Tag: Software Engineer

  • ಪೊಲೀಸರ ಕಿರುಕುಳದಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ

    ಪೊಲೀಸರ ಕಿರುಕುಳದಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ

    ಮುಂಬೈ: ಕುಟುಂಬದ ಮೇಲೆ ಪೊಲೀಸರು ನೀಡುತ್ತಿದ್ದ ಕಿರುಕುಳದಿಂದ ಮನನೊಂದ ಸಾಫ್ಟ್ ವೇರ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.

    ದಶರಥ ರೆಡ್ಡಿ (24) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿಯಾಗಿದ್ದು, ಇವರು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

    ಮೂಲತಃ ಮೆಟ್ಪಾಲಿ ಮಂಡಲ್ನ ಆರ್ಚ್ ಮೂಲದವರಾಗಿರೋ ದಶರಥ ಕುಟುಂಬಕ್ಕೆ ಪೊಲೀಸರು ಭೂ ವಿವಾದದಿಂದ ಕಿರುಕುಳ ನೀಡುತ್ತಿದ್ದರು. ಇದರಿಂದ ಅವರ ಕುಟುಂಬ ಪ್ರತಿನಿತ್ಯ ಭಯದಿಂದಲೇ ಜೀವನ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ಸಿಟ್ಟುಗೊಂಡಿದ್ದ ದಶರಥ ಬೆಂಗಳೂರಿನಿಂದ ತನ್ನ ಊರಿಗೆ ವಾಪಾಸ್ಸಾಗಿ ಪೊಲೀಸರನ್ನು ಹುಡುಕಾಡಲು ಶುರು ಮಾಡಿದ್ದಾರೆ. ಅಂತೆಯೇ ಶನಿವಾರ ರಾತ್ರಿ ಎಲ್ಲರೂ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸದ್ಯ ಪೊಲೀಸಪ್ಪನನ್ನು ತಕ್ಷಣವೇ ಕೆಲಸದಿಂದ ವಜಾ ಮಾಡುವಂತೆ ದಶರಥ ಸಂಬಂಧಿಕರು ಹಾಗೂ ನೆರೆಮನೆಯವರು ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಧರಣಿ ನಡೆಸಿದ್ದಾರೆ. ಇವರ ಪ್ರತಿಭಟನೆಯಿಂದಾಗಿ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಿ, ತನಿಖೆ ಮುಂದುವರೆಸಿದ್ದಾರೆ.

  • ಅವನಿಗೆ ಅವಳ್ಮೇಲೆ, ಅವಳಿಗೆ ಇನ್ನೊಬ್ಬನ್ಮೇಲೆ ಲವ್: ನೀನಿಲ್ಲದ ಬದುಕು ಯಾಕೆಂದು ಸತ್ತೇ ಹೋದ!

    ಅವನಿಗೆ ಅವಳ್ಮೇಲೆ, ಅವಳಿಗೆ ಇನ್ನೊಬ್ಬನ್ಮೇಲೆ ಲವ್: ನೀನಿಲ್ಲದ ಬದುಕು ಯಾಕೆಂದು ಸತ್ತೇ ಹೋದ!

    ಹೈದರಾಬಾದ್: ಪ್ರೀತಿ ಮಾಯೆ ಹುಷಾರು ಎಂದು ನೀವೆಲ್ಲರೂ ಕೇಳಿರುತ್ತೀರಿ. ಅದೇ ಸ್ಟೋರಿ ಇದು. ಪ್ರೀತಿಯ ಹುಚ್ಚುತನಕ್ಕೆ ಸಿಲುಕಿ, ತಾನು ಇಷ್ಟಪಟ್ಟ ಹುಡುಗಿ ತನಗೆ ದಕ್ಕಲಿಲ್ಲ ಎಂದು ಸಾಫ್ಟ್ ವೇರ್ ಎಂಜಿನಿಯರ್ ಒಬ್ಬ ಅಪಾರ್ಟ್ ಮೆಂಟ್ ನಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ.

    ಮೆಹಬೂಬಾಬಾದ್ ಜಿಲ್ಲೆಯ ದೋರ್ಣಕಲ್ ಮಂಡಲ್‍ನ ಗೊಲ್ಲಚೆಲ್ಲ ಗ್ರಾಮದ ಜಗದೀಶ್ ಮೃತ ಸಾಫ್ಟ್ ವೇರ್ ಎಂಜಿನಿಯರ್. ಈತ ಮಿಯಾಪುರ್ ಎಂಬಲ್ಲಿನ ಜನಪ್ರಿಯ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದ. ಇದೇ ವೇಳೆ ನೆರೆಹೊರೆಯ ಹುಡುಗಿಯೊಬ್ಬಳಿಗೆ ಲವ್ ಪ್ರಪೋಸ್ ಮಾಡಿದ್ದಾನೆ. ಆದರೆ ಇದಕ್ಕೂ ಮೊದಲೇ ಇನ್ನೊಬ್ಬನ ಜೊತೆ ಲವ್ ಆಗಿದ್ದ ಹುಡುಗಿ ಈತನ ಪ್ರೇಮ ನಿವೇದನೆಯನ್ನು ತಿರಸ್ಕರಿಸುತ್ತಾನೆ. ಆದರೂ ಆತ ಮತ್ತೆ ಮತ್ತೆ ಆಕೆಯನ್ನು ಕಾಡುತ್ತಿದ್ದಿದ್ದರಿಂದ ಬೇಸತ್ತ ಆಕೆ ಬೇರೆ ಕಡೆ ವಾಸ ಬದಲಾಯಿಸುತ್ತಾಳೆ.

    ಇದನ್ನೂ ಓದಿ: 2 ವರ್ಷ ಪ್ರೀತಿಸಿದವಳನ್ನ ನದಿಗೆ ತಳ್ಳಿದ ಪ್ರಿಯತಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರ!

    ಆದರೆ ಆಕೆಯ ಗೆಳೆಯರ ಮೂಲಕ ಆತ ಆಕೆಯ ಫೋನ್ ನಂಬರ್ ಪಡೆದುಕೊಂಡು ಆಕೆಗೆ ಮತ್ತೆ ಕಾಲ್ ಮಾಡುತ್ತಾನೆ. ಫೋನಲ್ಲಿ ಮಾತಾಡ್ತಾ ನೀನಿಲ್ಲದೆ ಈ ಬದುಕೇ ವ್ಯರ್ಥ ಎಂದೆಲ್ಲಾ ಅಂಗಾಲಾಚಿದ್ದಾನೆ. ಈ ವೇಳೆ ಆತ ಏನಾದರೂ ಅನಾಹುತ ಮಾಡಿಕೊಳ್ಳಬಹುದು ಎಂದು ಎಚ್ಚೆತ್ತ ಆಕೆ ಆತನಿಗೆ ವಿಷಯದ ಮನವರಿಕೆ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಆತ ನಾನು ಅಪಾರ್ಟ್ ಮೆಂಟ್ ನ 5ನೇ ಅಂತಸ್ತಿನಿಂದ ಹಾರಿ ಸಾಯುತ್ತೇನೆ ಎಂದು ಬೆದರಿಕೆ ಹಾಕಿ ಕಟ್ಟಡದಿಂದ ಹಾರುತ್ತಾನೆ. ತಕ್ಷಣ ಆಕೆ ಸ್ಥಳಕ್ಕೆ ಬಂದರೂ ಆತ ರಕ್ತದ ಮಡುವಿನಲ್ಲಿ ಬಿದ್ದು ನಿಶ್ಚಲವಾಗಿದ್ದ. ಇಲ್ಲಿಗೆ ಹುಚ್ಚು ಪ್ರೇಮಕ್ಕೆ ಆತ ತನ್ನ ಪ್ರಾಣವನ್ನೇ ತ್ಯಜಿಸಿದ್ದಾನೆ.

    ಇದನ್ನೂ ಓದಿ: ಬಾಯ್ ಫ್ರೆಂಡ್ ಮೀಟ್ ಆಗದ್ದಕ್ಕೆ 4ನೇ ಫ್ಲೋರ್‍ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ

    ಇದೇ ವೇಳೆ ವಿಷಯ ತಿಳಿದ ಜಗದೀಶ್ ಸಂಬಂಧಿಕರು, ಇದು ಆತ್ಮಹತ್ಯೆಯಲ್ಲ ಕೊಲೆ. ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

    ಇದನ್ನೂ ಓದಿ: ಲವ್ವರ್ ಬಿಟ್ಟು ಆತನ ಸ್ನೇಹಿತನ ಜೊತೆ ಲವ್: ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಇದನ್ನೂ ಓದಿಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು