Tag: Social Welfare Department

  • ಒಂದೆರಡು ದಿನ ನೋಡಿ ಮೋಡ ಬಿತ್ತನೆಗೆ ಕ್ರಮ: ಪ್ರಿಯಾಂಕ್ ಖರ್ಗೆ

    ಒಂದೆರಡು ದಿನ ನೋಡಿ ಮೋಡ ಬಿತ್ತನೆಗೆ ಕ್ರಮ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದು, ಒಂದೆರಡು ದಿನಗಳ ಕಾಲ ನೋಡಿ ಮೋಡ ಬಿತ್ತನೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದು, ಈ ಬಾರಿ ಶೇ. 65 ರಿಂದ ಶೇ.70 ರಷ್ಟು ಮಳೆ ಕೊರತೆ ಕಂಡುಬಂದಿದೆ. ಅಲ್ಲದೇ ಹವಾಮಾನ ಇಲಾಖೆಯವರು ಮಳೆಯಾಗುತ್ತದೆ ಎನ್ನುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಒಂದುವೇಳೆ ಇದೇ ರೀತಿ ಮುಂದುವರಿದರೆ ಮೋಡ ಬಿತ್ತನೆ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

    ಈ ಕುರಿತು ಕೃಷಿ ಸಚಿವರಾದ ಕೃಷ್ಣ ಭೈರೆಗೌಡರೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸುವ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಸುರಿಯುತ್ತಿರುವ ಮಹಾಮಳೆಗೆ ರಾಜ್ಯದ ಜನತೆ ತತ್ತರಿಸಿ ಹೋಗಿದ್ದು, ರಾಜ್ಯದ ಬಹುತೇಕ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಈ ಬಾರಿ ರಾಜ್ಯದ ಎಲ್ಲಾ ಜಲಾಶಯಗಳು ಅವಧಿಗೂ ಮುನ್ನವೇ ತುಂಬಿವೆ. ಆದರೆ ಪ್ರಕೃತಿಯ ಆಟಕ್ಕೆ ಕಲಬುರಗಿ ಜಿಲ್ಲೆಯ ಜನರು ಕನಿಷ್ಠ ವರ್ಷಧಾರೆಯನ್ನು ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪನಿರ್ದೇಶಕ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ!

    ಉಪನಿರ್ದೇಶಕ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ!

    ಹಾಸನ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶನ ಹುದ್ದೆಗಾಗಿ ಇಬ್ಬರು ಅಧಿಕಾರಿಗಳು ಕಿತ್ತಾಟ ನಡೆಸುತ್ತಿರುವುದರಿಂದಾಗಿ ಸಾರ್ವಜನಿಕರ ಕೆಲಸ-ಕಾರ್ಯಗಳು ಅರ್ಧಕ್ಕೆ ನಿಂತುಕೊಂಡಿವೆ.

    ಹೌದು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ನಡುವೆ ಹುದ್ದೆಗಾಗಿ ಕಿತ್ತಾಟ ಶುರುವಾಗಿದೆ. ಕಳೆದ ಒಂದೂವರೆ ವರ್ಷದಿಂದ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಧರ್ ಎಂಬುವರನ್ನು ಸಿಎಂ ತವರು ಕ್ಷೇತ್ರ ರಾಮನಗರಕ್ಕೆ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಈ ಹಿಂದೆ ಹಾಸನ ಜಿಲ್ಲೆಯಲ್ಲೇ ಇದ್ದ ಪುರುಷೋತ್ತಮ್ ಎಂಬುವರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಹಾಸನದಿಂದ ಹೋಗದೆ ಶ್ರೀಧರ್ ರವರು ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ ಪತ್ನಿ ಭವಾನಿಯವರ ಪ್ರಭಾವದಿಂದ ಇಲ್ಲೇ ಉಳಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಜಿಲ್ಲೆಗೆ ವರ್ಗವಾಗಿ ಬಂದಿರುವ ಪುರುಷೋತ್ತಮ್‍ರವರು ಜಿಲ್ಲಾ ಸಮಾಜ ಕಲ್ಯಾಣ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

    ಮೂಲಗಳ ಪ್ರಕಾರ ಹಾಸನ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಗೆದ್ದಿರುವ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ನ ಗೋಪಾಲಸ್ವಾಮಿಯವರ ಶಿಫಾರಸ್ಸಿನ ಮೇರೆಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಪುರುಷೋತ್ತಮ್ ಅವರನ್ನು ಹಾಸನಕ್ಕೆ ವರ್ಗ ಮಾಡಿದ್ದಾರೆ. ಇದರಿಂದ ಹೆಚ್.ಡಿ.ರೇವಣ್ಣ ಅಸಮಾಧಾನಗೊಂಡಿದ್ದು, ಇದೇ ಕಾರಣದಿಂದಾಗಿ ಭೇಟಿಯಾಗಲು ಬಂದ ಪುರುಷೋತ್ತಮ್ ಅವರೊಂದಿಗೆ ಸಚಿವರು ಸಕಾರಾತ್ಮವಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿದುಬಂದಿದೆ.

    ಅಧಿಕಾರಿಗಳ ಕಚ್ಚಾಟದಿಂದ ಬೇಸತ್ತ ಸಾರ್ವಜನಿಕರು, ಆಯಕಟ್ಟಿನ ಸ್ಥಳದಲ್ಲಿರುವ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಕಚ್ಚಾಡುವುದು ಸರಿಯಲ್ಲ. ಇವರಿಗೆ ಸಮಾಜ ಕಲ್ಯಾಣ ಇಲಾಖೆ ಮೇಲೆ ಕಾಳಜಿ ಇದ್ದರೆ ಇಬ್ಬರು ಬೇರೆ ಕಡೆ ಹೋಗಿ ಕೆಲಸ ಮಾಡಲಿ. ಇವರ ಬದಲಿಗೆ ಬೇರೆಯವರು ಬರಲಿ ಎಂದು ಹೇಳುತ್ತಿದ್ದಾರೆ. ಅಲ್ಲದೇ ಉಭಯ ಪಕ್ಷಗಳ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದಲಿತ ಅಧಿಕಾರಿಗಳನ್ನು ಕಚ್ಚಾಡುವಂತೆ ಮಾಡಿದ್ದಾರೆ. ದಲಿತ ಸಮುದಾಯಗಳ ಒಳ ಪಂಗಡಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ದಲಿತ ಸಂಘಟನೆಯಾದ ಸಮತಾ ಸೈನಿಕ ದಳದ ಮುಖಂಡ ಸತೀಶ್ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪ್ರಧಾನಿ ಮೋದಿ ಬಳಿ ಮಾತನಾಡೋ ತಾಕತ್ ಬಿಜೆಪಿಯವ್ರಿಗೆ ಇಲ್ಲ- ಪ್ರಿಯಾಂಕ್ ಖರ್ಗೆ

    ಪ್ರಧಾನಿ ಮೋದಿ ಬಳಿ ಮಾತನಾಡೋ ತಾಕತ್ ಬಿಜೆಪಿಯವ್ರಿಗೆ ಇಲ್ಲ- ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹೋಗಿ ಮಾತನಾಡುವ ತಾಕತ್ ಬಿಜೆಪಿಯವರಿಗಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ರಾಜ್ಯದಲ್ಲಿ 3 ಸಿಎಂಗಳು ಅನ್ನೋ ಬಿಜೆಪಿ ಟ್ವೀಟ್ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿಯವರಿಗೆ ಈ ಸರ್ಕಾರದ ಬಗ್ಗೆ ಮಾತಾಡೋಕೆ ನೈತಿಕತೆ ಇಲ್ಲ. ಹತಾಶೆಯಿಂದಾಗಿ ಬಿಜೆಪಿಯವರು ಹೀಗೆ ಮಾತಾಡ್ತಿದ್ದಾರೆ. ರಾಜ್ಯಪಾಲರನ್ನ, ಕೇಂದ್ರ ಸರ್ಕಾರವನ್ನ ದುರುಪಯೋಗ ಪಡಿಸಿಕೊಂಡಿದ್ರು. ಅಧಿಕಾರಕ್ಕಾಗಿ ಹಿಂದೆ ಬಾಗಿಲಿನಿಂದ ಬಿಜೆಪಿ ಪ್ರಯತ್ನ ಮಾಡುತ್ತಿದೆ. ಬಿಜೆಪಿಯ ಎಲ್ಲಾ ಆಟಗಳನ್ನ ಜನ ನೋಡಿದ್ದಾರೆ ಅಂತ ಅವರು ತಿಳಿಸಿದ್ರು.

    ಪ್ರಧಾನಿ ಮೋದಿ ಬಳಿ ಮಾತನಾಡೋ ತಾಕತ್ ಬಿಜೆಪಿ ಅವರಿಗಿಲ್ಲ. ಹೀಗಾಗಿ ನಮ್ಮ ಬಗ್ಗೆ ಮಾತಾಡುತ್ತಾರೆ. ಬಿಜೆಪಿಯವರು ನಮ್ಮನ್ನ ಪ್ರಶಂಸೆ ಮಾಡೋದು ಬೇಡ ಅಂತ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಸಹಾಯವಾಣಿ ಆರಂಭ:
    ಸಮಾಜ ಕಲ್ಯಾಣ ಇಲಾಖೆಯ ದೂರುಗಳನ್ನ ಆಲಿಸಲು ಸಹಾಯವಾಣಿ ಆರಂಭ ಮಾಡಿದ್ದೇವೆ. ದೇಶದಲ್ಲೆ ಮೊದಲ ಬಾರಿಗೆ ವಿನೂತನ ಕಾರ್ಯಕ್ರಮ ಮಾಡಿದ್ದೇವೆ. ಪೈಲಟ್ ಪ್ರಾಜೆಕ್ಟ್ ನಲ್ಲಿ ಉತ್ತಮ ಪ್ರತಿಕ್ರಿಯೆ ಬಂತು. ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ವಿಸ್ತರಣೆ ಮಾಡಿದ್ದೇವೆ. ಇಲಾಖೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನ ಸಹಾಯವಾಣಿಯ ಮೂಲಕ ನೀಡಬಹುದು ಅಂತ ಅವರು ವಿವರಿಸಿದ್ರು.

  • ಭಟ್ಕಳದಲ್ಲಿ ಹಾಸ್ಟೆಲ್ ಆಹಾರ ಸೇವಿಸಿ 4 ವಿದ್ಯಾರ್ಥಿನಿಯರು ಅಸ್ವಸ್ಥ- ಓರ್ವಳ ಸ್ಥಿತಿ ಗಂಭೀರ

    ಭಟ್ಕಳದಲ್ಲಿ ಹಾಸ್ಟೆಲ್ ಆಹಾರ ಸೇವಿಸಿ 4 ವಿದ್ಯಾರ್ಥಿನಿಯರು ಅಸ್ವಸ್ಥ- ಓರ್ವಳ ಸ್ಥಿತಿ ಗಂಭೀರ

    ಕಾರವಾರ: ಭಟ್ಕಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಆಹಾರ ಸೇವಿಸಿ 4 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ.

    ವಿದ್ಯಾರ್ಥಿನಿ ವರ್ಷಿಣಿ ನಾಯ್ಕ ತೀವ್ರ ಅಸ್ವಸ್ಥಗೊಂಡಿದ್ದು, ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಳೆದ ಸೋಮವಾರ ವಸತಿ ನಿಲಯದಲ್ಲಿ ದೋಷಪೂರಿತ ಆಹಾರ ಸೇವಿಸಿ 12 ಜನ ಅಸ್ವಸ್ಥರಾಗಿದ್ದರು ಆದರೂ ಕೂಡ ಹಾಸ್ಟೆಲ್ ವಾರ್ಡನ್ ಯಾವುದೇ ಕ್ರಮ ಕೈಗೊಳ್ಳದೇ ಅಸಡ್ಡೆ ತೋರಿದ್ದು ಮತ್ತಷ್ಟು ವಿದ್ಯಾರ್ಥಿನಿಯರು ಅಸ್ವಸ್ಥರಾಗುವಂತೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಎಸ್. ಪುರುಷೋತ್ತಮ್, ಕಳೆದ ಬಾರಿ ವಿದ್ಯಾರ್ಥಿಗಳು ಗ್ಯಾಸ್ಟಿಕ್ ಸಮಸ್ಯೆಯಿಂದ ಅಸ್ಪಸ್ಥರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದೆ. ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಕಂಡು ಬರಲಿಲ್ಲ. ಪ್ರಸ್ತುತ ಘಟನೆಯ ಕುರಿತು ಹಾಸ್ಟೆಲ್ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಅಧಿಕಾರಿಗಳ ನಿರ್ಲಕ್ಷದಿಂದ ಘಟನೆ ನಡೆದಿದ್ದಾರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.