Tag: Somanna

  • ‘ಈಶ್ವರ’ ಜಪ ಮಾಡಿದ ವಸತಿ ಸಚಿವ ವಿ.ಸೋಮಣ್ಣ

    ‘ಈಶ್ವರ’ ಜಪ ಮಾಡಿದ ವಸತಿ ಸಚಿವ ವಿ.ಸೋಮಣ್ಣ

    ಬೆಂಗಳೂರು: ಈಶ್ವರಪ್ಪಗೂ ಸೋಮಣ್ಣಗೂ ಒಂಥರಾ ನಂಟು ಅಂತೆ. ಆ ನಂಟಿನ ಗಂಟನ್ನ ಸೋಮಣ್ಣ ಬಿಡಿಸಿದರು. ವಿಕಾಸಸೌಧದ ಅವರ ಕೊಠಡಿಯಲ್ಲಿ ವಿ.ಸೋಮಣ್ಣ ಸುದ್ದಿಗೋಷ್ಠಿ ಕರೆದಿದ್ದರು. ಆಗ ನಮ್ ಕಡೆ ಬರೋದಿಲ್ಲ ನೀವು, ವಿಧಾನಸೌಧ ನೋಡ್ಕೊಂಡು ಹೋಗ್ತಿರಾ ಅಂತಾ ಮಾಧ್ಯಮದವರಿಗೆ ತಮಾಷೆ ಮಾಡಿದರು.

    ಆಗ ವಿಧಾನಸೌಧದಲ್ಲಿ ನೀವು ಇರಬೇಕಿತ್ತು ಅಂತಾ ಮಾಧ್ಯಮದವರು ಕಿಚಾಯಿಸಿದಾಗ ಈಶ್ವರಪ್ಪ ನಂಟನ್ನ ಬಿಡಿಸಿ ಹೇಳಿದರು. ಮೊದಲು ನನ್ಗೆ ಈಗ ಈಶ್ವರಪ್ಪ ಇರುವ ರೂಮ್ ಕೊಟ್ಟಿದ್ದರು. ನಾನು ಪೂಜೆ ಮಾಡೋದಕ್ಕೆ ಹೋಗುವ ಮುಂಚೆ ಈಶ್ವರಪ್ಪ ಹೋಗಿ ಪೂಜೆ ಮಾಡಿಬಿಟ್ಟಿದ್ದರು. ಅಯ್ಯೋ ನಮ್ ಸೋಮಣ್ಣ ಅಲ್ವಾ ಬಿಡ್ರೋ, ನಾನು ಹೇಳ್ಕೋತೀನಿ ಅಂತೇಳಿ ನನಗೆ ಕೊಟ್ಟಿದ ವಿಧಾನಸೌಧದ ಕೊಠಡಿಗೆ ಈಶ್ವರಪ್ಪ ಹೋದ್ರು ಅಂತಾ ನಕ್ಕಿದರು.

    ನಾನು ಹೋಗಲಿ ಬಿಡ್ರಪ್ಪಾ ಅವನು ಈಶ್ವರ ಇವನು ಈಶ್ವರ ಅಂತಾ ಸುಮ್ಮನಾಗಿ ವಿಕಾಸಸೌಧಕ್ಕೆ ಬಂದೆ ಅಂತ ಹೇಳಿದರು. ಸೋಮಣ್ಣ ಈಶ್ವರಪ್ಪ ನಂಟಿನ ಸ್ಟೋರಿ ಕೇಳಿದ ಮಾಧ್ಯಮ ಮಿತ್ರರು, ಅಧಿಕಾರಿಗಳು ಪಾಪ ಹಿಂಗಾಯ್ತಾ ಅಂತಾ ನಗೆಗಡಲಲ್ಲಿ ತೇಲಿದರು.

  • ತಹಶೀಲ್ದಾರ್ ಪ್ರಶ್ನೆಯಿಂದ ಕೆರಳಿದ ಸೋಮಣ್ಣ – ಅಧಿಕಾರಿಗಳಿಗೆ ಕ್ಲಾಸ್

    ತಹಶೀಲ್ದಾರ್ ಪ್ರಶ್ನೆಯಿಂದ ಕೆರಳಿದ ಸೋಮಣ್ಣ – ಅಧಿಕಾರಿಗಳಿಗೆ ಕ್ಲಾಸ್

    – ಎಲ್ಲ ಮನೆಗಳಿಗೂ ವಿದ್ಯುತ್ ಪೂರೈಕೆಯಾಗ್ಬೇಕು

    ಮೈಸೂರು: ಸಚಿವ ಸೋಮಣ್ಣ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅಭಿವೃದ್ಧಿ ಕುರಿತು ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ಮಾಡುತ್ತಿದ್ದರು. ಈ ವೇಳೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳಿಗೆ ಸೋಮಣ್ಣ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆದಿದೆ.

    ಕಾರಾಪುರ ಜಂಗಲ್ ಲಾಡ್ಜ್ ನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿತ್ತು. ಈ ವೇಳೆ ಸಭೆಗೆ ಸೋಮಣ್ಣ ಪ್ರತಿಯೊಂದು ಇಲಾಖೆಯಲ್ಲೂ ಸರಿಯಾಗಿ ಕೆಲಸ ನಡೆಯುತ್ತಿದೆಯಾ ಎಂದು ವಿಚಾರಿಸುತ್ತಿದ್ದರು. ಆಗ ತಹಶೀಲ್ದಾರ್, ಸಭೆಗೆ ನಾನು ಬರಬೇಕಾ ಎಂದು ಕೇಳಿದ್ದಾರೆ. ತಹಶೀಲ್ದಾರ್ ಪ್ರಶ್ನೆಯಿಂದ ಕೆರಳಿದ ಸೋಮಣ್ಣ ತಾಲೂಕು ತಹಶೀಲ್ದಾರ್ ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಏನ್ರಿ ತಾಲೂಕು ಅಭಿವೃದ್ಧಿ ಬಗ್ಗೆ ಸಭೆ ಕರೆದಿರುವುದು ಹುಡುಗಾಟಕ್ಕಾ. ಮೊದಲು ತಹಶೀಲ್ದಾರ್ ಪದವಿಯ ಅರ್ಥ ತಿಳಿದುಕೊಳ್ಳಿ. ಇದು ಕಾಟಾಚಾರಕ್ಕೆ ಮಾಡುತ್ತಿರುವ ಸಭೆಯಲ್ಲ. ಹಿಂದುಳಿದ ಕೋಟೆ ತಾಲೂಕಿಗೆ ಏನಾದರೂ ಮಾಡೋಣ ಎಂದು ಸಭೆ ಕರೆದರೆ ನಿಮಗೆ ಕಾಳಜಿ ಇಲ್ಲ ಅಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

    ಇದೆಲ್ಲ ನನ್ನ ಮುಂದೆ ನಡೆಯಲ್ಲ. ಎಲ್ಲ ಇಲಾಖೆಯಲ್ಲೂ ಯಾವುದೇ ತೊಂದರೆ ಇಲ್ಲದೆ ಸರಿಯಾಗಿ ಕೆಲಸ ನಡೆಯಬೇಕು. ರಸ್ತೆಗೆ ಉತ್ತಮವಾದ ಡಾಂಬರ್ ಹಾಕಿ. ಎಲ್ಲ ಮನೆಗಳಿಗೂ ಸರಿಯಾಗಿ ವಿದ್ಯುತ್ ಪೂರೈಕೆ ಆಗಬೇಕು. ಮನೆಗಳ ರಿಪೇರಿ ಇದ್ದರೆ ಕೂಡಲೇ ಮಾಡಿಸಿ. ಹಣ ಎಷ್ಟಾಗುತ್ತೋ ನಾನು ಕೊಡಿಸ್ತೀನಿ ಎಂದು ತಾಲೂಕು ಮಟ್ಟದ ಅಧಿಕಾರಿ ಸಮೂಹಕ್ಕೆ ಸೋಮಣ್ಣ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    https://www.youtube.com/watch?v=VMghqE-43e0

  • ರಾತ್ರೋ ರಾತ್ರಿ ಪಟ್ಟೆಗಾರ ಪಾಳ್ಯದ ದೇವಸ್ಥಾನ ಕೆಡವಿಸಿದ ಶಾಸಕ ವಿ.ಸೋಮಣ್ಣ

    ರಾತ್ರೋ ರಾತ್ರಿ ಪಟ್ಟೆಗಾರ ಪಾಳ್ಯದ ದೇವಸ್ಥಾನ ಕೆಡವಿಸಿದ ಶಾಸಕ ವಿ.ಸೋಮಣ್ಣ

    ಬೆಂಗಳೂರು: ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ವಿ. ಸೋಮಣ್ಣ ಸಂಬಂಧಿಕರ ಶಾಲೆಯ ಜಾಗವನ್ನು ರಕ್ಷಿಸಲು ಹೋಗಿ ರಾತ್ರೋ ರಾತ್ರಿ ದೇವಸ್ಥಾನ ಕೆಡವಿಸಿದ್ದಾರೆಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ.

    ನಗರದ ಪಟ್ಟೆಗಾರ ಪಾಳ್ಯದಲ್ಲಿರುವ ಕರಿ ಮಾರಿಯಮ್ಮ ದೇವಸ್ಥಾನವನ್ನು ಮಂಗಳವಾರ ತಡರಾತ್ರಿ ಶಾಸಕರ ಬೆಂಬಲಿಗರು ಕೆಡವಿ ಹೋಗಿದ್ದಾರೆ. ದೇವಸ್ಥಾನದ ಪಕ್ಕದಲ್ಲೇ ಇರುವ ಶಾಸಕ ಸೋಮಣ್ಣ ಸಂಬಂಧಿಕರ ಸೆಂಟ್ ಪೌಲ್ ಶಾಲೆಗೆ ದೇವಸ್ಥಾನದ ಜಾಗ ಬಿಟ್ಟುಕೊಡುವಂತೆ ಕಳೆದ ಒಂದು ತಿಂಗಳ ಹಿಂದೆ ತಮ್ಮ ವಿಧಾನಸೌಧದ ಕಚೇರಿಯಲ್ಲೇ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಕೂಡ ಹಾಕಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

    ಮಾಧ್ಯಮಗಳಲ್ಲಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಸೇಡಿನ ರಾಜಕಾರಣ ಮಾಡಿ ರಾತ್ರೋ ರಾತ್ರಿ ತಮ್ಮ ಬೆಂಬಲಿಗರಿಂದ ದೇವಸ್ಥಾನವನ್ನು ಕೆಡವಿ ಹಾಕಿಸಿದ್ದಾರೆಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ. ಅಲ್ಲದೇ ಶಾಸಕರ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಲ್ಟ್ ಬಿಚ್ಚಿ ಹೊಡಿತೀನಿ, ಏನ್ ಮಾಡ್ತೀನಿ ನೋಡು-ಮಹಿಳೆಗೆ ಶಾಸಕ ವಿ.ಸೋಮಣ್ಣ ಅವಾಜ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ನಾಯಕರ ವಿರುದ್ಧ ಮಾತೆ ಮಹಾದೇವಿ ವಾಗ್ದಾಳಿ

    ಬಿಜೆಪಿ ನಾಯಕರ ವಿರುದ್ಧ ಮಾತೆ ಮಹಾದೇವಿ ವಾಗ್ದಾಳಿ

    ಕಲಬುರಗಿ: ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸೋಮಣ್ಣ ಲಿಂಗದೀಕ್ಷೆ ಪಡೆದಿದ್ದಾರೆ. ಅವರಿಗೆ ಲಿಂಗಾಯತ ಸಂಪ್ರದಾಯ ಪ್ರಕಾರ ಶವಸಂಸ್ಕಾರ ಮಾಡಲಾಗುತ್ತದೆ. ಅವರಿಗೆ ಬಿಜೆಪಿಯಿಂದ ಶವ ಸಂಸ್ಕಾರ ಯಾರು ಮಾಡುವುದಿಲ್ಲ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

    ಕಲಬುರಗಿ ಬೃಹತ್ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿ, ಧರ್ಮಕ್ಕಾಗಿ ಹೋರಾಟ ಮಾಡಬೇಕು ಹೊರತು ಪಕ್ಷಕ್ಕಾಗಿ ಅಲ್ಲ. ಬಿಜೆಪಿಯವರು ಮೌನವಾಗಿದ್ದಾರೆ. ಹಾಗಾಗಿ ಅವರು ಕೂಡಾ ಈ ಹೋರಾಟಕ್ಕೆ ಬರಬೇಕು ಎಂದು ಹೇಳಿದರು.

    ಬಸವಣ್ಣನವರ ಅಂಕಿತನಾಮ ಬದಲಾಯಿಸಿದ್ದ ಬಸವದೀಪ್ತಿ ಪುಸ್ತಕ ಮರು ಮುದ್ರಣ ಮಾಡಲಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾತೆ ಮಹಾದೇವಿ ಅವರು ಮನವಿ ಮಾಡಿಕೊಂಡಿದ್ದಾರೆ.

    ದಲಿತರು ಕೂಡಾ ಎಲ್ಲಾ ಕಡೆ ಹೋರಾಟ ಮಾಡಲಿಕ್ಕೆ ನಮ್ಮ ಜೊತೆ ಸಿದ್ಧರಿದ್ದಾರೆ ಮತ್ತು ಮುಸ್ಲಿಮ್ ಧರ್ಮದವರು ಕೂಡಾ ನಮಗೆ ಸಹಕಾರವನ್ನು ನೀಡುತ್ತಿದ್ದಾರೆ ಹಾಗಾಗಿ ಈ ಹೋರಾಟಕ್ಕೆ ಎಲ್ಲರೂ ಭಾಗವಹಿಸಬೇಕು ಎಂದು ಹೇಳಿದರು.

    ಈ ವೇಳೆ ಸಮಾವೇಶದಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರು ಮಾತೆ ಮಹಾದೇವಿ ಅವರಲ್ಲಿ ಸುಪ್ರೀಂ ಕೋರ್ಟ ಆದೇಶ ಪಾಲನೆ ಮಾಡಿ, ಅದಕ್ಕೂ ಹೆಚ್ಚಾಗಿ ನಿಮ್ಮ ಭಕ್ತರ ಆದೇಶ ಪಾಲನೆ ಮಾಡಿ ಎಂದು ಮನವಿ ಮಾಡಿಕೊಂಡರು.