Tag: Solution

  • ಟ್ರಾನ್ಸ್‌ಫಾರ್ಮರ್ ಸ್ಫೋಟ- ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದ ಸುನೀಲ್ ಕುಮಾರ್

    ಟ್ರಾನ್ಸ್‌ಫಾರ್ಮರ್ ಸ್ಫೋಟ- ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದ ಸುನೀಲ್ ಕುಮಾರ್

    ಬೆಂಗಳೂರು: ಟ್ರಾನ್ಸ್‌ಫಾರ್ಮರ್ ಸ್ಫೋಟದಿಂದ ಮೃತಪಟ್ಟವರ ಕುಟುಂಬಕ್ಕೆ ಇಂಧನ ಸಚಿವ ವಿ.ಸುನೀಲ್‍ಕುಮಾರ್ 20 ಲಕ್ಷ ರೂ. ಪರಿಹಾರವನ್ನು ಫೋಷಿಸಿದರು.

    ವಿಧಾನಸಭೆಯಲ್ಲಿ ಗುರುವಾರ ನಡೆದ ಶೂನ್ಯವೇಳೆಯಲ್ಲಿ, ಟ್ರಾನ್ಸ್‍ಫಾರ್ಮರ್ ದುರ್ಘಟನೆ ಬಗ್ಗೆ ಪ್ರಸ್ತಾಪಿಸಿ ಶಿವರಾಜ್ ಮತ್ತು ಪುತ್ರಿ ಚೈತನ್ಯ ಘಟನೆಯಿಂದ ಮೃತಪಟ್ಟಿರುವುದನ್ನು ವಿವರಿಸಿದರು.  ಇದನ್ನೂ ಓದಿ: ಮಂತ್ರಿ ಒಳಗೆ ಶುರು ಹಚ್ಕೊಂಡಿದ್ದ, ಬಾಗಿಲಲ್ಲಿ ಪೊಲೀಸರು ಇದ್ರು: ಅರಗ ಜ್ಞಾನೇಂದ್ರ

    ಟ್ರಾನ್ಸ್‌ಫಾರ್ಮರ್ ನಲ್ಲಿ ಲೀಡ್ ವಯರ್ ಸುಟ್ಟು ಆಯಿಲ್ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ. ಬೆಳಗ್ಗೆ 11:50ರ ವೇಳೆಗೆ ಟ್ರಾನ್ಸ್‍ಫಾರ್ಮರ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಮಾಹಿತಿ ಕೊಟ್ಟಿದ್ದಾರೆ. ಆದರೆ ಸಿಬ್ಬಂದಿ ಅದರ ಕಡೆ ಗಮನಹರಿಸದೆ ನಿರ್ಲಕ್ಷ್ಯ ಮಾಡಿದ್ದಾರೆ. ಪರಿಣಾಮ ಈ ದುರಂತ ನಡೆದಿದೆ. ಟ್ರಾನ್ಸ್‍ಫಾರ್ಮರ್ ಮಧ್ಯಾಹ್ನ 3:10ಕ್ಕೆ ಸ್ಫೋಟಗೊಂಡಿತು. ದುರದೃಷ್ಟವಶಾತ್ ಅದೇ ದಾರಿಯಲ್ಲಿ ಶಿವರಾಜ್ ಮತ್ತು ಚೈತನ್ಯ ಬರುತ್ತಿದ್ದರು. ಈ ವೇಳೆ ಬೆಂಕಿಗೆ ತಗುಲಿ ತಂದೆ-ಮಗಳು ಮೃತಪಟ್ಟಿದ್ದಾರೆ. ಇದಕ್ಕಾಗಿ ನಾನು ವಿಷಾದಿಸುತ್ತೇನೆ. ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ನಾವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು.

    ಇಂದು ಬೆಳಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದೇನೆ. 20 ಲಕ್ಷ ರೂ. ಪರಿಹಾರ ನೀಡಬೇಕೆಂದು ತಿರ್ಮಾನಿಸಿದ್ದೇವೆ. ಅಪಾಯದ ಸ್ಥಿತಿಯಲ್ಲಿರುವ ಟ್ರಾನ್ಸ್‍ಫಾರ್ಮರ್‌ ಗಳ ಆಡಿಟ್ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದೇವೆ ಎಂದು ವಿವರಿಸಿದರು. ಇದನ್ನೂ ಓದಿ:  ವಿಸ್ತಾರವಾದ, ಪ್ರತ್ಯೇಕವಾದ ನಿಲ್ಲುವವರೆಗೂ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಮುತಾಲಿಕ್

  • ಮೂರು ರಾಶಿಗೆ ಶನಿ ಪ್ರವೇಶ – ಶನಿಕಾಟದಿಂದ ಮುಕ್ತಿ ಪಡೆಯೋದು ಹೇಗೆ?

    ಮೂರು ರಾಶಿಗೆ ಶನಿ ಪ್ರವೇಶ – ಶನಿಕಾಟದಿಂದ ಮುಕ್ತಿ ಪಡೆಯೋದು ಹೇಗೆ?

    ಬೆಂಗಳೂರು: ಪ್ರಬಲ ಗ್ರಹವಾದ ಶನಿ ಇಂದು ಅಮಾವಾಸ್ಯೆಯ ದಿನ ಮಧ್ಯಾಹ್ನ 12.05ಕ್ಕೆ ಧನಸ್ಸು ರಾಶಿಯಿಂದ ಮಕರ ರಾಶಿಗೆ ಚಲಿಸಲಿದ್ದಾನೆ. ಶನಿ ಪಥ ಬದಲಾವಣೆ ಮನುಷ್ಯನ ಹನ್ನೆರಡು ರಾಶಿ- ನಕ್ಷತ್ರದ ಮೇಲೆ ಪರಿಣಾಮ ಬೀರಲಿದ್ದಾನೆ. ಇದನ್ನೂ ಓದಿ: 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಯಾವ ರಾಶಿಗೆ ಅದೃಷ್ಟ, ಯಾವ ರಾಶಿಗೆ ಕಾಟ..?

    ಅದರಲ್ಲೂ ಧನಸ್ಸು, ಮಕರ ಹಾಗೂ ಕುಂಭ ರಾಶಿಗೆ ಸಾಡೇ ಸಾತಿ ಶುರುವಾಗಲಿದೆ. ಶನಿ ಹೆಗಲೇರಲಿದ್ದಾನೆ, 2020 ರಿಂದ 2022 ರವರೆಗೆ ಶನಿಪ್ರಭಾವ ಇರಲಿದೆ. ಹಾಗಾಗಿ ಈ ಮೂರು ರಾಶಿಯವರ ಮೇಲಂತೂ ಶನಿ ಆಟ ಶುರುವಾಗಲಿದೆ. ಧನಸ್ಸು ರಾಶಿಯಿಂದ ಮಕರಕ್ಕೆ ಪ್ರವೇಶಿಸಲಿರುವ ಶನಿಯ ಪಥ ಬದಲಾವಣೆ ಕೆಲ ರಾಶಿಗಳ ಮೇಲಂತೂ ಗಾಢ ಪರಿಣಾಮ ಬೀರಲಿದೆ. ಕೆಲ ರಾಶಿಗೆ ಮಿಶ್ರಫಲ, ಇನ್ನೂ ಕೆಲ ರಾಶಿಯವರಿಗೆ ಶನಿ ಪಥ ಬದಲಾವಣೆ ಶುಭ ಫಲವನ್ನು ತರಲಿದೆ.

    ಪರಿಹಾರ: ಶನೇಶ್ಚರನ ಈ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಶನಿಕಾಟದಿಂದ ಮುಕ್ತಿ ಪಡೆಯಬಹುದು. ಶನಿಕಾಟದಿಂದ ಸಂಪೂರ್ಣ ಮುಕ್ತಿ ಹೊಂದುವುದು ಕಷ್ಟ. ಆದರೆ ಬೆಟ್ಟದಷ್ಟು ಬರುವ ಕಷ್ಟವನ್ನು ಕೊಂಚ ನಿವಾರಿಸಲು ಶಿವಸ್ಮರಣೆ, ಶಿವನ ಪೂಜೆ ಮಾಡಬೇಕು. ಬಡ ಬಗ್ಗರಿಗೆ, ದಾನ-ಧರ್ಮ ಮಾಡಿದರೆ ಶನಿಯನ್ನು ಸಂತೃಪ್ತಿಗೊಳಿಸಬಹುದು. ಶನಿವಾರ ಆಂಜನೇಯ ದರ್ಶನ, ಭಜರಂಗಿಗೆ ವಿಶೇಷ ಪೂಜೆ ಮಾಡಿದರೆ ಸಮಸ್ಯೆ ನೀಗಲಿದೆ. ಆಯಾಯ ನಕ್ಷತ್ರ ರಾಶಿಯವರಿಗೆ ಜ್ಯೋತಿಷಿಗಳ ಸಲಹೆ ಮೇರೆಗೆ ಶನಿದೋಷ ನಿವಾರಣೆಯ ಹೋಮ-ಹವನ ನಡೆಸಬೇಕಾಗುತ್ತೆ.

    ದೋಷವಿರುವ ರಾಶಿಗಳು ಮತ್ತು ಪರಿಹಾರ

    1. ವೃಶ್ಚಿಕ: ಸಾಡೇಸಾತಿ ಸಂಪೂರ್ಣ ಬಿಡುಗಡೆಯಾಗುವುದರಿಂದ ವಿಶೇಷವಾಗಿ ಶನೇಶ್ಚರಸ್ವಾಮಿಗೆ ಪಂಚಾಮೃತ ಅಭಿಷೇಕ, ತೈಲಾಭಿಷೇಕ, ಸಂಕಲ್ಪ ಹೋಮ, ಇತ್ಯಾದಿಗಳನ್ನು ಮಾಡಿಸುವುದರಿಂದ ಇನ್ನು 30 ವರ್ಷಕಾಲ ಶನೇಶ್ಚರ ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು.

    2. ಧನಸ್ಸು: ಸಾಡೇಸಾತಿ ಕೊನೆಯ ಹಂತವಾದ್ದರಿಂದ (ಎರಡೂವರೆ ವರ್ಷ) ಈ ದೋಷವಿರೋ ರಾಶಿಯವರು ಶನೇಶ್ಚರ ಸ್ವಾಮಿಗೆ ತೈಲಾಭಿಷೇಕ, ಸಂಕಲ್ಪ ಹೋಮ ಇತ್ಯಾದಿಗಳನ್ನು ಮಾಡಿಸಿದರೆ ಶತ್ರುಭಯ, ವಿದ್ಯಾಹೀನತೆ, ಗೃಹ ಕಲಹ, ದುಷ್ಟ ಮಿತ್ರರ ಸಹವಾಸ ಇತ್ಯಾದಿಗಳು ಪರಿಹಾರವಾಗುತ್ತೆ.

    3. ಮಕರ: ಜನ್ಮದಲ್ಲಿ ಎರಡೂವರೆ ವರ್ಷ ಶನಿ ನೆಲೆಸುವುದರಿಂದ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ ಜನ್ಮ ಶನಿ ಕಾಡುವಾಗ ಸುಳ್ಳು ಹೇಳುವಿಕೆ, ಮೋಸ, ವಂಚನೆ ಮಾಡುವ ಬುದ್ಧಿ, ಒರಟುತನ, ಚಂಚಲ ಬುದ್ಧಿ, ಅತಿಕೋಪ, ಕೆಟ್ಟ ಜನರ ಸಹವಾಸ ಮಾಡುವಂತಹ ಬುದ್ಧಿಯನ್ನು ಕೊಡುವುದರಿಂದ ತೈಲಾಭಿಷೇಕ ಮಾಡಿಸಿದರೆ ದೋಷಗಳಿಂದ ಮುಕ್ತರಾಗಬಹುದು.

    4. ಕುಂಭ: ಸಾಡೇಸಾತಿ ಪ್ರಾರಂಭವಾಗುವುದರಿಂದ ತೈಲಾಭಿಷೇಕ, ಸಂಕಲ್ಪ ಹೋಮ, ಪಂಚಾಮೃತ ಅಭಿಷೇಕ ಮುಂತಾದ ಕಾರ್ಯಗಳಲ್ಲಿ ಪಾಲ್ಗೊಂಡು ಶನಿ ದೋಷ ನಿವಾರಣೆ ಮಾಡಿಕೊಳ್ಳಬಹುದು.

    ಶನಿಯ ವಕ್ರದೃಷ್ಟಿ ಇದ್ದ ನಕ್ಷತ್ರ ರಾಶಿಯವರಿಗೆ ಈ ಶನಿಪಥ ಬದಲಾವಣೆ ದೊಡ್ಡ ಕಂಟಕವಾಗಲಿದೆ. ಯಾಕೆಂದರೆ ಶನಿಯ ಕಾಟ ಮಾತ್ರವಲ್ಲ ಶನಿಯ ತಂದೆ ಸೂರ್ಯನ ವಕ್ರದೃಷ್ಟಿಯೂ ಇರಲಿದೆ. ರಾಜಕೀಯಕ್ಕೆ ಅಧಿಪತಿಯಾದ ಸೂರ್ಯನ ವಕ್ರದೃಷ್ಟಿಯಿಂದ ಮಕರ, ಧನಸ್ಸು, ಕುಂಭ ರಾಶಿಯ ರಾಜಕೀಯದವರಿಗೆ ಈ ಬಾರಿ ಸಾಕಷ್ಟು ತೊಂದರೆ ಹಿನ್ನೆಡೆಯಾಗಲಿದೆ ಎಂದು ಜ್ಯೋತಿಷಿಗಳಾದ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ.

  • ಮಂಡ್ಯ ಬಸ್ ದುರಂತಕ್ಕೆ ಕೇಂದ್ರದ ಪರಿಹಾರ- ಶಿವರಾಮೇಗೌಡರಿಗೆ ಕ್ರೆಡಿಟ್ ನೀಡಿದ ಸಚಿವ ಪುಟ್ಟರಾಜು

    ಮಂಡ್ಯ ಬಸ್ ದುರಂತಕ್ಕೆ ಕೇಂದ್ರದ ಪರಿಹಾರ- ಶಿವರಾಮೇಗೌಡರಿಗೆ ಕ್ರೆಡಿಟ್ ನೀಡಿದ ಸಚಿವ ಪುಟ್ಟರಾಜು

    ಕೋಲಾರ: ಮಂಡ್ಯ ಬಸ್ ದುರಂತಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬಂದ ಕ್ರೆಡಿಟ್ ಮಾಜಿ ಸಂಸದ ಶಿವರಾಮೇಗೌಡರಿಗೆ ಸಲ್ಲುತ್ತದೆ ಎಂದು ಸಣ್ಣ ನೀರಾವರಿ ಸಚಿವ ಪುಟ್ಟರಾಜು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಂಡ್ಯ ಬಸ್ ದುರಂತದ ಬಗ್ಗೆ ಕೇಂದ್ರಕ್ಕೆ ಪರಿಹಾರ ಹಣಕ್ಕಾಗಿ ಒತ್ತಾಯಿಸಿದ್ದು ನಾನು ಎಂದು ಟ್ವೀಟ್ ಮಾಡಿದ್ದ ಶಿವರಾಮೇಗೌಡರನ್ನು ಸಮರ್ಥಿಸಿಕೊಂಡು, ಆ ಕ್ರೆಡಿಟ್ ಅವರಿಗೆ ಸಲ್ಲಬೇಕು. ಈ ದುರಂತದ ಬಗ್ಗೆ ಕೇಂದ್ರ ಸರ್ಕಾರದಿಂದ ಪರಿಹಾರದ ಕುರಿತು ಅಂದಿನ ಜಿಲ್ಲಾಧಿಕಾರಿಗಳು ವಿಸ್ತೃತ ವರದಿ ನೀಡಿದ್ದರು. ಅವರ ವರದಿ ಆಧಾರದ ಮೇಲೆ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ಅದರಂತೆ ಕಳೆದ ಫೆಬ್ರವರಿಯಲ್ಲಿಯೇ ಪರಿಹಾರ ಬಂದಿತ್ತು. ಆ ಸಮಯದಲ್ಲಿ ಲೋಕಸಭಾ ಚುನಾವಣೆಯಾದ ಕಾರಣ ಚೆಕ್ ವಿತರಣೆ ಮಾಡಲಾಗಲಿಲ್ಲ. ಈಗ ಆ ಪ್ರಕ್ರಿಯೆ ಡಿಸಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಈ ಕ್ರೆಡಿಟ್ ಆಗಿನ ಲೋಕಸಭಾ ಸದಸ್ಯರಿಗೆ ಸಲ್ಲುತ್ತದೆ. ಇನ್ನು ಹೆಚ್ಚಿನ ಪರಿಹಾರ ಕೊಡಿಸಲು ಆಗುವಂತಿದ್ದರೆ ಕೊಡಿಸಲಿ ಎಂದು ಸಂಸದೆ ಸುಮಲತಾರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

    ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿ, ಬಹುತೇಕ ಸೋತವರು ಸರ್ಕಾರ ಉಳಿಯುವುದಿಲ್ಲ ಎಂದು ಹೇಳುತ್ತಿದ್ದಾರಷ್ಟೆ. ಆದರೆ ಐದು ವರ್ಷ ಸಿಎಂ ನೇತೃತ್ವದಲ್ಲಿ ನೂರಕ್ಕೆ ನೂರರಷ್ಟು ಮೈತ್ರಿ ಸರ್ಕಾರ ನಡೆಯುತ್ತದೆ. ಯಾರು ಯಾವ ಬ್ಲಾಕ್‍ಮೇಲ್‍ಗೂ ನಾವು ಮಣಿದಿಲ್ಲ. ಸರ್ಕಾರಕ್ಕೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಪಕ್ಷೇತರರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

    ಜೆಡಿಎಸ್‍ನಲ್ಲಿ ಮತ್ತಷ್ಟು ಜನರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಚಿಂತನೆ ಮಾಡಲಾಗಿದೆ. ಈ ಮೂಲಕ ಜೆಡಿಎಸ್ ಖೋಟಾದ ಖಾಲಿ ಇರೋ ಸಚಿವ ಸ್ಥಾನ ಮುಸ್ಲಿಂ ಸಮುದಾಯದವರಿಗೆ ನೀಡಲಾಗುತ್ತದೆ. ಎಲ್ಲಾ ಸಮುದಾಯಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಮುಸ್ಲಿಂ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

  • ಉಕ್ಕಿ ಹರಿಯುತ್ತಿರೋ ವಿಜಯಪುರದ ಭೀಮಾನದಿ- ಗ್ರಾಮಸ್ಥರಲ್ಲಿ ಆತಂಕ

    ಉಕ್ಕಿ ಹರಿಯುತ್ತಿರೋ ವಿಜಯಪುರದ ಭೀಮಾನದಿ- ಗ್ರಾಮಸ್ಥರಲ್ಲಿ ಆತಂಕ

    ವಿಜಯಪುರ: ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ ಪ್ರಮಾಣಕ್ಕೆ ಜಿಲ್ಲೆಯ ಭೀಮಾನದಿ ಉಕ್ಕಿ ಹರಿಯುತ್ತಿದೆ. ಉಜನಿ ಜಲಾಶಯದಿಂದ 35 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಸಿಂಧಗಿ ತಾಲೂಕಿನ ಭೀಮಾತೀರದ ತಾರಾಪೂರ ಗ್ರಾಮ ಜಲಾವೃತ್ತಗೊಂಡಿದೆ.

    ಪರಿಣಾಮ ಗ್ರಾಮದ ಮನೆಗಳನ್ನ ನೀರು ಸುತ್ತುವರಿಯುತ್ತಿದ್ದು, ಆತಂಕದಲ್ಲಿ ತಾರಾಪುರ ಗ್ರಾಮಸ್ಥರು ಕಾಲ ಕಳೆಯುವಂತಾಗಿದೆ. ಗ್ರಾಮದ ಸಂಪರ್ಕ ರಸ್ತೆ ಕೂಡ ಜಲಾವೃತವಾಗಿದ್ದು, ನೀರಿನಲ್ಲಿ ನಡೆದುಕೊಂಡೆ ಮಕ್ಕಳು ಶಾಲೆಗೆ ಹೋಗುವಂತಾಗಿದೆ. ಅಷ್ಟೇ ಅಲ್ಲದೇ ಜಮೀನುಗಳಿಗೂ ನೀರು ನುಗ್ಗಿದ್ದು, ಬೆಳೆಗಳು ನಾಶವಾಗಿದೆ.

    2004 ರಲ್ಲಿ ಇದೇ ರೀತಿ ಭಾರೀ ಮಳೆ ಸುರಿದ ಪರಿಣಾಮ ಗ್ರಾಮ ಮುಳುಗಡೆಯಾಗಿತ್ತು. ಹೀಗಾಗಿ ಬೇರೆಡೆಗೆ ಗ್ರಾಮ ಸ್ಥಳಾಂತರಗೊಂಡಿತ್ತು. ಆದರೆ ಒಟ್ಟು 240 ಕುಟುಂಬಗಳಲ್ಲಿ ಕೇವಲ 140 ಜನರಿಗೆ ಜಾಗ ಸಿಕ್ಕಿದ್ದು, ಇನ್ನುಳಿದವರಿಗೆ ಇದೂವರೆಗೂ ಪರಿಹಾರ ಸಿಕ್ಕಿಲ್ಲ. ಆ ಕಾರಣಕ್ಕಾಗಿ ಇದೇ ಗ್ರಾಮದಲ್ಲಿ ಜನರು ವಾಸಿಸುತ್ತಿದ್ದಾರೆ. ಭೀಮಾ ನದಿಯಲ್ಲಿ ನೀರು ಹೆಚ್ಚಾದಾಗಲೆಲ್ಲ ಇಂತಹ ಪರಿಸ್ಥಿತಿ ಗ್ರಾಮಸ್ಥರು ಎದುರಿಸುವಂತಾಗಿದೆ. ಆದ್ದರಿಂದ ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂತ್ರಸ್ತರಿಗೆ ತಾತ್ಕಾಲಿಕ 3,500 ರೂ. ಪರಿಹಾರ: 2 ಸಾವಿರ ಅಲ್ಯುಮಿನಿಯಮ್ ಶೆಡ್ ನಿರ್ಮಾಣ

    ಸಂತ್ರಸ್ತರಿಗೆ ತಾತ್ಕಾಲಿಕ 3,500 ರೂ. ಪರಿಹಾರ: 2 ಸಾವಿರ ಅಲ್ಯುಮಿನಿಯಮ್ ಶೆಡ್ ನಿರ್ಮಾಣ

    ಬೆಂಗಳೂರು: ಕೊಡಗು ಪ್ರವಾಹ ಪರಿಸ್ಥಿತಿ ಕುರಿತು ಕೈಗೊಂಡಿರುವ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಎಲ್ಲಾ ಸಂತ್ರಸ್ತರಿಗೂ ಹೊಸ ಜೀವನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದ್ದಾರೆ.

    ನೆರೆ ಪರಿಹಾರ ಕುರಿತು ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಸಿಎಂ, ಅತಿಯಾದ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಅನಾಹುತವಾಗಿದ್ದು, ಸರ್ಕಾರ ತಕ್ಷಣ ಸ್ಪಂದನೆ ಮಾಡಿದೆ. ಇದರಲ್ಲಿ ಯಾವುದೇ ಲೋಪ ಆಗಿಲ್ಲ. ಕಳೆದ ತಿಂಗಳು ಕೊಡಗಿಗೆ ಭೇಟಿ ನೀಡಿದ್ದ ವೇಳೆಯೂ ಮೂಲಭೂತ ಸೌಲಭ್ಯ ಕಲ್ಪಿಸಲು 100 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿತ್ತು. ಆಗಸ್ಟ್ 13 ಹಾಗೂ 14ರ ಬಳಿಕ ಕೊಡಗು ಜಿಲ್ಲೆಯಲ್ಲಿ ಅನೇಕ ಕಡೆ ಗುಡ್ಡ ಕುಸಿತ ಪ್ರಾರಂಭವಾಗಿತ್ತು. ಸತಕ್ಷಣದಿಂದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠ ಅಧಿಕಾರಿಗಳು ಶ್ರಮಪಟ್ಟು ಕಾರ್ಯನಿರ್ವಹಿಸಿದ್ದಾರೆ ಎಂದರು.

    ಸದ್ಯ ಕಾರ್ಯಾಚರಣೆಯಲ್ಲಿ 1,725 ಕ್ಕೂ ಹೆಚ್ಚಿನ ರಕ್ಷಣಾ ಸಿಬ್ಬಂದಿ ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಭೂಸೇನೆ, ವಾಯುಪಡೆ, ರಾಷ್ಟ್ರೀಯ ವಿಪತ್ತು ಪಡೆ, ಎನ್‍ಸಿಸಿ ಸೇರಿದಂತೆ ವಿಶೇಷ ಪಡೆಗಳು ಕೆಲಸ ಮಾಡುತ್ತಿವೆ. ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ವಿಶೇಷವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೇ ಪುನರ್ವಸತಿ ಕೇಂದ್ರ ನಿರ್ವಹಣೆಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

    ಇದುವರೆಗೂ ರಾಜ್ಯದಲ್ಲಿ ಮಳೆಯಿಂದ 152 ಜನ ಮೃತರಾಗಿದ್ದಾರೆ. ಇದರಲ್ಲಿ ಕೊಡಗಿನಲ್ಲಿ ಕೇವಲ 7 ಜನರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ವರದಿ ಬಂದಿದೆ. ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲೆಯ ಉಸ್ತುವರಿ ಸಚಿವರು, ಡಿಸಿಎಂ ಸೇರಿದಂತೆ ಬಿಬಿಎಂಪಿ ಪೌರ ಕಾರ್ಮಿಕರು ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಇಂತಹ ಭೂ ಕುಸಿತ ಪ್ರಕರಣ ಹೆಚ್ಚಾಗಿದ್ದು, ಅಲ್ಲಿನ ತಜ್ಞರ ಜೊತೆ ಮಾತನಾಡಿ ಇಬ್ಬರು ತಜ್ಞರನ್ನು ಹಿಮಾಚಲ ಪ್ರದೇಶದಿಂದ ಕರೆಯಿಸಿಕೊಳ್ಳಲಾಗಿದೆ. ಅಲ್ಲದೇ ಹೈದ್ರಾಬಾದಿನ ಭೂ ವಿಜ್ಞಾನಿಗಳನ್ನು ಕರೆಯಲಾಗಿದೆ. ಭೂಕಂಪದಂತಹ ಯಾವುದೇ ಸುದ್ದಿಗೆ ಜನರು ಅಂತಕ ಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಜೊತೆಗಿದೆ ಎಂದರು.

    ಇದುವರೆಗೂ ಕೊಡಗಿನಲ್ಲಿ 845 ಮನೆ ನಾಶವಾಗಿದ್ದು, 773 ಮನೆಗಳು ಭಾಗಶಃ ಹಾನಿಯಾಗಿದೆ. 123 ಕಿಲೋಮೀಟರ್ ರಸ್ತೆ ಹಾನಿಯಾಗಿದೆ. 58 ಸೇತುವೆ, 3,800 ವಿದ್ಯುತ್ ಕಂಬ ಹಾನಿಯಾಗಿದೆ. ಅದಷ್ಟು ಬೇಗ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಕೊಡಗಿನಲ್ಲಿ 41 ಪರಿಹಾರ ಕೇಂದ್ರ, ದಕ್ಷಿಣ ಕನ್ನಡದಲ್ಲಿ 9 ಕೇಂದ್ರ ಸ್ಥಾಪನೆ ಮಾಡಿ 6,620 ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಆಶಯ ನೀಡಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಶೌಚಾಲಯ ಕೊರತೆ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ನಿರಾಶ್ರಿತರಿಗೆ ನರೇಗಾ ಯೋಜನೆ ಅಡಿ ಕೆಲಸ ನೀಡಲು ಸೂಚನೆ ನೀಡಲಾಗಿದ್ದು, 2 ಸಾವಿರ ಅಲ್ಯುಮಿನಿಯಂ ಶೆಡ್ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ತಾತ್ಕಾಲಿಕ ಪರಿಹಾರವಾಗಿ ನೆರೆ ಸಂತ್ರಸ್ತರಿಗೆ 3,800 ಪರಿಹಾರ ಹಣ ಹಾಗೂ ಆಹಾರ ಪದಾರ್ಥ ನೀಡಲಾಗುತ್ತದೆ. ನಾಳೆಯಿಂದ ಎಲ್ಲಾ ಕೆಲಸ ಆರಂಭವಾಗುತ್ತದೆ. ಶಾಶ್ವತ ಪರಿಹಾರ ನೀಡಲು ಎಷ್ಟೇ ಹಣ ವೆಚ್ಚವಾದರು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಂದ್ರ ಗ್ರಹಣ: ಪರಿಹಾರ ಏನು? ಯಾವ ರಾಶಿಗೆ ಶುಭ, ಅಶುಭ? ಗರ್ಭಿಣಿಯರು ಏನ್ ಮಾಡಬೇಕು?

    ಚಂದ್ರ ಗ್ರಹಣ: ಪರಿಹಾರ ಏನು? ಯಾವ ರಾಶಿಗೆ ಶುಭ, ಅಶುಭ? ಗರ್ಭಿಣಿಯರು ಏನ್ ಮಾಡಬೇಕು?

    ಬೆಂಗಳೂರು: ಇಂದು ಕೇತುಗ್ರಸ್ತ ರಕ್ತ ಚಂದ್ರ ಗ್ರಹಣ ಸಂಭವಿಸಲಿದೆ. ಇದಕ್ಕೆ ಮಹರ್ಷಿ ಆನಂದ್ ಗುರುಜಿ ಅವರು ಪರಿಹಾರ ಸೂತ್ರಗಳನ್ನು ಸೂಚಿಸಿದ್ದಾರೆ.

    ಈ ಬಾರಿ ಸಂಭವಿಸುತ್ತಿರುವ ಕೇತುಗ್ರಸ್ತ ಚಂದ್ರಗ್ರಹಣ ಬಹಳಷ್ಟು ಕ್ರೂರವಾಗಿದೆ. ಒಂದೇ ಮಾಸದಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಬರುವ ಎರಡು ಗ್ರಹಣವಾಗಿದ್ದರಿಂದ ಇದು ತುಂಬಾ ಸಮಸ್ಯೆಯನ್ನುಂಟು ಮಾಡುತ್ತದೆ. ಈ ಗ್ರಹಣದಿಂದ ಉಂಟಾಗುವ ಸಮಸ್ಯೆ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

    ಗ್ರಹಣ ಪರಿಹಾರ 1: ಚಿಕ್ಕಮಕ್ಕಳು ಏನ್ಮಾಡಬೇಕು?
    ಸಣ್ಣ ಮಕ್ಕಳಿಗೆ ಸಂಜೆ 7.00 ಗಂಟೆ ಅಥವಾ ರಾತ್ರಿ 8.00 ಗಂಟೆವರೆಗೂ ಗ್ರಹಣ ಕಾಲವಾದ್ದರಿಂದ ಸಂಜೆ 6.00 ಗಂಟೆಯಿಂದ 7.00 ಗಂಟೆಯೊಳಗೆ ಊಟವನ್ನು ನೀಡಬೇಕು.

    ಗ್ರಹಣ ಪರಿಹಾರ 3: ಗ್ರಹಣ ವೇಳೆ ಏನು ಮಾಡಬೇಕು?
    ಗ್ರಹಣ ಸ್ಪರ್ಶ ಕಾಲ ಆರಂಭವಾಗುವುದು 11.54 ನಿಮಿಷ, ಗ್ರಹಣ ಮಧ್ಯಕಾಲ 1.52 ನಿಮಿಷ, ಗ್ರಹಣ ಮೋಕ್ಷ ಕಾಲ 3.49 ನಿಮಿಷವಾಗಿದೆ. ಆದ್ದರಿಂದ ಗ್ರಹಣ ಪ್ರಾರಂಭದ ಕಾಲದಲ್ಲಿ ಅಂದರೆ ಸಂಜೆ 4.30ರ ಒಳಗಾಗಿ ಮನೆಯಲ್ಲಿರುವ ಎಲ್ಲ ಪದಾರ್ಥಗಳಿಗೂ ಒಂದಿಷ್ಟು ದರ್ಬೆಯನ್ನು ಹಾಕಿ. ದೇವಾಲಯದಲ್ಲಿ, ಹುಲ್ಲು ಬೆಳೆದಿರುವ ಕಡೆಗಳಲ್ಲಿ ಮತ್ತು ಅರ್ಚಕರು, ಪೂಜಾರಿ, ಪೂಜಾ ಸಾಮಾಗ್ರಿ ಸಿಗುವ ಅಂಗಡಿಗಳಲ್ಲಿ, ಜ್ಯೋತಿಷಿಗಳ ಬಳಿ ದರ್ಬೆ ಸಿಗುತ್ತದೆ.

    ಗ್ರಹಣ ಪರಿಹಾರ 4: ಗರ್ಭಿಣಿಯರು ಏನು ಮಾಡಬೇಕು?
    ಮನೆಯಲ್ಲಿ ಗರ್ಭಿಣಿಯರು ಇದ್ದರೆ ಸಾಧ್ಯವಾದಷ್ಟು ಮನೆಯಲ್ಲಿರುವ ಕಿಟಕಿ, ಬಾಗಿಲು ಎಲ್ಲವನ್ನು ಮುಚ್ಚಿ. ಇಲ್ಲವಾದರೆ ಮನೆಯಲ್ಲಿಯೇ ಒಂದು ಕೋಣೆಯಲ್ಲಿ ಕುಳಿತುಕೊಂಡು ಒಂದು ಕಿರಣವೂ ರೂಮಿಗೆ ಬೀಳದಂತೆ ನೋಡಿಕೊಳ್ಳಬೇಕು. ಮುಂದೆ ಹುಟ್ಟುವ ಮಗುವಿಗೆ ಯಾವುದೇ ತೊಡಕು, ತೊಂದರೆ ಉಂಟಾಗದೇ ಇರಲು ಈ ರೀತಿ ಮಾಡುವುದು ಉತ್ತಮವಾಗಿದೆ.

    ಗ್ರಹಣ ಪರಿಹಾರ 5: ರಾಶಿಫಲ ಹೇಗಿದೆ?
    ಗ್ರಹಣದಲ್ಲೂ ಕೆಲವು ರಾಶಿಯವರಿಗೆ ಶುಭಫಲವನ್ನು ಉಂಟು ಮಾಡುತ್ತದೆ. ಮೇಷ, ಸಿಂಹ, ವೃಶ್ಚಿಕ ಮತ್ತು ಮೀನ ಈ ರಾಶಿಯವರು ಚಂದ್ರ ಗ್ರಹಣದಿಂದ ದೂರವಿದ್ದು, ಯಾವುದೇ ಗ್ರಹಣದ ದೋಷವೂ ಇಲ್ಲ. ಆದರೆ ರಾತ್ರಿ 10 ಗಂಟೆಯ ಮೇಲೆ ಊಟ ಮಾಡಬೇಡಿ ಅದು ಒಳ್ಳೆಯದಲ್ಲ.

    ಈ ಗ್ರಹಣದಿಂದ ತುಲಾ, ಮಿಥುನ, ಮಕರ ಮತ್ತು ಕುಂಭ ಈ ನಾಲ್ಕು ರಾಶಿಯವರಿಗೆ ಸಮಸ್ಯೆ ಇದೆ. ಸಮಸ್ಯೆಯನ್ನು ನಿವಾರಿಸಲು ದೇವಾಲಯಕ್ಕೆ ಹೋಗಬೇಕು, ಇಲ್ಲ ಮನೆಯಲ್ಲಿಯೇ ದೇವರಲ್ಲಿ ಪ್ರಾರ್ಥನೆ ಮಾಡಬೇಕು. ದೇವಾಲಯದಲ್ಲಿ ನಡೆಯುವ ಪೂಜೆಗಳಲ್ಲಿ ಪಾಲ್ಗೊಳ್ಳಬೇಕು. ಮನೆಯಲ್ಲಿರುವ ಹಿರಿಯ ಪಾದ ಮುಟ್ಟಿ ನಮಸ್ಕರಿಸಬೇಕು. ಸಾಧ್ಯವಾದರೆ ಗೋ ಪ್ರಾರ್ಥನೆ ಮಾಡಬೇಕು. ಗೋ ಮೂತ್ರವನ್ನು ತಲೆಗೆ ಸಿಂಪಡಿಸಿಕೊಳ್ಳಬೇಕು. ವೃಷಭ, ಕರ್ಕಾಟಕ, ಧನಸ್ಸು ಹಾಗು ಕನ್ಯಾ ಈ ರಾಶಿಯವರು ಅಧಿಕ ಭಯ ಪಡುವ ಅವಶ್ಯಕತೆ ಇಲ್ಲ.

    ಗ್ರಹಣ ಪರಿಹಾರ 6: ಮೊಸರನ್ನದಿಂದ ಒಳ್ಳೆಯದು:
    ಗ್ರಹಣಕ್ಕೂ ಮುನ್ನ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಜೊತೆಗೆ ಮೊಸರನ್ನವನ್ನು ಮಾಡಿ ಅದನ್ನು ನಿಮ್ಮ ಮನೆ ಮಹಡಿಯ ಮೇಲೆ ಸ್ವಲ್ಪ ಇಡಬೇಕು. ಇದರಿಂದ ಮನೆ ಶಾಂತಿಯಾಗುತ್ತದೆ. ಯಾವುದೇ ತೊಂದರೆಯಾಗುವುದಿಲ್ಲ.

    ಗ್ರಹಣ ಪರಿಹಾರ 7: ಚಂದ್ರನಿಗೆ ಮುತ್ತುಗ ವೃಕ್ಷ ಇಷ್ಟ. ಆದ್ದರಿಂದ ಗ್ರಹಣ ಕಾಲ ಪ್ರಾರಂಭ, ಅಂತ್ಯ ಅಥವಾ ಮಾರನೆಯ ದಿನ ಅಂತಹ ಮುತ್ತಗ ವೃಕ್ಷ ಎಲ್ಲಾದರೂ ಇದ್ದರೆ ಅದಕ್ಕೆ 11 ನಮಸ್ಕಾರ ಹಾಕಿ. ಜೊತೆಗೆ ಒಂದು ಹಿಡಿ ಅಕ್ಕಿ, ಹಾಲು, ಮೊಸರನ್ನು ಮರದ ಬುಡಕ್ಕೆ ಹಾಕಿದರೆ ಒಳ್ಳೆಯದು. ದರ್ಬೆ ಮತ್ತು ಮುತ್ತುಗ ಎರಡನ್ನು ಒಂದು ಕಡೆ ಇಟ್ಟು ಪ್ರದಕ್ಷಿಣೆ ಹಾಕಿದರೆ ಗ್ರಹಣ ದೋಷ ಶೀಘ್ರವಾಗಿ ದೂರವಾಗುತ್ತದೆ.

    ಗ್ರಹಣ ಪರಿಹಾರ 8: ವಯಸ್ಸಾದ ಹಿರಿಯರು ರಾಮ, ದಾಸ, ಕೃಷ್ಣ ಆರಾಧನೆ ಮಾಡಬೇಕು. ಗ್ರಹಣ ಮುಗಿಯವರೆಗೂ ದೇವತಾ ಆರಾಧನೆಯಲ್ಲಿ ಇದ್ದರೆ ಶುಭವಾಗುತ್ತದೆ. ಆದಷ್ಟು ಸಂಜೆ 6 ಗಂಟೆಯಿಂದ 7 ಗಂಟೆಯೊಳಗೆ ಊಟವನ್ನು ಮಾಡಬೇಕು. ಆಸ್ಪತ್ರೆಯಲ್ಲಿ ಇರುವವರು, ಮಾತ್ರೆ ತೆಗೆದು ಕೊಳ್ಳುವವರು ಕೂಡ ಆದಷ್ಟು ಬೇಗ ಊಟವನ್ನು ಮುಗಿಸಬೇಕು.

  • ಹೃದಯಾಘಾತವಾಗಿ ಶ್ರೀದೇವಿ ನಿಧನ- ಹೃದಯಾಘಾತವಾಗಲು ಕಾರಣವೇನು? ಅಂಥ ಸಮಯದಲ್ಲಿ ಏನು ಮಾಡಬೇಕು? ಈ ಸುದ್ದಿ ಓದಿ

    ಹೃದಯಾಘಾತವಾಗಿ ಶ್ರೀದೇವಿ ನಿಧನ- ಹೃದಯಾಘಾತವಾಗಲು ಕಾರಣವೇನು? ಅಂಥ ಸಮಯದಲ್ಲಿ ಏನು ಮಾಡಬೇಕು? ಈ ಸುದ್ದಿ ಓದಿ

    ಮುಂಬೈ: ಹಿರಿಯ ಬಹು ಭಾಷಾ ನಟಿ ಶ್ರೀದೇವಿ ಶನಿವಾರ ಹೃದಯಾಘಾತದಿಂದ ದುಬೈನಲ್ಲಿ ನಿಧನರಾಗಿದ್ದಾರೆ. 80-90 ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಆ ಮೋಹಕ ತಾರೆ ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

    ಹೃದಯಾಘಾತದಿಂದ ಆಕಸ್ಮಿಕವಾಗಿ ವಿಧಿವಶವಾಗಿರುವ ಶ್ರೀದೇವಿ ಅವರ ಆರೋಗ್ಯದಲ್ಲಿ ಈ ಹಿಂದೆ ಯಾವುದೇ ರೀತಿಯ ಏರುಪೇರು ಕಂಡುಬಂದಿರಲಿಲ್ಲ. ಹೃದಯಾಘಾತ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳುವುದು ಅಸಾಧ್ಯ.

    ಹೃದಯಾಘಾತ ಎಂದರೆ ಏನು?: ಕಾರ್ಡಿಯಾಕ್ ಅರೆಸ್ಟ್ ಅಥವಾ ಹೃದಯಾಘಾತ ಎನ್ನುವುದು ಒಬ್ಬ ಮನುಷ್ಯನ ಹೃದಯಕ್ಕೆ ರಕ್ತ ಪೂರೈಕೆಯನ್ನ ನಿಲ್ಲಿಸುತ್ತದೆ. ಇದರಿಂದ ಹೃದಯ ಬಡಿತ ನಿಂತುಹೋಗುತ್ತದೆ. ಈ ಸಮಯದಲ್ಲಿ ಎದೆ ನೋವು, ತಲೆ ಸುತ್ತು, ಉಸಿರಾಟಕ್ಕೆ ತೊಂದರೆಯಾಗುವುದು ಮತ್ತು ಮೂರ್ಛೆ ಹೋಗುವ ಪರಿಸ್ಥಿತಿ ಎದುರಾಗಬಹುದು.

    ಹೃದಯಾಘಾತಕ್ಕೆ ಕಾರಣಗಳೇನು?: ಒಬ್ಬ ಆರೋಗ್ಯವಂತ ವ್ಯಕ್ತಿಗೆ ಒಂದು ಸೆಕೆಂಡ್‍ನಲ್ಲಿ 60-100 ಹೃದಯ ಬಡಿತವಿರುತ್ತದೆ. ಆದರೆ ಹೃದಯಾಘಾತವಾಗುವ ಸಮಯದಲ್ಲಿ ಅಸಹಜ ಬಡಿತ ಕಾಣಿಸಿಕೊಳ್ಳಲಿದ್ದು, ಈ ಪರಿಸ್ಥಿತಿಯನ್ನು ಅರೆಥ್ಮಿಯಾಸ್ ಎಂದು ಕರೆಯಲಾಗುವುದು. ದೈಹಿಕ ಒತ್ತಡ, ರಕ್ತದ ಕೊರತೆ, ಹೃದಯಕ್ಕೆ ಅವಶ್ಯಕವಾದ ಆಮ್ಲಜನಕದ ಕೊರತೆ, ಅಧಿಕವಾಗಿ ವ್ಯಾಯಾಮ ಮಾಡುವುದು ಮತ್ತು ಅನುವಂಶಿಯ ಕಾರಣಗಳಿಂದ ಕಾರ್ಡಿಯಾಕ್ ಅರೆಸ್ಟ್ ಅಥವಾ ಹೃದಯಾಘಾತ ಆಗಬಹುದು.

    ಸ್ಥೂಲಕಾಯ, ಅಧಿಕ ರಕ್ತದ ಒತ್ತಡ, ಧೂಮಪಾನ, ಮಧುಮೇಹ, ಅತಿಯಾಗಿ ಮದ್ಯಪಾನ ಮಾಡುವುದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ.

    ತಡೆಗಟ್ಟುವ ವಿಧಾನಗಳೇನು?: ನಿಯಮಿತವಾಗಿ ವೈದ್ಯರಲ್ಲಿ ಹೃದಯವನ್ನ ಪರೀಕ್ಷಿಸಿಕೊಳ್ಳುವುದು, ಆರೋಗ್ಯಕರ ಆಹಾರವನ್ನ ಸೇವಿಸುವುದು, ದೇಹದ ತೂಕದ ಬಗ್ಗೆ ಗಮನ ಹರಿಸುವುದು ಮತ್ತು ಧೂಮಪಾನ ಮಾಡದಿರುವುದರಿಂದ ಹೈದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

    ವ್ಯಕ್ತಿಗೆ ಹೃದಯಾಘಾತವಾದಾಗ ಏನು ಮಾಡಬೇಕು?: ಇಂತಹ ತುರ್ತು ಪರಿಸ್ಥಿತಿಯಲ್ಲಿ ಹೃದಯ ಮತ್ತು ಶ್ವಾಸಕೋಶ ಪ್ರಚೋದಕ(ಸಿಪಿಆರ್) ಮಾಡಬೇಕು ಅಥವಾ ಡಿಫಿಬ್ರಿಲೇಟರ್ ಉಪಯೋಗಿಸಬೇಕು. ಹೃದಯವನ್ನ ಜೋರಾಗಿ ಮೇಲಿಂದ ಒತ್ತಬೇಕು ಇದರಿಂದ ರಕ್ತ ಹೆಪ್ಪುಗಟ್ಟಿದ್ದರೆ ಸುಲಭವಾಗಿ ಹೃದಯಕ್ಕೆ ರಕ್ತ ಸಂಚಾರವಾಗುತ್ತದೆ. ಇದರ ಜೊತೆಗೆ ವ್ಯಕ್ತಿಗೆ ಉಸಿರಾಟದ ತೊಂದರೆಯಾದರೆ ವ್ಯಕ್ತಿಯ ಬಾಯಿಗೆ ಕೃತಕವಾಗಿ ಇನ್ನೊಬ್ಬ ವ್ಯಕ್ತಿ ಗಾಳಿಯನ್ನ ಊದಬೇಕು. ಇದರಿಂದ ಅವರ ದೇಹಕ್ಕೆ ಆಮ್ಲಜನಕದ ಪೂರೈಕೆಯಾಗುತ್ತದೆ. ಇದರ ನಂತರ ವ್ಯಕ್ತಿಯನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.