Tag: smrithi irani

  • ವೀಡಿಯೋ: ಗೋಲ್ಗೊಪ್ಪ ಸವಿದು ಖುಷಿಪಟ್ಟ ಸ್ಮೃತಿ ಇರಾನಿ

    ವೀಡಿಯೋ: ಗೋಲ್ಗೊಪ್ಪ ಸವಿದು ಖುಷಿಪಟ್ಟ ಸ್ಮೃತಿ ಇರಾನಿ

    ಲಕ್ನೋ: ರಾಜಕೀಯ ನಾಯಕರು ಅಂದ್ರೆ ಸಾಕು, ಸಿಕ್ಕಾಪಟ್ಟೆ ಬ್ಯುಸಿಯಿರುತ್ತಾರೆ. ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ನೊಂದವರ ಅಹವಾಲು ಸ್ವೀಕರಿಸುವುದು ಹಾಗೂ ಕ್ಷೇತ್ರ ಭೇಟಿ ಹೀಗೆ ತಮ್ಮದೇ ಕೆಲಸಗಳಲ್ಲಿ ದಿನ ಕಳೆಯುತ್ತಾರೆ. ಈ ಬ್ಯುಸಿಯ ನಡುವೆಯೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ನೆಚ್ಚಿನ ಗೋಲ್ಗೊಪ್ಪ ಸವಿದು ಖುಷಿಪಟ್ಟಿದ್ದಾರೆ.

    ಭಾನುವಾರ ಸಚಿವೆ ವಾರಣಾಸಿಯ ಮಹದೇವ ದೇಗಲುಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿ ಅವರು ಗೋಲ್ಗೊಪ್ಪ ಸವಿದಿದ್ದು, ಇದರ ಫೋಟೋ ಹಾಗೂ ವೀಡಿಯೋವನ್ನು ತಮ್ಮ ಇನ್‍ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

     

    View this post on Instagram

     

    A post shared by India Today (@indiatoday)

    ಕಾಶಿ ವಲಯದಲ್ಲಿ ಬರುವ 16 ಜಿಲ್ಲೆಗಳ ಬಿಜೆಪಿ ಕಚೇರಿ, ಸಂಸದರು ಹಾಗೂ ಶಾಸಕರ ಸಭೆಯಲ್ಲಿ ಭಾಗವಹಿಸಲೆಂದು ಸಚಿವೆ ಉತ್ತರಪ್ರದೇಶಕ್ಕೆ ತೆರಳಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಈ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು.

    ಹೀಗೆ ತೆರಳಿದ್ದ ಸಂದರ್ಭದಲ್ಲಿ ಸಚಿವೆ ತಮ್ಮ ಕೆಲಸದ ನಡುವೆಯೇ ಅಲ್ಲೇ ಇದ್ದ ಪಾನಿಪುರಿ ಅಂಗಡಿಗೆ ಭೇಟಿ ಕೊಟ್ಟಿದ್ದಾರೆ. ಅಲ್ಲದೆ ಗೋಲ್ಗೊಪ್ಪವನ್ನು ಸವಿದಿದ್ದಾರೆ. ಈ ಸಂಬಂಧ ಮಾಧ್ಯಮದವರು ಅವರನ್ನು ಮಾತನಾಡಿಸಲು ಹೋದಾಗ ‘ಹರ್ ಹರ್ ಮಹಾದೇವ್’ ಎಂದು ಸಚಿವೆ ಅಲ್ಲಿಂದ ಹೋಗಿದ್ದಾರೆ.

    ಬಳಿಕ ತಮ್ಮ ಇನ್‍ಸ್ಟಾದಲ್ಲಿ ಮಹಾದೇವ್ ದೇಗುಲಕ್ಕೆ ಭೇಟಿ ನೀಡಿದ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಕಾಶಿ ಕರೆದಾಗ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Smriti Irani (@smritiiraniofficial)

  • ಕೇಂದ್ರ ಸಚಿವೆಯನ್ನೇ ಚುಡಾಯಿಸಿದ ಪುಂಡರು!

    ಕೇಂದ್ರ ಸಚಿವೆಯನ್ನೇ ಚುಡಾಯಿಸಿದ ಪುಂಡರು!

    ವಾರಾಣಾಸಿ: ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರನ್ನು ಪುಂಡರು ಚುಡಾಯಿಸಿದ ಘಟನೆ ಉತ್ತರ ಪ್ರದೇಶದ ಅರೋಯ್ ಮತ್ತು ಮಿರ್ಜಾಮುರದ್ ನಡುವೆ  ನಡೆದಿದೆ.

    ಕಳೆದ ಸೋಮವಾರ ರಾತ್ರಿ ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾದ ಅನುಪ್ರಿಯಾ ಪಟೇಲ್‍ರವರು ಕಾಶಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದರು. ಈ ವೇಳೆ ಅರೋಯ್ ಮತ್ತು ಮಿರ್ಜಾಮುರದ್ ನಡುವೆ ಪ್ರಯಾಣಿಸುತ್ತಿದ್ದಾಗ, ನೋಂದಣಿ ಇಲ್ಲದ ಕಾರಿನಲ್ಲಿ ಬಂದ ಮೂವರು ಯುವಕರು ಓವರ್ ಟೇಕ್ ಮಾಡುವ ವೇಳೆ ಸಚಿವೆಗೆ ಅಸಭ್ಯವಾಗಿ ಬೈದಿದ್ದಾರೆ. ಅಲ್ಲದೇ ಭದ್ರತಾ ಸಿಬ್ಬಂದಿಯವರ ಜೊತೆಗೂ ಅಸಭ್ಯ ರೀತಿಯಿಂದ ವರ್ತಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

    ಘಟನೆ ಕುರಿತು ಸಚಿವೆ ವಾರಣಾಸಿಯ ಎಸ್‍ಪಿ ಎಸ್ ಕೆ ಭಾರದ್ವಜ್ ಬಳಿ ದೂರು ನೀಡಿದ್ದಾರೆ. ನೋಂದಣಿ ಇಲ್ಲದ ಕಾರನಲ್ಲಿದ್ದ ಆರೋಪಿಗಳನ್ನು ಪತ್ತೆಹಚ್ಚುವಂತೆ ತಿಳಿಸಿದ್ದಾರೆ. ಕೂಡಲೇ ಜಾಗೃತರಾದ ಮಿರ್ಜಾಪುರದ್ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೇಂದ್ರದ ಸಚಿವೆಯರಿಗೆ ಚುಡಾಯಿಸುತ್ತಿರುವುದು ಇದೇ ಮೊದಲೆನಲ್ಲ. ಈ ಏಪ್ರಿಲ್‍ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೂ ಇಂತಹುದೆ ಅನುಭವವಾಗಿತ್ತು. ದೆಹಲಿ ವಿಮಾನ ನಿಲ್ದಾಣದಿಂದ ಮನೆಗೆ ಬರುವಾಗ ಕಾರಿನಲ್ಲಿದ್ದ ಯುವತಿ ಮತ್ತು ಮೂವರು ಯುವಕರು ರೇಗಿಸಿದ್ದರು.

  • 2 ರಾಜ್ಯ ಗೆದ್ದ ಬಿಜೆಪಿಗೆ ಸಿಎಂ ಆಯ್ಕೆ ಸಂಕಟ-ಗುಜರಾತ್ ರೇಸ್‍ನಲ್ಲಿ ವಾಲಾ, ಸ್ಮೃತಿ ಇರಾನಿ ಸಪ್ಪಳ

    2 ರಾಜ್ಯ ಗೆದ್ದ ಬಿಜೆಪಿಗೆ ಸಿಎಂ ಆಯ್ಕೆ ಸಂಕಟ-ಗುಜರಾತ್ ರೇಸ್‍ನಲ್ಲಿ ವಾಲಾ, ಸ್ಮೃತಿ ಇರಾನಿ ಸಪ್ಪಳ

    ಬೆಂಗಳೂರು: ಗುಜರಾತ್ ನಲ್ಲಿ ಪ್ರಯಾಸದ ಗೆಲುವು ಕಂಡಿರೋ ಬಿಜೆಪಿಗೆ ಮುಖ್ಯಮಂತ್ರಿ ಆಯ್ಕೆ ಹಾದಿ ಕೂಡ ಕಠಿಣವಾಗಿದೆ.

    ಹಾಲಿ ಸಿಎಂ ವಿಜಯ್ ರೂಪಾನಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿರೋದ್ರಿಂದ ಮತ್ತೆ ಮುಂದುವರಿಯೋದು ಅನುಮಾನ. ಇನ್ನು ಪಟೇಲ್ ಆಂದೋಲನದ ಪ್ರಭಾ ಹತ್ತಿಕ್ಕಲು ಹಾಲಿ ಡಿಸಿಎಂ ನಿತಿನ್ ಪಟೇಲ್ ಹೆಸರು ಕೇಳಿಬಂದಿದೆ. ಇದರ ಜೊತೆಗೆ ಕರ್ನಾಟಕದ ರಾಜ್ಯಪಾಲ ವಜುಭಾಯ್ ವಾಲಾರನ್ನು ಗುಜರಾತ್‍ಗೆ ವಾಪಾಸ್ ಕರೆಸಿ ಸಿಎಂ ಮಾಡಬಹುದು ಎಂಬ ಊಹಾಪೋಹವೊಂದು ಕೇಳಿಬರುತ್ತಿದೆ. ಆದ್ರೆ ವಾಲಾಗೆ ವಯಸ್ಸಾಗಿದ್ದು, ಅವರು ಸಿಎಂ ಆಗಲ್ಲ ಎನ್ನಲಾಗ್ತಿದೆ. ಇದನ್ನೂ ಓದಿ: ಗುಜರಾತ್ ಸಿಎಂ ರೂಪಾಣಿ ವಿರುದ್ಧ ಸವಾಲು ಹಾಕಿ ಸೋತ ಕೈ ಶ್ರೀಮಂತ ಶಾಸಕ

    ಈ ನಡುವೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರು ಕೂಡ ಕೇಳಿಬಂದಿದೆ. ಅತ್ತ ಹಿಮಾಚಲ ಪ್ರದೇಶದಲ್ಲಿ ಸಿಎಂ ಅಭ್ಯರ್ಥಿ ಪ್ರೇಮ್ ಕುಮಾರ್ ಧಮಾಲ್, ರಾಜ್ಯಾಧ್ಯಕ್ಷ ಸತ್ಪಾಲ್ ಸಿಂಗ್ ಸತ್ತಿ ಅವರೇ ಸೋತಿರೋದು ಬಿಜೆಪಿಗೆ ತಲೆನೋವಾಗಿದೆ. ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಬಿಜೆಪಿಯ ಮೊದಲ ಚಾಯ್ಸ್ ಎಂದು ಹೇಳಲಾಗ್ತಿದೆ. ಇವರ ಜೊತೆಗೆ ಧಮಾಲ್ ಪುತ್ರ ಅನುರಾಗ್ ಠಾಕೂರ್ ಹೆಸರು ಸಿಎಂ ರೇಸ್‍ನಲ್ಲಿದೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದೆಲ್ಲಿ? ಕಾಂಗ್ರೆಸ್ ಸೋತಿದ್ದೆಲ್ಲಿ?

    ಒಟ್ಟಿನಲ್ಲಿ ಮುಂದಿನ ಸಿಎಂ ಯಾರು ಆಗ್ತಾರೆ ಅನ್ನೋದನ್ನ ನಿರ್ಧರಿಸಲು ಕೇಂದ್ರ ಸಚಿವ ಅರುಣ್ ಜೇಟ್ಲಿ ಗುಜರಾತ್‍ಗೆ ತೆರಳಿದ್ರೆ, ನಿರ್ಮಲಾ ಸೀತಾರಾಮನ್ ಅವರಿಗೆ ಹಿಮಾಚಲ ಪ್ರದೇಶದ ಹೊಣೆ ನೀಡಲಾಗಿದೆ. ಇಂದು ಸಭೆ ನಡೆಸಿ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದನ್ನ ನಿರ್ಧರಿಸಲಿದ್ದಾರೆ ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?