Tag: sohael katuriya

  • ಹನ್ಸಿಕಾ ಟ್ರೋಲ್‌: ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದ ನೆಟ್ಟಿಗರು

    ಹನ್ಸಿಕಾ ಟ್ರೋಲ್‌: ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದ ನೆಟ್ಟಿಗರು

    `ಬಿಂದಾಸ್’ (Bindas Kannada) ನಟಿ ಹನ್ಸಿಕಾ ಮೋಟ್ವಾನಿ (Hansika Motwani), ಉದ್ಯಮಿ ಸೊಹೈಲ್ ಕಥುರಿಯಾ (Sohael Katuriya) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ನಟಿ ಭಾರಿ ಟ್ರೋಲ್ ಆಗಿದ್ದಾರೆ. ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದು ಹನ್ಸಿಕಾಗೆ ಟ್ರೋಲ್ ಮಾಡ್ತಿದ್ದಾರೆ.

    ಬಹುಭಾಷಾ ನಟಿ ಹನ್ಸಿಕಾ ಡಿಸೆಂಬರ್ 4ರಂದು ಜೈಪುರದಲ್ಲಿ ಅದ್ದೂರಿಯಾಗಿ ಮದುವೆಯಾದರು. ಒಬ್ಬರನೊಬ್ಬರು ಪ್ರೀತಿಸಿ, ಗುರುಹಿರಿಯರ ಸಮ್ಮತಿಯ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ತಮ್ಮ ವಿವಾಹದ ಫೋಟೋಸ್‌ಗಳನ್ನ ನಟಿ ಶೇರ್ ಮಾಡಿದ್ದಾರೆ. ಬ್ರೈಟ್ ರೆಡ್ ಸೀರೆಯಲ್ಲಿ ಮಿಂಚಿದ್ದಾರೆ. ಈ ಬೆನ್ನಲ್ಲೇ ನಟಿಗೆ ಖಡಕ್ ಪ್ರಶ್ನೆಯೊಂದು ಎದುರಾಗಿದೆ. ನಿಮ್ಮ ಮದುವೆಗೆ ಎಲ್ಲಾ ಹೊಸದು ಆದರೆ, ಗಂಡ ಯಾಕೆ ಹಳಬ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

     

    View this post on Instagram

     

    A post shared by Hansika Motwani (@ihansika)

    ಹನ್ಸಿಕಾ ಪತಿ ಸೊಹೈಲ್‌ಗೆ ಈ ಹಿಂದೆಯೇ ಒಂದು ಮದುವೆ ಆಗಿತ್ತು. ಹನ್ಸಿಕಾ ಬೆಸ್ಟ್ ಫ್ರೆಂಡ್ ರಿಂಕೆ ಬಜಾಜ್ (Rinky Bajaj) ಅವರನ್ನ ಮದುವೆಯಾಗಿದ್ದರು. ಕಾರಣಾಂತರಗಳಿಂದ ಇಬ್ಬರೂ ಡಿವೋರ್ಸ್ (Divorce) ಪಡೆದುಕೊಂಡರು. ಬಳಿಕ ಸೊಹೈಲ್ ಜೀವನಕ್ಕೆ ಹನ್ಸಿಕಾ ಎಂಟ್ರಿಯಾಗಿತ್ತು. ಹಲವು ವರ್ಷಗಳ ಡೇಟಿಂಗ್ ನಂತರ ಈ ಜೋಡಿ ಮದುವೆಯಾಗಿದ್ದಾರೆ. ಹಾಗಾಗಿ ಸೆಕೆಂಡ್ ಹ್ಯಾಂಡ್ ಗಂಡ ಯಾಕೆ ಎಂದು ನಟಿಗೆ ಭಾರಿ ಟ್ರೋಲ್ ಮಾಡ್ತಿದ್ದಾರೆ. ಇದನ್ನೂ ಓದಿ: ಚುಮು ಚುಮು ಚಳಿಗೆ ಜಾನ್ವಿಯ ಹಸಿಬಿಸಿ ಫೋಟೋಸ್

     

    View this post on Instagram

     

    A post shared by Hansika Motwani (@ihansika)

    ಇನ್ನೂ ನಟಿಯ ಮದುವೆ ಕಲರ್‌ಫುಲ್ ಫೋಟೋಸ್ ನೋಡಿ ಅಭಿಮಾನಿಗಳು ನವಜೋಡಿಗೆ ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉದ್ಯಮಿ ಸೋಹೈಲ್ ಕೈಹಿಡಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    ಉದ್ಯಮಿ ಸೋಹೈಲ್ ಕೈಹಿಡಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    `ಬಿಂದಾಸ್’ (Bindas Kannada) ನಟಿ ಹನ್ಸಿಕಾ ಮೋಟ್ವಾನಿ (Hansika Motwani)  ತನ್ನ ಬಹುಕಾಲದ ಗೆಳೆಯ ಸೋಹೈಲ್ ಕಥುರಿಯಾ(Sohael Kathuriya) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೈಪುರದ ಮುಂಡೋಟಾ ಕೋಟೆಯಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

    ಕನ್ನಡದ `ಬಿಂದಾಸ್’ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ, ಸೋಹೈಲ್ ಕಥುರಿಯಾ ಜೊತೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರಾದಯದ ಪ್ರಕಾರ ಮದುವೆ ಆಗಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಜೈಪುರದಲ್ಲಿ ಮದುವೆ (Wedding) ನಡೆದಿದೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಎರಡು ದಿನ ಟೆಲಿವಿಷನ್ ಕ್ರಿಕೆಟ್ ಲೀಗ್

    ಇನ್ನೂ ಕೆಲ ದಿನಗಳ ಹಿಂದೆ ಪ್ಯಾರೀಸ್‌ನಲ್ಲಿ ಹನ್ಸಿಕಾಗೆ ಸೋಹೈಲ್ ಪ್ರಪೋಸ್ ಮಾಡಿದ್ದರು. ಈ ಕುರಿತ ಫೋಟೋಗಳನ್ನ ಶೇರ್ ತನ್ನ ಜೀವನ ಸಂಗಾತಿಯನ್ನ ಸೋಷಿಯಲ್ ಮೀಡಿಯಾ ಮೂಲಕ ನಟಿ ಪರಿಚಯಿಸಿದ್ದರು.

    ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಅಭಿಮಾನಿಗಳು, ಸಿನಿಮಾರಂಗದ ಸ್ನೇಹಿತರು ಶುಭಹಾರೈಸುತ್ತಿದ್ದಾರೆ. ಸದ್ಯ ತಮ್ಮ ಮದುವೆಯ ಫೋಟೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹನ್ಸಿಕಾ ಮದುವೆಗೆ ಕೌಂಟ್‌ಡೌನ್:‌ ಜೈಪುರಗೆ ಹಾರಿದ ʻಬಿಂದಾಸ್‌ʼ ನಟಿ

    ಹನ್ಸಿಕಾ ಮದುವೆಗೆ ಕೌಂಟ್‌ಡೌನ್:‌ ಜೈಪುರಗೆ ಹಾರಿದ ʻಬಿಂದಾಸ್‌ʼ ನಟಿ

    ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ `ಬಿಂದಾಸ್’ (Bindas) ಚಿತ್ರಕ್ಕೆ ನಾಯಕಿಯಾಗುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾದ ನಟಿ ಹನ್ಸಿಕಾ ಮೋಟ್ವಾನಿ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮದುವೆ ಸಿದ್ಧತೆಗೆ ಕುಟುಂಬದ ಜೊತೆ ಜೈಪುರಗೆ ಹನ್ಸಿಕಾ(Hansika Motwani) ಹಾರಿದ್ದಾರೆ.

    ಸೌತ್ ಬ್ಯೂಟಿ ಹನ್ಸಿಕಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ಇದೇ ಡಿಸೆಂಬರ್ 4ಕ್ಕೆ ಹಸೆಮಣೆ ಏರುತ್ತಿದ್ದಾರೆ. ಮದುವೆಗೆ ಈಗಾಗಲೇ ಕೌಂಟ್‌ಡೌನ್ ಶುರುವಾದ ಬೆನ್ನಲ್ಲೇ ಕುಟುಂಬದ ಜೊತೆ ಜೈಪುರಗೆ ತೆರಳಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣಿಗೆ ಈ ಜೋಡಿ ಸೆರೆಯಾಗಿದ್ದಾರೆ.

    ಜೈಪುರದ ಹಳೆಯ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆಯಾಗುತ್ತಿದ್ದಾರೆ. ಡಿಸೆಂಬರ್ 2ರಿಂದ ಮೆಹೆಂದಿ, ಸಂಗೀತ ಕಾರ್ಯಕ್ರಮ ಶುರುವಾಗಲಿದೆ. ಡಿ.4ರಂದು ಗುರುಹಿರಿಯರ ಸಮ್ಮುಖದಲ್ಲಿ ಮದುವೆ ಅದ್ದೂರಿಯಾಗಿ ನಡೆಯಲಿದೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸುಳ್ಳು ಸಿನಿಮಾ ಎಂದು ಸಾಬೀತು ಪಡಿಸಿದರೆ ಚಿತ್ರರಂಗ ಬಿಡುತ್ತೇನೆ: ಅಗ್ನಿಹೋತ್ರಿ

    ಹನ್ಸಿಕಾ ಮತ್ತು ಸೊಹೈಲ್ ಹಲವು ವರ್ಷಗಳು ಪ್ರೀತಿಸಿ, ಇದೀಗ ಗುರುಹಿರಿಯರ ಸಮ್ಮುಖದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]