Tag: Somashekara Reddy

  • ವಿಜಯನಗರ ಪ್ರತ್ಯೇಕ ಜಿಲ್ಲೆ ವಿಚಾರ- ಹೊಸ ಸುಳಿವು ನೀಡಿದ ಆನಂದ್ ಸಿಂಗ್

    ವಿಜಯನಗರ ಪ್ರತ್ಯೇಕ ಜಿಲ್ಲೆ ವಿಚಾರ- ಹೊಸ ಸುಳಿವು ನೀಡಿದ ಆನಂದ್ ಸಿಂಗ್

    ಬಳ್ಳಾರಿ: ವಿಜಯನಗರ ಪ್ರತ್ಯೇಕ ಜಿಲ್ಲೆ ಘೋಷಣೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೊಸ ಸುಳಿವು ನೀಡಿದ್ದಾರೆ.

    ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿಂದು ನಡೆದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದಿನ ನಾವೆಲ್ಲರೂ ಅಣ್ಣ, ತಮ್ಮಂದಿರಂತೆ ಒಟ್ಟಿಗೆ ಇದ್ದೇವೆ ಎಂದರು.

    ನಮ್ಮಣ್ಣ ಇಲ್ಲೇ ಇದ್ದಾರೆ. ಅಣ್ಣ ಹೇಳಿದಂತೆ ನಾನು ಕೇಳುತ್ತೇನೆ. ಅವರ ಆಶೀರ್ವಾದ ಸದಾ ನಮ್ಮ ಮೇಲಿದೆ. ಅವರು ಈಗಾಗಲೇ ಭರವಸೆ ನೀಡಿದ್ದಾರೆ ಎಂದು ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರಿಗೆ ಕೈಮುಗಿದು ನಗು ಬೀರಿದರು. ಆ ಮೂಲಕ ಪರೋಕ್ಷವಾಗಿ ಸೋಮಶೇಖರ್ ರೆಡ್ಡಿ ಅವರು ಸಹ ಜಿಲ್ಲೆ ಪ್ರತ್ಯೇಕ ಮಾಡುವ ಕುರಿತು ಒಪ್ಪಿಗೆ ನೀಡಿದ್ದಾರೆ ಎಂದು ಸುಳಿವು ನೀಡಿದರು.

    ಡ್ರಗ್ಸ್ ಮಾಫಿಯಾದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಮಾಹಿತಿ ಬಂದಿದೆ. ಆದ್ದರಿಂದ ರಾಜ್ಯದ 13 ವಲಯಗಳಿಗೂ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದಿರುವುದು ಕಂಡು ಬಂದರೇ ಕಠಿಣ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದೇವೆ. ಆದರೆ ಇದುವರೆಗೂ ಅಂತಹ ಯಾವುದೇ ವರದಿಗಳು ನನ್ನ ಗಮನಕ್ಕೆ ಬಂದಿಲ್ಲ ಎಂದರು.

    ಸಿಎಂ ದೆಹಲಿ ಪ್ರವಾಸ ಕುರಿತು ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟದ ವಿಸ್ತರಣೆ ಸಲುವಾಗಿಯೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೆಹಲಿ ಭೇಟಿ ನೀಡುತ್ತಿಲ್ಲ. ರಾಜ್ಯದಲ್ಲಿ ಉಂಟಾಗಿದ್ದ ಪ್ರವಾಹ ಹಾಗೂ ಕೆಲ ಯೋಜನೆಗಳ ಬಗ್ಗೆ ಪ್ರಧಾನಿಗಳು ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡುತ್ತಾರೆ. ನೆರೆಹಾವಳಿ ಪರಿಹಾರಕ್ಕಾಗಿ ಮನವಿ ಮಾಡುತ್ತಾರೆ ಎಂದರು. ಅಲ್ಲದೇ ರಾಜ್ಯ ಸಚಿವ ಸಂಪುಟದ ವಿಸ್ತರಣೆ ವಿಚಾರವಾಗಿ ಸಿಎಂ ಬಿಎಸ್‍ವೈ ದೆಹಲಿಯ ಭೇಟಿ ವೇಳೆ ಚರ್ಚೆ ಮಾಡಲಿ ಬಿಡಿ ಎಂದರು.

  • ಸಾಯೋವಾಗ ಒಂದು ಕಿವಿಯಲ್ಲಿ ಗಂಧದ ಗುಡಿ ಹಾಡು ಕೇಳಿಸಬೇಕು: ಸೋಮಶೇಖರ್ ರೆಡ್ಡಿ

    ಸಾಯೋವಾಗ ಒಂದು ಕಿವಿಯಲ್ಲಿ ಗಂಧದ ಗುಡಿ ಹಾಡು ಕೇಳಿಸಬೇಕು: ಸೋಮಶೇಖರ್ ರೆಡ್ಡಿ

    ಬಳ್ಳಾರಿ: ನಾನು ಸಾಯುವಾಗ ಒಂದು ಕಿವಿಯಲ್ಲಿ ವರನಟ ಡಾ.ರಾಜಕುಮಾರ್ ಅಭಿನಯದ ಗಂಧದಗುಡಿ ಹಾಡು ಕೇಳಿಸಬೇಕು. ಇನ್ನೊಂದು ಕಿವಿಯಲ್ಲಿ ಹನುಮಾನ್ ಚಾಲೀಸಾ ಕೇಳಿಸಬೇಕು ಎಂದು ಈಗಾಗಲೇ ನನ್ನ ಮಗನಿಗೆ ಹೇಳಿರುವುದಾಗಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೆಡ್ಡಿಗಳು ಎಂದರೇ ನಾವು ಪಕ್ಕದ ಆಂಧ್ರ ಪ್ರದೇಶದವರು ಎಂದು ಕೆಲವರು ಹೇಳುತ್ತಾರೆ. ಆದರೆ ನಾನು ಅಪಟ್ಟ ಕನ್ನಡಿಗ. ನಾನು ಇದೇ ನೆಲದಲ್ಲಿ ಹುಟ್ಟಿದವ. ನಾನು ಈ ನಾಡು ನುಡಿಯನ್ನು ಪ್ರೀತಿಸುವೆ ಎಂದಿದ್ದಾರೆ.

    ನಮ್ಮ ತಂದೆ ಪೊಲೀಸ್ ಕೆಲಸದಲ್ಲಿ ಇದ್ದರು. ಆಗ ನಾವು ಬಳ್ಳಾರಿಗೆ ಬಂದೇವೂ. ನಮ್ಮ ತಂದೆ ನಿವೃತ್ತಿ ಬಳಿಕ ನಮ್ಮ ತಂದೆ ಆಂಧ್ರಪ್ರದೇಶದಕ್ಕೆ ಹೋಗೋಣ ಎಂದರು. ಆದರೆ ನಮ್ಮ ತಾಯಿಯವರು ಬಳ್ಳಾರಿಯಲ್ಲಿಯೇ ನಾವು ಇರಬೇಕು ಎಂದು ಹಟ ಹಿಡಿದರು. ಆದ್ದರಿಂದ ನಾವು ಬಳ್ಳಾರಿಯಲ್ಲಿ ಉಳಿದೆವು. ನಾವು ಆಂಧ್ರ ಪ್ರದೇಶದವರಲ್ಲಾ, ಅಪ್ಪಟ ಕನ್ನಡಿಗ. ನಾನು 10 ವರ್ಷ ಆಂಧ್ರಪ್ರದೇಶದಲ್ಲಿದ್ದ ಸಂದರ್ಭದಲ್ಲಿ ಮೊದಲು ನೋಡಿದ ಸಿನಿಮಾ ಗಂಧದ ಗುಡಿ. ನಾನು ಎಲ್ಲೇ ಹೋದರೂ 2-3 ದಿನಗಳಲ್ಲಿ ವಾಪಸ್ ಬಳ್ಳಾರಿಗೆ ಹೋಗೋಣ ಎನಿಸುತ್ತದೆ ಎಂದರು ತಿಳಿಸಿದರು.

    ಕೆಲವರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಆದರೆ ಈ ಬಗ್ಗೆ ನೀವು ತಲೆ ಕೆಡಿಸಿಕೊಳ್ಳ ಬೇಡಿ. ನಾವು ಆಂಧ್ರ ರೆಡ್ಡಿಗಳು ಅಲ್ಲ, ಕರ್ನಾಟಕದ ರೆಡ್ಡಿಗಳು. ನಮ್ಮ ಗಡಿ ಜಿಲ್ಲೆ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ತಂಟೆ ತೆಗೆಯುತ್ತಿದೆ. ಅವರಿಗೆ ನಾವು ತಕ್ಕ ಪಾಠ ಕಲಿಸಬೇಕು. ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಬಿಟ್ಟು ಕೊಡುವ ಮಾತೇ ಇಲ್ಲ. ಈ ಬಗ್ಗೆ ಹೋರಾಟಕ್ಕೂ ನಾನು ಸಿದ್ಧ ಎಂದು ತಿಳಿಸಿದರು.

  • ಪಾಕ್ ಗಡಿಯಲ್ಲಿ ಜಮೀರ್ ಗಂಡಸ್ತನ ತೋರಿಸಲಿ: ಯತ್ನಾಳ್

    ಪಾಕ್ ಗಡಿಯಲ್ಲಿ ಜಮೀರ್ ಗಂಡಸ್ತನ ತೋರಿಸಲಿ: ಯತ್ನಾಳ್

    ವಿಜಯಪುರ: ಶಾಸಕ ಸೋಮಶೇಖರ ರೆಡ್ಡಿ ನಿವಾಸ ಎದುರು ಧರಣಿ ನಡೆಸಲು ಮುಂದಾಗಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಅವರಿಗೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಟಾಂಗ್ ನೀಡಿದ್ದು, ಜಮೀರ್ ಪಾಕಿಸ್ತಾನದ ಗಡಿಯಲ್ಲಿ ತಮ್ಮ ಗಂಡಸ್ತನ ತೋರಿಸಲಿ ಎಂದು ಕಿಡಿಕಾರಿದ್ದಾರೆ.

    ಇಂದು ಐತಿಹಾಸಿಕ ಸಿದ್ದೇಶ್ವರ ಜಾತ್ರೆಗೆ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಚಾಲನೆ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಜಮೀರ್ ಅವರಿಗೆ ತಾಕತ್ತು ಇದ್ರೆ ಪಾಕಿಸ್ತಾನದ ಗಡಿಯಲ್ಲಿ ತಮ್ಮ ಗಂಡಸ್ತನ ತೋರಿಸಲಿ. ಬಳ್ಳಾರಿಗೆ ಬರುವ ಮೂಲಕ ಷಂಡನಂತೆ ಜಮೀರ್ ಮಾಡ್ತಿದ್ದಾರೆ ಎಂದರು. ಇದನ್ನು ಓದಿ: ಧರಣಿ ಮಾಡಿದಾಕ್ಷಣ ದೊಡ್ಡ ನಾಯಕನಾಗುತ್ತೀಯಾ?- ಜಮೀರ್‌ಗೆ ಸಚಿವ ಶ್ರೀರಾಮುಲು ತಿರುಗೇಟು

    ಜಮೀರ್ ಬಳ್ಳಾರಿಗೆ ಆಗಮಿಸುವ ಮುನ್ನ ಮೊದಲು ಸಿಎಂ ಯಡಿಯೂರಪ್ಪ ಅವರ ನಿವಾಸ ಎದುರು ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸಲಿ. ಮೊದಲು ಜಮೀರ್ ದೇಶದ ವಿರುದ್ಧ ಪ್ರಚೋಚದನಕಾರಿ ಹೇಳಿಕೆ ನೀಡಿ ಮಾತನಾಡಿದ್ದಾರೆ. ಆದ್ದರಿಂದ ಮೊದಲು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜಮೀರ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

  • ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕಾಂಗ್ರೆಸ್ ದೂರು

    ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕಾಂಗ್ರೆಸ್ ದೂರು

    ಚಿಕ್ಕಬಳ್ಳಾಪುರ: ಕೋಮು ಸಾಮರಸ್ಯ ಕದಡುವಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಶಾಸಕ ಸೋಮಶೇಖರ್ ರೆಡ್ಡಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

    ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದು. ಎನ್.ಆರ್.ಸಿ ಹಾಗೂ ಸಿಎಎ ವಿರುದ್ಧದ ಹೋರಾಟ ಧರ್ಮಾತೀತವಾಗಿದ್ದರೂ, ಮುಸ್ಲಿಂ ಜನಾಂಗವನ್ನು ಗುರಿಯಾಗಿಸಿ ಸೋಮಶೇಖರ್ ರೆಡ್ಡಿ ಮಾತನಾಡಿದ್ದಾರೆ. ಇದು ಬಿಜೆಪಿಯ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

    ಶಾಸಕ ಸೋಮಶೇಖರ್ ರೆಡ್ಡಿ ಅವರು ಕೋಮು ಸಾಮರಸ್ಯ ಕದಡುವಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದು ಸಂವಿಧಾನ ಬಾಹಿರ, ಕಾನೂನು ಬಾಹಿರ ಕೃತ್ಯ. ಪೊಲೀಸರು ಈಗಾಗಲೇ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕಿತ್ತು. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ಸೋಮಶೇಖರ ರೆಡ್ಡಿ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ದೂರು ಸಲ್ಲಿಸಲಾಗಿದೆ.

    ಇತ್ತ ತಮ್ಮ ಹೇಳಿಕೆ ಕುರಿತು ಟೀಕೆ ವ್ಯಕ್ತವಾಗುತ್ತಿದ್ದರೂ ಕೂಡ, ತಮ್ಮ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ನನ್ನ ಮಾತಿಗೆ ನಾನು ಈಗಲೂ ಬದ್ಧ. ದೇಶದ ಆಸ್ತಿಯನ್ನು ನಷ್ಟ ಮಾಡುತ್ತಿರುವ ಬಗ್ಗೆ ನಾನು ಮಾತನಾಡಿದ್ದೇನೆ ಅಷ್ಟೇ. ಯಾರೋ ಹೇಳಿದ ಮಾತು ಕೇಳಿ ಪ್ರತಿಭಟನೆ ನಡೆಸದಂತೆ ಹೇಳಿದ್ದೆ. ಎಲ್ಲರೂ ಪಟ್ಟಿಗೆ ಇರೋಣ, ಪ್ರತಿಭಟನೆ ಮಾತ್ರ ನಾನು ವಿರೋಧ ಮಾಡುತ್ತೇನೆ. ಅದರಲ್ಲೂ ಶಾಂತಿಯಿಂದ ಪ್ರತಿಭಟನೆ ನಡೆಸುವವರ ಪರ ನಾನು ಇದ್ದೇನೆ ಎಂದರು.

  • ಜನಾರ್ದನ ರೆಡ್ಡಿ ಸಲೈಂಟಾಗಿದ್ದಾರೆ, ಅವರನ್ನು ವೈಲೆಂಟ್ ಮಾಡ್ಬೇಡಿ: ಹೆಚ್‍ಡಿಕೆಗೆ ಸೋಮಶೇಖರರೆಡ್ಡಿ ಎಚ್ಚರಿಕೆ!

    ಜನಾರ್ದನ ರೆಡ್ಡಿ ಸಲೈಂಟಾಗಿದ್ದಾರೆ, ಅವರನ್ನು ವೈಲೆಂಟ್ ಮಾಡ್ಬೇಡಿ: ಹೆಚ್‍ಡಿಕೆಗೆ ಸೋಮಶೇಖರರೆಡ್ಡಿ ಎಚ್ಚರಿಕೆ!

    ಬಳ್ಳಾರಿ: ಮಾಜಿ ಸಚಿವ ಜನಾರ್ದನರೆಡ್ಡಿ ಸಲೈಂಟ್ ಆಗಿದ್ದಾರೆ, ಅವರನ್ನು ವೈಲೆಂಟ್ ಮಾಡಬೇಡಿ. ಜನಾರ್ದನರೆಡ್ಡಿಯನ್ನು ಕೆಣಕಿದ್ರೆ ಸರಿ ಇರಲ್ಲ ಎಂದು ಮಾಜಿ ಶಾಸಕ ಸೋಮಶೇಖರರೆಡ್ಡಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

    ಜನಾರ್ದನ ರೆಡ್ಡಿ ಮೇಲಿನ ಕೇಸ್ ಹಿಂಪಡೆಯಲು ಬಿಜೆಪಿಗೆ 500 ಕೋಟಿ ರೂ. ಹಣ ನೀಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಈ ಸಂಬಂಧ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಪ್ರತಿಕ್ರಿಯಿಸಿ, ಮಾಜಿ ಸಿಎಂ ಕುಮಾರಸ್ವಾಮಿ ಸುಳ್ಳು ಆರೋಪ ಮಾಡಬಾರದು. ಕುಮಾರಸ್ವಾಮಿ ಹೇಳಿಕೆ ಸಣ್ಣತನದಿಂದ ಕೂಡಿದೆ ಎಂದು ಹೇಳಿದ್ರು.

    ಕೊನೆಗೆ ಕುಮಾರಸ್ವಾಮಿಗೆ ಕೈ ಮುಗಿದು ಕೇಳುವೆ. ಜನಾರ್ದನರೆಡ್ಡಿ ಅವರು ತುಂಬಾನೇ ಸೈಲೆಂಟ್ ಆಗಿದ್ದಾರೆ. ನಾವು ಕುಟುಂಬಸ್ಥರೆಲ್ಲರೂ ಸಂತೋಷವಾಗಿದ್ದೇವೆ. ಕುಮಾರಸ್ವಾಮಿ ಅವರು ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಬೇಕು. ನಾನು ಅವರನ್ನು ಕೈ ಮಗಿದು ಕೇಳುತ್ತೇನೆ ಅಂತ ಸೋಮಶೇಖರರೆಡ್ಡಿ ಹೇಳಿದ್ರು.

    ಇದನ್ನೂ ಓದಿ: ಬಿಜೆಪಿ ಎಲೆಕ್ಷನ್‍ಗೆ ಜನಾರ್ದನ ರೆಡ್ಡಿಯಿಂದ 500 ಕೋಟಿ ಹಣ:ಎಚ್‍ಡಿಕೆ ಬಾಂಬ್