Tag: snake catcher

  • ನಾಗರಹಾವಿನ ಜೊತೆ ಉರಗ ರಕ್ಷಕನ ಚೆಲ್ಲಾಟ

    ನಾಗರಹಾವಿನ ಜೊತೆ ಉರಗ ರಕ್ಷಕನ ಚೆಲ್ಲಾಟ

    ಬೆಂಗಳೂರು/ನೆಲಮಂಗಲ: ನಾಗರಹಾವು ರಕ್ಷಣೆ ಮಾಡುವ ಬರದಲ್ಲಿ ವಿಷಪೂರಿತ ಉರಗದ ಜೊತೆಗೆ ಜನರನ್ನು ಮೆಚ್ಚಿಸಲು ಹೋಗಿ ಉರಗ ರಕ್ಷಕ ಚೆಲ್ಲಾಟವಾಡಿರುವ ವೀಡಿಯೋ ವ್ಯಾಪಕ ಖಂಡನೆಗೆ ಕಾರಣವಾಗಿದೆ.

    Snake Catcher

    ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ಉರಗ ರಕ್ಷಕರೊಬ್ಬರು ವಿಷಪೂರಿತ ನಾಗರಹಾವಿನ ಜೊತೆಗೆ ಚೆಲ್ಲಾಟ ಆಡಿರುವ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಶುಕ್ರವಾರ ಗಣೇಶನ ಹಬ್ಬದ ವೇಳೆ ನೆಲಮಂಗಲ ನಗರದ ವಿಜಯನಗರದ ಪರಮಣ್ಣನವರ ಮನೆಯ ಬಳಿ ನಾಗರಹಾವು ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಸ್ನೇಕ್ ಅರುಣ್ ರಾಜ್‍ಗೆ ವಿಚಾರ ಮುಟ್ಟಿಸಿ ರಕ್ಷಣೆ ಮಾಡುವಂತೆ ಕರೆ ಮಾಡಿದ್ದಾರೆ. ಇದನ್ನೂ ಓದಿ:  ಬೈಕ್ ಆಕ್ಸಿಡೆಂಟ್ – ಟಾಲಿವುಡ್ ನಟ ಸಾಯಿಧರ್ಮ ತೇಜ್ ಸ್ಥಿತಿ ಗಂಭೀರ

    Snake Catcher

    ಸ್ಥಳಕ್ಕೆ ಬಂದ ಸ್ನೇಕ್ ಅರುಣ್ ರಾಜ್ ಆ ನಾಗರಹಾವನ್ನು ರಕ್ಷಣೆ ಮಾಡಿ, ಹಾವಿನ್ನು ಕೈಯಲ್ಲಿ ಹಿಡಿದುಕೊಂಡು ಬೈಕ್ ಮೇಲೆ ಕುಳಿತು ಜನರಿಗೆ ಜಾಗೃತಿ ಮೂಡಿಸುವ ಬರದಲ್ಲಿ ಚೆಲ್ಲಾಟವಾಡಿರುವ ಬಂಗಿ ಆತಂಕಕ್ಕೆ ಕಾರಣವಾಗಿದೆ. ರಕ್ಷಣೆ ಮಾಡುವ ಬರದಲ್ಲಿ ವಿಷಪೂರಿತ ಹಾವುಗಳ ಜೊತೆಗೆ ಇಂತಹ ವರ್ತನೆ ಅಪಾಯಕಾರಿ, ಸಲ್ಪ ಯಾಮಾರಿದರೂ, ತಮ್ಮ ಪ್ರಾಣವನ್ನು ಪಣಕ್ಕೆ ಇಡಬೇಕಾಗುತ್ತೆ, ಹಾಗಾಗಿ ಇನ್ನಾದರೂ ಜಾಗೃತಿ ವಹಿಸಿ ಹಾವುಗಳನ್ನು ರಕ್ಷಣೆ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ತಾಲಿಬಾನಿಗಳ ಕ್ರೂರತ್ವ- ಮನೆ, ಮನೆಗೆ ನುಗ್ಗಿ ಯುವಕರ ಬರ್ಬರ ಹತ್ಯೆ

  • ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡ ಉರಗ ರಕ್ಷಕ ಸಾವು

    ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡ ಉರಗ ರಕ್ಷಕ ಸಾವು

    ಬಾಗಲಕೋಟೆ: ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ಹಿಡಿದಿದ್ದ ಉರಗ ರಕ್ಷರೊಬ್ಬರು ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಸಮೀಪ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ.

    30 ವರ್ಷ ಪ್ರಾಯದ ಸದಾಶಿವ ನಿಂಗಪ್ಪ ಕರಣಿ ಸಾವನ್ನಪ್ಪಿದ ದುರ್ದೈವಿ. ಬುಧವಾರ ರಾತ್ರಿ ಗ್ರಾಮದಲ್ಲಿ ಹಾವು ಕಾಣಿಸಿಕೊಂಡಿತ್ತು, ನಂತರ ವಿಷಯ ತಿಳಿದ ಸದಾಶಿವ ಕರಣಿ, ಅಲ್ಲಿಗೆ ತೆರಳಿ ಹಾವನ್ನು ಹಿಡಿದಿದ್ದರು. ಹಾವನ್ನು ಹಿಡಿಯುವ ವೇಳೆ ಸದಾಶಿವ ಅವರಿಗೆ ಕಚ್ಚಿತ್ತು. ಬಳಿಕ ಸದಾಶಿವ ಅವರು ಮನೆಯಲ್ಲಿಯೇ ಗಿಡಮೂಲಿಕೆಗಳ ಔಷಧಿ ತೆಗೆದುಕೊಂಡಿದ್ದರು. ಆದರೆ ನಿನ್ನೆ ತಡರಾತ್ರಿ ಹಾವಿನ ವಿಷ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಟ್ಟಿಗೆಯಲ್ಲಿ ಅವಿತುಕೊಂಡಿದ್ದ ವಿಷ ಸರ್ಪ – ಉರಗ ಕಂಡು ಆತಂಕಗೊಂಡ ಜನ

    ಸದಾಶಿವ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಕೆಲಸದಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿದ್ದರು. ಸದಾಶಿವ ಅವರ ತಂದೆಯೂ ಹಾವು ಹಿಡಿಯುದರಲ್ಲಿ ನಿಸ್ಸಿಮರಾಗಿದ್ದರು. ಹೀಗಾಗಿ ತಂದೆಯಂತೆ ಮಗ ಸದಾಶಿವ ಅವರು ಕೂಡ ಊರಿಗೆ, ಕೆಲ ಮನೆಗಳಿಗೆ ಆಗಮಿಸುತ್ತಿದ್ದ ನಾನಾ ರೀತಿಯ ಹಾವುಗಳನ್ನು ಹಿಡಿಯುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿದ್ದಾರೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಟ್ಟಿಗೆಯಲ್ಲಿ ಅವಿತುಕೊಂಡಿದ್ದ ವಿಷ ಸರ್ಪ – ಉರಗ ಕಂಡು ಆತಂಕಗೊಂಡ ಜನ

    ಕಟ್ಟಿಗೆಯಲ್ಲಿ ಅವಿತುಕೊಂಡಿದ್ದ ವಿಷ ಸರ್ಪ – ಉರಗ ಕಂಡು ಆತಂಕಗೊಂಡ ಜನ

    ಬಾಗಲಕೋಟೆ: ಬಾಗಲಕೋಟೆ ಸಮೀಪದ ಮುಚಖಂಡಿ ಗ್ರಾಮದಲ್ಲಿ ವಿಷ ಸರ್ಪ ಕಾಣಿಸಿಕೊಂಡಿದ್ದು, ಅಲ್ಲಿದ್ದ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಇದನ್ನೂ ಓದಿ:ಬೆಂಗ್ಳೂರಲ್ಲಿ ಪತ್ತೆ ಆಯ್ತು ಮರಿ ಬಿಳಿ ನಾಗರಹಾವು

    ಮನೆಯೊಂದರ ಕಟ್ಟಿಗೆಯೊಂದರಲ್ಲಿ ಸರ್ಪವೊಂದು ಅವಿತುಕೊಂಡಿತ್ತು. ನಂತರ ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞರಾದ ಸಂತೋಷ್ ಪಾಟೀಲ ಹಾಗೂ ಮಹ್ಮದ್ ಶಫೀಕ್ ಎಂಬವರು ವಿಷ ಸರ್ಪ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.

    ಇಷ್ಟು ದಿನ ಕಾಣಿಸಿಕೊಳ್ಳದೇ ಇದ್ದ ಸರ್ಪ ಇಂದು ಮಳೆಯಿಂದಾಗಿ ಹೊರಗೆ ಬಂದು ಕಟ್ಟಿಗೆಯಲ್ಲಿ ಅವಿತುಕೊಂಡಿತ್ತು. ಈ ವೇಳೆ ಹಾವನ್ನು ಕಂಡು ಅಲ್ಲಿದ್ದ ಸ್ಥಳೀಯರು ಗಾಬರಿಗೊಂಡು ಹಾವು ಹಿಡಿಯುವವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲದೇ ಇದು ಅತ್ಯಂತ ವಿಷಕಾರಿ ಸರ್ಪವಾಗಿದ್ದು, ಕಚ್ಚಿದರೆ ಪ್ರಾಣಾಪಾಯ ಆಗುವುದು ಖಚಿತ ಎಂದು ತಿಳಿದ ಗ್ರಾಮಸ್ಥರು ವಿಷಕಾರಿ ಸರ್ಪಕ್ಕೆ ಯಾವುದೇ ತೊಂದರೆ ಮಾಡದೆ, ಹಾವು ಹಿಡಿಯವವರು ಬರುವವರೆಗೂ ಅದನ್ನು ಎಲ್ಲಿಯೂ ಹೋಗದಂತೆ ನೋಡಿಕೊಂಡರು.  ಇದನ್ನೂ ಓದಿ:ಅಪರೂಪದ ಬಿಳಿ ನಾಗರಹಾವು ಪ್ರತ್ಯಕ್ಷ – ರಸ್ತೆಯಲ್ಲಿಯೇ ಕೈ ಮುಗಿದ ಜನ

    ನಂತರ ಸ್ನೇಕ್ ಕ್ಯಾಚರ್ ಬಂದು ಹಾವನ್ನ ಹಿಡಿದು ಚೀಲದಲ್ಲಿ ಹಾಕಿಕೊಂಡು ಅರಣ್ಯಕ್ಕೆ ಕೊಂಡೊಯ್ದದರು. ಇದನ್ನೂ ಓದಿ: ಭಾರೀ ಗಾತ್ರದ ನಾಗರಹಾವಿನ ರಕ್ಷಣೆ- ಐತಾಳರ ಕಾರ್ಯಾಚರಣೆ ಬಹಳ ರೋಚಕ

  • ಲಾಕ್‍ಡೌನ್‍ನಲ್ಲಿ ರೈತ ಕಳ್ಕೊಂಡಿದ್ದ 2 ಲಕ್ಷ ರೂ. ಚೆಕ್ ಹಿಂದಿರುಗಿಸಿದ ಉರಗತಜ್ಞ

    ಲಾಕ್‍ಡೌನ್‍ನಲ್ಲಿ ರೈತ ಕಳ್ಕೊಂಡಿದ್ದ 2 ಲಕ್ಷ ರೂ. ಚೆಕ್ ಹಿಂದಿರುಗಿಸಿದ ಉರಗತಜ್ಞ

    ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ರೈತರೊಬ್ಬರು ಕಳೆದುಕೊಂಡಿದ್ದ 2 ಲಕ್ಷ ರೂ. ಚೆಕ್ ಅನ್ನು ಬೆಂಗಳೂರು ಹೊರವಲಯ ನೆಲಮಂಗಲದ ಸ್ನೇಕ್ ಲೋಕೇಶ್ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

    ನೆಲಮಂಗಲದ ರೈತ ಮಹದೇವಪ್ಪ ಅವರು 2 ಲಕ್ಷ ರೂ. ಚೆಕ್ ಅನ್ನು ಕಳೆದುಕೊಂಡಿದ್ದರು. ಇದೇ ಸಮಯದಲ್ಲಿ ಸ್ನೇಕ್ ಲೋಕೇಶ್ ಅವರು ಹಾವೊಂದನ್ನು ರಕ್ಷಣೆ ಮಾಡಿ, ಮನೆಗೆ ವಾಪಸ್ ಹೋಗುತ್ತಿದ್ದರು. ಈ ವೇಳೆ ಸೊಂಡೆಕುಪ್ಪ ಗ್ರಾಮದ ಬಳಿ ಸ್ನೇಕ್ ಲೋಕೇಶ್ ತಮ್ಮ ಬೈಕ್‍ನಲ್ಲಿ ಬರುವಾಗ ದಾರಿ ಮಧ್ಯೆ 2 ಲಕ್ಷ ಮೌಲ್ಯದ ಚೆಕ್ ದೊರೆತ್ತಿದೆ. ಈ ಚೆಕ್ ಹಿಂಬದಿಯಲ್ಲಿ ಇದ್ದ ಪೋನ್ ನಂಬರ್‍ಗೆ ಕರೆಮಾಡಿ ವಿಷಯ ತಿಳಿಸಿ, ಪೊಲೀಸರಿಂದ ಮಹದೇವಪ್ಪ ಅವರಿಗೆ ಚೆಕ್ ಹಸ್ತಾಂತರಿಸಿ ಸಹಾಯ ಮಾಡಿದ್ದಾರೆ.

    ಸ್ನೇಕ್ ಲೋಕೇಶ್ ಕಾರ್ಯಕ್ಕೆ ನೆಲಮಂಗಲ ಟೌನ್ ಪಿಎಸ್‍ಐ ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಹಾಮಾರಿ ಕೊರೊನಾ ವೈರಸ್‍ನ ಲಾಕ್‍ಡೌನ್ ವೇಳೆ ಜನರು ಹಸಿವು ಹಾಗೂ ನಾನಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಮಧ್ಯೆ ಲೋಕೇಶ್ ಸಿಕ್ಕ ಚೆಕ್ ಅನ್ನು ದುರುಪಯೋಗ ಮಾಡಿಕೊಳ್ಳದೆ ಪ್ರಾಮಾಣಿಕವಾಗಿ ಅದನ್ನು ಹಿಂದಿರಿಗಿಸಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.