Tag: Snack

  • ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ

    ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ

    ಲಂಡನ್: ಪ್ರತಿ ತಂದೆ ತಾಯಿಯು ತಮ್ಮ ಮಗುವಿನ ಹೆಸರಿನ ಬಗ್ಗೆ ವಿವಿಧ ಕನಸನ್ನು ಕಟ್ಟಿಕೊಂಡಿರುತ್ತಾರೆ. ಅದರಲ್ಲೂ ಸಾಮಾನ್ಯವಾಗಿ ಸ್ಥಳ, ಪ್ರಸಿದ್ಧ ವ್ಯಕ್ತಿ, ಅಥವಾ ತಮಗೆ ಪ್ರೇರಣೆಯಾಗಿರುವವರ ಹೆಸರನ್ನು ಇಡುತ್ತಾರೆ. ಆದರೆ ಇಲ್ಲಿನ ದಂಪತಿ ತಮ್ಮ ಮಗುವಿಗೆ ಭಾರತ ಖಾದ್ಯದ ಹೆಸರನ್ನು ಇಟ್ಟಿದ್ದಾರೆ.

    ಹೌದು.. ಈ ಘಟನೆ ಐರ್ಲೆಂಡ್‍ನಲ್ಲಿ ನಡೆದಿದೆ. ಐರ್ಲೆಂಡ್‍ನ ನಾಬ್ಬೆಯಲ್ಲಿರುವ ಭಾರತೀಯ ರೆಸ್ಟೋರೆಂಟ್‍ಗೆ ಅಲ್ಲಿರುವ ದಂಪತಿ ಆಗಾಗ ಭೇಟಿ ನೀಡುತ್ತಿದ್ದರು. ಇಲ್ಲಿನ ತಿಂಡಿಯು ಅವರಿಗೆ ಬಹಳ ಇಷ್ಟವಾದ್ದರಿಂದ ತಮ್ಮ ಮಗುವಿಗೂ ಪಕೋರಾ(ಪಕೋಡಾ) ಎಂದು ಹೆಸರಿಟ್ಟಿದ್ದಾರೆ.

    ಈ ಬಗ್ಗೆ ಅಲ್ಲಿನ ರೆಸ್ಟೋರೆಂಟ್ ಮಗುವಿನ ಹೆಸರನ್ನು ಹಂಚಿಕೊಂಡಿದ್ದು, ನಿಮ್ಮನ್ನು ಭೇಟಿ ಮಾಡಲು ನಾವು ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದೆ. ಅಷ್ಟೇ ಅಲ್ಲದೇ ರೆಸ್ಟೋರೆಂಟ್ ಬಿಲ್‍ನ ಪ್ರತಿಯನ್ನು ಶೇರ್ ಮಾಡಿಕೊಂಡಿದ್ದು, ಪಕೋರಾದಲ್ಲಿನ ವಿವಿಧ ಬಗೆಯ ಖಾದ್ಯವನ್ನು ಗಮನಿಸಬಹುದಾಗಿದೆ.

    ಇದಕ್ಕೆ ಅನೇಕ ನಟ್ಟಿಗರು ಕಾಮೆಂಟ್ ಮಾಡಿದ್ದು, ಅನೇಕರು ಈ ಹೆಸರನ್ನು ಇಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ್ದರೇ, ಇನ್ನೊಬ್ಬರು ನನ್ನ ಇಬ್ಬರು ಹದಿಹರೆಯದವರು ಚಿಕನ್ ಮತ್ತು ಟಿಕ್ಕಾ ಎಂದು ತಮಾಷೆ ಮಾಡಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ ಸೈಕಿಯಾ ಈಗ ಅಸ್ಸಾಂನಲ್ಲಿ ಡಿಎಸ್‌ಪಿ ಆಫೀಸರ್‌

    ಮತ್ತೊಬ್ಬರು ಕಾಮೆಂಟ್ ಮಾಡಿದ್ದು, ನಾನು ಗರ್ಭಿಣಿಯಾಗಿದ್ದಾಗ ನಾನು ಹೆಚ್ಚಾಗಿ ಬಾಳೆ ಹಣ್ಣು, ಕಲ್ಲಂಗಡಿಯನ್ನು ತಿನ್ನುತ್ತಿದ್ದೆ. ಆದರೆ ದೇವರ ದಯೆಯಿಂದ ನಾನು ನನ್ನ ಮಕ್ಕಳಿಗೆ ಹೆಸರನ್ನು ಇಟ್ಟಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಣೇಶನ ಜೊತೆಗೆ ಗಾಲ್ಫ್ ಮೈದಾನದ ಚಿರತೆಗೂ ನಿತ್ಯ ಪೂಜೆ

    Live Tv
    [brid partner=56869869 player=32851 video=960834 autoplay=true]

  • ಫಟಾಫಟ್ ಅಂತ ಮಾಡ್ಬೋಡು ಟೇಸ್ಟಿ ಪ್ಯಾನ್ ಕೇಕ್

    ಫಟಾಫಟ್ ಅಂತ ಮಾಡ್ಬೋಡು ಟೇಸ್ಟಿ ಪ್ಯಾನ್ ಕೇಕ್

    ಬೆಳಗ್ಗೆ ಹೊಸ ಹೊಸ ರೀತಿಯ ತಿಂಡಿ ತಯಾರಿಸುವುದು ಪ್ರತಿಯೊಬ್ಬ ಗೃಹಿಣಿಯರಿಗೂ ಸವಾಲು. ಒಂದೊಳ್ಳೆ ತಿಂಡಿ ತಯಾರಿಸಬೇಕೆಂದರೆ, ಹಿಟ್ಟು, ಬೇಳೆ, ಅಕ್ಕಿಯನ್ನು ರಾತ್ರಿಯಿಡೀ ನೆನೆಸಿಡಬೇಕಾಗುತ್ತದೆ. ಆದರೆ ಫಟಾಫಟ್ ಅಂತ ಮಾಡೋ ತಿಂಡಿಗಳ ಪಟ್ಟಿಯಲ್ಲಿ ಕೆಲವೇ ಕೆಲವು ಐಟಮ್‌ಗಳಿದ್ದು, ಅದನ್ನು ತಿಂದು ಬೋರ್ ಆಗಿರಲೂ ಬಹುದು.

    ಇಂದಿನ ರೆಸಿಪಿ ಪ್ರತಿಯೊಬ್ಬರೂ ಕೇವಲ ಅರ್ಧಗಂಟೆಯಲ್ಲಿ ಮಾಡಬಹುದು, ಮಾತ್ರವಲ್ಲದೇ ಅತ್ಯಂತ ಸುಲಭದ ವೆಸ್ಟರ್ನ್ ಸ್ಟೈಲ್‌ನ ಬ್ರೇಕ್‌ಫಸ್ಟ್ ಕಲಿತಂತೆಯೂ ಆಗುತ್ತದೆ.

    ಬೇಕಾಗುವ ಪದಾರ್ಥಗಳು:
    * ಆಲ್ ಪರ್ಪಸ್ ಫ್ಲೋರ್(ಮೈದಾ ಅಥವಾ ಗೋಧಿ) – 1 ಕಪ್
    * ಸಕ್ಕರೆ – 2 ಟೀಸ್ಪೂನ್
    * ಬೇಕಿಂಗ್ ಪೌಡರ್ – 2 ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ಹಾಲು – 1 ಕಪ್
    * ಕಾಯಿಸಿದ ಬೆಣ್ಣೆ – 2 ಟೀಸ್ಪೂನ್
    * ಮೊಟ್ಟೆ – 1
    * ಎಣ್ಣೆ – 1 ಟೀಸ್ಪೂನ್

    ಮಾಡುವ ವಿಧಾನ: 

    * ಆವನ್ ಅನ್ನು 200 ಡಿಗ್ರಿ ಬಿಸಿಯಾಗಲು ಬಿಡಿ.
    * ಸಣ್ಣ ಪಾತ್ರೆಯಲ್ಲಿ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್ ಹಾಗೂ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಹಾಲು, ಬೆಣ್ಣೆ, ಮೊಟ್ಟೆರನ್ನು ಹಾಕಿ ಮಿಕ್ಸ್ ಮಾಡಿ. ಈ ಬಾರಿ ಅತಿಯಾಗಿ ಮಿಶ್ರಣ ಮಾಡುವುದು ಬೇಡ.
    * ದೊಡ್ಡ ನಾನ್ ಸ್ಟಿಕ್ ಪ್ಯಾನ್ ಅನ್ನು ಒಲೆಯಲ್ಲಿ ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ.
    * ಅದರ ಮೇಲೆ 2-3 ಟೀಸ್ಪೂನ್ ಬ್ಯಾಟರ್(ತಯಾರಿಸಿದ ಹಿಟ್ಟು) ಹಾಕಿ, ಚಮಚದ ಹಿಂಬದಿಯಿಂದ ನಿಧಾನವಾಗಿ ಸ್ವಲ್ಪ ಹರಡಿ. ದೊಡ್ಡ ಪ್ಯಾನ್ ಆಗಿದ್ದರೆ ಒಂದು ಬಾರಿಗೆ 2-3 ಬಾರಿ ಪ್ಯಾನ್ ಕೇಕ್ ಹಾಕಲು ಸಾಧ್ಯವಾಗುತ್ತದೆ.
    * 2-3 ನಿಮಿಷ ಬೆಂದ ಬಳಿಕ ತೆಳುವಾದ ಸೌಟಿನಿಂದ ಅವುಗಳನ್ನು ತಿರುವಿ ಹಾಕಿ ಹಾಗೂ ಕಂದು ಬಣ್ಣವಾಗುವವರೆಗೆ ಬೇಯಿಸಿ.
    * ಅವುಗಳನ್ನು ಬೇಕಿಂಗ್ ಶೀಟ್ ಹಾಕಿರುವ ಆವನ್‌ನಲ್ಲಿ ಇಡಬಹುದಾದ ಪಾತ್ರೆಗೆ ಹಾಕಿ, ಅಲ್ಯೂಮಿನಿಯಂ ಫಾಯಿಲ್‌ನಿಂದ ಮುಚ್ಚಿ, ಆವನ್‌ನಲ್ಲಿ ಇರಿಸಿ.
    * 5 ನಿಮಿಷ ಬೆಂದ ಬಳಿಕ ಬೆಚ್ಚನೆಯ ಪ್ಯಾನ್ ಕೇಕ್‌ಗಳನ್ನು ಪ್ಲೇಟ್‌ಗಳಿಗೆ ಹಾಕಿ, ಅದಕ್ಕೆ ನಿಮಗಿಷ್ಟದ ಸಿರಪ್(ಮೇಪಲ್ ಸಿರಪ್, ಬೆಣ್ಣೆ, ಶುಗರ್ ಸಿರಪ್, ಜೇನುತುಪ್ಪ, ಜಾಮ್, ಚಾಕೊಲೇಟ್ ಸಿರಪ್ ಮುಂತಾದವು) ಅನ್ನು ಹಾಕಿ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಚಿನ್ನದಂಗಡಿಗೆ ನುಗ್ಗಿದ ಹೆಬ್ಬಾವು – ಗ್ರಾಹಕರು, ಸಿಬ್ಬಂದಿ ಕಕ್ಕಾಬಿಕ್ಕಿ

    ಚಿನ್ನದಂಗಡಿಗೆ ನುಗ್ಗಿದ ಹೆಬ್ಬಾವು – ಗ್ರಾಹಕರು, ಸಿಬ್ಬಂದಿ ಕಕ್ಕಾಬಿಕ್ಕಿ

    ಉಡುಪಿ: ಚಿನ್ನದಂಗಡಿಗೆ ಭಾರೀ ಗಾತ್ರದ ಹೆಬ್ಬಾವು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಗರದ ನೋವೆಲ್ಟಿ ಜ್ಯುವೆಲ್ಲರಿಯಲ್ಲಿ ನಡೆದಿದೆ.

    ಚಿನ್ನದಂಗಡಿಯ ಮೇಲ್ಛಾವಣಿಯಲ್ಲಿ ಅವಿತಿದ್ದ ಎಂಟು ಅಡಿಯಷ್ಟು ಉದ್ದದ ಹೆಬ್ಬಾವು ಸಿಬ್ಬಂದಿಗೆ ಕಾಣಿಸಿಕೊಂಡಿದೆ. ಹೆಬ್ಬಾವನ್ನು ನೋಡುತ್ತಿದ್ದಂತೆ ಅಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿ ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೂಡಲೇ ಅಂಗಡಿ ಮಾಲೀಕರು ಉರಗತಜ್ಞ ಗುರುರಾಜ್ ಸನಿಲ್ ಅವರಿಗೆ ಕರೆಮಾಡಿ ಕರೆಸಿದ್ದಾರೆ. ತಕ್ಷಣ ಆಗಮಿಸಿದ ಗುರುರಾಜ್ ಹೆಬ್ಬಾವನ್ನು ರಕ್ಷಣೆ ಮಾಡಿದರು. ಇದನ್ನೂ ಓದಿ: 299 ರೂ. ಚೂಡಿದಾರ್ ಕೊಳ್ಳಲು ಹೋಗಿ 1ಲಕ್ಷ ಕಳೆದುಕೊಂಡ ಮಹಿಳೆ

    ಇಲಿಯನ್ನು ಹುಡುಕುತ್ತಾ ಹೆಬ್ಬಾವು ಮಳಿಗೆಯೊಳಗೆ ಬಂದಿದೆ. ಹಾವು ಹಿಡಿಯುವ ವೇಳೆ ಕೈಗೆ ಸುತ್ತಿಕೊಂಡಿದೆ. ನಂತರ ಹಾವನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುರಾಜ್ ಸನಿಲ್, ಹೆಬ್ಬಾವು ಕಚ್ಚುವ ಹಾವಲ್ಲ. ಜನ ಭಯಗೊಳ್ಳಬಾರದು. ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?