Tag: Social Website

  • ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಹೊಸ ದಾಖಲೆ

    ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಹೊಸ ದಾಖಲೆ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ 10 ಕೋಟಿ ಹಿಂಬಾಲಕರನ್ನು ಹೊಂದುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.

    ವಿವಿಧ ಸಾಮಾಜಿಕ ಜಾಲತಾಣದಲ್ಲಿ 100 ಮಿಲಿಯನ್ (10 ಕೋಟಿ) ಹಿಂಬಾಲಕರನ್ನು ಕೊಹ್ಲಿ ಹೊಂದಿದ್ದಾರೆ. ಫೇಸ್‍ಬುಕ್‍ನಲ್ಲಿ 3.7 ಕೋಟಿ, ಇನ್‍ಸ್ಟಾಗ್ರಾಮ್‍ನಲ್ಲಿ 3.35 ಕೋಟಿ, ಟ್ವಿಟ್ಟಿರಿನಲ್ಲಿ 2.94 ಕೋಟಿ ಮಂದಿ ಕೊಹ್ಲಿರನ್ನ ಹಿಂಬಾಲಿಸುತ್ತಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯ ಕ್ರಿಕೆಟರ್ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    ತೆಂಡೂಲ್ಕರ್ ಅವರಿಗೆ ಇನ್‍ಸ್ಟಾಗ್ರಾಮ್‍ನಲ್ಲಿ 1.47 ಕೋಟಿ, ಫೇಸ್‍ಬುಕ್ ನಲ್ಲಿ 2.8 ಕೋಟಿ, ಟ್ವಿಟ್ಟರ್ ನಲ್ಲಿ 2.91 ಕೋಟಿ ಫಾಲೋವರ್ಸ್‍ಗಳಿದ್ದು, ಒಟ್ಟು 7.4 ಕೋಟಿ ಹಿಂಬಾಲಕರಿದ್ದಾರೆ.

    ಈ ಪಟ್ಟಿಯಲ್ಲಿ ಧೋನಿ 4.1 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ. ಧೋನಿಗೆ ಫೇಸ್‍ಬುಕ್ ನಲ್ಲಿ 1.34 ಕೋಟಿ, ಇನ್‍ಸ್ಟಾಗ್ರಾಮ್ ನಲ್ಲಿ 2.03 ಕೋಟಿ, ಟ್ಟಿಟ್ಟರ್ ನಲ್ಲಿ 74 ಲಕ್ಷ ಹಿಂಬಾಲಕರಿದ್ದಾರೆ.

    ಸದ್ಯ ಕೊಹ್ಲಿ ಎದುರು ವಿಶ್ವಕಪ್ ಗೆಲುವಿನ ಗುರಿ ಇದ್ದು, ಮೇ 22 ರಂದು ಕೊಹ್ಲಿ ಬಳಗ ಇಂಗ್ಲೆಂಡ್ ವಿಶ್ವಕಪ್ ಪ್ರವಾಸವನ್ನು ಆರಂಭಿಸಲಿದೆ.

    https://www.instagram.com/p/BtfaPGRAJ5l/

  • ಮದುವೆ ಮನೆಯಲ್ಲಿ ಐಪಿಎಲ್ ಹವಾ – ಕುಣಿದು ಕುಪ್ಪಳಿಸಿದ ಅತಿಥಿಗಳು

    ಮದುವೆ ಮನೆಯಲ್ಲಿ ಐಪಿಎಲ್ ಹವಾ – ಕುಣಿದು ಕುಪ್ಪಳಿಸಿದ ಅತಿಥಿಗಳು

    ನವದೆಹಲಿ: ಮದುವೆ ಮನೆ ಎಂದರೆ ಅಲ್ಲಿ ವಧು – ವರರೇ ಆಕರ್ಷಣೆಯ ಕೇಂದ್ರ ಬಿಂದು ಆಗಿರುತ್ತಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ಮನೆಯವರು ಮತ್ತು ಅತಿಥಿಗಳು ವಧು ವರರನ್ನು ನೋಡುವುದನ್ನು ಬಿಟ್ಟು ಐಪಿಎಲ್ ಫೈನಲ್ ನೋಡಿ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕಳೆದ ಭಾನುವಾರ ನಡೆದ ಐಪಿಎಲ್ 12 ರ ಅವೃತ್ತಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಮದುವೆ ಮನೆಯಲ್ಲಿ ರಿಸೆಪ್ಷನ್ ನಡೆಯುತ್ತಿರುವಾಗ ದೊಡ್ಡ ಟಿವಿಯಲ್ಲಿ ಪ್ರಸಾರ ಮಾಡಲಾಗಿತ್ತು.

    ಕೊನೆಯ ಓವರಿನಲ್ಲಿ ಪಂದ್ಯ ತಿರುವು ಪಡೆದಕೊಂಡ ಕಾರಣ ಅತಿಥಿಗಳು ಕುತೂಹಲದಿಂದ ಪಂದ್ಯ ವೀಕ್ಷಿಸುತ್ತಿದ್ದರು. ಕೊನೆಯ ಎಸೆತದಲ್ಲಿ ಮುಂಬೈ ತಂಡ ಗೆದ್ದ ಕೂಡಲೇ ಅತಿಥಿಗಳು ಎದ್ದು ನಿಂತು ಗಟ್ಟಿ ಮೇಳದವರು ಬಾರಿಸಿದ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ್ದಾರೆ.

  • ಜೆಡಿಎಸ್ ಅಭ್ಯರ್ಥಿ ಎಲ್‍ಆರ್ ಶಿವರಾಮೇಗೌಡ್ರಿಗೆ ಮುಳುವಾಗ್ತಾ 25 ವರ್ಷದ ಹಿಂದಿನ ಕೇಸ್!

    ಜೆಡಿಎಸ್ ಅಭ್ಯರ್ಥಿ ಎಲ್‍ಆರ್ ಶಿವರಾಮೇಗೌಡ್ರಿಗೆ ಮುಳುವಾಗ್ತಾ 25 ವರ್ಷದ ಹಿಂದಿನ ಕೇಸ್!

    ಮಂಡ್ಯ: ಲೋಕಸಭಾ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ಎಲ್‍ಆರ್ ಶಿವರಾಮೇಗೌಡಗೆ ಮುಳುವಾಗುತ್ತಾ 25 ವರ್ಷ ಹಿಂದಿನ ಕೇಸ್ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗುರಿಯಾಗಿದೆ.

    25 ವರ್ಷಗಳ ಹಿಂದೆ ಕಂಚನಹಳ್ಳಿ ವಕೀಲ ಗಂಗಾಧರ ಮೂರ್ತಿ, ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿರುತ್ತಾರೆ. ಆ ವೇಳೆ ಅವರು ಶಿವರಾಮೇಗೌಡರು ನಡೆಸುತ್ತಿದ್ದ ಎಂದು ಹೇಳಲಾಗುವ ಅಕ್ರಮಗಳ ಬಗೆಗೆ ಸತತವಾಗಿ ಬರೆಯಲಾರಂಭಿಸಿದ್ದರು. ಒಂದು ದಿನ ಅವರ ಕೊಲೆ ನಡೆದು ಹೋಯ್ತು. ಈ ಕೊಲೆ ಹಿಂದೆ ಶಿವರಾಮೇಗೌಡ ಅವರ ಕೈವಾಡ ಇದೆ ಎಂದು ಆರೋಪಿಸಿ ಸುದ್ದಿ ಹರಡಿತ್ತು. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ನಾಗಮಂಗಲದಲ್ಲಿ ಪ್ರಗತಿಪರರಿಂದ ದೊಡ್ಡ ಪ್ರತಿಭಟನೆ ನಡೆದಿತ್ತು.

    ಅಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪತ್ರಕರ್ತನ ಫೋಟೋ ಹಿಡಿದು ಪ್ರತಿಭಟನೆ ಮಾಡಿದ್ದರು. ನಂತರ ಸಭೆಯಲ್ಲೂ ಪಾಲ್ಗೊಂಡು ಶಿವರಾಮೇಗೌಡರ ವಿರುದ್ಧ ಗುಡುಗಿದ್ದರು. ಆದರೆ ಇಂದು ಅವರಿಗೇ ಟಿಕೆಟ್ ನೀಡಲಾಗಿದೆ. ಅಂದು ಶಿವರಾಮೇಗೌಡರನ್ನ ಅವನೊಬ್ಬ ಕೇಡಿ, ಅವನಿಗೆ ಬೇಡಿ ಹಾಕಿ ಎಂದಿದ್ದ ಗೌಡರು ಇಂದು ಟಿಕೆಟ್ ನೀಡಿದ್ದಾರೆ.

    ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ ಮಿತ್ರರೂ ಅಲ್ಲ ಎಂದು ಬರೆದು ಟ್ರೋಲ್ ಮಾಡಿ ಚರ್ಚೆ ಮಾಡಲಾಗ್ತಿದೆ. ಅಂದು ದೇವೇಗೌಡರ ಜೊತೆ ಸಿದ್ದರಾಮಯ್ಯ ಅವರೂ ಇದ್ದರು ಅನ್ನೋದು ವಿಶೇಷ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv