Tag: Snooker

  • ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್: ಕಂಚಿನ ಪದಕಕ್ಕೆ ಮುತ್ತಿಟ್ಟ ಚಿನ್ನದ ನಾಡಿನ ಯುವತಿ

    ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್: ಕಂಚಿನ ಪದಕಕ್ಕೆ ಮುತ್ತಿಟ್ಟ ಚಿನ್ನದ ನಾಡಿನ ಯುವತಿ

    ಕೋಲಾರ: ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ (World Snooker Championship) ಚಿನ್ನದ ನಾಡಿನ ಯುವತಿ ಕೀರ್ತನಾ ಪಾಂಡಿಯನ್ (Keerthana Pandian) ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

    ಮಂಗೋಲಿಯಾದ (Mongolia) ಉಲಾನ್‌ಬಾಟರ್‌ನಲ್ಲಿ (Ulaanbaatar) ನಿನ್ನೆ (ಸೆ.19) ನಡೆದ ಸ್ನೂಕರ್ ಪಂದ್ಯಾವಳಿಯಲ್ಲಿ ಕೀರ್ತನಾ ಪಾಂಡಿಯನ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಮಿಂಚಿದ್ದಾರೆ.ಇದನ್ನೂ ಓದಿ:ತಿರುಪತಿ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿರುವುದು ಸ್ಪಷ್ಟವಾಗಿದೆ: ರಾಮಜನ್ಮಭೂಮಿ ಪ್ರಧಾನ ಅರ್ಚಕ

    ಮೂಲತಃ ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲ್ಲೂಕಿನ ದಾಸರಹೊಸಹಳ್ಳಿ ನಿವಾಸಿಯಾದ ಕೀರ್ತನಾ ಬೆಮಲ್ ನೌಕರ ಪಾಂಡಿಯನ್ ದಂಪತಿ ಪುತ್ರಿ. ಈ ಮೂಲಕ ಚಿನ್ನದ ನಾಡಿನ ಯುವತಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.

    ಇದಕ್ಕೂ ಮುನ್ನ ಜಾಗತಿಕ ಮಟ್ಟದಲ್ಲಿ ಹಲವು ಪದಕಗಳನ್ನು ಗಳಿಸಿರುವ ಕೀರ್ತನಾ ಇದೀಗ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದು ತಮ್ಮದಾಗಿಸಿಕೊಂಡಿದ್ದಾರೆ.ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ ಧ್ರುವಿ ಪಟೇಲ್‌ಗೆ ಮಿಸ್ ಇಂಡಿಯಾ ವರ್ಲ್ಡ್‌ವೈಡ್ ಕಿರೀಟ!

  • Snooker Championship 2023: ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದು ಕೋಲಾರದ ಯುವತಿ ಸಾಧನೆ!

    Snooker Championship 2023: ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದು ಕೋಲಾರದ ಯುವತಿ ಸಾಧನೆ!

    ಕೋಲಾರ: ಸೌದಿ ಅರೇಬಿಯಾದಲ್ಲಿ (Saudi Arabia) ನಡೆದ ಸ್ನೂಕರ್‌ ವಿಶ್ವಚಾಂಪಿಯನ್‌ಶಿಪ್‌ (Snooker Championship 2023) ಟೂರ್ನಿಯಲ್ಲಿ ಕೋಲಾರದ ಕೆಜಿಎಫ್‌ ಯುವತಿ ಕೀರ್ತನಾ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಹಿಂದೆ ವಿಶ್ವಚಾಂಪಿಯನ್‌ ಟೂರ್ನಿಯಲ್ಲಿ ಕಂಚು, ಬೆಳ್ಳಿ ಗೆದ್ದು ಸಾಧನೆ ಮಾಡಿದ್ದ ಕೀರ್ತನಾ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

    ಹೌದು. ಕೋಲಾರದ (Kolar) ಜಿಲ್ಲೆಯ ಯುವಸಮೂಹಕ್ಕೆ ಸಾಧನೆಯ ಮೆಟ್ಟಿಲು ಕಠಿಣವಾದರೂ ಛಲವಿದೆ ಬಿಡದೇ ಸಾಧಿಸುವ ಮನಸ್ಸಿದೆ ಅನ್ನೋದಕ್ಕೆ ಕೀರ್ತನಾ ಉದಾಹರಣೆಯಾಗಿದ್ದಾರೆ. ಅಂಡರ್ 16 ನಲ್ಲಿ ಬೆಳ್ಳಿ, ಅಂಡರ್ 18 ನಲ್ಲಿ ಕಂಚು ಗೆದ್ದಿದ್ದ ಕೀರ್ತನಾ ಇದೀಗ ಅಂಡರ್ 21 ನಲ್ಲಿ ಚಿನ್ನಕ್ಕೆ ಮುತ್ತಿಟ್ಟು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿ ನಿವಾಸಿ ಪಾಂಡಿಯನ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರಿ ಕೀರ್ತನಾ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಕೆಜಿಎಫ್‌ನ ಮಹಾವೀರ್ ಜೈನ್ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ಕೀರ್ತಿನಾ ಸದ್ದಿಲ್ಲದೇ ಸ್ನೂಕರ್‌ ಕ್ರೀಡೆಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ಸಾಗಿದ್ದಾಳೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್‌ನಲ್ಲೂ ಕಳಪೆ ಅಂಪೈರಿಂಗ್‌ ವಿವಾದ – ಆಟಗಾರರ ನಡುವೆ ಟಾಕ್‌ ಫೈಟ್‌

    ಈಕೆಯ ತಂದೆ ಪಾಂಡಿಯನ್ ಕೆಜಿಎಫ್ ನಲ್ಲಿರುವ ಬಿಇಎಂಎಲ್ ಕ್ಲಬ್‌ನಲ್ಲಿ ನಲ್ಲಿ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ತಾಯಿ ಜಯಲಕ್ಷ್ಮಿ ಗೃಹಿಣಿಯಾಗಿದ್ದಾರೆ. ತನ್ನ ತಂದೆಯಿಂದಲೇ ಪ್ರೇರಣೆ ಪಡೆದ ಕೀರ್ತನಾ ಸ್ನೂಕರ್‌ನ ಕ್ಯೂ ಕೈಗೆತ್ತಿಕೊಂಡಿದ್ದಳು. ಬಿಡುವಿನ ವೇಳೆಯಲ್ಲಿ ಕೆಜಿಎಫ್ ನಗರದ ಬಿಇಎಂಎಲ್ ಕ್ಲಬ್ ನಲ್ಲಿರುವ ಬಿಲಿಯರ್ಡ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. 13ನೇ ವಯಸ್ಸಿಗೆ ಬಾಲ್‌ ಹೊಡೆಯಲಾರಂಭಿಸಿದ ಹುಡುಗಿ ಈಗ ಚಿನ್ನಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ. ರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಹೆಚ್ಚು ಪದಕಗಳನ್ನ ಬಾಚಿಕೊಂಡಿದ್ದಾರೆ.

    2017ರಲ್ಲಿ ಚೀನಾದಲ್ಲಿ ನಡೆದ ಅಂಡರ್‌ 19 ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. 2018ರಲ್ಲಿ ರಷ್ಯಾದಲ್ಲಿ ಬೆಳ್ಳಿ ಪದಕ ಹಾಗೂ ಚಿನ್ನದ ಪದಕ, 2022 ರಲ್ಲಿ ರೋಮಾನಿಯಾದಲ್ಲಿ ಕಂಚು ಗೆದ್ದು, ಇದೀಗ ಅಂಡರ್‌ 21 ನಲ್ಲಿ ಸೌದಿ ಅರೇಬಿಯಾದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮುಂದೆ ಪ್ರೊಫೆಷನಲ್ಸ್ ಕ್ಲಬ್‌ಗಳಲ್ಲಿ ಭಾಗವಹಿಸಬೇಕು, ಇನ್ನಷ್ಟು ಪದಕಗಳನ್ನು ಗೆಲ್ಲಬೇಕು ಎಂಬುದು ಈಕೆಯ ಗುರಿಯಾಗಿದೆ. ಇದನ್ನೂ ಓದಿ: ಇಸ್ಲಾಂ ಧರ್ಮ ಹೇಳಿದಂತೆ ಬದುಕುತ್ತೇನೆ – ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಪಾಕ್‌ ಆಟಗಾರ್ತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಕೋಲಾರದ ಕೀರ್ತನಾ

    ವಿಶ್ವಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಕೋಲಾರದ ಕೀರ್ತನಾ

    ನವದೆಹಲಿ: ಇಂಟರ್ ನ್ಯಾಷನಲ್ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಶನ್ (ಐಬಿಎಸ್) ಅಂಡರ್ 16 ಸ್ನೂಕರ್ ಚಾಂಪಿಯನ್‍ಶಿಪ್‍ನಲ್ಲಿ ರಾಜ್ಯದ ಕೀರ್ತನಾ ಪಾಂಡಿಯನ್ ಪ್ರಶಸ್ತಿ ಗಿಟ್ಟಿಸಿಕೊಂಡು, ಹೊಸ ದಾಖಲೆ ಬರೆದಿದ್ದಾರೆ.

    ರಷ್ಯಾದಲ್ಲಿ ನಡೆದ ವಿಶ್ವ ಅಂಡರ್ 16 ಸ್ನೂಕರ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕೀರ್ತನಾ ಅವರು, ಫೈನಲ್‍ನಲ್ಲಿ ಬೆಲೂರಸ್‍ನ ಅಲ್ಬಿನಾ ಲೆಸ್ಚಕ್ ವಿರುದ್ಧ 3-1 ಅಂತರದ ಗೆಲುವು ಸಾಧಿಸಿದರು.

    ಕೋಲಾರ ಮೂಲದ ಕೀರ್ತನಾ ಅವರು ಇದೇ ಮೊದಲ ಬಾರಿಗೆ ಬಾಲಕಿಯರ ವಿಭಾಗದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿಕ್ಕದಿಂದಲೂ ಸ್ನೂಕರ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಕೀರ್ತನಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ವಿಶ್ವಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಟ್ಟ ಮಾತು ಉಳಿಸಿಕೊಂಡ ಮಾರ್ಕ್ ವಿಲಿಯಮ್ಸ್ – ಚಾಂಪಿಯನ್‍ಶಿಪ್ ಗೆದ್ದ ಬಳಿಕ ಬೆತ್ತಲೆ ಸುದ್ದಿಗೋಷ್ಠಿ

    ಕೊಟ್ಟ ಮಾತು ಉಳಿಸಿಕೊಂಡ ಮಾರ್ಕ್ ವಿಲಿಯಮ್ಸ್ – ಚಾಂಪಿಯನ್‍ಶಿಪ್ ಗೆದ್ದ ಬಳಿಕ ಬೆತ್ತಲೆ ಸುದ್ದಿಗೋಷ್ಠಿ

    ಶೇಫೀಲ್ಡ್: ವಿಶ್ವ ಸ್ನೂಕರ್ ಚಾಂಪಿಯನ್‍ಶಿಪ್‍ನ ಇತಿಹಾಸದಲ್ಲೇ ಅತ್ಯಂತ ಕಠಿಣ ಫೈನಲ್ ಎಂದೇ ಬಿಂಬಿತವಾಗಿದ್ದ ಪಂದ್ಯದಲ್ಲಿ ಗೆದ್ದು ಬೀಗಿದ ಮಾರ್ಕ್ ವಿಲಿಯಮ್ಸ್, ದಾಖಲೆಯ ಮೂರನೇ ಬಾರಿಗೆ ಚಾಂಪಿಯನ್‍ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಇಂಗ್ಲೆಂಡ್‍ನ ಶೇಫೀಲ್ಡ್ ನಲ್ಲಿ ನಡೆದ ಜಿದ್ದಾಜಿದ್ದಿನ ಅಂತಿಮ ಹಣಾಹಣಿಯಲ್ಲಿ ವಿಲಿಯಮ್ಸ್, ನಾಲ್ಕು ಬಾರಿಯ ಚಾಂಪಿಯನ್ ಜಾನ್ ಹಿಗ್ಗಿನ್ಸ್ ವಿರುದ್ಧ 18-16 ಅಂತರದಲ್ಲಿ ರೋಚಕವಾಗಿ ಗೆದ್ದು ಇತಿಹಾಸ ನಿರ್ಮಿಸಿದರು. 42 ವರ್ಷದ ವಿಲಿಯಮ್ಸ್, ಬರೋಬ್ಬರಿ 15 ವರ್ಷದ ಬಳಿಕ ಮತ್ತೆ ಚಾಂಪಿಯನ್‍ಪಟ್ಟಕ್ಕೇರುವ ಮೂಲಕ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಮತ್ತೊಂದೆಡೆ ನಾಲ್ಕು ಬಾರಿಯ ಚಾಂಪಿಯನ್ ಜಾನ್ ಹಿಗ್ಗಿನ್ಸ್ ಸತತ ಎರಡನೇ ವರ್ಷವೂ ಫೈನಲ್‍ನಲ್ಲಿ ನಿರಾಸೆ ಅನುಭವಿಸಿದರು. ಕಳೆದ ವರ್ಷ ಮಾರ್ಕ್ ಸೆಲ್ಬಿಗೆ ಹಿಗ್ಗಿನ್ಸ್ ಶರಣಾಗಿದ್ದರು.

    ಬೆತ್ತಲೆ ಸುದ್ದಿಗೋಷ್ಠಿ:
    ಚಾಂಪಿಯನ್‍ಶಿಪ್‍ಗೂ ಮೊದಲು, ತಾನು ಗೆದ್ದರೆ ಬೆತ್ತೆಲೆಯಾಗಿ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಮಾರ್ಕ್ ವಿಲಿಯಮ್ಸ್ ಮಾತು ಕೊಟ್ಟಿದ್ದರು. ಚಾಂಪಿಯನ್‍ಶಿಪ್ ಮುಗಿದ ಬಳಿಕ ಟವಲ್ ಸುತ್ತಿ ಮಾಧ್ಯಮ ಕೊಠಡಿಗೆ ಆಗಮಿಸಿದ ವಿಲಿಯಮ್ಸ್, ಕೂತ ಬಳಿಕ ಟವಲ್‍ನ್ನೂ ತೆಗೆದು ಕೂಡ ಪಕ್ಕದಲಿದ್ದ ಆಸನದಲ್ಲಿರಿಸಿದರು. ಆದರೆ ಮಾಧ್ಯಮಗಳ ಲೋಗೋ ಇದ್ದ ಟೇಬಲ್‍ಗೆ ಹಾಕಲಾಗಿದ್ದ ಬಟ್ಟೆ ವಿಲಿಯಮ್ಸ್ ಮಾನ ಕಾಪಾಡಿತು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಲಿಯಮ್ಸ್, ಇಲ್ಲಿ ತುಂಬಾ ಚಳಿಯಾಗುತ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ಕ್ಷಣವನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ನಾನು ಈ ಬಗ್ಗೆ ಕನಸನ್ನಷ್ಟೇ ಕಂಡಿದ್ದೆ. ಅದೀಗ ನನಸಾಗುತ್ತಿದೆ. ಮುಂದಿನ ವರ್ಷವೂ ನಾನೇ ಗೆದ್ದರೆ ಮತ್ತೆ ನಗ್ನನಾಗಿಯೇ ನಿಮ್ಮ ಮುಂದೆ ಬರುತ್ತೇನೆ ಎಂದು ವಿಲಿಯಮ್ಸ್ ಹೇಳಿದರು.