Tag: Soft Drinks

  • ವಿಡಿಯೋ: ಚಿಕನ್ ಜೊತೆ ಕೂಲ್ ಡ್ರಿಂಕ್ಸ್ ನೀಡದ್ದಕ್ಕೆ ರೊಚ್ಚಿಗೆದ್ದ ಯುವತಿ!

    ವಿಡಿಯೋ: ಚಿಕನ್ ಜೊತೆ ಕೂಲ್ ಡ್ರಿಂಕ್ಸ್ ನೀಡದ್ದಕ್ಕೆ ರೊಚ್ಚಿಗೆದ್ದ ಯುವತಿ!

    ವಾಷಿಂಗ್ಟನ್: ಯುವತಿಯೊಬ್ಬಳು ಚಿಕನ್ ಜೊತೆ ಉಚಿತ ಕೂಲ್ ಡ್ರಿಂಕ್ಸ್ ನೀಡಿಲ್ಲ ಎಂದು ರೊಚ್ಚಿಗೆದ್ದು ರೆಸ್ಟೋರೆಂಟ್‍ನನ್ನು ವಸ್ತುಗಳನ್ನೆಲ್ಲಾ ಎಸೆದು, ಕಿಟಕಿಯ ಗಾಜನ್ನು ಹೊಡೆದ ಘಟನೆ ಭಾನುವಾರ ಅಮೆರಿಕದ ನ್ಯೂಯಾರ್ಕ್‍ನಲ್ಲಿ ನಡೆದಿದೆ.

    ಯುವತಿ 4 ಡಾಲರ್(266 ರೂ) ಗೆ ಚಿಕನ್ ಖರೀದಿಸಿದ್ದಳು. ಆದರೆ ಅದಕ್ಕೆ ಕೂಲ್ ಡ್ರಿಂಕ್ಸ್ ನೀಡಲಿಲ್ಲ ಎಂದು ರೆಸ್ಟೋರೆಂಟ್ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದಿದ್ದಾಳೆ. ಈ ವಿಡಿಯೋ ರೆಸ್ಟೋರೆಂಟ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮಾಧ್ಯಮಗಳ ಪ್ರಕಾರ ಯುವತಿ ಚಿಕನ್ ಆರ್ಡರ್ ಮಾಡಿದ್ದಳು. ಚಿಕನ್ ಜೊತೆ ಕೂಲ್ ಡ್ರಿಂಕ್ಸ್ ಉಚಿತ ಎಂದುಕೊಂಡು ಅದನ್ನು ನಿರೀಕ್ಷಿಸುತ್ತಿದ್ದಳು. ನಂತರ ಆಕೆ ವೇಟರ್ ತಂದುಕೊಟ್ಟ ಚಿಕನ್ ತಿಂದಳು ಎಂದು ವರದಿಯಾಗಿದೆ.

    ಚಿಕನ್ ತಿಂದ ನಂತರ ಕೂಲ್ ಡ್ರಿಂಕ್ಸ್ ಬರಲಿಲ್ಲ ಎಂದು ಯುವತಿ ರೊಚ್ಚಿಗೆದ್ದು ರೆಸ್ಟೋರೆಂಟ್‍ನ ಸಿಬ್ಬಂದಿಯ ಹತ್ತಿರ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಅಲ್ಲದೇ ಅಲ್ಲಿದ್ದ ವಸ್ತುಗಳನ್ನು ಎಸೆದು, ಚೇರಿನಿಂದ ರೆಸ್ಟೋರೆಂಟ್‍ನ ಕಿಟಕಿಯ ಗಾಜನ್ನು ಒಡೆದಿದ್ದಾಳೆ.

    ರೆಸ್ಟೋರೆಂಟ್‍ನ ಸಿಬ್ಬಂದಿ ಪ್ರಕಾರ ಯುವತಿ ಕುಡಿದ ನಶೆಯಲ್ಲಿದ್ದಳು. ಹಾಗಾಗಿ ಆಕೆ ಕೂಲ್ ಡ್ರಿಂಕ್ಸ್ ಸಿಗದಿದ್ದಕ್ಕೆ ಈ ರೀತಿ ಮಾಡಿದ್ದಾಳೆ ಎಂದು ಹೇಳಿದ್ದಾರೆ. ಯುವತಿಯ ಈ ವರ್ತನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಪೊಲೀಸರು ಆಕೆಯನ್ನು ಹುಡುಕುತ್ತಿದ್ದಾರೆ.