Tag: soldiers

  • ಸುರಿಯುತ್ತಿರುವ ಭಾರೀ ಮಳೆ: ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ

    ಸುರಿಯುತ್ತಿರುವ ಭಾರೀ ಮಳೆ: ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ

    ಮಡಿಕೇರಿ: ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದ್ದು, ಯೋಧರು ಹಾಗೂ ಸ್ಥಳೀಯರ ತಂಡ ಹಟ್ಟಿಹೊಳೆಯಲ್ಲೇ ಉಳಿಯುವಂತಾಗಿದೆ.

    ಇಂದು ಬೆಳಗ್ಗೆಯಿಂದಲೂ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಭಾನುವಾರ ಮುಕ್ಕೋಡ್ಲು ಹಾಗೂ ಹಟ್ಟಿಹೊಳೆ ಗ್ರಾಮಗಳ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಯೋಧರು ಹಾಗೂ ಸ್ಥಳೀಯರು ತಡರಾತ್ರಿ ಹಟ್ಟಿಹೊಳೆಯಲ್ಲೇ ವಾಸ್ತವ್ಯ ಹೂಡಿದ್ದಾರೆ.

    ಹಟ್ಟಿಹೊಳೆ ಹಾಗೂ ಮುಕ್ಕೋಡ್ಲು ಗ್ರಾಮಗಳಲ್ಲಿ ಹಲವು ಜನರು ಸಿಲುಕಿರುವ ಸಂಭವವಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಯೋಧರು ತಮ್ಮ ಪ್ರಾಣದ ಹಂಗನ್ನು ತೊರೆದು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅವರ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.

    ಮಾಹಿತಿಗಳ ಪ್ರಕಾರ ಮಳೆಯ ನಡುವೆಯೂ ಯೋಧರು ಸ್ಥಳೀಯರ ನೆರವಿನಿಂದ ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶ ಕಾಯೋ ಸೈನಿಕರ ಭೇಟಿಗಾಗಿ ಯುವಕನ ಏಕಾಂಗಿ ಪ್ರವಾಸ

    ದೇಶ ಕಾಯೋ ಸೈನಿಕರ ಭೇಟಿಗಾಗಿ ಯುವಕನ ಏಕಾಂಗಿ ಪ್ರವಾಸ

    ದಾವಣಗೆರೆ: ಹರಪ್ಪನಹಳ್ಳಿ ತಾಲೂಕಿನ ಯುವಕನೊಬ್ಬ ದೇಶ ಕಾಯೋ ಸೈನಿಕರನ್ನ ಭೇಟಿಯಾಗಬೇಕೆಂದು ಸಿಯಾಚಿನ್ ವರೆಗೂ ಏಕಾಂಗಿ ಪ್ರವಾಸ ಕೈಗೊಂಡಿದ್ದಾರೆ.

    ಬೈಕ್ ಗೆ ಭಾರತದ ಧ್ವಜ ಕಟ್ಟಿಕೊಂಡು ಪ್ರವಾಸಕ್ಕೆ ಹೊರಟಿರೋ ಯುವಕನ ಹೆಸರು ರಾಹುಲ್. ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಎಂ.ಟೆಕ್ ಪದವೀಧರರಾಗಿದ್ದಾರೆ. ದೇಶ ಕಾಯೋ ಸೈನಿಕರಿಗೆ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ನೈತಿಕ ಸ್ಥೈರ್ಯ ತುಂಬುವುದಕ್ಕೆ ಈ ಯುವಕ ಓದಿನ ಬಳಿಕ ದೇಶ ಸುತ್ತೋಕೆ ಶುರು ಮಾಡಿಕೊಂಡಿದ್ದಾರೆ.

    ಹರಪನಹಳ್ಳಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರವಾಸ ಕೈಗೊಂಡ ಯುವಕ ಹುಬ್ಬಳ್ಳಿ, ಮುಂಬೈ, ಅಹಮದಾಬಾದ್, ರಾಜಸ್ಥಾನ, ಗುಜರಾತ್, ಅಮೃತಸರ, ದೆಹಲಿ ಮೂಲಕ ಸಿಯಾಚಿನ್ ತಲುಪಲಿದ್ದಾರೆ. 8,200 ಕಿಲೋಮಿಟರ್ ಪ್ರವಾಸವನ್ನು 35-40 ದಿನಗಳಲ್ಲಿ ಪೂರೈಸಲಿದ್ದು, ರಾಹುಲ್ ಸೈನಿಕ ಜಾಗೃತಿ ಮೂಡಿಸಿದ್ದಾರೆ.

    ರಾಹುಲ್ 2017 ರಲ್ಲೂ ಆಲ್ ಇಂಡಿಯಾ ಪ್ರವಾಸ ಕೈಗೊಂಡು 1962 ರ ಯುದ್ಧಭೂಮಿಗೆ ತೆರಳಿದ್ದರು. ಚೀನಾ-ಭಾರತದ ಗಡಿ ಪ್ರಥಮ ಬಾರಿಗೆ ತೆರಳಿ ಅಲ್ಲಿನ ಭಾರತೀಯ ಯೋಧರಿಗೆ ಧನ್ಯವಾದಗಳನ್ನ ಅರ್ಪಿಸಿದ್ದರು. ಅಲ್ಲಿಂದ ಮೇಘಾಲಯಕ್ಕೆ ತೆರಳಿ ಬಾಂಗ್ಲಾ ಗಡಿಗೆ ಭೇಟಿ ನೀಡಿ ಸೈನಿಕರ ಜೊತೆ ಒಂದು ದಿನ ಕಾಲ ಕಳೆದಿದ್ದರು.

  • ಯೋಧರಿಗೆ ಕೃತಜ್ಞತೆ ಸಲ್ಲಿಸಲು ಬೆಳ್ಳಿ ಬ್ಲೇಡ್ ನಿಂದ ಶೇವ್

    ಯೋಧರಿಗೆ ಕೃತಜ್ಞತೆ ಸಲ್ಲಿಸಲು ಬೆಳ್ಳಿ ಬ್ಲೇಡ್ ನಿಂದ ಶೇವ್

    ಮುಂಬೈ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಹಾಗೂ ದೇಶಕ್ಕಗಿ ಸೇವೆ ಸಲ್ಲಿಸಿದ ಯೋಧರಿಗೆ ಕೃತಜ್ಞತೆ ಸಲ್ಲಿಸಲು ಕ್ಷೌರಿಕರೊಬ್ಬ ನಿವೃತ್ತ ಯೋಧರಿಗೆ ಉಚಿತವಾಗಿ ಬೆಳ್ಳಿ ಬ್ಲೇಡ್ ನಿಂದ ಶೇವ್ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

    ಮಹಾರಾಷ್ಟ್ರದ ಬುಲ್ದಾನ್ ಮೂಲದ ಉದ್ಧವ್ ಗಡೇಕಾರ್ ಎಂಬವರೇ ದೇಶಕ್ಕೆ ಸೇವೆ ಸಲಿಸಿದ ಸೈನಿಕರಿಗೆ ಹೀಗೆ ಉಚಿತ ಕ್ಷೌರ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ.

    ಈ ಕುರಿತು ಮಾತನಾಡಿದ ಉದ್ಧವ್ ಗಡೇಕಾರ್ ದೇಶದ ಸೈನಿಕರು ನಮಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ನಾನೂ ಕೂಡ ಅವರಂತೆ ಸಮಾಜ ಸೇವೆ ಮಾಡಬಯಸಿದ್ದೇನೆ. ಹಾಗಾಗಿ ನಿವೃತ್ತ ಸೈನಿಕರಿಗೆ ಉಚಿತ ಕ್ಷೌರ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ. ಈ ಮೂಲಕ ನಾನೂ ಅವರಂತೆ ಸಮಾಜ ಸೇವೆ ಮಾಡಬಯಸುತ್ತೇನೆ ಎಂದು ಹೇಳಿದ್ದಾರೆ.

    ಈ ಹಿಂದೆ ಕ್ರಿಕೆಟ್ ಆಟಗಾರರ, ಸಿನಿಮಾ ತಾರೆಯರ, ಹಾಗೂ ಪ್ರಸಿದ್ಧ ಆಟಗಾರರ ಕೌರಗಳನ್ನು ಮಾಡಿದ್ದು ಸಾಕಷ್ಟು ಸುದ್ದಿಯಲ್ಲಿತ್ತು. ಕೆಲವರು ತಮ್ಮ ನೆಚ್ಚಿನ ನಾಯಕರ ಹುಟ್ಟುಹ್ಬದ ದಿನ ಉಚಿತವಾಗಿ ಕ್ಷೌರ ಮಾಡಿದ್ದೂ ಉಂಟು.

    ಉದ್ಧವ್ ಸೈನಿಕರಿಗಾಗಿ ಉಚಿತ ಕ್ಷೌರ ಮಾಡುವ ಮೂಲಕ ಸಮಾಜ ಸೇವೆ ಮಾಡುತ್ತಿರುವ ಅವರ ಉದ್ದೇಶ ನಿಜಕ್ಕೂ ಸಾರ್ಥಕವಾದುದು.

  • ನದಿಗೆ ಉರುಳಿದ 18 ಯೋಧರಿದ್ದ ಸೇನಾ ಜೀಪ್ – ವಿಜಯಪುರ ಯೋಧ ಸೇರಿ ಮೂವರು ಹುತಾತ್ಮ

    ನದಿಗೆ ಉರುಳಿದ 18 ಯೋಧರಿದ್ದ ಸೇನಾ ಜೀಪ್ – ವಿಜಯಪುರ ಯೋಧ ಸೇರಿ ಮೂವರು ಹುತಾತ್ಮ

    ವಿಜಯಪುರ: ಅಸ್ಸಾಂನ ಗುವಾಹಾಟಿಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಸೇನಾ ಜೀಪ್ ನದಿಗೆ ಬಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ.

    ಅರುಣಾಚಲ ಪ್ರದೇಶ ಹಾಗೂ ಆಸ್ಸಾಂ ರಾಜ್ಯಗಳ ಗಡಿಭಾಗದ ಬ್ರಹ್ಮಪುತ್ರ ಉಪ ನದಿಯಲ್ಲಿ ಈ ಅವಘಡ ಸಂಭವಿಸಿದೆ. ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಸಾಡಿಯಾ ಎಂಬ ಚಾಪಕೋವ ಮೂಲದ ಮದ್ರಾಸ್ ರೆಜಿಮೆಂಟ್ ಟೆರಿಟೋರಿಯಲ್ ಸೈನ್ಯದಿಂದ 18 ಮಂದಿ ಯೋಧರು ಜೀಪ್ ನಲ್ಲಿದ್ದರು. ಆದರೆ ರಾತ್ರಿ ಇಡುಲಿ ಮತ್ತು ಕಾಬಾಂಗ್ ಗ್ರಾಮಗಳ ನಡುವೆ ಇದ್ದ ನದಿಯೊಳಗೆ ಇದ್ದಕ್ಕಿದ್ದಂತೆ ವಾಹನವು ಬಿದ್ದಿದೆ.

    ನದಿಗೆ ಬಿದ್ದ ಪರಿಣಾಮ ಮೂವರು ಯೋಧರು ಮೃತಪಟ್ಟಿದ್ದಾರೆ. ಇವರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ಒಬ್ಬ ಯೋಧ ಕೂಡ ಸೇರಿದ್ದಾರೆ. ನಂತರ ಕೂಡಲೇ ಪೊಲೀಸ್ ಮತ್ತು ಸೇನೆಯವರು ರಕ್ಷಣಾ ಕಾರ್ಯಚರಣೆ ಮಾಡಿ 15 ಮಂದಿ ಯೋಧರನ್ನು ರಕ್ಷಿಸಿದ್ದಾರೆ. ಮೃತ ಮೂವರು ಯೋಧರಲ್ಲಿ ಒಬ್ಬರು ಇನ್ನು ಪತ್ತೆಯಾಗಿಲ್ಲ. ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಇನ್ನು ಈ ಅವಘಡದಿಂದ ಗಾಯಗೊಂಡ ಸೈನಿಕರಲ್ಲಿ ನಾಲ್ವರನ್ನು ಚಿಕಿತ್ಸೆಗಾಗಿ ಚಾಪಕೋವಾ ಫಸ್ಟ್ ರೆಫರಲ್ ಘಟಕಕ್ಕೆ ರವಾನಿಸಲಾಗಿದೆ. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ರೋಣಿಹಾಳ ಗ್ರಾಮದ ಯೋಧ ಪರಸುರಾಮ ಖ್ಯಾತನ್ನವರ(32) ಮೃತ ಯೋಧ. ಇವರು 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಫೆಬ್ರುವರಿ 9 ರಂದು ಕೋಲ್ಹಾರ ಪಟ್ಟಣದಲ್ಲಿ ನಿರ್ಮಿಸಿದ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ಫೆ. 11 ರಂದು ಸೇವೆಗಾಗಿ ತೆರಳಿದ್ದರು.

    ಮೃತರ ಕುಟುಂಬಕ್ಕೆ ಸೇನೆಯ ಮೇಜರ್ ಕರಿಯಪ್ಪ ಅವರಿಂದ ಮಾಹಿತಿ ರವಾನೆ ಆಗಿದೆ. ಇತ್ತ ಯೋಧನ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಅಪಘಾತದಲ್ಲಿ ಗಾಯಗೊಂಡ ಯೋಧರಿಗೆ ಕಾಶ್ಮೀರದ ಜನರ ಸಹಾಯ- ವಿಡಿಯೋ ವೈರಲ್

    ಅಪಘಾತದಲ್ಲಿ ಗಾಯಗೊಂಡ ಯೋಧರಿಗೆ ಕಾಶ್ಮೀರದ ಜನರ ಸಹಾಯ- ವಿಡಿಯೋ ವೈರಲ್

     

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧರಿಗೆ ಸ್ಥಳಿಯರು ಸಹಾಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಇಲ್ಲಿನ ಬುದ್ಗಾಮ್ ಜಿಲ್ಲೆಯಲ್ಲಿ ಸೇನಾ ಟ್ರಕ್‍ವೊಂದು ಅಪಘಾತಕ್ಕೆ ಸಿಲುಕಿತ್ತು. ಇದನ್ನ ಕಂಡ ಸ್ಥಳೀಯರು ಕೂಡಲೇ ಸೈನಿಕರ ನೆರವಿಗೆ ಧಾವಿಸಿದ್ದಾರೆ. ಭಾನುವಾರದಂದು ಈ ಅಪಘಾತ ನಡೆದಿದೆ.

    ಇಲ್ಲಿನ ಚಾದೂರಾ ಪ್ರದೇಶದ ಮಾರ್ಗವಾಗಿ ವಾಹನ ಚಲಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ರಸ್ತೆಯಿಂದ ಪಕ್ಕಕ್ಕೆ ಹೋಗಿತ್ತು. ಅಪಘಾತದಿಂದಾಗಿ ಹಲವು ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಸೈನಿಕರಿಗೆ ನೆರವಾದ್ರು ಎಂದು ಪೊಲೀಸರು ಹೇಳಿದ್ದಾರೆ. ಸೈನಿಕರಿಗೆ ಕುಡಿಯಲು ನೀರು ಹಾಗೂ ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ.

    ಕಳೆದ ವರ್ಷವೂ ಕೂಡ ಇಲ್ಲಿನ ಪರಿಂಪೋರಾ – ಪಂತ ಚೌಕ್ ಬೈಪಾಸ್‍ನ ಲಸ್ಜನ್ ಬಳಿ ಟ್ರಕ್ ಅಪಘಾತಕ್ಕೆ ಸಿಲುಕಿದ್ದಾಗ ಗಾಯಗೊಂಡ ಸೈನಿಕರು ಹೊರಬರಲು ಸ್ಥಳೀಯರು ಸಹಾಯ ಮಾಡಿದ್ದರು.

  • ಬರಗೂರು ಬರೆದ ಗದ್ಯದಲ್ಲಿ ಸೈನಿಕರಿಗೆ ಅವಮಾನವಾಗಿಲ್ಲ: ಮಂಗಳೂರು ವಿವಿ

    ಬರಗೂರು ಬರೆದ ಗದ್ಯದಲ್ಲಿ ಸೈನಿಕರಿಗೆ ಅವಮಾನವಾಗಿಲ್ಲ: ಮಂಗಳೂರು ವಿವಿ

    ಬೆಂಗಳೂರು: ಬರಗೂರು ರಾಮಚಂದ್ರಪ್ಪನವರು ಬರೆದ ಪಾಠದಲ್ಲಿ ಸೈನಿಕರಿಗೆ ಅವಮಾನ ಮಾಡುವ ವಿಚಾರ ಉಲ್ಲೇಖವಾಗಿಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ, ಪಠ್ಯಪುಸ್ತಕ ಕಾರ್ಯನಿರ್ವಹಕ ಸಂಪಾದಕರಾಗಿರುವ ಡಾ. ನಾಗಪ್ಪ ಗೌಡ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಒಂದು ಪದವನ್ನು ನೋಡಿಕೊಂಡು ಸಂಪೂರ್ಣ ಗದ್ಯದ ಮೇಲೆ ಆರೋಪ ಎಸಗುವುದು ಸರಿಯಲ್ಲ. ಸೈನ್ಯಕ್ಕೆ ಸೇರಿದ್ದ ಗೆಳೆಯರೊಬ್ಬರ ಅಭಿಪ್ರಾಯವನ್ನು ಆಧಾರಿಸಿ ಈ ಪಠ್ಯವನ್ನು ಬರೆದಿದ್ದಾರೆ. ಪಠ್ಯದಲ್ಲಿ ಎಲ್ಲೂ ಭಾರತೀಯ ಸೇನೆ ಎಂದು ಉಲ್ಲೇಖವಾಗಿಲ್ಲ. ಇಡೀ ವಿಶ್ವದಲ್ಲಿ ಆಗುತ್ತಿರುವ ವಿಚಾರವನ್ನು ನೋಡಿಕೊಂಡು ಈ ಗದ್ಯವನ್ನು ಬರೆದಿದ್ದಾರೆ ಎಂದು ಅವರು ಹೇಳಿದರು.

    ವೈಚಾರಿಕ ಲೇಖನವಾಗಿರುವ ಈ ಗದ್ಯದಲ್ಲಿ, ಯೋಧರಿಗೆ ಅವಮಾನ ಮಾಡುವ ಬರಹವನ್ನು ಬರಗೂರು ಅವರು ಬರೆದಿಲ್ಲ ಎಂದು ನಾಗಪ್ಪ ಗೌಡ ಸ್ಪಷ್ಟನೆ ನೀಡಿದರು.

    ಏನಿದು ವಿವಾದ?: ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ ಯೋಧರಿಗೆ ಅವಮಾನ ಎಸಗುವ ಪಠ್ಯವನ್ನು ಬೋಧಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದ ‘ಯುದ್ಧ ಒಂದು ಉದ್ಯಮ’ ಎಂಬ ಗದ್ಯವನ್ನು ಈ ವರ್ಷದಿಂದ ಪ್ರಥಮ ವರ್ಷದ ಬಿಎಸ್ಸಿ ಮತ್ತು ಬಿಸಿಎ ಸೇರಿದಂತೆ ವಿವಿಧ ತರಗತಿಗಳಿಗೆ ಬೋಧಿಸಲಾಗುತ್ತಿದ್ದು, ಈ ಪಾಠದಲ್ಲಿ ಯೋಧರನ್ನು ಮತ್ತು ಯುದ್ಧವನ್ನು ಕೀಳಾಗಿ ಬಿಂಬಿಸಲಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

    ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಮೂಲಕ ಹೊರಬಂದ ಪುಸ್ತಕದಲ್ಲಿ ಯುದ್ಧ ಅಂದ್ರೆ ಒಂದು ಉದ್ಯಮ, ಗಡಿಭಾಗದಲ್ಲಿ ನಿರಂತರ ಅತ್ಯಾಚಾರಗಳು ನಡೆಯುತ್ತದೆ. ಇದರಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಭಾಗಿಯಾಗುತ್ತಾರೆ. ಅಲ್ಲದೆ ಯುದ್ಧದಲ್ಲಿ ಮಡಿದರೆ ಸ್ವರ್ಗದ ಬಾಗಿಲು ಮಾತ್ರವಲ್ಲ ದೇವತಾ ಸ್ತ್ರೀಯರು ಸ್ವಾಗತಕ್ಕಾಗಿ ಕಾಯುತ್ತಿರುತ್ತಾರೆ ಎಂಬ ಕಲ್ಪನೆ ಮೂಡಿಸಿ ಭ್ರಮೆ ಸೃಷ್ಠಿಸಲಾಗುತ್ತಿದೆ. ಯುವ ಮನಸ್ಸುಗಳಿಗೆ ಯುದ್ಧ ಮತ್ತು ದೇಶದ ಬಗ್ಗೆ ಕೀಳಾಗಿ ಬಿಂಬಿಸುವ ಪಾಠವನ್ನು ಬೋಧಿಸಲಾಗುತ್ತಿದೆ ಎಂದು ಪಠ್ಯದಲ್ಲಿ ಬರೆಯಲಾಗಿದೆ.

    ಬರಗೂರು ಅವರ ಈ ಗದ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಪದಚಿತ್ತಾರ ಎಂಬ ಕನ್ನಡ ಪುಸ್ತಕದಲ್ಲಿ ಒಟ್ಟು 12 ಗದ್ಯಗಳಿದ್ದು ಬರಗೂರು ರಾಮಚಂದ್ರಪ್ಪ ಅವರದ್ದು 10ನೇ ಗದ್ಯವಾಗಿದೆ.

  • ಮಂಗ್ಳೂರು ವಿವಿಯ ಕನ್ನಡ ಪಠ್ಯದಲ್ಲಿ ಯೋಧರಿಗೆ ಅವಮಾನ

    ಮಂಗ್ಳೂರು ವಿವಿಯ ಕನ್ನಡ ಪಠ್ಯದಲ್ಲಿ ಯೋಧರಿಗೆ ಅವಮಾನ

    ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ ಯೋಧರಿಗೆ ಅವಮಾನ ಎಸಗುವ ಪಠ್ಯವನ್ನು ಬೋಧಿಸಲಾಗುತ್ತಿದೆ.

    ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದ ‘ಯುದ್ಧ ಒಂದು ಉದ್ಯಮ’ ಎಂಬ ಗದ್ಯವನ್ನು ಪ್ರಥಮ ವರ್ಷದ ಬಿಎಸ್ಸಿ ಮತ್ತು ಬಿಸಿಎ ಸೇರಿದಂತೆ ವಿವಿಧ ತರಗತಿಗಳಿಗೆ ಬೋಧಿಸಲಾಗುತ್ತಿದ್ದು, ಈ ಪಾಠದಲ್ಲಿ ಯೋಧರನ್ನು ಮತ್ತು ಯುದ್ಧವನ್ನು ಕೀಳಾಗಿ ಬಿಂಬಿಸಲಾಗಿದೆ.

    ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಮೂಲಕ ಹೊರಬಂದ ಪುಸ್ತಕದಲ್ಲಿ ಯುದ್ಧ ಅಂದ್ರೆ ಒಂದು ಉದ್ಯಮ, ಗಡಿಭಾಗದಲ್ಲಿ ನಿರಂತರ ಅತ್ಯಾಚಾರಗಳು ನಡೆಯುತ್ತದೆ. ಇದರಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಭಾಗಿಯಾಗುತ್ತಾರೆ. ಅಲ್ಲದೆ ಯುದ್ಧದಲ್ಲಿ ಮಡಿದರೆ ಸ್ವರ್ಗದ ಬಾಗಿಲು ಮಾತ್ರವಲ್ಲ ದೇವತಾ ಸ್ತ್ರೀಯರು ಸ್ವಾಗತಕ್ಕಾಗಿ ಕಾಯುತ್ತಿರುತ್ತಾರೆ ಎಂಬ ಕಲ್ಪನೆ ಮೂಡಿಸಿ ಭ್ರಮೆ ಸೃಷ್ಠಿಸಲಾಗುತ್ತಿದೆ ಎಂದು ಪಠ್ಯದಲ್ಲಿ ಬರೆಯಲಾಗಿದೆ.

    ಬರಗೂರು ಅವರ ಈ ಗದ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಯುವ ಮನಸ್ಸುಗಳಿಗೆ ಯುದ್ಧ ಮತ್ತು ದೇಶದ ಬಗ್ಗೆ ಕೀಳಾಗಿ ಬಿಂಬಿಸುವ ಪಾಠವನ್ನು ಬೋಧಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಪದಚಿತ್ತಾರ ಎಂಬ ಕನ್ನಡ ಪುಸ್ತಕದಲ್ಲಿ ಒಟ್ಟು 12 ಗದ್ಯಗಳಿದ್ದು ಬರಗೂರು ರಾಮಚಂದ್ರಪ್ಪ ಅವರದ್ದು 10ನೇ ಗದ್ಯವಾಗಿದೆ.

     

  • ಸೈನಿಕರಿಗೆ 100 ಅಡಿ ಉದ್ದದ ರಾಖಿ ಕಳುಹಿಸಿದ ವಿದ್ಯಾರ್ಥಿಗಳು

    ಸೈನಿಕರಿಗೆ 100 ಅಡಿ ಉದ್ದದ ರಾಖಿ ಕಳುಹಿಸಿದ ವಿದ್ಯಾರ್ಥಿಗಳು

    ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‍ನ ವಿವಿಧ ಶಾಲೆಯ ವಿದ್ಯಾರ್ಥಿಗಳು ರಕ್ಷಾ ಬಂಧನದ ಅಂಗವಾಗಿ ಭಾರತೀಯ ಸೈನಿಕರಿಗೆ 100 ಅಡಿ ಉದ್ದದ ರಾಖಿ ತಯಾರಿಸಿ ಕಳುಹಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

    ಈ ವಿಶೇಷ ರಾಖಿಯ ಜೊತೆ ವಿವಿಧ ರಾಜ್ಯದ ಸಂಸ್ಕೃತಿ ಮತ್ತು ಬೇರೆ ಬೇರೆ ಧರ್ಮದ ನಡುವಿನ ಏಕತೆ ಹಾಗೂ ಸಾಮರಸ್ಯದ ಸಂದೇಶವನ್ನು ಸಹ ಕಳುಹಿಸಿದ್ದಾರೆ. ಬೃಹತ್ ಆಕಾರದ ರಾಖಿಯಲ್ಲಿ ವಿವಿಧ ಬಣ್ಣದ ಪೇಪರ್ಸ್, ಬಟ್ಟೆ ಲೇಸ್, ಹಾಗೂ ಅಲಂಕಾರಿಕ ಸಾಮಗ್ರಿಗಳನ್ನು ಬಳಸಲಾಗಿದೆ.

    ಇತ್ತೀಚೆಗೆ ಜಮ್ಮ-ಕಾಶ್ಮೀರದಲ್ಲಿ ನಡೆದ ಭಯೋತ್ಪಾಕ ದಾಳಿಯ ನಂತರ ಸೈನಿಕರ ಮೇಲಿನ ಪ್ರೀತಿಗಾಗಿ ಈ ದೊಡ್ಡ ಪ್ರಮಾಣದ ರಾಖಿಯನ್ನು ಸಿದ್ಧಪಡಿಸಿ ಯೋಧರಿಗೆ ಕಳಿಸಿಕೊಡುವ ವಿಚಾರ ಹೊಳೆಯಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಸದ್ಯ ವಿದ್ಯಾರ್ಥಿಗಳು ಪೋಸ್ಟ್ ಮೂಲಕ ಈ ರಾಖಿಯನ್ನು ದೇಶ ಕಾಯೋ ಸೈನಿಕರಿಗೆ ಕಳುಹಿಸಿದ್ದಾರೆ.

    https://youtu.be/WQwGLjiVFZg

     

  • ಕುಪ್ವಾರದಲ್ಲಿ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ- 3 ಯೋಧರು ಹುತಾತ್ಮ

    ಕುಪ್ವಾರದಲ್ಲಿ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ- 3 ಯೋಧರು ಹುತಾತ್ಮ

    – ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

    ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಗಡಿ ನಿಯಂತ್ರಣಾ ರೇಖೆಯ ಬಳಿ ಸೇನಾ ನೆಲೆ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಸೇನಾಧಿಕಾರಿ ಸೇರಿದಂತೆ 3 ಯೋಧರು ಹುತಾತ್ಮರಾಗಿದ್ದಾರೆ.

    ಇಂದು ಮುಂಜಾನೆ 4 ಗಂಟೆಯ ವೇಳೆಗೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಪ್ರತಿ ದಾಳಿ ನಡೆಸಿದ ಯೋಧರು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಯೋಧರು ಮತ್ತು ಉಗ್ರರ ಮಧ್ಯೆ 4 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, ಯೋಧರ ಕಾರ್ಯಾಚರಣೆ ಮುಂದುವರೆದಿದೆ.

    ಕಳೆದ ವರ್ಷ ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದಿಂದ ನುಸುಳಿ ಬಂದ ಉಗ್ರರು ನಡೆಸಿದ ದಾಳಿಯಲ್ಲಿ  19 ಯೋಧರು ಹುತಾತ್ಮರಾಗಿದ್ದರು.