Tag: sogadu shivanna

  • ಹೆಚ್‌ಡಿಕೆಯನ್ನು ಭೇಟಿಯಾದ ಸೊಗಡು ಶಿವಣ್ಣ – ತುಮಕೂರಲ್ಲೂ ಅಭ್ಯರ್ಥಿ ಬದಲಾವಣೆ?

    ಹೆಚ್‌ಡಿಕೆಯನ್ನು ಭೇಟಿಯಾದ ಸೊಗಡು ಶಿವಣ್ಣ – ತುಮಕೂರಲ್ಲೂ ಅಭ್ಯರ್ಥಿ ಬದಲಾವಣೆ?

    ತುಮಕೂರು: ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ (BJP) ವಿರುದ್ಧ ಸಿಟ್ಟಾಗಿರುವ ಮಾಜಿ ಸಚಿವ ಸೊಗಡು ಶಿವಣ್ಣ (Sogadu Shivanna) ಜೆಡಿಎಸ್‌ (JDS) ಸೇರ್ಪಡೆಯಾಗುವ ಸಾಧ್ಯತೆಯಿದೆ.

    ತುಮಕೂರು (Tumakuru) ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದ ಸೊಗಡು ಶಿವಣ್ಣ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಟಿಕೆಟ್‌ ಕೈತಪ್ಪಿದ ಬೆನ್ನಲ್ಲೇ ಸೊಗಡು ಶಿವಣ್ಣ ಇಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

    ಇನ್ನೆರಡು ದಿನಗಳಲ್ಲಿ ಜೆಡಿಎಸ್ ಸೇರುವ ಬಗ್ಗೆ ಸೊಗಡು ಶಿವಣ್ಣ ಖಚಿತ ಪಡಿಸುವ ಸಾಧ್ಯತೆಯಿದೆ. ಸೊಗಡು ಶಿವಣ್ಣಗೆ ಟಿಕೆಟ್‌ ನೀಡಿದರೆ ತುಮಕೂರು ನಗರದಲ್ಲೂ ಜೆಡಿಎಸ್‌ ಅಭ್ಯರ್ಥಿ ಬದಲಾವಣೆಯಾಗುವ ಸಾಧ್ಯತೆಯಿದೆ. ಆದರೆ ಈಗಾಗಲೇ ಜೆಡಿಎಸ್‌ ಅಭ್ಯರ್ಥಿಯಾಗಿ ಗೋವಿಂದರಾಜು ಪ್ರಚಾರ ಆರಂಭಿಸಿದ್ದಾರೆ.

    ಸತತ ನಾಲ್ಕು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಈ ಬಾರಿ ಟಿಕೆಟ್‌ ನನಗೆ ನೀಡಲೇಬೇಕೆಂದು ಶಿವಣ್ಣ ಪಟ್ಟುಹಿಡಿದಿದ್ದರು. ಆದರೆ ಬಿಜೆಪಿ ಹೈಕಮಾಂಡ್‌ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಟಿಕೆಟ್ ನೀಡಿತ್ತು.  ಇದನ್ನೂ ಓದಿ: ಬೊಮ್ಮಾಯಿ ಬಳಿ ಸ್ವಂತ ಕಾರು ಇಲ್ಲ: ಆಸ್ತಿ ಎಷ್ಟಿದೆ?


    ಟಿಕೆಟ್‌ ಕೈ ತಪ್ಪಿದ ಬೆನ್ನಲ್ಲೇ ತುಮಕೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸೊಗಡು ಶಿವಣ್ಣ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಇ ಮೇಲ್ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಈಗ ರಾಜಕೀಯಕ್ಕೆ ಬೇಕಾಗಿರುವುದು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಎಂದು ಬಿಜೆಪಿ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.

    ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ‌. ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕಾ? ಇಲ್ಲ ಯಾವುದಾದರೂ ಪಕ್ಷದಿಂದ ಸ್ಪರ್ಧೆ ಮಾಡಬೇಕೇ ಎಂಬುದರ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದರು.

  • ದಾಳಿ ಮಾಡಿದವರು ಸಿವಿಲ್ ಉಗ್ರಗಾಮಿಗಳು, ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು: ಸೊಗಡು ಶಿವಣ್ಣ

    ದಾಳಿ ಮಾಡಿದವರು ಸಿವಿಲ್ ಉಗ್ರಗಾಮಿಗಳು, ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು: ಸೊಗಡು ಶಿವಣ್ಣ

    ತುಮಕೂರು: ದಾಳಿ ಮಾಡಿದವರು ಸಿವಿಲ್ ಉಗ್ರಗಾಮಿಗಳು, ಅವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದರು.

    ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಪಟೂರು ಪೊಲೀಸರು 15ಕ್ಕೂ ಹೆಚ್ಚಿನ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಈ ಹಿನ್ನೆಲೆ ಸೊಗಡು ಶಿವಣ್ಣ ಅವರು ನಾಗೇಶ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾಳಿ ಮಾಡಿದವರು ಸಿವಿಲ್ ಉಗ್ರಗಾಮಿಗಳು. ಅವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು. ಇಂಟಲಿಜೆನ್ಸಿ ವಿಫಲ ಆಗಿರೋದು ಇಲ್ಲಿ ಕಾಣುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ: ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲು 

    ದಾಳಿ ಮಾಡಿದವರು ಯಾರೂ ಈ ಊರಿನವರಲ್ಲ. ಬೇರೆ ಊರಿನಿಂದ ಬಂದವರು. ಈಗಾಗಲೇ 15 ಜನ ಅರೆಸ್ಟ್ ಮಾಡಲಾಗಿದೆ. ಅದರಲ್ಲಿ 6 ಜನ ಮುಸ್ಲಿಂ ಯುವಕರಿದ್ದಾರೆ. ಇವರುಗಳು ಮಾರಕಾಸ್ತ್ರ ತಂದಿರುವ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.

    ಪ್ರತಿಭಟನೆ
    ಶಿಕ್ಷಣ ಸಚಿವರ ಮನೆಗೆ ಓSUI ಕಾರ್ಯಕರ್ತರಿಂದ ಮುತ್ತಿಗೆ ಯತ್ನ ಹಿನ್ನೆಲೆ ಇಂದು ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕಛೇರಿಗಳ ಮುಂದೆ ಪ್ರತಿಭಟನೆ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದನ್ನೂ ಓದಿ: ನಾಗೇಶ್‌ ಮನೆಗೆ ದಾಳಿ ನಡೆಸಿದವರು ತುಮಕೂರಿನವರಲ್ಲ : ಎಫ್‌ಐಆರ್‌ನಲ್ಲಿ ಏನಿದೆ?

    ಸಚಿವರ ಮನೆಗೆ ನುಗ್ಗಿ ಬೆಂಕಿ ಹಚ್ಚುವ ಕೃತ್ಯವನ್ನ ಖಂಡಿಸಿ, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ಕಾರ್ಯಕರ್ತರು ತಿಪಟೂರಿನಲ್ಲಿ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

  • ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ

    ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ

    ತುಮಕೂರು: ಹಿಂದೂ ಪೌರಕಾರ್ಮಿಕರು ಮುಸಲ್ಮಾನರ ಅಂಗಡಿ, ಮನೆ ಮುಂದೆ ಕಸ ಗುಡಿಸುತ್ತಾರೆ. ಅವರ ಶೌಚಾಲಯವನ್ನು ಕ್ಲೀನ್ ಮಾಡುತ್ತಾರೆ. ಆದರೆ ಮುಸಲ್ಮಾನರೇಕೆ ಪೌರಕಾರ್ಮಿಕರ ಕೆಲಸ ಮಾಡಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಪ್ರಶ್ನಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನತೆ ಅಂದ ಮೇಲೆ ಎಲ್ಲವೂ ಒಂದೇ ಆಗಬೇಕು. ಹಾಗಾದರೆ ಮುಸಲ್ಮಾನರೂ ಕೂಡ ಪೌರಕಾರ್ಮಿಕರಾಗಿ ಸೇರಿ ಹಿಂದೂಗಳ ಮನೆ ಮುಂದೆ ಕಸ ಗುಡಿಸಿ ಔದಾರ್ಯ ತೊರಲಿ ಎಂದು ಸವಾಲು ಹಾಕಿದರು.

    ಮಹಾರಾಷ್ಟ್ರದ ಆದಿತ್ಯ ಠಾಕ್ರೆ ಹೇಳಿರುವುದು ನೂರಕ್ಕೆ ನೂರು ಸತ್ಯವಾಗಿದೆ. ದೇಶದಲ್ಲಿ ಮೈಕ್‍ಗಳ ಹಾವಳಿ ವಿಪರೀತವಾಗಿದೆ. ನಾನು ಮಾಲಿನ್ಯ ಸಚಿವನಾಗಿದ್ದಾಗ ಕಾನೂನಿಗೆ ಗೌರವ ಕೊಡುವಂತೆ ಮಸೀದಿಗಳ ಮೇಲಿನ ಮೈಕ್‍ಗಳನ್ನು ತೆಗೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೆ. ಈ ಮೈಕ್‍ಗಳ ಶಬ್ಧದಿಂದಾಗಿ ಹಾರ್ಟ್ ಅಟ್ಯಾಕ್ ಮತ್ತು ವಿದ್ಯಾರ್ಥಿಗಳ ಓದಿಗೆ ತೊಡಕು ಆಗುತ್ತಿದೆ. ತುಮಕೂರು ನಗರದ ಸದಾಶಿವನಗರ, ಜಯಪುರದಲ್ಲಿ ಆಜನ್ ಕಾಟದಿಂದ ಹಿಂದೂಗಳು ಮನೆ ತೊರೆದಿದ್ದಾರೆ ಎಂದರು. ಇದನ್ನೂ ಓದಿ: ಸ್ಥಳೀಯ ಉಗ್ರರನ್ನು ಮುಂದಿಟ್ಟುಕೊಂಡು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ದಾಳಿ: ಉನ್ನತ ಅಧಿಕಾರಿ

    ತುಮಕೂರಿನ ಕೆಲ ಬಡಾವಣೆಗಳಲ್ಲಿ ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಿಂದೂಗಳ ಸ್ಮಶಾನಕ್ಕೆ ಹೋಗಿ ನಮ್ಮ ಶಾಸ್ತ್ರ ವಿಧಿವಿಧಾನ ಮಾಡುವ ವೇಳೆ ಆಜನ್‍ನಿಂದ ನಮಗೆ ತೊಂದರೆ ಆಗುತ್ತಿದ್ದು, ಬಿಜೆಪಿಯವರು ಕೇವಲ ಹತ್ತೇ ವರ್ಷ ಆಳ್ವಿಕೆ ನಡೆಸಿದ್ದಾರೆ. ಇದರೆ ಹಿಂದೆ 70 ವರ್ಷಗಳು ಆಳಿದವರು ಪಾಪಿಗಳು. ಅವರು ಸಮಾಜದಲ್ಲಿ ಜಾತಿ ವಿಂಗಡಣೆ ಮಾಡುತ್ತಿದ್ದಾರೆ ಎಮದು ವಾಗ್ದಾಳಿ ನಡೆಸಿದರು.

    SIDDARAMAIAH

    ಕುಮಾರಸ್ವಾಮಿ ಹಿಜಬ್ ಹಿಡಿದುಕೊಂಡಿದ್ದಾರೆ. ಸಿದ್ದರಾಮಯ್ಯ ಹಲಾಲ್ ಹಿಡ್ಕೊಂಡಿದ್ದಾರೆ. ಇನ್ನೊಬ್ಬರು ಮಾವಿನಹಣ್ಣು ಹಿಡ್ಕೊಂಡಿದ್ದಾರೆ. ಮೊದಲು ಶಬ್ಧ ಮಾಲಿನ್ಯ ತಡೆಗಟ್ಟಲಿ ದೇವಸ್ಥಾನದಲ್ಲೂ ಮೈಕ್‍ಗಳನ್ನು ಶಬ್ಧ ಮಾಲಿನ್ಯ ಆಗದಂತೆ ಹಾಕಿಕೊಳ್ಳಲಿ. ಸುಪ್ರೀಂ ಆದೇಶ ಯತಾವತ್ತು ಪಾಲನೆ ಆಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬೇರೆ ಪಕ್ಷಗಳು ಹಣಬಲದಲ್ಲಿ ಶ್ರೀಮಂತ, AAP ವಿಚಾರ ಧಾರೆಯಲ್ಲಿ ಶ್ರೀಮಂತ: ಭಾಸ್ಕರ್ ರಾವ್

    ಇದು ಪಾಕಿಸ್ತಾನ ಅಲ್ಲ, ಹಿಂದೂ ರಾಷ್ಟ್ರ. ಇಲ್ಲಿ ಹಿಂದೂ ಕಾನೂನು ಇರಬೇಕು. ಸರ್ಕಾರಕ್ಕೆ ಈಗಲೂ ಮನವಿ ಮಾಡಿಕೊಳ್ಳುತ್ತೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ದೇಶ ವಿಭಜನೆ ಮಾಡೋಕೆ ಹೊರಟಿದ್ದಾರೆ. ಮಾವಿನಹಣ್ಣನ್ನು ನಮ್ಮವರು ಬೆಳೆಯೋದು ಮುಸಲ್ಮಾನರು ಅದನ್ನ ಮಾರಿ ಲಾಭ ಮಾಡಿಕೊಳ್ಳುವುದು ಏಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಾವಿನ ಹಣ್ಣನ್ನೂ ಕೂಡ ಇವರು ಮಾರಬಾರದು. ಅದನ್ನು ಬೆಳೆದ ರೈತರು ನಮ್ಮವರು ಮಾರಲಿ ಮುಸಲ್ಮಾನರು ಮಾವಿನಹಣ್ಣನ್ನ ಖರೀದಿ ಮಾಡದೆ ಇದ್ದರೇ, ರೈತರು ಕಂಗಾಲು ಆಗಲ್ಲ. ರೈತರಿಂದ ನಮ್ಮವರೇ ಖರೀದಿ ಮಾಡಿ, ಅದನ್ನು ಮಾರಲಿ ಎಂದರು.

    ಹೈಕೋರ್ಟ್ ತೀರ್ಪಿನ ವಿರುದ್ಧ ಇವರ ಅಂಗಡಿ ಬಂದ್ ಮಾಡಿದರು. ಇದರಿಂದ ನಮ್ಮವರಿಗೂ ಲಾಸ್ ಆಗಿದೆ. ರೇಷ್ಮೆ ಮಾರ್ಕೆಟ್‍ಗಳೂ ಬಂದ್ ಆಗೋದ್ದವು, ಇದರಿಂದ ನಮ್ಮವರಿಗೆ ತುಂಬಾ ತೊಂದರೆ ಆಗಿದೆ. ರೇಷ್ಮೆ ಗೂಡುಗಳು ನಾಶ ಆದವು ಎಂದು ಬೇಸರ ವ್ಯಕ್ತಪಡಿಸಿದರು.

  • ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು- ಸೊಗಡು ಶಿವಣ್ಣ ವಿರುದ್ಧ ಡಿಕೆಶಿ ಕಿಡಿ

    ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು- ಸೊಗಡು ಶಿವಣ್ಣ ವಿರುದ್ಧ ಡಿಕೆಶಿ ಕಿಡಿ

    ಬೆಂಗಳೂರು: ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಮೊದಲು ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ರಾಜಕೀಯವಾಗಿ ಜಾಗ ಇಲ್ಲದೆ ಹುಡುಕುತ್ತಿದ್ದಾರೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

    ಸದಾಶಿವನಗರದಲ್ಲಿ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಮೆಂಟಲ್ ಆಸ್ಪತ್ರೆಯಲ್ಲಿ ಇರಬೇಕಾದವರು ಮಾತಾಡ್ತಿದ್ದಾರೆ. ಅವರ ಬಗ್ಗೆ ನಾನು ಮಾತನಾಡಲ್ಲ ಎಂದರು. ಇದನ್ನೂ ಓದಿ: ನನ್ನಿಂದ ತಪ್ಪಾಗಿದೆ, ಡಿಕೆಶಿ ಮುಖ ನೋಡಲು ಆಗ್ತಿಲ್ಲ: ಸಲೀಂ ಕಣ್ಣೀರು

    ಯಾವುದಾದರೂ ಆಸ್ತಿ ಇದ್ದರೆ ಅವನೇ ಮಾಡ್ಕೊಳ್ಳಿ, ಅವನಿಗೆ ಎಲ್ಲಾ ಗಿಫ್ಟ್ ಕೊಟ್ಟು ಬಿಡ್ತೀನಿ. ರಾಜಕೀಯ ವಾಗಿ ಅವನಿಗೆ ಜಾಗ ಇಲ್ಲ ಹೀಗಾಗಿ ಮಾತಾಡ್ತಿದ್ದಾನೆ. ಮೊದಲು ರಾಜಕೀಯ ಜಾಗ ಹುಡುಕಿಕೊಳ್ಳಲಿ ಎಂದು ಡಿಕೆಶಿ ತಿರುಗೇಟು ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಸಲೀಂ 6 ವರ್ಷ ಉಚ್ಚಾಟನೆ- ಉಗ್ರಪ್ಪಗೆ ಶೋಕಾಸ್‌ ನೋಟಿಸ್‌ ಜಾರಿ

    ಸೊಗಡು ಶಿವಣ್ಣ ಏನು ಹೇಳಿದ್ದರು..?
    ನಿನ್ನೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸೊಗಡು ಶಿವಣ್ಣ, ಎಂ.ಎ.ಸಲೀಂ ಮತ್ತು ಉಗ್ರಪ್ಪ ಮಾತನಾಡಿರುವುದು ಸತ್ಯ. ಡಿಕೆಶಿ ರೀಟೇಲ್ ವ್ಯಾಪಾರಿಯಲ್ಲ, ಹೋಲ್ ಸೇಲ್ ವ್ಯಾಪಾರಿ, ಬೇನಾಮಿ ಹೆಸರಿನಲ್ಲಿ ಬೇಕಾದಷ್ಟು ಆಸ್ತಿ ಮಾಡಿಕೊಂಡಿದ್ದಾರೆ. ಡಿಕೆಶಿ ತುಮಕೂರಿನಲ್ಲಿ ಕೋಟ್ಯಂತರ ರೂಪಾಯಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ.  ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

    ಕೃಷ್ಣಮೂರ್ತಿ ಅವರ ಹೆಸರಿನಲ್ಲಿ ಬೇನಾಮಿ ಆಸ್ತಿಗಳಿವೆ. ಪಾವಗಡದಲ್ಲಿ ಸೋಲಾರ್ ಪಾರ್ಕ್, 100 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಂಚಿನ ಫ್ಯಾಕ್ಟರಿ, ಗಣಿ ತಯಾರಿಕೆ ಕಾರ್ಖಾನೆಗಳಿವೆ. ಇವೆಲ್ಲಾ ಬೇನಾಮಿ ಹೆಸರುಗಳಲ್ಲಿದ್ದು ಡಿಕೆಶಿ ಅಕ್ರಮವಾಗಿ ಸಂಪಾದನೆ ಮಾಡಿಕೊಂಡಿದ್ದಾರೆ. ಈ ಹಿಂದೆ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಡಿಕೆಶಿ ಸಂಪಾದಿಸಿಕೊಂಡ ಅಕ್ರಮ ಆಸ್ತಿಗಳಿವು ಎಂದು ಆರೋಪಿಸಿದ್ದರು. ಇದನ್ನೂ ಓದಿ: ಡಿಕೆಶಿಯನ್ನು 4 ದಶಕಗಳಿಂದ ಬಲ್ಲೆ, ಒಬ್ಬ ಒಳ್ಳೆಯ ಆಡಳಿತಗಾರ: ಉಗ್ರಪ್ಪ

  • ಸಿದ್ದರಾಮಯ್ಯ ಮೀರ್ ಸಾದಿಕ್ ಇದ್ದಂತೆ: ಸೊಗಡು ಶಿವಣ್ಣ

    ಸಿದ್ದರಾಮಯ್ಯ ಮೀರ್ ಸಾದಿಕ್ ಇದ್ದಂತೆ: ಸೊಗಡು ಶಿವಣ್ಣ

    ತುಮಕೂರು: ಆರ್‌ಎಸ್‌ಎಸ್‌ನ್ನು ತಾಲಿಬಾನ್ ಎಂದಿರುವ ಸಿದ್ದರಾಮಯ್ಯ ಒಬ್ಬ ಮೀರ್ ಸಾದಿಕ್ ಇದ್ದಹಾಗೆ, ತನ್ನ ಅಧಿಕಾರದ ಅವಧಿಯಲ್ಲಿ ಜಾತಿ, ಜಾತಿ ನಡುವೆ ಎತ್ತಿಕಟ್ಟಿ ತಮಾಷೆ ನೋಡಿದ್ದರು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ.

    ತುಮಕೂರಿನ ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮ-ವಂಶವನ್ನು ನಾಶ ಮಾಡಲು ಇವರೆಲ್ಲಾ ಹೊರಟಿದ್ದಾರೆ, 125 ವರ್ಷ ಇತಿಹಾಸ ಇರುವ ಸಂಘಕ್ಕೆ ಇವರು ತಾಲಿಬಾನ್ ಅಂತಾರೆ, ಆದರೆ ನೆರೆ ಹಾವಳಿ, ಭೂಕಂಪ, ಯುದ್ದ ಇಂತಹ ಹಲವು ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಸ್ವಯಂಸೇವಕರು ದೇಶ ಸೇವೆ ಮಾಡಿದ್ದಾರೆ. ಆದರೆ ಪ್ರಕೃತಿ ವಿಕೋಪಗಳಿಂದ ಜನರು ಸಂಕಷ್ಟದಲ್ಲಿದ್ದಾಗ ಸಿದ್ದರಾಮಯ್ಯರ ಸೇವೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮೀರಾಬಾಯಿ ಕೊಪ್ಪಿಕರ್‌ಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ


    ಪಾಪಿಗಳು ಹಿಂದೂ ಸಮಾಜ ಒಡೆಯಲು ಹೊಟಿದ್ದಾರೆ. ತಾನು ದನದ ಮಾಂಸ ತಿನ್ನುತ್ತೇನೆ ಎನ್ನುವ ಇವರು ಹಂದಿ ಮಾಂಸ ತಿನ್ನುತ್ತೇನೆ ಎಂದು ಎದೆತಟ್ಟಿ ಹೇಳಲಿ. ಇವರು ಬದುಕುವುದಕ್ಕೆ ಜಾತಿ ಜಾತಿ ನಡುವೆ ಎತ್ತಿಕಟ್ಟಿ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಸಿದ್ದರಾಮಯ್ಯ ಅಕ್ಕಿ ಕೊಟ್ಟಿದ್ದೇನೆ ಅಂತಾರೆ ಪ್ರಧಾನಿ ಮೋದಿ ಎರಡು ವರ್ಷ ಉಚಿತವಾಗಿ ರೇಷನ್ ಕೊಡುತ್ತಿದ್ದಾರೆ, ಸಿದ್ದರಾಮಯ್ಯನ ಬಗ್ಗೆ ಮಾತನಾಡಲು ನನಗೆ ಅಸಹ್ಯ ವಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಆಟವಾಡ್ತಿದ್ದಾಗ ಕಾರು ಹರಿದು ಬಾಲಕ ದಾರುಣ ಸಾವು

  • ಭಾರತದಲ್ಲಿ ಬುರ್ಕಾ ನಿಷೇಧಿಸಬೇಕೆಂದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ದೂರು

    ಭಾರತದಲ್ಲಿ ಬುರ್ಕಾ ನಿಷೇಧಿಸಬೇಕೆಂದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ದೂರು

    ತುಮಕೂರು: ಭಾರತದಲ್ಲಿ ಬುರ್ಕಾ ನಿಷೇಧ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸೊಗಡು ಶಿವಣ್ಣ ಅವರು ಕೆಲದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ನಮ್ಮ ಸಂಸ್ಕೃತಿಯಲ್ಲಿ ಯಾವತ್ತು ಬುರ್ಕಾ ಇರಲಿಲ್ಲ. ಮೊದಲು ಆ ಬುರ್ಕಾ ನಿಷೇಧ ಮಾಡಬೇಕು. ಈ ಕಾನೂನು ಬೇಡ ಎಂದರೆ ಅವರು ತಾಲಿಬಾನಿಗಳು ಎಂದಿದ್ದರು. ಈ ರೀತಿ ಹೇಳಿಕೆ ನೀಡುವ ಮೂಲಕ ಮಾಜಿ ಸಚಿವರು ತಮ್ಮ ಪೈಶಾಚಿಕ ಮನಸ್ಸನ್ನು ಸೀಮಿತದಲ್ಲಿ ಇಡದೆ ಈ ರೀತಿ ಮಾತನಾಡಿದ್ದಾರೆ. ಧಾರ್ಮಿಕ ಭಾವನೆ ಹಾನಿ ಮಾಡುವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸೊಗಡು ಶಿವಣ್ಣ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬುರ್ಹಾನ್ ಎಂಬವರು ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಶಿಷ್ಯ ಸಂತೋಷ್ ಲಾಡ್ ಅಸಮಾಧಾನ

    ಜಮೀರ್ ಕೂಡ ಒಂಥರಾ ತಾಲಿಬಾನ್:
    ಕಾಂಗ್ರೆಸ್ ಪಕ್ಷದಲ್ಲೂ ಸಾಕಷ್ಟು ತಾಲಿಬಾನಿಗಳಿದ್ದು, ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ಒಂಥರಾ ತಾಲಿಬಾನೇ ಎಂದು ಕೆಲದಿನಗಳ ಹಿಂದೆ ಸೊಗಡು ಶಿವಣ್ಣ ಸ್ಫೋಟಕ ಹೇಳಿಕೆ ನೀಡಿದ್ದರು. ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದ್ದ ಪ್ರಕರಣದಲ್ಲಿ ಕೆಲವರು ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಗೊತ್ತಿದೆ. ಈ ತಾಲಿಬಾನಿಗಳು ಪೊಲೀಸ್ ಠಾಣೆಗೆ ನುಗ್ಗಿ ಹೊಡಿದಿದ್ದು ಮರೆತು ಹೋಯಿತಾ ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಜಮೀರ್ ಕೂಡ ಒಂಥರಾ ತಾಲಿಬಾನ್: ಸೊಗಡು ಶಿವಣ್ಣ

  • ಜಮೀರ್ ಕೂಡ ಒಂಥರಾ ತಾಲಿಬಾನ್: ಸೊಗಡು ಶಿವಣ್ಣ

    ಜಮೀರ್ ಕೂಡ ಒಂಥರಾ ತಾಲಿಬಾನ್: ಸೊಗಡು ಶಿವಣ್ಣ

    ತುಮಕೂರು: ಕಾಂಗ್ರೆಸ್ ಪಕ್ಷದಲ್ಲೂ ಸಾಕಷ್ಟು ತಾಲಿಬಾನಿಗಳಿದ್ದು, ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ಒಂಥರಾ ತಾಲಿಬಾನೇ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಂಡ ಶ್ರೀನಿವಾಸ್‍ಮೂರ್ತಿ ಮನೆಗೆ ಬೆಂಕಿ ಹಾಕಿದ್ದ ಪ್ರಕರಣದಲ್ಲಿ ಇವರೆಲ್ಲ ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಗೊತ್ತಿದೆ. ಈ ತಾಲಿಬಾನಿಗಳು ಪೊಲೀಸ್ ಠಾಣೆಗೆ ನುಗ್ಗಿ ಹೊಡಿದಿದ್ದು ಮರೆತು ಹೋಯಿತಾ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಫೋಟೋ ಚೆನ್ನಾಗಿ ಬಂದಿದ್ಯಾ ಅಂತ ಚೆಕ್ ಮಾಡ್ತಿದ್ದಾನೆ ರಾಯನ್: ಸುಧಾರಾಣಿ

    ಜಮೀರ್ ಹಾಗೂ ಅಸಾದುದ್ದೀನ್ ಓವೈಸಿಯನ್ನು ಬಂಧಿಸಬೇಕು. ಇವರೆಲ್ಲ ಷರಿಯತ್ ಅನುಷ್ಠಾನಕ್ಕೆ ಬೆಂಬಲ ಕೊಡುತ್ತಾರೆ. ಹೀಗಾಗಿ ಇವರೆಲ್ಲ ಕಳ್ಳತನ ಮಾಡಿದರೆ ಕೈ ಕತ್ತರಿಸಿ ಬಿಡೋಣ. ವ್ಯಭಿಚಾರ ಮಾಡಿದರೆ ಕುತ್ತಿಗೆ ತನಕ ಮಣ್ಣಿನಲ್ಲಿ ಹೂತು ಕತ್ತು ಕತ್ತರಿಸಬೇಕು ಎಂದು ಕಿಡಿಕಾರಿದ್ದಾರೆ.

  • ಕೋಡಿಹಳ್ಳಿ ಚಂದ್ರಶೇಖರ್ ಚೈನಾ ಮಾಡೆಲ್: ಸೊಗಡು ಶಿವಣ್ಣ

    ಕೋಡಿಹಳ್ಳಿ ಚಂದ್ರಶೇಖರ್ ಚೈನಾ ಮಾಡೆಲ್: ಸೊಗಡು ಶಿವಣ್ಣ

    ತುಮಕೂರು: ಕೋಡಿಹಳ್ಳಿ ಚಂದ್ರಶೇಖರ್ ನಮ್ಮ ದೇಶದವರಲ್ಲ, ಚೈನಾ ಮಾಡೆಲ್ ಇರಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಡಿಹಳ್ಳಿ ಕಮ್ಯೂನಿಸ್ಟ್ ನಿಬಂಧನೆಗಳನ್ನು ಬಲವಂತವಾಗಿ ಹೇರುವ ಮೂಲಕ ಸಾರಿಗೆ ನೌಕರರ ಹೋರಾಟದ ದಾರಿ ತಪ್ಪಿಸುತಿದ್ದಾರೆ. ನೌಕರರ ಹೋರಾಟದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದಾರೆ. ಬಹುಶಃ ಇವರು ಚೀನಾದಿಂದ ಬಂದಿರಬೇಕು. ಅವರು ನಮ್ಮ ದೇಶದವರಲ್ಲಿ ಚೈನಾ ಮಾಡೆಲ್ ಇರಬೇಕು ಎಂದು ಹರಿಹಾಯ್ದಿದ್ದಾರೆ.

    ಕೋವಿಡ್ ಸಂದರ್ಭದಲ್ಲಿ ಈತ ರೈತರ ನೆರವಿಗೆ ನಿಂತಿಲ್ಲ, ರೈತರ ತರಕಾರಿಗಳು ರಸ್ತೆಗೆ ಬಿದ್ದಿತ್ತು. ನಾವು ಅದನ್ನು ಬೆಂಗಳೂರಿಗೆ ರವಾನಿಸಿ ಮಾರಾಟ ಮಾಡಿದ್ದೆವು. ಆಗ ಈತ ಎಲ್ಲಿಗೆ ಹೋಗಿದ್ದರು, ಈತನಿಗೆ ಮಾನ ಮರ್ಯಾದೆ ಇಲ್ವಾ, ಈ ರೀತಿ ಎತ್ತಿಕಟ್ಟಲು ನಾಚಿಕೆ ಆಗುವುದಿಲ್ಲವೇ? ಈನನ್ನು ಮೇಧಾವಿ ಅಂದುಕೊಂಡಿದ್ದೆ, ಈತ ವ್ಯವಸ್ಥೆಯನ್ನು ಬುಡಮೇಲು ಮಾಡುವವ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈತನನ್ನು ಸರ್ಕಾರ ಯಾಕೆ ಸುಮ್ಮನೆ ಬಿಟ್ಟಿದೆ, ಅರೆಸ್ಟ್ ಮಾಡಿ ಒಳಗೆ ಹಾಕಬೇಕು. ಕಾನೂನಿನ ಪ್ರಕಾರ ಚಂದ್ರಶೇಖರ್ ಅವರನ್ನು ಒಳಗೆ ಹಾಕಿದರೆ ಇಷ್ಟೊಂದು ಅಹಿತಕರ ಘಟನೆ ನಡೆಯುತ್ತಿರಲಿಲ್ಲ ಎಂದು ಕಿಡಿಕಾರಿದರು.

  • ಗಲಭೆಕೋರರನ್ನು ಸಾಮೂಹಿಕವಾಗಿ ಗಲ್ಲಿಗೇರಿಸಬೇಕು: ಸೊಗಡು ಶಿವಣ್ಣ

    ಗಲಭೆಕೋರರನ್ನು ಸಾಮೂಹಿಕವಾಗಿ ಗಲ್ಲಿಗೇರಿಸಬೇಕು: ಸೊಗಡು ಶಿವಣ್ಣ

    ತುಮಕೂರು: ಡಿಜೆ ಹಳ್ಳಿ ಗಲಭೆಕೋರರನ್ನು ಸಾಮೂಹಿಕವಾಗಿ ಗಲ್ಲಿಗೇರಿಸಬೇಕು ಎಂದು ಮಾಜಿ ಸಚಿವ ಸೊಗಡು ಆಗ್ರಹಿಸಿದ್ದಾರೆ.

    ತುಮಕೂರಿನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗಲಭೆಕೋರರನ್ನು ಗಲ್ಲಿಗೇರಿಸಿದಾಗ ಮಾತ್ರ ಬುದ್ಧಿ ಬರುತ್ತದೆ. ನಾವು ಆ ಸಮುದಾಯವನ್ನು ಕಳೆದ 70 ವರ್ಷದಿಂದ ಪ್ರೀತಿಯಿಂದ ನೋಡಿಕೊಂಡು ಬರುತ್ತಿದ್ದೇವೆ. ಆದರೂ ಅವರು ತಮ್ಮ ಚಾಳಿ ಬಿಡುತ್ತಿಲ್ಲ. ಹಾಗಾದರೆ ನಮ್ಮ ಪ್ರೀತಿಗೆ ಬೆಲೆನೆ ಇಲ್ಲವೇ ಎಂದು ಸೊಗಡು ಶಿವಣ್ಣ ಪ್ರಶ್ನಿಸಿದ್ದಾರೆ.

    ಗಲಭೆಗೆ ಬಿಜೆಪಿ ಕುಮ್ಮಕ್ಕು ಕೊಟ್ಟಿದೆ ಎಂದು ಹೇಳಿದ್ದ ರಾಮಲಿಂಗಾ ರೆಡ್ಡಿ ಮೀರ್ ಸಾದೀಕ್ ರೆಡ್ಡಿಯಾಗಿದ್ದಾರೆ. ಕಾಂಗ್ರೆಸ್ಸಿನವರು ತಮ್ಮ ವೋಟ್ ಬ್ಯಾಂಕ್ ಗಾಗಿ ಗಲಭೆಕೋರರ ಬೆಂಬಲಕ್ಕೆ ನಿಂತು ಓಲೈಕೆ ರಾಜಕಾರಣ ಮಾಡುತಿದ್ದಾರೆ ಎಂದು ದೂರಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಮಾನ ಮರ್ಯಾದೆ ಮೀರಿ ಮಾತನಾಡುತ್ತಿದ್ದಾರೆ. ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರು ಅನ್ನುವ ರೀತಿಯಲ್ಲಿ ಹೇಳಿಕೆ ನೀಡುತಿದ್ದಾರೆ. ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳು ಇವರೇ ಬೆಳೆಸಿದ ಪಾಪದ ಕೂಸುಗಳು. ಅವರ ಮೇಲಿದ್ದ ಕೇಸ್‍ಗಳನ್ನು ಸಿದ್ದರಾಮಯ್ಯನವರೇ ಹಿಂದೆ ಪಡಿದಿದ್ರು. ಸಿದ್ದರಾನಯ್ಯರು ಈ ಮನಸ್ಥಿತಿಯಿಂದ ಹೊರಕ್ಕೆ ಬರಬೇಕು ಎಂದು ಟೀಕಿಸಿದ್ದಾರೆ.

    ಅಲ್ಲದೆ ಮುಸ್ಲಿಂ ಸಮುದಾಯದ ಯುವಕರು ಆಂಜನೇಯ ಸ್ವಾಮಿ ದೇವಸ್ಥಾನ ರಕ್ಷಣೆ ಮಾಡುವ ನಾಟಕ ಆಡಿದ್ದಾರೆ. ಬೆಕ್ಕು ಇಲ್ಲಿ ಆಟ ಆಡಿ ನಾಟಕ ಮಾಡಿದ್ದಾರೆ. ಅಷ್ಟೇ ಅದರಲ್ಲಿ ಏನೂ ಔದಾರ್ಯತೆ ಇಲ್ಲ ಎಂದು ಸೊಗಡು ಪ್ರತಿಕ್ರಿಯಿಸಿದ್ದಾರೆ.

    ಆಂಜನೇಯಸ್ವಾಮಿ ಸ್ವಾಮಿ ದೇವಸ್ಥಾನ ಅವರು ಮುಟ್ಟಿ ನೋಡಬೇಕಿತ್ತು. ನಾವೇನು ಸುಮ್ಮನಿರುತ್ತಿರಲಿಲ್ಲ. ಮುಂದೆ ನಾವೂ ಕೂಡ ಹುಲಿ ಆಟ ಆಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

  • ಸಿದ್ದರಾಮಯ್ಯಗೆ ಜನ ಗೃಹಬಂಧನದ ಶಿಕ್ಷೆ ಕೊಟ್ಟಿದ್ದಾರೆ: ಸೊಗಡು ಶಿವಣ್ಣ

    ಸಿದ್ದರಾಮಯ್ಯಗೆ ಜನ ಗೃಹಬಂಧನದ ಶಿಕ್ಷೆ ಕೊಟ್ಟಿದ್ದಾರೆ: ಸೊಗಡು ಶಿವಣ್ಣ

    ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಈ ನಾಡಿನ ಜನ ಉಪಚುನಾವಣೆಯಲ್ಲಿ ತಿರಸ್ಕರಿಸುವ ಮೂಲಕ ಗೃಹ ಬಂಧನ ಶಿಕ್ಷೆ ಕೊಟ್ಟಿದ್ದಾರೆ. ಮಾನ ಮರ್ಯಾದೆ ಇದ್ದರೆ ಸಿಎಂ ಸಿದ್ದರಾಮಯ್ಯ ಕೇವಲ ರಾಜೀನಾಮೆ ಕೊಡುವುದಷ್ಟೇ ಅಲ್ಲ ಈ ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಸಿದ್ದರಾಮಯ್ಯ ಮಾತೆತ್ತಿದರೆ ಯಡಿಯೂರಪ್ಪ ಜೈಲಿಗೆ ಹೋದವರು ಎಂದು ಪದೇ ಪದೇ ಅವಹೇಳ ಮಾಡುತ್ತಿದ್ದರು. ಇವರೇ ಪಿತೂರಿ ಮಾಡಿ ಜೈಲಿಗೆ ಕಳುಹಿಸಿ ಬಳಿಕ ಟೀಕೆ ಮಾಡುತ್ತಿದ್ದರು. ಯಡಿಯೂರಪ್ಪಗೆ ಮಾಡಿದ್ದ ಅವಮಾನಕ್ಕೆ ಜನರು ಸಿದ್ದರಾಮಯ್ಯರಿಗೆ ತಕ್ಕ ಶಿಕ್ಷೆ ಕೊಟ್ಟಿದ್ದಾರೆ ಎಂದು ಸೊಗಡು ಗುಡುಗಿದ್ದಾರೆ. ಇದನ್ನೂ ಓದಿ: ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    ದುರಹಂಕಾರಿ ಸಿದ್ದರಾಮಯ್ಯ ಹೋಗಬೇಕು ಎಂದು ಕರ್ನಾಟಕದ ಜನ ಯಡಿಯೂರಪ್ಪ ಪರ ತೀರ್ಪು ಕೊಟ್ಟಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವುದರ ಜೊತೆಗೆ ಯಡಿಯೂರಪ್ಪ ಹಾಗೂ ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ವಿಧಾನ ಸೌಧದಲ್ಲಿ ತೊಡೆ ತಟ್ಟುತ್ತಾರೆ. ಪೈಲ್ವಾನರ ರೀತಿ ನಡೆದು ಕೊಳ್ತಾರೆ ನಾನೇ ಧೀರ ಶೂರ ಎಂದು ಮೆರೆಯುತ್ತಿದ್ದರು. ಜನರ ತೀರ್ಪಿಗಿಂತ ಹೆಚ್ಚಿನ ಶಿಕ್ಷೆ ಬೇಕೆ ಎಂದು ಸೊಗಡು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ

    ಇನ್ನೂ ಮೂರೂವರೆ ವರ್ಷ ಮುಖ ತೋರಿಸದೇ ಗೃಹ ಬಂಧನದಲ್ಲಿ ಇರುವಂತೆ ನಾಡಿನ ಜನತೆ ಸಿದ್ದರಾಮಯ್ಯಗೆ ತಕ್ಷ ಶಿಕ್ಷೆ ನೀಡಿದ್ದಾರೆ. ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಮಾತನಾಡುವಾಗ ಸಿದ್ದರಾಮಯ್ಯರ ಹಾವಭಾವ ಅಸಹ್ಯ ಹುಟ್ಟಿಸುವಂತಿರುತಿತ್ತು. ಅದನ್ನೆಲ್ಲಾ ಅರಿತ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಗರಂ ಆದರು.

    ಸಿದ್ದರಾಮಯ್ಯರ ದಬ್ಬಾಳಿಕೆ ಕಾಂಗ್ರೆಸ್ ಹಿರಿಯ ನಾಯಕರ ಮೇಲೂ ನಡೆದಿದೆ. ಕಾಂಗ್ರೆಸ್ಸಿನ ಹಿರಿಯ ನಾಯಕರೆಲ್ಲರೂ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದಕ್ಕೆಲ್ಲಾ ಅವರ ದುರಹಂಕಾರವೇ ಕಾರಣ ಎಂದು ಗುಡುಗಿದ್ದಾರೆ.