Tag: Somalia

  • ಗುಜರಾತ್‌ ಕಡಲ ತೀರದಲ್ಲಿ ಸೊಮಾಲಿಯಕ್ಕೆ ಹೊರಡಬೇಕಿದ್ದ ಹಡಗಿಗೆ ಬೆಂಕಿ – ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಗುಜರಾತ್‌ ಕಡಲ ತೀರದಲ್ಲಿ ಸೊಮಾಲಿಯಕ್ಕೆ ಹೊರಡಬೇಕಿದ್ದ ಹಡಗಿಗೆ ಬೆಂಕಿ – ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಗಾಂಧಿನಗರ: ಗುಜರಾತ್ (Gujarat) ಪೋರ್‌ಬಂದರ್‌ನ (Porbandar) ಸುಭಾಷ್‍ನಗರ ಜೆಟ್ಟಿಯಲ್ಲಿ ಲಂಗರು ಹಾಕಿದ್ದ ಸೊಮಾಲಿಯಕ್ಕೆ (Somalia) ಸರಕು ಸಾಗಿಸುವ ಹಡಗಿಗೆ (Fire Accident) ಬೆಂಕಿ ಹೊತ್ತಿಕೊಂಡಿದೆ.

    ಸೋಮವಾರ (ಸೆ.22) ಮುಂಜಾನೆ ಈ ಅವಘಡ ಸಂಭವಿಸಿದೆ. ಸಮುದ್ರದಲ್ಲಿ ನಿಂತಿದ್ದಾಗ ಬೆಂಕಿ ಹೊತ್ತಿದ್ದು, ಭಾರೀ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆ ಹಡಗನ್ನು ಆವರಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಡಗಿಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿ ದುರಂತ – 6 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

    ಬೆಂಕಿ ತೀವ್ರಗೊಳ್ಳುತ್ತಿದ್ದಂತೆ, ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಲಾಯಿತು. ನಂತರ ಅಧಿಕಾರಿಗಳು ಅಕ್ಕಪಕ್ಕದಲ್ಲಿದ್ದ ಬೇರೆ ಹಡಗುಗಳಿಗೆ ಬೆಂಕಿ ತಗಲುವುದನ್ನು ತಪ್ಪಿಸಲು, ಸಮುದ್ರದದ ಮಧ್ಯಕ್ಕೆ ಎಳೆದೊಯ್ದಿದ್ದಾರೆ. ಬಳಿಕ ಬೆಂಕಿ ನಂದಿಸಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳ ವರದಿಯಾಗಿಲ್ಲ. ಈ ಅವಘಡಕ್ಕೆ ಕಾರಣವೇನೆಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ.

    ಜಾಮ್‌ನಗರ ಮೂಲದ ಹೆಚ್‌ಆರ್‌ಎಂ & ಸನ್ಸ್ ಒಡೆತನದ ಈ ಹಡಗಿನಲ್ಲಿ ಅಕ್ಕಿ ಮತ್ತು ಸಕ್ಕರೆಯನ್ನು ಲೋಡ್‌ ಮಾಡಿ ಸೊಮಾಲಿಯಾದ ಬೊಸಾಸೊಗೆ ಕಳುಹಿಸಲಾಗುತ್ತಿತ್ತು. ಇದನ್ನೂ ಓದಿ: Kerala | ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿಗೆ ಬೆಂಕಿ

  • ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ – 32 ಮಂದಿ ಸಾವು

    ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ – 32 ಮಂದಿ ಸಾವು

    ಮೊಗಾದಿಶು: ಅಲ್‌-ಶಬಾಬ್‌ ಆತ್ಮಾಹುತಿ ಬಾಂಬರ್‌ ಮತ್ತು ಬಂದೂಕುಧಾರಿಗಳು ಸೊಮಾಲಿಯಾ (Somalia) ರಾಜಧಾನಿ ಮೊಗಾದಿಶುವಿನಲ್ಲಿ ನಡೆಸಿದ ದಾಳಿಯಲ್ಲಿ 32 ಮಂದಿ ಸಾವಿಗೀಡಾಗಿದ್ದಾರೆ.

    ಅಲ್‌ಖೈದಾ ಬೆಂಬಲಿತ ಜಿಹಾದಿಗಳು 17 ವರ್ಷಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬೆಂಬಲಿತ ಫೆಡರಲ್ ಸರ್ಕಾರದ ವಿರುದ್ಧ ದಂಗೆ ನಡೆಸುತ್ತಿದ್ದಾರೆ. ಜನಪ್ರಿಯವಾಗಿರುವ ಲಿಡೋ ಬೀಚ್ ಪ್ರದೇಶವನ್ನು ಗುರಿಯಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲಿನ ದಾಳಿಯ ಮಾಸ್ಟರ್‌ಮೈಂಡ್‌ ಮೊಹಮ್ಮದ್‌ ಡೀಫ್‌ ಹತ್ಯೆ

    ಈ ದಾಳಿಯಲ್ಲಿ 32 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಸುಮಾರು 63 ಜನರು ಗಾಯಗೊಂಡಿದ್ದಾರೆ. ಅವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದಾರೆ ಎಂದು ಪೊಲೀಸ್ ವಕ್ತಾರ ಅಬ್ದಿಫತಾ ಆದಾನ್ ಹಸನ್‌ ತಿಳಿಸಿದ್ದಾರೆ.

    ದಾಳಿ ಶುಕ್ರವಾರ ತಡರಾತ್ರಿ ನಡೆದಿದ್ದು, ಅಲ್‌-ಶಬಾಬ್‌ ಹೊಣೆಗಾರಿಕೆ ಹೊತ್ತುಕೊಂಡಿದೆ. ಆತ್ಮಹತ್ಯಾ ಬಾಂಬರ್ ಸಾಧನವನ್ನು ಸ್ಫೋಟಿಸಿದಾಗ, ಬಂದೂಕುಧಾರಿಗಳು ಈ ಪ್ರದೇಶಕ್ಕೆ ನುಗ್ಗಿದರು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಬರಿದಾಗ್ತಿದೆ ಆಮ್ಲಜನಕ.. ಜೀವಸಂಕುಲಕ್ಕೆ ಕಂಟಕ – ಭೂಮಿಯಲ್ಲಿ ಏನಾಗ್ತಿದೆ?

  • ಸೊಮಾಲಿಯಾ ಕಡಲ್ಗಳ್ಳರ ವಶವಾಗಿದ್ದ ಹಡಗು ಸೇಫ್‌ – ಭಾರತೀಯರು ಸೇರಿ 21 ಮಂದಿ ರಕ್ಷಣೆ

    ಸೊಮಾಲಿಯಾ ಕಡಲ್ಗಳ್ಳರ ವಶವಾಗಿದ್ದ ಹಡಗು ಸೇಫ್‌ – ಭಾರತೀಯರು ಸೇರಿ 21 ಮಂದಿ ರಕ್ಷಣೆ

    ನವದೆಹಲಿ: ಸೊಮಾಲಿಯಾದ ಕರಾವಳಿ ಬಳಿ ಅಪಹರಣವಾಗಿದ್ದ 15 ಭಾರತೀಯರಿದ್ದ ಸರಕು ಸಾಗಣೆ ಹಡಗು ‘ಎಂವಿ ಲೀಲಾ ನಾರ್ಫೋಕ್’ (MV LILA NORFOLK) ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ. 15 ಭಾರತೀಯರು ಸೇರಿದಂತೆ ಒಟ್ಟು 21 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೋಮಾಲಿಯಾ ಕರಾವಳಿಯ ಬಳಿ ಗುರುವಾರ ಸಂಜೆ 88,000 ಟನ್‌ಗಳಷ್ಟು ತೂಕದ ‘MV LILA NORFOLK’ ಎಂಬ ಸರಕು ಸಾಗಣೆ ಹಡಗನ್ನು ಅಪಹರಿಸಲಾಗಿತ್ತು. ಲೈಬೀರಿಯನ್‌ಗೆ ಸೇರಿದ ಈ ಹಡಗು ಬ್ರೆಜಿಲ್‌ನಿಂದ ಬಹ್ರೇನ್‌ ಕಡೆಗೆ ಹೊರಟ್ಟಿತ್ತು. ಹಡಗು ಅಪಹರಣ ಸುದ್ದಿ ತಿಳಿಯುತ್ತಲೇ ಭಾರತೀಯ ನೌಕಾಪಡೆ ಕಾರ್ಯಚರಣೆಗೆ ಇಳಿದಿತ್ತು. ಇದನ್ನೂ ಓದಿ: ನಾವು ಮಸೀದಿಗಳ ಮೇಲೆ ದೇವಾಲಯಗಳನ್ನ ನಿರ್ಮಿಸಲು ಬಯಸುವುದಿಲ್ಲ: ಓವೈಸಿಗೆ ಧೀರೇಂದ್ರ ಶಾಸ್ತ್ರಿ ಟಾಂಗ್

    ಭಾರತೀಯ ನೌಕಾಪಡೆಯು ಕಡಲ್ಗಳ್ಳರನ್ನು ಪತ್ತೆಹಚ್ಚಲು ಯುದ್ಧನೌಕೆಯನ್ನು (INS ಚೆನ್ನೈ) ಕಳುಹಿಸಿ ಸೂಕ್ಷ್ಮವಾಗಿ ನಿಗಾವಹಿಸಿತ್ತು. ಅಷ್ಟೇ ಅಲ್ಲದೇ ಕಡಲ ಗಸ್ತು ವಿಮಾನ, ಹೆಲಿಕಾಪ್ಟರ್‌ಗಳು ಹಾಗೂ P-81 ದೀರ್ಘಶ್ರೇಣಿಯ ವಿಮಾನಗಳು ಹಾಗೂ ಪ್ರಿಡೆಕ್ಟರ್‌ MQ9B ಡ್ರೋನ್‌ಗಳನ್ನು ನಿಯೋಜನೆ ಮಾಡಿತ್ತು. ಇದನ್ನೂ ಓದಿ: ಒಂದು ದೇಶ, ಒಂದು ಚುನಾವಣೆ – ಸಲಹೆ ನೀಡುವಂತೆ ಜನರಿಗೆ ಸಮಿತಿಯಿಂದ ಮನವಿ

    ಸತತ ಕಾರ್ಯಾಚರಣೆಯಿಂದಾಗಿ ಭಾರತೀಯ ನೌಕಾಪಡೆ ವಶವಾಗಿದ್ದ ಹಡಗನ್ನು ಪತ್ತೆಹಚ್ಚಲಾಗಿದ್ದು, ಅದರಲ್ಲಿದ್ದ ಭಾರತೀಯರನ್ನೂ ರಕ್ಷಣೆ ಮಾಡಿದೆ. ಈ ಸಂದರ್ಭದಲ್ಲಿ ಅಲ್ಲಿ ಯಾವುದೇ ಹೈಜಾಕರ್‌ಗಳು ಅಲ್ಲಿರಲಿಲ್ಲ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ

  • ಜಗತ್ತಿನ ಅತ್ಯಂತ ಬಡರಾಷ್ಟ್ರ ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟವಾಗಿ 25 ಮಕ್ಕಳು ಸಾವು

    ಜಗತ್ತಿನ ಅತ್ಯಂತ ಬಡರಾಷ್ಟ್ರ ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟವಾಗಿ 25 ಮಕ್ಕಳು ಸಾವು

    ಮೊಗಡಿಶು: ಜಗತ್ತಿನ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾದ ಸೊಮಾಲಿಯಾದಲ್ಲಿ (Somalia) ಸ್ಫೋಟ ಸಂಭವಿಸಿದ್ದು, 25 ಮಕ್ಕಳು ಸೇರಿದಂತೆ 27 ಮಂದಿ ಸಾವಿಗೀಡಾಗಿದ್ದಾರೆ.

    ಪೂರ್ವ ಲೋವರ್ ಶಾಬೆಲ್ಲೆಯ ಜನಾಲೆ ಪ್ರದೇಶದ ಮುರಾಲೆ ಗ್ರಾಮದ ಫುಟ್ಬಾಲ್ ಮೈದಾನದಲ್ಲಿ ಸ್ಫೋಟ ಸಂಭವಿಸಿದೆ. ಹಳೆಯ ಬಾಂಬ್‌ನ ಅವಶೇಷಗಳು ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆ. ಸ್ಫೋಟದಲ್ಲಿ 53 ಮಕ್ಕಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಮನೆಯ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ರಹಸ್ಯ ದಾಖಲೆಗಳು

    ಕ್ರೊಯೊಲಿ ಪಟ್ಟಣದ ಉಪ ಜಿಲ್ಲಾಧಿಕಾರಿ ಅಬ್ದಿ ಅಹ್ಮದ್ ಅಲಿ, “ಹಳ್ಳಿಯ ತೆರೆದ ಮೈದಾನದಲ್ಲಿ ಮಕ್ಕಳು ಆಡುತ್ತಿದ್ದಾಗ ಬಾಂಬ್‌ಗಳು ಮತ್ತು ನೆಲಬಾಂಬ್‌ಗಳಂತಹ ಯುದ್ಧದ ಸ್ಫೋಟಕ ಅವಶೇಷಗಳು ಸ್ಫೋಟಿಸಿವೆ” ಎಂದು ತಿಳಿಸಿದ್ದಾರೆ.

    ಮೃತರ ಪೈಕಿ 22 ಮಕ್ಕಳ ಶವಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇನ್ನಿಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಾಗಲೇ ಅವರೂ ಕೊನೆಯುಸಿರೆಳೆದಿದ್ದರು. ಮೊಗಾದಿಶುಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಮತ್ತೊಂದು ಮಗು ಸಾವಿಗೀಡಾಗಿದೆ. ಇದನ್ನೂ ಓದಿ: ಕೊರೊನಾ ವೇಳೆ ಪಾರ್ಟಿ ಮಾಡಿ ಪಿಎಂ ಸ್ಥಾನ ಕಳೆದುಕೊಂಡಿದ್ದ ಬೋರಿಸ್ ಜಾನ್ಸನ್ ಬ್ರಿಟನ್ ಸಂಸತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ

  • ಅಮೆರಿಕ ಮಿಲಿಟರಿ ಪಡೆಯಿಂದ ವೈಮಾನಿಕ ದಾಳಿ – 30 ಉಗ್ರರ ಹತ್ಯೆ

    ಅಮೆರಿಕ ಮಿಲಿಟರಿ ಪಡೆಯಿಂದ ವೈಮಾನಿಕ ದಾಳಿ – 30 ಉಗ್ರರ ಹತ್ಯೆ

    ವಾಷಿಂಗ್ಟನ್: ಅಮೆರಿಕ (America) ಮಿಲಿಟರಿಯು ಶುಕ್ರವಾರ ವೈಮಾನಿಕ ದಾಳಿ ನಡೆಸಿದ್ದು, ಈ ವೇಳೆ 30 ಉಗ್ರರನ್ನು ಹತ್ಯೆಗೈದ ಘಟನೆ ಸೆಂಟ್ರಲ್ ಸೊಮಾಲಿಯಾದ (Somalia) ಗಾಲ್ಕಾಡ್ ಪಟ್ಟಣದ ಬಳಿ ನಡೆದಿದೆ.

    ಈ ಘಟನೆಯು ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಿಂದ 260 ಕಿ.ಮೀ ದೂರದಲ್ಲಿರುವ ಗಾಲ್ಕಾಡ್ ಬಳಿ ಸಂಭವಿಸಿದೆ. ಹತ್ಯೆಯಾದವರೆಲ್ಲರೂ ಇಸ್ಲಾಮಿಸ್ಟ್ ಅಲ್ ಶಬಾಬ್ (Al Shabaab) ಗುಂಪಿಗೆ ಸೇರಿದವರೆಂದು ಗುರುತಿಸಲಾಗಿದೆ.

    ಅಲ್- ಶಬಾಬ್ ಗುಂಪು ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದೆ. ಈ ಹಿನ್ನೆಲೆಯಲ್ಲಿ 100ಕ್ಕೂ ಅಧಿಕ ಅಲ್- ಶಬಾಬ್ ಹೋರಾಟಗಾರರು ಇದ್ದ ಗುಂಪಿನ ಮೇಲೆ ಅಮೆರಿಕ ಮಿಲಿಟರಿ ಪಡೆಗಳು ದಾಳಿಯನ್ನು ನಡೆಸಿದೆ.

    2022ರ ಮೇನಲ್ಲಿ ಉಗ್ರರ ಗುಂಪನ್ನು ಎದುರಿಸುವ ಪ್ರಯತ್ನದಲ್ಲಿ ಈ ಪ್ರದೇಶಕ್ಕೆ ಅಮೆರಿಕ ಪಡೆಗಳನ್ನು ಮರು ನಿಯೋಜಿಸಲು ಪೆಂಟಗನ್ ವಿನಂತಿಗೆ ಅಧ್ಯಕ್ಷ ಜೋ ಬೈಡನ್ ಅನುಮೋದನೆ ನೀಡಿದ್ದರು. ಅಂದಿನಿಂದಲೂ ಸೋಮಾಲಿಯಾ ಸರ್ಕಾರಕ್ಕೆ ಅಮೆರಿಕ ನಿರಂತರ ಬೆಂಬಲವನ್ನು ಒದಗಿಸುತ್ತಿದೆ. ಇದನ್ನೂ ಓದಿ: ಮತ್ತೆ ಪ್ರತಿಭಟನೆಗೆ ಮುಂದಾದ ಸಾರಿಗೆ ನೌಕರರು – ಮಂಗಳವಾರ ಬಸ್ ಸಂಚಾರದಲ್ಲಿ ವ್ಯತ್ಯಯ

    ಸೋಮಾಲಿಯಾವು ಎಲ್ಲಾ ಪೂರ್ವ ಆಫ್ರಿಕಾದಲ್ಲಿ ಸ್ಥಿರತೆ ಮತ್ತು ಭದ್ರತೆಗೆ ಕೇಂದ್ರವಾಗಿದೆ. ಅಮೆರಿಕ ಆಫ್ರಿಕಾ ಕಮಾಂಡ್‍ನ ಪಡೆಗಳು ಅಲ್-ಶಬಾಬ್ ಅನ್ನು ಸೋಲಿಸಲು ಅಗತ್ಯವಾದ ಯುದ್ಧ ಸಾಮಾಗ್ರಿಗಳನ್ನು ನೀಡಿ ಆ ಪಡೆಗಳಿಗೆ ತರಬೇತಿ, ಸಲಹೆ ನೀಡುತ್ತಿದೆ. ಇತ್ತೀಚಿನ ತಿಂಗಳಲ್ಲಿ ಅಮೆರಿಕ ಉಗ್ರರ ತಾಣದ ಹಲವು ಕಡೆ ದಾಳಿಯನ್ನು ನಡೆಸಿದೆ. ಈ ವೇಳೆ ಅನೇಕ ಉಗ್ರರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೂತ್ರ ವಿಸರ್ಜನೆ ಕೇಸ್‌ನಲ್ಲಿ ಪೈಲಟ್‌ ಬಲಿಪಶು – ಏರ್‌ ಇಂಡಿಯಾ ಪೈಲಟ್‌ ಒಕ್ಕೂಟ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೊಮಾಲಿಯಾದಲ್ಲಿ ಭೀಕರ ಕಾರು ಬಾಂಬ್ ಸ್ಫೋಟ – 100ಕ್ಕೂ ಹೆಚ್ಚು ಸಾವು

    ಸೊಮಾಲಿಯಾದಲ್ಲಿ ಭೀಕರ ಕಾರು ಬಾಂಬ್ ಸ್ಫೋಟ – 100ಕ್ಕೂ ಹೆಚ್ಚು ಸಾವು

    ಮೊಗಾದಿಶು: ಸೊಮಾಲಿಯಾದ (Somalia) ರಾಜಧಾನಿ ಮೊಗಾದಿಶುವಿನಲ್ಲಿ (Mogadishu) ಶನಿವಾರ ಭೀಕರವಾಗಿ 2 ಕಾರು ಬಾಂಬ್‌ಗಳು ಸ್ಫೋಟಗೊಂಡಿದ್ದು (Car Bomb Blast), ಘಟನೆಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಭಾನುವಾರ ಬೆಳಗ್ಗೆ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಶಾಲೆಯೊಂದನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ಮೂಲಭೂತವಾದಿ ಗುಂಪು ಅಲ್-ಶಬಾಬ್ ದಾಳಿ ನಡೆಸಿದೆ ಎನ್ನಲಾಗಿದೆ. ಅಲ್-ಶಬಾಬ್ ಭಯೋತ್ಪಾದಕರು ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿಕೊಂಡು 2 ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಸ್ಫೋಟ ಸಂಭವಿಸಿರುವುದರಿಂದ 100ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ. 2 ಸ್ಫೋಟಗಳು ಕೇವಲ 1 ನಿಮಿಷದ ಅಂತರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹ್ಯಾಲೋವೀನ್ ಹಬ್ಬದ ಸಂಭ್ರಮ – ಸಿಯೋಲ್‌ನಲ್ಲಿ ಕಾಲ್ತುಳಿಕ್ಕೆ 150 ಮಂದಿ ಬಲಿ

    2017ರಲ್ಲಿಯೂ ಇದೇ ನಗರದಲ್ಲಿ ಭೀಕರವಾದ ಸ್ಫೋಟ ಸಂಭವಿಸಿತ್ತು. ಹೊಟೇಲ್ ಒಂದರ ಹೊರಗಡೆ ಟ್ರಕ್‌ಗೆ ಬಾಂಬ್ ಅಳವಡಿಸಲಾಗಿದ್ದು, ಘಟನೆಯಲ್ಲಿ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮನ್ ಕಿ ಬಾತ್‍ನಲ್ಲಿ ಬೆಂಗಳೂರಿನ ಸುರೇಶ್ ಕುಮಾರ್​ರನ್ನು ಪ್ರಶಂಸಿಸಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ಮುಂಬೈ ತಾಜ್ ಹೋಟೆಲ್ ಮಾದರಿಯಲ್ಲೇ ಭೀಕರ ಗುಂಡಿನ ದಾಳಿ – 8 ನಾಗರಿಕರ ಬಲಿ

    ಮುಂಬೈ ತಾಜ್ ಹೋಟೆಲ್ ಮಾದರಿಯಲ್ಲೇ ಭೀಕರ ಗುಂಡಿನ ದಾಳಿ – 8 ನಾಗರಿಕರ ಬಲಿ

    ಮೊಗಾಡಿಶು: ಮುಂಬೈನ ತಾಜ್ ಹೋಟೆಲ್ ಅನ್ನು ಉಗ್ರರು ವಶಕ್ಕೆ ಪಡೆದು ಹತ್ಯಾಕಾಂಡ ನಡೆಸಿದ್ದ ಮಾದರಿಯಲ್ಲೇ ಸೊಮಾಲಿಯಾ ರಾಜಧಾನಿ ಮೊಗಾದಿಶುನಲ್ಲಿ ಗುಂಡಿನ ದಾಳಿ ಹಾಗೂ ಬಾಂಬ್ ಸ್ಫೋಟ ನಡೆದಿದೆ.

    ಅಲ್‌ಖೈದಾ ಜೊತೆಗೆ ನೇರ ಸಂಪರ್ಕ ಹೊಂದಿರುವ ಅಲ್-ಶಬಾಬ್ ಸಂಘಟನೆಯ ಉಗ್ರರು ಹೋಟೆಲ್ ಮೇಲೆ ದಾಳಿ ನಡೆಸಿದ್ದು, 8 ಮಂದಿ ನಾಗಕರಿಕರು ಬಲಿಯಾಗಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: 21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ

    ಅಲ್-ಶಬಾಬ್ ಭಯೋತ್ಪಾದಕ ಗುಂಪಿನ ಉಗ್ರರು ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ, ಮನಬಂದಂತೆ ಗುಂಡು ಹಾರಿಸಿದ್ದಾರೆ. ಇದರಿಂದ ಹಲವಾರು ಸಾವು-ನೋವುಗಳು ವರದಿಯಾಗಿವೆ. ಹೋಟೆಲ್ ಒಳಗೆ ಸ್ಫೋಟದ ಸದ್ದು ಕೂಡ ಕೇಳಿಬಂದಿದೆ. ದಾಳಿಯಲ್ಲಿ 8 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮಥುರಾ ದೇವಾಲಯದಲ್ಲಿ ಜನದಟ್ಟಣೆ – ಉಸಿರುಗಟ್ಟಿ ಇಬ್ಬರ ಸಾವು

    BOMB BLAST
    ಸಾಂದರ್ಭಿಕ ಚಿತ್ರ

    ಹಯಾತ್ ಹೋಟೆಲ್ ಮೇಲಿನ ದಾಳಿಯು ಭದ್ರತಾ ಪಡೆಗಳು ಮತ್ತು ಜಿಹಾದಿ ಗುಂಪಿನ ಬಂದೂಕುಧಾರಿಗಳ ನಡುವೆ ಭಾರೀ ಗುಂಡಿನ ಚಕಮಕಿ ಉಂಟುಮಾಡಿದೆ. ಉಗ್ರರು ಇನ್ನೂ ಕಟ್ಟಡದೊಳಗೆ ಅಡಗಿಕೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿ ಮೊಹಮ್ಮದ್ ಅಬ್ದಿಕದಿರ್ ಹಸನ್ ತಿಳಿಸಿದ್ದಾರೆ.

    ಈ ವರ್ಷದ ಮೇನಲ್ಲಿ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಅಧಿಕಾರ ವಹಿಸಿಕೊಂಡ ನಂತರ ಸೊಮಾಲಿಯಲ್ಲಿ ನಡೆದ ಮೊದಲ ದಾಳಿ ಇದಾಗಿದೆ.

    Live Tv
    [brid partner=56869869 player=32851 video=960834 autoplay=true]