Tag: Snow Fall

  • ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಯೆಲ್ಲೋ ಅಲರ್ಟ್ ಜಾರಿ

    ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಯೆಲ್ಲೋ ಅಲರ್ಟ್ ಜಾರಿ

    ಶಿಮ್ಲಾ: ಮುಂದಿನ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ಜನಪ್ರಿಯ ಪ್ರವಾಸಿ ತಾಣಗಳಾದ ಚಂಬಾ, ಸ್ಪಿತಿ, ಕುಲು, ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಜಾರಿ ಮಾಡಿದೆ.

    ಕಳೆದ ವರ್ಷಕ್ಕೆ ಹೊಲೀಸಿ ನೋಡಿದರೆ ಈ ವರ್ಷ ರಾಜ್ಯದಲ್ಲಿ ಅತೀಯಾದ ಹಿಮಪಾತವಾಗಿದೆ. ಇನ್ನೂ ಮುಂಬರುವ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ನಗರದ ಐಎಮ್‍ಡಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸುರೇಂದರ್ ಪಾಲ್ ಅವರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ದುಬಾರಿ ಬೆಲೆಗೆ ಮನೆಯನ್ನು ಮಾರಾಟ ಮಾಡಿದ ಬಿಗ್ ಬಿ

    ಹವಾಮಾನ ಇಲಾಖೆಯು ಸೋಮವಾರ ತನ್ನ ಮುನ್ಸೂಚನೆಯಲ್ಲಿ ಭಾರೀ ಹಿಮಪಾತದಿಂದಾಗಿ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಶೀತದ ಅಲೆಗಳು ಬರುವ ನಿರೀಕ್ಷೆಯಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಫೆಬ್ರವರಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಿರುತ್ತದೆ. ಆದರೆ ಪಂಜಾಬ್ ಮತ್ತು ಹರಿಯಾಣದಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

    ಭಾರತದ ಪರ್ಯಾಯ ದ್ವೀಪದ ಪೂರ್ವ ಮತ್ತು ನೈಋತ್ಯ ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ತಿಳಿಸಿದೆ.

    ಇದರ ಮಧ್ಯೆ ದೆಹಲಿಯಲ್ಲಿ ಬುಧವಾರ ಬೆಳಗ್ಗೆ ಮಂಜು ಕಾಣಿಸಿಕೊಂಡಿದ್ದು, ಕನಿಷ್ಠ ತಾಪಮಾನವು 11.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ರಾಜಧಾನಿಯ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅತ್ಯಂತ ಕಳಪೆ ವರ್ಗದಲ್ಲಿದೆ. ಏಕೆಂದರೆ ಬುಧವಾರ ಬೆಳಗ್ಗೆ 7.05 ಕ್ಕೆ ವಾಯು ಗುಣಮಟ್ಟ ಸೂಚ್ಯಂಕ 341 ಆಗಿತ್ತು. ಆದರೆ ದೆಹಲಿಯ ನೆರೆಯ ಪ್ರದೇಶಗಳಲ್ಲಿ ಫರಿದಾಬಾದ್ (283), ಗಾಜಿಯಾಬಾದ್ (356), ಗ್ರೇಟರ್ ನೋಯ್ಡಾ (216), ಗುರುಗ್ರಾಮ್ (274) ಮತ್ತು ನೋಯ್ಡಾ (327) ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ತೋರಿಸಿವೆ.

  • ಅಮೆರಿಕದಲ್ಲಿ ಭಾರಿ ಹಿಮಪಾತದ ಸುಳಿವು – ನ್ಯೂಯಾರ್ಕ್ ಸೇರಿ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ

    ಅಮೆರಿಕದಲ್ಲಿ ಭಾರಿ ಹಿಮಪಾತದ ಸುಳಿವು – ನ್ಯೂಯಾರ್ಕ್ ಸೇರಿ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ

    ನ್ಯೂಯಾರ್ಕ್: ಚಳಿಗಾಲದ ಚಂಡಮಾರುತ ಕೆನಾನ್ ಭೀಕರತೆಯಿಂದಾಗಿ ನ್ಯೂಯಾರ್ಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಹಿಮಪಾತ ಮತ್ತು ಗಾಳಿ ಬೀಸಲು ತೊಡಗಿದೆ. ಹೀಗಾಗಿ ಪೂರ್ವ ಅಮೆರಿಕಾವು ತುರ್ತು ಪರಿಸ್ಥಿತಿ ಘೋಷಿಸಿದೆ.

    ಶುಕ್ರವಾರ ಸಂಜೆಯಿಂದ ಭಾನುವಾರದ ಆರಂಭದವರೆಗೆ ನ್ಯೂಯಾರ್ಕ್ ನಗರವು 8 ರಿಂದ 12 ಇಂಚುಗಳಷ್ಟು ಹಿಮಪಾತವನ್ನು ದಾಖಲಿಸುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ನ್ಯೂಯಾರ್ಕ್ ರಾಜ್ಯಪಾಲ ಕ್ಯಾಥಿ ಹೊಚುಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶನಿವಾರ ಬೆಳಗ್ಗೆ ನೆಲದಿಂದ 7 ರಿಂದ 11 ಇಂಚುಗಳಷ್ಟು ಹಿಮ ಬಿದ್ದಿರುವುದರಿಂದ ಸಫೋಲ್ಕ್ ಮತ್ತು ನಸ್ಸೌ ಕೌಂಟಿಗಳು ಹೆಚ್ಚು ಹಾನಿಗೊಳಗಾಗುತ್ತಿವೆ. ಇದು ಇನ್ನೂ 5 ರಿಂದ 12 ಇಂಚುಗಳಷ್ಟು ಹೆಚ್ಚಾಗುವ ನಿರೀಕ್ಷೆಯಲ್ಲಿದೆ. ನ್ಯೂಯಾರ್ಕ್ ನಗರವು ಇಲ್ಲಿಯವರೆಗೆ 4 ಇಂಚುಗಳಷ್ಟು ಹಿಮಪಾತವನ್ನು ದಾಖಲಿಸಿದೆ. 3 ಗಂಟೆಗೆ ಮೊದಲು ಮತ್ತೊಂದು 4-7 ಇಂಚುಗಳಷ್ಟು ಹೆಚ್ಚಾಗುವ ಸಂಭವವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ ದಾಳಿ- 6 ಇಸ್ಲಾಮಿಕ್ ಸ್ಟೇಟ್ ಉಗ್ರರ ಹತ್ಯೆ

    ಇದಕ್ಕೂ ಮುನ್ನ, ರಾಜ್ಯಪಾಲರು ಶುಕ್ರವಾರ ಸಂಜೆಯಿಂದಲೇ ನ್ಯೂಯಾರ್ಕ್‍ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಪೂರ್ವ ಅಮೆರಿಕಾದ ಇತರ ರಾಜ್ಯಗಳಲ್ಲಿಯೂ ಸಹ ಭಾರೀ ಹಿಮಪಾತವನ್ನು ನಿರೀಕ್ಷಿಸಲಾಗಿದೆ. ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಲಾಗಾರ್ಡಿಯಾ ವಿಮಾನ ನಿಲ್ದಾಣ ಮತ್ತು ಸೆಂಟ್ರಲ್ ಪಾರ್ಕ್‍ನಲ್ಲಿ ಕಳೆದ 12 ಗಂಟೆಗಳಲ್ಲಿ ಹಿಮ ಪ್ರಮಾಣವು 5 ಇಂಚುಗಳನ್ನು ಮೀರಿದೆ ಎಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ರಾಷ್ಟ್ರೀಯ ಹವಾಮಾನ ಇಲಾಖೆಯು ಟ್ವಿಟರ್ ಮೂಲಕ ತಿಳಿಸಿದೆ.‌

    ಜಾನ್ ಎಫ್. ಕೆನಡಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಿಂದ ಒಟ್ಟು 80 ಪ್ರತಿಶತದಷ್ಟು 460 ವಿಮಾನಗಳ ಹಾರಾಟವು ರದ್ದಾಗಿದೆ. ಇದರ ಮಧ್ಯೆ ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 90 ಪ್ರತಿಶತ ವಿಮಾನಗಳು ಮತ್ತು ಲಾಗಾರ್ಡಿಯಾ ವಿಮಾನ ನಿಲ್ದಾಣದಿಂದ 97 ಪ್ರತಿಶತ ವಿಮಾನಗಳು ಕ್ರಮವಾಗಿ 322 ಮತ್ತು 279 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಟ್ರಾವೆಲ್ ಇನ್ಫರ್ಮೇಷನ್ ಪ್ಲಾಟ್‍ಫಾರ್ಮ್ ಫ್ಲೈಟ್ ಅವೇರ್.ಕಾಮ್ ಹೇಳಿದೆ. ಇದನ್ನೂ ಓದಿ: ಭಾರತಕ್ಕೆ ಭೇಟಿ ನೀಡಲಿದ್ದಾರೆ ಒಮಾನ್ ರಕ್ಷಣಾ ಅಧಿಕಾರಿಗಳು

    ಇದೇ ಮಾದರಿಯಲ್ಲಿ ರಾಜ್ಯದಲ್ಲಿ 3 ವಿಮಾನ ನಿಲ್ದಾಣಗಳಿಗೆ ಹಾರಾಟವನ್ನು ರದ್ದುಗೊಳಿಸಲಾಗಿದೆ. ಭಾರೀ ಹಿಮಪಾತದಿಂದಾಗಿ ರಸ್ತೆಗಳು ಮತ್ತು ಮೇಲ್ಮೈಗಳು ಜಾರು ಆಗಿರಬಹುದು. ನ್ಯೂಯಾರ್ಕ್ ನಿವಾಸಿಗಳು ಅನಗತ್ಯ ಪ್ರಯಾಣದಿಂದ ದೂರವಿರಲು ಸಲಹೆ ನೀಡಲಾಗುತ್ತದೆ ಎಂದು ನ್ಯೂಯಾರ್ಕ್ ಸಿಟಿ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಸಾಮಾಜಿಕ ಜಾಲತಾಣದ ಮೂಲಕ ಮುನ್ನೆಚ್ಚರಿಕೆಯನ್ನು ನೀಡಿದೆ.

    ನ್ಯೂಯಾರ್ಕ್ ನಿವಾಸಿಗಳು ಪ್ರಯಾಣಿಸಬೇಕಾದರೆ ಸಮೂಹ ಸಾರಿಗೆಯನ್ನು ಬಳಸಲು ಒತ್ತಾಯಿಸಲಾಗಿದೆ. ಆದಾಗ್ಯೂ, ನ್ಯೂಯಾರ್ಕ್ ನಗರದಲ್ಲಿ ಹಡಗು ಸೇವೆಯನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲಾಗಿದೆ. ಆದರೆ ಲಾಂಗ್ ಐಲ್ಯಾಂಡ್ ರೈಲು ರಸ್ತೆ ಸೇವೆಯನ್ನು ಮುನ್ನೆಚ್ಚರಿಕೆಯಾಗಿ ರಾತ್ರಿಯಿಡೀ ಸ್ಥಗಿತಗೊಳಿಸಲಾಗಿದೆ. ಲಾಂಗ್ ಐಲ್ಯಾಂಡ್‍ನ ಸಫೆÇಲ್ಕ್ ಕೌಂಟಿ ಮತ್ತು ಕನೆಕ್ಟಿಕಟ್‍ನ ನ್ಯೂ ಲಂಡನ್ ಕೌಂಟಿಯಲ್ಲಿ ಗಂಟೆಗೆ 60 ಮೈಲುಗಳಷ್ಟು ಬಲವಾದ ಗಾಳಿಯೊಂದಿಗೆ ಹಿಮಪಾತದ ಎಚ್ಚರಿಕೆ ಜಾರಿಯಲ್ಲಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.

  • ಹಿಮಪಾತಕ್ಕೆ ರಸ್ತೆ ಬಂದ್ – ಸೇನೆಯ ವಾಹನದಲ್ಲಿಯೇ ಹೆರಿಗೆ

    ಹಿಮಪಾತಕ್ಕೆ ರಸ್ತೆ ಬಂದ್ – ಸೇನೆಯ ವಾಹನದಲ್ಲಿಯೇ ಹೆರಿಗೆ

    ಶ್ರೀನಗರ: ಕುಪ್ವಾರದಲ್ಲಿ ಹಿಮಪಾತದಿಂದ ರಸ್ತೆ ಬಂದ್ ಆಗಿದ್ದರಿಂದ ಸೈನಿಕರ ವಾಹನದಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಆರ್ಮಿ ಅಂಬುಲೆನ್ಸ್ ಮೂಲಕ ತಾಯಿ ಮತ್ತು ಮಗುವವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸೋಮವಾರ ಬೆಳಗ್ಗೆ ಕಲರೂಸ್ ಕಂಪನಿ ಕಮಾಂಡರ್ ಗೆ ಕೆರೆ ಮಾಡಿದ ಆಶಾ ಕಾರ್ಯಕರ್ತೆ ಗರ್ಭಿಣಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಹಿಮಪಾತದಿಂದಾಗಿ ಗ್ರಾಮಕ್ಕೆ ಯಾವುದೇ ಅಂಬುಲೆನ್ಸ್ ಬರುತ್ತಿಲ್ಲ. ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದರು.

    ಕೂಡಲೇ ಕಾರ್ಯಪ್ರವೃತ್ತರಾದ ಕಮಾಂಡರ್ ಆಶಾ ಕಾರ್ಯಕರ್ತೆ ಸೂಚಿಸಿ ದ ನಾರಿಕೂಟ್ ಸ್ಥಳಕ್ಕೆ ಸೇನೆ ವೈದ್ಯಕೀಯ ಟೀಂ ಕಳುಹಿಸಿದ್ದಾರೆ. ಸೇನಾ ವಾಹನದಲ್ಲಿ ಮಹಿಳೆಯನ್ನ ಆಸ್ಪತ್ರೆಗೆ ಕರೆ ತರುವ ಮಾರ್ಗದಲ್ಲಿ ಹೆರಿಗೆಯಾಗಿದೆ. ವಾಹನದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ನಂತರ ಮಗು ಮತ್ತು ತಾಯಿಯನ್ನ ಕಲರೂ ಆಸ್ಪತ್ರೆಗೆ ದಾಖಲಿಸಲಾಗಿದೆ.