Tag: Somashekhar Reddy

  • ಬಳ್ಳಾರಿ ಎಲೆಕ್ಷನ್ ಬಡಿದಾಟಕ್ಕೆ ಮೆಗಾ ಟ್ವಿಸ್ಟ್- ಸೋಮಶೇಖರ್ ರೆಡ್ಡಿ ವಿರುದ್ಧ ಅತ್ತಿಗೆ ಅರುಣಾ ಲಕ್ಷ್ಮಿ ಕಣಕ್ಕೆ

    ಬಳ್ಳಾರಿ ಎಲೆಕ್ಷನ್ ಬಡಿದಾಟಕ್ಕೆ ಮೆಗಾ ಟ್ವಿಸ್ಟ್- ಸೋಮಶೇಖರ್ ರೆಡ್ಡಿ ವಿರುದ್ಧ ಅತ್ತಿಗೆ ಅರುಣಾ ಲಕ್ಷ್ಮಿ ಕಣಕ್ಕೆ

    ಬಳ್ಳಾರಿ: ರಾಜ್ಯ ರಾಜಕೀಯದಲ್ಲೀಗ ಅಣ್ತಮ್ಮಾಸ್ ಬಹಳ ಸದ್ದು ಮಾಡುತ್ತಿದ್ದಾರೆ. ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿ (HD Kumaraswamy) ಯ ಮಾತು ಮೀರಲ್ಲ ಅಂತ ಅಣ್ಣ ರೇವಣ್ಣ ಘೋಷಿಸಿದ್ರೆ, ಇತ್ತ ಡಿಕೆ (DK Shivakumar) ವಿರುದ್ಧ ಜಾರಕಿಹೊಳಿ (Ramesh Jarakiholi) ಬ್ರದರ್ಸ್ ಒಂದಾಗಿದ್ದಾರೆ. ಇದರ ಬೆನ್ನಲ್ಲೇ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧವೇ ಜನಾರ್ದನ ರೆಡ್ಡಿ ತೊಡೆತಟ್ಟಿದ್ದಾರೆ. ಬಳ್ಳಾರಿ ನಗರದಲ್ಲಿ ಸೋಮಶೇಖರ್ ರೆಡ್ಡಿ‌ (Somashekhar Reddy) ಎದುರು ಪತ್ನಿ ಅರುಣಾ ಲಕ್ಷ್ಮಿ (Aruna Laxmi) ಯನ್ನು ಕಣಕ್ಕಿಳಿಸಲಿದ್ದಾರೆ.

    ಹೌದು. ಗಣಿ ಧೂಳಿನ ಜೊತೆ ರಾಜ್ಯ ರಾಜಕಾರಣದಲ್ಲೂ ಪ್ರಖ್ಯಾತಿ ಹಾಗೂ ಕುಖ್ಯಾತಿ ಹೊಂದಿರುವ ಜಿಲ್ಲೆ ಬಳ್ಳಾರಿ. ಇಂತಹ ಬಳ್ಳಾರಿಯಲ್ಲಿ ರಾಮ-ಲಕ್ಷ್ಮಣರಂತಿದ್ದ ಅಣ್ಣ, ತಮ್ಮನ ಮಧ್ಯೆಯೇ ಅಧಿಕಾರಕ್ಕಾಗಿ ಯುದ್ಧ ಆರಂಭವಾಗಿದೆ. ಬಳ್ಳಾರಿ ನಗರದ ಬಿಜೆಪಿ ಶಾಸಕ, ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧವೇ ರಣಕಹಳೆ ಮೊಳಗಿಸಿದ್ದಾರೆ ಗಾಲಿ ಜನಾರ್ದನ ರೆಡ್ಡಿ. ಅಣ್ಣನ ಸೋಲಿಸಲು ಪತ್ನಿಯನ್ನು ಕಣಕ್ಕಿಳಿಸಿದ್ದಾರೆ. ಸೋಮಶೇಖರ ರೆಡ್ಡಿ ವಿರುದ್ಧ ಜನಾರ್ದನ ರೆಡ್ಡಿ‌ (Janardhan Reddy) ಹೆಂಡತಿ ಅರುಣಾ ಲಕ್ಷ್ಮಿ ಸೆಣಸಲಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಚಲನವಲನದ ಮೇಲೆ ಗುಪ್ತಚರ ಇಲಾಖೆ ಕಣ್ಣು

    ಬಿಜೆಪಿಗೆ ಸೆಡ್ಡು ಹೊಡೆದು ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿರುವ ಜನಾರ್ದನ ರೆಡ್ಡಿ, ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿಕೊಂಡಿದ್ದಾರೆ. ತಮ್ಮ ಹೊಸ ಪಕ್ಷ ಹುಟ್ಟು ಹಾಕಿದ್ದರೂ ಅಣ್ಣ ಸೋಮಶೇಖರ ರೆಡ್ಡಿ ಬಿಜೆಪಿಯಲ್ಲೇ ಇದ್ದಾರೆ. ಇಂಥ ಸಂದರ್ಭದಲ್ಲೇ ಅಣ್ಣನ ವಿರುದ್ಧವೇ ಯುದ್ಧ ಸಾರಿದ್ದಾರೆ ಗಾಲಿ ರೆಡ್ಡಿ. ತಮ್ಮ ಹಾಗೂ ತಮ್ಮನ ಹೆಂಡತಿಯ ಚಾಲೆಂಜ್ ಅನ್ನು ಸೋಮಶೇಖರ್ ರೆಡ್ಡಿ ಸ್ವೀಕರಿಸಿದ್ದಾರೆ.

    ಅಣ್ಣನ ಹಣಿಯಲು ತಮ್ಮನ ಸ್ಕೆಚ್: ಬಳ್ಳಾರಿ ಜನ ಇದು ಯಾಕೋ ನಂಬಲಾಗುತ್ತಿಲ್ಲ ಅನ್ನುತ್ತಿದ್ದಾರೆ. ಕಾಂಗ್ರೆಸ್ ವೋಟ್ ಒಡೆಯಲು ಜನಾರ್ದನ ರೆಡ್ಡಿ ಹೂಡಿದ ತಂತ್ರವಾ ಇದು ಅಂತ ಮಾತಾಡಿಕೊಳ್ತಿದ್ದಾರೆ. ಈ ರೀತಿ ಹತ್ತು ಹಲವು ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ. ಒಂದು ವೇಳೆ ಅಣ್ಣನ ಸೋಲಿಸಲೆಂದೇ ಪತ್ನಿಯನ್ನು ಕಣಕ್ಕಿಳಿಸಿದ್ದೇ ಆದರೆ, ಬಳ್ಳಾರಿ ಅಖಾಡ ಇನ್ನಷ್ಟು ರಂಗೇರೋದಂತೂ ಗ್ಯಾರೆಂಟಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್ ಬರ್ತೀನಿ ಅಂದಿರೋ ರೆಡ್ಡಿ ಹೇಳಿಕೆಯನ್ನು ಸೀರಿಯಸ್ಸಾಗಿ ತಗೋಬೇಡಿ: ಶ್ರೀರಾಮುಲು

    ಕಾಂಗ್ರೆಸ್ ಬರ್ತೀನಿ ಅಂದಿರೋ ರೆಡ್ಡಿ ಹೇಳಿಕೆಯನ್ನು ಸೀರಿಯಸ್ಸಾಗಿ ತಗೋಬೇಡಿ: ಶ್ರೀರಾಮುಲು

    ಬಳ್ಳಾರಿ: ಕಾಂಗ್ರೆಸ್ ಸೇರುವ ಕುರಿತು ಶಾಸಕ ಸೋಮಶೇಖರ ರೆಡ್ಡಿ ನೀಡಿರುವ ಹೇಳಿಕೆಯನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಡಿ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಬಳ್ಳಾರಿ ನಗರದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ರೆಡ್ಡಿ ಹೇಳಿಕೆಯನ್ನ ಗಂಭೀರವಾಗಿ ತೆಗೆದುಕೊಳ್ಳಬಾರದು. ನನ್ನ ಜೊತೆನೂ ಅನೇಕ ಕಾಂಗ್ರೆಸ್ ಶಾಸಕರು ಮಾತನಾಡುತ್ತಾರೆ, ಅಣ್ಣ ನಾನು ನಿನ್ ಜೊತೆ ಇರ್ತೀನಿ ಅಂತಾರೆ. ಆದರೆ ಅವರು ಬರೋಕೆ ಆಗಲ್ಲ. ಅದೇ ರೀತಿ ಸೋಮಶೇಖರ್ ರೆಡ್ಡಿ ಅವರು ಸಿದ್ದರಾಮಯ್ಯ ಅವರ ಜೊತೆ ಫ್ಲೋ ಅಲ್ಲಿ ಮಾತನಾಡಿದ್ದಾರೆ ಅಷ್ಟೇ ಎಂದು ಹೇಳಿದರು. ಇದನ್ನೂ ಓದಿ: ಗಂಡನ ವೀರ್ಯವನ್ನು ಕೇಕ್‍ನಲ್ಲಿ ಮಿಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಕ್ಷಕಿಗೆ 40 ವರ್ಷ ಜೈಲು

    ಸೋಮಶೇಖರ್ ರೆಡ್ಡಿ ಈ ಭಾಗದ ಹಿರಿಯ ನಾಯಕರು, ಹೀಗಾಗಿ ಅವರು ಬಿಜೆಪಿ ಬಿಟ್ಟು ಹೋಗಲ್ಲ. ಸೋಮಶೇಖರ್ ರೆಡ್ಡಿ ಅವರ ಮಾತನ್ನ ಯಾರೂ ಸೀರಿಯಸ್ ಆಗಿ ತಗೊಳಲ್ಲ. ಸಿದ್ದರಾಮಯ್ಯನವರು ನನ್ನ ಜೊತೆ ಮಾತನಾಡುವಾಗ ರಾಮುಲು ಅವರೇ ನಮಗೆ ಅವಕಾಶ ಕೊಟ್ಟರೆ ನಾವು ನಿಮ್ಮ ಜೊತೆ ಬರ್ತೀವಿ ಅಂತಾರೆ. ಹಾಗೆಂದ ಮಾತ್ರಕ್ಕೆ ಅವರು, ಬಿಜೆಪಿಗೆ ಬರುತ್ತಾರಾ..?. ಹೀಗಾಗಿ ಯಾರು ಕೂಡಾ ಈ ರೀತಿಯ ಮಾತುಗಳನ್ನ ಸೀರಿಯಸ್ ಆಗಿ ತಗೊಳೋದು ಬೇಕಿಲ್ಲ ಎಂದು ಸಚಿವರು ಮನವಿ ಮಾಡಿದರು.

    ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ವಿಧಾನಸೌದದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನ ಮುಂದೆ ಜನಾರ್ದನ ರೆಡ್ಡಿ ಒಪ್ಪಿಕೊಂಡರೆ, ಕಾಂಗ್ರೆಸ್ ಬರುತ್ತೇವೆ ಎಂದು ರೆಡ್ಡಿ ಹೇಳಿಕೆ ನೀಡಿದ್ದರು. ಈ ವಿಚಾರ ಭಾರೀ ಸುದ್ದಿಯಾಗಿತ್ತು. ಇದನ್ನೂ ಓದಿ: ಹಿಜಬ್ ವಿವಾದದ ಹಿಂದೆ ಬಿಜೆಪಿ, ಎಸ್‍ಡಿಪಿಐ ಇದೆ: ಡಿಕೆಶಿ ಆರೋಪ

  • ಸುಧಾಕರ್ ಏನು ಸಿಎಂಗಿಂತ ದೊಡ್ಡವರಾ? ಬಿಜೆಪಿ ಶಾಸಕ ಕಿಡಿ

    ಸುಧಾಕರ್ ಏನು ಸಿಎಂಗಿಂತ ದೊಡ್ಡವರಾ? ಬಿಜೆಪಿ ಶಾಸಕ ಕಿಡಿ

    ಬಳ್ಳಾರಿ: ಸುಧಾಕರ್ ಏನು ಮುಖ್ಯಮಂತ್ರಿಗಳಿಗಿಂತ ದೊಡ್ಡವರಾ ಎಂದು ಆರೋಗ್ಯ ಸಚಿವರ ವಿರುದ್ಧ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಕೆಂಡಾಮಂಡಲವಾಗಿದ್ದಾರೆ.

    ಸ್ವಪಕ್ಷದ ಸಚಿವರ ವಿರುದ್ಧವೇ ಸೋಮಶೇಖರ್ ರೆಡ್ಡಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೆಲ ಸಚಿವರು ದೇವಲೋಕದಿಂದ ಬಂದಿದ್ದೇವೆ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ. ಅವರೇನು ಮೇಲಿಂದ ಬಂದವರೇ? ಅವರು ದೇವಮಾನವರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನರೇಗಾ ವಿಶ್ವಕ್ಕೆ ಮಾದರಿ: ಕೆ.ಎಸ್.ಈಶ್ವರಪ್ಪ

    ನಿನ್ನೆ ಕಲ್ಯಾಣ ಕರ್ಣಾಟಕದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿತ್ತು. ಕಲ್ಯಾಣ ಕರ್ಣಾಟಕದ ಮೀಸಲಾತಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳ ಸೀಟ್ ಏಕಾಏಕಿ ಕಡಿತ ಮಾಡಲಾಗಿತ್ತು. ಹೀಗಾಗಿ ಆರೋಗ್ಯ ಸಚಿವ ಸುಧಾಕರ್ ಅವರಿಗೆ ನಾನು ಹಲವು ಸಾರಿ ಕರೆ ಮಾಡಿದ್ದೆ. ಅವರ ಪಿಎಗೂ ಕರೆ ಮಾಡಿದೆ. ಬಳಿಕ ಅವರಿಗೆ ಮೆಸೇಜ್ ಸಹ ಹಾಕಿದ್ದೆ. ಆದರೆ ಅವರು ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಇದೇ ವಿಚಾರವಾಗಿ ನಾವು ಸಿಎಂ ಬೊಮ್ಮಾಯಿ ಬಳಿಯೂ ಹೋಗಿದ್ದೆ, ಅವರು ಕೇವಲ 30 ಸೆಕೆಂಡ್‍ನಲ್ಲಿ ಕೆಲಸ ಮಾಡಿಕೊಟ್ಟರು ಎಂದು ತಿಳಿಸಿದ್ದಾರೆ.

    ಸುಧಾಕರ್ ಅವರು ಸಿಎಂಗಿಂತ ದೊಡ್ಡವರಾ? ಕೆಲ ಸಚಿವರಿಗೆ ದುರಹಂಕಾರ ಹೆಚ್ಚಾಗಿದೆ. ಅದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡದ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಸಿಎಂಗೆ ಮನವಿ ಮಾಡಿರುವೆ ಎಂದಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಮಂತ್ರವಾದಿ – ಹಣ, ಚಿನ್ನಾಭರಣ ಮಾಯ ಮಾಡಿದ್ದೇನೆ ಎಂದ!

    ನಾನು ನನ್ನ ವೈಯಕ್ತಿಕ ವಿಚಾರಕ್ಕೆ ಅವರಿಗೆ ಕರೆ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಕರೆ ಮಾಡಿದ್ದೆ. ನಮ್ಮಂಥವರ ವಿಚಾರವಾಗಿಯೇ ಈ ರೀತಿ ನಿರ್ಲಕ್ಷ್ಯ ವಹಿಸಿದರೆ,ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದ್ದಾರೆ.

  • ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ: ಸೋಮಶೇಖರ್ ರೆಡ್ಡಿ

    ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ: ಸೋಮಶೇಖರ್ ರೆಡ್ಡಿ

    – ಆನಂದ್ ಸಿಂಗ್ ಹೈ ಪ್ರೊಫೈಲ್ ರಾಜಕಾರಣಿ

    ಬಳ್ಳಾರಿ: ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದರು.

    ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನೊಂದು ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಶ್ರೀರಾಮುಲು ಅವರಿಗೆ ವಹಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳೂ ನಡೆದಿದ್ದು, ಸಿಎಂ ಬೊಮ್ಮಾಯಿ ಅವರನ್ನೂ ಸಹ ಭೇಟಿ ಮಾಡಿ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಮಾಜ್ ಮಾಡಲು ಅವಕಾಶ ನೀಡಲ್ಲ – ಹರ್ಯಾಣ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

    ಒಂದು ವೇಳೆ ಉಸ್ತುವಾರಿ ಸಚಿವ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ. ಸಚಿವ ಆನಂದ್ ಸಿಂಗ್ ಹೈ ಪ್ರೊಫೈಲ್ ರಾಜಕಾರಣಿ. ಅವರು ಕೇವಲ ವಿಜಯನಗರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದಾರೆ. ಶ್ರೀರಾಮುಲು ಅವರು ಲೋಫೈ ರಾಜಕಾರಣಿ. ಹೀಗಾಗಿ ಅವರಿಗೆ ಬಳ್ಳಾರಿ ಉಸ್ತುವಾರಿ ಕೊಡಬೇಕು ಎಂದು ಕುಹಕವಾಡಿದರು.

    ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಕುರಿತು ಮಾತನಾಡಿದ ಅವರು, ಈ ಬಗೆಯ ವಿಚಾರವೇ ನಡೆದಿಲ್ಲ. ಸಿಎಂ ಬದಲಾಗುವುದಿಲ್ಲ, ಅರಾಮಾಗಿ ನಮ್ಮ ಸರ್ಕಾರ ಮುಂದುವರೆಯಲಿದೆ ಎಂದರು.

    ಎಂಎಲ್‍ಸಿ ಚುನಾವಣೆಯ ಫಲಿತಾಂಶ ಮುಂದಿನ ದಿಕ್ಸೂಚಿಯಾಗಲಿದೆ. ಮುಂದೆಯೂ ನಮ್ಮ ಸರ್ಕಾರ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರೆಡ್ಡಿ, ನನ್ನ ಹಣೆಯಲ್ಲಿ ನಾನು ಮಂತ್ರಿ ಆಗಬೇಕು ಅಂತಾ ಬರೆದಿದ್ರೆ ಅದನ್ನು ಯಾರು ತಪ್ಪಿಸುವುದಕ್ಕೆ ಆಗಲ್ಲ. ನನಗೆ ಸಚಿವ ಸ್ಥಾನ ನೀಡುವುದು ದೇವರಿಗೆ ಬಿಟ್ಟ ವಿಚಾರ ಎಂದು ಮಂತ್ರಿಮಂಡಲ ವಿಸ್ತರಣೆ ಬಗ್ಗೆಯೂ ವಿವರಿಸಿದರು. ಇದನ್ನೂ ಓದಿ: ಕಾರಿನ ಬಿಡಿ ಭಾಗಗಳಿಂದ ಹೆಲಿಕಾಪ್ಟರ್ ರೆಡಿ – ವೀಡಿಯೋ ವೈರಲ್

    Bommai

    ಮತಾಂತರ ಕಾಯ್ದೆ ಕುರಿತು ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಬಲವಂತವಾಗಿ ಮತಾಂತರ ಮಾಡಬಾರದು. ಇದಕ್ಕೆ ನನ್ನ ವಿರೋಧವಿದೆ. ಪ್ರೀತಿಸಿ, ನಂಬಿಸಿ ಮತಾಂತರ ಮಾಡುವುದು ಸರಿಯಲ್ಲ. ಲವ್ ಜಿಹಾದ್ ತಡೆ ಕಾಯ್ದೆ ಜಾರಿ ಆಗಬೇಕು. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವುದಕ್ಕೆ ನನ್ನ ಬೆಂಬಲವಿದೆ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರೋಧದ ಕುರಿತು ಮಾತನಾಡಿದ ಅವರು, ವೋಟ್ ಬ್ಯಾಂಕ್ ವಿಭಜನೆ ಆಗುತ್ತೆ ಅಂತಾ ಸಿದ್ದರಾಮಯ್ಯ ಅವರು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧ ಮಾಡ್ತಿದ್ದಾರೆ. ಆದ್ರೆ ಮತಾಂತರ ನಿಷೇಧ ಕಾಯ್ದೆ ಜಾರಿ ಆಗಲೇಬೇಕು ಎಂದು ತಿಳಿಸಿದರು.

  • ಆಯಸ್ಸಲ್ಲಿ 10 ವರ್ಷ ಅಪ್ಪುಗೆ ಕೊಟ್ಟು ನನ್ನ ಆ ರೀತಿ ಮಾಡಿದ್ರೆ ಚೆನ್ನಾಗಿರ್ತಿತ್ತು: ಸೋಮಶೇಖರ್ ರೆಡ್ಡಿ ಕಣ್ಣೀರು

    ಆಯಸ್ಸಲ್ಲಿ 10 ವರ್ಷ ಅಪ್ಪುಗೆ ಕೊಟ್ಟು ನನ್ನ ಆ ರೀತಿ ಮಾಡಿದ್ರೆ ಚೆನ್ನಾಗಿರ್ತಿತ್ತು: ಸೋಮಶೇಖರ್ ರೆಡ್ಡಿ ಕಣ್ಣೀರು

    ಬೆಂಗಳೂರು: ನಮ್ಮ ವಯಸ್ಸಲ್ಲಿ ದೇವರು 10 ವರ್ಷ ಅವರಿಗೆ ಕೊಟ್ಟು ನಮ್ಮನ್ನು ಆ ರೀತಿ ಮಾಡಿದ್ರೆ ಚೆನ್ನಾಗಿರುತ್ತಿತ್ತು ಅನ್ನೋ ಭಾವನೆ ಬರುತ್ತಿದೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಕಂಬನಿ ಮಿಡಿದಿದ್ದಾರೆ.

    ಕಂಠೀರವ ಸ್ಟೇಡಿಯಂನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 46 ವರ್ಷ ವಯಸ್ಸಲ್ಲೇ ಈ ರೀತಿ ಆಯ್ತು. ನಾನು ಕೆಎಂಎಫ್ ಚೇರ್ ಮನ್ ಇದ್ದಾಗ ಎಲ್ಲಾ ಜಾಹೀರಾತುಗಳಿಗೂ ಪುನೀತ್ ರಾಜ್ ಕುಮಾರ್ ಬರುತ್ತಿದ್ದರು. ಹೀಗೆ ಬಂದು ಹೋಗುವಾಗ ಹಣ ತಗೋ ಪುನೀತ್ ಅಂದ್ರೆ ಇಲ್ಲ ಅಣ್ಣ, ನಂದಿನಿ ನಮ್ಮ ಕರ್ನಾಟಕ ರೈತರದ್ದಾಗಿದೆ. ಹೀಗಾಗಿ ಅವರಿಂದ ಹಣ ಪಡೆದುಕೊಳ್ಳಬೇಡ ಸುಮ್ನೆ ಬರಬೇಕು ಎಂದು ಅಪ್ಪಾಜಿ ಹೇಳಿದ್ದಾರೆ ಎಂದು ಹೇಳುತ್ತಾ ಒಂದು ರೂಪಾಯಿನೂ ತೆಗೆದುಕೊಳ್ಳದೇ ಹೋಗುತ್ತಿದ್ದ ದೇವತಾ ಮನಷ್ಯ ಎಂದು ಗದ್ಗದಿತರಾದರು. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    ಸಹೋದರನಂತೆ ಇದ್ದ ಪುನೀತ್ ಅವರು ಬಳ್ಳಾರಿಗೆ ಹಲವು ಬಾರಿ ಬಂದಿದ್ದಾರೆ. ರಾಜ್ ಕುಮಾರ್ ಪಾರ್ಕ್ ಉದ್ಘಾಟನೆಗೆ ಬಂದಿದ್ದರು. ನಾನು ಮುನ್ಸಿಪಾಲಿಟಿ ಮೇಯರ್ ಇದ್ದಾಗ ರಾಜ್ ಕುಮಾರ್ ರಸ್ತೆ ಎಂದು ಒಂದು ರಸ್ತೆಗೆ ಹೆಸರಿಟ್ಟಿದ್ದೆ. ಅದಕ್ಕೂ ಅಪ್ಪು ಬಂದಿದ್ದರು. ಹೀಗೆ ಪ್ರತಿಯೊಂದು ಕಾರ್ಯಕ್ರಮಕ್ಕೆ ಬಂದಾಗಲೆಲ್ಲ ಅಣ್ಣಾ.. ಅಣ್ಣಾ ಅಂತಲೇ ಮಾತಾಡಿಸುತ್ತಿದ್ದರು ಎಂದು ಹೇಳುತ್ತಾ ಕಣ್ಣೀರು ಹಾಕಿದರು. ಇದನ್ನೂ ಓದಿ: ಶಿವಣ್ಣ ಆಲ್ ದಿ ಬೆಸ್ಟ್, ಎಲ್ಲರಿಗೂ ದೇವರು ಒಳ್ಳೆದು ಮಾಡ್ಲಿ – ಪುನೀತ್ ಕೊನೆ ಮಾತು

    ನಂದಿನಿ ಹಾಲಿನ ಎಲ್ಲಾ ಕಾರ್ಯಕ್ರಮಕ್ಕೂ ಪುನೀತ್ ಬರುತ್ತಿದ್ದರು. ಪ್ರೀತಿಯಿಂದ ಅಣ್ಣಾ ಎಂದು ಕರೆಯುತ್ತಿದ್ದರು. ದೇವರು ಅವರಿಗೆ ಒಳ್ಳೆಯ ಸಂಸ್ಕೃತಿ ಕೊಟ್ಟಿದ್ದಾರೆ. ತುಂಬಾ ಸಿಂಪ್ಲಿಸಿಟಿ ವ್ಯಕ್ತಿತ್ವ. ದೇವರು ಇಷ್ಟು ಚಿಕ್ಕ ವಯಸ್ಸಲ್ಲಿ ಕರೆದುಕೊಂಡಿದ್ದಾರೆ ಅಂದ್ರೆ ನಂಬೋಕೆ ಆಗ್ತಿಲ್ಲ. ನಮ್ಮ ವಯಸ್ಸಲ್ಲಿ ದೇವರು 10 ವರ್ಷ ಅವರಿಗೆ ಕೊಟ್ಟು ನಮ್ಮನ್ನು ಆ ರೀತಿ ಮಾಡಿದ್ರೆ ಚೆನ್ನಾಗಿರುತ್ತಿತ್ತು ಅನ್ನೋ ಭಾವನೆ ಬರುತ್ತಿದೆ. ನೋಡಿ ತಡೆದುಕೊಳ್ಳಲು ಆಗದಂತಹ ಪರಿಸ್ಥಿತಿ. ಹೀಗಾಗಿ ನಾನು ಸಹೋದರ ಜನಾರ್ದನ ರೆಡ್ಡಿ ಬಂದಿದ್ದೇವೆ ಎಂದರು. ಇದನ್ನೂ ಓದಿ: ತಂದೆಯಂತೆ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗ್ಬಾರ್ದು ಅನ್ನೋ ವ್ಯಕ್ತಿತ್ವ ಅಪ್ಪುದು: ವಿ. ಮನೋಹರ್

    ಯಾವುದೇ ಜಾಹಿರಾತು ಮಾಡಿದ್ರೂ 1 ರೂ. ತೆಗೆದುಕೊಳ್ಳುತ್ತಿರಲಿಲ್ಲ. ಅಪ್ಪ ಹೇಳಿದ್ರು ಅಂತ ಅವರು ಹಣ ತೆಗೆದುಕೊಳ್ಳುತ್ತಿರಲಿಲ್ಲ. ಈ ಕಾಲದಲ್ಲಿ ಯಾವ ಮಕ್ಕಳು ಅಪ್ಪನ ಮಾತು ಕೇಳುತ್ತಾರೆ. ಅಂತದ್ರಲ್ಲಿ ಇವರು ಅಪ್ಪನ ಮಾತನ್ನು ನಡೆಸಿಕೊಂಡು ಬಂದ್ರು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರಗದ ಅಪ್ಪು ಅಭಿಮಾನಿಗಳ ಸಾಗರ – ನೂಕುನುಗ್ಗಲು, ಬ್ಯಾರಿಕೇಡ್ ತಳ್ಳಿ ಆಕ್ರಂದನ

    ಕಳೆದ ಬಾರಿ ದುರ್ಗಮ್ಮ ಗುಡಿಯತ್ತ ಸಾಂಗ್ ಮಾಡಿದ್ದರು. ದುರ್ಗಮ್ಮ ಗುಡಿ ಬಹಳ ಫೇಮಸ್. ಅಲ್ಲಿ ನಮಗೆ ತುಂಬಾ ಜನ ಅಭಿಮಾನಿಗಳಿದ್ದಾರೆ ಎಂದು ಅಪ್ಪ-ಅಮ್ಮ ಹೇಳುತ್ತಿದ್ದರಂತೆ. ಹೀಗಾಗಿ ಅಲ್ಲಿಗೆ ಬಂದಿದ್ದಾಗ ಭೇಟಿಯಾಗಿದ್ದೆ. ಅದೇ ನಮ್ಮಿಬ್ಬರ ಕೊನೆಯ ಭೇಟಿಯಾಗಿದೆ. ಸದ್ಯ ಏನೂ ಹೇಳೋಕು ಆಗ್ತಿಲ್ಲ ಎಂದು ರೆಡ್ಡಿ ಅತ್ತು ಬಿಟ್ಟರು.

  • ನಮ್ಮಂಥ ಸಿಎಂ ಯಾವ ರಾಜ್ಯದಲ್ಲೂ ಇಲ್ಲ: ಸೋಮಶೇಖರ್ ರೆಡ್ಡಿ

    ನಮ್ಮಂಥ ಸಿಎಂ ಯಾವ ರಾಜ್ಯದಲ್ಲೂ ಇಲ್ಲ: ಸೋಮಶೇಖರ್ ರೆಡ್ಡಿ

    – ಮುಂದಿನ ಎರಡು ವರ್ಷ ಬಿಎಸ್‍ವೈ ಅವರೇ ಸಿಎಂ ಆಗಿರಲಿ

    ಬಳ್ಳಾರಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಬ್ಯಾಟಿಂಗ್ ಮಾಡಿದ್ದಾರೆ.

    ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕಷ್ಟಪಟ್ಟು ದುಡಿದು, ಪಕ್ಷವನ್ನು ಕಟ್ಟಿದ್ದಾರೆ. ಅವರನ್ನು ಮುಂದುವರಿಸಿದರೆ ತೊಂದರೆ ಏನು? ಇನ್ನೂ 2 ವರ್ಷ ಅವರೇ ಇದ್ರೆ ಉತ್ತಮ ಆಡಳಿತ ಕೊಡೋಕೆ ಸಾಧ್ಯ. ಅಲ್ಲದೆ ಯಾವ ರಾಜ್ಯದಲ್ಲೂ ನಮ್ಮಂತಹ ಸಿಎಂ ಇಲ್ಲ, ಅವರನ್ನ ಭೇಟಿ ಮಾಡೋದು ತುಂಬ ಸುಲಭ. ಭೇಟಿ ಮಾಡಿದಾಗ ಅಭಿವೃದ್ಧಿ ವಿಚಾರ ಮಾತ್ರ ಮಾತನಾಡುತ್ತಾರೆ. ಅವರ ಮನೆಗೆ ಹೋದ ಶಾಸಕರಿಗೆ ಊಟ, ತಿಂಡಿ ಕೊಟ್ಟು ಜೊತೆಯಲ್ಲೇ ಕುಳಿತು ಮಾತಾಡ್ತಾರೆ. ಈ ರೀತಿಯ ಸಿಎಂ ನನಗೆ ಬೇರೆಲ್ಲೂ ಸಿಗಲ್ಲ ಎಂದಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ ನಲ್ಲಿ ಸಿಎಂ ಪಟ್ಟಕ್ಕಾಗಿ ಹಗ್ಗ ಜಗ್ಗಾಟ ವಿಚಾರಕ್ಕೆ ಸೊಮಶೇಖರ ರೆಡ್ಡಿ ವ್ಯಂಗ್ಯವಾಡಿದ್ದು. ಕಾಂಗ್ರೆಸ್ ಯಾವಾಗ್ಲೂ ಅಷ್ಟೇ ಅವರ ಪಕ್ಷದಲ್ಲಿ ಇರೋದೇ ಆ ರೀತಿಯ ನಡುವಳಿಕೆ, ಒಂದು ಬಾರಿ ಅಧಿಕಾರಕ್ಕೆ ಬಂದರೆ ಐದು ಮಂದಿ ಚೇಂಜ್ ಮಾಡ್ತಾರೆ, ಸಿದ್ದರಾಮಯ್ಯನವರು ಪುಣ್ಯಕ್ಕೆ ಐದು ವರ್ಷ ಸಿಎಂ ಆಗಿ ರೆಕಾರ್ಡ್ ಮಾಡಿದ್ದು ಬಿಟ್ಟರೆ ಯಾವಾಗಲೂ ಕೇವಲ ಚೇಂಜ್ ಮಾಡ್ತಾನೆ ಇರ್ತಾರೆ. ಕಾಂಗ್ರೆಸ್ ನಲ್ಲಿ ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಾರೆ, ಅವರು ಕಾಲು ಎಳೆದು ಇವರು ಸಿಎಂ ಆಗ್ತೇನೆ ಅಂದ್ರೆ, ಇನ್ನೊಬ್ಬರು ಆಗೋದಕ್ಕೆ ಮತ್ತೊಬ್ಬರ ಕಾಲು ಎಳೆಯುತ್ತಾರೆ ಎಂದು ವೆಂಗ್ಯವಾಡಿದ್ದಾರೆ.

  • ಬಳ್ಳಾರಿ ಉಸ್ತುವಾರಿಗೆ ಆನಂದ್ ಸಿಂಗ್ ಬೇಡ: ಸೋಮಶೇಖರ್ ರೆಡ್ಡಿ

    ಬಳ್ಳಾರಿ ಉಸ್ತುವಾರಿಗೆ ಆನಂದ್ ಸಿಂಗ್ ಬೇಡ: ಸೋಮಶೇಖರ್ ರೆಡ್ಡಿ

    – ಉಮೇಶ್ ಕತ್ತಿ ನೀಡಿದ ಹೇಳಿಕೆ ತಪ್ಪು

    ಬೆಂಗಳೂರು: ಬಳ್ಳಾರಿ ಜಿಲ್ಲೆಗೆ ಸಚಿವ ಆನಂದ್ ಸಿಂಗ್ ಉಸ್ತುವಾರಿ ಆಗಲು ನಾವು ಬಿಡಲ್ಲ. ಬೇಕಿದ್ದಲ್ಲಿ ನೂತನ ಜಿಲ್ಲೆ ವಿಜಯನಗರದ ಉಸ್ತುವಾರಿನ್ನ ಆನಂದ್ ಸಿಂಗ್ ನೋಡಿಕೊಳ್ಳಲಿ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಎಲ್ಲ ಶಾಸಕರು ಪತ್ರ ಬರೆಯಲಿದ್ದೇವೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸೋಮಶೇಖರ್ ರೆಡ್ಡಿ, ಬಳ್ಳಾರಿ ವಿಭಜನೆಯ ಆದೇಶ ಹಿಂಪಡೆಯುವಂತೆ ಶೀಘ್ರವೇ ಮುಖ್ಯಮಂತ್ರಿಗಳನ್ನ ಭೇಟಿ ಮಾಡುತ್ತೇವೆ. ಈಗಾಗಲೇ ಬಳ್ಳಾರಿ ವಿಭಜನೆ ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದು, ಅವರ ಬೆಂಬಲಕ್ಕೆ ನಾವಿದ್ದೇವೆ. ಬಳ್ಳಾರಿಯಿಂದ ನೂರು ಜನರ ಸಮಿತಿಯೊಂದಿಗೆ ಸಿಎಂ ಅವರನ್ನ ಭೇಟಿಯಾಗಿ ವಿಭಜನೆಯಿಂದಾಗುವ ಅನಾನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಸಿಎಂ ಆದೇಶವನ್ನ ಹಿಂಪಡೆಯುವ ವಿಶ್ವಾಸವಿದೆ ಎಂದರು.

    ಬಳ್ಳಾರಿ ವಿಭಜನೆ ಆಗುತ್ತಿದ್ದಂತೆ ನೆರೆಯ ರಾಯಲಸೀಮೆಯ ಕೆಲವರು ಜಿಲ್ಲೆ ನಮಗೆ ಸೇರಬೇಕೆಂದು ಹೇಳಿಕೆ ನೀಡಿರೋದು ಗಮನಕ್ಕೆ ಬಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಳಗಾವಿಯಂತೆ ಬಳ್ಳಾರಿ ಆಗೋದು ಬೇಡ. ಬಳ್ಳಾರಿ ಕರ್ನಾಟಕದಲ್ಲಿರಬೇಕು ಎಂಬುವುದು ಅಖಂಡ ಜಿಲ್ಲೆಯ ಬಯಸುತ್ತಿರುವ ಜನರ ಆಸೆ ಎಂದು ತಿಳಿಸಿದರು. ಇದನ್ನೂ ಓದಿ: ಬೈಕ್‌, ಟಿವಿ, ‍ಫ್ರಿಡ್ಜ್‌ ಇದ್ದರೆ ಪಡಿತರ ರದ್ದು – ಉಮೇಶ್‌ ಕತ್ತಿ

    ಉಮೇಶ್ ಕತ್ತಿ ಹೇಳಿಕೆ ತಪ್ಪು: ಟಿವಿ, ಬೈಕ್, ಫ್ರಿಡ್ಜ್ ಇದ್ದವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತೆ ಎಂದು ಸಚಿವ ಉಮೇಶ್ ಕತ್ತಿ ಹೇಳಿರುವುದು ತಪ್ಪು. ಇಂದು ಯಾರು ನಡೆದುಕೊಂಡು ಹೋಗಲ್ಲ. ಟಿವಿ, ಫ್ರಿಡ್ಜ್ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ವಸ್ತುಗಳು. ಜನರ ಆರ್ಥಿಕ ಪರಿಸ್ಥಿತಿಯನ್ನ ಪತ್ತೆ ಮಾಡಿ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಕೆಲಸಕ್ಕೆ ಮುಂದಾಗಬೇಕು. ಇಲ್ಲಾವಾದ್ರೆ ನಾವು ಹೋರಾಟಕ್ಕೆ ಸಿದ್ಧ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು. ಇದನ್ನೂ ಓದಿ:  ಪಡಿತರದಲ್ಲಿ ರಾಗಿ, ಜೋಳ – ಕೇಂದ್ರ ಸಚಿವರ ಜೊತೆ ಉಮೇಶ್ ಕತ್ತಿ ಚರ್ಚೆ

  • ಬಳ್ಳಾರಿ ವಿಭಜನೆ ವಿರೋಧಿಸಿ ರಾಜೀನಾಮೆಗೆ ನಾನು ಸಿದ್ಧ: ಸೋಮಶೇಖರ ರೆಡ್ಡಿ

    ಬಳ್ಳಾರಿ ವಿಭಜನೆ ವಿರೋಧಿಸಿ ರಾಜೀನಾಮೆಗೆ ನಾನು ಸಿದ್ಧ: ಸೋಮಶೇಖರ ರೆಡ್ಡಿ

    ಬಳ್ಳಾರಿ: ನೂತನ ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ನನ್ನ ಕ್ಷೇತ್ರದ ಜನ ಇಷ್ಟಪಟ್ಟರೆ ರಾಜೀನಾಮೆ ನೀಡುವುದಾಗಿ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಬಳ್ಳಾರಿಯಲ್ಲಿಂದು ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನರು ಜಿಲ್ಲೆ ವಿಭಜನೆ ವಿಚಾರವಾಗಿ ರಾಜೀನಾಮೆ ನೀಡಿ ಅಂದ್ರೆ ನಾನು ರಾಜೀನಾಮೆ ನೀಡುವೆ. ನನ್ನನ್ನು ಮತಗಳು ಹಾಕಿ ಚುನಾಯಿಸಿದ ಮತದಾರರು ಹೇಳಿದ್ರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದರು.

    ಈ ಜಿಲ್ಲೆಯ ವಿಭಜನೆ ಮಾಡೋ ವಿಚಾರವಾಗಿ ನನಗೆ ಪಶ್ಚಿಮ ತಾಲೂಕುಗಳ ಜನರು ಫೋನ್ ಮಾಡಿ ಮಾತನಾಡಿದ್ದಾರೆ. ಯಾಕೇ ವಿಭಜನೆ ಮಾಡ್ತಾರೆ ಅಂತ ಗೋಳು ಹೇಳಿಕೊಂಡಿದ್ದಾರೆ. ಸಿಎಂ ಆಗಿ ಬಿಎಸ್ ಯಡಿಯೂರಪ್ಪ ಇದ್ದಾರೆ ನಿಮ್ಮದೇ ಸರ್ಕಾರ ಇದೆ ಹಣ ತಂದು ಅಭಿವೃದ್ಧಿ ಮಾಡಬಹುದನ್ನು ಬಿಟ್ಟು ವಿಭಜನೆ ಮಾಡುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ. ಹೀಗಾಗಿ ಜಿಲ್ಲಾ ಕೇಂದ್ರ ಕಚೇರಿಗಳು ಬೇಕಾದರೆ ಹೊಸಪೇಟೆಗೆ ಶಿಫ್ಟ್ ಆಗಲಿ. ಆದರೆ ಜಿಲ್ಲೆ ಒಡೆಯೋದು ಬೇಡ ಅಂತ ಮನವಿ ಮಾಡುವೆ ಎಂದು ತಿಳಿಸಿದರು.

    ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಳ್ಳಾರಿ ಜಿಲ್ಲೆಗೆ ಸೇರಿಸೋದು ಬೇಡ. ಈ ಬಗ್ಗೆ ನಾನು ಶ್ರೀರಾಮುಲು ಅವರ ಮನವೊಲಿಸುವೆ. ನಾಳೆ ನೆರೆಯ ಆಂಧ್ರ ಪ್ರದೇಶದ ನಾನಾ ತಾಲೂಕುಗಳು ಬರುತ್ತವೆ ಚಳ್ಳಕೆರೆನೂ ಕೇಳುತ್ತಾರೆ. ಹಾಗೆ ಸೇರಿಸುತ್ತಾ ಹೋದರೆ ಸೌಲಭ್ಯದಿಂದ ನಮ್ಮ ಭಾಗದ ಮಕ್ಕಳು ವಂಚಿತರಾಗುತ್ತಾರೆ. ಯಾವುದೇ ಕಾರಣಕ್ಕೂ ಮೊಳ ಕಾಲ್ಮೂರು ಬಳ್ಳಾರಿಗೆ ಸೇರಿಸೋದು ಬೇಡ ಎಂದು ಆಗ್ರಹಿಸಿದ್ದಾರೆ.

  • ರಾಮುಲು-ರೆಡ್ಡಿ ಬಳಗದಲ್ಲಿ ಮೂಡಿದ ಬಿರುಕು

    ರಾಮುಲು-ರೆಡ್ಡಿ ಬಳಗದಲ್ಲಿ ಮೂಡಿದ ಬಿರುಕು

    ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿ ರೆಡ್ಡಿಗಳ ಮೂಲಕ ದೇಶದಲ್ಲಿಯೇ ಗುರುತಿಸಿಕೊಳ್ಳುವಂತಾಗಿತ್ತು. ಆದರೆ ದಿನೇ ದಿನೇ ರೆಡ್ಡಿಗಳ ಪಾರುಪತ್ಯ ಜಿಲ್ಲೆಯಲ್ಲಿ ಕಡಿಮೆಯಾದಂತೆ ಕಾಣಿಸುತ್ತಿದೆ. ಅದರಲ್ಲೂ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗವಾದ ಮೇಲಂತೂ ಈ ಸಂಶಯ ರಾಜಕೀಯ ವಲಯದಲ್ಲಿ ಮತ್ತಷ್ಟು ಜೋರಾಗಿದೆ. ಇದೆಲ್ಲದರ ನಡುವೆಯೂ ಸಚಿವ ರಾಮುಲು, ರೆಡ್ಡಿ ಬ್ರದರ್ಸ್ ಜೊತೆಗಿದ್ದರೆ ಯಾರು ಏನು ಮಾಡಿಕೊಳ್ಳಲು ಆಗಲ್ಲ ಎಂಬ ಮಾತಿತ್ತು. ಆದರೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಬ್ರದರ್ಸ್ ಮತ್ತು ರಾಮುಲು ನಡುವೆ ಬಿರುಕು ಉಂಟಾಗಿದೆ.

    ಈ ಹಿಂದೆ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿದ್ದ ಸಚಿವ ರಾಮುಲು ತಮ್ಮ ನಡೆ ಬದಲಿಸಿದ್ದಾರೆ. ರಾಮುಲು ವಿಜಯನಗರ ಜಿಲ್ಲೆ ರಚನೆ ಪರ ಬ್ಯಾಟ್ ಬೀಸಿದ ಪರಿಣಾಮ ಬಳ್ಳಾರಿಯಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಸಚಿವ ಆನಂದ್ ಸಿಂಗ್ ಜೊತೆ ರಾಮುಲು ರಾಜಕೀಯ ಒಪ್ಪಂದಕ್ಕೆ ಒಳಗಾಗಿ ನೂತನ ಜಿಲ್ಲೆ ರಚನೆಗೆ ಕೈ ಜೋಡಿಸಿದರು ಎಂಬ ಆರೋಪ ಕೇಳಿ ಬಂದಿದೆ. ಇದುವೇ ರೆಡ್ಡಿ ಬ್ರದರ್ಸ್ ಮುನಿಸಿಗೆ ಕಾರಣ ಎಂಬ ಮಾತು ಕೇಳಿ ಬಂದಿದೆ.

    ಒಂದು ವೇಳೆ ವಿಜಯನಗರ ಜಿಲ್ಲೆ ರಚನೆ ವಿಚಾರದಲ್ಲಿ ರಾಮುಲು ತಮ್ಮ ನಿಲುವನ್ನ ಬದಲಿಸಿದಿದ್ದರೇ ರೆಡ್ಡಿ ಬ್ರದರ್ಸ್ ಕುಟುಂಬದ ಅಸಮಾಧಾನಕ್ಕೆ ಕಾರಣವಾಗುತ್ತಿರಲಿಲ್ಲ. ವಿಜಯನಗರ ಜಿಲ್ಲೆ ರಚನೆಯಿಂದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ರೆಡ್ಡಿ ಪಾರುಪತ್ಯ ಪೂರ್ತಿ ತೆರೆಮರೆಗೆ ಸರಿಯುತ್ತಿರುವುದರಿಂದ ರೆಡ್ಡಿ ಬ್ರದರ್ಸ್ ಸಿಟ್ಟಾಗಿದ್ದಾರೆ. ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿರುವ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಬಳ್ಳಾರಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಸೇರ್ಪಡೆ ವಿಚಾರವನ್ನ ವಿರೋಧಿಸಿದ್ದಾರೆ. ಇದು ಈಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.

    ಮೊಳಕಾಲ್ಮೂರು ಶಾಸಕರಾಗಿರುವ ರಾಮುಲು ತಮ್ಮ ವಿಧಾನಸಭಾ ಕ್ಷೇತ್ರವನ್ನ ಬಳ್ಳಾರಿಗೆ ಸೇರಿಸಿ, ಜಿಲ್ಲೆಯ ಉಸ್ತುವಾರಿ ಪಡೆಯಬೇಕೆಂಬ ಹಂಬಲ ಹೊಂದಿದ್ದಾರೆ ಎನ್ನಲಾಗಿದೆ. ಇತ್ತ ಆಡಳಿತ ಪಕ್ಷದ ಸೋಮಶೇಖರ್ ರೆಡ್ಡಿ ವಿರೋಧ ವ್ಯಕ್ತಪಡಿಸಿರುವುದು ರಾಮುಲು ಅವರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ, ಸಚಿವ ಆನಂದ ಸಿಂಗ್ ಆಶಯದಂತೆ ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜಿಸಿದೆ. ಸರ್ಕಾರದ ಈ ನಿರ್ಧಾರ ರೆಡ್ಡಿ ಸೋದರರು ಮತ್ತು ಶ್ರೀರಾಮುಲು ಗೆಳೆತನದಲ್ಲಿ ಬಿರುಕು ಮೂಡಿಸಿದೆ.

  • ಸಿಎಂ ಮೊಂಡುತನ ಮಾಡಿ ಜಿಲ್ಲೆ ರಚಿಸಿದ್ರೆ ನಾನೇನು ಮಾಡ್ಲಿ: ರೆಡ್ಡಿ ಪ್ರಶ್ನೆ

    ಸಿಎಂ ಮೊಂಡುತನ ಮಾಡಿ ಜಿಲ್ಲೆ ರಚಿಸಿದ್ರೆ ನಾನೇನು ಮಾಡ್ಲಿ: ರೆಡ್ಡಿ ಪ್ರಶ್ನೆ

    – ಜಿಲ್ಲೆಯ ಜನರೇ ಬಿಜೆಪಿಗೆ ತಕ್ಕ ಪಾಠ ಕಳಿಸ್ತಾರೆ

    ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ನನ್ನ ಬೆಂಬಲ ಇಲ್ಲ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಖಡಕ್ಕಾಗಿ ತಿಳಿಸಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸಿಎಂ ತಾತ್ವಿಕ ಒಪ್ಪಿಗೆ ವಿಚಾರದ ಕುರಿತ ಪ್ರಶ್ನಿಸಿದಾಗ ಸೋಮಶೇಖರ ರೆಡ್ಡಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯನಗರ ಜಿಲ್ಲೆ ರಚನೆಗೆ ನನ್ನ ಬೆಂಬಲವಿಲ್ಲ. ರಾಜ್ಯ ಸರ್ಕಾರ ಇಂತಹ ನಿರ್ಣಯ ಕೈಗೊಳ್ಳಬಾರದಿತ್ತು. ಈ ಜಿಲ್ಲೆಯ ಜನರು, ವಿಜಯನಗರ ಜಿಲ್ಲೆ ರಚನೆಯ ವಿರೋಧಿಸಿ ಹೋರಾಟ ಮಾಡಿದರೆ ಅವರೊಂದಿಗೆ ನಾನೂ ನಿಲ್ಲುವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಷಣೆ- ಸಂಪುಟ ಅಸ್ತು

    ಬಳ್ಳಾರಿ ಜಿಲ್ಲೆ ವಿಭಜನೆಯಾದ್ರೆ ಜಿಲ್ಲೆಯಲ್ಲಿ ಬಿಜೆಪಿ ಎರಡು ಹೋಳಾಗುತ್ತದೆ. ಈ ಜಿಲ್ಲೆಯಲ್ಲಿ ಜನರು ಬಿಜೆಪಿಗೆ ತಕ್ಕಪಾಠ ಕಲಿಸುತ್ತಾರೆ. ವಿಜಯನಗರ ಜಿಲ್ಲೆ ಬೇಡ ಬೇಡ ಅಂತ ಎಷ್ಟು ಬಾರಿ ಸಿಎಂ ಬಿಎಸ್‍ವೈ ಅವರಿಗೆ ಹೇಳಬೇಕು. ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ತೆಗೆದುಕೊಂಡು ಹೋಗಿ ಹೇಳಿದ್ದೇವೆ. ಇನ್ನೆಷ್ಟು ಬಾರಿ ಹೇಳಬೇಕು. ಡಿವೈಡ್ ಆಗಲೇಬೇಕು ಎಂದು ಡಿಸೈಡ್ ಆದರೆ ನಾವೇನು ಮಾಡಬೇಕು. ರಾಜ್ಯ ಸರ್ಕಾರ ಮೊಂಡುತನಕ್ಕೆ ಬಿದ್ರೆ ನಾವೇನು ಮಾಡಬೇಕು. ನಾನಂತೂ ಇನ್ನೊಂದು ಬಾರಿ ಸಿಎಂಗೆ ಹೇಳಲ್ಲ. ಯಾರಾದರೂ ಈ ಬಗ್ಗೆ ಹೋರಾಟ ಮಾಡಿದರೆ ಅವರಿಗೆ ನಾನು ಬೆಂಬಲ ಕೊಡುತ್ತೇನೆ ಎಂದರು.

    ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿದರೆ ಜನರೇ ಬಿಜೆಪಿ ತಕ್ಕ ಪಾಠ ಕಲಿಸುತ್ತಾರೆ. ಜನರು ಈ ಬಗ್ಗೆ ಹೋರಾಟ ಮಾಡುತ್ತಾರೆ. ನನಗೆ ಪಕ್ಷ ಮುಖ್ಯ ಅಲ್ಲ, ನನಗೆ ಜನರೇ ಮುಖ್ಯ. ಜನರು ಹೋರಾಟ ಮಾಡಿದರೆ ನಾನೂ ಜನರ ಪರವಾಗಿ ಹೋರಾಟಕ್ಕೆ ಇಳಿಯುವೆ ಎಂದು ತಿಳಿಸಿದರು. ಇದನ್ನೂ ಓದಿ: ವಿಜಯನಗರ ಪ್ರತ್ಯೇಕ ಜಿಲ್ಲೆ ನಿರ್ಧಾರ ಸ್ವಾಗತಾರ್ಹ: ಆನಂದ್ ಸಿಂಗ್