Tag: Somashekar Reddy

  • ಮುಂದುವರಿದ ರೆಡ್ಡಿ ಸಹೋದರರ ಮುನಿಸು – ಸಹೋದರನ ಪುತ್ರನ ಮದುವೆಗೆ ಜನಾರ್ದನ ರೆಡ್ಡಿ ಗೈರು

    ಮುಂದುವರಿದ ರೆಡ್ಡಿ ಸಹೋದರರ ಮುನಿಸು – ಸಹೋದರನ ಪುತ್ರನ ಮದುವೆಗೆ ಜನಾರ್ದನ ರೆಡ್ಡಿ ಗೈರು

    ಬಳ್ಳಾರಿ: ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಹಾಗೂ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ (Somashekara Reddy) ಮುನಿಸು ಇನ್ನೂ ಶಮನವಾಗಿಲ್ಲ.‌ ಒಂದು ಕುಟುಂಬದಲ್ಲಿ ಹುಟ್ಟಿ ಬೆಳದ ಇಬ್ಬರು ಸಹೋದರರು ರಾಜಕೀಯ ವೈರತ್ವ, ಕುಟುಂಬದ ಮದುವೆಯಲ್ಲೂ ಮುಂದುವರಿದಿದೆ.‌

    ನಿನ್ನೆ ಮಾಝ ಶಾಸಕ ಸೋಮಶೇಖರ್ ರೆಡ್ಡಿ ಅವರ ಹಿರಿಯ ಮಗ ಸಂದೀಪ್ ರೆಡ್ಡಿ ಉದ್ಯಮಿ ಸುಧಾಕರ ರೆಡ್ಡಿ ಮಗಳು ದಿವ್ಯ ಜೊತೆಗೆ ಅದ್ದೂರಿಯಾಗಿ ಮದುವೆ ಸಮಾರಂಭ ನಡೆದಿದೆ.‌ ಆಂಧ್ರದ ನೆಲ್ಲೂರಿನಲ್ಲಿ ಅದ್ದೂರಿಯಾಗಿ ನಡೆದಿದೆ.‌ ಇದನ್ನೂ ಓದಿ: ಕರ್ನಾಟಕದ ಹಿಂದೂಗಳು ಒಂದಾಗಬೇಕು: ಯತ್ನಾಳ್

    ಈ ಒಂದು ಮದುವೆ ಸಮಾರಂಭಕ್ಕೆ ರಾಜಕಾರಣಿಗಳು ಪಕ್ಷ ಭೇದ ಮರೆತು ಭಾಗಿಯಾಗಿದ್ದರು. ಆದರೆ ಜನಾರ್ದನ ರೆಡ್ಡಿ ಕುಟುಂಬ ಮಾತ್ರ ಮದುವೆ ಸಮಾರಂಭದಿಂದ ದೂರ ಉಳಿದಿದೆ. ಇನ್ನು ಹೊಸ ಪಕ್ಷ ಕಟ್ಟಿದ ಜನಾರ್ದನ ರೆಡ್ಡಿ ಸ್ವಂತ ಅಣ್ಣನ ವಿರುದ್ಧವೇ ಪತ್ನಿಯನ್ನು ಕಣಕ್ಕಿಳಿಸಿದ್ದರು.

    ಸೋಮಶೇಖರ್ ರೆಡ್ಡಿ ಸೋಲಿಗೆ ಪರೋಕ್ಷವಾಗಿ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಕಾರಣರಾಗಿದ್ದರು. ಜನಾರ್ದನ ರೆಡ್ಡಿ ಪಕ್ಷ ಕಟ್ಟಿದಾಗಿನಿಂದಲೂ ಸಹೋದರರ ಮಧ್ಯೆ ಭಿನ್ನಾಭಿಪ್ರಾಯ ಜೋರಾಗಿಯೇ ಇತ್ತು. ಇದೀಗ ಸೋಮಶೇಖರ್ ರೆಡ್ಡಿ ಮಗನ ಮದುವೆಗೆ ಜನಾರ್ದನ ರೆಡ್ಡಿ ಕುಟುಂಬ ಗೈರಾಗಿದೆ. ರಾಜಕೀಯ ವೈರತ್ವದ ಜೊತೆಗೆ ವೈಯಕ್ತಿಕ ಸಂಬಂಧದಿಂದಲೂ ರೆಡ್ಡಿ ಸಹೋದರರು ದೂರ ಉಳಿದಿದ್ದಾರೆ. ಇದನ್ನೂ ಓದಿ: Bengaluru Kambala: ಬೆಂಗ್ಳೂರಲ್ಲಿ ಕಂಬಳಕ್ಕೆ ಅದ್ಧೂರಿ ಚಾಲನೆ

    ಹೊಸದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿದ್ದ ಜನಾರ್ದನ ರೆಡ್ಡಿ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ಅಣ್ಣನ ವಿರುದ್ಧವೇ ಪತ್ನಿಯನ್ನು ಕಣಕ್ಕಿಳಿಸಿದ್ದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾ ಭಾರತ್ ರೆಡ್ಡಿ ಗೆಲುವು ಸಾಧಿಸಿದ್ದರು.

  • ನಾನು ಮನಸ್ಸು ಮಾಡಿದ್ರೆ ಇವತ್ತು ಒಂದು ದಿನ ಆದ್ರು ಸಿಎಂ ಆಗುವೆ: ಜನಾರ್ದನ ರೆಡ್ಡಿ ಹೊಸ ಬಾಂಬ್

    ನಾನು ಮನಸ್ಸು ಮಾಡಿದ್ರೆ ಇವತ್ತು ಒಂದು ದಿನ ಆದ್ರು ಸಿಎಂ ಆಗುವೆ: ಜನಾರ್ದನ ರೆಡ್ಡಿ ಹೊಸ ಬಾಂಬ್

    ಬಳ್ಳಾರಿ: ನಾನು ಮನಸ್ಸು ಮಾಡಿದ್ರೆ ಇವತ್ತು ಒಂದು ದಿನ ಆದ್ರು ಸಿಎಂ ಆಗುವೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಶಾಸಕ ಸೋಮಶೇಖರ್ ರೆಡ್ಡಿ ಹುಟ್ಟುಹಬ್ಬದ ಸಮಾರಂಭದಲ್ಲಿ ಮನಬಿಚ್ಚಿ ಮಾತನಾಡಿದ ಅವರು, ರೆಡ್ಡಿ, ರಾಮುಲು ಸಹೋದರರಿಗೆ ಇಂದು ದುಡ್ಡಿನ ಅವಶ್ಯಕತೆ ಇಲ್ಲ. ನನಗೆ ಶಾಸಕ ಆಗಬೇಕು. ಮಂತ್ರಿ ಆಗಬೇಕು ಅಂತಾ ಆಸೆಯಿಲ್ಲ. ನಾನು ಮನಸ್ಸು ಮಾಡಿದ್ರೆ ಇವತ್ತು ಒಂದು ದಿನ ಆದ್ರು ಸಿಎಂ ಆಗುವೆ ಎಂದು ಶಾಂಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

    ಲೋಕಸಭಾ ಕ್ಷೇತ್ರದ ಕೊನೆಯ ಸದಸ್ಯರಾಗಿ ಕರುಣಾಕರ ರೆಡ್ಡಿ ಕೆಲಸ ಮಾಡಿದ್ದಾರೆ. ಸೋಮಶೇಖರ್ ರೆಡ್ಡಿ ಬಳ್ಳಾರಿ ನಗರಸಭೆ ಅಧ್ಯಕ್ಷರಿಂದ ಇದೀಗ ಶಾಸಕರಾಗಿ ಕೆಲಸ ಮಾಡ್ತಿದ್ದಾರೆ. ನನಗಂತೂ ಯಾರಿಗೂ ಕೊಡಲಾರದಷ್ಟು ಕಷ್ಟ ಕೊಟ್ಟಿದ್ದಾರೆ. ಇಷ್ಟಾದ್ರೂ ನಾನಿಂದು ನಿಮ್ಮ ಮುಂದೆ ಬಂದು ನಿಲ್ಲಲು ಬಳ್ಳಾರಿ ಕನಕದುರ್ಗಮ್ಮ ದೇವಿ ವಿಶೇಷ ಆಶೀರ್ವಾದ ನೀಡಿದ್ದಾಳೆ ಎಂದು ದೇವರನ್ನು ನೆನೆದಿದ್ದಾರೆ. ಇದನ್ನೂ ಓದಿ: ನಾನ್ ವೆಜ್ ಪ್ರಿಯರು ಮರೆಯಲಾಗದ ಹೊಸ ರುಚಿ ‘ಸಿಗಡಿ ಪಲ್ಯ’ – ಟ್ರೈ ಮಾಡಿ

    ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟೊಂದು ಸಮಸ್ಯೆ ಎದುರಿಸಲಾಗುತ್ತಿರಲಿಲ್ಲ. ಅಷ್ಟು ತೊಂದರೆ ನನಗೆ ನೀಡಿದ್ದಾರೆ. ರೆಡ್ಡಿಯವರೇ ನಿಮಗೆ ತೊಂದರೆ ಮಾಡಬೇಕೆಂದು ಮೇಲಿನವರ ಆದೇಶ ಇದೆ ಎಂದು ಸಿಬಿಐನವರೇ ನನಗೆ ಹೇಳಿದ್ರು. ಆದರೆ ಬಳ್ಳಾರಿಯ ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಸಿಬಿಐನವರು ಹೇಳಿದ್ದರು ಎಂದು ತಿಳಿಸಿದ್ದಾರೆ.

    Live Tv

  • ಹಂಪಿ ಉತ್ಸವಕ್ಕೆ ಸರ್ಕಾರದ ಬಳಿ ದುಡ್ಡು ಇಲ್ಲದಿದ್ದರೆ ಭಿಕ್ಷೆ ಬೇಡಿಯಾದ್ರೂ ಹಣ ಹೊಂದಿಸಿಕೊಡುತ್ತೇವೆ- ಸೋಮಶೇಖರ್ ರೆಡ್ಡಿ

    ಹಂಪಿ ಉತ್ಸವಕ್ಕೆ ಸರ್ಕಾರದ ಬಳಿ ದುಡ್ಡು ಇಲ್ಲದಿದ್ದರೆ ಭಿಕ್ಷೆ ಬೇಡಿಯಾದ್ರೂ ಹಣ ಹೊಂದಿಸಿಕೊಡುತ್ತೇವೆ- ಸೋಮಶೇಖರ್ ರೆಡ್ಡಿ

    ಬಳ್ಳಾರಿ: ಹಂಪಿ ಉತ್ಸವ ನಡೆಸಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನಾವೂ ಭಿಕ್ಷೆ ಬೇಡಿ ಹಣ ಹೊಂದಿಸಿಕೊಡುತ್ತೇವೆ ಎಂದು ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ದೋಸ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಹಂಪಿ ಉತ್ಸವ ನಡೆಸಲು ಮುಂದಾಗಬೇಕು. ಹಂಪಿ ಉತ್ಸವ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ಎಲ್ಲ ಸಂಘಟನೆಗಳ ಬೆಂಬಲಕ್ಕೆ ಬಿಜೆಪಿ ನಿಲ್ಲಲಿದೆ. ಹಂಪಿ ಒಂದು ಐತಿಹಾಸಿಕ ತಾಣ. ಹಂಪಿ ಉತ್ಸವ ನಮ್ಮ ನಾಡಿನ ಹೆಮ್ಮೆಯ ಪರಂಪರೆಯಾಗಿದೆ. ಹಂಪಿ ಉತ್ಸವಕ್ಕೆ ಒಂದು ಇತಿಹಾಸವಿದೆ ಅದನ್ನು ಎಲ್ಲರು ಗೌರವಿಸಬೇಕು ಎಂದು ಹೇಳಿದರು.

    ನಾಡಿನಲ್ಲಿ ಹಂಪಿ ಉತ್ಸವ ಪಾರಂಪರಿಕವಾಗಿ ನಡೆದು ಬಂದಿದೆ. ಈಗಿನ ಮೈತ್ರಿ ಸರ್ಕಾರ ನಾಡಿನ ಪರಂಪರೆ, ಸಂಪ್ರದಾಯಗಳನ್ನು ಹಾಳು ಮಾಡಬಾರದು. ರಾಜ್ಯದಲ್ಲಿ ಬರಗಾಲವಿದೆ ಎಂದು ಮೈತ್ರಿ ಸರ್ಕಾರ ಹಂಪಿ ಉತ್ಸವವನ್ನು ಮುಂದೂಡಲು ನಿರ್ಧರಿಸಿರುವುದು ನನ್ನ ಪ್ರಕಾರ ತಪ್ಪು. ಉತ್ಸವ ನಡೆಸಲು ಸರ್ಕಾರದ ಬಳಿ ಹಣವಿಲ್ಲದಿದ್ದರೇ ಭಿಕ್ಷೆ ಬೇಡಿಯಾದ್ರೂ ಹಣ ಹೊಂದಿಸಿಕೊಡುತ್ತೇವೆ. ಬೀದಿ ಬೀದಿಗೆ ನಾವೇ ಹೋಗಿ ಹಂಪಿ ಉತ್ಸವ ಮಾಡೋಕೆ ಸರ್ಕಾರದ ಹತ್ತಿರ ಹಣವಿಲ್ಲ ಎಂದು ಹೇಳಿ ಭಿಕ್ಷೆ ಕೇಳ್ತೀವಿ ಎಂದು ಸರ್ಕಾರ ವಿರುದ್ಧ ಸೋಮಶೇಖರ್ ರೆಡ್ಡಿ ವ್ಯಂಗ್ಯವಾಡಿದರು.

    ಹೇಗಾದರು ಸರಿ ಸರ್ಕಾರ ಹಂಪಿ ಉತ್ಸವನ್ನು ಎಂದಿನಂತೆ ವಿಜೃಂಭಣೆಯಿಂದ ಈ ವರ್ಷವು ಮಾಡಲೇಬೇಕು. ದೇಶ – ವಿದೇಶಗಳಿಂದ ಹಂಪಿ ಉತ್ಸವ ನೋಡಲು ಪ್ರವಾಸಿಗರು ಉತ್ಸಾಹದಿಂದ ಬರುತ್ತಾರೆ. ಅವರಿಗೆ ನಿರಾಸೆ ಮಾಡಬೇಡಿ, ಹಂಪಿ ಉತ್ಸವವನ್ನು ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನಾರ್ದನ ರೆಡ್ಡಿ ವೇದಿಕೆ ಏರಿದ್ರೆ ನಂಗೆ ವಾಟ್ಸಪ್ ಮಾಡಿ: ಮುರಳೀಧರ್ ರಾವ್

    ಜನಾರ್ದನ ರೆಡ್ಡಿ ವೇದಿಕೆ ಏರಿದ್ರೆ ನಂಗೆ ವಾಟ್ಸಪ್ ಮಾಡಿ: ಮುರಳೀಧರ್ ರಾವ್

    ಮಡಿಕೇರಿ: ಜನಾರ್ದನ ರೆಡ್ಡಿ ಬಿಜೆಪಿ ಲೀಡರ್ ಅಲ್ಲ. ಒಂದು ವೇಳೆ ಅವರು ವೇದಿಕೆ ಏರಿದರೆ ನನಗೆ ವಾಟ್ಸಪ್ ಮಾಡಿ ಎಂದು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನಾರ್ದನರೆಡ್ಡಿ ಬಿಜೆಪಿಯ ತಾರಾ ಪ್ರಚಾರಕರಲ್ಲ. ರೆಡ್ಡಿ ಕೋರ್ಟ್ ನಿಂದ ನಿರಾಪರಾಧಿ ಆಗೋವರೆಗೂ ಬಿಜೆಪಿಗೆ ಎಂಟ್ರಿಯಿಲ್ಲ. ಜನಾರ್ದನ ರೆಡ್ಡಿ ಬಿಜೆಪಿ ಪರ ಪ್ರಚಾರಕ್ಕೂ, ನಮಗೂ ಸಂಬಂಧವಿಲ್ಲ ಎಂದು ಅವರು ತಿಳಿಸಿದರು.

    ಶಾಸಕ ಸೋಮಶೇಖರ್ ರೆಡ್ಡಿ 20 ವರ್ಷಗಳಿಂದ ಪಕ್ಷದಲ್ಲಿದ್ದಾರೆ, ಶ್ರೀರಾಮುಲು, ಸೋಮಶೇಖರ್ ರೆಡ್ಡಿಯವರನ್ನ ಸಿದ್ದರಾಮಯ್ಯ ಅವಮಾನಿಸೋದು ಯಾಕೆ? ಜನಾರ್ದನ ರೆಡ್ಡಿಯಿಂದಾಗಿಯೇ ಇವರು ಯಾರು ನಾಯಕರಾದವರಲ್ಲ, ಬಿಜೆಪಿಯ ಯಾವುದೇ ವೇದಿಕೆಯನ್ನ ಜನಾರ್ದನ ರೆಡ್ಡಿ ಏರಲ್ಲ, ಒಂದು ವೇಳೆ ಅವರು ವೇದಿಕೆ ಏರಿದರೆ ನನಗೆ ವಾಟ್ಸಪ್ ಮಾಡಿ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುರುಳೀಧರ್ ರಾವ್ ಹೇಳಿದರು.

    ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರು. ಟಿಪ್ಪು ಯಾರು ಎನ್ನುವುದು ಕೊಡಗಿನವರಿಗೆ ಗೊತ್ತಿದೆ. ಅದರೂ ಟಿಪ್ಪು ಜಯಂತಿ ತಂದು ಅನೇಕ ಘಟನೆಗಳಿಗೆ ಕಾರಣವಾಗಿದ್ದಾರೆ ಎಂದು ದೂರಿದರು.

    ಮೋದಿ, ಅಮಿತ್ ಶಾ ಹೊರಗಿನನವರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಹಾಗಾದರೆ ರಾಹುಲ್ ಗಾಂಧಿ ಎಲ್ಲಿಂದ ಬಂದಿದ್ದಾರೆ? ದೇವಾಲಯ, ಮಠಗಳ ಸಂರಕ್ಷಣೆ, ಮಲೆನಾಡು-ಕರಾವಳಿ ಭಾಗದ ರಕ್ಷಣೆ ನಮ್ಮ ಪ್ರಮುಖ ಅಜೆಂಡಾ. ಎರಡು ದಿನಗಳಲ್ಲಿ ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಈ ಬಾರಿ ನಾವು 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಶಾ ಹೇಳಿಕೆಯಿಂದ ರೆಡ್ಡಿ ಪಾಳೆಯದಲ್ಲಿ ಗರಿಗೆದರಿದ ಚಟುವಟಿಕೆ

    ಶಾ ಹೇಳಿಕೆಯಿಂದ ರೆಡ್ಡಿ ಪಾಳೆಯದಲ್ಲಿ ಗರಿಗೆದರಿದ ಚಟುವಟಿಕೆ

    ಬೆಂಗಳೂರು: ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ ಬೆನ್ನಲ್ಲೇ ರೆಡ್ಡಿ ಪಾಳೆಯದಲ್ಲಿ ಚಟುವಟಿಕೆಗಳು ಹೆಚ್ಚಾಗಿದೆ. ನಾಳೆ ಶ್ರೀರಾಮುಲು ಜತೆ ಜನಾರ್ದನ ರೆಡ್ಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

    ಅಮಿತ್ ಶಾ ಹೇಳಿಕೆಯ ದಿನವೇ ಮುಂಬೈಗೆ ತೆರಳಿದ್ದ ಜನಾರ್ದನ ರೆಡ್ಡಿ ಸದ್ಯ ಮುಂಬೈ ಪ್ರವಾಸದಲ್ಲಿದ್ದಾರೆ. ಇವತ್ತು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕಾದುನೋಡುವ ತಂತ್ರಕ್ಕೆ ಮೊರೆ ಹೋಗಲು ಜನಾರ್ದನ ರೆಡ್ಡಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

     

    ಆಪ್ತ ಮಿತ್ರ ಶ್ರೀರಾಮುಲು, ಸಹೋದರ ಸೋಮಶೇಖರ ರೆಡ್ಡಿಯನ್ನ ಅಖಾಡಕ್ಕಿಳಿಸಲು ಜನಾರ್ದನ ರೆಡ್ಡಿ ಒಲವು ತೋರಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಶ್ರೀರಾಮುಲು, ಬಳ್ಳಾರಿ ನಗರದಿಂದ ಸೋಮಶೇಖರ ರೆಡ್ಡಿ ಸ್ಪರ್ಧೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

    ನಾಳೆ ಶ್ರೀರಾಮುಲು ಜೊತೆ ಮಹತ್ವದ ಮಾತುಕತೆ ನಡೆಸಲಿರುವ ಜನಾರ್ದನ ರೆಡ್ಡಿ ಅಮಿತ್ ಶಾ ಹೇಳಿಕೆಯ ಬಗ್ಗೆಯೂ ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

  • ಜನಾರ್ದನ ರೆಡ್ಡಿ ರಾಜಕೀಯ ಜೀವನ ಅಂತ್ಯವಾಯ್ತಾ?- ಅಮಿತ್ ಶಾ ಮಾತಿನ ಹಿಂದಿನ ಮರ್ಮವೇನು?

    ಜನಾರ್ದನ ರೆಡ್ಡಿ ರಾಜಕೀಯ ಜೀವನ ಅಂತ್ಯವಾಯ್ತಾ?- ಅಮಿತ್ ಶಾ ಮಾತಿನ ಹಿಂದಿನ ಮರ್ಮವೇನು?

    ಮೈಸೂರು: ರಾಜ್ಯ ರಾಜಕಾರಣಕ್ಕೆ ಕಮ್ ಬ್ಯಾಕ್ ಆಗೋ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಅತಿ ದೊಡ್ಡ ಶಾಕ್ ಆಗಿದೆ. ಜನಾರ್ದನರೆಡ್ಡಿಗೂ ಬಿಜೆಪಿಗೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ ಅಂತ ಸ್ಪಷ್ಟಪಡಿಸುವ ಮೂಲಕ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

    ರಾಜ್ಯ ಪ್ರವಾಸದಲ್ಲಿರುವ ಶಾ ಇಂದು ಮೈಸೂರಿನಲ್ಲಿ ನೀಡಿದ ಈ ಹೇಳಿಕೆಯಿಂದಾಗಿ, ರೆಡ್ಡಿ ಬೆಂಬಲಿಗರು ಆಘಾತಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಪರಮಾಪ್ತ ಹಾಗೂ ಶಾಸಕ ಶ್ರೀರಾಮುಲು ದಿಗ್ಭ್ರಾಂತರಾಗಿದ್ದಾರೆ ಅಂತಾ ಹೇಳಲಾಗಿದೆ.

    ಈ ಮೂಲಕ ಅಕ್ರಮ ಗಣಿಗಾರಿಕೆ ಪ್ರಕರಣದಿಂದಾಗಿ ಬಳ್ಳಾರಿಗೆ ಕಾಲಿಡಬಾರದೆಂದು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಮನೆ ಮಾಡಿಕೊಂಡು ಪಕ್ಷ ಬಲವರ್ಧನೆಗೆ ಮುಂದಾಗಿದ್ದ ರೆಡ್ಡಿ ಅವರ ಆಸೆಗೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ತಣ್ಣೀರು ಎರಚಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ, ಅಣ್ಣನಿಗೆ ಪಕ್ಷದ ಹಿರಿಯರಿಂದ ಮೌಖಿಕ ಸೂಚನೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಲಿದ್ದಾರೆ ಅಂತ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡಿದ್ದರು. ಆದ್ರೆ ಸೋಮಶೇಖರ್ ರೆಡ್ಡಿ ಹೇಳಿಕೆ ನೀಡುತ್ತಿದ್ದಂತೆಯೇ ಇತ್ತ ಅಮಿತ್ ಶಾ ಮಾತು ಬಳ್ಳಾರಿ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

  • ಹನುಮ ಜಯಂತಿಗೆ ಶೂ ಧರಿಸಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಪಾದಯಾತ್ರೆ

    ಹನುಮ ಜಯಂತಿಗೆ ಶೂ ಧರಿಸಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಪಾದಯಾತ್ರೆ

    ಬಳ್ಳಾರಿ: ಹನುಮ ಜಯಂತಿ ಆಚರಣೆಗೆ ಅವಕಾಶ ನೀಡಲಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪೊಲೀಸರ ವಿರುದ್ಧ ಸಿಟ್ಟಾಗಿದ್ದರೆ, ಜಿಲ್ಲೆಯ ಮಾಜಿ ಶಾಸಕರೊಬ್ಬರು ಶೂ ಧರಿಸಿ ಹನುಮ ಜಯಂತಿಯ ಪಾದಯಾತ್ರೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

    ಮಾಜಿ ಶಾಸಕ ಸೋಮಶೇಖರ ರೆಡ್ಡಿ ಹನುಮ ಜಯಂತಿಯಂದು ಮಾಲೆ ಧರಿಸಿ ಶೂ ಹಾಕಿಕೊಂಡು ಪಾದಯಾತ್ರೆ ಮಾಡಿದ್ದಾರೆ. ಹನುಮಂತನ ಭಕ್ತರಾದ ಮಾಜಿ ಶಾಸಕ ರೆಡ್ಡಿ ಪ್ರತಿ ವರ್ಷ ತಪ್ಪದೇ ಮಾಲೆ ಧರಿಸಿ ಹನುಮ ಜಯಂತಿ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಬಾರಿ ಬಳ್ಳಾರಿಯಿಂದ ಆಂಧ್ರದ ಗಡಿ ಭಾಗದಲ್ಲಿರುವ ಕಸಾಪುರ ಆಂಜನೇಯನ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ವೇಳೆ ಶೂ ಧರಿಸಿ ಯಾತ್ರೆ ಆರಂಭಿಸಿದ್ದಾರೆ.

    ಶೂ ಧರಿಸಿ ಪಾದಯಾತ್ರೆ ಮಾಡಿದರೆ ಹನುಮ ಜಯಂತಿಗೆ ಅಗೌರವ ಮಾಡಿದಂತೆ. ಇದರಿಂದ ಪ್ರಯೋಜನ ಏನು ಬಂತು ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ.

    ಈ ಕುರಿತು ರೆಡ್ಡಿ ಆಪ್ತರನ್ನು ಪ್ರಶ್ನೆ ಮಾಡಿದ್ರೆ, ಸಾಹೇಬರು 65 ಕಿಲೋ ಮೀಟರ್ ದೂರ ಪಾದಯಾತ್ರೆ ಮಾಡಬೇಕಾದ ಹಿನ್ನೆಲೆಯಲ್ಲಿ ನಾವೇ ಒತ್ತಾಯ ಮಾಡಿ ಶೂ ಹಾಕಿಕೊಳ್ಳುವಂತೆ ಸೂಚಿಸಿದೆವು. ಹೀಗಾಗಿ ಶೂ ಹಾಕಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.