Tag: Somalingaswamiji

  • ಸಂತೋಷ್ ಆತ್ಮಹತ್ಯೆ ಮಾಡ್ಕೋಳ್ಳೋದಿದ್ರೆ ತಮ್ಮ ಜಿಲ್ಲೆಯಲ್ಲೇ ಮಾಡ್ಕೋಬೇಕಿತ್ತು: ಸೋಮಲಿಂಗ ಸ್ವಾಮೀಜಿ

    ಸಂತೋಷ್ ಆತ್ಮಹತ್ಯೆ ಮಾಡ್ಕೋಳ್ಳೋದಿದ್ರೆ ತಮ್ಮ ಜಿಲ್ಲೆಯಲ್ಲೇ ಮಾಡ್ಕೋಬೇಕಿತ್ತು: ಸೋಮಲಿಂಗ ಸ್ವಾಮೀಜಿ

    ವಿಜಯಪುರ: ಇದು ಈಶ್ವರಪ್ಪ ವಿರುದ್ಧ ನಡೆದಿರುವ ಷಡ್ಯಂತ್ರ. ಗುತ್ತಿಗೆದಾರ ಸಂತೋಷ್ ನಮ್ಮ ನೆರೆಯ ಜಿಲ್ಲೆಯ ವ್ಯಕ್ತಿ. ಆತ್ಮಹತ್ಯೆ ಮಾಡ್ಕೋಳ್ಳೋದಾಗಿದ್ರೆ, ತಮ್ಮ ಜಿಲ್ಲೆಯಲ್ಲೇ ಮಾಡ್ಕೋಬೇಕಿತ್ತು ಎಂದು ಹೇಳುವ ಮೂಲಕ ಮಖಣಾಪೂರದ ಸೋಮಲಿಂಗ ಸ್ವಾಮೀಜಿ ಈಶ್ವರಪ್ಪ ಪರ ಬ್ಯಾಟ್ ಬೀಸಿದ್ದಾರೆ.

    Eshwarappa

    ಈಶ್ವರಪ್ಪ ಅವರು ಕಳೆದ 40 ವರ್ಷಗಳಿಂದ ರಾಜಕಾರಣದಲ್ಲಿದ್ದವರು, ಈಶ್ವರಪ್ಪ ಸಾಹೇಬರು ಅಂಥವರಲ್ಲ. ಅಂಥವರಲ್ಲ. ಅವರು ತಪ್ಪು ಮಾಡೋಕೆ ಸಾಧ್ಯವಿಲ್ಲ. ಇದು ಈಶ್ವರಪ್ಪ ವಿರುದ್ಧ ನಡೆದ ಷಡ್ಯಂತ್ರ. ಇಂಥ ಷಡ್ಯಂತ್ರ ನಡೆಯುತ್ತೆ ಅನ್ನೋದನ್ನ ಕನಸು ಮನಸಿನಲ್ಲೂ ಊಹಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪನಿಗೆ ಸೆಟಲ್ಮೆಂಟ್ ಮಾಡುತ್ತೇನೆ ಎಂದು ಮಹಾನಾಯಕ ಈ ಹಿಂದೆ ಸವಾಲು ಹಾಕಿದ್ದರು: ಬಿಜೆಪಿ

    ಸಂತೋಷ್ ಜೀವಂತವಾಗಿದ್ದು ಹೋರಾಡಬೇಕಿತ್ತು. ಅನ್ಯಾಯ ಹೇಳಿಕೊಂಡಿದ್ದರೆ ತಪ್ಪು ಒಪ್ಪು ಗೊತ್ತಾಗುತ್ತಿತ್ತು. ಸತ್ತ ವ್ಯಕ್ತಿಯ ಸುತ್ತ ಸಾವಿರಾರು ಪ್ರಶ್ನೆಗಳು ಎದ್ದಿವೆ. ಇದರಲ್ಲಿ ಯಾರ್ಯಾರು ತಮ್ಮ ಬೇಲೆ ಬೇಯಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಸಂತೋಷ್ ನಮ್ಮ ನೆರೆಯ ಜಿಲ್ಲೆಯವರೇ ಏನು ನೊಂದುಕೊಂಡಿದ್ದಾನೋ? ಏನಾಯ್ತೋ ದೇವರಿಗೆ ಗೊತ್ತು. ಒಂದು ವೇಳೆ ಆತ್ಮಹತ್ಯೆ ಮಾಡಿಕೊಳ್ಳೋದೆ ಆಗಿದ್ರೆ ತಮ್ಮ ಜಿಲ್ಲೆಯಲ್ಲೇ ಮಾಡಿಕೊಳ್ಳಬೇಕಿತ್ತು. ಅನ್ಯ ಜಿಲ್ಲೆಯಲ್ಲಿ ಮಾಡಿಕೊಂಡಿರೋದು. ಇದರಲ್ಲಿ ಅನುಮಾನವೂ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾವಿನ ಮನೇಲಿ ರಾಜಕಾರಣ ಮಾಡೋ ಅನಿವಾರ್ಯ ಅರುಣ್ ಸಿಂಗ್ ಅವರಿಗಿದೆ, ನಮಗಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

    ಕಾಗೆ ಕೂರೋದಕ್ಕು ಟೊಂಗೆ ಮುರಿಯೋದಕ್ಕೂ ಒಂದೇ ಅನ್ನೋ ಹಾಗೇ ಈಶ್ವರಪ್ಪರ ತಲೆಗೆ ಬಂದಿದೆ. ಈಶ್ವರಪ್ಪ ಇಂಥ ತಪ್ಪು ಮಾಡಿರೋಕೆ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.