Tag: Solar Mission Aditya

  • ಭೂಮಿ ಕಕ್ಷೆ ತೊರೆದ ಆದಿತ್ಯ ಎಲ್‌1 ನೌಕೆ – 110 ದಿನಗಳ ಸೂರ್ಯ ಯಾತ್ರೆ ಆರಂಭ

    ಭೂಮಿ ಕಕ್ಷೆ ತೊರೆದ ಆದಿತ್ಯ ಎಲ್‌1 ನೌಕೆ – 110 ದಿನಗಳ ಸೂರ್ಯ ಯಾತ್ರೆ ಆರಂಭ

    ನವದೆಹಲಿ: ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಮಿಷನ್ ಆದಿತ್ಯ-ಎಲ್ 1 (Aditya L1) ಬಾಹ್ಯಾಕಾಶ ನೌಕೆಯು ಭೂಮಿಯ ಕಕ್ಷೆಯಿಂದ ಹೊರನಡೆದು, ಲಾಗ್ರೇಂಜ್ ಪಾಯಿಂಟ್ 1 (ಎಲ್ 1) ಕಡೆಗೆ ಹೆಜ್ಜೆ ಇಟ್ಟಿದೆ.

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಟ್ರಾನ್ಸ್-ಲಗ್ರಾಂಜಿಯನ್ ಪಾಯಿಂಟ್ 1 (TL1I) ಕಕ್ಷೆ ಎತ್ತರಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತು. L1 ಗೆ ಬಾಹ್ಯಾಕಾಶ ನೌಕೆಯ 110 ದಿನಗಳ ಪ್ರಯಾಣ ಈಗ ಆರಂಭಗೊಂಡಿದೆ. ಈ ಕುರಿತು ಇಸ್ರೋ, ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದೆ. ಇದನ್ನೂ ಓದಿ: ಇದು ಅಸಂಬದ್ಧ, ಪ್ರೇರಿತ- ಕೆನಡಾ ಆರೋಪ ತಿರಸ್ಕರಿಸಿದ ಭಾರತ

    TL1I ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ L1 ಪಾಯಿಂಟ್‌ ಕಡೆಗೆ ಭೂ ಕಕ್ಷೆಯಿಂದ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ. ಆದಿತ್ಯ ನೌಕೆಯು ಈಗ ಸೂರ್ಯ-ಭೂಮಿ ಎಲ್‌1 ಪಾಯಿಂಟ್‌ ಕಡೆಗೆ ಪ್ರಯಾಣ ಆರಂಭಿಸಿದೆ.

    ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC-SHAR) ಆದಿತ್ಯ-L1 ಏಳು ಪೇಲೋಡ್‌ಗಳೊಂದಿಗೆ ಉಡಾವಣೆಗೊಂಡಿತ್ತು. ಇದನ್ನೂ ಓದಿ: ಹಳೆ ಸಂಸತ್‌ ಭವನದಲ್ಲಿ ಸಂಸದರ ಮೆಗಾ ಫೋಟೋಶೂಟ್‌ – ಸುಂದರ ನೆನಪುಗಳೊಂದಿಗೆ ವಿದಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Aditya L1: ಎರಡನೇ ಕಕ್ಷೆ ಯಶಸ್ವಿಯಾಗಿ ಪ್ರವೇಶಿಸಿದ ಆದಿತ್ಯ ನೌಕೆ

    Aditya L1: ಎರಡನೇ ಕಕ್ಷೆ ಯಶಸ್ವಿಯಾಗಿ ಪ್ರವೇಶಿಸಿದ ಆದಿತ್ಯ ನೌಕೆ

    ನವದೆಹಲಿ: ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಳುಹಿಸಿರುವ ಆದಿತ್ಯ ಎಲ್‌1 ಬಾಹ್ಯಾಕಾಶ ನೌಕೆ (Aditya L1) ಎರಡನೇ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ ಎಂದು ಇಸ್ರೋ ತಿಳಿಸಿದೆ.

    ಸೆ.5 ರಂದು ಮಧ್ಯರಾತ್ರಿ 2:45 ಕ್ಕೆ ಆದಿತ್ಯ ಎಲ್‌1 ನೌಕೆ ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆ

    ಆದಿತ್ಯ ಎಲ್‌1 ನೌಕೆಯು ಸೆ.10 ರಂದು ರಾತ್ರಿ 2:30 ಕ್ಕೆ ಮೂರನೇ ಕಕ್ಷೆಯನ್ನು ಪ್ರವೇಶಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಸೆ.3 ರಂದು ನೌಕೆಯು ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಬದಲಾಯಿಸಿತ್ತು.

    ಸೂರ್ಯನ ಅಧ್ಯಯನಕ್ಕಾಗಿ ‘ಆದಿತ್ಯ ಎಲ್1’ ಬಾಹ್ಯಾಕಾಶ ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ ಸೆ.2 ರಂದು ಉಡಾವಣೆ ಮಾಡಿತು. ಭಾರತದ ಮೊದಲ ಸೌರ ವೀಕ್ಷಣಾಲಯವನ್ನು ಸೂರ್ಯ ಮತ್ತು ಭೂಮಿ ನಡುವಿನ L1 ಪಾಯಿಂಟ್‌ನಲ್ಲಿ ಇರಿಸುವ ಮೂಲಕ ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಗುರಿಯನ್ನು ಈ ಮಿಷನ್ ಹೊಂದಿದೆ. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

    L1 ಎಂದರೆ ಲಾಗ್ರೆಂಜ್ ಪಾಯಿಂಟ್ 1. ಅಲ್ಲಿ ಬಾಹ್ಯಾಕಾಶ ನೌಕೆಯನ್ನು ನಿಲ್ಲಿಸಲಾಗುತ್ತದೆ. ISRO ಪ್ರಕಾರ, ಆದಿತ್ಯ-L1 ಭೂಮಿಯಿಂದ ಸರಿಸುಮಾರು 15 ಕಿ.ಮೀ ದೂರದಲ್ಲಿ ಸೂರ್ಯನ ಕಡೆಗೆ ನಿಂತು ಅಧ್ಯಯನ ನಡೆಸಲಿದೆ. ಈ ಪಾಯಿಂಟ್‌ ಭೂಮಿಯಿಂದ ಸೂರ್ಯನಿಗೆ ಇರುವ ದೂರದ 1% ಭಾಗದಷ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೋಲಾರ್ ಮಿಷನ್ ‘ಆದಿತ್ಯ’ ಸೆಪ್ಟೆಂಬರ್‌ನಲ್ಲಿ ಲಾಂಚ್‍ಗೆ ಸಿದ್ಧ: ಇಸ್ರೋ ಅಧ್ಯಕ್ಷ

    ಸೋಲಾರ್ ಮಿಷನ್ ‘ಆದಿತ್ಯ’ ಸೆಪ್ಟೆಂಬರ್‌ನಲ್ಲಿ ಲಾಂಚ್‍ಗೆ ಸಿದ್ಧ: ಇಸ್ರೋ ಅಧ್ಯಕ್ಷ

    ಬೆಂಗಳೂರು: ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡರ್ ವಿಕ್ರಮ್‍ನ್ನು ಯಶಸ್ವಿಯಾಗಿ ಇಳಿಸಿದ ಇಸ್ರೋ (ISRO), ಇದೀಗ ಸೂರ್ಯನ ಅಧ್ಯಯನಕ್ಕೆ ಸಜ್ಜಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಸೋಲಾರ್ ಮಿಷನ್ ‘ಆದಿತ್ಯ’ (Solar Mission Aditya) ಇದೇ ಸೆಪ್ಟೆಂಬರ್‌ಗೆ ಲಾಂಚ್ ಆಗಲು ಸಿದ್ಧವಾಗುತ್ತಿದೆ ಎಂದು ತಿಳಿಸಿದ್ದಾರೆ.

    ಚಂದ್ರಯಾನ-3  (Chandrayaan-3) ಯಶಸ್ವಿಯಾದ ಬಗ್ಗೆ ಅವರು ಮಾತನಾಡಿದ್ದಾರೆ. ಈ ವೇಳೆ, ಮಿಷನ್ ‘ಆದಿತ್ಯ’ ಕೆಲಸಗಳು ಪ್ರಗತಿಯಲ್ಲಿವೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಲಾಂಚ್‍ಗೆ ಸಿದ್ಧವಾಗಲಿದೆ. 2025 ರ ವೇಳೆಗೆ ಬಾಹ್ಯಾಕಾಶಕ್ಕೆ ಮಾನವಸಹಿತ ಮಿಷನ್ ಕೈಗೊಳ್ಳಲು ಯೋಜಿಸಿದ್ದು, ಕ್ರ್ಯೂ ಮಾಡ್ಯೂಲ್ (ಗಗನಯಾತ್ರಿಗಳಿರುವ ಘಟಕ) ಸಾಮರ್ಥ್ಯ ಪರೀಕ್ಷಾ ಕಾರ್ಯಾಚರಣೆಗಳನ್ನು ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ತಿಂಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್ – ಇಸ್ರೋ ಅಧ್ಯಕ್ಷರಿಗೆ ಸೋನಿಯಾ ಗಾಂಧಿ ಪತ್ರ

    ದಕ್ಷಿಣ ಧ್ರುವವು ಸೂರ್ಯನಿಂದ ಕಡಿಮೆ ಪ್ರಕಾಶಮಾನವನ್ನು ಪಡೆಯುತ್ತದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಾಗಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಗಳು ದಕ್ಷಿಣ ಧ್ರುವದ ಕುರಿತಾಗಿ ಆಸಕ್ತಿ ತೋರಿಸಿದ್ದಾರೆ. ಮನುಷ್ಯ ಚಂದ್ರನ ಮೇಲೆ ವಸಾಹತುಗಳನ್ನು ಸ್ಥಾಪಿಸುವುದು ಮತ್ತು ಅದರ ಆಚೆಗೆ ಬೆಳೆಯುವುದು ಅದರ ಉದ್ದೇಶವಾಗಿದೆ. ಚಂದ್ರಯಾನ-3 ಮಿಷನ್‍ನ ಯಶಸ್ಸಿಗೆ ಕಾರಣರಾದ ಎಲ್ಲಾ ವಿಜ್ಞಾನಿಗಳಿಗೆ ಇದು ಸಂತೋಷದ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.

    ಬುಧವಾರ ಚಂದ್ರಯಾನ ಯಶಸ್ವಿಯಾಗಿ ಲ್ಯಾಂಡ್ ಆದ ನಂತರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಸೂರ್ಯ ಮತ್ತು ಶುಕ್ರ ಗ್ರಹದ ಮೇಲೆ ಭವಿಷ್ಯದ ಕಾರ್ಯಾಚರಣೆಗಳನ್ನು ಪ್ರಸ್ತಾಪಿಸಿದ್ದರು. ಇದನ್ನೂ ಓದಿ: ಚಂದ್ರನ ಮೇಲೆ ನಡೆದಾಡಿದ ಪ್ರಗ್ಯಾನ್‌ ರೋವರ್‌ – ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬರಲು ತಡವಾಗಿದ್ಯಾಕೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]