Tag: Solider

  • ಪಾಕ್‌ನಿಂದ ಸ್ನೈಪರ್‌ ದಾಳಿ – ಭಾರತದ ಯೋಧನಿಗೆ ಗಾಯ

    ಪಾಕ್‌ನಿಂದ ಸ್ನೈಪರ್‌ ದಾಳಿ – ಭಾರತದ ಯೋಧನಿಗೆ ಗಾಯ

    ಶ್ರೀನಗರ: ರಜೌರಿ (Rajouri) ಜಿಲ್ಲೆಯ ನೌಶೇರಾದ ಕಲ್ಸಿಯಾನ್ ಪ್ರದೇಶದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ (Pakistan) ಬುಧವಾರ ಸ್ನೈಪರ್‌ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಭಾರತೀಯ ಯೋಧರೊಬ್ಬರು ಗಾಯಗೊಂಡಿದ್ದಾರೆ.

    ಗೂರ್ಖಾ ರೆಜಿಮೆಂಟ್ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನ ಮೇಲೆ ಸ್ನೈಪರ್‌ ಗುಂಡಿನ ದಾಳಿ ನಡೆದಿದೆ. ತಕ್ಷಣವೇ ಅವರನ್ನು ಉಧಂಪುರದಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭೂಸ್ವಾಧೀನ ಪರಿಹಾರ ನೀಡದ ಜಿಲ್ಲಾಡಳಿತ – ಹಾವೇರಿ ಜಿಲ್ಲಾಧಿಕಾರಿ ಕಾರು ಜಪ್ತಿ

    ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಬಗ್ಗೆ ಎಚ್ಚರಿಕೆ ನೀಡಿದ್ದು, ನಿಯಂತ್ರಣ ರೇಖೆಯ ಉದ್ದಕ್ಕೂ ಪರಿಸ್ಥಿತಿಯನ್ನು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕದ ಮದ್ಯದ ಮೇಲೆ ಭಾರತ 150%, ಕೃಷಿ ಉತ್ಪನ್ನಗಳ ಮೇಲೆ 100% ತೆರಿಗೆ ವಿಧಿಸುತ್ತಿದೆ: ವೈಟ್‌ಹೌಸ್

  • ಬಾಗಲಕೋಟೆಯ ಯೋಧ ಒಡಿಶಾದಲ್ಲಿ ನಿಧನ

    ಬಾಗಲಕೋಟೆಯ ಯೋಧ ಒಡಿಶಾದಲ್ಲಿ ನಿಧನ

    ಬಾಗಲಕೋಟೆ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಗಲಕೋಟೆ ಜಿಲ್ಲೆಯ ಸಿಆರ್‌ಪಿಎಫ್ ಯೋಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಒಡಿಶಾದ ಮಿಲಿಟರಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.

    ರಂಗಪ್ಪ ಬಿಮಪ್ಪ ಬಡಿಗೇರ್ (39) ನಿಧನರಾದ ಯೋಧ. ರಂಗಪ್ಪ ಅವರು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಿರೇಬೂದಿಹಾಳ ಗ್ರಾಮದವರಾಗಿದ್ದು, ಸಿಆರ್‌ಪಿಎಫ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

    ಯೋಧ ರಂಗಪ್ಪ ಅವರು ಕಳೆದ 19 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಒಡಿಶಾದ 4ನೇ ಬಟಾಲಿಯನ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ರಂಗಪ್ಪ ಅವರನ್ನು ಒಡಿಶಾದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು.

    ಆದರೆ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ರಂಗಪ್ಪ ನಿಧನರಾಗಿದ್ದಾರೆ. ರಂಗಪ್ಪ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದು ಇಂದು ಅವರ ಅಂತ್ಯಸಂಸ್ಕಾರ ಹಿರೆಬೂದಿಹಾಳ ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವದೊಂದಿಗೆ ನಡೆಯಲಿದೆ.

  • ಪಾಕ್ ಐಎಸ್‍ಐಗೆ ಏಜೆಂಟ್‍ಗೆ ಮಾಹಿತಿ ರವಾನೆ: ಬಿಎಸ್‍ಎಫ್ ಯೋಧ ಅರೆಸ್ಟ್

    ಪಾಕ್ ಐಎಸ್‍ಐಗೆ ಏಜೆಂಟ್‍ಗೆ ಮಾಹಿತಿ ರವಾನೆ: ಬಿಎಸ್‍ಎಫ್ ಯೋಧ ಅರೆಸ್ಟ್

    ಚಂಡೀಗಢ: ಪಾಕಿಸ್ತಾನದ ಐಎಸ್‍ಐ ಏಜೆಂಟ್ ನೊಂದಿಗೆ ಮಾಹಿತಿ ರವಾನಿಸದ್ದರ ಆರೋಪದ ಮೇರೆಗೆ ಬಾರ್ಡರ್ ಸೆಕ್ಯೂರಿಟ್ ಫೋರ್ಸ್ (ಬಿಎಸ್‍ಫ್) ಯೋಧನನ್ನು ಗುಪ್ತದಳ ಅಧಿಕಾರಿಗಳು ಪಂಜಾಬಿನ ಫೆರೋಜ್‍ಪುರ್ ನಲ್ಲಿ ಬಂಧಿಸಿದ್ದಾರೆ.

    ಶೇಖ್ ರೈಯಾಜುದ್ದೀನ್ ಬಂಧಿತ ಬಿಎಸ್‍ಎಫ್ ಯೋಧ. ಕಳೆದ ಕೆಲವು ತಿಂಗಳುಗಳಿಂದ ಭದ್ರತಾ ವ್ಯವಸ್ಥೆಗೆ ಸಂಬಂಧಪಟ್ಟ ಮಾಹಿತಿ ಹಾಗೂ ಛಾಯಚಿತ್ರಗಳನ್ನು ಪಾಕಿಸ್ತಾನಿ ಮೂಲದ ಐಎಸ್‍ಐ ಏಜೆಂಟ್‍ಗೆ ರವಾನಿಸಿದ್ದಾರೆ. ಶೇಖ್ ಮೂಲತಃ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ರೆನ್‍ಪುರ್ ಗ್ರಾಮದವರಾಗಿದ್ದು, ಬಿಎಸ್‍ಎಫ್‍ನ 29ನೇ ಬೆಟಾಲಿಯನ್‍ನಲ್ಲಿ ಪಂಜಾಬ್‍ನ ಫೆರೋಜ್‍ಪುರ್ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಗುಪ್ತದಳ ಅಧಿಕಾರಿಗಳು ಹೇಳಿದ್ದಾರೆ.

    ಮಾಹಿತಿಗಳ ಪ್ರಕಾರ ಯೋಧ ಭಾರತದ ಗಡಿಪ್ರದೇಶಗಳ ಛಾಯಚಿತ್ರ ಹಾಗೂ ಬಿಎಸ್‍ಎಫ್ ನ ಮುಖ್ಯ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಪಾಕಿಸ್ತಾನದ ಗುಪ್ತದಳ ಅಧಿಕಾರಿ ಮಿರ್ಜಾ ಫೈಸಲ್ ನೊಂದಿಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಬಂಧಿತ ಯೋಧನಿಂದ ಎರಡು ಮೊಬೈಲ್, 7 ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.

    ಬಂಧಿತ ಆರೋಪಿಯ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 29ನೇ ಹೆಚ್ಚುವರಿ ಕಮಾಡೇಂಟ್ ಮ್ಯಾಮ್ದತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೈನಿಕನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ತನಿಖಾಧಿಕಾರಿ ರಂಜಿತ್ ಸಿಂಗ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv