Tag: Somanna

  • ಸೋಮಣ್ಣ ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಮಾಡ್ತೀನಿ: ಪರಮೇಶ್ವರ್‌

    ಸೋಮಣ್ಣ ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಮಾಡ್ತೀನಿ: ಪರಮೇಶ್ವರ್‌

    ಬೆಂಗಳೂರು: ಸೋಮಣ್ಣ (Somanna) ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಮಾಡುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಹೇಳಿದ್ದಾರೆ.

    ಸೋಮಣ್ಣ ಕಾಂಗ್ರೆಸ್‌ಗೆ (Congress) ಬರುವುದಕ್ಕೆ ನಮ್ಮ ವಿರೋಧ ಏನು ಇಲ್ಲ. ಸೋಮಣ್ಣ ಬಂದರೆ ಸ್ವಾಗತ ಮಾಡುತ್ತೇನೆ. ಆದರೆ ಏನ್ ಬೆಳವಣಿಗೆ ಆಗುತ್ತಿದೆ ನಮಗೆ ಗೊತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿಯವರೂ ನಮಸ್ಕರಿಸುತ್ತಾರೆ: ಜಮೀರ್ ಮತ್ತೊಂದು ಎಡವಟ್ಟು

     

    ಸೋಮಣ್ಣ ಈಗ ಬಿಜೆಪಿಯಲ್ಲಿ (BJP) ಇದ್ದು, ಪ್ರಭಾವಿ ಮುಖಂಡರು ಆಗಿದ್ದಾರೆ. ನಾನು ಈಗ ಅದರ ಬಗ್ಗೆ ಪ್ರತಿಕ್ರಿಯೆ ಮಾಡುವುದು ಸರಿಯಲ್ಲ. ಅವರು ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ ಎಂದರು.

    ಎಲ್ಲಾ ನಾಯಕರಿಗೂ ರಾಜಕೀಯ ಕ್ಷೇತ್ರದಲ್ಲಿ ಅವರಿಗೇ ಅದಂತಹ ಶಕ್ತಿ ಇದ್ದೇ ಇರುತ್ತದೆ. ಅವರು ನಮ್ಮ ಪಕ್ಷಕ್ಕೆ ಬಂದರೆ ನಮಗೂ ಅವರ ಶಕ್ತಿ ಸಿಕ್ಕುತ್ತೆ. ನನ್ನ ಜೊತೆ ಅವರು ಚರ್ಚೆ ಮಾಡಿಲ್ಲ. ಇದನ್ನೂ ಓದಿ: 15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ – ಸ್ಟೇಟಸ್ ಹಾಕಿದಾತನಿಗೆ ಬಿಸಿ ಮುಟ್ಟಿಸಿದ ಪೊಲೀಸರು

    ಬೆಂಗಳೂರಿನ ಗೋವಿಂದರಾಜನಗರ ಶಾಸಕರಾಗಿದ್ದ ಸೋಮಣ್ಣ ಅವರು ಈ ಬಾರಿ ವರುಣ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಸೋಲಿನ ಬಳಿಕ ಬಿಜೆಪಿ ರಾಜ್ಯ ನಾಯಕರ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲದೇ ಪಕ್ಷದ ಹೈಕಮಾಂಡ್‌ ಜೊತೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಮನವಿ ಮಾಡಿದ್ದರು.

     

  • ಸಿದ್ದರಾಮಯ್ಯರ ಅಣ್ಣನ ಮನೆ ಮುಂದೆಯೇ ಗಲಾಟೆ ನಡೆದಿದೆ – ವಿ.ಸೋಮಣ್ಣ ಕಿಡಿ

    ಸಿದ್ದರಾಮಯ್ಯರ ಅಣ್ಣನ ಮನೆ ಮುಂದೆಯೇ ಗಲಾಟೆ ನಡೆದಿದೆ – ವಿ.ಸೋಮಣ್ಣ ಕಿಡಿ

    – ಸಿದ್ದು ಘನತೆಗೆ ಇದು ಒಳ್ಳೆಯದಲ್ಲ

    ಮೈಸೂರು: ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್‌ (Congress) ಹಾಗೂ ಬಿಜೆಪಿ (BJP) ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣ ಬಗ್ಗೆ ವರುಣಾ (Varuna) ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ (V.Somanna) ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರ ಅಣ್ಣನ ಮನೆ ಮುಂದೆಯೇ ಈ ಗಲಾಟೆ ನಡೆದಿದೆ ಎಂದು ಆರೋಪಿಸಿದ್ದಾರೆ.

    ‘ಕೈ’ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ ಬಿಜೆಪಿ ಕಾರ್ಯಕರ್ತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ವಿ.ಸೋಮಣ್ಣ ಅವರು ಆಸ್ಪತ್ರೆಗೆ ತೆರಳಿ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ರಣಾಂಗಣವಾದ ವರುಣಾ ಕಣ; ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

    ಸಿದ್ದರಾಮಯ್ಯ ಅವರ ಅಣ್ಣನ‌ ಮನೆ ಮುಂದೆಯೇ ಈ ಗಲಾಟೆ ನಡೆಯಿತು. ಹತಾಶೆ ಮನೋಭಾವ ಹಾಗೂ ಸೋಲಿನ ಭಯದಿಂದ ಈ ಕೆಲಸ ಮಾಡಿದ್ದಾರೆ. ನಾನು ಎಲ್ಲಿ ಹೋಗ್ತಿನೋ ಅಲ್ಲಿಗೆ ಕೆಲವರು ಬರುತ್ತಾರೆ. ಎಲ್ಲಾ ಕೋಮಿನ ಜನ ಪ್ರೀತಿ ಮಾಡುತ್ತಾರೆ. ಒಂದು ಕೋಮಿನ‌‌ ಜನ ಮಾತ್ರ ದ್ವೇಷ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

    ನಮ್ಮ ಕಾರ್ಯಕರ್ತನಿಗೆ ಆದ ನೋವು ಸಿದ್ದರಾಮಯ್ಯರ ಅಣ್ಣನ ಮಗನಿಗೆ ಆಗಿದ್ದರೆ ನನ್ನನ್ನು ಯಾವ ದೃಷ್ಟಿಯಲ್ಲಿ ಸಿದ್ದರಾಮಯ್ಯ ನೋಡ್ತಿದ್ದರು? ಸಿದ್ದರಾಮಯ್ಯ ಘನತೆಗೆ ಇದು ಒಳ್ಳೆಯದಲ್ಲ. ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ನಾನು ಯಾವತ್ತಿಗೂ ವಿಚಲಿತ ಆಗಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಮನೆ ಮುಂದಿನ ರಸ್ತೆಯಲ್ಲೇ 10 ಲಕ್ಷ ನಗದು ಹಣ ಪತ್ತೆ..!

    ವರುಣಾ ಕ್ಷೇತ್ರದ ಸ್ಥಿತಿ ಬಗ್ಗೆ ಚುನಾವಣಾ ಆಯುಕ್ತರಿಗೆ ಪತ್ರ ಬರೆಯುತ್ತೇನೆ. ನಿನ್ನೆಯ ಘಟನೆ ವಿಚಾರದಲ್ಲಿ ಪೊಲೀಸರು ಕೂಡ ಕುತಂತ್ರ ಮಾಡಿದರು ಎಂದು ಆರೋಪಿಸಿದ್ದಾರೆ.

  • ಬಿಜೆಪಿ ನಾಯಕರ ವಿರುದ್ಧ ಸೋಮಣ್ಣ ಚಾರ್ಜ್‌ಶೀಟ್‌- ಇತ್ಯರ್ಥ ಮಾಡ್ತೀವಿ ಎಂದ ಶಾ

    ಬಿಜೆಪಿ ನಾಯಕರ ವಿರುದ್ಧ ಸೋಮಣ್ಣ ಚಾರ್ಜ್‌ಶೀಟ್‌- ಇತ್ಯರ್ಥ ಮಾಡ್ತೀವಿ ಎಂದ ಶಾ

    ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ (Karnataka BJP Leaders) ವಿರುದ್ಧ ಮುನಿಸಿಕೊಂಡಿರುವ ವಸತಿ ಸಚಿತ ಸೋಮಣ್ಣ (Somanna) ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿ ಮಾಡಿ ದೂರಿನ ಸುರಿಮಳೆ ಸುರಿದ್ದಾರೆ.

    ಬುಧವಾರ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಯಡಿಯೂರಪ್ಪ, ವಿಜಯೇಂದ್ರ ಅವರ ಹಸ್ತಕ್ಷೇಪದ ಬಗ್ಗೆ ಪ್ರಸ್ತಾಪ ಮಾಡಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸೋಮಣ್ಣ ದೂರು ಆಲಿಸಿದ ಅಮಿತ್‌ ಶಾ ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಏನಾದ್ರೂ ಮಾತಾಡಲಿ, ಅವರಿಗೆ ದೇವರು ಒಳ್ಳೆಯದನ್ನೇ ಮಾಡಲಿ: ಸೋಮಣ್ಣ

    ಸೋಮಣ್ಣ ಚಾರ್ಜ್‌ಶೀಟ್‌ ಏನು?
    ಲಿಂಗಾಯತ ನಾಯಕನಾಗಿ (Lingayat Leader) ನನ್ನ ರಾಜಕೀಯ ಏಳಿಗೆಯಾಗುವುದನ್ನು ಸಹಿಸುತ್ತಿಲ್ಲ. ಪುತ್ರನ ಮೇಲಿನ ಪ್ರೀತಿಯಲ್ಲಿ ನಾವು ಬೆಳೆಯಲು ಅವಕಾಶ ಕೊಡುತ್ತಿಲ್ಲ. ನನಗೆ ಪಕ್ಷದಲ್ಲಿ ಸಾಕಾಗಿದ್ದು ನಾನು ರಾಜೀನಾಮೆ ನೀಡುತ್ತೇನೆ.

    ನನಗೆ ಒಳ್ಳೆಯ ಖಾತೆಯೂ ಇಲ್ಲ, ಜಿಲ್ಲಾ ಉಸ್ತುವಾರಿಯೂ ಇಲ್ಲ. ನನ್ನ 15 ವರ್ಷಗಳಿಂದ ಜಿಲ್ಲಾ ರಾಜಕಾರಣಕ್ಕೆ ಹೋಗಲು ಮನವಿ ಮಾಡುತ್ತಿದ್ದೇನೆ. ತುಮಕೂರು ಅಥವಾ ಚಾಮರಾಜನಗರಕ್ಕೆ ಹೋಗಲು ಬಿಡುತ್ತಿಲ್ಲ. ರಾಜಕೀಯವಾಗಿ ಮಾನ್ಯತೆ ಇಲ್ಲ, ಸೋಲಿಸುವ ಹುನ್ನಾರ ನಡೆಯುತ್ತಿದೆ. ನನ್ನ ಮಗನ ರಾಜಕೀಯ ಬೆಳವಣಿಗೆಗೆ ಅಡ್ಡಿ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಮೃತ ಬೇಟೆಗಾರನ ಬಳಿ ಜಿಂಕೆ, ಗನ್ ಸಿಕ್ಕಿದೆ, ಪರಮಾತ್ಮನಿಂದಲೇ ಶಿಕ್ಷೆಯಾಗಿದೆ: ಸೋಮಣ್ಣ

    ಮೃತ ಬೇಟೆಗಾರನ ಬಳಿ ಜಿಂಕೆ, ಗನ್ ಸಿಕ್ಕಿದೆ, ಪರಮಾತ್ಮನಿಂದಲೇ ಶಿಕ್ಷೆಯಾಗಿದೆ: ಸೋಮಣ್ಣ

    ಚಾಮರಾಜನಗರ: ಕಾವೇರಿ ನದಿಯಲ್ಲಿ (Kaveri River) ಶವವಾಗಿ ಸಿಕ್ಕ ತಮಿಳುನಾಡು (Tamil Nadu) ಬೇಟೆಗಾರ ಕರ್ನಾಟಕ (Karnataka) ಅರಣ್ಯ ಸಿಬ್ಬಂದಿಯ ಗುಂಡಿಗೆ ಬಲಿಯಾಗಿದ್ದಾನೆ ಎಂಬ ಆರೋಪವನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ (V Somanna) ನಿರಾಕರಿಸಿದರು.

    ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಅವರು, ಆತನ ಶವವನ್ನು ತಮಿಳುನಾಡಿನವರೇ ಮರಣೋತ್ತರ ಪರೀಕ್ಷೆ ಕೊಂಡೊಯ್ದಿದ್ದು, ವರದಿ ಬಂದ ನಂತರ ಸತ್ಯಾಂಶ ಏನೆಂದು ಗೊತ್ತಾಗಲಿದೆ. ಆತನ ಬಳಿ ಜಿಂಕೆ ಶವ ಹಾಗೂ ಗನ್ ಸಿಕ್ಕಿದೆ. ಏಳೆಂಟು ವರ್ಷಗಳ ಹಿಂದೆಯೂ ಇಲ್ಲೇ ಬೇಟೆಯಾಡಲು ಬಂದು ಸಿಕ್ಕಿಬಿದ್ದಿದ್ದ. ಆತ ಮಾಡಿದ ತಪ್ಪಿಗೆ ಪರಮಾತ್ಮನಿಂದ ಶಿಕ್ಷೆಯಾಗಿದೆ ಎಂದರು.

    ಮೀನು ಹಿಡಿಯಲು ಸಾವಿರಾರು ಜನ ಬರುತ್ತಾರೆ. ಯಾವ ಮೀನುಗಾರನಿಗೂ ಅನಾನುಕೂಲವಾಗಿಲ್ಲ. ಆತ ಮೀನುಗಾರನಾಗಿದ್ದರೆ ಮರಣೋತ್ತರ ವರದಿ ಬಂದ ನಂತರ ಸತ್ಯಾಂಶ ಗೊತ್ತಾಗಲಿದೆ. ಆತ ಅಮಾಯಕನಾಗಿದ್ದರೆ ಎರಡು ರಾಜ್ಯಗಳ ಅಧಿಕಾರಿಗಳ ಜೊತೆ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಸಿಎಂ ಮಾಡ್ಬೇಕು: ಭೈರತಿ ಸುರೇಶ್

    ಘಟನೆಯೇನು?: ಚಾಮರಾಜನಗರ (Chamarajanagar) ಜಿಲ್ಲೆಯ ಕರ್ನಾಟಕ ತಮಿಳುನಾಡು ಗಡಿಭಾಗವಾದ ಕಾವೇರಿ ವನ್ಯಜೀವಿ ವಿಭಾಗದ ಪಾಲಾರ್ ಅರಣ್ಯ ವಲಯದಲ್ಲಿ ತಮಿಳುನಾಡಿನ ಬೇಟೆಗಾರರು ಹಾಗೂ ಕರ್ನಾಟಕ ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಬೇಟೆಗಾರರು ಅಕ್ರಮವಾಗಿ ಅರಣ್ಯ ಪ್ರವೇಶಿಸಿ, ವನ್ಯ ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದರು. ಈ ವೇಳೆ ಅರಣ್ಯ ಸಿಬ್ಬಂದಿ ಕಂಡು ಬೇಟೆಗಾರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಅರಣ್ಯ ಸಿಬ್ಬಂದಿಯೂ ಪ್ರತಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಬೇಟೆಗಾರ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅರಣ್ಯ ಇಲಾಖೆ ಸಿಬ್ಬಂದಿ, ತಮಿಳುನಾಡು ಬೇಟೆಗಾರರ ನಡುವೆ ಗುಂಡಿನ ಚಕಮಕಿ – ಒಬ್ಬ ಬೇಟೆಗಾರ ಸಾವು?

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಬ್‌ ಅರ್ಬನ್ ರೈಲ್ವೇ ಯೋಜನೆಗೆ ದಿ.ಅನಂತ್ ಕುಮಾರ್ ಹೆಸರು: ಸೋಮಣ್ಣ

    ಸಬ್‌ ಅರ್ಬನ್ ರೈಲ್ವೇ ಯೋಜನೆಗೆ ದಿ.ಅನಂತ್ ಕುಮಾರ್ ಹೆಸರು: ಸೋಮಣ್ಣ

    ಬೆಂಗಳೂರು: ಸಬ್‌  ಅರ್ಬನ್ ರೈಲ್ವೇ ಯೋಜನೆಗೆ ದಿವಂಗತ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ (Ananth Kumar) ಹೆಸರು ಇಡುವುದಾಗಿ ಸಚಿವ ವಿ. ಸೋಮಣ್ಣ (Somanna) ಘೋಷಣೆ ಮಾಡಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಸಬ್‌  ಅರ್ಬನ್ ರೈಲ್ವೇ ಯೋಜನೆ (Suburban Railway Project) ಬಗ್ಗೆ ಬಿಜೆಪಿ (BJP) ಸದಸ್ಯ ಗೋಪಿನಾಥ್ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವ ಸೋಮಣ್ಣ, ಸಬ್‌  ಅರ್ಬನ್ ರೈಲ್ವೇ ಅನಂತ್ ಕುಮಾರ್ ಅವರ ಕನಸನ ಯೋಜನೆ. ನಾನು ಬಿಜೆಪಿ ಬರಲು ಅವರೇ ಮುಖ್ಯ ಕಾರಣ. ಈ ಯೋಜನೆ ಬೆಂಗಳೂರಿಗೆ ಬರಲು ಸಾಕಷ್ಟು ಶ್ರಮ ಹಾಕಿದ್ದಾರೆ. ಹೀಗಾಗಿ ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸಬರ್ಬನ್ ರೈಲ್ವೇ ಯೋಜನೆಗೆ ಅನಂತ್ ಕುಮಾರ್ ಹೆಸರು ಇಡುವ ಚಿಂತನೆ ಇದೆ ಎಂದರು.

    ಯೋಜನೆಗೆ ಕೇಂದ್ರ ಸರ್ಕಾರದ ಅನುದಾನವೂ ಇರುವುದರಿಂದ ಕೇಂದ್ರದ ಅನುಮತಿ ಇದಕ್ಕೆ ಬೇಕಾಗುತ್ತದೆ. ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡಿ ಅನಂತ್ ಕುಮಾರ್ ಹೆಸರು ಇಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಅಂತ ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ವಿರೋಧ ಪಕ್ಷ ಆಗಿರಲು ನಾಲಾಯಕ್: ನಳಿನ್ ಕುಮಾರ್ ಕಟೀಲ್

    ಇನ್ನು ಸಬ್‌  ಅರ್ಬನ್ ರೈಲ್ವೇ ಯೋಜನೆಗೆ ಈಗಾಗಲೇ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದಾರೆ. 4 ಭಾಗಗಳಾಗಿ ಯೋಜನೆ ಕೈಗೆತ್ತುಕೊಳ್ಳಲಾಗುತ್ತಿದೆ. ಈಗಾಗಲೇ ಮೊದಲ ಹಂತಕ್ಕೆ ಟೆಂಡರ್ ಪ್ರಕ್ರಿಯೆ ಆಗಿ, ಸಿವಿಲ್ ಕೆಲಸ ಪ್ರಾರಂಭ ಆಗಬೇಕು. ಶೀಘ್ರವೇ ಕೆಲಸ ಪ್ರಾರಂಭ ಮಾಡುತ್ತೇವೆ. ಇನ್ನು ಉಳಿದ 3 ಭಾಗಗಳ ಕಾಮಗಾರಿ ಕೂಡಾ ಶೀಘ್ರವೇ ಪ್ರಾರಂಭ ಮಾಡಿ, ನಿಗದಿತ ಸಮಯಕ್ಕೆ ಯೋಜನೆ ಮುಗಿಸುವ ಕೆಲಸ ಮಾಡುತ್ತೇನೆ ಅಂತ ಭರವಸೆ ನೀಡಿದರು. ಇದನ್ನೂ ಓದಿ: ರತನ್‌ ಟಾಟಾ ಈಗ PM CARES Fund ಟ್ರಸ್ಟಿ- ಸುಧಾಮೂರ್ತಿಗೆ ಸಲಹಾ ಮಂಡಳಿಯಲ್ಲಿ ಸ್ಥಾನ

    Live Tv
    [brid partner=56869869 player=32851 video=960834 autoplay=true]

  • ರೂಪೇಶ್‍ಗೆ ಸಾನ್ಯಾ ಸಹವಾಸವೇ ಮೈನಸ್ ಆಯ್ತಾ?

    ರೂಪೇಶ್‍ಗೆ ಸಾನ್ಯಾ ಸಹವಾಸವೇ ಮೈನಸ್ ಆಯ್ತಾ?

    ಬಿಗ್‍ಬಾಸ್(Bigg Boss) ಮನೆಯಲ್ಲಿ ರೂಪೇಶ್ ಅವರದ್ದು ಕೊನೆಯ ಕ್ಯಾಪ್ಟೆನ್ಸಿಯಾಗಿತ್ತು. ಆದರೆ ಈ ವಾರ ರೂಪೇಶ್ ಎಷ್ಟು ಚೆನ್ನಾಗಿ ಕ್ಯಾಪ್ಟೆನ್ಸಿ ನಿಭಾಯಿಸಿದ್ದರೋ ಅಷ್ಟೇ ಒನ್ ಸೈಡ್ ಆಗಿದ್ದ ಎಂಬ ಆರೋಪವೂ ಕೇಳಿ ಬಂತು. ಹೆಚ್ಚಿನ ಪ್ರಧಾನ್ಯತೆಯನ್ನು ಫ್ರೆಂಡ್ ಎನ್ನುವ ಕಾರಣಕ್ಕೆ ಸಾನ್ಯಾಳಿಗೆ(Sanya) ನೀಡಿದ ಎಂಬುದು ಮನೆಯ ಸದಸ್ಯರಿಗೆ ಕೊಂಚ ಬೇಸರವನ್ನು ತರಿಸಿತ್ತು. ಆ ಬಗ್ಗೆ ಇಂದು ವಾರದ ಕಥೆ ಕಿಚ್ಚ ಸದೀಪನ ಜೊತೆ ವೇದಿಕೆಯಲ್ಲೂ ಬಹಳಷ್ಟು ಚರ್ಚೆಗೆ ಕಾರಣವಾಯಿತು.

    ಕಿಚ್ಚ ಸುದೀಪ್(Sudeep) ವೇದಿಕೆ ಬರುವುದಕ್ಕೂ ಮುನ್ನ ಈ ಬಗ್ಗೆ ಒಂದು ಕ್ಲೂ ಕೂಡ ಕೊಟ್ಟಿದ್ದರು. ಕೊನೆವಾರದಲ್ಲಿ ಬಿದ್ದರೆ ಏಳುವುದಕ್ಕೆ ಟೈಮ್ ಇರುವುದಿಲ್ಲ. ಸ್ನೇಹ ಹಾಗೂ ಆಟ ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂಬುದು ಗೊತ್ತಿರಬೇಕು ಎಂದಾಗ ಇಂದು ರೂಪೇಶ್ ಮಾಡಿದ ಯಡವಟ್ಟು ಅನಾವರಣವಾಗುತ್ತದೆ ಎಂಬುದು ಸ್ಪಷ್ಟವಾಯಿತು. ಅದರಂತೆ ವೇದಿಕೆ ಮೇಲೆ ರೂಪೇಶ್‍ಗೆ ಆ ಪ್ರಶ್ನೆ ಕೇಳಿದರು. ಸ್ನೇಹ ಮತ್ತು ಆಟವನ್ನು ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂದಾಗ ರೂಪೇಶ್(Rupesh) ಆಟ ಅಂತ ಬಂದಾಗ ಸ್ನೇಹ, ಸಂಬಂಧ, ಎಮೋಷನಲ್ ನೋಡಬಾರದು ಎಂಬ ಅರ್ಥದಲ್ಲಿಯೇ ವಿವರಣೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ನೀಡಿದ್ದರು. ವಿವರಣೆ ಕೇಳಿಸಿಕೊಂಡ ಕಿಚ್ಚ, ಒಂದು ಕ್ಷಣ ನಗೆ ಬೀರಿ, ಓಕೆ ವೆಲ್ ಡನ್ ಅಂತ ಮನೆಯ ಸದಸ್ಯರ ಬಳಿ ರಿಯಾಕ್ಷನ್ ಕೇಳಿದರು. ಇದನ್ನೂ ಓದಿ: ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

    ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ,(Somanna) ನಂಗೆ ಈ ಹಿಂದೆ ಅನುಭವವಾಗಿತ್ತು. ಅದನ್ನು ಹೇಳಿದ್ದೆ ಕೂಡ, ವೋಟ್ ಕೂಡ ಒಂದು ಸಲ ಮಾಡಿದ್ದೆ. ಯಾವುದೋ ಒಂದು ವಿಚಾರ ಬಂದಾಗ ಒಬ್ಬ ವ್ಯಕ್ತಿಯ ಪರ ಮಾತನಾಡುವುದಲ್ಲ. ಹೌದು ಕಣ್ಣೀರಿಗೆ ಒಂದು ಬೆಲೆ ಇರುತ್ತದೆ. ಭಾವನೆಗೂ ಒಂದು ಬೆಲೆ ಇರುತ್ತದೆ. ಆದರೆ ಅದೇ ವೀಕ್ನೆಸ್ ಆಗಬಾರದು. ನಾನು ತುಂಬಾ ಸಲ ಕಂಡಿದ್ದೇನೆ. ಕಣ್ಣೀರು ಹಾಕಿದ ಕೂಡಲೇ ಅದನ್ನು ಬ್ಯಾಲೆನ್ಸ್ ಮಾಡಬಹುದು. ಪಾಪ ಅನಿಸುತ್ತದೆ. ಅದು ಪಾಪ ಅಲ್ಲ. ಅದಕ್ಕೆ ಒಂದು ಉದಾಹರಣೆ ಇತ್ತೀಚೆಗೆ ನಡೆದಿದೆ. ಅವರು ಒಂದು ಟಾಸ್ಕ್‌ನಲ್ಲಿ ಸೋತಾಗ ಕಣ್ಣೀರು ಹಾಕುತ್ತಾರೆ. ಕಣ್ಣೀರು ಹಾಕಿದ ತಕ್ಷಣ ಅವಕಾಶ ಸಿಗುತ್ತದೆ. ಇಲ್ಲಿ ಕಣ್ಣೀರು ಎಕ್ಸಿಕ್ಯೂಟ್ ಮಾಡುವುದಕ್ಕೆ ಬಂದಿಲ್ಲ. ಬೇಕಾಬಿಟ್ಟಿ ಹಾಕಿದರೆ ಅದಕ್ಕೊಂದು ಅರ್ಥವೇ ಇರುವುದಿಲ್ಲ ಎಂದಿದ್ದಾರೆ.

    ಸುದೀಪ್ ಅವರ ಮಾತುಕತೆ ಮುಗಿದು ಒಂದು ಬ್ರೇಕ್ ಕೊಟ್ಟಾಗ ಮನೆಯಲ್ಲಿ ಕಣ್ಣೀರಿನ ಕಥೆಯ ಮಹಾಯುದ್ಧವೇ ನಡೆದಿದೆ. ಜಯಶ್ರೀ(Jaya shree) ಹಾಗೂ ಸೋನು ಕುಳಿತಲ್ಲಿಗೆ ಬಂದ ಸಾನ್ಯಾ, ಸೋಮಣ್ಣ ಕೊಟ್ಟ ರೀಸನ್ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ನೀನು ಇವಳನ್ನು ರಾಂಗ್ ಇನ್ಫರ್ಮೇಶನ್ ಕೊಟ್ಟಿದ್ದೀಯಾ ಅದಕ್ಕೆ ಈ ರೀತಿಯೆಲ್ಲಾ ಆಗಿದೆ ಅಂತ. ಆಗ ಸಾನ್ಯಾಳಾ ಮಾತು ತಡೆದ ಜಯಶ್ರೀ, ನೀನು ರೂಪೇಶ್ ಕೂತು ಮಾತನಾಡುವಾಗ ನಾವಿಬ್ಬರು ನಿಮ್ಮ ಎದುರಿಗಿನ ಸೋಫಾದಲ್ಲಿಯೇ ಇದ್ದೇವು. ನೀನು ರೂಪೇಶ್ ಜೊತೆ ಮಾತನಾಡುವಾಗ ಇಟ್ ವಾಸ್ ನಾಟ್ ಸ್ಯಾಟಿಫೈ ಎಂಬಂತೆ ಇತ್ತು. ನೀನು ಕಣ್ಣಲ್ಲಿ ನೀರು ತುಂಬಿಕೊಂಡೆ ಮಾತನಾಡುತ್ತಿದ್ದೆ. ಅದಕ್ಕೆ ನೀನು ಅಳುತ್ತಿದ್ದಿಯಾ ಅಂತ ಅಂದುಕೊಂಡೆವು ಎಂದಾಗ, ಸಾನ್ಯಾ ಅವಳ ಪಕ್ಕದಲ್ಲಿಯೇ ನಿಂತಿದ್ದ ರೂಪೇಶ್‍ನನ್ನು ಕರೆದು ನೀನು ಕ್ಯಾಪ್ಟನ್ ಆಗಿದ್ದವನು ಹೇಳು ನಾನು ಕಣ್ಣೀರು ಹಾಕಿದ್ನಾ ಎಂದಾಗ, ರೂಪೇಶ್ ಇಲ್ಲ ಎಂದಿದ್ದಾನೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

    ಮತ್ತೆ ಸೋನು(Sonu) ಮತ್ತು ಜಯಶ್ರೀ ಕಡೆಗೆ ಸಾನ್ಯಾಳ ಗಮನ ತಿರುಗಿದೆ. ಅದೇಗೆ ಹೇಳುತ್ತೀರಾ. ನೀವೂ ಹೇಳಿದ್ದಕ್ಕೆ ಸೋಮಣ್ಣ ಇವತ್ತು ಆ ರೀತಿ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದಿದ್ದಾರೆ. ಜಯಶ್ರೀ ಎಮೋಷನಲ್(Emotional) ಅಂದಿದ್ದಾಳೆ, ಸೋನು ಕಣ್ಣೀರು ಹಾಕಿದ್ದೀಯಾ ಅಂತ ಮತ್ತೆ ಮತ್ತೆ ವಾದ ಮಾಡಿದ್ದಾರೆ. ಜಗಳ ತಾರಕ್ಕೇರಿದಾಗ ಆಯಿತು ಬಿಡು ನೀನು ಕಣ್ಣೀರು ಹಾಕಿಲ್ಲ ತಾನೇ. ಜನ ನೋಡಿದ್ದಾರೆ ಅಂತ ಸೋನು ಸುಮ್ಮನೆ ಆಗಿದ್ದಾರೆ. ಈ ಮಧ್ಯೆ ಇದೇ ಕಣ್ಣೀರಿನ ವಿಚಾರ ಸೋಮಣ್ಣ ಹಾಗೂ ರೂಪೇಶ್ ನಡುವೆಯೂ ವಾದ ಪ್ರತಿವಾದ ನಡೆದಿದೆ. ಅವಳ ಕಣ್ಣೀರು ನೋಡಿ ನಾನು ಅವಕಾಶ ಹೇಗೆ ಕೊಟ್ಟಿದ್ದೇನೆ ಎಂದು ಸೋಮಣ್ಣನ ಬಳಿ ಕೇಳಿದ್ದಾರೆ. ಆದರೆ ಕೆಲವೊಂದು ವಿಚಾರಗಳು ಡ್ರ್ಯಾಗ್ ಆಗಿದೆ. ಅಷ್ಟರಲ್ಲಿ ಬಿಗ್ ಬಾಸ್ ವೇದಿಕೆ ಸಿದ್ಧವಾಯಿತು. ಸುದೀಪ್ ಪ್ರತ್ಯಕ್ಷವಾದರು. ಹೀಗಾಗಿ ಜಗಳ ಅಲ್ಲಿಗೆ ನಿಂತಿತು.

    Live Tv
    [brid partner=56869869 player=32851 video=960834 autoplay=true]

  • ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

    ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

    ಬಿಗ್ ಬಾಸ್ (Bigg Boss) ಮನೆಯಲ್ಲಿ ಜಯಶ್ರೀ ಹಾಗೂ ಸೋಮಣ್ಣ ನಡುವೆ ನಡೆಯುವ ಜಟಾಪಟಿ ಇದು ಹೊಸದೇನು ಅಲ್ಲ. ಆದರೆ ಇಂದು ಜಯಶ್ರೀ ಮಾತನಾಡಿದ ರೀತಿ ಯಾರಿಗೂ ಸರಿ ಎನಿಸಲೇ ಇಲ್ಲ. ಸೋಮಣ್ಣ ಈ ಸಲ ಒರಟಾಗಿ ಮಾತನಾಡಲೇ ಇಲ್ಲ. ಆದರೂ ಜಯಶ್ರೀ ನಾಲಿಗೆ ಹರಿಬಿಟ್ಟಿದ್ದಾರೆ.

    ಮಧ್ಯಾಹ್ನದ ಸಮಯದಲ್ಲಿ ಗುರೂಜಿ ಹಾಗೂ ಸೋಮಣ್ಣ ಇಬ್ಬರು ಅಡುಗೆ ತಯಾರಿ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಜಯಶ್ರೀ (Jayashree) ಕೂಡ ಬಂದಿದ್ದಾರೆ. ಅದಾಗಲೇ ಸೋನು ಅಲ್ಲಿಯೇ ಕುಳಿತಿದ್ದಳು. ಆಗ ಸೋಮಣ್ಣ ಕೂಡ ಗುರೂಜಿ ಜೊತೆಗೆ ಸೇರಿಕೊಂಡು ಬಿಟ್ಟರು ಎಂದಿದ್ದಾರೆ. ಅದಕ್ಕೆ ಸೋಮಣ್ಣ ಒಂದು ಇಡೀ ದಿನ ಅಡುಗೆ ಮಾಡುವುದಕ್ಕೆ ನನಗೆ ಅವಕಾಶವೇ ಸಿಗುತ್ತಿಲ್ಲ ಎಂದು ಸೋಮಣ್ಣ (Somanna) ಹೇಳಿದಾಗ, ಜಯಶ್ರೀ ಒಂದು ದಿನ ಅಡುಗೆ ಮಾಡಿ ಎಂದಿದ್ದಾರೆ. ಇದನ್ನೂ ಓದಿ:ಏನ್ ಐಡ್ಯಾ ಗುರೂ: ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಫಿಕ್ಸ್: ಫೇಸ್ ಟ್ರಾನ್ಸ್ ಪ್ಲಾಂಟ್ ಬಳಸಿ ಅನಿರುದ್ಧಗೆ ಗೇಟ್ ಪಾಸ್

    ನಂತರ ಸೋನು ಗುರೂಜಿ ನಿಮಗೆ ಗೊತ್ತಿರುವುದೆಲ್ಲವನ್ನು ಸೋಮಣ್ಣನಿಗೆ ಹೇಳಿಕೊಡಬೇಡಿ ಆಮೇಲೆ ಸೋಮಣ್ಣನು ಅಷ್ಟೇ ಎಂದು ಬೇರೆ ಮೀನಿಂಗ್‌ನಲ್ಲಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಗುರೂಜಿ ಗದರಿಸಿ ಬಾ ಇಲ್ಲಿ ಅಂತ ಸೋನುಳನ್ನು ಕರೆದು ಸೋಮಣ್ಣ ಪಾಪ ಯಾರು ಸಿಕ್ಕಿಲ್ಲ ಅಂತ ಒದ್ದಾಡುತ್ತಿದ್ದಾರೆ ಎಂದಿದ್ದಾರೆ. ಮತ್ತೆ ಸೋನು ನಿಮ್ಮ ಡಬಲ್ ಮೀನಿಂಗ್‌ನ ಸೋಮಣ್ಣನಿಗೆ ಹೇಳಿಕೊಡಬೇಡಿ. ಅವರು ಹಾಳಾಗುತ್ತಾರೆ ಎಂದು ಸೋಮಣ್ಣನಿಗೆ ವಿವರಣೆ ನೀಡಿದಳು. ಹಾಗೂ ಸೋಮಣ್ಣ ನಾನು ಹಾಳಾಗುವುದಕ್ಕೆ ಕಾರಣ ಜಯಶ್ರೀ ಅಂತ ಹೇಳಿದ್ರು. ರೂಲ್ಸ್‌ನೆಲ್ಲಾ ಬ್ರೇಕ್ ಮಾಡಿ ಮಾತುನಾಡುವುದೆಲ್ಲ ನಮ್ಮ ಜಯಶ್ರೀ ಅವರು ಎಂದು ಈ ವೇಳೆ ಸೋಮಣ್ಣ ಮಾತನಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಅರ್ಧ ಗಂಟೆ ಮಲಗುವ ಅವಕಾಶವನ್ನು ಆರ್ಯವರ್ಧನ್ ಹಾಗೂ ಸೋಮಣ್ಣ ಅವರಿಗೆ ನೀಡಿತ್ತು. ಅದರಂತೆ ಗುರೂಜಿ ಊಟ ಮಾಡಿ ಮಲಗಲು ಹೋಗಿದ್ದರು. ಆದ್ರೆ ಅದನ್ನು ತಲೆಯಲ್ಲಿ ಇಟ್ಟುಕೊಳ್ಳದೆ ಸೋನು ಹಾಗೂ ಜಯಶ್ರೀ ಬೆಡ್ ರೂಮಿನಲ್ಲಿಯೇ ಮಾತನಾಡುತ್ತಿದ್ದರು. ಜಯಶ್ರೀ ಮಾತನಾಡುತ್ತಾ ಸೋಮಣ್ಣ ಬಗ್ಗೆ ಕಿಡಿಕಾರಿದ್ದಾರೆ. ಕಚಕಚ ಅಂತ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಸೋಮಣ್ಣ ಮಾತನಾಡುವುದು ನನಗೆ ಇಷ್ಟವೇ ಆಗುವುದಿಲ್ಲ. ನಾನು ಒಂದು ಸಲ ನೋಡುತ್ತೀನಿ ಎರಡು ಸಲ ನೋಡ್ತೀನಿ, ಮೂರನೇ ಸಲ ಚಪ್ಪಲಿಗೆ ಬಟ್ಟೆ ಸುತ್ತಿಕೊಂಡು ಹೊಡೆದಂಗೆ ಮಾತನಾಡ್ತೀನಿ ಎಂದು ಸೋಮಣ್ಣ ವಿರುದ್ಧ ಜಯಶ್ರೀ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ಕೂಲಲ್ಲಿ ಕಳ್ಳತನ ಮಾಡುತ್ತಿದ್ದೆ: ಸೋನು ಶ್ರೀನಿವಾಸ್ ಗೌಡ

    ಸ್ಕೂಲಲ್ಲಿ ಕಳ್ಳತನ ಮಾಡುತ್ತಿದ್ದೆ: ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಓಟಿಟಿ ಕನ್ನಡ ಇದೀಗ 27ನೇ ದಿನಕ್ಕೆ ಕಾಲಿಟ್ಟಿದೆ. ಸಾಕಷ್ಟು ವಿಚಾರಗಳಿಂದ ದೊಡ್ಮನೆ ಹೈಲೈಟ್ ಆಗಿದೆ. ಇದೀಗ ಹಬ್ಬದ ಹ್ಯಾಂಗೋವರ್‌ನಿಂದ ಹೊರಬಂದಿರುವ ಸೋನು ಅಚ್ಚರಿಯ ವಿಚಾರವೊಂದನ್ನ ರಿವೀಲ್ ಮಾಡಿದ್ದಾರೆ. ತಾವು ಸ್ಕೂಲಲ್ಲಿ ಇದ್ದಾಗ ಕಳ್ಳತನ ಮಾಡುತ್ತಿದ್ದೆ ಎಂದು ಸೋನು ಬಿಗ್‌ ಬಾಸ್‌ ಮನೆಯಲ್ಲಿ ಹೇಳಿದ್ದಾರೆ.

    ದೊಡ್ಮನೆಯಲ್ಲಿ ಗೌರಿ ಮತ್ತು ಗಣೇಶ ಹಬ್ಬವನ್ನ ಬಿಗ್ ಬಾಸ್ ಮನೆ ಮಂದಿ ಅದ್ದೂರಿಯಾಗಿ ಆಚರಿಸಿದ್ದರು. ಸದ್ಯ ಈ ಹಬ್ಬದ ಹ್ಯಾಂಗೋವರ್‌ನಿಂದ ಹೊರಬಂದಿರುವ ಸೋನು, ಬಳಸಿರುವ ಆಭರಣವನ್ನು ಎತ್ತಿಡಲು ಮುಂದಾಗಿದ್ದರು. ಈ ವೇಳೆ ತಮ್ಮ ಜೀವನದ ಇಂಟ್ರೆಸ್ಟಿಂಗ್ ವಿಚಾರವೊಂದನ್ನ ಸೋನು ಹೇಳಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್‌ ತನ್ನಿ ಎಂದ ರಿಯಲ್‌ ಸ್ಟಾರ್‌ ಉಪೇಂದ್ರ

    ನಾನು ಜಾತ್ರೆಗೆ ಹೋದಾಗ ಕದಿಯುತ್ತಿದ್ದೆ. ಸುಮ್ಮನೆ ಹೇಳಿದ್ದೀನಿ ನಾನು ಕದಿಯುತ್ತಿರಲಿಲ್ಲ. ಈ ವೇಳೆ ಸೋಮಣ್ಣ ಜಾತ್ರೆಯಲ್ಲಿ ಕದಿಯುತ್ತಿದ್ರಾ ನೀವು? ಸುಮ್ಮನೆ ಸುಮ್ಮನೆ ಈ ರೀತಿ ಹೇಳಿಕೆ ನೀಡಬಾರದು ಎಂದಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಎಲ್ಲೂ ಕದ್ದಿರುತ್ತಾರೆ. ಪೆನ್ಸಿಲ್ ಕದಿಯೋದು ಎಲ್ಲಾ. ನೀವೂ ಕದ್ದಿರುತ್ತೀರಾ ಅಲ್ವಾ ಎಂದು ಸೋನು, ಚೈತ್ರಾ ಅವರನ್ನ ಕೇಳಿದ್ದಾರೆ. ನಾನು ಯಾಕೆ ಕದಿಯಲಿ? ಇವಳು ಕದಿಯೋದು ಆಮೇಲೆ ಎಲ್ಲರಿಗೂ ಹೇಳ್ಕೊಂಡು ಬರೋದು ಎಂದು ತಮಾಷೆಯಾಗಿ ಉತ್ತರ ನೀಡಿದ್ದಾರೆ. ಸ್ಕೂಲ್‌ನಲ್ಲಿ ಫ್ರೆಂಡ್ಸ್ ಬಾಕ್ಸ್‌ನಲ್ಲಿ ನಾನು ರಬರ್ ಕದಿಯುತ್ತಿದ್ದೆ, ಹಲ್ಲಲ್ಲಿ ರಬರ್‌ನ ಜಾಸ್ತಿ ಕಚುತ್ತಿದ್ದೆ ಆಮೇಲೆ ಫ್ರೆಂಡ್ಸ್ ಹೊಸದು ತಂದಾಗ ನಾನು ಮನೆಗೆ ಎತ್ಕೊಂಡು ಹೋಗುತ್ತಿದ್ದೆ ಎಂದು ಸೋನು ತಮ್ಮ ಶಾಲಾ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ.

    ಸೋನು ಗೌಡ ತಮ್ಮ ಸ್ಕೂಲ್ ದಿನಗಳನ್ನು ನೆನಪಿಸಿಕೊಳ್ಳುವಾಗ ಸೋಮಣ್ಣ ಕೂಡ ಕಳ್ಳತನ ಮಾಡಿರುವ ಘಟನೆಯನ್ನು ವಿವರಿಸುತ್ತಾರೆ. ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಒಂದು ಗಿಫ್ಟ್ ಅಂಗಡಿ ಇತ್ತು ಅಲ್ಲಿ ಸಣ್ಣ ಸಣ್ಣ ಸೈಜ್‌ನಲ್ಲಿ ಗ್ರೀಟಿಂಗ್ ಕಾರ್ಡ್‌ಗಳು ಬರುತ್ತಿತ್ತು. ಆಗ ನನ್ನ ಕೈಯಲ್ಲಿ ಕಮಾಯಿ ಇರಲಿಲ್ಲ ಅದಿಕ್ಕೆ ಕಳ್ಳತನ ಮಾಡಿದ್ದೆ ಎಂದು ಸೋಮಣ್ಣ ಕೂಡ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ಬಿಗ್‍ಬಾಸ್ ಮನೆಯಲ್ಲಿ ಒಂದು ಕ್ಯೂಟ್ ಜೋಡಿ ಇದೆ. ಅದು ಯಾರು ಅಂತ ಕೇಳಿದರೆ ನಂದು ಅಂಡ್ ಜಶು ಅಂತ ಎಲ್ಲರೂ ಹೇಳುತ್ತಾರೆ. ನಂದಿನಿ ಹಾಗೂ ಜಶ್ವಂತ್ ಬಿಗ್‍ಬಾಸ್ ಮನೆಗೆ ಬಂದ ಮೇಲೆ ಪ್ರೀತಿಯಲ್ಲಿ ಬಿದ್ದವರಲ್ಲ. ಪ್ರೀತಿಯಲ್ಲಿ ಬಿದ್ದಿದ್ದವರನ್ನು ಬಿಗ್‍ಬಾಸ್ ಮನೆಗೆ ಕರೆತಂದದ್ದು. ಇಬ್ಬರು ಈಗಲೂ ಬಿಗ್‍ಬಾಸ್ ಮನೆಯಲ್ಲಿ ಲವ್ ಬರ್ಡ್ಸ್‌ಗಳು ಹಾರಾಡಿದಂತೆಯೇ ಹಾರಾಡುತ್ತಿರುತ್ತಾರೆ. ಆದರೆ ಅದ್ಯಾಕೋ ಜಶ್ವಂತ್‍ಗೆ ಹಳೇ ಗರ್ಲ್ ಫ್ರೆಂಡ್ ನೆನಪಾಗಿದ್ದಾಳೆ.

    ಹಳೇ ಗರ್ಲ್ ಫ್ರೆಂಡ್ ಎಂದಾಕ್ಷಣಾ ಬೇರೆ ಇನ್ನೇನನ್ನೋ ಅರ್ಥೈಸಿಕೊಳ್ಳಬೇಡಿ. ಜಶ್ವಂತ್‍ಗೆ ಹಳೆ ನಂದಿನಿ ಬೇಕು ಎಂಬ ಹಂಬಲ ಹೆಚ್ಚಾಗಿದೆ. ಇಂದು ಬಿಗ್‍ಬಾಸ್ ಮನೆಯಲ್ಲಿ ಪ್ರತಿದಿನ ಅಡುಗೆ ಯಾರು ಮಾಡಬೇಕು ಎಂಬುದು ವೂಟ್‍ನಲ್ಲಿ ಜನರಿಂದ ಬಂದ ಉತ್ತರದ ಮೇಲೆಯೇ ನಿರ್ಧಾರವಾಗುತ್ತದೆ. ಅದರಂತೆ ಇಂದು ಅಡುಗೆ ಮಾಡುವ ಜವಾಬ್ದಾರಿ ನಂದಿನಿ ಅವರ ಮೇಲೆ ಬಂದಿದೆ. ಬಿಗ್‍ಬಾಸ್ ಸೂಚನೆಯಂತೆ ನಂದಿನಿ ಅನ್ನ, ಟೊಮೇಟೊ ಗೊಜ್ಜು ಮಾಡಿದ್ದಾಳೆ. ಎಲ್ಲರೂ ಖುಷಿಯಾಗಿ ತಿಂದಿದ್ದಾರೆ. ಕ್ಯಾಮೆರಾಗೆ ಖುಷಿಯಿಂದ ಹೇಳಿಕೊಂಡ ನಂದಿನಿ, ಮಮ್ಮಿ, ಪಪ್ಪಾ ನೋಡಿ ಇಲ್ಲಿ ನಾನು ಟೊಮೇಟೊ ಅನ್ನ ಮಾಡಿದ್ದೀನಿ. ಕರಿಬೇವಿನ ಸೊಪ್ಪನ್ನು ಸೀಯಿಸಿ ಬಿಟ್ಟಿದ್ದೀನಿ. ಸೋ ನಿಮ್ಮ ಮಗಳೇ ಎಂಬುದು ಅರ್ಥ ಆಯ್ತು ಎಂದಿದ್ದಾರೆ. ಇದನ್ನೂ ಓದಿ: ರಿಯಲ್ ಪ್ರೇಮಿಗಳು ‘ಬಿಗ್ ಬಾಸ್’ ಮನೆಯಲ್ಲಿ ಬೇರೆ ಬೇರೆ ಆಗ್ತಾರಾ?: ದೂರಾಗುವ ಕುರಿತು ಮಾತನಾಡಿದ ನಂದಿನಿ

    ಅದಕ್ಕೂ ಮುನ್ನ ಟೊಮೇಟೊ ಹಚ್ಚಿಕೊಡಲು ಜಶ್ವಂತ್ ಸಹಾಯ ಮಾಡಿದ್ದಾರೆ. ಈ ವೇಳೆ ಜಶ್ವಂತ್ ಕಡೆಯಿಂದ ಗಿಫ್ಟ್ ಹ್ಯಾಂಪರ್ ಎಂದು ಟೊಮೇಟೊದಲ್ಲಿ ಹಾರ್ಟ್ ಶೇಪ್ ಕೂರಿಸಿ ನಂದಿನಿಗೆ ಖುಷಿ ಕೊಟ್ಟಿದ್ದಾರೆ. ಆದರೆ ತಿನ್ನುವುದಕ್ಕೆ ಜಶ್ವಂತ್ ಬಂದಿದ್ದಾರೆ. ತಿಂಡಿ ಹೇಗಿದೆ ಅಂತ ಜಶ್ವಂತ್ ಹೇಳದೇ ಇರುವುದಕ್ಕೆ ನಂದಿನಿ ಬೇಸರ ಮಾಡಿಕೊಂಡಿದ್ದಾರೆ. ಆ ಮಧ್ಯೆ ಸಣ್ಣ ಚೇಷ್ಟೆಯ ಜಗಳವೂ ಆಗಿದೆ. ತಿಂಡಿ ತಿನ್ನುತ್ತಿದ್ದ ಜಶ್ವಂತ್ ಅನ್ನು ಹಗ್ ಮಾಡಲು ಬಂದಿದ್ದಾರೆ. ಆದರೆ ಜಶ್ವಂತ್ ಸರಿಯಾದ ಹಗ್ ಕೊಡದೇ ಇದ್ದಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾರೆ. ನೀನು ಹಗ್ ಬೇರೆಯವರ ಹತ್ತಿರವೇ ತೆಗೆದುಕೋ ಎಂದು ಮುಂದೆ ಸಾಗಿದ್ದಾರೆ.

    ನಂತರ ಕೂಡಲೇ ಅಲ್ಲಿಂದ ಎದ್ದು ಜಶ್ವಂತ್ ನಂದಿನಿಯನ್ನು ಸಮಾಧಾನ ಮಾಡಲು ಹೋಗಿ ವಿವರಣೆ ನೀಡಲು ಯತ್ನಿಸಿದಾಗ ನಂದಿನಿ ಕೂಡ ನಿನ್ನೆ ಆಗಿದ್ದನ್ನು ವಿವರಿಸಿದ್ದಾರೆ. ನಿನ್ನೆ ಹಗ್ ಮಾಡಲು ಬಂದರೆ ಹಗ್ ಕೊಡದೇ ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದೆ ಅದಕ್ಕೆ ನಂಗೆ ಬೇಸರ ಆಯ್ತು ಎಂದಿದ್ದಾರೆ. ಬಳಿಕ ಬೇಸರದಲ್ಲಿದ್ದ ನಂದಿನಿಯನ್ನು ಗಟ್ಟಿಯಾಗಿ ತಬ್ಬಿ ಸಮಾಧಾನ ಮಾಡಿದ್ದಾರೆ. ಚಿವುಟಿದ ನಂದಿನಿ ಅಲ್ಲಿಂದ ಮುಂದೆ ಸಾಗಿದ್ದಾರೆ. ನಂದಿನಿ ಚಿವುಟಿದ ನೋವು ಹಾಗೆ ಇದ್ದಿದ್ದರಿಂದ ಕೆರೆದುಕೊಂಡು ಕುಳಿತಿದ್ದ ಜಶು, ಸೋಮಣ್ಣ ಬಂದ ಮೇಲೆ ನಂಗೆ ಹಳೇ ಗರ್ಲ್ ಫ್ರೆಂಡ್ ಬೇಕು ಎಂದಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್: ಸೋನು ಶ್ರೀನಿವಾಸ್ ಗೌಡಗೆ ಜೈಲು ಫಿಕ್ಸ್

    ಯಾಕೆಂದರೆ ನಂದಿನಿ ಅಲ್ಲಿಂದ ಹೋಗುವಾಗ ಚಮಕಾಯಿಸುವಂತೆ ಹೋಗಿದ್ದಾರೆ. ಆದರೆ ಆ ಸ್ಟೈಲ್ ರೂಪೇಶ್ ನದ್ದಾಗಿತ್ತು. ಇದು ಜಶ್ವಂತ್‍ಗೆ ಉರಿದಿದೆ. ಅಯ್ಯೋ ರೂಪೇಶ್ ಯಾಕೆ. ಅದು ಅವನೇ ಮಾಡುವುದು ಎಂದಿದ್ದಾನೆ. ಅದಕ್ಕೆ ನಂದು ಅದು ರೂಪೇಶ್ ರೀತಿ ಅಲ್ಲ ಎಂದು ಹೇಳಿ ಹೋಗುತ್ತಾರೆ. ಅಲ್ಲಿಗೆ ಬಂದ ಸೋಮಣ್ಣನ ಬಳಿ ಜಶ್ವಂತ್ ತನ್ನ ಕಷ್ಟ ಹೇಳಿಕೊಂಡಿದ್ದಾರೆ. ರೂಪೇಶ್ ಮತ್ತು ನಂದು ಚಿಲ್ ಮಾಡುತ್ತಾರಲ್ವಾ. ಈಗ ನಂದು ಸ್ವಲ್ಪ ರೂಪೇಶ್ ಥರನೇ ಮಾಡುವುದು. ನಂಗೆ ಏನಪ್ಪ ಇದು ಅಂತ ಇಷ್ಟ ಆಗುತ್ತಿಲ್ಲ. ಆಕ್ಚುಲಿ ನಂದು ಕ್ಯೂಟ್ ಆಗಿ ಇದು ಅದು ಮಾಡುತ್ತಾಳೆ. ಆದರೆ ಈಗ ರೂಪೇಶ್ ಥರ ಇದು ಅದು ಮಾಡುತ್ತಾಳೆ. ನಂಗೆ ನನ್ನ ಗರ್ಲ್ ಫ್ರೆಂಡ್ ವಾಪಾಸ್ ಬೇಕು ಎಂದು ಬೇಜಾರು ಮಾಡಿಕೊಂಡು ನಂದು ಮಾಡಿದ ತಿಂಡಿ ತಿಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಲಭೆಕೋರರಿಗೆ ಜಮೀರ್ ಸಹಾಯ – ಅವರಿಗೆ ಮರ್ಯಾದೆ ಇಲ್ಲ: ಸೋಮಣ್ಣ

    ಗಲಭೆಕೋರರಿಗೆ ಜಮೀರ್ ಸಹಾಯ – ಅವರಿಗೆ ಮರ್ಯಾದೆ ಇಲ್ಲ: ಸೋಮಣ್ಣ

    ಚಾಮರಾಜನಗರ: ಹುಬ್ಬಳ್ಳಿ ಗಲಭೆಕೋರರ ಕುಟುಂಬಸ್ಥರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಸಹಾಯ ಹಸ್ತ ಚಾಚಲು ಮುಂದಾಗಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅವರಿಗೆ ಮರ್ಯಾದೆಯೂ ಇಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಕಿಡಿಕಾರಿದ್ದಾರೆ.

    ಚಾಮರಾಜನಗರದ ಕನಕಗಿರಿಯಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಕಾನೂನು ಎಲ್ಲದಕ್ಕೂ ಉತ್ತರ ಕೊಡುತ್ತದೆ. ಅವರು ಈ ದೇಶದಲ್ಲಿ ಇರಲು ಎಷ್ಟು ಅರ್ಹರು ಎಂದು ಯೋಚಿಸಬೇಕಾಗುತ್ತದೆ. ಗಲಭೆಕೋರರ ಕುಟುಂಬಕ್ಕೆ ಫುಡ್‌ಕಿಟ್ ಹಂಚಿದವರಿಗೆ ಒಳ್ಳೆಯದಾಗಲಿ ಎಂದು ವ್ಯಂಗವಾಡಿದರು. ಇದನ್ನೂ ಓದಿ: ಮಂಡ್ಯದಲ್ಲಿ ಶತಾಯ ಗತಾಯ ಕಮಲ ಅರಳಿಸಲು ಬಿಜೆಪಿ ಪ್ಲಾನ್ – ಲಕ್ಷ್ಮೀ ಅಶ್ವಿನ್ ಗೌಡಗೆ ಗಾಳ

    ಗೃಹಮಂತ್ರಿ ರಾಜೀನಾಮೆ ನೀಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ ಒಂದು ವರ್ಷ ಇದೆ. ಹೀಗಾಗಿ ಅವರು ಸುಮ್ಮನೇ ಏನೇನೋ ಹೇಳುತ್ತಿರುತ್ತಾರೆ. ಅವರ ಆರೋಪಕ್ಕೆ ಈಗಾಗಲೇ ಉತ್ತರ ನೀಡಲಾಗಿದೆ. ಅಕ್ರಮ ನಡೆದಿರುವ ವಿಚಾರ ತಿಳಿದ ತಕ್ಷಣ ವಿಚಾರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ಇದನ್ನೂ ಓದಿ: ಆ್ಯಸಿಡ್ ದಾಳಿ ಮಾಡಿ, ಅಮಾನುಷ ಕೃತ್ಯ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ಖಚಿತ: ಸುಧಾಕರ್