Tag: Software Engineer

  • Kurnool Bus Fire | ಬೆಂಗಳೂರಿನ ಇಬ್ಬರು ಟೆಕ್ಕಿಗಳ ದುರಂತ ಸಾವು

    Kurnool Bus Fire | ಬೆಂಗಳೂರಿನ ಇಬ್ಬರು ಟೆಕ್ಕಿಗಳ ದುರಂತ ಸಾವು

    – ದೀಪಾವಳಿ ಹಬ್ಬ ಮುಗಿಸಿಕೊಂಡು ಬರ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಅನುಷಾ

    ಹೈದರಾಬಾದ್‌/ಬೆಂಗಳೂರು: ಕರ್ನೂಲ್‌ನಲ್ಲಿ ನಡೆದ ಭೀಕರ ಬಸ್‌ ದುರಂತದಲ್ಲಿ (Kurnool Bus Fire) ಬೆಂಗಳೂರಿನ (Bengaluru) ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ ಕೂಡ ಸಾವನ್ನಪ್ಪಿದ್ದಾರೆ.

    ಎಂಜಿನಿಯರ್‌ಗಳಾದ (Software Engineer) ಅನುಷಾ, ಗನ್ನಮನೇನಿ ಧಾತ್ರಿ (ಜಿ.ಧಾತ್ರಿ) ಮೃತ ದುರ್ದೈವಿಗಳು. ಇದನ್ನೂ ಓದಿ: Kurnool Bus Fire | ಸೂರ್ಯೋದಯಕ್ಕೂ ಮುನ್ನ ಸಾವಿನ ಮನೆ ಕದ ತಟ್ಟಿದ ಸುಂದರ ಕುಟುಂಬ

    ದೀಪಾವಳಿ ಮುಗಿಸಿಕೊಂಡು ಬರ್ತಿದ್ದ ಅನುಷಾ
    ಮಹೇಶ್ವರಂ ಅನುಷಾ ರೆಡ್ಡಿ ಮೂಲತಃ ಯದಾದ್ರಿ ಭುವನಗಿರಿ ಜಿಲ್ಲೆಯ ವಸ್ತಕೊಂಡೂರು ಗ್ರಾಮದವರು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿಕೊಂಡಿದ್ದರು. ದೀಪಾವಳಿ ಹಬ್ಬ ಮುಗಿಸಿ ಬರುತ್ತಿದ್ದ ಅನುಷಾ ಇಂದು ಬೆಳಗ್ಗಿನ ಜಾವ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್‌ ಗುದ್ದಿದ್ದಾಗ ಏನಾಯ್ತು?

    ಸಾಫ್ಟ್‌ವೇರ್‌ ಎಂಜಿನಿಯರ್ ಧಾತ್ರಿ
    ಗನ್ನಮನೇನಿ ಧಾತ್ರಿ (ಜಿ.ಧಾತ್ರಿ) ಬಾಪಟ್ಲ ಜಿಲ್ಲೆಯವರು. ಮಾವನ ಮನೆಯಿಂದ ಬೆಂಗಳೂರಿಗೆ ವಾಪಸ್‌ ಬರುತ್ತಿದ್ದ ವೇಳೆ ಸಾವನ್ನಪ್ಪಿದ್ದು, ಬದುಕು ದುರಂತ ಅಂತ್ಯಕಂಡಿದೆ. ಇದನ್ನೂ ಓದಿ: ಬೈಕ್‌ ಡಿಕ್ಕಿ, ಧಗಧಗಿಸಿದ ಬೆಂಗಳೂರಿಗೆ ಬರುತ್ತಿದ್ದ ಬಸ್ಸು – 20ಕ್ಕೂ ಹೆಚ್ಚು ಮಂದಿ ಸಜೀವ ದಹನ

    ಬೆಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿ ಇಬ್ಬರು ಮಕ್ಕಳು ಸೇರಿ ಒಟ್ಟು 41 ಮಂದಿ ಪ್ರಯಾಣಿಕರಿದ್ದರು. 20 ಪ್ರಯಾಣಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈವರೆಗೆ 11 ಮೃತದೇಹಗಳನ್ನ ಹೊರ ತೆಗೆಯಲಾಗಿದ್ದು, ಮೃತದೇಹ ಪತ್ತೆಹಚ್ಚುವ ಕಾರ್ಯವೂ ನಡೆದಿದೆ. ವಿಧಿವಿಜ್ಞಾನ ತಜ್ಞರು ಮೃತ ದೇಹಗಳ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗಳನ್ನು ನಡೆಸಿದ ನಂತರ ಪೊಲೀಸರು ಮೃತರ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸುವ ಸಾಧ್ಯತೆಯಿದೆ. ಘಟನಾ ಸ್ಥಳದಿಂದ ಡ್ರೈವರ್‌ ಎಸ್ಕೇಪ್‌ ಆಗಿದ್ದು, ನಿರ್ವಾಹಕನನ್ನ ವಶಕ್ಕೆ ಪಡೆಯಲಾಗಿದೆ.

    ಬಸ್‌ನಲ್ಲಿದ್ದವರ ಪಟ್ಟಿ:
    ಅಶ್ವಿನ್ ರೆಡ್ಡಿ (36), ಜಿ.ಧಾತ್ರಿ (27), ಕೀರ್ತಿ (30), ಪಂಕಜ್ (28), ಯುವನ್ ಶಂಕರ್ ರಾಜು (22), ತರುಣ್ (27), ಆಕಾಶ್ (31), ಗಿರಿರಾವ್ (48), ಬುನ್ಸಾಯ್ (33), ಗಣೇಶ್ (30), ಜಯಂತ್ ಪುಷ್ವಾಹ (27), ಪಿಲ್ವಾಮಿನ್ ಬೇಬಿ (30), ರಮೇಶ್ ಕುಮಾರ್ (30) ಮತ್ತು ಅವರ ಕುಟುಂಬದವರು (64), ಕೆ. ಅನುಷಾ (22), ಮೊಹಮ್ಮದ್ ಕೈಸರ್ (51), ದೀಪಕ್ ಕುಮಾರ್ (24), ಆಂದೋಜ್ ನವೀನ್ ಕುಮಾರ್ (26), ಪ್ರಶಾಂತ್ (32), ಎಂ. ಸತ್ಯನಾರಾಯಣ (28), ಮೇಘನಾಥ್ (25), ವೇಣು ಗುಂಡ (33), ಚರಿತ್ (21), ಚಂದನ ಮಂಗ (23), ಸಂಧ್ಯಾರಾಣಿ ಮಂಗಾ (43), ಗ್ಲೋರಿಯಾ (24), ಎಲ್ಲೆಸಾ ಎಸ್. ಶ್ರೀಹರ್ಷ (24), ಶಿವ (24), ಶ್ರೀನಿವಾಸ ರೆಡ್ಡಿ (40), ಸುಬ್ರಹ್ಮಣ್ಯಂ (26), ಕೆ. ಅಶೋಕ್ (27), ಎಂ.ಜಿ. ರಾಮ ರೆಡ್ಡಿ (50), ಉಮಾಪತಿ (32), ಅಮೃತ್ ಕುಮಾರ್ (18), ವೇಣುಗೋಪಾಲ್ ರೆಡ್ಡಿ (24).

    ತುರ್ತು ನಿರ್ಗಮನ ದ್ವಾರದ ಮುರಿದು ಎಸ್ಕೇಪ್ ಆದವರು
    ಜಯಸೂರ್ಯ, ರಾಮಿರೆಡ್ಡಿ, ಅಕಿರಾ, ವೇಣುಗೋಪಾಲ್ ರೆಡ್ಡಿ, ಹರಿಕಾ, ಸತ್ಯನಾರಾಯಣ, ಶ್ರೀಲಕ್ಷ್ಮಿ, ನವೀನ್ ಕುಮಾರ್, ಅಖಿಲ್, ಜಸ್ಮಿತಾ, ರಮೇಶ್ ಮತ್ತು ಸುಬ್ರಹ್ಮಣ್ಯಂ.

  • ಪತ್ನಿ ಕೊಲೆ ಮಾಡಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಪತ್ನಿ ಕೊಲೆ ಮಾಡಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಚಂಡೀಗಢ: ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬ ತನ್ನ ಪತ್ನಿ ಜೊತೆ ಜಗಳವಾಡಿ ಕತ್ತು ಹಿಸುಕಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ.

    ಪತ್ನಿ ಕೊಲೆ ಮಾಡಿದ ಬಳಿಕ ಆರೋಪಿ ಅಜಯ್ ಕುಮಾರ್ (30) ತನ್ನ ಸ್ನೇಹಿತನಿಗೆ ವೀಡಿಯೊ ಸಂದೇಶ ಕಳುಹಿಸಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಿವಾಸಿ ಕುಮಾರ್ ಮತ್ತು ಪಶ್ಚಿಮ ಬಂಗಾಳದ ಅಸನ್ಸೋಲ್ ನಿವಾಸಿ ಸ್ವೀಟಿ ಶರ್ಮಾ (28) ಮೂರು ವರ್ಷಗಳ ಹಿಂದೆ ವಿವಾಹವಾದರು. ಇಬ್ಬರೂ ಗುರುಗ್ರಾಮ್‌ನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

    ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಶರ್ಮಾಳ ದೇಹವು ನೆಲದ ಮೇಲೆ ಬಿತ್ತು. ಆಕೆಯ ಕುತ್ತಿಗೆಗೆ ಸ್ಕಾರ್ಫ್‌ನಿಂದ ಬಿಗಿದು ಹತ್ಯೆ ಮಾಡಿರುವುದು ಕಂಡುಬಂತು. ಕುಮಾರ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

    ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಮಹಿಳೆಯ ಕುಟುಂಬವು ಕುಮಾರ್ ವಿರುದ್ಧ ಕೊಲೆ ಆರೋಪ ಹೊರಿಸಿ ದೂರು ದಾಖಲಿಸಿದೆ.

  • ಮಂಗಳೂರು | ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕ ಕೂಡ ಅಪಘಾತಕ್ಕೆ ಬಲಿ!

    ಮಂಗಳೂರು | ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕ ಕೂಡ ಅಪಘಾತಕ್ಕೆ ಬಲಿ!

    – ಚೆನ್ನೈನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದ ಯುವತಿ

    ಮಂಗಳೂರು: ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕ ಕೂಡ ಅಪಘಾತಕ್ಕೆ (Accident) ಬಲಿಯಾಗಿರುವ ಘಟನೆ ಮಂಗಳೂರಿನ (Mangaluru) ಪಾವಂಜೆ ಬಳಿ ನಡೆದಿದೆ.

    ಹದಿನೈದು ದಿನಗಳ ಅಂತರದಲ್ಲೇ ಅಕ್ಕ – ತಮ್ಮ ಇಬ್ಬರೂ ಸಾವನ್ನಪ್ಪಿದ್ದಾರೆ. ನಗರದ ಬಂಗ್ರಕೂಳೂರು ನಿವಾಸಿಗಳಾದ ಶ್ರುತಿ ಹಾಗೂ ಸುಜಿತ್ ಮೃತಪಟ್ಟ ಅಕ್ಕ-ತಮ್ಮ. ಇದನ್ನೂ ಓದಿ: ತಾನೇ ಸಾಕಿದ್ದ ಶ್ವಾನಕ್ಕೆ ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಹತ್ಯೆಗೈದ ಮಹಿಳೆ

    ಏನಿದು ದುರ್ಘಟನೆ?
    ತಮ್ಮ ಸುಜಿತ್ ಇದೇ ಜೂನ್ 10ರಂದು ಮೃತಪಟ್ಟಿದ್ದ. ಹಾಗಾಗಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಶೃತಿ ಚೆನ್ನೈನಿಂದ ಬಂದಿದ್ದಳು. ಬ್ಯಾಂಕ್‌ ಕೆಲಸದ ನಿಮಿತ್ತ ಪಾವಂಜೆ ಬಳಿ ಸ್ಕೂಟರ್ ನಿಲ್ಲಿಸಿ ರೈನ್ ಕೋಟ್ ಧರಿಸುತ್ತಿದ್ದರು, ತಮ್ಮ ತಂದೆ ಕೂಡ ಜೊತೆಗಿದ್ದರು. ಈ ವೇಳೆ ಹಿಂಬಂದಿಯಿಂದ ಬಂದು ಕಾರು ಗುದ್ದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಶೃತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ತಂದೆ ಗೋಪಾಲ ಆಚಾರ್ಯ ಅವರೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗೋಪಾಲ ಆಚಾರ್ಯರಿಗೆ ಇಬ್ಬರೇ ಮಕ್ಕಳಿದ್ದು, ಪುತ್ರನ ಸಾವು ಮಾಸುವ ಮುನ್ನವೇ ಪುತ್ರಿಯೂ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬದ ಶೋಕಸಾಗರದಲ್ಲಿ ಮುಳುಗಿದೆ. ಇದನ್ನೂ ಓದಿ: Kalaburagi | ಆಧಾರ್ ಕಾರ್ಡ್ ಕೇಳಿದ್ದಕ್ಕೆ ಮಹಿಳೆಯ ಸಂಬಂಧಿಕರಿಂದ ಕಂಡಕ್ಟರ್ ಮೇಲೆ ಹಲ್ಲೆ

  • ಕೆರೆಗೆ ಹಾರಿ ಟೆಕ್ಕಿ ಆತ್ಮಹತ್ಯೆ – ಪ್ರೀತಿ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಶಂಕೆ

    ಕೆರೆಗೆ ಹಾರಿ ಟೆಕ್ಕಿ ಆತ್ಮಹತ್ಯೆ – ಪ್ರೀತಿ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಶಂಕೆ

    – ಶೋಧ ಕಾರ್ಯಕ್ಕೆ ಖುದ್ದು ಅಗ್ನಿಶಾಮಕ ದಳದೊಂದಿಗೆ ಕೆರೆಗಿಳಿದ ಶಾಸಕ

    ತುಮಕೂರು: ಸಾಪ್ಟ್‌ವೇರ್‌ ಕಂಪನಿ ಉದ್ಯೋಗಿಯೊಬ್ಬರು ಕುಣಿಗಲ್ (Kunigal) ಪಟ್ಟಣದ ದೊಡ್ಡಕೆರೆಗೆ (Doddakere Lake) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕುಣಿಗಲ್ ತಾಲೂಕು ಸೊಬಗನಹಳ್ಳಿ (Sobaganahalli) ಗ್ರಾಮದ ನಿವಾಸಿ ಸುಮಾ (26) ಮೃತ ಟೆಕ್ಕಿ.

    ಸುಮಾ ಶಿವರಾತ್ರಿ ನಿಮಿತ್ತ ಬೆಂಗಳೂರಿನಿಂದ ಊರಿಗೆ ಬಂದಿದ್ದರು. ಗುರುವಾರ ಬೆಂಗಳೂರಿಗೆ ವಾಪಸ್ ಆಗುವ ವೇಳೆ ಬಸ್ಸಿನಲ್ಲಿ ಯಾರದ್ದೋ ಜೊತೆ ಫೋನಿನಲ್ಲಿ ಮಾತನಾಡುತ್ತಾ ಜಗಳ ಮಾಡಿಕೊಂಡಿದ್ದಾರೆ. ಜಗಳ ಮಾಡುತ್ತಲೇ ಕುಣಿಗಲ್ ಬಸ್ ನಿಲ್ದಾಣದಿಂದ ದೊಡ್ಡಕೆರೆ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸೆಬಿ ಮುಖ್ಯಸ್ಥರಾಗಿ ತುಹಿನ್‌ ಕಾಂತ ಪಾಂಡೆ ನೇಮಕ

    ಕೆರೆ ಏರಿ ಮೇಲೆ ಸುಮಾಳ ಮೊಬೈಲ್, ಪರ್ಸ್ ಸಿಕ್ಕಿದ್ದರಿಂದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಶವ ಪತ್ತೆಯಾಗದ ಕಾರಣ ಮಲ್ಪೆಯಿಂದ ಈಜು ತಜ್ಞರನ್ನು ಕರೆಸಿ ಶೋಧಿಸಿದ ಬಳಿಕ ಶವಪತ್ತೆಯಾಗಿದೆ.

    ಶೋಧ ಕಾರ್ಯಕ್ಕೆ ಕುಣಿಗಲ್ ಶಾಸಕ ಡಾ.ರಂಗನಾಥ್ ಸಾಥ್ ನೀಡಿದ್ದು, ಅಗ್ನಿಶಾಮಕ ದಳದೊಂದಿಗೆ ಲೈಫ್ ಜಾಕೆಟ್ ಧರಿಸಿ ಕೆರೆಗೆ ಇಳಿದ ಶಾಸಕ ರಂಗನಾಥ್ ಯುವತಿಗಾಗಿ ಶೋಧಕಾರ್ಯ ನಡೆಸಿದರು. ಇದನ್ನೂ ಓದಿ: ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಸುದೀಪ್‌

    ಸದ್ಯ ಮೃತದೇಹವನ್ನು ಕುಣಿಗಲ್ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಶಿಲ್ಪಾ ಶೆಟ್ಟಿ

  • ಎಲ್ಲರಿಗೂ ಗುಡ್ ಬೈ ಎಂದು ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ

    ಎಲ್ಲರಿಗೂ ಗುಡ್ ಬೈ ಎಂದು ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ

    ಮಡಿಕೇರಿ: ಸಾಫ್ಟ್‌ವೇರ್‌ ಎಂಜಿನಿಯರ್ (Software Engineer) ಒಬ್ಬರು ಮಡಿಕೇರಿಯ (Madikeri) ಲಾಡ್ಜ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಬೆಂಗಳೂರಿನ (Bengaluru) ಸಂದೇಶ್ (35) ಎಂದು ಗುರುತಿಸಲಾಗಿದೆ. ರೂಮ್‍ನ ಕಿಟಕಿಯ ಸರಳಿಗೆ ಬಟ್ಟೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಅವರು ಕಳೆದ 2 ದಿನಗಳಿಂದ ಹೊಟೆಲ್‍ನಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮದ್ವೆಯಾಗಲು ಯಾರೂ ಹೆಣ್ಣು ಕೊಡ್ತಿಲ್ಲವೆಂದು ಮನನೊಂದು ಯುವಕ ಆತ್ಮಹತ್ಯೆ

    ಇಂದು (ಮಂಗಳವಾರ) ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಕೋಣೆಯಲ್ಲಿ ಡೆತ್‍ನೋಟ್ ಕೂಡಾ ಸಿಕ್ಕಿದೆ. ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ, ಎಲ್ಲರಿಗೂ ಗುಡ್ ಬೈ, ಯಾರೂ ಬೇಸರ ಮಾಡಬಾರದು ಎಂದು ಬರೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸ್ ಮೂಲಗಳು ನೀಡಿವೆ.

    ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇದನ್ನೂ ಓದಿ: ರಾಮಮಂದಿರದ ಅಕ್ಷತೆ ಹಂಚಲು ಹೋದ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ

  • 41 ಕೋಟಿಯೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ – ಬೆರಗಾಗಿಸಿದ 22 ವರ್ಷದ ಗೂಗಲ್ ಟೆಕ್ಕಿಯ ಫ್ಯೂಚರ್ ಪ್ಲ್ಯಾನ್

    41 ಕೋಟಿಯೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ – ಬೆರಗಾಗಿಸಿದ 22 ವರ್ಷದ ಗೂಗಲ್ ಟೆಕ್ಕಿಯ ಫ್ಯೂಚರ್ ಪ್ಲ್ಯಾನ್

    ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಸಾಕಷು ಹಣವನ್ನು ಉಳಿತಾಯ ಮಾಡಲು ಹಾಗೂ ಹೂಡಿಕೆ (Investment) ಮಾಡಲು ಬಯಸುತ್ತಾರೆ. ಈ ಮೂಲಕ ಬೇಗನೆ ನಿವೃತ್ತರಾಗಲು ಬಯಸುತ್ತಾರೆ. ಇಲ್ಲೊಬ್ಬ ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ (Google Software Engineer) ತನ್ನ 22 ವಯಸ್ಸಿನಲ್ಲಿ ವೃತ್ತಿಯನ್ನು ಪ್ರಾರಂಭಿಸುತ್ತಲೇ ತಮ್ಮ 35ನೇ ವಯಸ್ಸಿನೊಳಗೆ 5 ಮಿಲಿಯನ್ ಡಾಲರ್ (ಸುಮಾರು 41 ಕೋಟಿ ರೂ.) ಹೂಡಿಕೆ ಮಾಡಿ, ನಿವೃತ್ತಿ (Retirement) ಹೊಂದುವ ಗುರಿಯನ್ನು ಹೊಂಡಿದ್ದಾರೆ. ಅವರ ಫ್ಯೂಚರ್ ಪ್ಲ್ಯಾನ್ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.

    ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 22 ವರ್ಷದ ಎಥಾನ್ ನ್ಗುನ್ಲಿ (Ethan Nguonly) ಇಂತಹ ಒಂದು ಯೋಜನೆಯನ್ನು ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿಯಲ್ಲಿ ವಾಸವಿರೋ ಟೆಕ್ಕಿ ತನ್ನ ಹಣವನ್ನು ಉಳಿತಾಯ ಮಾಡುವುದಕ್ಕಿಂತ ಹೆಚ್ಚಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದರ ಮಹತ್ವದ ಬಗ್ಗೆ ತನ್ನ ಹೆತ್ತವರು ಹೇಗೆ ಪ್ರೋತ್ಸಾಹ ನೀಡಿದರು ಎಂದು ವಿವರಿಸಿದ್ದಾರೆ.

    ನೀವು ನಿಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿ ಇಟ್ಟು ಬಿಟ್ಟರೆ ಅದು ಯಾವುದೇ ಕೆಲಸಕ್ಕೂ ಬರಲ್ಲ. ಕಾಲಾನಂತರ ಅದು ನಿಷ್ಪ್ರಯೋಜಕ ಆಗಿಬಿಡುತ್ತದೆ. ಆದರೆ ನಿಮ್ಮ ಹಣದಿಂದ ಏನಾದರೂ ಪ್ರಯೋಜನ ಆಗಬೇಕೆಂದರೆ ಅದನ್ನು ಹೂಡಿಕೆ ಮಾಡಿ ಎಂದು ಪೋಷಕರು ತನಗೆ ತಿಳಿಸಿದ್ದಾಗಿ ನ್ಗುನ್ಲಿ ಹೇಳಿದ್ದಾರೆ.

    ನಾನು ಚಿಕ್ಕವನಿದ್ದಾಗಲೇ ಯೋಚಿಸುತ್ತಿದ್ದ ಮುಖ್ಯ ವಿಷಯವೆಂದರೆ, ಈ ಹಣ ಎಲ್ಲಾ ದೊಡ್ಡದಾಗುತ್ತಾ ಹೋಗುತ್ತದೆ, ಬೆಳೆಯುತ್ತಲೇ ಇರುತ್ತದೆ. ಆದರೆ ಇದಕ್ಕಾಗಿ ನಾವು ಯಾವುದೇ ಕೆಲಸ ಮಾಡುವ ಅಗತ್ಯವೇ ಇಲ್ಲ. ಇದು ನಿಜವಾಗಿಯೂ ನನ್ನ ಹಣವನ್ನು ಹೂಡಿಕೆಗಳಲ್ಲಿ ವಿನಿಯೋಗಿಸಬಹುದು ಎಂಬ ನನ್ನ ಕಲ್ಪನೆಯನ್ನು ಬಹಿರಂಗಪಡಿಸಿತು. ಅದಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡೋ ಬದಲು ಅದನ್ನು ಹೂಡಿಕೆ ಮಾಡುವುದೇ ಉತ್ತಮ ಎಂದು ಹೇಳಿದರು.

    ನ್ಗುನ್ಲಿ ಇಂತಹ ಯೋಜನೆಯೊಂದಿಗೆಯೇ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಇದಕ್ಕಾಗಿ ಅವರು ಯಾವುದೇ ಸಾಲ ಮಾಡುವ ಪರಿಸ್ಥಿತಿ ಎದುರಾಗಿಲ್ಲ. ನಂತರ ಅವರು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡೇ ಮಾಹಿತಿ ಹಾಗೂ ಡೇಟಾ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿದರು. 2022ರ ಆಗಸ್ಟ್‌ನಲ್ಲಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಸ್ನಾತಕೋತ್ತರ ಪದವಿ ಪಡೆಯುವುದಕ್ಕೂ ಮೊದಲೇ ನ್ಗುನ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.

    ನ್ಗುನ್ಲಿ ವಾರ್ಷಿಕ ಆದಾಯ 194,000 ಡಾಲರ್ (ಸುಮಾರು 1.60 ಕೋಟಿ ರೂ.). ಪ್ರಸ್ತುತ ಅವರು ತಮ್ಮ ನಿವೃತ್ತಿ ಹಾಗೂ ಇತರ ಹೂಡಿಕೆ ಖಾತೆಗಳಲ್ಲಿ ಹಾಗೂ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದ ಮನೆಗಳಲ್ಲಿ 135,000 ಡಾಲರ್ (ಸುಮಾರು 1.11 ಕೋಟಿ ರೂ.) ಹೂಡಿಕೆ ಮಾಡಿದ್ದಾರೆ. ತಮ್ಮ ವೇತನದಲ್ಲಿ ಅವರು 35% ರಷ್ಟು ಹೂಡಿಕೆಗಳಲ್ಲಿ ವಿನಿಯೋಗಿಸಲು ಮುಂದಾಗಿದ್ದಾರೆ. ಜೊತೆಗೆ ರಿಯಲ್ ಎಸ್ಟೇಟ್‌ನಲ್ಲೂ ವಿನಿಯೋಗಿಸಲು ಯೋಜಿಸಿದ್ದಾರೆ. ಇದನ್ನೂ ಓದಿ: ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

    ನ್ಗುನ್ಲಿ ಊಟಕ್ಕಾಗಿ ಹೆಚ್ಚೇನೂ ಖರ್ಚು ಮಾಡಲ್ಲ. ಏಕೆಂದರೆ ಗೂಗಲ್ ಉಚಿತ ಊಟ, ಉಪಹಾರ ನೀಡುತ್ತದೆ. ಬ್ರ್ಯಾಂಡೆಡ್ ಬಟ್ಟೆಗಳಿಗಾಗಿ ಹೆಚ್ಚಿನ ಖರ್ಚು ಮಾಡಲ್ಲ. ಬದಲಿಗೆ ಸರಳ ಹಾಗೂ ಕೈಗೆಟಕೋ ಬೆಲೆಯಲ್ಲಿ ಸಿಗುವ ಬಟ್ಟೆಗಳಲ್ಲಿ ಧರಿಸಲು ಇಷ್ಟ ಪಡುತ್ತಾರೆ. ಪ್ರಯಾಣವನ್ನು ಹೆಚ್ಚು ಇಷ್ಟಪಡೋ ಅವರು ವರ್ಷಕ್ಕೆ 3-4 ಬಾರಿ ಪ್ರವಾಸ ಹೋಗುತ್ತಾರೆ. ಐಷಾರಾಮಿ ವಸತಿಗೆ ಹಣ ವ್ಯಯಿಸುವ ಬದಲು ಕಡಿಮೆ ವೆಚ್ಚದ ಆಯ್ಕೆಗಳನ್ನು ಮಾಡುತ್ತಾರೆ.

    5 ಮಿಲಿಯನ್ ಡಾಲರ್‌ನೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯೋ ಗುರಿಯನ್ನು ತಲುಪಲು ನ್ಗುನ್ಲಿ ತಮ್ಮ ನಿವೃತ್ತಿ ಖಾತೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲು ಯೋಜಿಸಿದ್ದಾರೆ. ಪ್ರತಿ 2 ವರ್ಷಗಳಿಗೊಮ್ಮೆ ಹೊಸ ಆಸ್ತಿಯನ್ನು ಖರೀದಿ ಮಾಡುವ ಮೂಲಕ ತಮ್ಮ ರಿಯಲ್ ಎಸ್ಟೇಟ್ ಪೋರ್ಟ್ಫೋಲಿಯೋಗೆ ಸೇರಿಸುತ್ತಾರೆ. ನಾನು 67ನೇ ವಯಸ್ಸಿನಲ್ಲಿ ಪರ್ವತ ಏರಲು ಬಯಸಲ್ಲ. ಬದಲಿಗೆ ಎಲ್ಲಿಯವರೆಗೆ ಯುವಕನಾಗಿ, ಆರೋಗ್ಯವಾಗಿರುತ್ತೇನೋ ಅಲ್ಲಿಯವರೆಗೆ ಪ್ರಯಾಣವನ್ನು ಮಾಡಿ ಅನುಭವ ಪಡೆಯುತ್ತೇನೆ ಎಂದು ನ್ಗುನ್ಲಿ ಹೇಳುತ್ತಾರೆ. ಇದನ್ನೂ ಓದಿ: ದೇಶದಲ್ಲಿ ಲ್ಯಾಪ್‌ಟಾಪ್‌ ತಯಾರಿಸಲು 32 ಕಂಪನಿಗಳಿಂದ ಅರ್ಜಿ – 75 ಸಾವಿರ ಉದ್ಯೋಗ ಸೃಷ್ಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 8 ವರ್ಷದ ಮಗ, ಪತ್ನಿಯನ್ನು ಹತ್ಯೆಗೈದು, ತಾನು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    8 ವರ್ಷದ ಮಗ, ಪತ್ನಿಯನ್ನು ಹತ್ಯೆಗೈದು, ತಾನು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಮುಂಬೈ: ಸಾಫ್ಟ್‌ವೇರ್ ಇಂಜಿನಿಯರ್ (Software Engineer) ವ್ಯಕ್ತಿಯೊಬ್ಬ ಪತ್ನಿ ಹಾಗೂ 8 ವರ್ಷದ ಮಗನನ್ನು ಹತ್ಯೆಗೈದು, ತಾನು ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯ (Pune) ಔಂದ್ ಪ್ರದೇಶದಲ್ಲಿ ನಡೆದಿದೆ.

    ಮೃತರನ್ನು ಸಂದೀಪ್ತೋ ಗಂಗೂಲಿ (44), ಪ್ರಿಯಾಂಕಾ (40) ಹಾಗೂ ತನಿಷ್ಕಾ (8) ಎಂದು ಗುರುತಿಸಲಾಗಿದೆ. ಸಂದೀಪ್ತೋ ಹಾಗೂ ಪ್ರಿಯಾಂಕ್‍ನಿಗೆ ಎಷ್ಟೇ ಕರೆ ಮಾಡಿದರೂ ಸ್ವೀಕರಿಸಿದಿದ್ದನ್ನು ಗಮನಿಸಿದ ಬೆಂಗಳೂರಿನಲ್ಲಿ (Bengaluru) ವಾಸಿಸುತ್ತಿದ್ದ ಆತನ ಸಹೋದರ ಆತನ ಸ್ನೇಹಿತರಿಗೆ ತಿಳಿಸಿದ್ದಾನೆ. ಸ್ನೇಹಿತರು ಸಂದೀಪ್ತೋ ಮನೆಗೆ ಭೇಟಿ ನೀಡಿದ್ದಾಗ ಫ್ಲ್ಯಾಟ್‍ಗೆ ಬೀಗ ಹಾಕಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಂದೀಪ್ತೋ ಸಹೋದರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಂದೀಪ್ತೋ ಹಾಗೂ ಆತನ ಕುಟುಂಬಸ್ಥರು ನಾಪತ್ತೆ ಆಗಿದ್ದಾರೆ ಎಂದು ದೂರು ದಾಖಲಿಸಿದ್ದಾನೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಯ ಮೊಬೈಲ್ ಫೋನ್‍ಗಳನ್ನು ಟ್ರ್ಯಾಕ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಮೊಬೈಲ್ ಫ್ಲ್ಯಾಟ್‍ನಲ್ಲಿ ಇರುವುದು ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ನಕಲಿ ಕೀ ಬಳಸಿ ಫ್ಲ್ಯಾಟ್‍ನೊಳಗೆ ಹೋಗಿದ್ದಾರೆ. ಈ ವೇಳೆ ಸುದೀಪ್ನೋ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತ್ನಿ ಹಾಗೂ ಮಗುವಿನ ಮುಖಕ್ಕೆ ಪಾಲಿಥಿನ್‍ನನ್ನು ಸುತ್ತಿ ಹತ್ಯೆ ಮಾಡಿರುವುದು ಕಂಡುಬಂದಿದೆ. ಇದನ್ನೂ ಓದಿ: ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು – ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ

    ಇನ್ನೂ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್‍ಗಳು ಪತ್ತೆಯಾಗಿಲ್ಲ. ಅಷ್ಟೇ ಅಲ್ಲದೇ ಸುದೀಪ್ತೋ ತನ್ನ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸಾಫ್ಟ್‌ವೇರ್ ಕಂಪನಿಯ ಉದ್ಯೋಗವನ್ನು ತೊರೆದಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆತ್ತಲೆಯಾಗಿ ಓಡಾಡುತ್ತಿದ್ದ ವಿದೇಶಿ ಪ್ರಜೆ ಪೊಲೀಸರ ವಶಕ್ಕೆ

  • 2 ಮದುವೆಯಾದ ಟೆಕ್ಕಿ – ವಾರದಲ್ಲಿ 3 ದಿನ ಮೊದಲ ಪತ್ನಿಗೆ, 3 ದಿನ ಇನ್ನೊಬ್ಬಳಿಗೆ, ಸಂಡೇ ಫ್ರೀ

    2 ಮದುವೆಯಾದ ಟೆಕ್ಕಿ – ವಾರದಲ್ಲಿ 3 ದಿನ ಮೊದಲ ಪತ್ನಿಗೆ, 3 ದಿನ ಇನ್ನೊಬ್ಬಳಿಗೆ, ಸಂಡೇ ಫ್ರೀ

    ಭೋಪಾಲ್: ಸಾಫ್ಟ್‌ವೇರ್ ಇಂಜಿನಿಯರೊಬ್ಬ (Software Engineer) ಇಬ್ಬರನ್ನು ಮದುವೆಯಾಗಿದ್ದು, ಅವರಿಬ್ಬರೊಂದಿಗಿರಲು ಸಮಯವನ್ನು ನಿಗದಿ ಮಾಡಿ ಸುದ್ದಿಯಾಗಿದ್ದಾನೆ.

    ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರೊಬ್ಬ 2 ಮದುವೆಯಾಗಿದ್ದ. ಆದರೆ ಇನ್ನೊಂದು ಮದುವೆ ಆಗಿರುವುದು ಮೊದಲ ಪತ್ನಿಗೆ ತಿಳಿದಿರಲಿಲ್ಲ. ತಿಳಿದ ನಂತರ ಕೋರ್ಟ್‍ಗೆ ಹೋಗಿದ್ದಾಳೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ಲ್ಯಾನ್‍ವೊಂದನ್ನು ಹುಡುಕಿದ್ದಾನೆ.

    ಈ ಪ್ಲ್ಯಾನ್‍ನಂತೆ ತನ್ನ ಇಬ್ಬರು ಪತ್ನಿಯರನ್ನು ಒಟ್ಟಿಗೆ ಕೂರಿಸಿ ನಿರ್ಧಾರಕ್ಕೆ ಬಂದಿದ್ದಾನೆ. ಇದರ ಪ್ರಕಾರ ವಾರದಲ್ಲಿ 3 ದಿನ ಮೊದಲ ಪತ್ನಿಗಾದರೆ ಉಳಿದ ಮೂರು ದಿನ ಮತ್ತೋರ್ವ ಪತ್ನಿಯೊಂದಿಗೆ ಇರಲು ಸಮಯವನ್ನು ನಿಗದಿ ಮಾಡಿದ್ದಾನೆ. ಉಳಿದಂತೆ ಇನ್ನೊಂದು ದಿನ ಅಂದರೆ ಭಾನುವಾರ ತನ್ನಿಷ್ಟದಂತೆ ಸಮಯ ಕಳೆಯಲು ನಿರ್ಧರಿಸಿದ್ದು, ಇದಕ್ಕೆ ಆತನ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ.

    ಏನಿದು ಪ್ರಕರಣ?: 2008ರಲ್ಲಿ ವ್ಯಕ್ತಿಯು 26 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ. ಆ ವೇಳೆ ಆತ ಗುರುಗ್ರಾಮನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. 2 ವರ್ಷಗಳ ಕಾಲ ದಂಪತಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಅವರಿಗೆ ಓರ್ವ ಮಗನು ಇದ್ದ. ಆದರೆ 2020ರಲ್ಲಿ ಕೊರೊನಾ ಪ್ರಾರಂಭವಾದಾಗಿನಿಂದ ದಂಪತಿ ವರ್ಕ್ ಫ್ರಂ ಹೋಮ್‍ನಿಂದಾಗಿ ಗ್ವಾಲಿಯರ್‍ಗೆ ಬಂದರು. ಅದಾದ ಕೆಲ ತಿಂಗಳ ನಂತರ ವ್ಯಕ್ತಿಯೊಬ್ಬನೇ ಗುರುಗ್ರಾಮ್‍ಗೆ ಹಿಂದಿರುಗಿದ.

    ಗ್ವಾಲಿಯರ್‌ನಿಂದ ಗುರುಗ್ರಾಮಕ್ಕೆ ಪತ್ನಿಯು ಬರುತ್ತಿರುವುದಾಗಿ ಹೇಳಿದ್ದಾಳೆ. ಆ ವೇಳೆ 2021ರಲ್ಲೇ ಆ ಪತಿಗೆ ಅದೇ ಕಂಪನಿಯ ತನ್ನ ಸಹೋದ್ಯೋಗಿಯೊಂದಿಗೆ ಮದುವೆಯಾಗಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೇ 2ನೇ ಪತ್ನಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನೂ ಓದಿ: ಲೆದರ್ ಬೆಲ್ಟ್‌ನಲ್ಲಿ ಶ್ವಾನಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ- ಭಾರೀ ಆಕ್ರೋಶ

    ಈ ಹಿನ್ನೆಲೆಯಲ್ಲಿ ಮೊದಲ ಪತ್ನಿ ಜೀವನಾಂಶ ಕೋರಿ ಗ್ವಾಲಿಯರ್‍ನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಈ ವೇಳೆ ವಕೀಲರೊಬ್ಬರು ಮೊದಲ ಪತ್ನಿ ವಿರೋಧಿಸಿದರೆ ಶಿಕ್ಷೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಆತ ತನ್ನ ಇಬ್ಬರು ಪತ್ನಿಯರನ್ನು ಸೇರಿಸಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮೂವರು ಸೇರಿ ನ್ಯಾಯಾಲಯಕ್ಕೆ ಹೊಗದಿರಲು ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಒಪ್ಪಂದದ ಪ್ರಕಾರ ವ್ಯಕ್ತಿಯು ವಾರದ ಮೂರು ದಿನಗಳನ್ನು ತನ್ನ ಹೆಂಡತಿಯರಲ್ಲಿ ಒಬ್ಬಳೊಂದಿಗೆ ಮತ್ತು ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಬೇಕು. ಅವರು ಆಯ್ಕೆ ಮಾಡಿದವರ ಜೊತೆ ಭಾನುವಾರ ಕಳೆಯಬಹುದಾಗಿದೆ. ಒಂದು ವೇಳೆ ಈ ಒಪ್ಪಂದವನ್ನು ತಪ್ಪಿದರೆ ಒಪ್ಪಂದವನ್ನು ಉಲ್ಲಂಘಿಸಿದರೆ ಮೊದಲ ಪತ್ನಿ ನ್ಯಾಯಾಲಯಕ್ಕೆ ಹೋಗಬಹುದು ಎಂದು ನಿರ್ಧರಿಸಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನಿ ಅನ್ನೋ ಪದ ಬಳಸಬೇಡಿ: ಸುಮಲತಾ ವಿರುದ್ಧ ರವೀಂದ್ರ ವಾಗ್ದಾಳಿ

  • ಕಾಂಬೋಡಿಯಾದಲ್ಲಿ ಅಕ್ರಮ ವಶದಲ್ಲಿರುವ ತೀರ್ಥಹಳ್ಳಿಯ ಸಾಫ್ಟ್‌ವೇರ್‌ ಇಂಜಿನಿಯರ್; ಬಿಡುಗಡೆಗೆ ಗೃಹ ಸಚಿವ ಶತಪ್ರಯತ್ನ

    ಕಾಂಬೋಡಿಯಾದಲ್ಲಿ ಅಕ್ರಮ ವಶದಲ್ಲಿರುವ ತೀರ್ಥಹಳ್ಳಿಯ ಸಾಫ್ಟ್‌ವೇರ್‌ ಇಂಜಿನಿಯರ್; ಬಿಡುಗಡೆಗೆ ಗೃಹ ಸಚಿವ ಶತಪ್ರಯತ್ನ

    ಬೆಂಗಳೂರು: ಕಾಂಬೋಡಿಯದಲ್ಲಿ (Cambodia) ವಿದೇಶಿ ಅಕ್ರಮ ನೇಮಕಾತಿ ಜಾಲಕ್ಕೆ ಸಿಲುಕಿ ಅಪಾಯದಲ್ಲಿರುವ ತೀರ್ಥಹಳ್ಳಿ ಪಟ್ಟಣದ ಸಾಫ್ಟ್‌ವೇರ್‌ ಇಂಜಿನಿಯರ್ ಕಿರಣ್ ಶೆಟ್ಟಿ ಅವರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ, ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು, ಕೇಂದ್ರದ ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಜತೆ ಸತತ ಪ್ರಯತ್ನ ನಡೆಸಿದ್ದಾರೆ.

    ಥೈಲ್ಯಾಂಡ್ ದೇಶದಲ್ಲಿ ಹೆಚ್ಚಿನ ಸಂಬಳ ದೊರಕಿಸಿಕೊಡುವ ಆಮಿಷ ಒಡ್ಡಿದ ನೇಮಕಾತಿ ಏಜೆನ್ಸಿಯಿಂದ ಮೊಸಹೋಗಿ, ಕಾಂಬೋಡಿಯಾ ದೇಶದಲ್ಲಿ ಖಾಸಗಿ ಸಂಸ್ಥೆಯೊಂದರ ವಶದಲ್ಲಿರುವ ತೀರ್ಥಹಳ್ಳಿ ನಿವಾಸಿಯ ಬಿಡುಗಡೆ ಬಗ್ಗೆ ಸತತ ಪ್ರಯತ್ನ ನಡೆಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಹಾಗೂ ವಿದೇಶಾಂಗ ರಾಜ್ಯ ಸಚಿವ ವಿ.ಮುರಳೀಧರ್ ಅವರ ಕಚೇರಿ ಜತೆ ಸಂಪರ್ಕಿಸಿ, ಬಿಡುಗಡೆ ಕುರಿತು ಮನವಿ ಮಾಡಿದ್ದಾರೆ. ಇದನ್ನೂ ಓದಿ: ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಹಾಕಿದವರು ನನ್ನನ್ನು ಬಿಡ್ತಾರಾ: ರೇವಣ್ಣ ವಿರುದ್ಧ ಎ.ಟಿ.ರಾಮಸ್ವಾಮಿ ವಾಗ್ದಾಳಿ

    ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೂ ಟೆಕ್ಕಿಯ ಸುರಕ್ಷಾ ಹಿಂದುವರಿಕೆ ಬಗ್ಗೆ ಸಚಿವರು ಚರ್ಚಿಸಿದ್ದು, ತಮ್ಮ ಎಲ್ಲಾ ಕೈಲಾದ ಪ್ರಯತ್ನ ಮಾಡಲಾಗುತ್ತಿದೆ. ಪೋಷಕರು ಧೈರ್ಯಗುಂದಬಾರದು ಎಂದು ಸಾಂತ್ವನ ಹೇಳಿದ್ದಾರೆ.

    ಸಾಫ್ಟ್‌ವೇರ್‌ ಇಂಜಿನಿಯರ್ ಕಿರಣ್ ಶೆಟ್ಟಿ ಅವರನ್ನು ದುಷ್ಕರ್ಮಿಗಳಿಂದ ಬಿಡಿಸಿ ಕೊಡುವಂತೆ ಅವರ ಸಹೋದರ ಪವನ್ ಶೆಟ್ಟಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಕಿರಣ್ ಶೆಟ್ಟಿ ಅವರಿಗೆ ನಾಲ್ಕು ತಿಂಗಳ ಮಗು ಹಾಗೂ ಪತ್ನಿಯಿದ್ದು, ತೀರ್ಥಹಳ್ಳಿಯಲ್ಲಿ ಆತಂಕದಿಂದ ಪತಿಯ ಮರಳಿಕೆ ಬಗ್ಗೆ ಚಿಂತಿತರಾಗಿದ್ದಾರೆ. ಇದನ್ನೂ ಓದಿ: ಕಿಡ್ನಿ ಮಾರಿ ದುಡ್ಡು ಕೊಡ್ತೀನಿ.. ನಮ್ಮ ನಾಯಕರಿಗೆ ಟಿಕೆಟ್ ಕೊಡಿ – ಯುವಕನ ಹುಚ್ಚಾಟ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೈಕ್ ರೈಡ್‍ಗೆ ಹೋಗಿದ್ದ ಟೆಕ್ಕಿ ಮೇಲೆ 10 ಮಂದಿಯಿಂದ ಗ್ಯಾಂಗ್ ರೇಪ್

    ಬೈಕ್ ರೈಡ್‍ಗೆ ಹೋಗಿದ್ದ ಟೆಕ್ಕಿ ಮೇಲೆ 10 ಮಂದಿಯಿಂದ ಗ್ಯಾಂಗ್ ರೇಪ್

    ಜಾರ್ಖಂಡ್: 26 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ (Software Engineer) ಮೇಲೆ ಸುಮಾರು 10 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ (Rape) ಘಟನೆ ಜಾರ್ಖಂಡ್‍ನ (Jharkhand) ಪಶ್ಚಿಮ ಸಿಂಗ್‍ಭೂಮ್ ಜಿಲ್ಲೆಯಲ್ಲಿ ನಡೆದಿದೆ.

    ಜಾರ್ಖಂಡ್‍ನಲ್ಲಿರುವ ಮಹಿಳೆ ಮನೆಯಿಂದ ಕೆಲಸ ಮಾಡುತ್ತಿದ್ದಳು. ಈಕೆ ತನ್ನ ಪ್ರಿಯಕರನ ಜೊತೆ ಬೈಕ್ (Bike) ರೈಡ್‍ಗೆ ಹೋಗುವಾಗ ಈ ಘಟನೆ ನಡೆದಿದೆ. ಸುಮಾರು 8 ರಿಂದ 10 ಗುಂಪೊಂದು ಅವರನ್ನು ತಡೆದು, ಗೆಳೆಯನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಮಹಿಳೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದನ್ನೂ ಓದಿ: ಆಮೆ ಕರಿ ಸರಿಯಾಗಿ ಮಾಡಿಲ್ಲವೆಂದು ಪತ್ನಿಯನ್ನೇ ಕೊಂದು ಹಿತ್ತಲಲ್ಲಿ ಹೂತು ಹಾಕಿದ

    ಅದಾದ ಬಳಿಕ ಆಕೆಯನ್ನು ಸ್ಥಳದಲ್ಲೇ ಬಿಟ್ಟು ಆಕೆಯ ಮೊಬೈಲ್ ಹಾಗೂ ಪರ್ಸ್‍ನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಗೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಇದನ್ನೂ ಓದಿ: ಮೋದಿ ತವರೂರಿನಲ್ಲಿ ಮುಂದಿನ 7 ದಿನ ಸಂಚಾರ ನಿಯಮ ಉಲ್ಲಂಘಿಸಿದರೂ ದಂಡ ಹಾಕಲ್ಲ

    Live Tv
    [brid partner=56869869 player=32851 video=960834 autoplay=true]