Tag: Software Company

  • ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಅಗ್ನಿ ಅವಘಡ – ಎದ್ನೋ ಬಿದ್ನೋ ಎಂದು ಹೊರ ಓಡಿದ ಸಿಬ್ಬಂದಿ

    ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಅಗ್ನಿ ಅವಘಡ – ಎದ್ನೋ ಬಿದ್ನೋ ಎಂದು ಹೊರ ಓಡಿದ ಸಿಬ್ಬಂದಿ

    ಬೆಂಗಳೂರು: ಯಲಹಂಕದ (Yalahanka) ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ (Software Company) ಮಂಗಳವಾರ ಸಂಜೆ ಬೆಂಕಿ (Fire) ಅವಘಡ ಸಂಭವಿಸಿದೆ.

    ಸಾಫ್ಟ್‌ವೇರ್ ಕಂಪನಿಯ 8ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ 4 ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿವೆ. ಇದನ್ನೂ ಓದಿ: ಕಾರು, ಟ್ಯಾಂಕರ್ ನಡುವೆ ಭೀಕರ ಅಪಘಾತ – ಪ್ರವಾಸಕ್ಕೆ ತೆರಳುತ್ತಿದ್ದ ಮೂವರು ಮಸಣಕ್ಕೆ

    ಕಟ್ಟದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅದರಲ್ಲಿದ್ದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಸಾಫ್ಟ್‌ವೇರ್ ಕಂಪನಿಯ ಸಿಬ್ಬಂದಿ ವಿಚಾರ ತಿಳಿಯುತ್ತಲೇ ಕಟ್ಟಡದಿಂದ ಎದ್ನೋ ಬಿದ್ನೋ ಎಂಬಂತೆ ಹೊರಗೆ ಓಡಿದ್ದಾರೆ.

    4 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ 162 ಅಡಿ ಎತ್ತರದ ಲ್ಯಾಡರ್‌ನಿಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸದ್ಯ ಘಟನೆಯಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಇದನ್ನೂ ಓದಿ: ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಘಟನೆ – ಮೃತದೇಹವನ್ನು ಹಲವು ಕಿ.ಮೀ ಎಳೆದೊಯ್ದ ಕಾರು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಿನಲ್ಲಿ ಮಳೆ ಹಾವಳಿ: ನಾಳೆ ಸಾಫ್ಟ್‌ವೇರ್ ಕಂಪನಿಗಳ ಜತೆ ಸಭೆ

    ಬೆಂಗಳೂರಿನಲ್ಲಿ ಮಳೆ ಹಾವಳಿ: ನಾಳೆ ಸಾಫ್ಟ್‌ವೇರ್ ಕಂಪನಿಗಳ ಜತೆ ಸಭೆ

    ಬೆಂಗಳೂರು: ಕಂಡು ಕೇಳರಿಯದ ಮಳೆಯಿಂದ ರಾಜಧಾನಿಯಲ್ಲಿ (Bengaluru Rainfall) ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಐಟಿ ಮತ್ತು ಬಿಟಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ (Ashwath Narayan) ಅವರು ನಾಳೆ ಸಂಜೆ 5 ಗಂಟೆಗೆ ನಾನಾ ಸಾಫ್ಟ್‌ವೇರ್ ಕಂಪನಿಗಳ ಮುಖ್ಯಸ್ಥರ/ಪ್ರತಿನಿಧಿಗಳ ಸಭೆ ಕರೆದಿದ್ದಾರೆ.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ಜಲಮಂಡಲಿ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಉದ್ಯಮಿಗಳು ಮಳೆಯಿಂದ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಪಬ್ಲಿಕ್ ಟಿವಿ ಗಣೇಶ- ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

    ಸಭೆಯಲ್ಲಿ ಇನ್ಫೋಸಿಸ್, ವಿಪ್ರೊ, ಎಂಫಸಿಸ್, ನಾಸ್ಕಾಂ, ಗೋಲ್ಡ್ಮನ್ ಸ್ಯಾಕ್ಸ್, ಇಂಟೆಲ್, ಟಿಸಿಎಸ್, ಫಿಲಿಪ್ಸ್, ಸೊನಾಟಾ ಸಾಫ್ಟ್‌ವೇರ್ ಮುಂತಾದ ಕಂಪನಿಗಳ ಮುಖ್ಯಸ್ಥರು ಇಲ್ಲವೇ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

    ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಅಹವಾಲು ಆಲಿಸಲಾಗುವುದು. ಜೊತೆಗೆ ನಗರದ ಸಮಸ್ಯೆಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಪಿಪಿಟಿ ಪ್ರಸ್ತುತ ಪಡಿಸಲಿದ್ದಾರೆ. ಕಂಪನಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಇದನ್ನೂ ಓದಿ: 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    Live Tv
    [brid partner=56869869 player=32851 video=960834 autoplay=true]

  • ವಿಶ್ವದ ದಿ ಬೆಸ್ಟ್ ಮಮ್ಮಿ ಪ್ರಶಸ್ತಿ ಪಡೆಯಲಿದ್ದಾರೆ ಟೆಕ್ಕಿ

    ವಿಶ್ವದ ದಿ ಬೆಸ್ಟ್ ಮಮ್ಮಿ ಪ್ರಶಸ್ತಿ ಪಡೆಯಲಿದ್ದಾರೆ ಟೆಕ್ಕಿ

    – ಡೌನ್ ಸಿಂಡ್ರೋಮ್ ಮಗುವನ್ನು ದತ್ತು ಪಡೆದು ಆರೈಕೆ
    – ಮಗುವಿನ ಪಾಲನೆಗಾಗಿ ಸಾಫ್ಟ್‌ವೇರ್ ಕೆಲಸ ತೊರೆದ್ರು

    ಮುಂಬೈ: ಮಹಾರಾಷ್ಟ್ರದ ಪುಣೆ ಮೂಲದ ಟೆಕ್ಕಿಯೊಬ್ಬರು ‘ವಿಶ್ವದ ಅತ್ಯುತ್ತಮ ಮಮ್ಮಿ’ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ.

    ಟೆಕ್ಕಿ ಆದಿತ್ಯ ತಿವಾರಿ 2016ರಲ್ಲಿ ಡೌನ್ ಸಿಂಡ್ರೋಮ್‍ನಿಂದ ಬಳಲುತ್ತಿರುವ ಮಗುವನ್ನು ದತ್ತು ಪಡೆದುಕೊಂಡಿದ್ದರು. ಮಗು ದತ್ತು ಪಡೆಯಲು ಆದಿತ್ಯ ದೀರ್ಘ ಕಾಲ ಕಾನೂನಿನ ಹೋರಾಟ ಕೂಡ ಮಾಡಿ ಗೆಲುವು ಸಾಧಿಸಿದ್ದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂದರೆ ಮಾರ್ಚ್ 8ರಂದು ದೇಶಾದ್ಯಂತ ಅನೇಕ ಮಹಿಳೆಯರೊಂದಿಗೆ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಆದಿತ್ಯ ಅವರಿಗೆ ವಿಶ್ವದ ಅತ್ಯುತ್ತಮ ಮಮ್ಮಿ ಎಂಬ ಬಿರುದನ್ನು ನೀಡಲಾಗುತ್ತದೆ.

    ಅರೆ ತಾಯಿಗೆ ಪ್ರಶಸ್ತಿ ನೀಡುವುದು ಸಹಜ. ಆದರೆ ತಂದೆಗೆ ‘ಬೆಸ್ಟ್ ಮಮ್ಮಿ’ ಪ್ರಶಸ್ತಿ ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ತಾಯಿಯ ಕರ್ತವ್ಯವನ್ನು ನಿಭಾಯಿಸುವ ಪ್ರತಿಯೊಬ್ಬ ಪುರುಷನೂ ತಾಯಿಯಂದೇ ಪರಿಗಣಿಸಲಾಗುತ್ತದೆ. ಈ ಕಾರಣಕ್ಕೆ ಆದಿತ್ಯ ತಿವಾರಿ ಅವರು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯ, ವಿಶ್ವದ ಅತ್ಯುತ್ತಮ ಮಮ್ಮಿಗಳಲ್ಲಿ ಒಬ್ಬನಾಗಿ ಆಯ್ಕೆಯಾಗಿದ್ದಕ್ಕೆ ಸಂತೋಷವಾಗಿದೆ. ವಿಶೇಷ ಮಗುವನ್ನು ನೋಡಿಕೊಂಡ ನನ್ನ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನಾನು ಸಿಂಗಲ್ ಪೇರೆಂಟ್ ಆಗಿ ಮಗುವನ್ನು ದತ್ತು ಪಡೆದಿದ್ದೇನೆ. 22 ತಿಂಗಳ ಮಗು ಅವನೀಶ್‍ನನ್ನು ದತ್ತು ಪಡೆಯಲು ನಾನು ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಕೂಡ ಬಿಟ್ಟೆ. ಇದೀಗ ಭಾರತದಲ್ಲಿ ವಿಶೇಷ ಮಕ್ಕಳ ಪೋಷಕರಿಗೆ ಕೌನ್ಸಲಿಂಗ್ ನೀಡುತ್ತೇನೆ ಹಾಗೂ ಅವರಿಗೆ ಪ್ರೋತ್ಸಾಹ ಮಾಡುತ್ತೇನೆ ಎಂದರು.

    ಆದಿತ್ಯ 2016 ಅವನೀಶ್ ದತ್ತು ಪಡೆದುಕೊಂಡಿದ್ದು, ಮಗು ಡೌನ್ ಸಿಂಡ್ರೋಮ್‍ನಿಂದ ಬಳಲುತ್ತಿದೆ. ಸುಮಾರು ಒಂದೂವರೆ ವರ್ಷಗಳ ಕಾಲ ಆದಿತ್ಯ ಕಾನೂನಿನ ಹೋರಾಟ ನಡೆಸಿ ಗೆದ್ದಿದ್ದಾರೆ. ಆದಿತ್ಯ ಅವರ ಈ ನಿರ್ಧಾರವನ್ನು ಅವರ ಕುಟುಂಬಸ್ಥರು ವಿರೋಧಿಸಿದ್ದರು. ಆದರೆ ಇದು ಯಾವುದನ್ನು ಲೆಕ್ಕಿಸದೇ ಆದಿತ್ಯ ಮಗುವನ್ನು ದತ್ತು ಪಡೆದಿದ್ದರು. ಮಗುವಿನ ತಾಯಿ ಆಶ್ರಮದ ಮುಂದೆ ಬಿಟ್ಟು ಹೋಗಿದ್ದಳು. ಆದರೆ ಆದಿತ್ಯ ಮಗುವನ್ನು ತಾಯಿಯಂತೆ ನೋಡಿಕೊಂಡಿದ್ದಾರೆ.

    ನಾನು ಹಾಗೂ ಅವನೀಶ್ 22 ರಾಜ್ಯಗಳಲ್ಲಿ ವಾಸವಿದ್ದು, 400 ಸ್ಥಳಗಳಲ್ಲಿ ಮೀಟಿಂಗ್ಸ್, ವರ್ಕ್‍ಶಾಪ್, ಟಾಕ್ಸ್ ಹಾಗೂ ಕಾನ್ಫರೆನ್ಸ್ ಮಾಡಿದ್ದೇನೆ. ಭಾರತದಾದ್ಯಂತ 10,000 ಪೋಷಕರ ಜೊತೆ ನಾವು ಸೇರಿದ್ದೇವೆ. ಈ ಸಂದರ್ಭದಲ್ಲಿ ವಿಶೇಷ ಮಕ್ಕಳನ್ನು ನಿಭಾಯಿಸುವ ಬಗ್ಗೆ ಮಾತನಾಡಬೇಕಾದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿಶ್ವಸಂಸ್ಥೆಯಿಂದ ನಮ್ಮನ್ನು ಕರೆಯಲಾಯಿತು ಎಂದು ತಿಳಿಸಿದ್ದಾರೆ.

  • ಧೂಮಪಾನ ಮಾಡದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದ ಐಟಿ ಕಂಪನಿ

    ಧೂಮಪಾನ ಮಾಡದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದ ಐಟಿ ಕಂಪನಿ

    ಟೋಕಿಯೋ: ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ಪ್ರತಿ ಸಿಗರೇಟು ಪ್ಯಾಕ್ ಮೇಲೂ ಬರೆದಿರುತ್ತೆ. ಆದರೂ ಜನರು ಅದನ್ನು ಸೇದುವುದನ್ನು ಬಿಡಲ್ಲ. ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಕೆಲಸಕ್ಕೂ ಧೂಮಪಾನ ಹಾನಿಕರ ಎಂದು ಸಾಫ್ಟ್‌ವೇರ್ ಕಂಪನಿಯೊಂದು ಸಿಗರೇಟ್ ಸೇದದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದೆ.

    ಹೌದು ಜಪಾನ್ ಮೂಲದ ಸಾಫ್ಟ್‌ವೇರ್ ಕಂಪನಿ ಹೊಸ ಉಪಾಯ ಮಾಡಿದೆ. ಧೂಮಪಾನ ಮಾಡದ ಸಿಬ್ಬಂದಿಗೆ ವೇತನ ಸಹಿತ 6 ರಜೆಗಳನ್ನು ಹೆಚ್ಚು ತೆಗೆದುಕೊಳ್ಳುವ ಭರ್ಜರಿ ಆಫರ್ ನೀಡಿದೆ. ಧೂಮಪಾನ ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಕೆಲಸಕ್ಕೂ ಹಾನಿಕಾರಕವಾಗಿದೆ. ಅದಕ್ಕೆ ಈ ನಿರ್ಧಾರ ಮಾಡಿದ್ದೇವೆ ಎಂದು ಕಂಪನಿ ತಿಳಿಸಿದೆ.

    ಕಂಪನಿಯ ಓರ್ವ ಸಿಬ್ಬಂದಿ 1 ಸಿಗರೇಟು ಸೇದಿ ರೆಸ್ಟ್ ಮಾಡಿ ಬರಲು ಕನಿಷ್ಠ ಹದಿನೈದು ನಿಮಿಷ ತೆಗೆದುಕೊಳ್ಳುತ್ತಾರೆ. ಹೀಗೆ ಕಂಪನಿಯಲ್ಲಿ ಸುಮಾರು 42 ಮಂದಿ ಇದ್ದಾರೆ. ಎಲ್ಲರೂ 15 ನಿಮಿಷ ಸಮಯ ತೆಗೆದುಕೊಂಡರೆ ಕೆಲಸಕ್ಕೆ ಅಡ್ಡಿಯಾಗುತ್ತದೆ. ಸಮಯ ಹಾಳಾಗುತ್ತದೆ. ಇದರಿಂದ ಕೆಲಸದ ವಾತಾವರಣದ ಮೇಲೂ ಪರಿಣಾಮ ಬೀರುತ್ತದೆ ಎಂದು ಮನಗಂಡ ಕಂಪನಿ ವೇತನ ಸಹಿತ ರಜೆ ಉಪಾಯವನ್ನು ಪ್ರಯೋಗಿಸಿದೆ.

    ಈ ಬಗ್ಗೆ ಕಂಪನಿ ಸಿಇಒ ಮಾತನಾಡಿ, ಈ ಉಪಾಯವು ಸಿಬ್ಬಂದಿ ಧೂಮಪಾನ ಬಿಡುವುದಕ್ಕೆ ಸಹಾಯ ಮಾಡುತ್ತದೆ. ಅವರನ್ನು ಧೂಪಪಾನ ಬಿಟ್ಟು ಆರೋಗ್ಯವಾಗಿರಲು ಪ್ರೋತ್ಸಾಹಿಸುತ್ತದೆ. ಅಲ್ಲದೆ ಈಗಾಗಲೇ 42ರಲ್ಲಿ 4 ಮಂದಿ ಸಿಗರೇಟ್ ಸೇದುವುದನ್ನು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

  • 7ನೇ ತರಗತಿಯಲ್ಲಿ ಟೆಕ್ಕಿ – 12ರ ಪೋರ ಈಗ ಡೇಟಾ ವಿಜ್ಞಾನಿ

    7ನೇ ತರಗತಿಯಲ್ಲಿ ಟೆಕ್ಕಿ – 12ರ ಪೋರ ಈಗ ಡೇಟಾ ವಿಜ್ಞಾನಿ

    ಹೈದರಾಬಾದ್: ಏಳನೇ ತರಗತಿಯಲ್ಲಿ ಓದುತ್ತಿರುವ ಹೈದರಾಬಾದ್ ಬಾಲಕನೋರ್ವ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಡೇಟಾ ಸೈಂಟಿಸ್ಟ್ ಆಗಿ ನೇಮಕಗೊಂಡು ಹೊಸ ದಾಖಲೆ ಬರೆದಿದ್ದಾನೆ.

    ಹೈದರಾಬಾದಿನ ಶ್ರೀ ಚೈತನ್ಯ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿರುವ ಸಿದ್ಧಾರ್ಥ್ ಶ್ರೀವಾಸ್ತವ್ ಪಿಲ್ಲಿ (12) ಮಾಂಟೈಗ್ನೆ ಸ್ಮಾರ್ಟ್ ಬಿಸಿನೆಸ್ ಸೊಲ್ಯೂಷನ್ಸ್ ಎಂಬ ಸಾಫ್ಟ್ ವೇರ್ ಕಂಪನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿ ನೇಮಕವಾಗಿದ್ದಾನೆ.

    ಈ ಚಿಕ್ಕ ವಯಸ್ಸಿನಲ್ಲೇ ಈ ಸಾಧನೆ ಮಾಡಿರುವ ಸಿದ್ಧಾರ್ಥ್ ಶ್ರೀವಾಸ್ತವ್ ಪಿಲ್ಲಿ, ನನಗೆ 12 ವರ್ಷ ಮತ್ತು ನಾನು ಮಾಂಟೈಗ್ನೆ ಸ್ಮಾರ್ಟ್ ಬಿಸಿನೆಸ್ ಸೊಲ್ಯೂಷನ್ಸ್ ಎಂಬ ಸಾಫ್ಟ್ ವೇರ್ ಕಂಪನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತೇನೆ. ನಾನು 7ನೇ ತರಗತಿಯಲ್ಲಿ ಶ್ರೀ-ಚೈತನ್ಯ ಟೆಕ್ನೋ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ನನಗೆ ಸಾಫ್ಟ್ ವೇರ್ ಕಂಪನಿಗೆ ಸೇರಲು ಸ್ಫೂರ್ತಿ ಎಂದರೆ ಅದು ತನ್ಮಯ್ ಬಕ್ಷಿ, ಅವರು ಕೂಡ ಚಿಕ್ಕ ವಯಸ್ಸಿನಲ್ಲೇ ಗೂಗಲ್ ಕಂಪನಿಗೆ ಕೆಲಸಕ್ಕೆ ಸೇರಿದ್ದರು ಎಂದು ಹೇಳಿದ್ದಾನೆ.

    ನನಗೆ ಚಿಕ್ಕ ವಯಸ್ಸಿನಿಂದಲೂ ಈ ಕೆಲಸ ಪಡೆಯಲು ನನ್ನ ತಂದೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಾನು ಚಿಕ್ಕವನಾಗಿದ್ದಾಗ ನಮ್ಮ ತಂದೆ ನನಗೆ ಕೋಡಿಂಗ್ ಮಾಡಲು ಹೇಳಿಕೊಡುತ್ತಿದ್ದರು. ಅವರು ನನಗೆ ವಿಭಿನ್ನ ಜೀವನಚರಿತ್ರೆಗಳನ್ನು ತೋರಿಸಿ ಕೋಡಿಂಗ್ ಮಾಡುವುದನ್ನು ಹೇಳಿಕೊಡುತ್ತಿದ್ದರು. ಇವತ್ತು ನಾನು ಏನಾದೂ ಮಾಡಿದ್ದರೆ ಅದಕ್ಕೆ ನನ್ನ ತಂದೆಯೇ ಕಾರಣ. ಅವರಿಗೆ ಧನ್ಯವಾದಗಳು ಎಂದು ಸಿದ್ಧಾರ್ಥ್ ಹೇಳಿದ್ದಾನೆ.