ಚಾಮರಾಜನಗರ: ದೇಶಾದ್ಯಂತ ಸಂಚಲನ ಮೂಡಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಎಲ್ಲ ರಾಜಕೀಯ ಮುಖಂಡರು ನೋಡುತ್ತಿದ್ದು, ಸಿನಿಮಾ ನೋಡಬೇಕೆಂದು ಜನರಿಗೆ, ನೌಕರರಿಗೆ ಉತ್ತೇಜನವನ್ನು ಕೊಡುತ್ತಿದ್ದಾರೆ. ಅಂತೆಯೇ ಇದೀಗ ಸಚಿವ ವಿ. ಸೋಮಣ್ಣ ಕೂಡ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಚ್ಚಿ ಹೋಗಿರುವ ಇತಿಹಾಸವನ್ನು ಜನರಿಗೆ ತಿಳಿಸಿಕೊಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅಂತಹ ಘಟನೆಗಳು ನಡೆಯಬಾರದು ಎಂಬ ದೃಷ್ಟಿಯಿಂದ ಈ ಚಿತ್ರ ತಯಾರಾಗಿದೆ. ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ
ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ನಾನೊಬ್ಬ ಎಲ್ ಬೋರ್ಡ್. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಪಠ್ಯ ಪುಸ್ತಕ ರಚನೆಗೆ ಸಮಿತಿಯಿದೆ. ಸಮಿತಿ ಅವರು ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ತಾರೆ. ಮುಂದಿನ ಪೀಳಿಗೆಗೆ ಏನು ತಿಳಿಸಬೇಕು ಎಂಬುದರ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ.
ವಂಶ ರಾಜಕಾರಣ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಪ್ರಧಾನಿ ಮೋದಿ ಒಳ್ಳೆಯ ಪರಿಕಲ್ಪನೆ ಜಾರಿಗೆ ತಂದಿದ್ದಾರೆ. ನನ್ನ ಮಗನಿಗೆ ಅದೃಷ್ಟ ಇದ್ರೆ ಶಾಸಕನಾಗುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಫ್ಯಾಮಿಲಿ ಪಾಲಿಟಿಕ್ಸ್‌ಗೆ ಬೀಳುತ್ತಾ ಬ್ರೇಕ್..?
ವಿಜಯಪುರ: ಪಾಪ ಸಂಸದ ಪ್ರಜ್ವಲ್ ರೇವಣ್ಣನಿಗೆ ಇನ್ನೂ ಮದುವೆನೇ ಆಗಿಲ್ಲ. ತಾತನಿಂದ ಪ್ರಜ್ವಲ್ ರೇವಣ್ಣ ಒಳ್ಳೆಯದನ್ನು ತಿಳಿದುಕೊಳ್ಳಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ಸಿಂದಗಿ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡುತ್ತಾ ಹೆಚ್.ಡಿ ಕುಮಾರಸ್ವಾಮಿ ದ್ವಿಪತ್ನಿತ್ವದ ಬಗ್ಗೆ ಬಿಜೆಪಿ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದ ಪ್ರಜ್ವಲ್ ರೇವಣ್ಣ, ಭಾರತೀಯ ಜನತಾ ಪಕ್ಷದವರು ಯಾರು ಯಾರ ಜೊತೆಗಿದ್ದರು. ಯಾರ ಜೊತೆಯಿದ್ದು ಎದ್ದು ಬಂದ್ರು ಅನ್ನೋದನ್ನು ಹೇಳ ಹೊರಟರೇ ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ವೈಯಕ್ತಿಕ ಟೀಕೆ ಬಿಟ್ಟು ಅಭಿವೃದ್ಧಿ ಕೆಲಸದ ಮೇಲೆ ಬಿಜೆಪಿ ಮತ ಕೇಳಲಿ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಬಿಜೆಪಿಯವರ ಬ್ರಹ್ಮಾಂಡಗಳನ್ನು ಹೇಳ ಹೊರಟರೆ ಸಮಯ ಹಿಡಿಯುತ್ತೆ: ಪ್ರಜ್ವಲ್ ರೇವಣ್ಣ
ಈ ವಿಚಾರವಾಗಿ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ ಅವರು, ಪಾಪ ಅವನ ಹತ್ತಿರ ಏನು ಮಾಹಿತಿ ಇದೆಯೋ ಗೊತ್ತಿಲ್ಲ. ಪ್ರಜ್ವಲ್ ರೇವಣ್ಣ ದೊಡ್ಡ ಕುಟುಂಬದಿಂದ ಬಂದವರು. ಪ್ರಜ್ವಲ್ ರೇವಣ್ಣ ಬೆಳೆಯುತ್ತಿರುವ ನಾಯಕ. ಚುನಾವಣೆ ಗೆಲ್ಲುವುದು ದೊಡ್ಡದಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ನಡೆದುಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ತಂದೆ, ತಾತನಿಂದ ಒಳ್ಳೆಯದನ್ನು ತಿಳಿದುಕೊಳ್ಳಬೇಕು ಎಂದು ಟಾಂಗ್ ನೀಡಿದ್ದಾರೆ.
ವಿಜಯಪುರ: ಇತ್ತೀಚೆಗೆ ಸಿದ್ದರಾಮಯ್ಯ ತೀರ್ಮಾನಗಳು, ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಇವರು ಹಳೆ ಸಿದ್ದರಾಮಯ್ಯನೋ, ಹೊಸ ಸಿದ್ದರಾಮಯ್ಯನೋ ತಿಳಿಯುತ್ತಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಜನರಿಗೆ ಒಂದು ಮನೆಯನ್ನು ಸರಿಯಾಗಿ ಹಂಚಿಲ್ಲ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯವರಿಗೆ ಅಂಕಿ ಅಂಶಗಳನ್ನು ಸ್ವತಃ ನಾನೇ ಕಳುಹಿಸಿದ್ದೇನೆ. ಅವರ ಮತಕ್ಷೇತ್ರ ಬಾದಾಮಿ ಬಗ್ಗೆಯೂ ಕಳುಹಿಸಿದ್ದೇನೆ. ಈ ಹಿಂದೆ ರಾಜ್ಯದಲ್ಲಿ ಅವರು ಇದ್ದಂತಹ ಸಂದರ್ಭದಲ್ಲಿ 22 ಲಕ್ಷ ಮನೆಗಳನ್ನು ಚುನಾವಣೆ ಮುಂದಿಟ್ಟುಕೊಂಡು 35 ಸಾವಿರ ಕೋಟಿ ಬಜೆಟ್‍ನನ್ನು ಮಾರ್ಚ್‍ನಲ್ಲಿ ಮಾಡಿ, ಏಪ್ರಿಲ್‍ನಲ್ಲಿ ಚುನಾವಣೆ ಬಂದರು. ಬಳಿಕ ೨ ಸಾವಿರ ಕೋಟಿ ಇಟ್ಟರು. ಆದಾದ ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಇದೆಲ್ಲಾವನ್ನು ನೋಡಿ ಬೇಸರಗೊಂಡು ಅವರ ಇತಿ ಮಿತಿಯಲ್ಲಿ ಒಂದು ಸಾವಿರ ಚಿಲ್ಲರೆ ಕೊಟ್ಟು ಕೈತೊಳೆದುಕೊಂಡರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪರ್ವತದ ನೀರು ಕುಡಿದು, ದೇವಾಲಯದ ಪ್ರಸಾದ ಸೇವಿಸಿ ಬದುಕುಳಿದೆವು: ಉತ್ತರಾಖಂಡ್ ಪ್ರವಾಹ ಭೀಕರತೆ ಬಿಚ್ಚಿಟ್ಟ ಕನ್ನಡಿಗರು
ನಮ್ಮ ಸರ್ಕಾರ ಬಂದ ಮೇಲೆ ಇದೆಲ್ಲವನ್ನು ಪರಿಶೀಲಿಸಿ 6 ಲಕ್ಷ 40 ಸಾವಿರ ಮನೆಗಳಿಗೆ ನಾಲ್ಕು ಸಾವಿರ ಕೋಟಿಗೂ ಅಧಿಕ ಹಣವನ್ನು ಬಿಡುಗಡೆ ಮಾಡಿದ್ದೇವೆ. ಆದರೆ ಸಿದ್ದರಾಮಯ್ಯ ಅವರು ನನ್ನ ಕ್ಷೇತ್ರಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಹೇಳುತ್ತಾರೆ. ನಾನು ಎಷ್ಟು ನೀಡಿದ್ದೇವೆ ಎಂಬ ಬಗ್ಗೆ ಮಾಹಿತಿ ಇದೆ. ಸಿದ್ದರಾಮಯ್ಯ ಅವರಿಗೆ ಮಾಹಿತಿ ಕೊರತೆ ಇದೆಯೋ ಇಲ್ವೋ ಗೊತ್ತಿಲ್ಲ. ಆದರೆ ಯಾರೋ ಹೇಳಿದರು ಅಂತಾ ಈ ರೀತಿ ಹೇಳುತ್ತಿದ್ದಾರೆ. ಇದು ಒಂದು ಹಿಟ್ ಆ್ಯಂಡ್ ರನ್ ಇದ್ದ ಹಾಗೆ, ಇದು ಆಗ ಬಾರದು ಎಂದಿದ್ದಾರೆ. ಇದನ್ನೂ ಓದಿ: ಮತಾಂತರ ಯತ್ನ ಪ್ರಕರಣ – ಹಿಂದೂ ಪರ ಸಂಘಟನೆ ಕಾರ್ಯಕರ್ತರ ವಿರುದ್ಧ FIR ದಾಖಲು
ಇತ್ತೀಚೆಗೆ ಸಿದ್ದರಾಮಯ್ಯ ತೀರ್ಮಾನಗಳು, ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಇವರು ಹಳೆ ಸಿದ್ದರಾಮಯ್ಯನೋ, ಹೊಸ ಸಿದ್ದರಾಮಯ್ಯನೋ ತಿಳಿಯುತ್ತಿಲ್ಲ. ಸಿಎಂ ಬಗ್ಗೆ ಏನೇನೋ ಮಾತನಾಡುವುದು ಸರಿಯಲ್ಲ. ಇವರ ಬಗ್ಗೆ ಮಾತನಾಡಲೂ ಹೋದರೆ ಸಾಕಷ್ಟಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಜಿಲ್ಲಾ ಉಸ್ತುವಾರಿ ಕೊಡೋದು ಸಿಎಂ ಪರಮಾಧಿಕಾರ. ನಾನು ಇದೇ ಜಿಲ್ಲಾ ಉಸ್ತುವಾರಿ ಬೇಕು ಅಂತ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಕೇಳಿಲ್ಲ. ಸಿಎಂ ನಿರ್ಧಾರಕ್ಕೆ ನಾನು ಬದ್ಧ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸಚಿವ ವಿ.ಸೋಮಣ್ಣ ಹೇಳಿಕೆಗೆ ವೀಡಿಯೋ ಸಂದೇಶ ಮೂಲಕ ಪ್ರತಿಕ್ರಿಯೆ ನೀಡಿದ ಸಚಿವ ಅಶೋಕ್, ಹಿರಿಯ ಸಚಿವ ವಿ ಸೋಮಣ್ಣ ಅವರ ಹೇಳಿಕೆ ಮಾಧ್ಯಮಗಳಲ್ಲಿ ನೋಡಿದೆ. ಬೆಂಗಳೂರು ನಗರ ಉಸ್ತುವಾರಿ ಸೇರಿದಂತೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ನೇಮಕ ಮಾಡುವುದು ಸಿಎಂ ಬಸವರಾಜ ಬೊಮ್ಮಾಯಿ ಅವರ ವಿವೇಚನೆಗೆ ಬಿಟ್ಟಿದ್ದು. ಈ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲ್ಲ ಎಂದರು. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ
ಈ ತನಕ ನಾನು ಇದೇ ಜಿಲ್ಲೆಯ ಉಸ್ತುವಾರಿ ಬೇಕೆಂದು, ಸಿಎಂ ಸೇರಿದಂತೆ ಯಾರ ಹತ್ತಿರವೂ ನಾನು ಕೇಳಿಲ್ಲ. ಹಿಂದೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕೊಟ್ಟಿದ್ರು, ಕೆಲಸ ಮಾಡಿದ್ದೀನಿ. ನಂತರ ಸಚಿವ ಎಂಟಿಬಿ ನಾಗರಾಜ್ ನನಗೆ ಬೇಕು ಅಂತಾ ಕೇಳಿದ್ರು, ಗ್ರಾಮಾಂತರ ಉಸ್ತುವಾರಿಯನ್ನು ಎಂಟಿಬಿ ಅವರಿಗೆ ಬಿಟ್ಟುಕೊಟ್ಟೆ. ಉಸ್ತುವಾರಿ ಮಂತ್ರಿ ಆಗದೆಯೂ ನಾನು ಕೆಲಸ ಮಾಡಿದ್ದೀನಿ ಎಂದರು.
ನನ್ನ ಪೂರ್ವ ನಿಯೋಜಿತ ಕಾರ್ಯಕ್ರಮವಿದ್ದ ಕಾರಣ ಸಚಿವರು, ಶಾಸಕರು ಕರೆದಿದ್ದ ಸಭೆಗೆ ಭಾಗವಹಿಸಲು ಆಗಲಿಲ್ಲ. ಬೆಂಗಳೂರು ನಗರ ಉಸ್ತುವಾರಿ ಯಾರಿಗೆ ಕೊಟ್ರೂ ಅವರ ಜೊತೆಗೆ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.
– ಇಬ್ಬರು ಸಚಿವರ ಮಧ್ಯೆ ಮುಸುಕಿನ ಗುದ್ದಾಟ – ಅಶೋಕ್ ‘ಸಾಮ್ರಾಟ್’ ತರ ಆಡ್ತಾನೆ
ಬೆಂಗಳೂರು: ನಾನು ಎಲ್ಲರಿಗಿಂತ ಸೀನಿಯರ್, ಎಲ್ಲರಿಗಿಂತ ಜಾಸ್ತಿ ಅರ್ಹತೆ ಹೊಂದಿದ್ದೇನೆ. ಹಾಗಾಗಿ ನನ್ನನ್ನು ಬೆಂಗಳೂರು ಉಸ್ತುವಾರಿಯನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕೇಳಿದ್ದೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಮುನ್ನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಬೆಂಗಳೂರು ನಗರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಈಗಲೂ ಅವರೇ ವಹಿಸಿಕೊಂಡರೂ ತೊಂದರೆ ಇಲ್ಲ. ಆದರೆ ಇದು ಮುಖ್ಯಮಂತ್ರಿಗಳ ಪರಮಾಧಿಕಾರ ಯಾರಿಗೆ ಎಷ್ಟು ವರ್ಷ ಅನುಭವವಿದೆ, ಯಾರನ್ನು ಉಸ್ತುವಾರಿ ಮಾಡಬೇಕು ಎಂದು ಅವರಿಗೆ ತಿಳಿದಿದೆ. ನಾನು ಈ ವಿಚಾರಕ್ಕೆ ಮೂಗು ತೂರಿಸುವ ಕೆಲಸ ಮಾಡುವುದಿಲ್ಲ. ಆದರೆ ನಾನು ಜೆ.ಹೆಚ್ ಪಾಟೇಲರ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದವನು. ಎಲ್ಲರಿಗಿಂತ ಜಾಸ್ತಿ ಅರ್ಹತೆ ಹೊಂದಿದ್ದೇನೆ. ಹಾಗಾಗಿ ನನ್ನನ್ನು ಬೆಂಗಳೂರು ಉಸ್ತುವಾರಿಯನ್ನಾಗಿ ಮಾಡಿ ಎಂದು ಕೇಳಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ದಿವಂಗತ ಮನಗೂಳಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಬೇಡ: ಹೆಚ್‍ಡಿಕೆ
ನಾನು 40 ವರ್ಷ ರಾಜಕಾರಣದಲ್ಲಿ ಅನುಭವ ಹೊಂದಿದ್ದೇನೆ. ನನ್ನ ಇಲಾಖೆಯಲ್ಲಿ 1 ಲಕ್ಷ ಮನೆ ನೀಡುವ ಬಗ್ಗೆ ಯಾರದೋ ಸಲಹೆ ಪಡೆದು ಕೆಲಸ ಮಾಡುವ ಅವಶ್ಯಕತೆ ಇಲ್ಲ. ಬೆಂಗಳೂರು ಮಹಾನಗರದ ಬಡ ಜನರಿಗೆ ನಾವು ನೀಡುತ್ತಿರುವ ಕೆಲವು ಮನೆಗಳ ಕಾರ್ಯಕ್ರಮಕ್ಕೆ ನಾವು ಅಶೋಕ್‍ರನ್ನು ಕರೆದಿದ್ದೇವೆ. ಆದರೆ ಅವರು ಚಿಕ್ಕಮಗಳೂರಿನಲ್ಲಿದ್ದರು ಹಾಗಾಗಿ ಬರಲಿಲ್ಲ. ಅಶೋಕ್ ಎಂಎಲ್‍ಎ ಆಗಿದ್ದಾಗ ನಾನು ಮಂತ್ರಿಯಾಗಿದ್ದೆ. ಹಾಗಂತ ನನಗೆ ದುರಂಹಕಾರ ಇಲ್ಲ. ನನಗೆ ನನ್ನ ಪಕ್ಷ ಮುಖ್ಯ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಐಟಿ ದಾಳಿಗೂ, ರಾಜಕೀಯಕ್ಕೂ ಸಂಬಂಧ ಇಲ್ಲ: ಕೋಟಾ ಶ್ರೀವಾಸ ಪೂಜಾರಿ
ನಮ್ಮ ಬೆಂಗಳೂರು ನಗರದಲ್ಲಿರುವವರು ಉಸ್ತುವಾರಿ ಸಚಿವರಾಗುವುದಕ್ಕೆ ಯಡಿಯೂರಪ್ಪ ಅವರು ಈ ಹಿಂದೆ ಹೊಸ ಪೀಠಿಕೆ ಹಾಕಿ ಇಟ್ಟುಕೊಂಡಿದ್ದರು. ಇವರಿಗೂ ನಾನು ಅದನ್ನೇ ಹೇಳಿದ್ದೇನೆ. ಇಲ್ಲ ಯಾರಿಗಾದರೂ ಕೊಟ್ಟರೂ ಯಾವುದೇ ತೊಂದರೆ ಇಲ್ಲ. ಆದರೆ ನಾನು ಎಲ್ಲರಿಗಿಂತ ಬೆಂಗಳೂರು ನಗರಕ್ಕೆ ಸೀನಿಯರ್ ಆಗಿದ್ದೇನೆ. ಅಂಡರ್ ಪಾಸ್, ಫ್ಲೈ ಓವರ್, ಮೆಟ್ರೋ ಯೋಜನೆ ಎಲ್ಲವೂ ನನ್ನ ಕಾಲದಲ್ಲಿಯೇ ಆಗಿದೆ. ಈಗ ನನಗೆ 70 ವರ್ಷ ಎಲ್ಲರಿಗಿಂತ ಸೀನಿಯರ್ ಆಗಿದ್ದು, ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.
ಯಾವುದೇ ಮಿಂಟಿಂಗ್‍ಗೂ ಸೋಮಣ್ಣನವರು ಎಲ್ಲರನ್ನು ಕರೆಯುತ್ತಾರೆ ಆದರೆ ಅಶೋಕ್ ಅವರನ್ನು ಮಾತ್ರ ಕರೆಯುವುದಿಲ್ಲ ಎಂಬ ವಿಶ್ವನಾಥ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಶೋಕ್ ಎಂದು ಅವರ ತಂದೆ-ತಾಯಿ ಯಾಕೆ ಹೆಸರಿಟ್ಟರು ಗೊತ್ತಿಲ್ಲ. ಅಶೋಕ ಎಂದರೆ ಸಾಮ್ರಾಟ ಚಕ್ರವರ್ತಿ ಎಂದರ್ಥ. ಸಾಮ್ರಾಟ ಚಕ್ರವರ್ತಿ ಕೆಲಸನೇ ಬೇರೆ, ನನ್ನ ಕೆಲಸನೇ ಬೇರೆ. ವಿಶ್ವನಾಥ್ ಅವರು ಯಾಕೆ ಈ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಬಯಸಿದರೆ ಪಾಕ್ ಕ್ರಿಕೆಟ್ ಕತೆ ಮುಗಿದಂತೆ: ರಮೀಝ್ ರಾಜಾ
ಬೆಂಗಳೂರು ನಗರಕ್ಕೆ ಯಾರನ್ನು ಉಸ್ತುವಾರಿಯನ್ನಾಗಿ ಮಾಡಿಲ್ಲ. ಅಶೋಕ್ ಅವರನ್ನು ಸ್ವಾತಂತ್ರ್ಯ ದಿನಾಚರಣೆಯ ಸಮಯ ಹಾಗೂ ಕೋವಿಡ್ ನಿರ್ವಹಣೆಗಾಗಿ ಅಷ್ಟೇ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಸದ್ಯ ಇದೀಗ ಬೆಂಗಳೂರು ನಗರದ ಉಸ್ತುವಾರಿಯಾಗಿ ಅಶೋಕ್ ಅವರನ್ನು ಮಾಡುತ್ತಾರೋ ಅಥವಾ ಸೋಮಣ್ಣ ಅವರನ್ನು ಮಾಡುತ್ತಾರೋ, ಇಲ್ಲ ಬೇಕಿದ್ದರೆ ಇಬ್ಬರಿಗೂ ಬೆಂಗಳೂರು ಉಸ್ತುವಾರಿಯನ್ನು ವಹಿಸುತ್ತಾರೋ ಅವರಿಗೆ ಬಿಟ್ಟಿದೆ ಎಂದು ಹೇಳಿದ್ದಾರೆ.
ರಾಮನಗರ: ಅವರ ಕಾಲದಲ್ಲಿ ಹಾಗೆ, ಇವರ ಕಾಲದಲ್ಲಿ ಹೀಗಾಗಿತ್ತು ಎಂಬ ಉಡಾಫೆ ಹೇಳಿಕೆ ಕೊಡಲ್ಲ ಎಂದು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದರು.
ಕನಕಪುರದ ದೇಗುಲ ಮಠಕ್ಕೆ ಆಗಮಿಸಿದ್ದ ಸೋಮಣ್ಣ ಅವರು ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿ, ಈ ರೀತಿ ನಡೆಯಬಾರದಿತ್ತು. ಆದರೆ ಈ ಪ್ರಕರಣವನ್ನು ನಾವು ತೀಕ್ಷ್ಣವಾಗಿ ತೆಗೆದುಕೊಂಡಿದ್ದೇವೆ. ಅವರ ಕಾಲದಲ್ಲಿ ಹಾಗೆ, ಇವರ ಕಾಲದಲ್ಲಿ ಹೀಗಾಗಿತ್ತು ಎಂಬ ಉಡಾಫೆ ಹೇಳಿಕೆ ಕೊಡಲ್ಲ ಎಂದು ಪ್ರತಿಪಕ್ಷದ ವಿರುದ್ಧ ತಿರುಗೇಟು ನೀಡಿದರು.ಇದನ್ನೂ ಓದಿ: ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು: ಪೂಜಾಗಾಂಧಿ
ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆಂದರೂ ಬಿಹಾರ ಹಾಗೂ ಬೇರೆ ರಾಜ್ಯದ ಕಾನೂನು ನಮ್ಮಲ್ಲಿಯೂ ಜಾರಿಯಾಗಲಿದೆ. ಇಂತಹ ಪ್ರಕರಣದಲ್ಲಿ ಭಾಗಿಯಾಗುವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದರು.
ರಾಜ್ಯದಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದರು. ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸಿದ್ದಾರೆ. ಆದರೆ ಪೊಲೀಸ್ ಇಲಾಖೆ ವೈಫಲ್ಯ ಎಂದು ಹೇಳಲಾಗಲ್ಲ. ಯಾರ್ಯಾರ ಕಾಲದಲ್ಲಿ ಏನಾಯ್ತು ಎಂದು ನಾನು ಹೇಳಲ್ಲ. ಆದರೆ ಮುಂದಿನ ಯುವಪೀಳಿಗೆಯ ಹಿತದೃಷ್ಟಿಯಿಂದ ಕಠಿಣ ಕಾನೂನು ರೂಪಿಸಲಾಗುತ್ತೆ ಎಂದು ತಿಳಿಸಿದರು.ಇದನ್ನೂ ಓದಿ:ಪೊಲೀಸರಿಗೆ ಒತ್ತಡ ಇದೆ, ಬೆಳಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮಾಡ್ತಾರೆ: ಸತೀಶ್ ಜಾರಕಿಹೊಳಿ
ಬೆಂಗಳೂರು: ಕಳೆದ ಮೂರ್ನಾಲ್ಕು ದಿನದಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ನಾಯಕತ್ವ ಬದಲಾವಣೆ ವಿಚಾರ ಮತ್ತು ನಳಿನ್ ಕುಮಾರ್ ಆಡಿಯೋ ವಿಚಾರ ಸಂಬಂಧ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುವಷ್ಟು ದಡ್ಡರಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬೆಂಗಳೂರಿನ ವಿಜಯನಗರದ ಶಾಸಕರ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಏನೇ ಅಂದರು ಮುಖ್ಯಮಂತ್ರಿ ಬದಲಾವಣೆ ಇಲ್ಲ. ಈ ಬಗ್ಗೆ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಫೇಕ್ ಅನ್ನೋದನ್ನು ನಮ್ಮ ರಾಜ್ಯಧ್ಯಕ್ಷರೇ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳಿಗೆ ಆಡಿಯೋ ತನಿಖೆ ಮಾಡುವಂತೆ ಪತ್ರ ಬರೆದಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಇದು ಯಾರೋ ಮಾಡಿರುವ ಗಿಮಿಕ್. ಇವೆಲ್ಲಾ ಕೂಡ ಆಗಬಾರದು. ರಾಜ್ಯಾಧ್ಯಕ್ಷರಿಗೆ ತಮ್ಮದೇ ಆದಂತಹ ದೃಷ್ಠಿಕೋನ ಇರುತ್ತದೆ. ಅವರು ಈ ರೀತಿಯಲ್ಲ ಮಾತನಾಡುವಷ್ಟು ದಡ್ಡರಲ್ಲ ಎಂದಿದ್ದಾರೆ.
ನಳಿನ್ ಕುಮಾರ್ ಕಟೀಲ್‍ರವರು ಅನುಭವಿ ಅನ್ನುವುದಕ್ಕಿಂತ ಸಂಸ್ಕಾರವಂತರು, ಬುದ್ದಿವಂತರು ಘಟನೆಯಿಂದ ಅವರ ಮನಸ್ಸಿಗೂ ನೋವಾಗಿದೆ. ಈಗಾಗಲೇ ಮುಖ್ಯಮಂತ್ರಿಗಳಿಗೆ ಅವರು ಪತ್ರ ಬರೆದಿದ್ದಾರೆ. ಇದೆಲ್ಲ ದಾರಿ ತಪ್ಪಿಸುವ ಕೆಲಸ. ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ರಾಜ್ಯಾಧ್ಯಕ್ಷರಾಗಿ ಆ ರೀತಿ ಮಾತನಾಡುತ್ತಾರೆ ಅಂದರೆ ಅದಕ್ಕಿಂತ ಆಕ್ಷಾಮ ಅಪರಾಧ ಇನ್ನೊಂದಿಲ್ಲ. ಆದರೆ ಅವರು ಆ ರೀತಿ ಮಾಡಿಲ್ಲ. ಇದು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಯಡಿಯೂರಪ್ಪರನ್ನು ಗೌರವದಿಂದ ನಡೆಸಿಕೊಳ್ಳಿ, ಇಲ್ಲ ಬಿಜೆಪಿಗೆ ನಷ್ಟ: ಮುರುಘಾ ಶರಣರು
ಮೈಸೂರು: ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೊರೊನಾ 2ನೇ ಅಲೆಗೆ ಬಹಳಷ್ಟು ಜೀವಗಳು ಬಲಿಯಾಗಿವೆ . ಬಹಳಷ್ಟು ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ. ಕೊರೊನಾಗೆ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾಗುತ್ತಿರುವ ಮಕ್ಕಳ ಕರುಣಾಜನಕ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸಂಕಷ್ಟ ಪರಿಸ್ಥಿತಿಯನ್ನು ಅರಿತ ಸುತ್ತೂರು ಮಠ, ಅಂತಹ ಮಕ್ಕಳಿಗೆ ಜೀವನ ಪರ್ಯ0ತ ಉಚಿತ ಶಿಕ್ಷಣವನ್ನು ನೀಡುವಂತಹ ದೂರದೃಷ್ಟಿಯ ಚಿಂತನೆಯನ್ನು ಮಾಡುವದರೊಂದಿಗೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಿಮ್ಮ ಜೇಬು ತುಂಬಿದ್ರೆ ಸಾಕೆ?, ಬಡವರ ಸ್ಥಿತಿ ಏನಾಗ್ಬೇಕು?: ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಪ್ರಶ್ನೆ
ಆರೋಗ್ಯ, ಶಿಕ್ಷಣ ಮತ್ತು ಅನ್ನ ದಾಸೋಹಕ್ಕೆ ಹೆಸರಾದ ಸುತ್ತೂರು ಮಠ ಹಳೆ ಮೈಸೂರು ಭಾಗದ ಆಶಾಕಿರಣ ಎಂದು ಬಣ್ಣಿಸಿದ ಸಚಿವರು ಶ್ರೀ ಮಠವು ತನ್ನ ಅಧೀನದ ಸಮುದಾಯ ಭವನಗಳು, ಹಾಸ್ಟಲ್‍ಗಳು, ಕಲ್ಯಾಣಮಂಟಪ ಮುಂತಾದವುಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಪರಿವರ್ತಿಸಲು ಮುಂದಾಗಿರುವುದು ಶ್ರೀಗಳ ಮಾತೃಹೃದಯದ ಕಳಕಳಿಯನ್ನು ತೋರುತ್ತದೆ ಎಂದು ನುಡಿದರು.
ಬೆಂಗಳೂರು: ಬ್ಲಾಕ್ ಫಂಗಸ್ ಹಾಗೂ ವೈಟ್ ಫಂಗಸ್ ರೋಗಿಗಳಿಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಹಾಗೂ ಕೊರತೆಯಾಗದಂತೆ ಔಷಧಿ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಕೋವಿಡ್ ಕೇರ್ ಸೆಂಟರ್’ಗಳಲ್ಲಿ ಕೋವಿಡ್ ರೋಗಿಗಳನ್ನು ಆರೈಕೆ ಮಾಡುವ ವ್ಯವಸ್ಥೆ ಮಾತ್ರ ಇರುತ್ತದೆ ಎಂದು ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯ ಕೋವಿಡ್-19 ಮೇಲ್ವಿಚಾರಣೆ ಉಸ್ತುವಾರಿ ಹೊತ್ತಿರುವ ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಇಂದು ಮಹಾನಗರ ಪಾಲಿಕೆಯ ಪೂರ್ವ ವಲಯದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾಚರಕನಹಳ್ಳಿ ಬಳಿಯ ಸೇಂಟ್ ಥಾಮಸ್ ಟೌನ್ ಇಂಡಿಯಾ ಕ್ಯಾಂಪಸ್ ಕ್ರೂಡ್’ನಲ್ಲಿ ಕೊರೊನಾ ಸೊಂಕಿತರ ಚಿಕಿತ್ಸೆಗಾಗಿ ಸಜ್ಜುಗೊಳಿಸಲಾದ 60 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದರು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ರೋಗಿಗಳಿಗೆ ವೈದ್ಯಕೀಯ ನೆರವು ನೀಡಲು ಅಗತ್ಯವಿರುವಂತೆ 60 ಹಾಸಿಗೆಯ ಕೋವಿಡ್ ಕೇರ್ ಸೆಂಟರ್’ನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ರೂಪಿಸಲಾಗಿದೆ ಎಂದರು.
ಟ್ರಯಾಜ್ ಸೌಕರ್ಯ, ಆಕ್ಸಿಜನ್ ವ್ಯವಸ್ಥೆ ಹಾಗೂ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಪೌಷ್ಠಿಕ ಆಹಾರ ಸರಬರಾಜು ಸೌಲಭ್ಯಗಳನ್ನು ಈ ಕೇಂದ್ರ ಹೊಂದಿದೆ. ರೋಗಿಗಳ ಮೇಲ್ವಿಚಾರಣೆಗೆ ಹಗಲು-ರಾತ್ರಿ ಅಗತ್ಯವಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಕ್ಷೇತ್ರದ ಸಂಸತ್ ಸದಸ್ಯ ಪಿ.ಸಿ ಮೋಹನ್, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜೆ.ಜಾರ್ಜ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ ಗುಪ್ತಾ ಹಾಗೂ ಹಿರಿಯ ಅಧಿಕಾರಿಗಳು ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕೋವಿಡ್-19 ಮೇಲ್ವಿಚಾರಣೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ವಸತಿ ಸಚಿವ ವಿ.ಸೋಮಣ್ಣ ಅವರು ಇಂದು ಗೋವಿಂದರಾಜನಗರ ವಿಧಾನಸಭಾ ವ್ಯಾಪ್ತಿಯ 9 ವಾರ್ಡುಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ 9 ವಾಹನಗಳನ್ನು ತಾವೇ ರಸ್ತೆಗಳಲ್ಲಿ ದ್ರಾವಣ ಸಿಂಪಡಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.
ಬಡ ಜನರು ವಾಸ ಮಾಡುವ ಪ್ರದೇಶಗಳಲ್ಲಿನ ಕಿರಿದಾದ ರಸ್ತೆಗಳನ್ನು ಗಮನದಲ್ಲಿರಿಸಿಕೊಂಡು ಈ ವಾಹನಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದ ಸಚಿವರು, ಜನರು ಆತಂಕ, ಭಯಗಳಿಂದ ಹೊರ ಬಂದು ಮಾಸ್ಕ್ ಧಾರಣೆ, ಅಂತರ ಹಾಗೂ ಶುಚಿ ಕಾಪಾಡುವ ಮೂಲಕ ಕೋವಿಡ್ ಎದುರಿಸಲು ಸೂಚನೆ ಸಲಹೆ ಮಾಡಿದರು.