Tag: Solo Trip

  • ಗಂಡನ ಹಣ ಖರ್ಚು ಮಾಡಿದರೆ ನಿಮಗೇನು ಸಮಸ್ಯೆ?: ಗರಂ ಆದ ನಿವೇದಿತಾ

    ಗಂಡನ ಹಣ ಖರ್ಚು ಮಾಡಿದರೆ ನಿಮಗೇನು ಸಮಸ್ಯೆ?: ಗರಂ ಆದ ನಿವೇದಿತಾ

    ಟಿ, ಗಾಯಕ ಚಂದನ್ ಶೆಟ್ಟಿ ಅವರ ಪತ್ನಿ ನಟಿ ನಿವೇದಿತಾ ಗೌಡ ಸದ್ಯ ಬಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ತಾವು ಒಬ್ಬರೇ ಬಾಲಿಗೆ ಹೋದ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು ನಿವಿ. ಬಾಲಿಯಲ್ಲಿ ಕಳೆದ ದಿನಗಳನ್ನು ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಒಂದೊಂದೇ ಪೋಸ್ಟ್ ಮಾಡುತ್ತಿದ್ದಾರೆ. ಈ ಫೋಟೋ ಕಂಡು ಕೆಲವರು ಕೆಟ್ಟದ್ದಾಗಿ ನಿವೇದಿತಾಗೆ ಕಾಮೆಂಟ್ ಮಾಡಿದ್ದಾರೆ. ಇದರಿಂದಾಗಿ ನಿವಿ ಸಹಜವಾಗಿಯೇ ಗರಂ ಆಗಿದ್ದಾರೆ.

    ಗಂಡ ದುಡಿದ ದುಡ್ಡಿನಲ್ಲಿ ಒಬ್ಬಳೇ ಎಂಜಾಯ್ ಮಾಡುತ್ತಿದ್ದೀಯಾ? ಎಂದು ಕೆಲವರು ಕೆಟ್ಟದ್ದಾಗಿಯೇ ಕಾಮೆಂಟ್ ಮಾಡಿದ್ದು, ಅದಕ್ಕೆ ನಿವಿ ಅಷ್ಟೇ ತೀಕ್ಷ್ಣವಾಗಿ ಉತ್ತರ ನೀಡಿದ್ದಾರೆ. ‘ನಾನು ನನ್ನ ದುಡ್ಡಿನಲ್ಲಿ ಪ್ರವಾಸ ಮಾಡುತ್ತಿರುವುದು. ನನಗೂ ದುಡಿಯುವ ಶಕ್ತಿ ಇದೆ. ಹುಡುಗರು ಸೋಲೋ ಟ್ರಿಪ್ ಹೋದರೆ, ಯಾರಿಗೂ ಏನೂ ಅನಿಸುವುದಿಲ್ಲ. ಹುಡುಗಿಯರು ಹೋದರೆ, ಈ ರೀತಿ ಕೆಟ್ಟ ಕಾಮೆಂಟ್ ಮಾಡುತ್ತೀರಿ. ಅಷ್ಟಕ್ಕೂ ನಾನು ನನ್ನ ಗಂಡನ ದುಡ್ಡಿನಲ್ಲಿ ಹೋದರೆ ನಿಮಗೇನು ಸಮಸ್ಯೆ? ಎಂದು ಹೇಳುವ ಮೂಲಕ ಚಳಿ ಬಿಡಿಸಿದ್ದಾರೆ.. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ಕಿರುತೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ನಿವೇದಿತಾ ಗೌಡ ಬಳಿಕ ನಟನೆ, ಮಾಡೆಲಿಂಗ್, ಮದುವೆ, ಸಂಸಾರ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಎಲ್ಲಾ ಕೆಲಸಕ್ಕೂ ಬ್ರೇಕ್ ಹಾಕಿ, ಬಾಲಿಯಲ್ಲಿ ನಟಿ ಕಾಲ ಕಳೆಯುತ್ತಿದ್ದಾರೆ. ಪತಿ ಚಂದನ್‌ನ ಬಿಟ್ಟು ಸೋಲೋ ಟ್ರಿಪ್‌ನ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಟ್ರಿಪ್ ಫೋಟೋ, ವೀಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಬಾಲಿಗೆ ತಾವು ಸೋಲೋ ಟ್ರಿಪ್ ಹೊರಟಿರುವುದಾಗಿ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಸದ್ಯ ತಮ್ಮ ಸೋಲೋ ಟ್ರಿಪ್‌ನ್ನ ನಿವೇದಿತಾ ಸಖತ್ ಆಗಿ ಏಂಜಾಯ್ ಮಾಡ್ತಿದಾರೆ. ಇನ್ನೂ ಸದ್ಯದಲ್ಲೇ ನಿವೇದಿತಾ ಗೌಡ, ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ತೆರೆಮರೆಯಲ್ಲಿ ಅದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್

    ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್

    ಪ್ಯಾರ್ಗೆ ಆಗ್ಬಿಟ್ಟೈತಿ ಹುಡುಗಿ ಪಾರುಲ್ ಯಾದವ್ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸದ್ಯ ಅವರು ಏಕಾಂಗಿಯಾಗಿ ಪ್ರವಾಸ ಮಾಡುತ್ತಿದ್ದಾರೆ. ಸೋಲೋ ಟ್ರಿಪ್ ಮಾಡುವ ಮಜವೆ ಬೇರೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿ

    ಗೋವಿಂದಾಯನಮಃ ಸಿನಿಮಾದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಪಡೆದ ಪಾರುಲ್, ಆನಂತರ ಹಲವು ಚಿತ್ರಗಳಲ್ಲಿ ನಟಿಸಿದರು. ಮೂರ್ನಾಲ್ಕು ವರ್ಷಗಳಿಂದ ಅವರು ಸಿನಿಮಾ ರಂಗದಲ್ಲಿ ಸಕ್ರೀಯರಾಗಲಿಲ್ಲ. ಕಾರಣ ಬಟರ್ ಪ್ಲೈ ಸಿನಿಮಾ ಎನ್ನಲಾಗುತ್ತಿದೆ. ಇದನ್ನೂ ಓದಿ : ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

    ಬಾಲಿವುಡ್ ನಲ್ಲಿ ತೆರೆಕಂಡ ಕ್ವೀನ್ ಸಿನಿಮಾದ ಕನ್ನಡದ ಅವತರಣಿಕೆ ಈ ‘ಬಟರ್ ಪ್ಲೈ’ .  ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ರಮೇಶ್ ಅರವಿಂದ್. ಶೂಟಿಂಗ್ ಮುಗಿದು, ಬಿಡುಗಡೆ ಆಗಬೇಕಿದ್ದ ಚಿತ್ರ ಹಾಗೆಯೇ ಉಳಿದುಕೊಂಡಿತು. ಅದಕ್ಕೆ ಕಾರಣವೂ ಸಿಕ್ಕಿವಲ್ಲವಂತೆ. ಅಲ್ಲದೇ, ಈ ಸಿನಿಮಾದಲ್ಲಿ ಸ್ವತಃ ಪಾರುಲ್ ನಾಯಕಿಯಾಗಿ ನಟಿಸಿದ್ದಾರೆ ಮತ್ತು ಸಹ ನಿರ್ಮಾಪಕಿ ಕೂಡ. ಇದನ್ನೂ ಓದಿ : ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರು

    ಸಿನಿಮಾದಿಂದ ದೂರವಾಗಿ ಈಗ ಸೋಲೊ ಟ್ರಿಪ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರಂತೆ ಪಾರೂಲ್. ಹೀಗೆ ಒಂಟಿಯಾಗಿ ಪ್ರವಾಸ ಮಾಡುವುದೇ ಒಂದು ರೀತಿಯಲ್ಲಿ ರೋಚನ ಅಂದಿದ್ದಾರೆ ಬಟರ್ ಫ್ಲೈ ಬೆಡಗಿ.