ದೇಶದ್ರೋಹದ ಹೇಳಿಕೆ ನೀಡಿರುವ ಶಾಸಕರನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಅಂತ ಒತ್ತಾಯಿಸಿದರು. ಇದನ್ನೂ ಓದಿ: ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ರಾಯಚೂರಿನಲ್ಲಿ ಸೋಮಶೇಖರ್ ರೆಡ್ಡಿ ವಿರುದ್ಧ ದೂರು

    ಶಾಸಕ ಸೋಮಶೇಖರ್ ರೆಡ್ಡಿ ಪ್ರತಿಕೃತಿ ದಹನಕ್ಕೆ ಅವಕಾಶ ನೀಡದ ಪೋಲಿಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪೋಲಿಸರೊಂದಿಗೆ ಮಾತಿನ ಚಕಮಕಿ ನಡೆಸಿದ್ರು. ಬಳಿಕ ಮನುಸ್ಮೃತಿಯನ್ನ ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು.

  • ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ಸೋಮಶೇಖರ್ ರೆಡ್ಡಿ ವಿರುದ್ಧ ದೂರು

    ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ಸೋಮಶೇಖರ್ ರೆಡ್ಡಿ ವಿರುದ್ಧ ದೂರು

    ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರ ಕುರಿತು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿರುದ್ಧ ರಾಯಚೂರಿನಲ್ಲಿ ದೂರು ನೀಡಲಾಗಿದೆ.

    ಸಂವಿಧಾನಿಕ ಹಕ್ಕು ನಾಗರೀಕ ಸಮಿತಿಯ ಮಾನಸಯ್ಯ ಎಂಬವರು ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿಎಎ ವಿರೋಧಿ ಹೋರಾಟಗಾರರು ಸೋಮಶೇಖರ್ ರೆಡ್ಡಿ ಹೇಳಿಕೆ ಖಂಡಿಸಿ ಪೊಲೀಸ್ ಠಾಣೆ ಮಟ್ಟಿಲು ಹತ್ತಿದ್ದಾರೆ. ಸಿಎಎ ಪರ ಮೆರವಣಿಗೆಯಲ್ಲಿ ಸೋಮಶೇಖರ್ ರೆಡ್ಡಿ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು. ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಸಮರ್ಥಿಸಿಕೊಂಡು ಸಿಎಎ ವಿರೋಧಿಸುವವರ ವಿರುದ್ದ ಕಿಡಿಕಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

    ದೂರಿನಲ್ಲೇನಿದೆ?
    ನೀವು ಇರೋದು 17%. ಹಾಗಾಗಿ ನಾವು ಹೇಳಿದಂತೆ ಕೇಳಿಕೊಂಡಿರಿ. ಇಲ್ಲದಿದ್ದರೆ ನಿಮ್ಮನ್ನು ಉಳಿಸಲ್ಲ. ಮಚ್ಚು ಖಡ್ಗ ಹಿಡಿದು ರಣರಂಗ ಮಾಡ್ತೀವಿ. ನಮ್ಮ ಪದ್ಧತಿ ಪ್ರಕಾರ ಇರಬೇಕು. ಹೆಚ್ಚಿಗೆ ನಕರಾ ಮಾಡಿದರೆ ನಿಮ್ಮ ದೇಶಕ್ಕೆ ಕಳುಹಿಸಿಕೊಡಬೇಕಾಗುತ್ತದೆ. ಒಬ್ಬೊಬ್ಬ ಹಿಂದೂ ಒಬ್ಬೊಬ್ಬ ಶಿವಾಜಿ ತರಹ ಆಗಿ ಮಚ್ಚು ಹಿಡಿದುಕೊಂಡರೆ ರಣರಂಗ ಸೃಷ್ಟಿಯಾಗುತ್ತೆ. ಬಳ್ಳಾರಿ ದುರ್ಗಮ್ಮ ದರ್ಶನ ಮಾಡಿಕೊಂಡು ಖಡ್ಗ ಹಿಡಿದುಕೊಂಡರೆ ರಣರಂಗ ಸೃಷ್ಟಿಯಾಗುತ್ತದೆ ಎಂದು ಅಲ್ಲಿ ಸೇರಿದ್ದ ಸಾವಿರಾರು ಜನರನ್ನು ಭಾಷಣದ ಮೂಲಕ ಪ್ರಚೋದಿಸಿದ್ದಾರೆ. ಈ ಮೂಲಕ ಸಮಾಜದಲ್ಲಿ ಭಯೋತ್ಪಾದನೆ ಹರಡುವ ಸಂಘಟಿತ ಸಶಸ್ತ್ರ ದಾಳಿಗೆ ಸೋಮಶೇಕರರೆಡ್ಡಿ ಕರೆ ನೀಡಿದ್ದಾರೆ. ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಂಡು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಅಂತ ದೂರಿನಲ್ಲಿ ಮನವಿ ಮಾಡಲಾಗಿದೆ.

    ರಾಯಚೂರಿನ ಸದರಬಜಾರ್ ಠಾಣೆ ಪೊಲೀಸರು ದೂರನ್ನ ಸ್ವೀಕರಿಸಿದ್ದು, ಇನ್ನೂ ಎಫ್ ಐ ಆರ್ ದಾಖಲಾಗಿಲ್ಲ.

  • ನಾವು ಊದಿದ್ರೆ ನೀವೆಲ್ಲ ಹಾರಿ ಹೋಗ್ತೀರಿ, ಸಿಎಎ ವಿರೋಧಿಗಳನ್ನು ಶೂಟ್ ಮಾಡ್ಬೇಕು – ಸೋಮಶೇಖರ ರೆಡ್ಡಿ

    ನಾವು ಊದಿದ್ರೆ ನೀವೆಲ್ಲ ಹಾರಿ ಹೋಗ್ತೀರಿ, ಸಿಎಎ ವಿರೋಧಿಗಳನ್ನು ಶೂಟ್ ಮಾಡ್ಬೇಕು – ಸೋಮಶೇಖರ ರೆಡ್ಡಿ

    ಬಳ್ಳಾರಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಮಾಡಿದ ಎಲ್ಲರನ್ನೂ ಶೂಟ್ ಮಾಡಿದ್ದರೆ ಅನುಕೂಲ ಆಗಿರೋದು. ದೇಶದ ಜನಸಂಖ್ಯೆಯಾದರೂ ಕಡಿಮೆಯಾಗುತ್ತಿತ್ತು. ನೀವು ನಮ್ಮ ದೇಶದಲ್ಲಿ ಇರಬೇಕು ಅಂದ್ರೆ ನಾವು ಹೇಳಿದ ಹಾಗೆ ಕೇಳಬೇಕು ಎನ್ನುವ ಮೂಲಕ ಶಾಸಕ ಸೋಮಶೇಖರ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಬಳ್ಳಾರಿಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿರುವ ಶಾಸಕ ಸೋಮಶೇಖರ ರೆಡ್ಡಿ, ಪೌರತ್ವ ಕಾಯ್ದೆಯನ್ನು ವಿರೋಧಿಸುವವರು ಜಾಸ್ತಿ ನಕ್ರಾ ಮಾಡಿದರೆ ಸರಿ ಇರಲ್ಲ. ನಾವು ಶೇ.80 ರಷ್ಟು ಜನ ಇದ್ದೇವೆ. ಹಿಂದುಗಳು ಖಡ್ಗ ಹಿಡಿದುಕೊಂಡು ಬಂದರೆ ನಿಮಗೇ ಕಷ್ಟವಾಗುತ್ತದೆ. ಸಿಎಎ ವಿರೋಧಿಸಿದರೆ ರೊಚ್ಚಿಗೇಳಬೇಕಾಗುತ್ತದೆ. ನಾವು ಶೇ.80ರಷ್ಟು ಜನರಿದ್ದೇವೆ. ನೀವು ಕೇವಲ ಶೇ.17 ರಷ್ಟಿದ್ದೀರಿ. ನಾವು ಉಫ್ ಎಂದು ಊದಿದರೆ ನೀವೆಲ್ಲ ಹಾರಿ ಹೋಗುತ್ತೀರ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರಿಗೆ ಮತ್ತು ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದಾರೆ.

    ಪೌರತ್ವ ಕಾಯ್ದೆ ಬೆಂಬಲಿಸಿ ನಡೆದ ಮೆರವಣಿಗೆಯಲ್ಲಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಈ ಎಚ್ಚರಿಕೆ ಮಾತುಗಳನ್ನು ಆಡಿದ್ದಾರೆ. ಕಾಂಗ್ರೆಸ್ ಪಕ್ಷದ ಬೇಕೂಫ್‍ಗಳು ಹೇಳುವುದನ್ನು ಕೇಳಿ ನೀವು ಬೀದಿಗೆ ಇಳಿಯಬೇಡಿ. ನಾವು ಶೇ.80 ರಷ್ಟಿದ್ದೇವೆ. ನಾವು ತಿರುಗಿ ಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ ಎಂಬ ಎಚ್ಚರವಿರಲಿ. ಇದು ನಮ್ಮ ದೇಶ ಎಂಬುದನ್ನು ಮರೆಯಬೇಡಿ. ನೀವು ನಮ್ಮ ದೇಶದಲ್ಲಿ ಇರಬೇಕಾದರೆ ನಮ್ಮ ಪದ್ಧತಿ ಪ್ರಕಾರ ಇರಬೇಕು. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಿದರೆ ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದಿದ್ದಾರೆ.

    ಯಾಕೆ ಇಲ್ಲಿ ನಿಮಗೆ ಬಾಂಗ್ಲಾ ಮತ್ತು ಪಾಕಿಸ್ತಾನದ ಹುಳಾ ಕಡಿಯತ್ತಾ? ನಿಮಗೆ ಈ ಕಾಯ್ದೆ ಜಾರಿಗೆ ತಂದರೆ ಯಾಕೆ ನೋವಾಗುತ್ತೆ. ನಿಮಗೆ ಏನಾದರೂ ನೋವು ಆದರೆ ನಮ್ಮ ಹಿಂದೂ ಡಾಕ್ಟರ್ ಇದ್ದಾರೆ ಸರಿಯಾಗಿ ಮಾಡಿ ಕಳಿಸುತ್ತಾರೆ. ಈ ನೆಲದಲ್ಲಿ ನಾವು ಹೇಳಿದ ಹಾಗೆ ಕೇಳಬೇಕು ಎನ್ನುವ ಮೂಲಕ ರೆಡ್ಡಿ ಅವರು ಆರಿದ ಬೆಂಕಿಗೆ ಮತ್ತೆ ಕಿಡಿ ಹಚ್ಚಿದ್ದಾರೆ.