Tag: Sohail Khan

  • ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಕೇಸ್‌; ನಟನ ಕುರಿತು ಹಾಡು ಬರೆದಿದ್ದ ರಾಯಚೂರಿನ ಯುವಕ ಬಂಧನ

    ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಕೇಸ್‌; ನಟನ ಕುರಿತು ಹಾಡು ಬರೆದಿದ್ದ ರಾಯಚೂರಿನ ಯುವಕ ಬಂಧನ

    ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಜೀವ ಬೆದರಿಕೆ ಪ್ರಕರಣ ಹಿನ್ನೆಲೆ ರಾಯಚೂರಿನ ಮಾನ್ವಿಯಲ್ಲಿ ಮುಂಬೈ ಪೊಲೀಸರು ಆರೋಪಿ ಯುವಕನನ್ನ ಬಂಧಿಸಿ ಕರೆದೊಯ್ದಿದ್ದಾರೆ. ಮಾನ್ವಿಯಲ್ಲಿ ಟೈಯರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೋಹೆಲ್ ಪಾಷಾ (Sohail Pasha) ಬಂಧಿತ ಆರೋಪಿ.

    ನವೆಂಬರ್ 11ರಂದು ಆರೋಪಿಯನ್ನ ಬಂಧಿಸಿ ಮುಂಬೈಗೆ ಕರೆದೊಯ್ಯಲಾಗಿದೆ. ಮುಂಬೈ ವರ್ಲಿ ಪೊಲೀಸ್ ಠಾಣೆಯಿಂದ ಆರೋಪಿ ಪೋಷಕರಿಗೆ ಇಂದು ಕರೆ ಬಂದಿದ್ದು ವಿಚಾರಣೆಗೆ ಮುಂಬೈಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಇದೀಗ ಮಗನ ಬಂಧನದಿಂದ ಬಡ ಕುಟುಂಬ ಕಣ್ಣೀರಿಡುತ್ತಿದೆ. ಇದನ್ನೂ ಓದಿ:`ದಾಸವರೇಣ್ಯ ಶ್ರೀ ವಿಜಯ ದಾಸರು 2′ ಚಿತ್ರಕ್ಕೆ ಚಾಲನೆ

    ಸಲ್ಮಾನ್ ಖಾನ್ ಅಪ್ಪಟ ಅಭಿಮಾನಿಯಾಗಿದ್ದ ಸೋಹೆಲ್ ಪಾಶಾ, ಬಹುಬೇಗ ಹೆಸರು ಮಾಡಲು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಲ್ಲಿ ಬೆದರಿಕೆ ಹಾಕಿದ್ದ. ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿ ವಾಟ್ಸ್ಆಪ್ ನಂಬರ್‌ಗೆ ನ.7ರಂದು ಕೊಲೆ ಬೆದರಿಕೆ ಮೆಸೇಜ್ ಮಾಡಿದ್ದ, 5 ಕೋಟಿ ಬೇಡಿಕೆ ಇಟ್ಟಿದ್ದ. ಬೇರೆಯವರ ಮೊಬೈಲ್ ನಂಬರ್ ಬಳಸಿ ವಾಟ್ಸ್ ಆಪ್ ಮೆಸೇಜ್ ಮಾಡಿದ್ದ ಸೋಹೆಲ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಮಗ ಮಾಡಿದ ತಪ್ಪಿಗೆ ಪೋಷಕರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

    salman

    ಎಂಟನೇ ತರಗತಿ ಓದಿದ್ದ ಸೋಹೆಲ್ ಪಾಷಾ ಹಿಂದಿ ಹಾಡುಗಳನ್ನ ಬರೆಯುತ್ತಿದ್ದರು. ಸಲ್ಮಾನ್ ಖಾನ್ ಕುರಿತಾಗಿಯೂ ಹಾಡು ಬರೆದಿದ್ದ ಅವರ ಅಭಿಮಾನಿಯಾಗಿದ್ದ ಇದೀಗ ಕೊಲೆ ಬೆದರಿಕೆ ಆರೋಪದಲ್ಲಿ ಸೋಹೆಲ್ ಪೊಲೀಸರ ಅತಿಥಿಯಾಗಿದ್ದಾನೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನ ಹುಡುಕಾಟ ನಡೆಸಿದ್ದ ಮುಂಬೈ ಪೊಲೀಸರು ಆರೋಪಿಯನ್ನ ಬಂಧಿಸಿ ಕರೆದೊಯ್ದಿದ್ದಾರೆ.

  • ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ದಂಪತಿ

    ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ದಂಪತಿ

    ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ದಂಪತಿಯ ವಿಚ್ಛೇಧನ ವಿಚಾರ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ದಂಪತಿ ಇಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 24 ವರ್ಷಗಳ ವೈವಾಹಿಕ ಬದುಕಿಗೆ ಕಡಿವಾಣ ಹಾಕಿದ್ದಾರೆ.

    ಸಲ್ಮಾನ್ ಖಾನ್ ಕುಟುಂಬದ ವಿಚಾರ ಅದರಲ್ಲೂ ಮದುವೆ ವಿಚಾರ ಆಗಾಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುತ್ತದೆ. ಕೆಲ ವರ್ಷಗಳ ಹಿಂದೆ ಅರ್ಬಾಜ್ ಖಾನ್ ಮತ್ತು ಮಲೈಕಾ ದಂಪತಿಯ ಡಿವೋರ್ಸ್ ವಿಚಾರ ಬಾಲಿವುಡ್‌ನಲ್ಲಿ ಸುದ್ದಿ ಮಾಡಿತ್ತು. ಈಗ ಸಲ್ಮಾನ್ ಖಾನ್ ಮತ್ತೊಬ್ಬ ಸಹೋದರ ಕೂಡ ವಿಚ್ಛೇದನ ಕೊಡಲು ಮುಂದಾಗಿದ್ದಾರೆ. ಸೋಹೈಲ್ ಮತ್ತು ಸೀಮಾ ಇಂದು ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಇಬ್ಬರು ಬೇರೆ ಬೇರೇ ಹೊರಟಿದ್ದಾರೆ. ಇದು ವಿಚ್ಚೇದನ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

    ಸೋಹೈಲ್ ಖಾನ್ ಮತ್ತು ಸೀಮಾ 1998ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ನಿರ್ವಾನ್ ಮತ್ತು ಯೋಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕೆಲ ವರ್ಷಗಳಿಂದ ಇವರಿಬ್ಬರ ವಿಚ್ಚೇದನ ವಿಚಾರ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿತ್ತು. ಈಗ ಸೋಹೈಲ್ ದಂಪತಿ ಡಿವೋರ್ಸ್ ವಿಚಾರವಾಗಿ ಅರ್ಜಿ ಸಲ್ಲಿಸಿರುವುದರ ಕುರಿತು ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಕನ್ನಡದ ‘ಮ್ಯಾನ್ ಆಫ್ ದ ಮ್ಯಾಚ್’ ಚಿತ್ರ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ

    ಸಮಂತಾ ಮತ್ತು ನಾಗಚೈತನ್ಯ, ಅಮೀರಾ ಖಾನ್ ದಂಪತಿಯ ಡಿವೋರ್ಸ್ ವಿಷ್ಯ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಸೋಹೈಲ್ ದಂಪತಿಯ ವಿಚ್ಛೇದನ ವಿಚಾರ ಭಾರೀ ಸುದ್ದಿ ಮಾಡುತ್ತಿದೆ.

  • ರಾಖಿ ತಾಯಿಗೆ ಕ್ಯಾನ್ಸರ್ – ವೀಡಿಯೋ ಮೂಲಕ ಸಲ್ಮಾನ್ ಖಾನ್, ಸೋದರನಿಗೆ ಥ್ಯಾಂಕ್ಸ್

    ರಾಖಿ ತಾಯಿಗೆ ಕ್ಯಾನ್ಸರ್ – ವೀಡಿಯೋ ಮೂಲಕ ಸಲ್ಮಾನ್ ಖಾನ್, ಸೋದರನಿಗೆ ಥ್ಯಾಂಕ್ಸ್

    ಮುಂಬೈ: ನಟಿ, ಬಿಗ್ ಬಾಸ್-14ರ ಸ್ಪರ್ಧಿ ರಾಖಿ ಸಾವಂತ್ ತಾಯಿ ಜಯಾ ಸಾವಂತ್ ಹಲವು ದಿನಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಇದೀಗ ಆಪರೇಷನ್‍ಗೆ ಒಳಗಾಗುತ್ತಿದ್ದಾರೆ. ಈ ಮಧ್ಯೆ ಅವರು ವೀಡಿಯೋ ಮೂಲಕ ನಟ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್‍ಗೆ ಧನ್ಯವಾದ ತಿಳಿಸಿದ್ದಾರೆ.

    ಇತ್ತೀಚೆಗೆ ನಟಿ ರಾಖಿ ಸಾವಂತ್ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ತಾಯಿಯ ಆರೋಗ್ಯ ವಿಚಾರಿಸಿದ್ದು, ಕೆಲ ಕಾಲ ಅಮ್ಮನೊಂದಿಗೆ ಕಾಲ ಕಳೆದಿದ್ದಾರೆ. ಈ ವೇಳೆ ವಿಡಿಯೋ ಮೂಲಕ ನಟ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್‍ಗೆ ಧನ್ಯವಾದ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಹಾಗೂ ಸೊಹೈಲ್ ಖಾನ್ ಸಹಾಯ ಮಾಡಿದ್ದಕ್ಕೆ ವೀಡಿಯೋ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ.

     

    View this post on Instagram

     

    A post shared by Rakhi Sawant (@rakhisawant2511)

    ಸೊಹೈಲ್ ಖಾನ್ ಸಹ ಈ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ರಾಖಿ ಮೈ ಡಿಯರ್, ನಿಮ್ಮ ತಾಯಿಗೆ ಏನೇ ಬೇಕಾದರೂ ಯಾವುದೇ ಸಮಯದಲ್ಲಿ ನೀವು ನೇರವಾಗಿ ನನಗೆ ಕರೆ ಮಾಡಬಹುದು. ನನಗೆ ನಿಮ್ಮ ತಾಯಿ ಬಗ್ಗೆ ಗೊತ್ತಿಲ್ಲ, ಆದರೆ ನಿನ್ನ ಬಗ್ಗೆ ಚೆನ್ನಾಗಿ ತಿಳಿದಿದೆ. ನೀನು ತುಂಬಾ ಸ್ಟ್ರಾಂಗ್, ಅಲ್ಲದೆ ಅವರ ಮಗಳು. ಅಂದರೆ ನಿನಗಿಂತ ನಿಮ್ಮ ತಾಯಿ ಹೆಚ್ಚು ಸ್ಟ್ರಾಂಗ್ ಆಗಿರ್ತಾರೆ. ಬೇಗನೇ ಅವರು ಗುಣಮುಖರಾಗಲೆಂದು ನಾನು ಪ್ರಾರ್ಥಿಸುತ್ತೇನೆ. ಒಬ್ಬ ಮಗಳಾಗಿ ಸ್ಥಳದಲ್ಲಿದ್ದು ಎಲ್ಲವನ್ನೂ ಮಾಡುತ್ತಿದ್ದೀಯಾ. ನಿನಗೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ನೇರವಾಗಿ ನನಗೆ ಕರೆ ಮಾಡು ಎಂದು ಮನವಿ ಮಾಡಿದ್ದಾರೆ.

     

    View this post on Instagram

     

    A post shared by yogen shah (@yogenshah_s)

    ಇದಕ್ಕೆ ರಾಖಿ ತಾಯಿ ವೀಡಿಯೋ ಮೂಲಕ ಪ್ರತಿಕ್ರಿಯಿಸಿ, ಬೆಂಬಲ ಹಾಗೂ ಸಹಾಯಕ್ಕಾಗಿ ಸಲ್ಮಾನ್ ಖಾನ್ ಹಾಗೂ ಸೊಹೈಲ್ ಖಾನ್ ಅವರಿಗೆ ಧನ್ಯವಾದಗಳು. ಸದ್ಯ ಕೀಮೋಥೆರಪಿ ಮಾಡಲಾಗುತ್ತಿದೆ. ಇಂದಿಗೆ 4 ಕೀಮೋಥೆರಪಿ ಆಗಿವೆ ಇನ್ನೂ 2 ಬಾಕಿ ಇವೆ. ಬಳಿಕ ಆಪರೇಷನ್ ಮಾಡಲಾಗುತ್ತದೆ. ಥ್ಯಾಂಕ್ಯೂ, ದೇವರು ನಿಮ್ಮ ಕನಸುಗಳನ್ನು ನನಸಾಗಿಸಲಿ ಎಂದು ಪ್ರಾರ್ಥಿಸಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಈ ಬಗ್ಗೆ ಮತ್ತೊಂದು ವೀಡಿಯೋದಲ್ಲಿ ಮಾಹಿತಿ ಹಂಚಿಕೊಂಡಿರುವ ರಾಖಿ ಸಾವಂತ್, ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬಕ್ಕೆ ಧನ್ಯವಾದ ತಿಳಿಸಲು ನನ್ನ ತಾಯಿ ವೀಡಿಯೋ ಮಾಡಿದ್ದರು. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕೀಮೋಥೆರಪಿ ಮಾಡಲಾಗುತ್ತಿದೆ. ಕೀಮೊ ಮಾಡುತ್ತಿರುವುದರಿಂದ ಹೊಟ್ಟೆ ನೋವು, ವಾಂತಿ ಶುರುವಾಗಿದೆ. ಇದೆಲ್ಲದರ ಮಧ್ಯೆಯೂ ನಗುತ್ತಲೇ ವೀಡಿಯೋ ಮಾಡಿದ್ದಾಳೆ. ಬಿಗ್ ಬಾಸ್-14ರಿಂದ ಹೊರ ಬಂದ ಬಳಿಕ ನನಗೆ ಇದು ದೊಡ್ಡ ಶಾಕ್. ಕೀಮೋ ತಡೆದುಕೊಳ್ಳುವುದು ಅಷ್ಟು ಸುಲಭವಲ್ಲ, ನಮ್ಮ ತಾಯಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

    ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ರಾಖಿ ಸಾವಂತ್ ಮಾಧ್ಯಮಗಳ ಜೊತೆ ಮಾತನಾಡಿದ್ದರು. ನನ್ನ ತಾಯಿಯನ್ನು ಉಳಿಸಿಕೊಳ್ಳಲು ನಾನು ಎಲ್ಲ ಪ್ರಯತ್ನ ಮಾಡುತ್ತೇನೆ. ಬಿಗ್ ಬಾಸ್ ಮನೆಯಿಂದ ಬಂದ ಮೇಲೆ 14 ಲಕ್ಷ ರೂ. ಸಿಕ್ಕಿದೆ. ಇದನ್ನೂ ಅವಳ ಚಿಕಿತ್ಸೆಗೆ ಬಳಸುತ್ತೇನೆ ಎಂದು ಹೇಳಿದ್ದರು.

  • ದುಬೈನಿಂದ ಬಂದ ಸಲ್ಮಾನ್ ಸೋದರರ ವಿರುದ್ಧ ಕೇಸ್

    ದುಬೈನಿಂದ ಬಂದ ಸಲ್ಮಾನ್ ಸೋದರರ ವಿರುದ್ಧ ಕೇಸ್

    ಮುಂಬೈ: ದುಬೈನಿಂದ ಬಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಸೋದರರ ವಿರುದ್ಧ ಬಿಎಂಸಿ (ಬೃಹನ್ ಮುಂಬೈ ಮಹಾನಗರ ಪಾಲಿಕೆ) ದೂರು ದಾಖಲಿಸಿದ್ದು, ಎಫ್‍ಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 188 ಮತ್ತು 269 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಡಿಸೆಂಬರ್ 25ರಂದು ಸೊಹೈಲ್ ಖಾನ್, ಅರ್ಬಾಜ್ ಖಾನ್ ಮತ್ತು ಅರ್ಬಾಜ್ ಪುತ್ರ ದುಬೈನಿಂದ ಮುಂಬೈಗೆ ಬಂದಿದ್ದರು. ಬ್ರಿಟನ್ ಕೊರೊನಾ ಆತಂಕದ ಹಿನ್ನೆಲೆ ಬಿಎಂಸಿ ಅಧಿಕಾರಿಗಳು ಮೂವರಿಗೆ ಹೋಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ್ದರು. ಆದ್ರೆ ಮೂವರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಮನೆಗೆ ತೆರಳಿದ್ದರು. ಇದೀಗ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

    ಕೊರೊನಾ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಜನವರಿ 31ರವರೆಗೆ ಲಾಕ್‍ಡೌನ್ ವಿಧಿಸಲಾಗಿದೆ. ಈ ಮುಂಚೆ ನೈಟ್ ಕಫ್ರ್ಯೂ ಹೇರಲಾಗಿತ್ತು. ಕೆಲ ದಿನಗಳ ಹಿಂದೆ ನೈಟ್ ಕರ್ಫ್ಯೂ ನಡುವೆಯೂ ಹೃತಿಕ್ ರೋಷನ್ ಪತ್ನಿ ಸುಸೈನ್, ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಪಾರ್ಟಿ ನಡೆಸಿದ್ದರು.

  • ಕಿಚ್ಚ ಸುದೀಪ್‍ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರರು!

    ಕಿಚ್ಚ ಸುದೀಪ್‍ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರರು!

    ಬೆಂಗಳೂರು: ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಅವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಸಹೋದರರು ಸೋಹೆಲ್ ಖಾನ್ ಹಾಗೂ ಅರ್ಬಾಜ್ ಖಾನ್ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.

    ಇತ್ತೀಚೆಗೆ ಸಲ್ಮಾನ್ ಖಾನ್ ಸಹೋದರರು ಸೋಹೆಲ್ ಖಾನ್ ಬೆಂಗಳೂರಿಗೆ ಬಂದಿದ್ದರು. ಆಗ ಕಿಚ್ಚನನ್ನು ಭೇಟಿ ಮಾಡಿದ್ದಾರೆ. ಇದೊಂದು ಸಾಮಾನ್ಯ ಭೇಟಿ ಎಂದು ಹೇಳಲಾಗಿದೆ. ಕಿಚ್ಚನನ್ನು ಭೇಟಿ ಮಾಡಲು ಸೋಹೆಲ್‍ಗೆ ತನ್ನ ಸಹೋದರ ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ಕೂಡ ಸಾಥ್ ನೀಡಿದ್ದರು.

    ಭೇಟಿ ಹಿನ್ನೆಲೆ: ಕರ್ನಾಟಕದಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ಸ್ಯಾಂಡಲ್‍ವುಡ್ ತಾರೆಯರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಬಾಲಿವುಡ್ ಕಲಾವಿದರಾದ ಸೋಹೆಲ್ ಖಾನ್, ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ಕೂಡ ಕರ್ನಾಟಕ ಚುನಾವಣೆಯಲ್ಲಿ ಪ್ರಚಾರ ಮಾಡಲು ಬೆಂಗಳೂರಿಗೆ ಬಂದಿದ್ದರು. ಎಂಇಪಿ ಪಕ್ಷದ ಪರವಾಗಿ ಪ್ರಚಾರ ನಡೆಸಲು ಬಂದಿದ್ದ ವೇಳೆ ಇವರಿಬ್ಬರು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಸಿಸಿಎಲ್ ಪಂದ್ಯ ಶುರುವಾದಾಗಿನಿಂದಲೂ ಸುದೀಪ್ ಸೋಹೆಲ್ ಖಾನ್, ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ತುಂಬಾ ಆತ್ಮೀಯವಾಗಿ ಇರುತ್ತಾರೆ.

    ಸೋಹೆಲ್ ಖಾನ್, ಅರ್ಬಾಜ್ ಖಾನ್ ಹಾಗೂ ಸೋನು ಸೂದ್ ಜೊತೆ ಸುದೀಪ್ ಸೆಲ್ಫಿ ತೆಗೆದುಕೊಂಡು ಅದನ್ನು ತಮ್ಮ ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ನನ್ನ ಸಹೋದರರಾದ ಸೋಹೆಲ್ ಖಾನ್ ಹಾಗೂ ಅರ್ಬಾಜ್ ಖಾನ್ ಜೊತೆ ಕೆಲ ಕಾಲ ಕಳೆದಿದ್ದು ಖುಷಿಯಾಯಿತ್ತು. ಮುಂದೆ ಕೂಡ ಈ ರೀತಿಯ ಭೇಟಿಗಾಗಿ ಕಾಯುತ್ತಿದ್ದೇನೆ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.

    ಕಿಚ್ಚನ ಜೊತೆ ಸ್ಯಾಂಡಲ್‍ವುಡ್ ನಟ ಚಂದನ್, ಖಾಸಗಿ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಐಪಿಎಲ್ ಆಟಗಾರ ಕಾರಿಯಪ್ಪ ಹಾಗೂ ಕ್ರಿಕೆಟರ್ ರಿತೇಶ್ ಭಟ್ಕಳ್ ಕೂಡ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.