Tag: Somanna

  • ಸಿದ್ದರಾಮಯ್ಯ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು, ಈಗ ಮರೆವು ಜಾಸ್ತಿಯಾಗಿದೆ: ಸೋಮಣ್ಣ

    ಸಿದ್ದರಾಮಯ್ಯ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು, ಈಗ ಮರೆವು ಜಾಸ್ತಿಯಾಗಿದೆ: ಸೋಮಣ್ಣ

    ಬಾಗಲಕೋಟೆ: ಸಿದ್ದರಾಮಯ್ಯ (Siddaramaiah) ಹಾಗೂ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು. ಈಗ ಅವರು ಏನು ಮಾತನಾಡುತ್ತಾರೋ ಎನ್ನುವುದು ಅವರಿಗೆ ಗೊತ್ತಿಲ್ಲ. ಸಿದ್ದರಾಮಯ್ಯನವರಿಗೆ ಈಗ ಮರೆವು ಜಾಸ್ತಿಯಾಗಿದೆ ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ (V Somanna) ಹೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಸಿದ್ದರಾಮಯ್ಯನವರು ಏನಾದರೂ ಕೇಳಿದರೆ ಹಾಂ ಅಂತಾರೆ. ಮರೆವಿನಲ್ಲಿ ಇನ್ಯಾರನ್ನೋ ತೃಪ್ತಿ ಪಡಿಸಲು ಹೋಗಿ ಏನೋ ಹೇಳುತ್ತಾರೆ. ನನ್ನನ್ನು ಎಲ್ಲಿ ತೆಗೆದುಬಿಡುತ್ತಾರೋ ಅಂದುಕೊಂಡು ಏನೇನೋ ಮಾತನಾಡುತ್ತಾರೆ ಎಂದರು. ಇದನ್ನೂ ಓದಿ: ಅತ್ಯಾಚಾರ ಕೇಸ್‌ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್‌

     

    ನಾನು ಸಿದ್ದರಾಮಯ್ಯ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವತ್ತಿನ ಸಿದ್ದರಾಮಯ್ಯನೇ ಬೇರೆ‌ ಇವತ್ತಿನ ಸಿದ್ದರಾಮಯ್ಯನೆ ಬೇರೆ. ನಾವೆಲ್ಲ ಈ ದೇಶದ ಮಣ್ಣಿನ ಮಕ್ಕಳು. ಭಾರತ ದೇಶಕ್ಕೆ ಸಣ್ಣ ಅಪಚಾರ ಮಾಡಿದರೂ ಭಾರತಾಂಬೆ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿಂಧೂರ ಅಳಿಸಲು ಹೊರಟವರನ್ನ ಮಣ್ಣಿನಲ್ಲಿ ಹೂತಿದ್ದೇವೆ: ಮೋದಿ

    ಮೋದಿ ಆಪರೇಷನ್ ಸಿಂಧೂರ (Operation Sindoor) ವಿಚಾರದಲ್ಲಿ ಕೈಗೊಂಡ ‌ತೀರ್ಮಾನಕ್ಕೆ ನಾವು ತಲೆ ಬಾಗಬೇಕು. ತಲೆಬಾಗದೇ ಇದ್ದರೆ ಬಾಕಿದ್ದನ್ನು ನೀವೇ ತೀರ್ಮಾನ ಮಾಡಿ. ಮೋದಿ (Modi) ತೆಗೆದುಕೊಂಡ ತೀರ್ಮಾನಕ್ಕೆ ಅಪಚಾರ ಮಾಡುವುನ್ನು ಬಿಡಿ. ಕೈ ಬಿಡದೇ ಇದ್ದರೆ ಮುಂದೆ ಯಾರು ನಿಮ್ಮನ್ನು ಮೂಸುವವರು ಇಲ್ಲ. ಇಲ್ಲ ನಿಮಗೆ ಮಾರ್ಕೆಟ್‌ ಇಲ್ಲ ಎಂದರು.

  • ಬೆಂಗಳೂರಿಗೆ ಕುರುಬೂರು ಶಾಂತಕುಮಾರ್ ಶಿಫ್ಟ್ ಮಾಡಲು ಸೋಮಣ್ಣ ಪ್ರಯತ್ನ

    ಬೆಂಗಳೂರಿಗೆ ಕುರುಬೂರು ಶಾಂತಕುಮಾರ್ ಶಿಫ್ಟ್ ಮಾಡಲು ಸೋಮಣ್ಣ ಪ್ರಯತ್ನ

    ನವದೆಹಲಿ: ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shanthakumar) ಅವರನ್ನು ಬೆಂಗಳೂರಿಗೆ (Bengaluru) ಶಿಫ್ಟ್ ಮಾಡಲು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ (V Somanna) ಪ್ರಯತ್ನ ನಡೆಸುತ್ತಿದ್ದಾರೆ.

    ಅಪಘಾತದಲ್ಲಿ (Accident) ಬೆನ್ನುಮೂಳೆಗೆ ತೀವ್ರಗಾಯವಾಗಿದ್ದು ಕುರುಬೂರು ಶಾಂತಕುಮಾರ್ ಅವರು ಪಂಜಾಬ್‌ನ ಪಟಿಯಾಲ ರಾಜೇಂದ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬೆಂಗಳೂರಿಗೆ ಏರ್‌ಲಿಫ್ಟ್‌ (Airlift) ಮಾಡುವ ಸಂಬಂಧ ಪಟಿಯಾಲ ಜಿಲ್ಲೆಯ ಡಿಸಿ ಜೊತೆ ಸಚಿವ ಸೋಮಣ್ಣ ಮಾತನಾಡಿದ್ದಾರೆ. ಬೆಂಗಳೂರಿನಲ್ಲೇ ಚಿಕಿತ್ಸೆ ಕೊಡಿಸುವ ಸಂಬಂಧ ಶಾಂತಕುಮಾರ್ ಜೊತೆ ಮೂರು ಬಾರಿ ಸೋಮಣ್ಣ ಮಾತನಾಡಿದ್ದಾರೆ.  ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ

    ಕರ್ನಾಟಕದ ರೈತ ಮುಖಂಡನಾಗಿ ಹಲವು ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಕುರುಬೂರು ಶಾಂತಕುಮಾರ್ ಪಂಜಾಬ್‌ನಲ್ಲಿ ಆಯೋಜನೆಗೊಂಡಿದ್ದ ರೈತ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಗೆ ತೆರಳಿದ್ದರು.

    ದೆಹಲಿಯಿಂದ ಪಂಜಾಬ್ ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಎಸ್ಕಾರ್ಟ್ ವಾಹನ ಜೊತೆ ತೆರಳುತ್ತಿದ್ದ ವೇಳೆ ಮುಂದಿನ ವಾಹನ ಅಪಘಾತಕ್ಕೀಡಾಗಿದೆ. ಹೀಗಾಗಿ ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಪರಿಣಾಮ ಹಿಂದಿನಿಂದ ಬರುತ್ತಿದ್ದ 5ಕ್ಕೂ ಹೆಚ್ಚು ಕಾರುಗಳು ಏಕಕಾಲಕ್ಕೆ ಸರಣಿ ಅಪಘಾತಕ್ಕೀಡಾಗಿತ್ತು.

    ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಕಳೆದ ಒಂದು ವರ್ಷದಿಂದ ಕನೋಲಿ ಬಾರ್ಡರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಂತಕುಮಾರ್ ಅವರು ಶುಕ್ರವಾರ ಸಭೆಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿತ್ತು.

     

  • 39 ಸಾವಿರ ಕೋಟಿ ಅನುದಾನದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕೆಲಸ ಆರಂಭ: ಸೋಮಣ್ಣ

    39 ಸಾವಿರ ಕೋಟಿ ಅನುದಾನದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕೆಲಸ ಆರಂಭ: ಸೋಮಣ್ಣ

    – ಸಿದ್ದರಾಮಯ್ಯರನ್ನು ಯಾರಾದ್ರೂ ಮುಟ್ಟೋಕೆ ಆಗುತ್ತಾ?

    ಬೆಳಗಾವಿ: ಬೆಂಗಳೂರಿಗೆ ನೀಡಿದಷ್ಟು ಬೆಳಗಾವಿಗೂ (Belagavi) ಹೆಚ್ಚಿನ ಆದ್ಯತೆ ಕೊಡುತ್ತೇವೆ. ಬೆಳಗಾವಿ ಸೇರಿ ರಾಜ್ಯಾದ್ಯಂತ 39 ಸಾವಿರ ಕೋಟಿ ರೂ. ಅನುದಾನದಲ್ಲಿ ರೈಲ್ವೆ ಕಾಮಗಾರಿಗಳ (Railway Works) ಕೆಲಸ ಆರಂಭಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ (Somanna) ತಿಳಿಸಿದರು.

    ಬೆಳಗಾವಿ-ಧಾರವಾಡ (Belagavi-Dharawada) ನೇರ ರೈಲ್ವೆ ಮಾರ್ಗ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗ ದಿ. ಸುರೇಶ್‌ ಅಂಗಡಿ (Suresh Angadi) ಅವರ ಕನಸಾಗಿದೆ. ರೈಲು ಹಳಿ ನಿರ್ಮಾಣಕ್ಕೆ ಒಟ್ಟು 888 ಎಕರೆ ಜಮೀನು ಬೇಕಾಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ 660 ಎಕರೆ, ಧಾರವಾಡದಲ್ಲಿ 228 ಎಕರೆ ಜಮೀನು ಬೇಕು. 446 ಎಕರೆ ಜಮೀನನ್ನು ಮುಂದಿನ ತಿಂಗಳು ಹಸ್ತಾಂತರ ಮಾಡುವ ಬಗ್ಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ‌ ಮಾರ್ಗ ಸುಮಾರು 73 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಧಾರವಾಡದ ಕ್ಯಾರಕೊಪ್ಪದಿಂದ ಬೆಳಗಾವಿ ದೇಸೂರದವರೆಗೆ ರೈಲು ಹಳಿ ಮಾಡುವ ಗುರಿ ಇದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅಭಿವೃದ್ಧಿ ಮಾಡಬಹುದು. ಜಿಲ್ಲಾಧಿಕಾರಿಗಳು ಒಂದು ವರ್ಷದ ಕೆಲಸವನ್ನು ಒಂದು ತಿಂಗಳಲ್ಲಿ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ್ರಾ ಯೋಗೇಶ್ವರ್‌?

    ಜನವರಿ, ಫೆಬ್ರುವರಿಯಲ್ಲಿ ಭೂಸ್ವಾಧೀನಪಡಿಸಿಕೊಂಡು ಕಾಮಗಾರಿ ಆರಂಭಿಸುತ್ತೇವೆ. ಬೆಳಗಾವಿ ಧಾರವಾಡ ರೈಲು ಮಾರ್ಗವನ್ನು 18 ರಿಂದ 20 ತಿಂಗಳಲ್ಲಿ ಕೆಲಸ ಮುಗಿಸಲಾಗುವುದು. ಜಿಲ್ಲಾಧಿಕಾರಿಗಳು ಜೊತೆ ಸೇರಿಕೊಂಡು ಕೆಲಸ ಮಾಡುವಂತೆ ನಮ್ಮ ಅಧಿಕಾರಿಗಳಿಗೆ ತಿಳಿಸುತ್ತೇನೆ. ಇನ್ನು ರಾಜ್ಯದಲ್ಲಿ 11 ಯೋಜನೆಗಳು ಬಾಕಿ ಇದ್ದವು. ಅದರಲ್ಲಿ 9 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. 39 ಸಾವಿರ ಕೋಟಿ ಅನುದಾನ ಒದಗಿಸಿದ್ದೇವೆ. ಐವತ್ತು ವರ್ಷದಲ್ಲಿ ಆಗದೇ ಇರುವ ಕೆಲಸಗಳು ಈ ಹತ್ತು ವರ್ಷದಲ್ಲಿ ಮಾಡಿದ್ದೇವೆ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.

    ಧಾರವಾಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜೊತೆಗೂ ಮಾತಾಡಿದ್ದೇನೆ. 950 ಕೋಟಿ ರೂ. ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಜಂಟಿ ಸರ್ವೇ, ಗಡಿ ನಿಗದಿಯಾಗಿದೆ. ಸ್ಟೇಶನ್ ಗಳನ್ನು ಎಲ್ಲೆಲ್ಲಿ ನಿರ್ಮಿಸಬೇಕು ಎಂಬ ಬಗ್ಗೆಯೂ ಚರ್ಚಿಸಲಾಗಿದೆ. ಬೆಳಗಾವಿಯ ತಾಲೂಕಿನ ಕೆಕೆಕೊಪ್ಪ, ಬಡಾಲ ಅಂಕಲಗಿ, ನಾಗೇನಟ್ಟಿ, ನಂದಿಹಳ್ಳಿ, ಗರ್ಲಗುಂಜಿ ಸೇರಿ ಮತ್ತಿತರ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಮೀನು ತೆಗೆದುಕೊಳ್ಳುವ ಕೆಲಸ‌ ಡಿಸಿ ಮಾಡಿದ್ದಾರೆ. ಅಲ್ಲದೇ ಬೆಳಗಾವಿ ಹೃದಯ ಭಾಗದಲ್ಲಿ 11ನೇ ಕ್ರಾಸ್ ನಲ್ಲಿ‌ 6 ಆರ್‌.ಒ.ಬಿ ಮತ್ತು ಆರ್.ಯು.ಬಿ. ತೆರೆಯಲು ನಿರ್ಧರಿಸಲಾಗಿದ್ದು, ಒಟ್ಟಾರೆ ಬೆಳಗಾವಿಗೆ ಪ್ರಧಾನಿ ಮೋದಿ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದು ಸೋಮಣ್ಣ ಹೇಳಿದರು.

     

    ರಾಯಚೂರು, ಯಾದಗಿರಿ, ಕುಡಚಿ ಸೇರಿ ಹಲವು ಕಡೆ ಕೆಲಸ ಆರಂಭಿಸಿದ್ದೇವೆ‌. ಯೋಜನೆಗಳನ್ನು ರೂಪಿಸಲು ಜಾಗ ಬೇಕು. ನೀವು ಜಾಗ ಕೊಟ್ಟರೆ ನಾವು ಕೆಲಸ ಮಾಡುತ್ತೇವೆ. ಜಾಗ ಸಿಗಲಿಲ್ಲ ಎಂದರೆ ಯೋಜನೆ ಯೋಜನಗೆಳಾಗಿ ಉಳಿಯುತ್ತವೆ. ಅವಶ್ಯಕತೆ ಇರುವ ಕೆಲಸಗಳಿಗೆ ಆದ್ಯತೆ ಕೊಡುತ್ತೇನೆ. ಲೋಕಾಪೂರ ರಾಮದುರ್ಗ ರೈಲು, ಸವದತ್ತಿ ಯಲ್ಲಮ್ಮಗುಡ್ಡ ರೈಲು ಯೋಜನೆ ಕುರಿತು ಪರಿಶೀಲಿಸುತ್ತೇವೆ ಎಂದರು.

    ಮುಟ್ಟೋಕೆ ಆಗುತ್ತಾ?
    ಸಿದ್ದರಾಮಯ್ಯರನ್ನು (Siddaramaiah) ಯಾರಾದ್ರೂ ಮುಟ್ಟೋಕೆ ಆಗುತ್ತಾ? ಯಾರಾದ್ರು ಸಿಎಂ ಅವರನ್ನು ಮುಟ್ಟಿದ್ರೆ ಪೊಲೀಸರು ಕೇಸ್ ಹಾಕುತ್ತಾರೆ ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ (Somanna) ವ್ಯಂಗ್ಯವಾಡಿದರು. ನನನ್ನು ಮುಟ್ಟಿದ್ರೆ ರಾಜ್ಯದ ಜನ ಸುಮ್ನೆ ಬಿಡಲ್ಲ ಎಂಬ ಸಿಎಂ ಹೇಳಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಸಿದ್ದರಾಮಯ್ಯ ಅನುಭವಿ ರಾಜಕಾರಣಿ. ಅವರು ಏನ್ ಮಾತಾಡ್ತಾರೆ ಎನ್ನುವುದು ಅವರಿಗೆ ಬಿಡುತ್ತೇನೆ. ಅವರನ್ನು ಯಾರು ಮುಟ್ಟುವುದು ಬೇಡ. ಸಾಮಾನ್ಯ ಜನರ ಭಾವನೆಗೆ ತದ್ವಿರುದ್ಧವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ರಾಜ್ಯ ಸರ್ಕಾರದ ಕಾರ್ಯ ವೈಖರಿ ಸರಿಯಿಲ್ಲ ಎಂದು ದೂರಿದರು.

     

  • ದೀಪಾವಳಿಗೆ ರಾಜ್ಯದಲ್ಲಿ ವಿಶೇಷ ರೈಲು ಸಂಚಾರ: ಸೋಮಣ್ಣ

    ದೀಪಾವಳಿಗೆ ರಾಜ್ಯದಲ್ಲಿ ವಿಶೇಷ ರೈಲು ಸಂಚಾರ: ಸೋಮಣ್ಣ

    ಬೆಂಗಳೂರು: ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಜಾಸ್ತಿ ಇರಲಿರುವುದರಿಂದ ಅಕ್ಟೋಬರ್ 31 ರಿಂದ ನವೆಂಬರ್ 2 ವರೆಗೆ ರಾಜ್ಯದ್ಯಂತ ವಿಶೇಷ ರೈಲುಗಳು ಸಂಚರಿಸಲಿವೆ.

    ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಚನ್ನಪಟ್ಟಣ ಕ್ಷೇತ್ರವನ್ನು ಯೋಗೇಶ್ವರ್‌ಗೆ ಬಿಟ್ಟುಕೊಡಬೇಕು: ಸಿಪಿವೈ ಪರ ಮುನಿಸ್ವಾಮಿ ಬ್ಯಾಟಿಂಗ್

    ಪೋಸ್ಟ್‌ನಲ್ಲಿ ಏನಿದೆ?
    ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಜನದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕಾಗಿ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಇದೇ ಅಕ್ಟೋಬರ್ 31 ರಿಂದ ನವೆಂಬರ್ 2 ವರೆಗೆ ರಾಜ್ಯದಾದ್ಯಂತ ವಿಶೇಷ ರೈಲುಗಳು ಸಂಚರಿಸಲಿವೆ.

    ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಾದ ಬೆಳಗಾವಿಯಿಂದ ಮೀರಜ್, ಬೆಂಗಳೂರಿನಿಂದ ಬೆಳಗಾವಿ, ಮೈಸೂರಿನಿಂದ ವಿಜಯಪುರದವರೆಗೆ ಹಾಗೂ ವಿಸ್ತರಿತ ರೈಲ್ವೆ ಮಾರ್ಗ ಹುಬ್ಬಳ್ಳಿಯಿಂದ ರಾಮೇಶ್ವರಂ ಹಾಗೂ ಋಷಿಕೇಶದಿಂದ ಹುಬ್ಬಳ್ಳಿವರೆಗೆ ವಿಶೇಷ ರೈಲುಗಳು ಸಂಚರಿಸಲಿವೆ.

    ಪ್ರಯಾಣಿಕರಿಗೆ ಉತ್ತಮ ಸಂಚಾರದ ವ್ಯವಸ್ಥೆ ಕಲ್ಪಿಸಲು ಭಾರತೀಯ ರೈಲ್ವೆ ಒಟ್ಟು 34 ವಿಶೇಷ ರೈಲುಗಳ ವ್ಯವಸ್ಥೆಮಾಡಿದೆ. ಸಾರ್ವಜನಿಕರು ಈ ವಿಶೇಷ ರೈಲುಗಳ ಸೌಲಭ್ಯ ಪಡೆದುಕೊಳ್ಳಿ, ನಿಮ್ಮ ಹಬ್ಬದ ಸಂಭ್ರಮ ಇಮ್ಮಡಿಯಾಗಲಿ ಎಂದು ಪ್ರಾರ್ಥಿಸುತ್ತೇನೆ.

     

  • ಜೆಡಿಎಸ್‌, ಬಿಜೆಪಿ ಕಾರ್ಯಕರ್ತರು ಒಂದೇ ನಾಣ್ಯದ ಎರಡು ಮುಖಗಳ ರೀತಿ ಕೆಲಸ ಮಾಡಿದ್ದಾರೆ: ಸೋಮಣ್ಣ

    ಜೆಡಿಎಸ್‌, ಬಿಜೆಪಿ ಕಾರ್ಯಕರ್ತರು ಒಂದೇ ನಾಣ್ಯದ ಎರಡು ಮುಖಗಳ ರೀತಿ ಕೆಲಸ ಮಾಡಿದ್ದಾರೆ: ಸೋಮಣ್ಣ

    ಮೈಸೂರು: ಜೆಡಿಎಸ್, ಬಿಜೆಪಿ (JDS, BJP) ಕಾರ್ಯಕರ್ತರು ಒಂದು ನಾಣ್ಯದ ಎರಡು ಮುಖಗಳ ರೀತಿ ಕೆಲಸ ಮಾಡಿದ್ದಾರೆ. 28 ಕ್ಷೇತ್ರದಲ್ಲೂ ಆ ಸಮನ್ವಯತೆ ಇತ್ತು ಎಂದು ತುಮಕೂರಿನ (Tumakuru) ಸಂಸದ ವಿ ಸೋಮಣ್ಣ (V Somanna) ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತುಮಕೂರು ಕ್ಷೇತ್ರದಲ್ಲಿ ಬಿಜೆಪಿಗಿಂತಲೂ ಜೆಡಿಎಸ್‌ನವರು ಹೆಚ್ಚಿನದಾಗಿ ಕೆಲಸ ಮಾಡಿದ್ದಾರೆ. ದೇವೇಗೌಡರು (Devegowda),  ಕುಮಾರಸ್ವಾಮಿ (Kumaraswamy) ನಾಲ್ಕೈದು ಬಾರಿ ಬಂದು ನನಗೆ ದೊಡ್ಡ ಶಕ್ತಿ ನೀಡಿದರು. ಅವರಿಗೆ ನಾನು ಯಾವತ್ತು ಖುಣಿಯಾಗಿದ್ದೇನೆ ಎಂದರು.  ಇದನ್ನೂ ಓದಿ: ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ನಿತೀಶ್‌ ಕುಮಾರ್‌, ತೇಜಸ್ವಿ ಯಾದವ್‌

     

    ಜೆಡಿಎಸ್ ಮತ್ತು ಬಿಜೆಪಿಯ ಈ ಸಮನ್ವಯತೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲೂ ಇದೇ ರೀತಿ ಮುಂದುವರೆಯುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಹನ್ನೊಂದು ತಿಂಗಳು ಒಂದು ರೀತಿ ವನವಾಸದಲ್ಲಿದೆ. ಸದಾ ಕೆಲಸ ಮಾಡುವವನಿಗೆ ಕೆಲಸವೇ ಇಲ್ಲದಂತಾಗಿತ್ತು. ಈಗ ಅದು ಮುಕ್ತಯವಾಗಿದೆ ಎಂದು ತಿಳಿಸಿದರು.

    ತುಮಕೂರಿನ ಜನ ನಾನು ಹೊರಗಿನವನು ಎಂದು ಒಂದು ಕ್ಷಣವೂ ಅಂದುಕೊಳ್ಳಲಿಲ್ಲ. ಯಾರೋ ನಾಲ್ಕು ಜನ ನಾಯಕರು ಮಾತನಾಡಿದರು ತಲೆ ಕಡೆಸಿಕೊಳ್ಳಲಿಲ್ಲ. ಎರಡು ಲಕ್ಷದ ಲೀಡ್ ನೀರಿಕ್ಷೆ ಮಾಡಿದ್ದೆ. ಆದರೆ 20 ಸಾವಿರ ಕಡಿಮೆಯಾಗಿದೆ ಎಂದರು. ಇದನ್ನೂ ಓದಿ: ಎಂದಿನಂತೆ ಪ್ರಯತ್ನ ಮುಂದುವರೆಯಲಿದೆ- ಪತ್ನಿ ಸೋಲಿನ ಬಳಿಕ ಶಿವಣ್ಣ ರಿಯಾಕ್ಷನ್

     

  • ಪತ್ನಿ ಸೇರಿ ಒಟ್ಟು 60.78 ಕೋಟಿ ರೂ. ಆಸ್ತಿ ಘೋಷಿಸಿದ ಸೋಮಣ್ಣ

    ಪತ್ನಿ ಸೇರಿ ಒಟ್ಟು 60.78 ಕೋಟಿ ರೂ. ಆಸ್ತಿ ಘೋಷಿಸಿದ ಸೋಮಣ್ಣ

    ತುಮಕೂರು: ಬಿಜೆಪಿ (BJP) ಅಭ್ಯರ್ಥಿಯಾಗಿ ತುಮಕೂರಿನಿಂದ (Tumakuru) ಸ್ಪರ್ಧಿಸುತ್ತಿರುವ ಸೋಮಣ್ಣ (Somanna) ಅವರು ಪತ್ನಿ ಶೈಲಜಾ ಆಸ್ತಿ ಸೇರಿ ಒಟ್ಟು 60.78 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿದ್ದಾರೆ.

    ಇಂದು ಸೋಮಣ್ಣ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮೊದಲ ಸೆಟ್‌ ನಾಮಪತ್ರ (Nomination) ಸಲ್ಲಿಕೆ ಮಾಡಿದರು. ಇಂದು ಮೊದಲ ಸೆಟ್ ನಾಮಪತ್ರ ಸಲ್ಲಿಸಿದ ಸೋಮಣ್ಣ ಏ.3 ರಂದು ಮೆರವಣಿಗೆ ಮೂಲಕ ಬಂದು ಇನ್ನೊಂದು ಸೆಟ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಸುರೇಶ್ ಗೌಡ ಸೋಮಣ್ಣಗೆ ಸಾಥ್ ನೀಡಿದರು.

    ಸೋಮಣ್ಣ ಮತ್ತು ಪತ್ನಿ ಶೈಲಜಾ ಅವರು ಬಾಡಿಗೆ ಆದಾಯ, ಠೇವಣಿಗೆ ಬಡ್ಡಿ, ಆಸ್ತಿ ಮಾರಾಟ, ಕೃಷಿ ಆದಾಯ ತನ್ನ ಆದಾಯದ ಮೂಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಕೇಂದ್ರದಿಂದ ಬಿಗ್‌ ರಿಲೀಫ್‌ – ಚುನಾವಣೆ ಮುಗಿಯವರೆಗೂ ತೆರಿಗೆ ವಸೂಲಿ ಇಲ್ಲ


    ಸೋಮಣ್ಣ ಆಸ್ತಿ ಎಷ್ಟಿದೆ?
    ಕೈಯಲ್ಲಿರುವ ನಗದು – 8,12,563 ರೂ.
    ಚರಾಸ್ತಿ – 5,18,23,590 ರೂ.
    ಸ್ಥಿರಾಸ್ತಿ – 12,56,00,000 ರೂ.
    ಸಾಲ – 6,44,52,206 ರೂ.
    ಚಿನ್ನ, ಬೆಳ್ಳಿ ಆಭರಣ – 10,35,000 ರೂ. ಇದನ್ನೂ ಓದಿ: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ಸಂಸದ ದಿಲೀಪ್ ಘೋಷ್, ಕಾಂಗ್ರೆಸ್‌ನ ಸುಪ್ರಿಯಾಗೆ ಚು‌ನಾವಣಾ ಆಯೋಗ ಛೀಮಾರಿ

    ಸೋಮಣ್ಣ ಪತ್ನಿ ಶೈಲಜಾ ಆಸ್ತಿ ಎಷ್ಟಿದೆ?
    ಚರಾಸ್ತಿ – 4,38,81,625 ರೂ.
    ಸ್ಥಿರಾಸ್ಥಿ – 38,65,00,000 ರೂ.
    ಸಾಲ – 16,18,48,255 ರೂ.
    ಚಿನ್ನ, ಬೆಳ್ಳಿ, ಆಭರಣ – 1,05,64,689 ರೂ.

  • ತುಮಕೂರಿನಲ್ಲಿ ಸೋಮಣ್ಣ ಮತ್ತಷ್ಟು ಸಕ್ರಿಯ – ಬಹಿರಂಗವಾಗಿ ಕಾಣಿಸದ ಮುದ್ದಹನುಮೇಗೌಡ

    ತುಮಕೂರಿನಲ್ಲಿ ಸೋಮಣ್ಣ ಮತ್ತಷ್ಟು ಸಕ್ರಿಯ – ಬಹಿರಂಗವಾಗಿ ಕಾಣಿಸದ ಮುದ್ದಹನುಮೇಗೌಡ

    ತುಮಕೂರು: ಲೋಕಸಭಾ ಚುನಾವಣೆಗೆ (Lok Sabha Election) ಅಭ್ಯರ್ಥಿಗಳ ಬಿಜೆಪಿ (BJP) ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ತುಮಕೂರು (Tumakuru) ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸೋಮಣ್ಣ (Somanna) ಮತ್ತಷ್ಟು ಸಕ್ರಿಯವಾದರೆ ಅತ್ತ ಕಾಂಗ್ರೆಸ್‌ಗೆ ಸೇರಿದರೂ ಮುದ್ದಹನುಮೇಗೌಡ (Muddahanumegowda) ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

    ತುಮಕೂರು ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ವಿ.ಸೋಮಣ್ಣ ಮತ್ತಷ್ಟು ಇನ್ನಷ್ಟು ಚಟುವಟಿಕೆ ಆರಂಭಿಸಿದ್ದು ಭಾನುವಾರ ಯಡಿಯೂರಪ್ಪ (Yediyurappa) ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ.  ಇದನ್ನೂ ಓದಿ: ರಾಜ್ಯ ಬಿಜೆಪಿಯಿಂದ 15+ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರು ಫೈನಲ್

    ಭೇಟಿ ವೇಳೆ ತುಮಕೂರು ಜಿಲ್ಲೆಯಲ್ಲಿರುವ ತಮ್ಮ ಬೆಂಬಲಿಗರಿಗೆ ಕರೆ ಮಾಡುವಂತೆ ಬಿಎಸ್‌ವೈ ಬಳಿ ಸೋಮಣ್ಣ ಮನವಿ ಮಾಡಿದ್ದಾರೆ. ಯಡಿಯೂರಪ್ಪರು ಗ್ರೀನ್ ಸಿಗ್ನಲ್ ತೋರಿಸಿದರೆ ಮಾತ್ರ ಕೆಲ ಬಿಜೆಪಿ ನಾಯಕರು ಸೋಮಣ್ಣ ಅವರನ್ನು ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಸೋಮಣ್ಣ ಮೊದಲು ಬಿಎಸ್‌ವೈ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಸಂದರ್ಭದಲ್ಲಿ ಸಂಸದ ಜಿ.ಎಸ್.ಬಸವರಾಜು ಕೂಡ ಹಾಜರಿದ್ದು ಸೋಮಣ್ಣ ಅವರಿಗೆ ಟಿಕೆಟ್ ಕೊಡಬೇಕು ಎಂದು ಬಿಎಸ್‌ವೈ ಬಳಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: BJP Lok Sabha Candidates: ಮೊದಲ ಪಟ್ಟಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸೀಟು?

    ಅತ್ತ ಕಾಂಗ್ರೆಸ್‌ನಲ್ಲೂ (Congress) ಕೂಡ ಭಿನ್ನ ವಿಭಿನ್ನ ಚಟುವಟಿಕೆ ಶುರುವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿದರೂ ಮಾಜಿ ಸಂಸದ ಮುದ್ದಹನುಮೇಗೌಡ ಬಹಿರಂಗವಾಗಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಪಕ್ಷ ಸೇರ್ಪಡೆಗೊಂಡರೂ ಟಿಕೆಟ್ ಅಧಿಕೃತವಾಗಿಲ್ಲ ಎಂಬ ಆತಂದಲ್ಲಿ ಮುದ್ದಹನುಮೇಗೌಡರಿದ್ದಾರೆ. ಇನ್ನೊಂದೆಡೆ ಸಚಿವ ಜಿ.ಪರಮೇಶ್ವರ ಆಪ್ತ ಮುರುಳೀಧರ್ ಹಾಲಪ್ಪ ತಮಗೆ ಟಿಕೆಟ್ ಸಿಗಲಿದೆ ಎಂಬ ಅಚಲ ವಿಶ್ವಾಸದಿಂದ ಪ್ರಚಾರ ಆರಂಭಿಸಿದ್ದಾರೆ. ಎಲ್ಲಾ ಸಮುದಾಯದವರನ್ನು ಸೇರಿಸಿ ಸಭೆ ಸಮಾರಂಭ ಆರಂಭಿಸಿದ್ದಾರೆ. ಆದರೆ ಮುದ್ದಹನುಮೇಗೌಡರು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

     

    ಈ ಕುರಿತು ಮಾತನಾಡಿದ ಮುರುಳೀಧರ್ ಹಾಲಪ್ಪ, ಮುದ್ದಹನುಮೇಗೌಡರು ಟಿಕೆಟ್ ಬೇಕು ಎಂಬ ಷರತ್ತಿನೊಂದಿಗೆ ಪಕ್ಷಕ್ಕೆ ಬಂದಿಲ್ಲ. ಯಾರೂ ಬಂದರೂ ಪಕ್ಷಕ್ಕೆ ಒಂದು ಮತವಾದರೂ ಹೆಚ್ಚಾಗುತ್ತದಲ್ವಾ? ಎಂದು ಹೇಳುವ ಮೂಲಕ ತಮಗೆ ಟಿಕೆಟ್ ಎಂದು ಸೂಚ್ಯವಾಗಿ ಹೇಳಿದ್ದಾರೆ.

    ಬಿಜೆಪಿಯಲ್ಲಿ ಸ್ಥಳೀಯ ಮತ್ತು ವಲಸಿಗ ಅಸ್ತ್ರಗಳ ಸೆಣಸಾಟ ಜೋರಾದರೆ ಕಾಂಗ್ರೆಸ್‌ನಲ್ಲೂ ಅನುಕೂಲಸಿಂಧು ರಾಜಕಾರಣ ಹಾಗೂ ಪಕ್ಷ ನಿಷ್ಠ ರಾಜಕಾರಣ ನಡುವೆ ಪೈಪೋಟಿ ನಡೆಯುತ್ತಿದೆ.

     

  • ಬಿಎಸ್‍ವೈ ಭೇಟಿ ವೇಳೆ ಟಿಕೆಟ್ ವಿಚಾರ ಚರ್ಚಿಸಿಯೇ ಇಲ್ಲ.. ಮೋದಿ ಮತ್ತೆ ಪ್ರಧಾನಿ ಆಗ್ಬೇಕು, ಅದಕ್ಕಾಗಿ ಬದ್ಧ: ಸೋಮಣ್ಣ

    ಬಿಎಸ್‍ವೈ ಭೇಟಿ ವೇಳೆ ಟಿಕೆಟ್ ವಿಚಾರ ಚರ್ಚಿಸಿಯೇ ಇಲ್ಲ.. ಮೋದಿ ಮತ್ತೆ ಪ್ರಧಾನಿ ಆಗ್ಬೇಕು, ಅದಕ್ಕಾಗಿ ಬದ್ಧ: ಸೋಮಣ್ಣ

    ಬೆಂಗಳೂರು: ಲೋಕಸಭಾ ಚುನಾವಣೆ (General Elections 2024) ಹೊಸ್ತಿಲಲ್ಲಿ ಮಾಜಿ ಸಚಿವ ಸೋಮಣ್ಣ (Somanna), ಮಾಜಿ ಸಿಎಂ ಯಡಿಯೂರಪ್ಪ (B. S. Yediyurappa) ಅವರನ್ನು ಭೇಟಿಯಾಗಿದ್ದಾರೆ. ಸುಮಾರು ನಾಲ್ಕು ವರ್ಷಗಳ ಬಳಿಕ ಅವರು ಬಿಎಸ್‍ವೈ ಅವರನ್ನು ಭೇಟಿಯಾಗಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

    ಬಿಎಸ್‍ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಟಿಕೆಟ್ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ದೇಶದ ಜನರ ಅಭಿಪ್ರಾಯ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಎಲ್ಲವೂ ರಾಷ್ಟ್ರದ ಅಭಿವೃದ್ಧಿಗಾಗಿ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಾಂಬ್‌ ಸ್ಫೋಟ ಪ್ರಕರಣದ ಪೂರ್ಣ ಸತ್ಯ ಹೊರಬರಲಿ – ಸಿಎಂ ಸೂಚನೆ

    ಕರ್ನಾಟಕದ ಕೆಲವೊಂದು ಕಹಿ ಘಟನೆ ನೋಡಿದರೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಅಗತ್ಯದ ಬಗ್ಗೆ ಮಾತುಕತೆ ನಡೆದಿದೆ. ತುಮಕೂರು ಕ್ಷೇತ್ರದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಈ ಹಿಂದೆ ನಾನೂ ಆಕಾಂಕ್ಷಿ ಎಂದಿದ್ದೆ. ಅದೆಲ್ಲ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿ ಮುಂದುವರೆಯುತ್ತದೆ ಎಂದಿದ್ದಾರೆ.

    ಜೆಡಿಎಸ್‍ನಿಂದ ಸ್ಪರ್ಧೆ ವಿಚಾರ ಊಹಾಪೋಹ. ಅಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ. ನಾವ್ಯಾರೂ ದೊಡ್ಡವರಲ್ಲ, ರಾಜಕೀಯದಲ್ಲಿ ಆರೇಳು ಸಿಎಂ ಜೊತೆ ಕೆಲಸ ಮಾಡಿದ್ದೇನೆ. 45 ವರ್ಷಗಳಿಂದ ಮಣ್ಣು ಹೊತ್ತಿದ್ದೇನೆ. ಇದೆಲ್ಲಕ್ಕಿಂತ ದೇಶ ಮುಖ್ಯ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಮೊದಲ ಪಟ್ಟಿಯಲ್ಲಿ ಕರ್ನಾಟಕಕ್ಕೆ ಕೊಕ್‌ – ಆಕಾಂಕ್ಷಿಗಳಲ್ಲಿ ನಿರಾಸೆ

  • ಲೋಕಸಭೆ ಟಿಕೆಟ್‍ಗಾಗಿ ಸೋಮಣ್ಣ ಲಾಬಿ- ಬುಧವಾರ ಅಮಿತ್ ಶಾ ಭೇಟಿ

    ಲೋಕಸಭೆ ಟಿಕೆಟ್‍ಗಾಗಿ ಸೋಮಣ್ಣ ಲಾಬಿ- ಬುಧವಾರ ಅಮಿತ್ ಶಾ ಭೇಟಿ

    ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Vidhanasabha Election) ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಸೋಲು ಕಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ಆರಂಭಿಸಿದ್ದು, ಈ ಸಂಬಂಧ ಹೈಕಮಾಂಡ್ ಚರ್ಚಿಸಲು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಬುಧವಾರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amitshah) ಭೇಟಿಯಾಗುವ ಸಾಧ್ಯತೆಗಳಿದೆ.

    ಸೋಮವಾರ ರಾತ್ರಿ ದೆಹಲಿಗೆ ಆಗಮಿಸಿದ ವಿ.ಸೋಮಣ್ಣ (V Somanna) ಮಂಗಳವಾರ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಉದ್ದೇಶ ಪೂರ್ವಕವಾಗಿ ಸೋಲಿಸುವ ಯತ್ನ ಆಗಿದೆ. ಕುತಂತ್ರದ ಕಾರಣಗಳಿಂದ ನಾನು ಸೋಲು ಕಂಡಿದ್ದೇನೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಂವಿಧಾನದ ತಿದ್ದುಪಡಿ ಮಾಡಿ 224 ಕ್ಷೇತ್ರಗಳಲ್ಲೂ ಸಿಎಂ, ಡಿಸಿಎಂ ಘೋಷಿಸಿ – ಈಶ್ವರಪ್ಪ ಲೇವಡಿ

    ಈ ನಡುವೆ ಸೋಮಣ್ಣ ಅವರಿಗೆ ತುಮಕೂರು ಟಿಕೆಟ್ ಕೊಡಿಸಲು ಸಂಸದ ಬಸವರಾಜು ಪ್ರಯತ್ನ ಮಾಡುತ್ತಿದ್ದಾರೆ. ಲಿಂಗಾಯತ ನಾಯಕರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿರುವ ಸಂಸದ ಬಸವರಾಜು, ಸೋಮಣ್ಣ ಪರ ಬ್ಯಾಟ್ ಬೀಸುತ್ತಿದ್ದಾರೆ. ತಮ್ಮ ಬದಲಿಗೆ ವಿ.ಸೋಮಣ್ಣ ಅವರಿಗೆ ಟಿಕೇಟ್ ನೀಡುವಂತೆ ಅಮಿತ್ ಶಾ ಅವರಿಗೂ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

  • ದೇವೇಗೌಡರ ಮೂಲಕ ಟಿಕೆಟ್‌ ಲಾಬಿ – ಬಿಜೆಪಿ ನಾಯಕರ ಭೇಟಿ ರಹಸ್ಯ ಏನು?

    ದೇವೇಗೌಡರ ಮೂಲಕ ಟಿಕೆಟ್‌ ಲಾಬಿ – ಬಿಜೆಪಿ ನಾಯಕರ ಭೇಟಿ ರಹಸ್ಯ ಏನು?

    ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋತ ಬಿಜೆಪಿ ನಾಯಕರು ಲೋಕಸಭೆ ಚುನಾವಣೆಗೆ (Lok Sabha Election) ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರ (Devegowda) ಮೂಲಕ ಹೈಕಮಾಂಡ್ (BJP High Command) ಬಳಿ ಟಿಕೆಟ್ ಲಾಬಿ ಮಾಡಲು ಪ್ಲ್ಯಾನ್‌ ನಡೆಸಿದ್ದಾರೆ ಎನ್ನಲಾಗುತ್ತಿದೆ.

    ಮಾಜಿ ಸಚಿವ ಸೋಮಣ್ಣ (V Somanna) ಸಿಟಿ ರವಿ (CT Ravi), ದೇವೇಗೌಡರು ಹಾಗೂ ಕುಮಾರಸ್ವಾಮಿಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸೋಲಿನ ಹತಾಶೆಯಿಂದ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಬಂದಿರುವ ಸೋಮಣ್ಣ ದೇವೇಗೌಡರ ಮೂಲಕ ಬಿಜೆಪಿ ಹೈಕಮಾಂಡ್ ಬಳಿ ಟಿಕೆಟ್ ಗಿಟ್ಟಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ.

     

    ಭೇಟಿಯ ರಹಸ್ಯ ಏನು?
    ತುಮಕೂರು, ಬೆಂಗಳೂರು ಉತ್ತರದ ಮೇಲೆ ಸೋಮಣ್ಣ, ಸಿ.ಟಿ ರವಿ ಕಣ್ಣು ಇಟ್ಟಿದ್ದು ಈ ಎರಡು ಕ್ಷೇತ್ರಗಳು ಒಕ್ಕಲಿಗ ಪ್ರಾಬಲ್ಯ ಇರುವ ಕ್ಷೇತ್ರಗಳಾಗಿವೆ.  ಇದನ್ನೂ ಓದಿ: ಇನ್ಮುಂದೆ ಮದುವೆ, ಪ್ರವಾಸಕ್ಕೆ ಸಿಗಲಿದೆ ಬಿಎಂಟಿಸಿ ಬಸ್ – ಯಾವ್ಯಾವ ಬಸ್‍ಗೆ ಎಷ್ಟು ರೇಟ್?

    ತುಮಕೂರು, ಬೆಂಗಳೂರು ಉತ್ತರದಲ್ಲಿ ಗೆಲುವು ಸಾಧಿಸಬೇಕಾದರೆ ಜೆಡಿಎಸ್ ಬೆಂಬಲ ಬೇಕೇ ಬೇಕು. ಬಿಜೆಪಿ ಹೈಕಮಾಂಡ್ ಜೊತೆ ದೇವೇಗೌಡರು, ಹೆಚ್‌ಡಿಕೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ದೇವೇಗೌಡರ ಮಾತನ್ನು ಮೋದಿ, ಅಮಿತ್ ಶಾ ತಳ್ಳಿ ಹಾಕುವುದಿಲ್ಲ. ಈ ಕಾರಣಕ್ಕೆ ಇಬ್ಬರು ನಾಯಕರು ಜೆಡಿಎಸ್‌ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.