Tag: social media star

  • ಚಿನ್ನ ಕಳ್ಳತನ – ಸೋಷಿಯಲ್ ಮೀಡಿಯಾ ಸ್ಟಾರ್ ಅರೆಸ್ಟ್

    ಚಿನ್ನ ಕಳ್ಳತನ – ಸೋಷಿಯಲ್ ಮೀಡಿಯಾ ಸ್ಟಾರ್ ಅರೆಸ್ಟ್

    ಬೆಂಗಳೂರು: ಗೋಲ್ಡ್ (Gold) ಕಳ್ಳತನ (Theft) ಮಾಡುತ್ತಿದ್ದ ಸೋಷಿಯಲ್ ಮೀಡಿಯಾ (Social Media) ಸ್ಟಾರ್‌ನನ್ನು ಬೆಂಗಳೂರಿನ (Bengaluru) ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಮುಂಬೈ (Mumbai) ಮೂಲದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಸಲೀಂ (ಸಾಹಿಲ್) ಬಂಧಿತ ಆರೋಪಿ. ಈತ ಒಂದು ವರ್ಷದ ಹಿಂದೆ 3.5 ಕೆಜಿಗೂ ಅಧಿಕ ಚಿನ್ನದ ಜೊತೆ ಸಿಕ್ಕಿ ಬಿದ್ದಿದ್ದು, ಬಸವನಗುಡಿ ಪೊಲೀಸರು ಅರೆಸ್ಟ್ (Arrest) ಮಾಡಿದ್ದರು. ಜೈಲಿನಿಂದ ಹೊರಬಂದ ಖದೀಮ ಮತ್ತೆ ಹಳೇ ಚಾಳಿಯನ್ನು ಮುಂದುವರೆಸಿದ್ದ. ಇದನ್ನೂ ಓದಿ: Umpire killed: ʼನೋಬಾಲ್‌ʼ ನೀಡಿದ್ದಕ್ಕೆ ಅಂಪೈರ್‌ನನ್ನೇ ಇರಿದು ಕೊಂದ ಆಟಗಾರ 

    ಇದೀಗ ಮತ್ತೆ ಚಿನ್ನ ಕಳ್ಳತನ ಮಾಡಿ ಸಿಕ್ಕಿಬಿದ್ದ ಈತನನ್ನು ಅಮೃತಹಳ್ಳಿ (Amruthahalli) ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನಿಂದ ಒಂದು ಕೆಜಿಗೂ ಅಧಿಕ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: NIAಯಿಂದ ಸಾಕ್ಷಿ ಕೊರತೆ: ಭಟ್ಕಳ ಮೂಲದ ಉಗ್ರಗಾಮಿ ವಾಯಿದ್‌ಗೆ ಬಿಗ್ ರಿಲೀಫ್‌ ನೀಡಿದ ಕೋರ್ಟ್‌

  • ಕಾಫಿನಾಡು ಚಂದು ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದ್ದಕ್ಕೆ ಫ್ಯಾನ್ಸ್ ಬೇಸರ

    ಕಾಫಿನಾಡು ಚಂದು ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದ್ದಕ್ಕೆ ಫ್ಯಾನ್ಸ್ ಬೇಸರ

    ಸೋಷಿಯಲ್ ಮೀಡಿಯಾದಲ್ಲಿ ಬರ್ತ್‌ಡೇ ವಿಶ್ ಹೇಳುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಕಲಾವಿದ ಕಾಫಿನಾಡು ಚಂದು(Coffenadu Chandu) ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದೆ. ಕಷ್ಟಪಟ್ಟು ಬೆಳೆದ ಹಳ್ಳಿ ಪ್ರತಿಭೆ ಕಾಫಿನಾಡು ಚಂದುಗೆ ಸಂಕಷ್ಟವೊಂದು ಎದುರಾಗಿದೆ. ಅವರ  ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ.

    ನಾನು ಶಿವಣ್ಣ (Shivarajkumar) ಪುನೀತ್ ಅಣ್ಣರ (Puneeth Rajkumar) ಅಭಿಮಾನಿ ಎಂದು ವೀಡಿಯೋ ಶುರು ಮಾಡುತ್ತಿದ್ದ ಚಂದು ಅವರ ಇನ್ಸ್ಟಾಗ್ರಾಂ ಅಕೌಂಟ್ ಕಾಣೆಯಾಗಿದೆ. ಬರ್ತ್‌ಡೇ ವಿಶ್ ಮಾಡುವ ಮೂಲಕ 4 ಲಕ್ಷಕ್ಕೂ ಅಧಿಕ ಫ್ಯಾನ್ಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹೊಂದಿದ್ದರು. ಈಗ ಹಳ್ಳಿ ಪ್ರತಿಭೆಯ ಚಂದು ಖಾತೆಯ ಮೇಲೆ ಹ್ಯಾಕರ್ಸ್ ಕಣ್ಣು ಬಿದ್ದಿದೆ. ಅವರ ಅಕೌಂಟ್ ಹ್ಯಾಕ್ ಮಾಡಲಾಗಿದೆ. ಇದನ್ನೂ ಓದಿ:`ಐರಾವತ’ ನಟಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಪಾಕಿಸ್ತಾನಿ ಬೌಲರ್ ನಸೀಮ್ ಶಾ

    ಇತ್ತೀಚೆಗಷ್ಟೇ ಶಿವಣ್ಣ ಮತ್ತು ನಿರೂಪಕಿ ಅನುಶ್ರೀ ಅವರನ್ನ ಚಂದು ಭೇಟಿಯಾಗಿ ಬಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕಾಫಿನಾಡು ಚಂದು ಸದಾ ಸಕ್ರಿಯರಾಗಿದ್ದರು. ಇದೀಗ ಅವರ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದ್ದಕ್ಕೆ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜಕೀಯಕ್ಕೆ ಸೇರಿ ಅಂದವರಿಗೆ ಕಾಫಿನಾಡು ಚಂದು ಹೇಳಿದ್ದೇನು ಗೊತ್ತಾ?

    ರಾಜಕೀಯಕ್ಕೆ ಸೇರಿ ಅಂದವರಿಗೆ ಕಾಫಿನಾಡು ಚಂದು ಹೇಳಿದ್ದೇನು ಗೊತ್ತಾ?

    ಸೋಷಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಹೈಪ್ ಕ್ರಿಯೇಟ್ ಮಾಡಿರುವ ಕಲಾವಿದ ಅಂದ್ರೆ ಕಾಫಿನಾಡು ಚಂದು. ಬರ್ತ್‌ಡೇ ವಿಶ್ ಮೂಲಕ ಅನೇಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ರಾಜಕೀಯಕ್ಕೆ ಸೇರಿ ಅಂತಾ ಬಿಟ್ಟಿ ಸಲಹೆ ನೀಡಿದವರಿಗೆ ಕಾಫಿನಾಡು ಚಂದು ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

     

    View this post on Instagram

     

    A post shared by Coffe nadu chandu (@coffeenaduchandu)

    ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಕಾಫಿನಾಡು ಚಂದುಗೆ ರಾಜಕೀಯಕ್ಕೆ ಬರುವಂತೆ ಕೆಲವರು ಬಿಟ್ಟಿ ಸಲಹೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಚಂದು ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ನೀವು ರಾಜಕೀಯಕ್ಕೆ ನಿಂತುಕೊಳ್ಳಬಹುದಲ್ಲ ಅಂತ ಯಾರೋ ಒಬ್ಬರು ಹೇಳಿದ್ರು. ನನಗೆ ಅದರಲ್ಲಿ ಆಸಕ್ತಿ ಇಲ್ಲ. ಯಾಕೆಂದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿವೆ. ಓಹೋ ಚಂದು ಕಾಂಗ್ರೆಸ್‌ಗೆ ನಿಂತುಕೊಂಡು, ಬಿಜೆಪಿಗೆ ನಿಂತುಕೊಂಡ ಅಂತ ಜನರು ಹೇಳೋದು ಬೇಡ. ನನಗೆ ಈಗ ಇರುವ ಲೈಫ್ ತುಂಬಾ ಚೆನ್ನಾಗಿದೆ. ಇದನ್ನೂ ಓದಿ:ಶಿವಣ್ಣನ ಮನೆಗೆ ಭೇಟಿ ನೀಡಿದ `ಸತ್ಯ ಇನ್ ಲವ್’ ಚಿತ್ರದ ನಾಯಕಿ ಜೆನಿಲಿಯಾ

    ಇನ್ನು ರಾಜಕೀಯದ ಬಗ್ಗೆ ಮಾತಾಡೋಕೆ ನಾನು ರಾಜಕಾರಣಿ ಅಲ್ಲ. ದೇವಸ್ಥಾನದ ಬಗ್ಗೆ ಮಾತಾಡೋಕೆ ಪೂಜಾರಿನೂ ಅಲ್ಲ. ಪಾಠ ಮಾಡೋಕೆ ನಾನು ಮೇಷ್ಟ್ರು ಅಲ್ಲ. ನಾನು ಪುನೀತಣ್ಣ, ಶಿವಣ್ಣ ಅವರ ಅಭಿಮಾನಿ ಎಂದು ಚಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಇನ್ನು ಇನ್ಸ್ಟಾಗ್ರಾಂ  ಖಾತೆಯಲ್ಲಿ ಕಾಫಿನಾಡು ಚಂದು ಮೇಲಿನ ಕ್ರೇಜ್ ಹೆಚ್ಚಾಗಿದೆ. 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ಸೋಷಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಕಾಫಿನಾಡು ಚಂದು ಮತ್ತೆ ಸುದ್ದಿಯಲ್ಲಿದ್ದಾರೆ. ಕೊನೆಗೂ ಶಿವಣ್ಣ ಅವರನ್ನ ಭೇಟಿಯಾಗಿ ತಮ್ಮ ಮಹಾದಾಸೆಯನ್ನ ಈಡೇರಿಸಿಕೊಂಡಿದ್ದಾರೆ. ಈ ಕುರಿತ ವೀಡಿಯೋವೊಂದನ್ನ ಕಾಫಿನಾಡು ಚಂದು ಶೇರ್ ಮಾಡಿದ್ದಾರೆ.

    ಬರ್ತ್ಡೇ ಸಾಂಗ್ ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಸ್ಟಾರ್ ಅಂದ್ರೆ ಕಾಫಿನಾಡು ಚಂದು. ತನ್ನ ಪ್ರತಿ ವೀಡಿಯೋದಲ್ಲೂ ತಾನು ಶಿವಣ್ಣ ಮತ್ತು ಪುನೀತ್ ಅವರ ಅಭಿಮಾನಿ ಎಂದು ಹೇಳಿಯೇ ಬರ್ತ್ಡೇ ಸಾಂಗ್ ಅನ್ನು ಹೇಳುತ್ತಿದ್ದರು. ಜತೆಗೆ ಸಾಕಷ್ಟು ಬಾರಿ ತಾವು ಶಿವಣ್ಣ ಅವರನ್ನ ಭೇಟಿಯಾಗಬೇಕು ಎಂದು ಹೇಳಿಕೊಂಡಿದ್ದರು. ಈಗ ಆ ಆಸೆ ನೆರವೇರಿದೆ. ಇದನ್ನೂ ಓದಿ:ಉದಯ್‌ ಹಿಂಬದಿಯಿಂದ ತಬ್ಬಿ ಕಿಸ್‌ ಮಾಡ್ತಾರೆ: ಬಿಗ್‌ ಬಾಸ್‌ ಮನೆಯಲ್ಲಿ ಮಹಿಳಾ ಸ್ಪರ್ಧಿಗಳು ಗರಂ

    ಹೌದು. ಖಾಸಗಿ ಚಾನೆಲ್‌ನಲ್ಲಿ ಜಡ್ಜ್ ಆಗಿರುವ ಶಿವರಾಜ್‌ಕುಮಾರ್ ಅವರನ್ನ ಸೆಟ್‌ನಲ್ಲೇ ಭೇಟಿ ಮಾಡಿ, ಸ್ಜೇಜ್ ಮೇಲೆ ಹಾಡಿದ್ದಾರೆ. ಈ ವೀಡಿಯೋ ಕೂಡ ಚಂದು ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ, ನಿರೂಪಕಿ ಅನುಶ್ರೀ ಅವರನ್ನ ಕೂಡ ಕಾಫಿನಾಡು ಚಂದು ಭೇಟಿ ಮಾಡಿದ್ದಾರೆ. ಈ ಕುರಿತ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಶಿವಣ್ಣನನ್ನೇ ಹಿಂದಿಕ್ಕಿದ ಶಿವಣ್ಣನ ಅಭಿಮಾನಿ ಕಾಫಿನಾಡು ಚಂದು!

    ಶಿವಣ್ಣನನ್ನೇ ಹಿಂದಿಕ್ಕಿದ ಶಿವಣ್ಣನ ಅಭಿಮಾನಿ ಕಾಫಿನಾಡು ಚಂದು!

    ಸೋಷಿಯಲ್ ಮೀಡಿಯಾದಲ್ಲಿ ಹ್ಯಾಪಿ ಬರ್ತಡೇ ಹಾಡುಗಳ ಮೂಲಕ ಫೇಮಸ್ ಆದವರು ಕಾಫಿನಾಡು ಚಂದು ಈಗ ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಶಿವಣ್ಣನನ್ನೇ ಓವರ್ ಸೆಡ್ಡು ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದ್ದಾರೆ.

    ಚಿತ್ರರಂಗದಲ್ಲಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಎನರ್ಜಿಟಿಕ್ ಹೀರೋ ಶಿವಣ್ಣಗೆ ಸೋಷಿಯಲ್ ಮೀಡಿಯಾ ಸ್ಟಾರ್ ಕಾಫಿನಾಡು ಚಂದು ಸೆಡ್ಡು ಹೊಡೆದಿದ್ದಾರೆ. ಹ್ಯಾಪಿ ಬರ್ತಡೇ ಸಾಂಗ್ ಹೇಳುವ ಮೂಲಕ ವೈರಲ್ ಆಗಿರುವ ಚಂದು, ಇನ್‌ಸ್ಟಾಗ್ರಾಮ್‌ನಲ್ಲಿ ಶಿವಣ್ಣನನ್ನೇ ಮೀರಿಸಿ, ಅಧಿಕ ಫಾಲೋವರ್ಸ್ ಗಿಟ್ಟಿಸಿಕೊಂಡಿದ್ದಾರೆ. ಪ್ರತಿ ವಿಡಿಯೋದಲ್ಲೂ ನಾನು ಶಿವಣ್ಣನ ಅಭಿಮಾನಿ ಎಂದ್ಹೇಳಿ ಬರ್ತಡೇ ಸಾಂಗ್ ಹೇಳುವ ಕಾಫಿನಾಡು ಚಂದು, ಇನ್‌ಸ್ಟಾಗ್ರಾಮ್‌ನಲ್ಲಿ ಶಿವಣ್ಣ ಅವರಿಗಿಂತ ಅಧಿಕ ಫಾಲೋವರ್ಸ್ ಗಿಟ್ಟಿಸಿಕೊಂಡಿದ್ದಾರೆ.

     

    View this post on Instagram

     

    A post shared by Coffe nadu chandu (@coffeenaduchandu)

    ಸೋಷಿಯಲ್ ಮೀಡಿಯಾದಲ್ಲಿ ಶಿವಣ್ಣ ಅವರನ್ನು ಹಿಂದಿಕ್ಕಿದ್ದಾರೆ. ಈ ಕಾಫಿನಾಡು ಚಂದು ಸದ್ಯ ಸೋಷಿಯಲ್ ಮೀಡಿಯಾ ಸ್ಟಾರ್. ನೀವು ಎಲ್ಲೇ ನೋಡಿದರೂ ಇವರದ್ದೇ ದರ್ಬಾರ್, ನೀವು ಯಾವುದೇ ಮೀಮ್ ಪೇಜ್, ಟ್ರೋಲ್ ಪೇಜ್‌ಗಳನ್ನು ನೋಡಿದರೆ ಸಾಕು ಎಲ್ಲೆಡೆ ಇದೇ ಹೆಸರು ಕೇಳಿ ಬರುತ್ತದೆ. ಶಿವರಾಜ್‌ಕುಮಾರ್‌ಗೆ 2 ಲಕ್ಷದ 5 ಸಾವಿರ ಫಾಲೋವರ್ಸ್ ಇದ್ರೆ, ಕಾಫಿನಾಡು ಚಂದು 2 ಲಕ್ಷದ 28 ಸಾವಿರ ಫಾಲೋವರ್ಸ್ ಹೊಂದುವ ಮೂಲಕ ಶಿವಣ್ಣನನ್ನೇ ಸೆಡ್ಡು ಹೊಡೆದಿದ್ದಾರೆ. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ

    ಮನಸ್ಸಿಗೆ ಬಂದಂತೆ ಹಾಡು, ಸಾಹಿತ್ಯ ಹೇಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವರು ಈ ಚಂದು. ಸದ್ಯ ತಮ್ಮ ಹಾಡಿನ ವಿಡಿಯೋ ಮೂಲಕ ಭರ್ಜರಿ ವೀವ್ಸ್ ಗಿಟ್ಟಿಸಿಕೊಂಡು ವೈರಲ್ ಆಗ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟಾಪ್‌ಲೆಸ್ ಅವತಾರದಲ್ಲಿ ಉರ್ಫಿ ಜಾವೇದ್: ನಟಿಯ ಹೊಸ ವಿಡಿಯೋ ವೈರಲ್

    ಟಾಪ್‌ಲೆಸ್ ಅವತಾರದಲ್ಲಿ ಉರ್ಫಿ ಜಾವೇದ್: ನಟಿಯ ಹೊಸ ವಿಡಿಯೋ ವೈರಲ್

    ಬಾಲಿವುಡ್ ಬ್ಯೂಟಿ ಉರ್ಫಿ ಜಾವೇದ್ ಸಿನಿಮಾಗಳ ವಿಚಾರವಾಗಿ ಸುದ್ದಿ ಆಗೋದಕ್ಕಿಂತ ಬೋಲ್ಡ್ ಫೋಟೋ ಮತ್ತು ವಿಡಿಯೋಸ್‌ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ ಸೆನ್ಸೆಷನಲ್ ಸ್ಟಾರ್ ಆಗಿದ್ದಾರೆ. ದಿನಕ್ಕೊಂಡು ವೇಷ ಬದಲಿಸಿಕೊಂಡು ನಾನಾ ಅವತಾರಗಳ ಮೂಲಕ ಸದ್ದು ಮಾಡುತ್ತಾ ಟ್ರೋಲಿಗರ ಕಣ್ಣಿಗೆ ಗುರಿಯಾಗಿದ್ದಾರೆ.

    ಟ್ರೋಲಿಗರ ಕೈ ಇವರು ಸಿಕ್ಕಿದ್ದಾರೋ ಅಥವಾ ಇವರೇ ಟ್ರೋಲಿಗರ ಕೈ ಸಿಗ್ತಿದ್ದಾರೋ ಗೊತ್ತಿಲ್ಲ.ಈವರೆಗೂ ತುಂಡುಡುಗೆಯಾದರೂ ತೊಡುತ್ತಿದ್ದರು ಈಗ ಇನ್ನೂ ಅಪ್‌ಡೇಟ್ ಆಗಿದ್ದಾರೆ. ಕಳೆದ ಬಾರಿ ಒಳ ಉಡುವು ಕಾಣುವಂತೆ ಪ್ಲಾಸ್ಟಿಕ್ ಕವರ್‌ನಿಂದ ಡಿಸೈನ್ ಮಾಡಿಸಿ, ಅದರ ಫೋಟೋಶೂಟ್ ಸಖತ್ ವೈರಲ್ ಆಗಿತ್ತು. ಈಗ ಉರ್ಫಿ ಟಾಪ್‌ಲೆಸ್ ಅವತಾರದಲ್ಲಿ ಬಂದಿದ್ದಾರೆ. ಈಗ ಬಾರಿ ವೈರಲ್ ಆಗ್ತಿದೆ.

    ಈ ಬಾರಿ ಇನ್ನೂ ಉರ್ಫಿ ಜಾವೇಧ ಹೆಜ್ಜೆ ಮುಂದೆ ಹೋಗಿ ಅರೆನಗ್ನ ಟಾಪ್‌ಲೆಸ್ ಲುಕ್‌ನಲ್ಲಿರೋ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಬರೀ ಹೂವುಗಳ ಡಿಸೈನ್ ಇರುವ ಟಾಪ್‌ಲೆಸ್‌ನಲ್ಲಿರೋ ವಿಡಿಯೋ ಶೇರ್ ಮಾಡಿದ್ದಾರೆ. ಒಂದಿಷ್ಟು ನೆಟ್ಟಿಗರು ಇದು ಯಾವ ತರಹದ ಡ್ರೇಸ್ ಅಂತಾ ಕೇಳಿದ್ರೆ, ಇನ್ನೂ ಕೆಲವರು ಹೀಗಾ ಬರೋದು ಅಂತಾ ಕಿಡಿಕಾರಿದ್ದಾರೆ. ಇನ್ನು ಇವರ ಕಾಸ್ಟ್ಯೂಮ್‌ ಡಿಸೈನರ್ ಯಾರಪ್ಪಾ ಅಂತಾ ಪ್ರಶ್ನಿಸುತ್ತಿದ್ದಾರೆ. ಈ ವಿಡಿಯೋ ಕೂಡ ಸಖತ್ ಟ್ರೋಲ್ ಆಗ್ತಿದೆ.‌ ಇದನ್ನೂ ಓದಿ: ಸೀಮಂತದ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ

     

    View this post on Instagram

     

    A post shared by Urrfii (@urf7i)

    ಇವು ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ಉರ್ಫಿ ಫೋಟೋಶೂಟ್ ಹೊಸ ವಿಡಿಯೋ ಅಂತಾ ಆರಾಮಾಗಿದ್ದಾರೆ. ದಿನಕ್ಕೊಂದು ತರಹ ಹೊಸ ವೇಷದಲ್ಲಿ ಪ್ರತ್ಯಕ್ಷವಾಗೋ ಉರ್ಫಿ ಅವತಾರಕ್ಕೆ ಅಭಿಮಾನಿಗಳು ಉಫ್ ಅಂತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಯಾವ ಗೆಟಪ್‌ನಲ್ಲಿ ಬರಬಹುದು ಅಂತಾ ಕಾದುನೋಡಬೇಕಿದೆ.