Tag: SocialMedia

  • ಭವ್ಯ ಮಂದಿರದ ಮುಂದೆ ನಿಂತಾಗ ಕಣ್ಣೀರು ತುಂಬಿ ಬಂತು- ಸಿ.ಟಿ.ರವಿ ದಂಪತಿಯಿಂದ ಬಾಲರಾಮನ ದರ್ಶನ

    ಭವ್ಯ ಮಂದಿರದ ಮುಂದೆ ನಿಂತಾಗ ಕಣ್ಣೀರು ತುಂಬಿ ಬಂತು- ಸಿ.ಟಿ.ರವಿ ದಂಪತಿಯಿಂದ ಬಾಲರಾಮನ ದರ್ಶನ

    ಬೆಂಗಳೂರು: ಮಾಜಿ ಸಚಿವ ಸಿ.ಟಿ.ರವಿ (C.T.Ravi) ದಂಪತಿ ಅಯೋಧ್ಯೆಗೆ ತೆರಳಿ ಬಾಲರಾಮನ (BalaRama) ದರ್ಶನವನ್ನು ಪಡೆದಿದ್ದಾರೆ.

    ಪ್ರಭು ಶ್ರೀರಾಮನ ದರ್ಶನ ಪಡೆದ ರವಿ ಅವರು ಫೋಟೋದೊಂದಿಗೆ ಬಾಲರಾಮನ ದರ್ಶನದ ಅನುಭವವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ  (Social Media) ಪೋಸ್ಟ್ ಮಾಡಿದ್ದಾರೆ. ಭವ್ಯ ಮಂದಿರದ ಮುಂದೆ ನಿಂತುಕೊಂಡವನಿಗೆ ಮೈಯೆಲ್ಲಾ ರೋಮಾಂಚನ, ಜೀವನ ಪಾವನವಾದ ಭಾವ ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ:  ಈಗ ಪರ್ಸಂಟೇಜ್ ಕಡಿಮೆ ಆಗಿದೆ, ಆದ್ರೆ ಎಷ್ಟಾಗಿದೆ ಗೊತ್ತಿಲ್ಲ- ಉಲ್ಟಾ ಹೊಡೆದ ಕೆಂಪಣ್ಣ

    ಅಯೋಧ್ಯಾ ರಾಮ ಜನ್ಮ ಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಹೋರಾಟದ ನೆನಪಾಗಿ ಕಣ್ಣಲ್ಲಿ ನೀರು ತುಂಬಿ ಬಂತು. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿರುವ ಸಂತೋಷಕ್ಕೋ ಅಥವಾ ಮಂದಿರ ನಿರ್ಮಾಣಕ್ಕೆ ತ್ಯಾಗ ಬಲಿದಾನ ಮಾಡಿದ ಲಕ್ಷಾಂತರ ಜನರಿಗಾಗಿ ಮೂಡಿದ ಅಶ್ರುತರ್ಪಣವೋ? ನಾನರಿಯೆ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಏನು ಮನೆ-ಮನೆ ಬೆಡ್‌ರೂಮ್‌ಗೆ ಹೋಗುತ್ತಾ? – ಲಿವ್‌ಇನ್‌ ರಿಲೇಷನ್‌ ನೋಂದಣಿ ಕಡ್ಡಾಯಕ್ಕೆ ಮಹಿಳಾ ಹೋರಾಟಗಾರ್ತಿ ವಿರೋಧ

    ಸರಯೂ ತೀರದಲ್ಲಿ ಗುಲಾಮಗಿರಿಯ ಪ್ರತೀಕವಾಗಿ ನಿಂತಿದ್ದ ವಿವಾದಿತ ಕಟ್ಟಡವನ್ನು ಕೆಡವಲು, ರಾಷ್ಟ್ರ ಪುರುಷ ರಾಮನಿಗೆ ಭವ್ಯ ರಾಷ್ಟ್ರ  ಮಂದಿರವನ್ನು ಕಟ್ಟಲು ನಡೆಸಿದ ಕರಸೇವೆ, ಜೊತೆಗಿದ್ದ ಕರಸೇವಕರು, ಸರಯೂ ನದಿಯಿಂದ ತಂದ ಮರಳಿನ ರಾಶಿ, ಮೈ ಮೇಲಿದ್ದ ಲಾಠಿಯೇಟಿನ ಬಾಸುಂಡೆಗಳು, ಗುಮ್ಮಟ ಪತನ, ತಾತ್ಕಾಲಿಕ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಹೊತ್ತದ್ದು, ಹುತಾತ್ಮ ಕರಸೇವಕರ ದೇಹಗಳು, ನೋವಿನಿಂದ ನರಳುತ್ತಿದ್ದ ಕರಸೇವಕರು, ಕರಸೇವಕರನ್ನು ಮಕ್ಕಳ ಹಾಗೆ ನೋಡಿಕೊಂಡ ದೇಶದ ಮಾತೆಯರು, ಇವರೆಲ್ಲರೂ ನನ್ನ ಸ್ಮೃತಿ ಪಟಲದಲ್ಲಿ ಹಾದು ಹೋದರು. ಇಂದು ಪತ್ನಿಯೊಂದಿಗೆ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಪ್ರಭು ಶ್ರೀರಾಮ ಚಂದ್ರನ ದರ್ಶನ ಮಾಡುವಂತಾಗಿದ್ದು ನನ್ನ ಪಾಲಿನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್‌ ಹಾಕಿಲ್ಲವೆಂದು ತಡೆದಿದ್ದಕ್ಕೆ ಟ್ರಾಫಿಕ್‌ ಪೊಲೀಸ್‌ ಕೈ ಬೆರಳನ್ನೇ ಕಚ್ಚಿದ ಭೂಪ!

  • ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಸ್‌ಗೆ ಸಿಗಲಿದೆ ಪ್ರಶಸ್ತಿ

    ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಸ್‌ಗೆ ಸಿಗಲಿದೆ ಪ್ರಶಸ್ತಿ

    ನವದೆಹಲಿ: ಸಾಮಾಜಿಕ ಜಾಲತಾಣ ವಿಡಿಯೋ ಅಪ್ಲೋಡ್ ಮಾಡುತ್ತಿರುವ ಕಂಟೆಂಟ್ ಕ್ರಿಯೆಟರ್ಸ್‌ಗೆ (Content Creators) ಗುಡ್‌ನ್ಯೂಸ್. ಕೇಂದ್ರ ಸರ್ಕಾರ  ( Central Government) ಈಗ ಕಂಟೆಂಟ್ ಕ್ರಿಯೆಟರ್ಸ್‌ಗೆ ಪ್ರಶಸ್ತಿ ನೀಡಲು ಮುಂದಾಗಿದೆ.

    ಇತ್ತಿಚಿನ ದಿನಗಳಲ್ಲಿ ಎಲ್ಲಿ ನೋಡಿದರು ಸಾಮಾಜಿಕ ಜಾಲತಾಣಗಳದೆ ಹವಾ. ಸಣ್ಣ ಮಕ್ಕಳಿಂದ ಹಿಡಿದು ಎಲ್ಲರು ಸೋಷಿಯಲ್ ಮೀಡಿಯಾದಲ್ಲಿ (Social Media) ತೊಡಗಿಕೊಂಡಿರುತ್ತಾರೆ. ಅದರಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವಿಗಳಿಂದ ಇನ್ನೂ ಹೆಚ್ಚಾಗಿದೆ. ಅಂತಹ ಪ್ರಭಾವಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಪ್ರಧಾನಿ ಮೋದಿಗೆ HDD ಧನ್ಯವಾದ

    ದೇಶದ ವಿವಿಧ ಭಾಷೆ ಮತ್ತು ವರ್ಗಗಳನ್ನು ಗುರುತಿಸುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡುವ ಮಾದರಿಯಲ್ಲಿ ಸುಮಾರು 20 ವಿಭಾಗಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ನೀಡಲು ಮುಂದಾಗಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ- ಯೋಗಿ ಆದಿತ್ಯನಾಥ್‌ಗೆ ಟಿಎಂಸಿ ನಾಯಕ ಎಚ್ಚರಿಕೆ

    ಯೂಟ್ಯೂಬ್, ಇನ್‌ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣದಲ್ಲಿ ತೊಡಗಿಕೊಂಡಿರುವ ಪ್ರಭಾವಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತೆ. 20 ವರ್ಗಗಳಲ್ಲಿ ದೇಶದ ಶಕ್ತಿ ಮತ್ತು ಸಂಸ್ಕೃತಿಯನ್ನು ತೋರಿಸಿದವರಿಗೆ ಒಂದು ಪ್ರಶಸ್ತಿಯನ್ನು ನೀಡಲಾಗುತ್ತೆ. ಜೊತೆಗೆ ಗ್ರೀನ್ ಚಾಂಪಿಯನ್ಸ್, ಸ್ವಚ್ಛತಾ ರಾಯಭಾರಿಗಳು ಮತ್ತು ಟೆಕ್ ಕ್ರಿಯೇಟರ್ಸ್ ಎಂಬ ವಿವಿಧ ವಿಭಾಗದಲ್ಲಿ ಪ್ರಶಸ್ತಿಗಳು ಇರಲಿವೆ. ಇದನ್ನೂ ಓದಿ: ಸಂಸತ್ತಿನಲ್ಲಿ ಇಂದು ರಾಮ ಮಂದಿರ ಗೊತ್ತುವಳಿ: ಬಿಜೆಪಿ ಸಂಸದರಿಗೆ ವಿಪ್‌ ಜಾರಿ

  • ವೃದ್ಧನನ್ನು ಮೋಹದ ಬಲೆಗೆ ಬೀಳಿಸಿ 23 ಲಕ್ಷ ಪಂಗನಾಮ – ಕಿಲಾಡಿ ಆಂಟಿ ಅರೆಸ್ಟ್

    ವೃದ್ಧನನ್ನು ಮೋಹದ ಬಲೆಗೆ ಬೀಳಿಸಿ 23 ಲಕ್ಷ ಪಂಗನಾಮ – ಕಿಲಾಡಿ ಆಂಟಿ ಅರೆಸ್ಟ್

    ತಿರುವನಂತಪುರಂ: 68 ವರ್ಷದ ವೃದ್ಧನನ್ನು ತನ್ನ ಮೋಹದ ಬಲೆಗೆ ಬೀಳಿಸಿ, 23 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಕೇರಳದ (Kerala) ಕಲ್ಪಕಂಚೇರಿಯಲ್ಲಿ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಹನಿಟ್ರ್ಯಾಪ್‌ (HoneyTrap) ಪ್ರಕರಣದ ಅಡಿಯಲ್ಲಿ ವ್ಲಾಗರ್ ರಶೀದಾ (28) ಮತ್ತು ಆಕೆಯ ಪತಿ ನಿಶಾದ್ ಇಬ್ಬರನ್ನೂ ಪೊಲೀಸರು (Police) ಬಂಧಿಸಿದ್ದಾರೆ. ಇಬ್ಬರೂ ಕೂಡ ತ್ರಿಸ್ಸೂರ್‌ನ ಕುನ್ನಮ್‌ಕುಲಮ್ ಮೂಲದವರು. ಇದನ್ನೂ ಓದಿ: ಅಶ್ಲೀಲ ವಿಡಿಯೋ ಹಂಚಿಕೆ: ಬಾಲಿವುಡ್ ನಟಿಯರ ವಿರುದ್ಧ ದೋಷಾರೋಪ ಪಟ್ಟಿ

    ಕಣ್ಣುಕುಕ್ಕುವಂತ ಬಟ್ಟೆ ತೊಟ್ಟು, ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೀಡಿಯೋ ಹರಿಯಬಿಡುತ್ತಿದ್ದ ರಶೀದಾ, ಹನಿಟ್ರ್ಯಾಪ್‌ (HoneyTrap) ಮಾಡಿ 68ರ ವೃದ್ಧನನ್ನು ತನ್ನ ಮೋಹದ ಬಲೆಗೆ ಬೀಳಿಸಿಕೊಂಡಿದ್ದಾಳೆ. ಬಳಿಕ ಆತನಿಂದ 23 ಲಕ್ಷ ಹಣ ಒಡೆದು ವಂಚಿಸಿದ್ದಾರೆ ಎಂದು ಕೇಸ್ ದಾಖಲಾಗಿರುವುದಾಗಿ ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ವಿಚ್ಛೇದಿತ ಉದ್ಯಮಿಗಿಂತ ಮುಂಚೆ ಮಾನುಷಿ ಚಿಲ್ಲರ್ ಮತ್ತೊಬ್ಬ ಹುಡುಗನ ಜೊತೆ ಡೇಟಿಂಗ್

    ಕಿಲಾಡಿ ಆಂಟಿಯ ವೀಡಿಯೋ ಸೀಕ್ರೆಟ್ ಏನು?
    ಕಿಲಾಡಿ ಆಂಟಿ ರಶೀದಾ ಕಲ್ಪಕಂಚೇರಿಯಲ್ಲಿ ಪ್ರಭಾವಿಗಳನ್ನ ತನ್ನ ಮೋಹದ ಬಲೆಗೆ ಬೀಳಿಸಿಕೊಂಡಿದ್ದಳು. ಪ್ರೀತಿಯ ನೆಪ ಮಾಡಿ ಒಮ್ಮೊಮ್ಮೆ ಮನೆಗೆ ಕರೆಸಿ ಹತ್ತಿರವಾಗುತ್ತಿದ್ದಳು. ಆಕೆಯ ವಿಡಿಯೋ ನೋಡಿದವರು ಸುಲಭವಾಗಿ ಆಕೆಯ ಬಲೆಗೆ ಬೀಳುತ್ತಿದ್ದರು. ಹಾಗಾಗಿ ಹನಿಟ್ರ್ಯಾಪ್‌ ಮಾಡಲು ಆಕೆಯ ಪತಿ ನಿಶಾದ್ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳುತ್ತಿದ್ದ. ಈ ನಡುವೆ 68 ವರ್ಷದ ವೃದ್ಧನನ್ನು ಪರಿಚಯಿಸಿಕೊಂಡಿದ್ದ ರಶೀದಾ, ಆಗಾಗ ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದಳು. ಒಂದು ದಿನ ತನ್ನ ಪತಿಗೆ ಬಿಸಿನೆಸ್ ಮಾಡಲು ಹಣ ಬೇಕು ಎಂದು ಕೇಳಿದ್ದಳು. ರಶೀದಾ ಮಾತು ನಂಬಿ ಸಂತ್ರಸ್ತ ಆಕೆಗೆ ಹಣ ನೀಡಿದ್ದ. ಕೆಲವು ದಿನಗಳ ಬಳಿಕ ಹಣ ವಾಪಸ್ ಕೇಳಿದಾಗ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದಳು.

    ಈ ವಿಚಾರ ಸಂತ್ರಸ್ತನ ಮನೆಯವನಿಗೆ ತಿಳಿದು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ರಶೀದಾ ಮತ್ತು ಆಕೆಯ ಗಂಡನನ್ನು ಕಲ್ಪಕಂಚೇರಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇದು ಯಾವ್ ಶಾಟ್ ಗುರು – ಪಂತ್ ಕಾಲೆಳೆದ ನೆಟ್ಟಿಗರು

    ಇದು ಯಾವ್ ಶಾಟ್ ಗುರು – ಪಂತ್ ಕಾಲೆಳೆದ ನೆಟ್ಟಿಗರು

    ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್ ಬಾರಿಸಿದ ಬೌಂಡರಿ ಶಾಟ್ ಒಂದು ಗಮನ ಸೆಳೆಯುತ್ತಿದೆ.

    ಪಂತ್ ಹೊಡಿಬಡಿ ದಾಂಡಿಗ. ಕ್ರೀಸ್‌ಗೆ ಬಂದ ನಂತರ ಅಬ್ಬರ ಬ್ಯಾಟಿಂಗ್ ಮೂಲಕ ರನ್ ಹೆಚ್ಚಿಸುವ ಆಕ್ರಮಣ ಶೈಲಿಯ ಆಟಕ್ಕೆ ಪಂತ್ ಫೇಮಸ್. ವಿಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 61 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್‌ಗೆ ಆಗಮಿಸಿದ ಪಂತ್ ಆರಂಭದಿಂದಲೇ ಅಬ್ಬರದಾಟ ಆರಂಭಿಸಿದರು. ವಿಂಡೀಸ್ ಬೌಲರ್‌ಗಳಿಗೆ ಬೌಂಡರಿಗಳ ರುಚಿ ತೋರಿಸುತ್ತ ಸಾಗಿದ ಪಂತ್, ಮೆಕಾಯ್ ಎಸೆದ ಎಸೆತ ಒಂದಕ್ಕೆ ಎಕ್ಸ್ಟ್ರ ಕವರ್ ಶಾಟ್ ಬೌಂಡರಿ ಪ್ರೇಕ್ಷಕರ ಮನಗೆದ್ದಿತ್ತು. ಪಂತ್ ಒಂದು ಕಾಲೆತ್ತಿ ಒಂಟಿ ಕಾಲಿನಲ್ಲಿ ನಿಂತು ಬೌಂಡರಿ ಬಾರಿಸಿದ ಭಂಗಿ ಕಂಡು ಪ್ರೇಕ್ಷಕರು ಬೆರಗಾದರು. ಇತ್ತ ನೆಟ್ಟಿಗರು ಇದು ಯಾವ್ ಶಾಟ್ ಗುರು, ಬ್ಯಾಟಿಂಗ್‍ನಲ್ಲಿ ಯೋಗ ಮಾಡಿದ ಪಂತ್ ಹೀಗೆ ಬಗೆ ಬಗೆಯ ಕಾಮೆಂಟ್ ಮೂಲಕ ಕಾಲೆಳೆದಿದ್ದಾರೆ. ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ಅಫ್ರಿದಿಯನ್ನು ಹಿಂದಿಕ್ಕಿದ ಹಿಟ್‌ಮ್ಯಾನ್‌ – ಭಾರತಕ್ಕೆ ಸರಣಿ ಜಯ

    https://twitter.com/__memeheist__/status/1556123248256897024

    ಇತ್ತ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್‍ಗಳಿಸಿತು. 192 ರನ್‍ಗಳ ಗುರಿಯನ್ನು ಪಡೆದ ವಿಂಡೀಸ್ 19.1 ಓವರ್‌ಗಳಲ್ಲಿ 132 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ವಿಂಡೀಸ್ ವಿರುದ್ಧ 59 ರನ್‍ಗಳ ಜಯ ಸಾಧಿಸಿ 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಇದನ್ನೂ ಓದಿ: CWG 2022: ಚಿನ್ನಕ್ಕೆ ಮುತ್ತಿಟ್ಟ ರವಿ ಕುಮಾರ್ ದಹಿಯಾ, ವಿನೇಶ್ ಫೋಗಟ್ – ಪೂಜಾ ಗೆಹ್ಲೋಟ್‍ಗೆ ಕಂಚು

    Live Tv
    [brid partner=56869869 player=32851 video=960834 autoplay=true]

  • 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ಅಪ್ಪ

    6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ಅಪ್ಪ

    ನವದೆಹಲಿ: ಬಹಳಷ್ಟು ಪೋಷಕರು ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಬೇಕು, ರ‍್ಯಾಂಕ್ ಪಡೆದುಕೊಳ್ಳಬೇಕು ಎಂದು ಅನೇಕ ಶಿಸ್ತುಬದ್ಧ ನಿಯಮಗಳನ್ನು ವಿಧಿಸುತ್ತಾರೆ. ಆದರೆ, ಇಲ್ಲೊಬ್ಬರು ತನ್ನ 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಳ್ಳುವ ಮೂಲಕ ತಮ್ಮ ಮಗನಿಗೆ ಶಿಸ್ತು ರೂಢಿಸಲು ಮುಂದಾಗಿದ್ದಾರೆ.

    ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಮ್ಮ 6 ವರ್ಷದ ಮಗನಿಗೆ ವೇಳಾಪಟ್ಟಿ ರಚಿಸಿಕೊಟ್ಟಿದ್ದು, ಇದನ್ನು ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಳಕೆದಾರರು ಅವರು ತಮ್ಮ ಮಗ ಅಬೀರ್ ಅವರೊಂದಿಗೆ ಸಹಿ ಮಾಡಿದ ಕೈಬರಹದ ವೇಳಾಪಟ್ಟಿ ಒಪ್ಪಂದದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

    ಏನಿದು ವೇಳಾಪಟ್ಟಿ ಒಪ್ಪಂದ?- ಈ ಒಪ್ಪಂದವು ಮಗು ದಿನನಿತ್ಯದ ಚಟುವಟಿಕೆಗಳನ್ನು ಒಳಗೊಂಡಿದೆ. ಬೆಳಿಗ್ಗೆ ಎದ್ದು ಶುಚಿಯಾಗುವುದು, ಹಾಲು ಕುಡಿಯುವುದು ಮತ್ತು ಹೋಂ ವರ್ಕ್ ಮಾಡುವುದು, ಅಳದೇ, ಕೂಗಾಡದೇ, ಗೊಣಗದೇ ಅಥವಾ ಜಗಳವಾಡದೆ ತನ್ನ ಕೆಲಸಗಳನ್ನು ಪೂರ್ಣಗೊಳಿಸಬೇಕು. ಹೀಗೆ ಮಾಡಿದರೆ, ತಂದೆ ಮಗನಿಗೆ ಪ್ರತಿದಿನ 10 ರೂ. ನೀಡುವುದಾಗಿ ಪಟ್ಟಿಯಲ್ಲಿ ಬರೆದಿದ್ದಾರೆ. ಅಲ್ಲದೆ, ಮಗು ಒಂದು ವಾರ ಪೂರ್ತಿ ಒಳ್ಳೆಯ ನಡತೆಯೊಂದಿಗೆ ಮುಂದುವರಿದರೆ, ಅವನಿಗೆ ಬೋನಸ್ ಆಗಿ 100 ರೂ. ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ.

    ಇದೀಗ ಜಾಲತಾಣದಲ್ಲಿ ಈ ಒಪ್ಪಂದಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. 32 ಸಾವಿರಕ್ಕೂ ಹೆಚ್ಚು ಮಂದಿ ಇದಕ್ಕೆ ಸ್ಪಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಗುವಿನ ತಂದೆ ನನ್ನ ಮಗು ಸುಮಾರು 2 ಸಾವಿರ ರೂ. ಸಂಪಾದಿಸಿದ್ದಾನೆ. ಶಾಲೆಗಳು ಪ್ರಾರಂಭವಾದ ಬಳಿಕ ವೇಳಾಪಟ್ಟಿ ಬದಲಾಯಿಸಲಾಯಿತು ಎಂದು ಹೇಳಿದ್ದಾರೆ.

  • ಇನ್‌ಸ್ಟಾಗ್ರಾಮ್‌ಗೆ ವೀಡಿಯೋ ಶೂಟ್ ಮಾಡುತ್ತಿದ್ದ ವೇಳೆ ರೈಲು ಹರಿದು ಮೂವರು ಸಾವು

    ಇನ್‌ಸ್ಟಾಗ್ರಾಮ್‌ಗೆ ವೀಡಿಯೋ ಶೂಟ್ ಮಾಡುತ್ತಿದ್ದ ವೇಳೆ ರೈಲು ಹರಿದು ಮೂವರು ಸಾವು

    ಚೆನ್ನೈ: ರೈಲ್ವೆ ಹಳಿಯ ಬಳಿ ವೀಡಿಯೋ ಶೂಟ್ ಮಾಡುತ್ತಿದ್ದ ಮೂವರ ಮೇಲೆ ವೇಗವಾಗಿ ಬರುತ್ತಿದ್ದ ರೈಲು ಹರಿದು, ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

    ಮೃತರನ್ನು ಕೆ.ಮೋಹನ್(17), ಪ್ರಕಾಶ್ (17) ಹಾಗೂ ಎಸ್.ಅಶೋಕ್(24) ಎಂದು ಗುರುತಿಸಲಾಗಿದೆ. ಚೆಂಗಲಪಟ್ಟು ಸಮೀಪದ ರೈಲ್ವೆ ಹಳಿ ಬಳಿ ವೀಡಿಯೋ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಸ್ಥಳೀಯ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸ್ಥಳ ಪರಿಶೀಲನೆ ನಡೆಸಿದ ಚೆಂಗಾಲಪಟ್ಟು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜಾಮೀನು ಮಂಜೂರಾಗಿದ್ದರೂ ಕಾರಾಗೃಹದಲ್ಲಿ ಕೈದಿ ನೇಣಿಗೆ ಶರಣು

    insta

    ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಅವರು, ಈ ಮೂವರು ಸ್ನೇಹಿತರಾಗಿದ್ದು, ಚೆಂಗಲಪಟ್ಟು ಬಳಿಯ ಸಿಂಗಪೆರುಮಾಳ್ ಕೋಯಿಲ್ ಬಳಿಯ ಚೆಟ್ಟಿಪುನಯಂ ಪ್ರದೇಶಕ್ಕೆ ಸೇರಿದವರು. ಪ್ರತಿದಿನವೂ ಈ ಮೂವರು ರೈಲ್ವೇ ನಿಲ್ದಾಣದಲ್ಲಿ ಇಂತಹ ವೀಡಿಯೋಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು ಎಂದಿದ್ದಾರೆ. ಇದನ್ನೂ ಓದಿ: 2 ಕೋಟಿ ದರೋಡೆ ಕೇಸ್ – ಪತ್ನಿ ಸಾಲ ತೀರಿಸಲು ಕನ್ನ ಹಾಕಿದ ಇಬ್ಬರು ಪತ್ನಿಯರ ಮುದ್ದಿನ ಗಂಡ

    ಚೆಂಗಲಪಟ್ಟು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಪಘಾತಕ್ಕೂ ಮುನ್ನ ಮೂವರು ರೈಲ್ವೆ ಹಳಿ ಬಳಿ ನಿಂತು ಶೂಟ್ ಮಾಡಿದ ಕೆಲವು ವೀಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ವರದಿಯಾಗಿದೆ. ಚೆಂಗಲಪಟ್ಟು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು.

  • ಭಾರತೀಯ ವಿದ್ಯಾರ್ಥಿಯ ಗಡಿಪಾರಿಗೆ ಚೀನಿ ನೆಟ್ಟಿಗರ ಆಗ್ರಹ

    ಭಾರತೀಯ ವಿದ್ಯಾರ್ಥಿಯ ಗಡಿಪಾರಿಗೆ ಚೀನಿ ನೆಟ್ಟಿಗರ ಆಗ್ರಹ

    ಬೀಜಿಂಗ್‌: ಚೀನಾದಲ್ಲಿ ಓದುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಚೀನಿಯರನ್ನು ಅವಮಾನ ಮಾಡಿದ್ದಾನೆ ಎಂಬ ಆರೋಪ ಬಂದಿದೆ.

    ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿರುವ ಜಿಯಾಂಗ್ಸು ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿ ವಿಡಿಯೋ ಶೇರಿಂಗ್‍ ಅಪ್ಲಿಕೇಶನ್‍ ಡೌಯಿನ್‍(ಚೀನಾದ ಟಿಕ್‍ಟಾಕ್‍)ನಲ್ಲಿ ಚೀನಾ ಮತ್ತು ಚೀನಿಯರ ಬಗ್ಗೆ ಕೆಟ್ಟದಾಗಿ ಕಮೆಂಟ್‍ ಮಾಡಿದ್ದ.

    ಲಡಾಖ್‌ ಕಿತ್ತಾಟದ ವಿಚಾರ ಚೀನಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದ್ದು ಭಾರತೀಯ ಮೂಲದ ವಿದ್ಯಾರ್ಥಿ ಚೀನಾದವರ ಬಗ್ಗೆ ಹಾಸ್ಯ ಮಾಡಿ ಹಂದಿಗಳು ಮತ್ತು ಕೆಟ್ಟವರು ಎಂದು ಬರೆದಿದ್ದ. ಕಮೆಂಟ್‍ ಚೀನಿಯರಿಗೆ ತಿಳಿಯುತ್ತಿದ್ದಂತೆ ಸ್ಕ್ರೀನ್‍ ಶಾಟ್‍ ತೆಗೆದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

    ಇದು ಚೀನಿಯರ ಗಮನಕ್ಕೆ ಬಂದ ಕೂಡಲೇ ವಿದ್ಯಾರ್ಥಿ ಕಮೆಂಟ್‌ ಡಿಲೀಟ್‌ ಮಾಡಿ ಕ್ಷಮೆ ಕೇಳಿದ್ದಾನೆ. ಅಷ್ಟೇ ಅಲ್ಲದೇ ಇನ್ನು ಮುಂದೆ ನಾನು ಈ ರೀತಿ ಕಮೆಂಟ್‌ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾನೆ.

    ಜಿಯಾಂಗ್ಸು ವಿಶ್ವವಿದ್ಯಾಲಯ ನೀಡುವ ಟಾಪ್‌ 10 ಅತ್ಯುತ್ತಮ ಯುವ ಪ್ರಶಸ್ತಿ ಈ ವಿದ್ಯಾರ್ಥಿಗೆ ಸಿಗಲಿದೆ ಎಂದು ತಿಳಿದು ಚೀನಾ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ನಡೆದಿದೆ. ಈ ವಿದ್ಯಾರ್ಥಿಗೆ ಯಾವುದೇ ಕಾರಣಕ್ಕೂ ಈ ಪ್ರಶಸ್ತಿ ನೀಡಬಾರದು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

    ಈ ಬಗ್ಗೆ ಜಿಯಾಂಗ್ಸು ವಿಶ್ವವಿದ್ಯಾಲಯ ಪ್ರತಿಕ್ರಿಯಿಸಿ, ಈ ಪ್ರಶಸ್ತಿಗೆ ಈ ವಿದ್ಯಾರ್ಥಿ ಆಯ್ಕೆ ಆಗಿಲ್ಲ ಎಂದು ತಿಳಿಸಿದೆ. ಚೀನಾದ ನೆಟ್ಟಿಗರು ಅನಿವಾಸಿ ವಿದ್ಯಾರ್ಥಿ ನಮ್ಮ ದೇಶದ ಕಾನೂನುನ್ನು ಒಪ್ಪಿ ನಡೆಯಬೇಕು. ದೇಶಕ್ಕೆ ಅವಮಾನ ಮಾಡಿದಕ್ಕೆ ಚೀನಾದಿಂದ ಗಡಿಪಾರು ಮಾಡುವಂತೆ ಆಗ್ರಹಿಸುತ್ತಿದ್ದಾರೆ ಎಂದು ಸರ್ಕಾರಿ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ಹೇಳಿದೆ. ಈ ಸಂಬಂಧ ದೂರು ದಾಖಲಾಗಿದೆ, ತನಿಖೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಚೀನಾದಲ್ಲಿ ಸರ್ಕಾರ, ಸರ್ಕಾರದ ವಿರುದ್ಧ ಮಾತನಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೊರೊನಾ ವೈರಸ್‌ ಸಂದರ್ಭದಲ್ಲೂ ಚೀನಾ ಕೆಲವೊಂದು ಪದಗಳ ಬಳಕೆ ಹುಡುಕಾಟಕ್ಕೆ ಇಂಟರ್‌ನೆರ್ಟ್‌ ನಲ್ಲಿ ನಿರ್ಬಂಧ ಹೇರಿತ್ತು. ಫೇಸ್‌ಬುಕ್‌, ಟ್ವಿಟ್ಟರ್‌, ಯೂಟ್ಯೂಬ್‌ ಸೇರಿದಂತೆ ವಿಶ್ವಾದ್ಯಂತ ಬಳಸುವ ಜಾಲತಾಣಗಳು ಚೀನಾದಲ್ಲಿ ಲಭ್ಯವಿಲ್ಲ. ಅವರೇ ಸೆನ್ಸರ್‌ ಮಾಡಬಲ್ಲ ಸಾಮಾಜಿಕ ಜಾಲತಾಣಗಳನ್ನು ಮಾತ್ರ ಬಳಕೆಗೆ ಸರ್ಕಾರ ಅನುಮತಿ ನೀಡಿದೆ.

    ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಇರುವಷ್ಟು ಮಾಧ್ಯಮ ಸ್ವಾತಂತ್ರ್ಯ ಕಮ್ಯೂನಿಸ್ಟ್ ಚೀನಾದಲ್ಲಿ ಇಲ್ಲ. ಈ ಹಿಂದೆ ವುಹಾನ್‌ ಕೊರೊನಾ ವೈರಸ್‌ ಬಗ್ಗೆ ವರದಿ ಮಾಡಿದ್ದಕ್ಕೆ ಎರಡು ತಿಂಗಳ ಕಾಲ ಪತ್ರಕರ್ತರೊಬ್ಬರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು.  ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್ ಪತ್ರಕರ್ತ

    ಡಿಸೆಂಬರ್‌ ಕೊನೆಯಲ್ಲಿ ಚೀನಾದ ವೈದ್ಯ ಲಿ ವೆನ್ಲಿಯಾಂಗ್ ಈ ವೈರಸ್ ರೋಗದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಸಾರ್ಸ್ ರೀತಿಯ ಹೊಸ ರೋಗ ಲಕ್ಷಣ ಹೊಂದಿರುವ 7 ಮಂದಿ ರೋಗಿಗಳನ್ನು ನಾನು ಗುರುತಿಸಿದ್ದೇನೆ. ಹೀಗಾಗಿ ಸುರಕ್ಷಾ ಸಾಧನಗಳನ್ನು ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಈ ಜಾಗೃತಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಜನವರಿ 1 ರಂದು ಡಾ. ಲಿ ವೆನ್ಲಿಯಾಂಗ್ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಖಂಡಿಸಲಾಗಿತ್ತು. ಅಷ್ಟೇ ಅಲ್ಲದೇ ಪೊಲೀಸರು ಅವರಿಗೆ ಟಾರ್ಚರ್‌ ನೀಡಿದ್ದರು. ಫೆ.6 ರಂದು ಕೊರೊನಾ ವೈರಸ್ ಬಗ್ಗೆ ಮೊದಲ ಬಾರಿಗೆ ಎಚ್ಚರಿಕೆ ನೀಡಿದ್ದ ವೈದ್ಯ ಲಿ ವೆನ್ಲಿಯಾಂಗ್ ಮೃತಪಟ್ಟಿದ್ದರು.