Tag: snake

  • ವಿಚಿತ್ರ ಮದುವೆ: ಹಾವನ್ನೆ ಹಾರ ಮಾಡಿಕೊಂಡ ವಧು-ವರ

    ವಿಚಿತ್ರ ಮದುವೆ: ಹಾವನ್ನೆ ಹಾರ ಮಾಡಿಕೊಂಡ ವಧು-ವರ

    ಮುಂಬೈ: ಹಾವು ಎಂದರೆ ಮನುಷ್ಯರಿಗೆ ಭಯ. ಯಾವುದೇ ಹಾವು ನಮಗೆ ಮುಖಾಮುಖಿಯಾದರೆ ಭಯಪಡುತ್ತೇವೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ವೀಡಿಯೋವೊಂದು ಹರಿದಾಡುತ್ತಿದ್ದು, ವಧು-ವರ ತಮ್ಮ ಮದುವೆಯ ಸಂದರ್ಭದಲ್ಲಿ ಹಾವಿನ ಹಾರವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಈ ವೀಡಿಯೋವನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

    ಮಹಾರಾಷ್ಟ್ರದ ಬೀಡ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ವಧು-ವರರು ಹಾವಿನ ಹಾರವನ್ನು ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ. ಈ ವೀಡಿಯೋವನ್ನು ಸ್ಥಳೀಯರು ಸೆರೆಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ಟ್ರೋಲ್‍ಗೆ ಗುರಿಯಾಗುತ್ತಿದೆ. ಇದನ್ನೂ ಓದಿ: ಶೂಟಿಂಗ್‍ಗೂ 9 ತಿಂಗಳ ಹಿಂದೆಯೇ ಪ್ರಿಪರೇಶನ್ ಮಾಡ್ಕೊಂಡೆ: ಸುದೀಪ್ 

     

    View this post on Instagram

     

    A post shared by Psycho Bihari (@psycho_biharii)

    ವೀಡಿಯೋದಲ್ಲಿ ಏನಿದೆ?
    ವಧು-ವರ ಬಿಳಿ ಬಟ್ಟೆಯನ್ನೂ ಧರಿಸಿದ್ದು, ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಹಾವನ್ನು ನೋಡಿ ಅವರಿಗೆ ಯಾವುದೇ ರೀತಿಯ ಭಯವು ಆಗುತ್ತಿಲ್ಲ. ಒಬ್ಬರಿಗೊಬ್ಬರು ಹೂವಿನ ಹಾರದ ರೀತಿಯಲ್ಲಿ ಹಾವನ್ನು ಬದಲಾಯಿಸಿಕೊಳ್ಳುತ್ತಿರುವುದನ್ನು ಗಮನಿಸಬಹುದು.

    ವಧು ಮೊದಲು ವರನ ಕುತ್ತಿಗೆಗೆ ದೊಡ್ಡ ಹಾವನ್ನು ಹಾಕುತ್ತಾಳೆ, ನಂತರ ದಂಪತಿ ಫೋಟೋಗೆ ಪೋಸ್ ನೀಡುತ್ತಾರೆ. ವರನ ಸರದಿ ಬಂದಾಗ, ಅವನು ದೊಡ್ಡ ಹೆಬ್ಬಾವನ್ನು ತಂದು ವಧುವಿನ ಕುತ್ತಿಗೆಗೆ ಹಾಕುತ್ತಾನೆ. ಈ ಮದುವೆಯಲ್ಲಿ ಪಾಲ್ಗೊಳ್ಳಲು ಅಪಾರ ಜನರು ಬಂದಿದ್ದರು. ಈ ಸುದ್ದಿಯ ವಿಶೇಷತೆ ಎಂದರೆ, ಇಬ್ಬರು ಸ್ಥಳೀಯ ವನ್ಯಜೀವಿ ಇಲಾಖೆ ನೌಕರರಾಗಿದ್ದಾರೆ. ಅವರು ರಾಜ್ಯದ ದೂರದ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಇದನ್ನೂ ಓದಿ: ನಾವು ಬೇರೆ ಭಾಷೆಯನ್ನು ಇಂಪ್ರೆಸ್ ಮಾಡೋದು ಬೇಕಿಲ್ಲ: ಸುದೀಪ್ 

    ವೀಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ಇನ್ನೂ ಕೆಲವರು ಈ ವೀಡಿಯೋ ಬಗ್ಗೆ ಕುತೂಹಲವನ್ನು ವ್ಯಕ್ತಪಡಿಸಿದ್ದು, ಇದು ಯಾವ ರೀತಿಯ ಮದುವೆ ಎಂದು ಕಾಮೆಂಟ್ ಮಾಡಿದ್ದಾರೆ.

  • ನಾಗರಹಾವಿನಿಂದ ಯಜಮಾನನ ಪ್ರಾಣ ಉಳಿಸಿ ಜೀವ ಬಿಟ್ಟ ಮುದ್ದಿನ ಶ್ವಾನ

    ನಾಗರಹಾವಿನಿಂದ ಯಜಮಾನನ ಪ್ರಾಣ ಉಳಿಸಿ ಜೀವ ಬಿಟ್ಟ ಮುದ್ದಿನ ಶ್ವಾನ

    ಕೋಲಾರ: ತನ್ನ ಯಜಮಾನನಿಗೆ ಪ್ರಾಣ ಕಂಟಕವಾಗಿದ್ದ ನಾಗರಹಾವಿನೊಂದಿಗೆ ದಿಟ್ಟತನದಿಂದ ಹೋರಾಡಿ ಹಾವನ್ನೂ ಕೊಂದು ಕೊನೆಗೆ ತನ್ನ ಪ್ರಾಣವನ್ನೂ ಸಮರ್ಪಿಸಿದ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೀರಂಡಹಳ್ಳಿಯ ಬಿಎಂಟಿಸಿ ನೌಕರ ವೆಂಕಟೇಶ್ ಅವರ ಮನೆಯಲ್ಲಿ ಸಾಕಿದ್ದ ನಾಯಿ. ಅಮೇರಿಕನ್ ಬುಲ್ ತಳಿಯ 3 ವರ್ಷದ ಹೆಣ್ಣು ಶ್ವಾನ ಇದಾಗಿದ್ದು ಮನೆಯ ಮಂದಿಯ ಅಕ್ಕರೆಯ ಮುದ್ದಿನ ಮಗುವಿನಂತಿತ್ತು. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯುದ್ದಕ್ಕೂ ಕಾಡ್ಗಿಚ್ಚು – ನೆಲಬಾಂಬ್‌ಗಳು ಸ್ಫೋಟ

    ತೋಟದ ಮನೆ ಬಳಿ ಮಾಲೀಕ ವಿಲಾಸ್ ಮೊಬೈಲ್‍ನಲ್ಲಿ ಮಾತನಾಡುತ್ತಾ ಹೊರಗೆ ಬಂದು ಮನೆಯಂಗಳದಲ್ಲಿ ಬೆಳೆದಿದ್ದ ಹಸಿರು ಹುಲ್ಲಿನ ನಡುವೆ ನಡೆದಾಡುತ್ತಿದ್ದರು. ಈ ವೇಳೆ ನಾಯಿಯೂ ಸಹ ತನ್ನ ಯಜಮಾನನ್ನು ಹಿಂಬಾಲಿಸುತ್ತಿತ್ತು. ಅಷ್ಟರಲ್ಲಿ ಹುಲ್ಲಿನ ಮರೆಯಲ್ಲಿ ಮಲಗಿದ್ದ ನಾಗರ ಹಾವೊಂದು ದಿಟ್ಟನೆ ಹೆಡೆ ಎತ್ತಿ, ಬುಸುಗುಟ್ಟಿ ನಿಂತು, ಇನ್ನೇನು ಕಚ್ಚಲು ಸಜ್ಜಾಗಿತ್ತು. ಅಪಾಯದ ಸುಳಿವು ಅರಿತ ಶ್ವಾನವು ತಕ್ಷಣವೇ ಮುನ್ನುಗ್ಗಿ ಯಜಮಾನನ ಕಾಲಿಗೆ ಅಡ್ಡ ಬಂದು ಹಾವನ್ನು ಹಿಡಿದು ಎಸೆದಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ರೋಗಿಯ ಕಣ್ಣಿಗೆ ಕಚ್ಚಿದ ಇಲಿ

    ನಾಯಿಯೂ ನಾಗರಹಾವಿನ ಕುತ್ತಿಗೆಗೆ ಬಾಯಿ ಹಾಕಿ ಕಚ್ಚಿದಾಗ ನರಳಿದ ನಾಗರ, ತನ್ನ ದೇಹವನ್ನು ಶ್ವಾನದ ಕೊರಳಿಗೆ ಸುತ್ತಿ ಬಿಗಿ ಹಿಡಿದಿದೆ. ಅಲ್ಲದೆ ಹಾವು ಅದರ ನಾಲಿಗೆ ಹಾಗೂ ಮುಖಕ್ಕೆ ಕಚ್ಚಿದೆ. ಇದರಿಂದ ಕೆರಳಿದ ಶ್ವಾನವು ನಾಗರನ ಕುತ್ತಿಗೆ ಸೀಳಿ ಕೊಂದು ಹಾಕಿದೆ. ಇದಾದ ಬಳಿಕ ಕೊರಳಿಗೆ ಸುತ್ತಿಕೊಂಡಿದ್ದ ಹಾವಿನ ಮೃತದೇಹವನ್ನು ಬಿಡಿಸಿ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಶ್ವಾನವು ಮೃತಪಟ್ಟಿದೆ.

    ಇನ್ನೂ ಮನೆ ಮಾಲೀಕನ ಜೀವ ರಕ್ಷಣೆ ಮಾಡಿದ ಮುದ್ದಿನ ಶ್ವಾನದ ಮೃತದೇಹವನ್ನು ಮನೆಯಂಗಳದ ಬದಿಯಲ್ಲಿ ಅಂತ್ಯಕ್ರಿಯೆ ಮಾಡಿ ಪೂಜಿಸಲಾಗಿದೆ.

  • ವಿವಾಹ ಸಮಾರಂಭದಲ್ಲಿ ಹಾವಿನೊಂದಿಗೇ ನೃತ್ಯ – ಮುಂದೇನಾಯ್ತು ಗೊತ್ತಾ?

    ವಿವಾಹ ಸಮಾರಂಭದಲ್ಲಿ ಹಾವಿನೊಂದಿಗೇ ನೃತ್ಯ – ಮುಂದೇನಾಯ್ತು ಗೊತ್ತಾ?

    ಭುವನೇಶ್ವರ್: ವಿವಾಹ ಸಮಾರಂಭವೊಂದರಲ್ಲಿ `ಮೈನ್ ನಾಗಿನ್ (ನಾನು ನಾಗಿಣಿ)’ ಗೀತೆಗೆ ನಿಜವಾದ ಹಾವನ್ನೇ ಹಿಡಿದು ತಂದು ನೃತ್ಯ ಮಾಡುತ್ತಿದ್ದ ಐವರು ಆರೋಪಿಗಳನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

    ಒಡಿಶಾದ ಮಯೂರ್ಬಾಹನ್‌ನ ಕರಾಂಜಿಯಾ ಸ್ಟ್ರೀಟ್‌ ನಲ್ಲಿ ನಡೆದ ವಿವಾಹ ವೇದಿಕೆಯಲ್ಲಿ ಹಾವಿನೊಂದಿಗೆ ನೃತ್ಯ ಮಾಡಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ

    Snake Venom
    ಸಾಂದರ್ಭಿಕ ಚಿತ್ರ

    ಪಟ್ಟಣದ ಬೀದಿಯಲ್ಲಿ ಪುಂಡರು ಬಿದಿರುಬುಟ್ಟಿಯಲ್ಲಿ ತಂದಿದ್ದ ಹಾವನ್ನು ಪ್ರದರ್ಶಿಸಿದ್ದಾರೆ. ಹಾವಿನೊಂದಿಗೆ ನೃತ್ಯ ಮಾಡುವುದನ್ನೂ ತೋರಿಸಿದ್ದಾರೆ. ಘಟನಾ ಸ್ಥಳದಿಂದ ಭಯಭೀತರಾದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ನಾಗರ ಹಾವನ್ನು ರಕ್ಷಿಸಿದ್ದಾರೆ.

    ಸರೀಸೃಪವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಹಾವಾಡಿಗ ಸೇರಿದಂತೆ 5 ಜನರನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1982ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ

    SNAKE
    ಸಾಂದರ್ಭಿಕ ಚಿತ್ರ

    ವೀಡಿಯೋದಲ್ಲಿ ಹೆಚ್ಚಿನ ಡೆಸಿಬಲ್ ಸಂಗೀತದಿಂದ ಹಾವು ಭಯಗೊಂಡಂತೆ ಕಂಡುಬಂದಿದೆ. ನೃತ್ಯ ಮಾಡುವುದಕ್ಕೂ ಮುನ್ನ ಹಾವಿನ ವಿಷಪೂರಿತ ಹಲ್ಲುಗಳನ್ನು ತೆಗೆದಿದ್ದು, ಇದು ಕಾನೂನುಬಾಹಿರವಾಗಿದೆ. ಇಂತಹ ಹೇಯ ಕೃತ್ಯಕ್ಕೆ ಅವಕಾಶ ನೀಡಿದ ವರ ಮತ್ತು ಅವರ ತಂದೆಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ಸ್ನೇಕ್ ಸಹಾಯವಾಣಿ ಸಂಚಾಲಕ ಸುವೆಂದು ಮಲ್ಲಿಕ್ ಹೇಳಿದ್ದಾರೆ.

  • ಗುಡಿಸಲಿನಲ್ಲಿ ಮಲಗಿದ್ದ ಬಾಲಕಿಗೆ  ಹಾವು ಕಚ್ಚಿ ಸಾವು

    ಗುಡಿಸಲಿನಲ್ಲಿ ಮಲಗಿದ್ದ ಬಾಲಕಿಗೆ ಹಾವು ಕಚ್ಚಿ ಸಾವು

    ಹಾವೇರಿ: ಹಾವು ಕಡಿದು ಅಲೆಮಾರಿ ಜನಾಂಗದ ಐದು ವರ್ಷದ ಬಾಲಕಿ ಮೃತಪಟ್ಟ ಘಟನೆ ಹಾವೇರಿಯ ನಾಗೇಂದ್ರಮಟ್ಟಿಯ ಹೊರವಲಯದಲ್ಲಿರೋ ಟೆಂಟ್ ನಲ್ಲಿ ನಡೆದಿದೆ.

    ಒಲಿವ್ವ ಸುಂಕಣ್ಣ ಮೋತಿ (5) ಮೃತ ಬಾಲಕಿ. ಗುಡಿಸಲಿನಲ್ಲಿ ಮಲಗಿದ್ದ ಒಲಿವ್ವ ಸುಂಕಣ್ಣ ಮೋತಿಗೆ ಭಾನುವಾರ ಬೆಳಿಗ್ಗೆ 3 ಗಂಟೆ ಸುಮಾರಿಗೆ ವಿಷಪೂರಿತ ಹಾವು ಕಡಿದಿದೆ. ಹಾವು ಕಡಿದಿರುವ ವಿಷಯ ಪಾಲಕರಿಗೆ ಬೆಳಿಗ್ಗೆ 4ಗಂಟೆಗೆ ಗೊತ್ತಾದ ತಕ್ಷಣ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.

    ಒಲಿವ್ವ ಗುಡಿಸಲಿನಲ್ಲಿ ನಿದ್ದೆಮಾಡುತ್ತಿದ್ದ ವೇಳೆ ಹಾವು ಕಡಿದು ಮೃತಪಟ್ಟಿದ್ದು, ಪುತ್ರಿಯನ್ನು ಕಳೆದುಕೊಂಡ ಅಲೆಮಾರಿ ಪಾಲಕರು ತೀವ್ರ ದುಖಿಃತರಾಗಿದ್ದಾರೆ. ಗುಡಿಸಲಿಗೆ ಬಾಲಕಿಯ ಶವವನ್ನು ತಗೆದುಕೊಂಡು ಬಂದಿರುವ ಅಲಮಾರಿಳ ದುಖಃದ ಕಟ್ಟೆ ಒಡೆದಿದೆ. ಇದನ್ನೂ ಓದಿ: ಕೆಲವು ಶಾಲೆಯಲ್ಲಿ ಹಿಜಬ್ ಯೂನಿಫಾರ್ಮ್ ಇದೆ, ಪರೀಕ್ಷೆಯಲ್ಲಿ ಹೇಗೆ ಮಾನಿಟರ್ ಮಾಡ್ತೀರಾ?: ದಿನೇಶ್ ಗುಂಡೂರಾವ್

    ಅಲೆಮಾರಿ ಬುಡುಗಜಂಗಮರ ಗುಡಿಸಲಿಗಳಿಲ್ಲ ಮೂಲಸೌಲಭ್ಯ, ಹಾವು ಕಡಿದು ಮೂರು ಜನರು ಸಾವನ್ನಪ್ಪಿದ್ದಾರೆ. ಈಗಾಗಲೇ ಮೂವರು ಹಾವು ಕಡಿದು ಸಾವನ್ನಪ್ಪಿದ್ದಾರೆ. ಈಗಲಾದರೂ ಸರ್ಕಾರ, ಜಿಲ್ಲಾಡಳಿತ ಎಚ್ಚೆತ್ತು ಅಲೆಮಾರಿ ಬುಡುಗಜಂಗಮ ಗುಡಿಸಲುವಸಿಗಳಿಗೆ ಮನೆ ನಿರ್ಮಿಸಿಕಡಬೇಕು. ಮೃತಪಟ್ಟಿರುವ ಬಾಲಕಿಯ ಕುಟುಂಬದವರಿಗೆ ಸೂಕ್ತಪರಿಹಾರ ಕೊಡಬೇಕೆಂದು ಶೆಟ್ಟಿ ವಿಭೂತಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

  • ಅಡುಗೆ ಮಾಡುವಾಗ ಹಾವು ಕಚ್ಚಿ ಮಹಿಳೆ ಸಾವು

    ಅಡುಗೆ ಮಾಡುವಾಗ ಹಾವು ಕಚ್ಚಿ ಮಹಿಳೆ ಸಾವು

    ಶಿವಮೊಗ್ಗ: ಅಡುಗೆ ಮಾಡುವಾಗ ಹಾವು ಕಚ್ಚಿ ಗೃಹಿಣಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಮೇಲಿಗೆಬೆಸಿಗೆ ಗ್ರಾಮದಲ್ಲಿ ನಡೆದಿದೆ.

    ಸೌಮ್ಯ (24) ಮೃತಪಟ್ಟ ಗೃಹಿಣಿ. ಸೌಮ್ಯ ಅಡುಗೆ ಮಾಡಲು ಅಡುಗೆ ಮನೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ವಿಷಕಾರಿ ಹಾವು ಸೌಮ್ಯ ಕಾಲಿಗೆ ಕಚ್ಚಿದೆ. ಆದರೆ ಹಾವು ಕಚ್ಚಿರುವುದು ಸೌಮ್ಯಗೆ ತಿಳಿದಿಲ್ಲ. ಸ್ವಲ್ಪ ಸಮಯದ ಬಳಿಕ ಕಾಲಿನಲ್ಲಿ ಊತ ಕಾಣಿಸಿಕೊಂಡು ತೀವ್ರ ನೋವು ಉಂಟಾಗಿದೆ. ಹಾವು ಕಚ್ಚಿರುವ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಹೊಸನಗರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ದೊಡ್ಡಪ್ಪನಿಂದ್ಲೇ ಕಂದಮ್ಮನ ಮೇಲೆ ಅತ್ಯಾಚಾರ- ತೀವ್ರ ರಕ್ತಸ್ರಾವದಿಂದ 2 ವರ್ಷದ ಬಾಲೆ ಸಾವು

    ಹೊಸನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸೌಮ್ಯ ಮೃತಪಟ್ಟಿದ್ದಾರೆ. ಸೌಮ್ಯ ನಾಲ್ಕು ವರ್ಷದ ಹಿಂದೆ ನಾಗರಾಜ್ ಎಂಬವರ ಜೊತೆ ವಿವಾಹವಾಗಿದ್ದರು. ಈ ದಂಪತಿಗೆ ಮೂರು ವರ್ಷದ ಗಂಡು ಮಗವಿತ್ತು. ಘಟನೆ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡ್ತಿದ್ದ ಒಂಟಿ ಕಳ್ಳಿ ಅರೆಸ್ಟ್

  • ಉಕ್ರೇನ್‍ನಿಂದ ಮರಳಿ ಬಂದ ವಿದ್ಯಾರ್ಥಿಯಿಂದ ಸಮಾಜಸೇವೆ

    ಉಕ್ರೇನ್‍ನಿಂದ ಮರಳಿ ಬಂದ ವಿದ್ಯಾರ್ಥಿಯಿಂದ ಸಮಾಜಸೇವೆ

    ರಾಯಚೂರು: ಉಕ್ರೇನ್‍ನಲ್ಲಿ ನಾನಾ ಕಷ್ಟ ಎದುರಿಸಿ ದೇಶಕ್ಕೆ ಮರಳಿ ಬಂದ ವಿದ್ಯಾರ್ಥಿ ಈಗ ಸಮಾಜ ಸೇವೆಗೆ ಮುಂದಾಗಿದ್ದಾನೆ.

    ಬಿಸಿಲನಾಡು ರಾಯಚೂರಿನ ಮೆಡಿಕಲ್ ವಿದ್ಯಾರ್ಥಿ ಮೊಹಮ್ಮದ್ ಅಸರ್ ಹುಸೇನ್, ಉಕ್ರೇನ್ ರಷ್ಯಾ ಯುದ್ದ ಹಿನ್ನೆಲೆ ಮೈನಸ್ 10 ಡಿಗ್ರಿಯಲ್ಲಿ ಗಂಟೆಗಟ್ಟಲೆ ಕಾದು ಉಕ್ರೇನ್ ಗಡಿದಾಟಿ ಭಾರತಕ್ಕೆ ಬಂದಿದ್ದಾನೆ. ರಾಯಚೂರಿಗೆ ಬಂದ ವಿದ್ಯಾರ್ಥಿ ಈಗ ಸಮಾಜಸೇವೆ ಮಡಲು ಮುಂದಾಗಿದ್ದಾನೆ.

    ಹಾವುಗಳ ರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಹಾವಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾನೆ. ತಂದೆ ಉರಗತಜ್ಞ ಅಫ್ಸರ್ ಹುಸೇನ್ ಕಳೆದ 32 ವರ್ಷಗಳಿಂದ ಹಾವುಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ತಂದೆಯಿಂದ ವಿವಿಧ ಬಗೆಯ ಹಾವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಅಸರ್ ಹುಸೇನ್ ಈಗ ತಾನೂ ಸಹ ಹಾವುಗಳ ರಕ್ಷಣೆ ಕೆಲಸ ಮಾಡುತ್ತಿದ್ದಾನೆ. ಯಾರೇ ಫೋನ್ ಕರೆ ಮಾಡಿದರು ಅವರ ಮನೆ, ಕಚೇರಿಗೆ ತೆರಳಿ ಹಾವುಗಳ ಹಿಡಿದು ಕಾಡಿಗೆ ಬಿಡುವ ಕೆಲಸಕ್ಕೆ ಮುಂದಾಗಿದ್ದಾನೆ. ಇದನ್ನೂ ಓದಿ: 3ನೇ ತರಗತಿ ಬಾಲಕಿಯ ಬಟ್ಟೆ ಬಿಚ್ಚಿ ಅತ್ಯಾಚಾರಗೈದ ಪ್ರಿನ್ಸಿಪಾಲ್!

    ಉಕ್ರೇನ್‍ನ ಇವ್ಯಾನೋ ಫ್ರಾನ್ಸಿವಿಸ್ಕ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಮೊದಲ ವರ್ಷದ ಎಂಬಿಬಿಎಸ್ ಓದುತ್ತಿದ್ದ ಅಸರ್ ಹುಸೇನ್ ದೇಶಕ್ಕೆ ಮರಳಿರುವುದರಿಂದ ಮುಂದಿನ ಓದಿನ ಬಗ್ಗೆ ಗೊಂದಲದಲ್ಲಿದ್ದಾನೆ. ತಾನು ಸುರಕ್ಷಿತವಾಗಿ ಬಂದ ಹಾಗೇ ಉಳಿದ ವಿದ್ಯಾರ್ಥಿಗಳನ್ನು ಕರೆತರಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.

    ಅಸರ್ ಇದ್ದ ಸ್ಥಳದಿಂದ ಕೇವಲ 10 ಕಿ.ಮೀ ದೂರದಲ್ಲಿ ರಷ್ಯಾ ದಾಳಿ ಜೋರಾಗಿತ್ತು. ಸ್ಫೋಟದ ಶಬ್ಧಕ್ಕೆ ಹೆದರಿ ಬಂಕರ್‍ಗೆ ಓಡುತ್ತಿದ್ದದ್ದನ್ನ ನೆನೆದು ಇನ್ನೂ ಉಳಿದವರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾನೆ. ಉಕ್ರೇನ್ ಗಡಿಯಲ್ಲಿ ಕುಡಿಯಲು ಊಟ, ನೀರು ಸಿಗದೆ ಕಷ್ಟ ಅನುಭವಿಸಿದ್ದು. ಗಡಿಗೆ ತಲುಪಲು 18 ಕಿ.ಮೀ ನಡೆದುಕೊಂಡೆ ಹೋದ ಅನುಭವ ಹಂಚಿಕೊಂಡಿದ್ದಾನೆ. ಇನ್ನೂ ಮಗ ಮನೆಗೆ ಸುರಕ್ಷಿತವಾಗಿ ಬಂದಿರುವುದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು. ತಂದೆ ಉರಗತಜ್ಞ ತಮ್ಮ ಜೊತೆಯೆ ಮಗನನ್ನು ಹಾವುಗಳ ರಕ್ಷಣಾ ಕಾರ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಇದು: ಸಿದ್ದು ಕಿಡಿ

    ಒಟ್ಟಿನಲ್ಲಿ, ಯುದ್ದ ಭೂಮಿಯಿಂದ ಜೀವ ಉಳಿಸಿಕೊಂಡು ಬಂದವನು ಈಗ ಹಾವುಗಳ ರಕ್ಷಣೆ ಹಾಗೂ ಹಾವುಗಳಿಂದ ಜನರ ರಕ್ಷಣೆಗೆ ಮುಂದಾಗಿದ್ದಾನೆ.

  • 25 ವರ್ಷಗಳಿಂದ ನಾವೇ ಆಹಾರ ನೀಡಿದ ಹಾವು, ಈಗ ನಮ್ಮನ್ನೇ ಕುಕ್ಕುತ್ತಿದೆ: ಉದ್ಧವ್ ಠಾಕ್ರೆ

    25 ವರ್ಷಗಳಿಂದ ನಾವೇ ಆಹಾರ ನೀಡಿದ ಹಾವು, ಈಗ ನಮ್ಮನ್ನೇ ಕುಕ್ಕುತ್ತಿದೆ: ಉದ್ಧವ್ ಠಾಕ್ರೆ

    ಮುಂಬೈ: ನಾವು 25 ವರ್ಷಗಳ ಕಾಲ ಹಾವಿಗೆ ಆಹಾರ ನೀಡಿದ್ದೇವೆ. ಈಗ ಅದೇ ಹಾವು ನಮ್ಮನ್ನು ಕುಕ್ಕುತ್ತಿದೆ. ಆದರೆ ಈ ಹಾವನ್ನು ಹೇಗೆ ತುಳಿಯಬೇಕೆಂದು ನಮಗೆ ತಿಳಿದಿದೆ. ನಮ್ಮ ಮೇಲೆ ಆರೋಪ ಹೊರಿಸುವವರ ವಿರುದ್ಧ ತಲೆ ಎತ್ತಲು ನಾವು ಸಿದ್ಧರಿದ್ದೇವೆ ಎಂದು ಬಿಜೆಪಿ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕಿಡಿಕಾರಿದ್ದಾರೆ.

    ರಾಜ್ಯ ಬಜೆಟ್ ಅಧಿವೇಶನಕ್ಕೂ ಮುನ್ನ ಮುಂಬೈನಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಶಾಸಕರು ಮತ್ತು ಮುಖಂಡರ ಜಂಟಿ ಸಭೆ ನಡೆಸಿದ ಉದ್ಧವ್ ಠಾಕ್ರೆ ಅವರು ಈ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನೂ ಈ ಸಭೆಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‍ಸಿಪಿ) ಮುಖ್ಯಸ್ಥ ಶರದ್ ಪವಾರ್ ಕೂಡ ಉಪಸ್ಥಿತರಿದ್ದರು. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

     

    ಕಳೆದ ಬಾರಿ ಬೆನ್ನುಹುರಿಯ ಶಸ್ತ್ರಚಿಕಿತ್ಸೆಯ ನಂತರ ಆರೋಗ್ಯ ಸಮಸ್ಯೆಗಳ ಕಾರಣ ಅಧಿವೇಶನದಲ್ಲಿ ಉದ್ಧವ್ ಠಾಕ್ರೆ ಅವರು ಪಾಲ್ಗೊಂಡಿರಲಿಲ್ಲ. ಆದರೆ ಈ ಬಾರಿ ಬಜೆಟ್ ಅಧಿವೇಶನದಲ್ಲಿ ಶೇ.100ರಷ್ಟು ಕಡ್ಡಾಯವಾಗಿ ಹಾಜರಾಗಬೇಕು ಎಂದು ಶಾಸಕರಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನಾನು ಮತ್ತೆ ಅಧ್ಯಕ್ಷನಾಗಿದ್ದರೆ ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಿರಲಿಲ್ಲ: ಟ್ರಂಪ್‌

    ಇದೇ ವೇಳೆ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿರುವುದನ್ನು ಉಲ್ಲೇಖಿಸಿ ನನ್ನ ರಾಜಕೀಯ ಜೀವನದಲ್ಲಿ ಇಂತಹ ಪ್ರತೀಕಾರದ ಕೇಂದ್ರ ಸರ್ಕಾರವನ್ನು ನಾನು ಎಂದಿಗೂ ನೋಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ನವಾಬ್ ಮಲಿಕ್ ಬಂಧನದ ಬಳಿಕ ಮಮತಾ ಬ್ಯಾನರ್ಜಿ ಅವರು ತಮಗೆ ಕರೆ ಮಾಡಿ ತಮ್ಮ ಪಕ್ಷದ ನಾಲ್ವರು ಸಹೋದ್ಯೋಗಿಗಳನ್ನು ಜೈಲಿಗೆ ಹಾಕಿದ್ದು, ಈ ವಿಚಾರವಾಗಿ ಎಲ್ಲರೂ ಹೋರಾಡಲು ಒಂದಾಗಬೇಕು. ಇದರಿಂದ ಬಿಜೆಪಿ ಅವರನ್ನು ಸೋಲಿಸಬಹುದು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

  • ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು – ಮಹಿಳೆ ಸಾವು

    ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು – ಮಹಿಳೆ ಸಾವು

    ಶಿವಮೊಗ್ಗ: ರಸ್ತೆಯಲ್ಲಿ ಅಡ್ಡಲಾಗಿ ಬಂದ ಹಾವು ತಪ್ಪಿಸಲು ಹೋಗಿ ಕಾರೊಂದು ತುಂಗಾ ನಾಲೆಗೆ ಬಿದ್ದಿದ್ದು, ಕಾರಿನಲ್ಲಿದ್ದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ಬೆಳಗಿನ ಜಾವ ನಡೆದಿದೆ.

    ಸುಷ್ಮಾ (28) ಮೃತ ದುರ್ದೈವಿ. ಚಾಲಕ ಚೇತನ್ ಕುಮಾರ್‌ ಅವರು ತನ್ನ ತಾಯಿಯ ಅನಾರೋಗ್ಯದ ಹಿನ್ನೆಲೆ ಗಾಜನೂರಿನಿಂದ ತುಮಕೂರಿಗೆ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಅಡ್ಡಲಾಗಿ ಹಾವು ಬಂದ ಪರಿಣಾಮ ಕಾರಿನ ಬ್ರೇಕ್ ಹಾಕಿದ್ದಾರೆ. ಕಾರು ನಿಯಂತ್ರಣಕ್ಕೆ ಸಿಗದೇ ತುಂಗಾ ನಾಲೆಗೆ ಪಲ್ಟಿಯಾಗಿ ಬಿದ್ದಿದೆ. ಈ ಸಂದರ್ಭದಲ್ಲಿ ಚಾಲಕ ಕಾರು ನಾಲೆಗೆ ಪಲ್ಟಿಯಾಗುತ್ತಿದ್ದಂತೆ ಸ್ಥಳೀಯ ಜನರನ್ನು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಇದನ್ನೂ ಓದಿ: ತೈಲ ಖರೀದಿಸಲು ಶ್ರೀಲಂಕಾಗೆ 3 ಸಾವಿರ ಕೋಟಿ ಸಾಲ ನೀಡಿದ ಭಾರತ

    ಜನರು ಬೆಳಗಿನ ಜಾವ ಆಗಿದ್ದರಿಂದ ಸಹಾಯಕ್ಕಾಗಿ ಯಾರೂ ಬಂದಿರಲಿಲ್ಲ. ಮುಂಜಾನೆ ಜನರು ಸ್ಥಳಕ್ಕೆ ಹೋಗಿ ಸಹಾಯ ಮಾಡುವಷ್ಟರಲ್ಲಿ ಚೇತನ್ ಕುಮಾರ್ ಅವರ ಪತ್ನಿ ಸುಷ್ಮಾ ಸಾವನ್ನಪ್ಪಿದ್ದಾರೆ. ಸ್ಥಳೀಯರು ಚಾಲಕ ಚೇತನ್‍ರವರನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸಿದ್ದಾರೆ. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

    ಘಟನೆ ಕುರಿತು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನಾಲೆಯಲ್ಲಿ ಬಿದ್ದಿದ್ದ ಕಾರನ್ನು ಮೇಲಕ್ಕೆ ಎತ್ತಿಸಿದ್ದಾರೆ.

  • ಹಾವು ಹಾವನ್ನು ನುಂಗಿತ್ತಾ!

    ಹಾವು ಹಾವನ್ನು ನುಂಗಿತ್ತಾ!

    ತುಮಕೂರು: ಹಾವು ಇನ್ನೊಂದು ಹಾವನ್ನು ನುಂಗಿರುವುದನ್ನು ಕೇಳಿರುವುದು, ನೋಡಿರುವುದು ತುಂಬಾ ಕಡಿಮೆ. ಆದರೆ ಅಂತಹ ಅಪರೂಪದ ಘಟನೆ ತುಮಕೂರಿನಲ್ಲಿ ನಡೆದಿದ್ದು, ಹಾವನ್ನೇ ಇನ್ನೊಂದು ಹಾವು ನುಂಗಿದೆ.

    ತುಮಕೂರು ನಗರದ ಶಿರಾ ರಸ್ತೆಯ ಲಿಂಗಾಪುರ ಸರ್ವೀಸ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಸುಮಾರು ಮೂರು ಅಡಿ ಉದ್ದದ ನಾಗರಹಾವು ನಾಲ್ಕು ಅಡಿ ಉದ್ದದ ಜೋರು ಪೋತ ಎನ್ನುವ ಹಾವನ್ನು ನುಂಗಿದ ಘಟನೆ ನಡೆದಿದೆ. ಇದನ್ನೂ ಓದಿ: ಮೇಕೆದಾಟು ಯೋಜನೆ ಸ್ಥಗಿತಗೊಂಡ್ರೆ ಕಾಂಗ್ರೆಸ್ ಪಕ್ಷದವರೇ ನೇರ ಹೊಣೆ: ಭೈರತಿ ಬಸವರಾಜ್

    ವಿಷಯ ತಿಳಿದು ಸ್ಥಳಕ್ಕೆ ತಕ್ಷಣ ವಾರಂಗಲ್ ಸಂಸ್ಥೆಯ ದಿಲೀಪ್ ಬಂದಿದ್ದಾರೆ. ಎರಡು ಹಾವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ನಂತರ ಎರಡೂ ಹಾವುಗಳನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಅಪರೂಪದ ದೃಶ್ಯ ನೋಡಿದ ಗ್ರಾಮಸ್ಥರು ಅಚ್ಚರಿಗೊಂಡಿದ್ದು, ಏನಿದು ವಿಚಿತ್ರ ಎಂಬ ರೀತಿಯಲ್ಲಿ ಜನರು ಬೆರಗಾಗಿ ಈ ದೃಶ್ಯವನ್ನು ವೀಕ್ಷಿಸುತ್ತಿದ್ದರು.

  • ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಹಾವು ಕೊಂದ ಇಂಜಿನಿಯರ್ ವಿರುದ್ಧ ದೂರು ದಾಖಲು

    ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಹಾವು ಕೊಂದ ಇಂಜಿನಿಯರ್ ವಿರುದ್ಧ ದೂರು ದಾಖಲು

    -ಸ್ಮಾರ್ಟ್ ಸಿಟಿ ಇಂಜಿನಿಯರ್ ವಿರುದ್ದ ಅರಣ್ಯ ಇಲಾಖೆಯಲ್ಲಿ ದೂರು

    ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ವೇಳೆ ನಾಗರ ಹಾವನ್ನು ಕೊಂದು ಹಾಕಲಾಗಿದೆ ಎಂದು ಆರೋಪಿಸಿ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿರುದ್ಧ ದೂರು ದಾಖಲಾಗಿದೆ.

    ಡಿಸೆಂಬರ್ 4ರಂದು ಶಿವಮೊಗ್ಗದ ಸಾಗರ ರಸ್ತೆಯ ಎಪಿಎಂಸಿ ಮಾರುಕಟ್ಟೆ ಮುಂಭಾಗ ಆಂಜನೇಯ ದೇವಸ್ಥಾನವನ್ನು ಜೆಸಿಬಿಯಿಂದ ನೆಲಸಮ ಮಾಡಲಾಗಿತ್ತು. ಆಂಜನೇಯ ದೇವಸ್ಥಾನ ತೆರವು ಮಾಡುವ ವೇಳೆ ಹಾವೊಂದು ಪ್ರತ್ಯಕ್ಷವಾಗಿತ್ತು. ಈ ವೇಳೆ ಹಾವು ದೇವಸ್ಥಾನ ತೆರವಿಗೆ ಅಡ್ಡಿಪಡಿಸಿದೆ. ನಂತರ ಜೆಸಿಬಿಯಿಂದ ಹಾವನ್ನು ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಪತ್ನಿಯನ್ನು ಹತೈಗೈದ ಪತಿಗೆ ಜೀವಾವಧಿ ಶಿಕ್ಷೆ – ಎರಡು ಲಕ್ಷ ದಂಡ

    ದೇವಸ್ಥಾನ ತೆರವು ಮಾಡಿದ ನಂತರ ಅಂದೇ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಹಾವನ್ನು ಸ್ಮಾರ್ಟ್ ಸಿಟಿ ಯೋಜನೆಯವರು ಕೊಂದಿದ್ದಾರೆ ಎಂದು ಪಾಲಿಕೆಯ ಸದಸ್ಯ ರಾಹುಲ್ ಬಿದರೆ, ಆಲ್ಕೊಳದ ಶಂಕರ್ ವಲಯದ ಅರಣ್ಯಾಧಿಕಾರಿಗಳಿಗೆ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿಜಯ ಕುಮಾರ್ ವಿರುದ್ಧ ಹಾವು ಕೊಂದಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ – ವೀಡಿಯೋ ವೈರಲ್