Tag: soil collapse

  • ಮೆಟ್ರೋ ಕಾಮಗಾರಿ – 30 ಅಡಿ ಮಣ್ಣು ಕುಸಿತ, ತಪ್ಪಿತು ಭಾರೀ ಅನಾಹುತ

    ಮೆಟ್ರೋ ಕಾಮಗಾರಿ – 30 ಅಡಿ ಮಣ್ಣು ಕುಸಿತ, ತಪ್ಪಿತು ಭಾರೀ ಅನಾಹುತ

    ಬೆಂಗಳೂರು: ನಗರದ ಟ್ಯಾನರಿ ರಸ್ತೆಯಲ್ಲಿ ನಡೆಯುತ್ತಿದ್ದ ಮೆಟ್ರೋ ಕಾಮಗಾರಿ ವೇಳೆ 30 ಅಡಿ ಮಣ್ಣು ಕುಸಿದು ಸಂಭವಿಸಬೇಕಿದ್ದ ಭಾರೀ ಅನಾಹುತ ತಪ್ಪಿದೆ.  ಇದನ್ನೂ ಓದಿ:ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು: ಸಂಜಯ್ ಪಾಟೀಲ್

    Metro Work

    ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಸುರಂಗ ಕೊರೆದು ಟಿಬಿಎಂ ಹೊರಬಂದಿತ್ತು. ಆದರೆ ಈ ಒತ್ತಡಕ್ಕೆ ಮುಂಜಾನೆ 3 ಗಂಟೆಗೆ ಮುಚ್ಚಿದ್ದ ಬಾವಿಗೆ ಮಣ್ಣು ಕುಸಿದು ಕೆಳಗೆ ಬಿದ್ದಿದೆ. ಇದರಿಂದ ಸಂಭವಿಸಬೇಕಾಗಿದ್ದ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು – ಶಂಕರ್‌ಗೆ ಮಗನದ್ದೇ ಖೆಡ್ಡಾ

    ಮಾಲೀಕ ಝಬೀ ಎಂಬವರಿಗೆ ಸೇರಿದ ಜಾಗ ಇದಾಗಿದ್ದು, ಘಟನೆ ಸಂಭವಿಸಲು ಬಿಎಂಆರ್‌ಸಿಎಲ್ ಅಧಿಕಾರಿಗಳೇ ಕಾರಣ. ಹೀಗಾಗಿ ನಮ್ಮ ಮೆಟ್ರೋ ಈ ಜಾಗ ಪಡೆದು ಇದಕ್ಕೆ ಪರಿಹಾರ ನೀಡಲಿ ಎಂದು ಮಾಲೀಕರು ಆಗ್ರಹಿಸಿದ್ದಾರೆ.  ಇದನ್ನೂ ಓದಿ: ನಾಯಕ ದೇವರಕೊಂಡಗಿಂತಲೂ ದುಬಾರಿ ಸಂಭಾವನೆ ಪಡೆಯಲಿದ್ದಾರೆ ಮೈಕ್ ಟೈಸನ್

  • ಕಲ್ಯಾಣಿ ತಡೆಗೋಡೆ ನಿರ್ಮಾಣ ವೇಳೆ ಮಣ್ಣು ಕುಸಿತ – ಕಾರ್ಮಿಕ ಸಾವು

    ಕಲ್ಯಾಣಿ ತಡೆಗೋಡೆ ನಿರ್ಮಾಣ ವೇಳೆ ಮಣ್ಣು ಕುಸಿತ – ಕಾರ್ಮಿಕ ಸಾವು

    ಚಿಕ್ಕಬಳ್ಳಾಪುರ: ಕಲ್ಯಾಣಿ ನಿರ್ಮಾಣದ ವೇಳೆ ತಡೆಗೋಡೆಯ ಮಣ್ಣು ಕುಸಿದ ಪರಿಣಾಮ ಕಲ್ಯಾಣಿಯೊಳಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ದಿನ್ನೂರು ಗ್ರಾಮದಲ್ಲಿ ನಡೆದಿದೆ.

    ಶ್ರೀನಿವಾಸಪುರ ಮೂಲದ ಅಂಜಿನಪ್ಪ(40) ಮೃತ ಕಾರ್ಮಿಕ. ಗ್ರಾಮಪಂಚಾಯತಿ ವತಿಯಿಂದ ನರೇಗಾ ಮೂಲಕ ಗ್ರಾಮದಲ್ಲಿ ಸುಂದರ ಕಲ್ಯಾಣಿ ನಿರ್ಮಾಣ ಕಾರ್ಯವನ್ನು ನಡೆಸಲಾಗುತ್ತಿತ್ತು. ಆದರೆ ತರಾತುರಿಯಲ್ಲಿ ಕಾಮಗಾರಿ ಮುಗಿಸಲು ಹಗಲು ರಾತ್ರಿ ಕಾರ್ಮಿಕರ ಕೈಯಲ್ಲಿ ಕೆಲಸ ಮಾಡಿಸಲಾಗುತ್ತಿದ್ದು ಎನ್ನಲಾಗಿದೆ.

    ಮಳೆ ಬಂದಿದ್ದ ಸಂದರ್ಭದಲ್ಲಿಯೇ ಕಾಮಗಾರಿ ನಡೆಸುತ್ತಿದ್ದ ಕಾರಣ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಕಲ್ಯಾಣಿಯೊಳಗೆ ಬಿದ್ದಿದ್ದಾರೆ. ಕಲ್ಯಾಣಿ ತುಂಬಾ ಆಳವಾಗಿದ್ದು ಕಾರ್ಮಿಕನನ್ನು ಮೇಲೆತ್ತುವಷ್ಟರಲ್ಲೇ ಮೃತಪಟ್ಟಿದ್ದಾರೆ.

    ಸದ್ಯ ಗುತ್ತಿಗೆದಾರ ಹಾಗೂ ಗ್ರಾಮಪಂಚಾಯತ್ ಸದಸ್ಯ ತರಾತುರಿಯಲ್ಲಿ ಕಾಮಗಾರಿ ಮಾಡಲು ಮುಂದಾಗಿದ್ದೇ ಅವಘಡಕ್ಕೆ ಕಾರಣ ಅಂತ ಆರೋಪಿಸಲಾಗಿದೆ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಸ್ವಾತಂತ್ರ್ಯೋತ್ಸವಕ್ಕೆ ನಾಟಕ ಅಭ್ಯಾಸ ಮಾಡುತ್ತಾ ಪ್ರಾಣ ಕಳೆದುಕೊಂಡ ಬಾಲಕ

  • ಚಾರ್ಮಾಡಿ ಘಾಟ್‍ನಲ್ಲಿ ವಾಹನ ಸಂಚಾರಕ್ಕೆ ಮತ್ತೆ ಬ್ರೇಕ್

    ಚಾರ್ಮಾಡಿ ಘಾಟ್‍ನಲ್ಲಿ ವಾಹನ ಸಂಚಾರಕ್ಕೆ ಮತ್ತೆ ಬ್ರೇಕ್

    ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮತ್ತೆ ಬ್ರೇಕ್ ಹಾಕಲಾಗಿದೆ.

    ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ನಿನ್ನೆಯಷ್ಟೇ ಆದೇಶ ಹೊರಡಿಸಿ, ಶುಕ್ರವಾರದಿಂದ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಆದರೆ ಸದ್ಯ ಪೊಲೀಸರು ನೀಡಿರುವ ವರದಿಯಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಚಾರ್ಮಾಡಿ ಘಾಟ್ ಸಹಜ ಸ್ಥಿತಿಗೆ ಬರಲು ಇನ್ನಷ್ಟು ದಿನಗಳು ಬೇಕಾಗುತ್ತದೆ ಎಂದು ತಿಳಿಸಲಾಗಿದೆ.

    ಪೊಲೀಸರ ವರದಿ ಪಡೆದ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು, ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಗೊಳಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಅನಿರ್ದಿಷ್ಟಾವಧಿಗೆ ಮತ್ತೆ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

    ಧಾರಾಕಾರ ಮಳೆಯಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಅಲ್ಲಲ್ಲಿ ಕುಸಿತ ಕಂಡಿರುವುದರಿಂದ ವಾಹನ ಸಂಚಾರ ಸ್ಥಗಿತಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಇತ್ತೀಚೆಗೆ ಆದೇಶ ನೀಡಿದ್ದರು. ಇದರಿಂದಾಗಿ ಘಾಟ್ ಮಾರ್ಗದ ಚಿಕ್ಕಮಗಳೂರು – ದಕ್ಷಿಣ ಕನ್ನಡ, ಧರ್ಮಸ್ಥಳ ಸಂಪರ್ಕ ಕಡಿತವಾಗಿತ್ತು.

    ಚಾರ್ಮಾಡಿ ಘಾಟ್ ವಾಹನ ಸಂಚಾರವನ್ನು ಚಿಕ್ಕಮಗಳೂರು ಜಿಲ್ಲಾಡಳಿತವು ಸೆಪ್ಟೆಂಬರ್ 14ರ ವರೆಗೆ ನಿಷೇಧಿಸಿತ್ತು. ಆದರೆ ಪ್ರಯಾಣಿಕರ ಸಮಸ್ಯೆ ಅರಿತ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು, ಲಘು ವಾಹನಗಳಿಗೆ ಅವಕಾಶ ನೀಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈಗ ಗುಡ್ಡ ಕುಸಿತದ ಭೀತಿ ಎದುರಾದ ಹಿನ್ನೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.

  • ಮಡಿಕೇರಿಯಲ್ಲಿ ಮಣ್ಣು ಕುಸಿದು ಸ್ಥಳದಲ್ಲಿಯೇ ಇಬ್ಬರು ಮಹಿಳಾ ಕಾರ್ಮಿಕರು ಸಾವು

    ಮಡಿಕೇರಿಯಲ್ಲಿ ಮಣ್ಣು ಕುಸಿದು ಸ್ಥಳದಲ್ಲಿಯೇ ಇಬ್ಬರು ಮಹಿಳಾ ಕಾರ್ಮಿಕರು ಸಾವು

    ಮಡಿಕೇರಿ: ಕಟ್ಟಡ ನಿರ್ಮಾಣ ವೇಳೆ ಮಣ್ಣು ಕುಸಿದು ಸ್ಥಳದಲ್ಲಿಯೇ ಇಬ್ಬರು ಮಹಿಳಾ ಕಾರ್ಮಿಕರು ಮೃತಪಟ್ಟ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಹಾಸನ ಜಿಲ್ಲೆ ಹಳೇಬೀಡು ಮೂಲದ ಕಾರ್ಮಿಕರಾದ ಗೌರಮ್ಮ (40), ಯಶೋಧ(20) ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಮಡಿಕೇರಿ ನಿವಾಸಿ ಸುಬ್ಬಯ್ಯ ಎಂಬವರ ಮನೆ ಕಟ್ಟಡ ನಿರ್ಮಾಣ ವೇಳೆ ಈ ಅವಘಡ ಸಂಭವಿಸಿದೆ. ಮತ್ತೋರ್ವ ಕಾರ್ಮಿಕ ವೆಂಕಟಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಹಳೇಬೀಡು ಮೂಲದ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಮಡಿಕೇರಿಯ ರಾಜಾ ಸೀಟ್ ಬಳಿ ಮಣ್ಣಿನ ಕೆಲಸಕ್ಕೆ ಬಂದಿದ್ದರು. ಮಡಿಕೇರಿ ನಗರದ ಗೌಳಿ ಬೀದಿಯಲ್ಲಿನ ಸುಬ್ಬಯ್ಯ ಅವರ ಮನೆಯಲ್ಲಿ ಒಟ್ಟು 6 ಜನ ಇಂದು ತಳಪಾಯನ್ನು ತೆಗೆಯುತ್ತಿದ್ದರು. ಈ ವೇಳೆ ಬರೆ ಕುಸಿದು ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಅವರಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟರೆ, ಓರ್ವ ಮಹಿಳೆ ಹಾಗೂ ಓರ್ವ ಪುರುಷ ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಪಾರಾಗಿದ್ದಾರೆ.

    ಬದುಕುಳಿದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರಲ್ಲಿ ವೆಂಕಟಸ್ವಾಮಿ ಸ್ಥಿತಿ ಚಿಂತಾಜನಕವಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಮೃತಪಟ್ಟ ಮಹಿಳೆಯರಿಗೆ ಹಾಗೂ ಗಾಯಗೊಂಡವರಿಗೆ ಪರಿಹಾರ ಕೊಡಿಸಲಾಗುತ್ತದೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ನಿವೃತ್ತ ಮಡಿಕೇರಿ ನಿರೀಕ್ಷಕ ಅನೂಪ್ ಮಾದಪ್ಪ ಭರವಸೆ ನೀಡಿದ್ದಾರೆ.

    ಬರೆಯ ಮಣ್ಣಿನಲ್ಲಿ ಸಿಲುಕಿ ಬದುಕುಳಿದ ಮಹಿಳೆ ಮಾತನಾಡಿ, ಕೆಲಸವನ್ನು ಮುಗಿಸಿ ಇನ್ನೊಂದು 10 ಬುಟ್ಟಿ ಮಣ್ಣು ಬಾಕಿ ಇತ್ತು. ಅದನ್ನು ಎತ್ತಿ ಹಾಕಿ ಹೋಗೋಣ ಅಂದುಕೊಂಡಿದ್ದೇವು. ಮಣ್ಣ ತೆಗೀತಾ ಇದ್ದಾಗ ಕಣ್ಣು ಮುಚ್ಚಿ ಬಿಡೋದರೋಳಗೆ ಬರೆ ಕುಸಿಯಿತು. ಸತ್ತವರಲ್ಲಿ ಒಬ್ಬಳಿಗೆ ಎರಡು ಪುಟ್ಟ ಮಕ್ಕಳಿದ್ದಾರೆ. ಇನ್ನೊಬ್ಬಳಿಗೆ ಮದುವೆಯಾಗಿ ಕೇವಲ 6 ತಿಂಗಳು ಆಗಿದೆ ಎಂದು ದು:ಖ ತೋಡಿಕೊಂಡರು.

    ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿ ಮಣ್ಣಿನ ಅಡಿ ಸಿಲುಕಿಕೊಂಡಿದ್ದ ಗೌರಮ್ಮ ಹಾಗೂ ಯಶೋಧ ಅವರ ಮೃತದೇಹವನ್ನು ಹೊರ ತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟಸ್ವಾಮಿ ಅವರನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಸಿ ವ್ಯಾಲಿ ಕಾಮಗಾರಿ ವೇಳೆ ಮಣ್ಣಿನ ದಿಬ್ಬ ಕುಸಿದು ಇಬ್ಬರು ಕಾರ್ಮಿಕರ ಸಾವು

    ಕೆಸಿ ವ್ಯಾಲಿ ಕಾಮಗಾರಿ ವೇಳೆ ಮಣ್ಣಿನ ದಿಬ್ಬ ಕುಸಿದು ಇಬ್ಬರು ಕಾರ್ಮಿಕರ ಸಾವು

    ಬೆಂಗಳೂರು: ಕೆಸಿ ವ್ಯಾಲಿ ಕಾಮಗಾರಿ ವೇಳೆ ಮಣ್ಣಿನ ದಿಬ್ಬ ಕುಸಿದ ಪರಿಣಾಮ ಮಣ್ಣಿನಡಿಯಲ್ಲಿ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಮಹದೇವಪುರದ ಬಳಿ ನಡೆದಿದೆ.

    ಮೃತರನ್ನು ಉತ್ತರ ಭಾರತ ಮೂಲದ ಸಂದೀಪ್(24) ಅಖಿಲೇಶ್ ಯಾದವ್(26) ಎಂದು ಗುರುತಿಸಲಾಗಿದೆ. ಕೆಆರ್ ಪುರದ ಬಳಿ ನಡೆಯುತ್ತಿರುವ ಕೆಸಿ ವ್ಯಾಲಿ ಕಾಮಗಾರಿ ಸ್ಥಳದಲ್ಲಿ ಘಟನೆ ನಡೆದಿದೆ. ಈ ವೇಳೆ ಎಂಜಿನಿಯರ್ ಉಮಾಶಂಕರ್ ಎಂಬವರನ್ನು ರಕ್ಷಣೆ ಮಾಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳದಲ್ಲಿ ಮೃತ ಪಟ್ಟ ಕಾರ್ಮಿಕರ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.