Tag: solar plant

  • ಸೋಲಾರ್ ಪ್ಲಾಂಟ್ ಒಳಗೆ ನುಗ್ಗಿದ್ದ ಚಿರತೆ ಮರಿ ರಕ್ಷಣೆ

    ಸೋಲಾರ್ ಪ್ಲಾಂಟ್ ಒಳಗೆ ನುಗ್ಗಿದ್ದ ಚಿರತೆ ಮರಿ ರಕ್ಷಣೆ

    ಮೈಸೂರು: ಸೋಲಾರ್ ಪ್ಲಾಂಟ್ ಒಳಗೆ ನುಗ್ಗಿದ ಚಿರತೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

    ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೇಳಾಲು ಗ್ರಾಮದ ಸಮೀಪ ಸೋಲಾರ್ ಪ್ಲಾಂಟ್‍ನಲ್ಲಿ ಎರಡು ವರ್ಷದ ಚಿರತೆ ನುಗ್ಗಿತ್ತು. ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್ ಒಳಗೆ ಹೋದ ಚಿರತೆ ಮರಿ ಹೊರಗೆ ಹೋಗಲಾಗದೆ ತಂತಿ ಬೇಲಿಯಲ್ಲಿ ಸಿಲುಕಿ ಕಿರುಚಾಡಿದೆ. ಇದನ್ನೂ ಓದಿ: ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಮುಂದಾದ ಹಿಂದೂ ಸಂಘಟನೆಗಳು

    ಇದನ್ನ ನೋಡಿದ ಸೆಕ್ಯೂರಿಟಿ ಗಾರ್ಡ್, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ, ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸಿ: ರಾಜ್ ಠಾಕ್ರೆ

  • ಆನೆ ಕಾರಿಡಾರ್‌ನಲ್ಲಿ ಸೋಲಾರ್ ಪ್ಲಾಂಟ್- ಸ್ಥಳಾಂತರಕ್ಕೆ ವನ್ಯಪ್ರಿಯರ ಒತ್ತಾಯ

    ಆನೆ ಕಾರಿಡಾರ್‌ನಲ್ಲಿ ಸೋಲಾರ್ ಪ್ಲಾಂಟ್- ಸ್ಥಳಾಂತರಕ್ಕೆ ವನ್ಯಪ್ರಿಯರ ಒತ್ತಾಯ

    ಚಾಮರಾಜನಗರ: ಜಿಲ್ಲೆಯ ಬಿ.ಆರ್.ಟಿ.ಹುಲಿ ರಕ್ಷಿತಾರಣ್ಯದ ಸೂಕ್ಷ್ಮ ಪರಿಸರವಲಯದಲ್ಲೇ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ತಲೆ ಎತ್ತಿದ್ದು ವನ್ಯಜೀವಿಗಳಿಗೆ ಕಂಟಕಪ್ರಾಯವಾಗಿದೆ.

    ಬಿಳಿಗಿರಿ ರಂಗನಬೆಟ್ಟದ ಗುಂಡಾಲ್ ಜಲಾಯಶಯದ ಬಳಿ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯಲ್ಲೇ 500 ಎಕರೆ ಪ್ರದೇಶದಲ್ಲಿ ಬೃಹತ್ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭವಾಗಿದೆ. ಖಾಸಗಿ ಕಂಪನಿಯೊಂದು ರೈತರ ಜಮೀನುಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ಇಲ್ಲಿ ಸೋಲಾರ್ ಘಟಕ ಆರಂಭಿಸಿದೆ.

    ಈ ಪ್ರದೇಶ ಬಿಳಿಗಿರಿರಂಗನಬೆಟ್ಟದಿಂದ ಮಲೆಮಹದೇಶ್ವರಬೆಟ್ಟಕ್ಕೆ ಆನೆಗಳು ಸೇರಿದಂತೆ ವನ್ಯಜೀವಿಗಳು ಮುಕ್ತವಾಗಿ ಸಂಚರಿಸುವ ಮೊಗಸಾಲೆಯಾಗಿದೆ. ಆದರೆ ಇಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣವಾಗಿರುವುದರಿಂದ ಎರಡು ಅರಣ್ಯಗಳ ನಡುವೆ ಆನೆ ಸೇರಿದಂತೆ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಕಡಿವಾಣ ಬಿದ್ದಿದೆ. ಈ ಹಿಂದೆ ಇದೇ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವನ್ಯಜೀವಿಗಳ ಹಿತದೃಷ್ಟಿಯಿಂದ ಅದನ್ನು ಕೈಬಿಡಲಾಗಿತ್ತು. ಆದರೆ ಇದೀಗ ಅದೇ ಪ್ರದೇಶದಲ್ಲಿ ಸೋಲಾರ್ ಉತ್ಪಾದನಾ ಘಟಕ ತಲೆ ಎತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.

    ಸೂಕ್ಷ್ಮ ಪರಿಸರ ವಲಯದಲ್ಲಿ ಆರಂಭವಾಗಿರುವ ಈ ಘಟಕಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡಿರುವುದಕ್ಕೆ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮ ಪರಿಸರ ವಲಯ ಘೋಷಣೆಗೆ ಮೊದಲೇ ಇಲ್ಲಿ ಸೋಲಾರ್ ಘಟಕ ಸ್ಥಾಪನೆಗೆ ಅನುಮತಿ ನೀಡಲಾಗಿತ್ತು. ಆದರೆ ಸೂಕ್ಷ್ಮ ಪರಿಸರ ವಲಯ ಘೋಷಣೆ ನಂತರ ಯಾವುದೇ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳಿಗೆ ಅನುಮತಿ ನೀಡುತ್ತಿಲ್ಲ ಎಂಬುದು ಅರಣ್ಯ ಇಲಾಖೆ ಸಮರ್ಥಿಸಿಕೊಳ್ಳುತ್ತಿದೆ.

    ಎರಡು ಅರಣ್ಯಗಳ ನಡುವೆ ಪ್ರಾಣಿಗಳು ಸಂಚರಿಸುವ ಕಾರಿಡಾರ್ ಗೆ ಕುತ್ತು ಬಂದಿದೆ. ಭವಿಷ್ಯದಲ್ಲಿ ಜೀವವೈವಿಧ್ಯತೆಗೂ ಧಕ್ಕೆ ಉಂಟಾಗಲಿದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಾಣಿಗಳು ಸಂಚರಿಸುವ ದಾರಿ ಬಂದ್ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಲಿದೆ ಎಂದು ವನ್ಯಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

  • ಹಿನ್ನೀರಿನಿಂದ ಮುಳುಗಡೆಗೊಂಡ ಸೋಲಾರ್ ಪ್ಲಾಂಟ್

    ಹಿನ್ನೀರಿನಿಂದ ಮುಳುಗಡೆಗೊಂಡ ಸೋಲಾರ್ ಪ್ಲಾಂಟ್

    ರಾಯಚೂರು: ನದಿ ಹಿನ್ನೀರಿನಿಂದ ಜಿಲ್ಲೆಯ ಗುರ್ಜಾಪುರ ಬಳಿ ಇರುವ ಸೋಲಾರ್ ಪ್ಲಾಂಟ್ ಮುಳುಗಡೆಯಾಗಿದೆ.

    ವೆಂಕಟೇಶ್ ಎಂಬವರ ಖಾಸಗಿ ಸೋಲಾರ್ ಪ್ಲಾಂಟ್ ನದಿ ಹಿನ್ನೀರಿನಿಂದ ಹಳ್ಳ ತುಂಬಿ ಸೋಲಾರ್ ಪ್ಲಾಂಟ್ ಮುಳುಗಡೆಗೊಂಡಿದೆ. ಮಳೆ ನೀರು ಗುರ್ಜಾಪುರ ಗ್ರಾಮಕ್ಕೂ ನುಗ್ಗಿದ್ದು, ಅಲ್ಲಿನ ಗ್ರಾಮಸ್ಥರನ್ನ ಜೇಗರಕಲ್ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

    ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ 51 ಹಳ್ಳಿಗಳಿಗೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಹೀಗಾಗಿ ಈಗಾಗಲೇ 21 ಗ್ರಾಮಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ. ದೇವದುರ್ಗದ ಕೊಪ್ಪರ, ಯಾಟಗಲ್, ಹೂವಿನಹೆಡಗಿ, ಹಿರೇರಾಯಕುಂಪಿ, ಅಂಜಳ ಗ್ರಾಮಕ್ಕೆ ನೀರು ನುಗ್ಗಿದ್ದು, ಆರ್ಮಿ ಹಾಗೂ ಪೊಲೀಸ್ ಇಲಾಖೆಯಿಂದ ಗ್ರಾಮಸ್ಥರ ಸ್ಥಳಾಂತರ ಮಾಡಲಾಗಿದೆ. ದೇವದುರ್ಗ ತಾಲೂಕಿನಲ್ಲಿ ಹತ್ತಾರು ದೇವಸ್ಥಾನಗಳ ಮುಳುಗಡೆಯಾಗಿವೆ.

    ಸೇತುವೆ ಮುಳುಗಡೆ ಜಲದುರ್ಗದಲ್ಲೆ ಲಿಂಗಸೂಗೂರು ತಹಶೀಲ್ದಾರ್, ಸಿಪಿಐ ಮತ್ತು ಇತರೆ ಅಧಿಕಾರಿಗಳ ತಂಡ ಉಳಿದಿದೆ. ಲಿಂಗಸೂಗೂರು ತಾಲೂಕಿನ 7 ಗ್ರಾಮಗಳು ಹಾಗೂ ರಾಯಚೂರು ತಾಲೂಕಿನ ಮೂರು ಗ್ರಾಮಗಳು ನಡುಗಡ್ಡೆಗಳಾಗಿವೆ. ಮುಂದುವರಿದ ಕೃಷ್ಣಾ ನದಿ ಪ್ರವಾಹದಿಂದಾಗಿ ದೇವದುರ್ಗ ಹಾಗೂ ಯಾದಗಿರಿ ಸಂಪರ್ಕ ಕಲ್ಪಿಸುವ ಗೂಗಲ್ ಸೇತುವೆ ಮುಳುಗಡೆಯಾಗಿದೆ. ಸೇತುವೆಯ ಮೇಲಿನಿಂದ ನೀರು ಹರಿಯುತ್ತಿರೋದ್ರಿಂದ ಸಂಚಾರ ಬಂದ್ ಆಗಿದೆ.

    ಉಕ್ಕಿ ಹರಿಯುತ್ತಿರುವ ಕೃಷ್ಣೆಯಿಂದ ಬಹುತೇಕ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿದ್ದು, ಈಗಾಗಲೇ ಜಿಲ್ಲೆಯ ಹತ್ತಾರು ಸೇತುವೆಗಳ ಸಂಪರ್ಕ ಕಡಿತವಾಗಿದೆ. ತಿಂಥಣಿ ಸೇತುವೆ ಹಾಗೂ ದೇವಸಗೂರು ಸೇತುವೆ ಮುಳುಗಡೆ ಸಾಧ್ಯತೆ ಇದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 6.30 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

  • ಸ್ಟೀಲ್ ಕಂಪನಿ ಬಿಟ್ಟು ಸೋಲಾರ್ ಪ್ಲಾಂಟ್ ಸ್ಥಾಪನೆ- ಅನ್ನದಾತರಿಗೆ ಮಿತ್ತಲ್ ಕಂಪನಿ ಟೋಪಿ

    ಸ್ಟೀಲ್ ಕಂಪನಿ ಬಿಟ್ಟು ಸೋಲಾರ್ ಪ್ಲಾಂಟ್ ಸ್ಥಾಪನೆ- ಅನ್ನದಾತರಿಗೆ ಮಿತ್ತಲ್ ಕಂಪನಿ ಟೋಪಿ

    ಬಳ್ಳಾರಿ: ರೈತರ ಭೂಮಿಯನ್ನು ವಶಪಡಿಸಿಕೊಂಡ ಕೆಐಎಡಿಬಿ ಮಿತ್ತಲ್ ಕಂಪನಿಗೆ ಸ್ಟೀಲ್ ಕಾರ್ಖಾನೆ ಸ್ಪಾಪನೆಗಾಗಿ ನೀಡಿತ್ತು. ಆದ್ರೆ ಸ್ಟೀಲ್ ಕಾರ್ಖಾನೆಗೆ ಜಾಗ ಪಡೆದು ಮಿತ್ತಲ್ ಮತ್ತು ಬ್ರಾಹ್ಮಣಿ ಸ್ಟೀಲ್ ಕಂಪನಿ ಇದೀಗ ಸೋಲಾರ್ ಪ್ಲಾಂಟ್ ಸ್ಥಾಪಿಸಲು ಹೊರಟಿವೆ. ಉದ್ಯೋಗದ ಆಸೆ ತೋರಿಸಿ ಭೂಮಿ ಕಿತ್ಕೊಂಡ ಮಿತ್ತಲ್ ಕಂಪನಿ ವಿರುದ್ಧ ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ.

    ಬಳ್ಳಾರಿ ಜಿಲ್ಲೆಯ ಕುಡತಿನಿ, ಹರಗಿನಿಡೋಣಿ, ವೇಣಿವೀರಾಪುರ, ಕೊಳಗಲ್ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ಮತ್ತೆ ಹೋರಾಟಕ್ಕೆ ಇಳಿಯಲು ರೆಡಿಯಾಗಿದ್ದಾರೆ. ಬಳ್ಳಾರಿ ತಾಲೂಕಿನ 4500 ಹೆಚ್ಚು ರೈತರಿಂದ ಹತ್ತು ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ವಶಪಡಿಸಿಕೊಂಡಿದ್ದ ಕೆಐಎಡಿಬಿ ಆ ಭೂಮಿಯನ್ನು ಮಿತ್ತಲ್ ಹಾಗೂ ಬ್ರಾಹ್ಮಿಣಿ ಕಂಪನಿಗಳಿಗೆ ಸ್ಟೀಲ್ ಕಾರ್ಖಾನೆ ಸ್ಥಾಪನೆ ಮಾಡಲು ಭೂಮಿ ನೀಡಿತ್ತು. ಅಲ್ಲದೇ ಭೂಮಿ ನೀಡಿದ ರೈತರಿಗೆ ಉದ್ಯೋಗದ ಭರವಸೆ ಸಹ ನೀಡಿತ್ತು. ಆದ್ರೆ ಈಗ ಮಿತ್ತಲ್ ಕಂಪನಿ ಸ್ಟೀಲ್ ಕಾರ್ಖಾನೆ ಬದಲಾಗಿ ಸೋಲಾರ ಕಾರ್ಖಾನೆ ಸ್ಥಾಪಿಸ್ತಿದೆ.

    ರೈತರಿಂದ 10,500 ಎಕರೆ ಭೂಮಿ ಪಡೆದ ಮಿತ್ತಲ್ ಮತ್ತು ಬ್ರಾಹ್ಮಣಿ ಕಾರ್ಖಾನೆಗಳು ಸಾಕಷ್ಟು ರೈತರಿಗೆ ಸರಿಯಾಗಿ ಪರಿಹಾರವನ್ನೆ ನೀಡಿಲ್ಲ. ನೂರಾರು ರೈತರು ಇಂದಿಗೂ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಅಂದು ಭೂಮಿ ಪಡೆದ ಕಾರ್ಖಾನೆಗಳು ರೈತರ ಕುಟುಂಬಗಳಿಗೆ ಸ್ಟೀಲ್ ಕಾರ್ಖಾನೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿತ್ತು, ಆದ್ರೆ ಸೋಲಾರ್ ಪ್ಲಾಂಟ್ ನಿರ್ಮಿಸೋದ್ರಿಂದ ಉದ್ಯೋಗವೇ ಸಿಗಲ್ಲ. ಹೀಗಾಗಿ ಸೋಮವಾರ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ.