Tag: Sneha Reddy

  • ಶೂಟಿಂಗ್‌ಗಾಗಿ ಮುಂಬೈಗೆ ಹಾರಿದ ಐಕಾನ್ ಸ್ಟಾರ್

    ಶೂಟಿಂಗ್‌ಗಾಗಿ ಮುಂಬೈಗೆ ಹಾರಿದ ಐಕಾನ್ ಸ್ಟಾರ್

    ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹಾಗೂ ಅಟ್ಲಿ ಕಾಂಬಿನೇಷನ್‌ನ ಇನ್ನು ಶೀರ್ಷಿಕೆ ಇಡದ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ (Mumbai) ಸದ್ದಿಲ್ಲದೇ ಆರಂಭಿಸಿದೆ ಎನ್ನಲಾಗ್ತಿದೆ. ಹೀಗಾಗಿ ನಟ ಅಲ್ಲು ಅರ್ಜುನ್ ತಮ್ಮ ಪತ್ನಿ ಸ್ನೆಹಾ ರೆಡ್ಡಿಯೊಂದಿಗೆ (Sneha Reddy) ಮುಂಬೈಗೆ ಬಂದಿಳಿದಿದ್ದಾರೆ. ಪುಷ್ಪಾ-2 ಸಿನಿಮಾ ಬಳಿಕ ಅಟ್ಲಿ ಜೊತೆ ಸಿನಿಮಾ ಮಾಡ್ತಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್. ಚಿತ್ರದ ಶೂಟಿಂಗ್‌ಗಾಗಿ ಗಂಟುಮೂಟೆ ಕಟ್ಟಿಕೊಂಡು ಮುಂಬೈ ತಲುಪಿದ್ದಾರೆ.

    ಸೂಪರ್ ಮ್ಯಾನ್ ಕಾನ್ಸೆಪ್ಟ್‌ನ ಎಎ22*ಎ6 ಸಿನಿಮಾವನ್ನ ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಬಹುಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾಗೆ ಅಲ್ಲು ಅರ್ಜುನ್ ಕೂಡಾ ಸಾಕಷ್ಟು ತಯಾರಿಯನ್ನ ಮಾಡಿಕೊಂಡಿದ್ದಾರೆ. ಪುಷ್ಪ ಪಾರ್ಟ್-1 ಹಾಗೂ ಪುಷ್ಪ-2 ಸಿನಿಮಾಗಿಂತಲೂ ದೊಡ್ಡ ನಿರೀಕ್ಷೆ ಈ ಸಿನಿಮಾ ಮೇಲಿದೆ. ಹೀಗಾಗಿ ಎಲ್ಲ ರೀತಿಯ ಪೂರ್ವ ತಯಾರಿಯನ್ನ ನಿರ್ದೇಶಕರು ಕೂಡಾ ಮಾಡಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಶಾರುಖ್ ಖಾನ್‌ಗೆ ಜವಾನ್ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಅಟ್ಲಿ ಮೇಲೂ ಕೂಡಾ ಬೆಟ್ಟದಷ್ಟು ನಿರೀಕ್ಷೆಗಳಿವೆ.

    ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್‌ನ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯಲಿದ್ದು, ಈ ಭಾಗದ ಚಿತ್ರೀಕರಣದಲ್ಲಿ ನಟಿ ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್ ಹಾಗೂ ಜಾನ್ಹವಿ ಕಪೂರ್ ಕೂಡಾ ಭಾಗಿಯಾಗಲಿದ್ದಾರೆ ಎನ್ನಲಾಗ್ತಿದೆ. ಸದ್ಯ ಮುಂಬೈನ ಶೆಡ್ಯೂಲ್‌ನ ಚಿತ್ರೀಕರಣಕ್ಕೆ ನಟ ಅಲ್ಲು ಅರ್ಜುನ್ ತಮ್ಮ ಪತ್ನಿ ಜೊತೆ ಬಂದಿದ್ದಾರೆ. ಇನ್ನು ನಟ ಅಲ್ಲು ಅರ್ಜುನ್ ಈ ಸಿನಿಮಾಗಾಗಿ ಭಾರಿ ಮೊತ್ತವನ್ನೇ ಸಂಭಾವನೆಯಾಗಿ ಪಡೆಯುತ್ತಿದ್ದಾರೆ ಎಂದು ಹೇಳಲಾಗ್ತಿದೆ.

  • ಮಾಲಿವುಡ್‌ ಚಿತ್ರರಂಗಕ್ಕೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಗ್ರ್ಯಾಂಡ್‌ ಎಂಟ್ರಿ

    ಮಾಲಿವುಡ್‌ ಚಿತ್ರರಂಗಕ್ಕೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಗ್ರ್ಯಾಂಡ್‌ ಎಂಟ್ರಿ

    ಟಾಲಿವುಡ್‌ನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕುಟುಂಬದಿಂದ ಇದೀಗ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ಅಲ್ಲು ಕುಟುಂಬದ ಸೊಸೆ ಇದೀಗ ನಟನೆಯತ್ತ ಮುಖ ಮಾಡಿದ್ದಾರೆ. ಸ್ಟಾರ್ ನಟನ ಜೊತೆ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.

    ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ (Sneha Reddy) ಯಾವ ಸ್ಟಾರ್ ನಟಿಯರಿಗೂ ಕಮ್ಮಿಯಿಲ್ಲ. ಬಗೆಬಗೆಯ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸೌಂಡ್ ಮಾಡುತ್ತಲೇ ಇರುತ್ತಾರೆ. ಈ ಚೆಂದುಳ್ಳಿ ಚೆಲುವೆ ಸ್ನೇಹಾ ರೆಡ್ಡಿಗೆ ಇದೀಗ ಬಿಗ್ ಆಫರ್‌ವೊಂದು ಅರಸಿ ಬಂದಿದೆ.

     

    View this post on Instagram

     

    A post shared by Allu Sneha Reddy (@allusnehareddy)

    ಮಲಯಾಳಂ(Malyalam) ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ನಟನೆಯ ಹೊಸ ಪ್ರಾಜೆಕ್ಟ್‌ನಲ್ಲಿ ಸ್ನೇಹಾ ರೆಡ್ಡಿಗೆ ನಟಿಸಲು ಸೂಪರ್ ಆಫರ್‌ವೊಂದು ಸಿಕ್ಕಿದೆ. ಬಹುಭಾಷೆಗಳಲ್ಲಿ ನಿರ್ಮಾವಾಗುತ್ತಿರುವ ಈ ಚಿತ್ರದಲ್ಲಿ ಸ್ನೇಹಾ ರೆಡ್ಡಿ, ಅತಿಥಿ ಪಾತ್ರನಾ, ಅಥವಾ ಚಿತ್ರದ ಪ್ರಮುಖ ಪಾತ್ರನಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಈ ಚಿತ್ರದಲ್ಲಿ ಪವರ್‌ಫುಲ್ ಪಾತ್ರದ ಮೂಲಕ ಅಲ್ಲು ಕುಟುಂಬದ ಸೊಸೆ ಬರುತ್ತಿರೋದಂತೂ ಗ್ಯಾರೆಂಟಿ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ವಿಜಯ್ ದೇವರಕೊಂಡ- ರಶ್ಮಿಕಾ

    ಒಟ್ನಲ್ಲಿ ಹೀರೋಯಿನ್‌ಗಳೇ ಒಂದು ಅವಕಾಶಕ್ಕಾಗಿ ಕಾಯುವವರ ನಡುವೆ ಸ್ನೇಹಾ ರೆಡ್ಡಿ ಭರ್ಜರಿ ಅವಕಾಶ ಪಡೆದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಪತಿ ಅಲ್ಲು ಅರ್ಜುನ್ ಜೊತೆ ನಟಿಸುವ ಚಾನ್ಸ್ ಸಿಗಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]

  • ಪತ್ನಿಯೊಂದಿಗೆ ಅಲ್ಲು ಅರ್ಜುನ್ ಫುಲ್ ಮಿಂಚಿಂಗ್-  ದೀಪಾವಳಿ ವೀಡಿಯೋ ವೈರಲ್

    ಪತ್ನಿಯೊಂದಿಗೆ ಅಲ್ಲು ಅರ್ಜುನ್ ಫುಲ್ ಮಿಂಚಿಂಗ್- ದೀಪಾವಳಿ ವೀಡಿಯೋ ವೈರಲ್

    ಹೈದರಾಬಾದ್: ಟಾಲಿವುಡ್ ನಟ ಅಲ್ಲು ಅರ್ಜುನ್ ದೀಪಾವಳಿ ಹಬ್ಬದಂದು ಪತ್ನಿಯೊಂದಿಗೆ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ.

    ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಹಾಗೂ ರಾಮ್‍ಚರಣ್ ತೇಜ ದೀಪಾವಳಿ ಹಬ್ಬವನ್ನು ಕುಟುಂಬಸ್ಥರೊಂದಿಗೆ ಫಾರ್ಮ್ ಹೌಸ್‍ನಲ್ಲಿ ಸಖತ್ ಗ್ರ್ಯಾಂಡ್ ಆಗಿ ಆಚರಿಸಿದರು. ಈ ವೇಳೆ ರಾಮ್‍ಚರಣ್ ಅವರ ಪತ್ನಿ ಉಪಸನಾ ಕೊನಿಡೆಲಾ, ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹ ಕೂಡ ಜೊತೆಗಿದ್ದರು. ಸೋದರ ಸಂಬಂಧಿಗಳಾದ ರಾಮ್‍ಚರಣ್ ಹಾಗೂ ಅಲ್ಲು ಅರ್ಜುನ್ ತಮ್ಮ ಮನೆಯವರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

     

    View this post on Instagram

     

    A post shared by Allu Arjun (@alluarjunonline)

    ಇದೀಗ ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹ ರೆಡ್ಡಿ ದೀಪಾವಳಿ ಹಬ್ಬದ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಅಲ್ಲು ಅರ್ಜುನ್ ಸಖತ್ ಸ್ಟೈಲಿಶ್ ಹಾಗೂ ಹ್ಯಾಂಡ್‍ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲುಗೆ ನಾನೇನು ಕಡಿಮೆ ಎಂಬಂತೆ ಪತ್ನಿ ಸ್ನೇಹ ಕೂಡ ಮಿಂಚಿದ್ದಾರೆ. ಇದನ್ನೂ ಓದಿ: ವಿಕ್ಕಿ, ಕತ್ರಿನಾ ಮದುವೆ ಸಿದ್ಧತೆ ಶುರು

    ವೀಡಿಯೋ ಪ್ಲೇ ಆಗುತ್ತಿದ್ದಂತೆಯೇ ಮೊದಲಿಗೆ ಲೈಟಿಂಗ್, ಕ್ಯಾಂಡೆಲ್‍ನಿಂದ ಅಲಂಕಾರಗೊಳಿಸಿರುವುದನ್ನು ಕಾಣಬಹುದಾಗಿದೆ. ನಂತರ ಕ್ರೀಮ್ ಕಲರ್ ಗಾಗ್ರಾಂ ತೊಟ್ಟು ಸ್ನೇಹ ಎಂಟ್ರಿ ಕೊಡುತ್ತಿದ್ದಂತೆಯೇ ಮತ್ತೊಂದೆಡೆ ಅಲ್ಲು ಅರ್ಜುನ್ ಬ್ಲಾಕ್ ಕಲರ್ ಟ್ರೆಡಿಶನಲ್ ಸೂಟ್ ಧರಿಸಿ ಕಾರಿನಿಂದ ಇಳಿದು ಆಗಮಿಸುತ್ತಾರೆ. ಬಳಿಕ ಇಬ್ಬರು ಒಟ್ಟಿಗೆ ನಿಂತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಪದ್ಮಶ್ರೀ ಅಲ್ಲ, ಪುನೀತ್ ಅಮರಶ್ರೀ: ಶಿವರಾಜ್‍ಕುಮಾರ್

    ಒಟ್ಟಾರೆ ಅಲ್ಲು ಅರ್ಜುನ್ ಹಾಗೂ ಸ್ನೇಹ ದಂಪತಿಯ ಈ ಕ್ಯೂಟ್ ವೀಡಿಯೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಪುಷ್ಪ ಸಿನಿಮಾ ಇದೇ ಡಿಸೆಂಬರ್ 25ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.