Tag: snake specialist

  • ಶೌಚಾಲಯದಲ್ಲಿ ಕಾಳಿಂಗ ಸರ್ಪ: ಕಕ್ಕಾಬಿಕ್ಕಿಯಾದ ಮನೆ ಮಾಲೀಕ

    ಶೌಚಾಲಯದಲ್ಲಿ ಕಾಳಿಂಗ ಸರ್ಪ: ಕಕ್ಕಾಬಿಕ್ಕಿಯಾದ ಮನೆ ಮಾಲೀಕ

    ಬೆಂಗಳೂರು: ಶೌಚಾಲಯದ ಸೀಟ್ ಒಳಗಡೆ ಕಾಳಿಂಗ ಸರ್ಪ ಕಂಡು ಮನೆ ಮಾಲೀಕ ಕಕ್ಕಾಬಿಕ್ಕಿಯಾಗಿದ್ದು, ತಕ್ಷಣ ಬಿಬಿಎಂಪಿಯ ಉರಗ ತಜ್ಞರಿಗೆ ಕರೆ ಮಾಡಿ ವಿಷಯ ತಿಳಿಸಿ, ಹಾವನ್ನು ರಕ್ಷಿಸಲಾಗಿದೆ.

    ಜೂನ್ 9ರಂದು ಬೆಳಗ್ಗೆ ಶೌಚಾಲಯಕ್ಕೆ ತೆರಳಿದಾಗ ಸುಮಾರು 5 ಅಡಿ ಉದ್ದದ ಕಾಳಿಂಗ ಸರ್ಪ ಶೌಚಾಲಯದ ಶೀಟ್‍ನ ಬೌಲ್ ಒಳಗಡೆ ಸುತ್ತಿಕೊಂಡಿರುವುದು ಕಂಡಿದೆ. ಹಾವು ಕಂಡ ಜೆಪಿ ನಗರ 7ನೇ ಹಂತದ ನಿವಾಸಿ ಪ್ರಮೋದ್ ಕುಮಾರ್ ಗಾಬರಿಯಾಗಿದ್ದು, ತಕ್ಷಣವೇ ಬಿಬಿಎಂಪಿಯ ಉರಗ ತಜ್ಞರ ಸ್ವಯಂ ಸೇವಕ ತಂಡಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಉರಗ ತಜ್ಞ ರಾಜೇಶ್ ಕುಮಾರ್ ಕಾಳಿಂಗವನ್ನು ರಕ್ಷಿಸಿದ್ದಾರೆ.

    ಬಿಬಿಎಂಪಿ ಉರಗ ತಜ್ಞರಿಗೆ ಕರೆ ಮಾಡುವುದಕ್ಕೂ ಮೊದಲು ಪ್ರಮೋದ್ ಕುಮಾರ್ ಅವರು ವಿವಿಧ ಸಲಕರಣೆಗಳ ಮೂಲಕ ಕಾಳಿಂಗ ಸರ್ಪವನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಆದರೆ, ಹೊರತೆಗೆಯಲು ಸಾಧ್ಯವಾಗದ್ದರಿಂದ ಬಿಬಿಎಂಪಿಯ ಉರಗ ತಜ್ಞರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    https://www.facebook.com/InTheKnowPresentsAOL/videos/2369515699989782/?v=2369515699989782

    ರಕ್ಷಿಸಲಾದ ಕಾಳಿಂಗವನ್ನು ಉರಗ ತಜ್ಞರು ವನ್ಯ ಜೀವಿಗಳ ತಾಣಕ್ಕೆ ಬಿಟ್ಟಿದ್ದಾರೆ. ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪಗಳು ಭೇಟೆ ಸಿಗದ ಕಾರಣ ಕಚ್ಚಿ ವಿಷವನ್ನು ಹೊರಸೂಸುವ ಮೂಲಕ ತಮ್ಮ ಆಕ್ರೋಶವನ್ನು ತೀರಿಸಿಕೊಳ್ಳುತ್ತವೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸ್ಕೂಟಿಯಲ್ಲಿ ನಾಗರಹಾವು ಪ್ರತ್ಯಕ್ಷ – ಬಿಡಿ ಭಾಗವನ್ನು ತೆಗೆದು ಕೊನೆಗೂ ಹಿಡಿದ್ರು : ವಿಡಿಯೋ

    ಸ್ಕೂಟಿಯಲ್ಲಿ ನಾಗರಹಾವು ಪ್ರತ್ಯಕ್ಷ – ಬಿಡಿ ಭಾಗವನ್ನು ತೆಗೆದು ಕೊನೆಗೂ ಹಿಡಿದ್ರು : ವಿಡಿಯೋ

    ಕೋಲಾರ: ಮನೆ ಬಳಿ ನಿಲ್ಲಿಸಿದ್ದ ಸ್ಕೂಟಿಯೊಂದರಲ್ಲಿ ನಾಗರ ಹಾವೊಂದು ಸೇರಿಕೊಂಡು ಜನರನ್ನು ಗಾಬರಿಗೊಳಿಸಿದ ಘಟನೆ ಜಿಲ್ಲೆಯ ಬಂಗಾರಪೇಟೆಯ ಶಾಂತಿ ನಗರದಲ್ಲಿ ನಡೆದಿದೆ.

    ಜಿಲ್ಲೆಯ ಬಂಗಾರಪೇಟೆ ಶಾಂತಿ ನಗರದ ನಿವಾಸಿ ಶಿವಾರೆಡ್ಡಿ ಎಂಬವರ ಸ್ಕೂಟಿಯಲ್ಲಿ ಬೃಹತ್ ಗಾತ್ರದ ನಾಗರ ಹಾವೊಂದು ಪತ್ತೆಯಾಗಿದೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಶಿವಾರೆಡ್ಡಿಯವರು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಕೂಟಿ ಬಳಿ ಹೋದಾಗ ಏನೋ ಸದ್ದು ಬರುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಸೂಕ್ಷ್ಮವಾಗಿ ಆಲಿಸಿ ಕೇಳಿದಾಗ ಹಾವು ಬುಸುಗುಡುತ್ತಿದ್ದ ಸದ್ದು ಬಂದಿದೆ. ಆಗ ಸ್ಕೂಟಿಯಲ್ಲಿ ಹಾವು ಸೇರಿಕೊಂಡಿರುವುದು ಖಚಿತವಾದ ಕೂಡಲೇ ಉರಗ ತಜ್ಞರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಪಲವತಿಮ್ಮನಹಳ್ಳಿಯ ಉರಗ ತಜ್ಞ ನದೀಮ್ ಅವರು ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಕೊನೆಗೆ ಸ್ಕೂಟಿಯ ಬಿಡಿ ಭಾಗಗಳನ್ನು ತೆಗೆದು ಒಳಗಡೆ ಅಡಗಿದ್ದ ನಾಗರ ಹಾವನ್ನು ಹೊರತೆಗೆದಿದ್ದಾರೆ. ಈ ವೇಳೆ ಬುಸುಗುಡುತ್ತ ಹಿಡಿಯಲು ಬಂದಿದ್ದ ಉರಗ ತಜ್ಞರನ್ನೇ ಹೆದರಿಸಲು ನಾಗರ ಹಾವು ಪ್ರಯತ್ನಿಸಿದೆ.

    ಹಾವು ಬುಸುಗುಡುತ್ತಿದ್ದರೂ ಧೈರ್ಯ ಮಾಡಿ ಬಹಳ ಕಷ್ಟಪಟ್ಟು ನದೀಮ್ ಅವರು ನಾಗರ ಹಾವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸುರಕ್ಷಿತವಾಗಿ ಹಾವನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ. ನಾಗರ ಹಾವನ್ನು ನೋಡಲು ಕೆಲಕಾಲ ಸ್ಥಳದಲ್ಲಿ ಜನರು ಮುಗಿಬಿದ್ದು ನಿಂತಿದ್ದರು.

    https://www.youtube.com/watch?v=6LmpsAxY6ls

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೊಂಟಕ್ಕೆ ಹಗ್ಗ, ಕೈಯಲ್ಲಿ ರಾಡ್ ಹಿಡಿದು ಪ್ರಾಣ ಪಣಕ್ಕಿಟ್ಟು 40 ಅಡಿ ಬಾವಿಯಲ್ಲಿದ್ದ ನಾಗರ ಹಾವಿನ ರಕ್ಷಣೆ

    ಸೊಂಟಕ್ಕೆ ಹಗ್ಗ, ಕೈಯಲ್ಲಿ ರಾಡ್ ಹಿಡಿದು ಪ್ರಾಣ ಪಣಕ್ಕಿಟ್ಟು 40 ಅಡಿ ಬಾವಿಯಲ್ಲಿದ್ದ ನಾಗರ ಹಾವಿನ ರಕ್ಷಣೆ

    ಉಡುಪಿ: ಮನುಷ್ಯ ಮನುಷ್ಯರಿಗೆ ಸಹಾಯ ಮಾಡುವುದು ಕಷ್ಟ. ಆದರೆ ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಾಗರಹಾವನ್ನು ರಕ್ಷಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

    ಆತ್ರಾಡಿಯ ಶ್ರೀನಿವಾಸ ಆಚಾರ್ಯ ಎಂಬವರ ಮನೆಯ ಬಳಿ ಇರುವ 40 ಅಡಿ ಬಾವಿಗೆ ತಿಂಗಳ ಹಿಂದೆ ನಾಗರಹಾವೊಂದು ಬಿದ್ದಿತ್ತು. ಬೆಳಗ್ಗೆ ನೀರು ಸೇದುವಾಗ ಹಾವು ಕಾಣಿಸಿಕೊಳ್ಳುತ್ತಿತ್ತು. ಹಾವು ಬಾವಿಯಿಂದ ಹೊರ ಹೋಗಬಹುದು ಎಂದು ಕಾದು ಕಾದು ಸುಸ್ತಾದ ಮನೆಯವರು ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಮಾಹಿತಿ ನೀಡಿ ಕರೆಸಿದ್ದಾರೆ.

    ಮಾಹಿತಿ ತಿಳಿದು ಇಂದು ಸ್ಥಳಕ್ಕೆ ಬಂದು ಸನಿಲ್ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು, ಒಂದು ಕೈಯ್ಯಲ್ಲಿ ಹಗ್ಗ, ಮತ್ತೊಂದು ಕೈಯ್ಯಲ್ಲಿ ಕಬ್ಬಿಣದ ಸ್ಟಿಕ್ ಹಿಡಿದು ಬಾವಿಗೆ ಇಳಿದ್ದಾರೆ. ಈ ವೇಳೆ ನೀರಿನಲ್ಲಿ ಈಜಾಡುತ್ತಾ ಹೆಡೆಯೆತ್ತಿ ಬುಸುಗುಡುತ್ತಿದ್ದ ಹಾವನ್ನು ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಈ ವೇಳೆ ಹಾವು ಮೂರು ನಾಲ್ಕು ಬಾರಿ ಗುರುರಾಜ್ ಸನಿಲ್ ಅವರಿಗೆ ಕಚ್ಚಲು ಮುಂದಾಗಿದೆ. ಯಾವುದನ್ನು ಲೆಕ್ಕಿಸದ ಗುರುರಾಜ್ ಕೊನೆಗೂ ಹಾವನ್ನು ಬಾವಿಯಿಂದ ರಕ್ಷಣೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಗುರುರಾಜ್ ಸನಿಲ್ ಅವರು ಇದುವರೆಗೂ ಮೂವತ್ತು ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಹಾವಿನ ರಕ್ಷಣೆ ನಂತರ ತಮ್ಮ ಅನುಭವವನ್ನು ಹಂಚಿಕೊಂಡ ಅವರು ಇದುವರೆಗೂ ನಡೆಸಿದ ಕಾರ್ಯಾಚರಣೆಗಿಂತ ಈ ಕಾರ್ಯಾಚರಣೆ ಬಹಳ ಅಪಾಯಕಾರಿಯಾಗಿತ್ತು ಎಂದು ಅವರು ಹೇಳಿದ್ದಾರೆ.