Tag: smoke bomb

  • ಸೋಶಿಯಲ್ ಮೀಡಿಯಾ ಖಾತೆ ಇಲ್ಲ – ಮನೋರಂಜನ್ ಬೆಂಗಳೂರು ನೆಟ್‌ವರ್ಕ್ ಯಾವುದು?

    ಸೋಶಿಯಲ್ ಮೀಡಿಯಾ ಖಾತೆ ಇಲ್ಲ – ಮನೋರಂಜನ್ ಬೆಂಗಳೂರು ನೆಟ್‌ವರ್ಕ್ ಯಾವುದು?

    ಮೈಸೂರ: ಲೋಕಸಭೆಯ ಕಲಾಪದ ನಡೆಯುವಾಗಲೇ ಸ್ಮೋಕ್ ಬಾಂಬ್ (Smoke Bomb) ಎಸೆದಿದ್ದ ಮನೋರಂಜನ್ (Manoranjan) ಮೈಸೂರು (Mysuru)  ಮೂಲದವನಾಗಿದ್ದರೂ ಹಲವು ವರ್ಷಗಳಿಂದ ಮೈಸೂರಿನಲ್ಲಿ ತನ್ನ ಸ್ನೇಹಿತರ ಸಂಪರ್ಕವನ್ನೇ ಕಳೆದುಕೊಂಡಿದ್ದ ಎಂಬುದು ಬೆಳಕಿಗೆ ಬಂದಿದೆ.

    ಮನೋರಂಜನ್ ಮೈಸೂರಿನ ಎಲ್ಲಾ ಸ್ನೇಹಿತರ ಸಂಪರ್ಕ ಕಳೆದುಕೊಂಡಿದ್ದ. ಬೆಂಗಳೂರಿನಲ್ಲೇ (Bengaluru) ತನ್ನ ಸ್ನೇಹಿತರ ನೆಟ್‌ವರ್ಕ್ ಇಟ್ಟುಕೊಂಡಿದ್ದ. ಮೈಸೂರಿನಲ್ಲಿ ಕಳೆದ 5-6 ವರ್ಷಗಳಿಂದ ಯಾವುದೇ ಸ್ನೇಹಿತರ ಸಂಪರ್ಕದಲ್ಲಿ ಇರಲಿಲ್ಲ. ಈ ಹಿನ್ನೆಲೆ ಪೊಲೀಸರು ಬೆಂಗಳೂರಿನಲ್ಲಿ ಅವನ ವಾಸಸ್ಥಳದ ಪರಿಶೀಲನೆಗೆ ತೆರಳಿದ್ದಾರೆ. ಜೊತೆಗೆ ಮನೋರಂಜನ್‌ನ ಬೆಂಗಳೂರಿನಲ್ಲಿರುವ ಸ್ನೇಹಿತರ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್‌!

    ಇಷ್ಟು ಮಾತ್ರವಲ್ಲದೇ ಮನೋರಂಜನ್ ಹೆಸರಿನಲ್ಲಿ ಯಾವುದೇ ಅಧಿಕೃತವಾಧ ಸೋಷಿಯಲ್ ಮೀಡಿಯಾ ಖಾತೆ ಇಲ್ಲ ಎಂಬುದು ತಿಳಿದು ಬಂದಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇರದ ಮನೋರಂಜನ್‌ಗೆ ಉತ್ತರ ಭಾರತದವರ ಪರಿಚಯ ಹೇಗಾಯಿತು ಎಂಬುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಆದರೆ ಆತ ನಕಲಿ ಅಕೌಂಟ್ ಹೊಂದಿರುವ ಸಾಧ್ಯತೆ ಇದ್ದು, ವ್ಯವಸ್ಥಿತ ಪ್ಲ್ಯಾನ್ ಮಾಡಿಯೇ ಸಂಸತ್ ಭವನಕ್ಕೆ ನುಗ್ಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದ ಮನೋರಂಜನ್ ಯಾರು?, ಈತನ ಹಿನ್ನೆಲೆಯೇನು?

  • ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದ ಮನೋರಂಜನ್ ಯಾರು?, ಈತನ ಹಿನ್ನೆಲೆಯೇನು?

    ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದ ಮನೋರಂಜನ್ ಯಾರು?, ಈತನ ಹಿನ್ನೆಲೆಯೇನು?

    ಮೈಸೂರು: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ (Security Breach in LokSabha) ಎಸೆದಿದ್ದ ಮನೋರಂಜನ್ ಮೈಸೂರು ಮೂಲದವನಾಗಿದ್ದು, ಪುಸ್ತಕಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದನಂತೆ. ಹಾಗಾದ್ರೆ ಈತನಿಗೆ ಪಾಸ್ ಸಿಕ್ಕಿದ್ದೇಗೆ, ಏನನ್ನೂ ಪರಿಶೀಲನೆ ಮಾಡದೇ ಹಾಗೆ ಪಾಸ್ ವಿತರಣೆ ಮಾಡಿದ್ರಾ..? ಮನೋರಂಜನ್ ಅಪ್ಪ ಏನಂತಾರೆ ಅನ್ನೋದ್ರ ವರದಿ ಇಲ್ಲಿದೆ.

    ಸಂಸತ್‍ನಲ್ಲಿ ಹಲ್‍ಚಲ್ ಎಬ್ಬಿಸಿದವರಲ್ಲಿ ಓರ್ವ ಮನೋರಂಜನ್. ಈತ ಮೈಸೂರಿನಲ್ಲಿ ವಾಸವಿದ್ದು, ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದವನು. ಶಿಕ್ಷಣಕ್ಕಾಗಿಯೇ ಕುಟುಂಬಸ್ಥರು ಮೈಸೂರು ಸೇರಿದರು. ಮೈಸೂರಿನ ಮರಿಮಲ್ಲಪ್ಪದಲ್ಲಿ ಹೈಸ್ಕೂಲ್ ಓದಿದ್ದು, ಸೇಂಟ್ ಜೋಸೆಫ್‍ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಬೆಂಗಳೂರಿನ ಬಿಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‍ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ಮನೋರಂಜನ್, 2016ರಲ್ಲಿ ಕಾಂಬೋಡಿಯಾಗೆ ತೆರಳಿದ್ದ. ಇದನ್ನೂ ಓದಿ: Security Breach in LokSabha- ಸಂಸತ್ ಒಳಗೆ, ಹೊರಗೆ ಇಂದು ಏನೇನಾಯ್ತು?

    ಲೋಕಸಭಾ ಕಲಾಪಕ್ಕೆ ನುಗ್ಗಿದ್ದ ಮೈಸೂರಿನ ಮನೋರಂಜನ್, ಕ್ರಾಂತಿಕಾರಿ ಪುಸ್ತಕಗಳ ಪ್ರೇಮಿಯಾಗಿದ್ದನಂತೆ. ಮೈಸೂರಿನ ಮನೋರಂಜನ್ ಮನೆಯಲ್ಲಿ ಹಲವಾರು ಐತಿಹಾಸಿಕ ಪುಸ್ತಕ ಪತ್ತೆಯಾಗಿವೆ. ಸುಭಾಶ್ ಚಂದ್ರ ಬೋಸ್, ಸ್ವಾತಿ ಚರ್ತುವೇದಿ, ಅಂಬಾನಿಯ ಐತಿಹಾಸಿಕ ಕ್ರಾಂತಿಕಾರಿ ಪುಸ್ತಕಗಳು ಲಭ್ಯವಾಗಿವೆ.  ಇದನ್ನೂ ಓದಿ: ನನ್ನ ಮಗ ಯಾವತ್ತಿಗೂ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡ್ತಿದ್ದ: ಮನೋರಂಜನ್ ತಂದೆ ಮಾತು

    ಸಂಸತ್ ಪಾಸ್ ಸಿಕ್ಕಿದ್ದೇಗೆ..?: ಮಂಗಳವಾರ ಮಧ್ಯಾಹ್ನ ದೆಹಲಿಯ ಪ್ರತಾಪ್ ಸಿಂಹ ಕಚೇರಿಗೆ ಬಂದಿದ್ದ ಮನೋರಂಜನ್ ಜೊತೆ ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಕೂಡ ಇದ್ದ. ನಾನು ಮೈಸೂರು ನಿವಾಸಿ ಎಂದು ಪರಿಚಯ ಮಾಡಿಕೊಂಡಿದ್ದ. ನನ್ನ ತಂದೆ ಸಂಸದ ಪ್ರತಾಪ್ ಸಿಂಹಗೆ ಪರಿಚಿತರು ಎಂದು ಹೇಳಿದ್ದ. ಸಂಸದರ ದೆಹಲಿ ಪಿಎ ಸಾಗರ್‍ಗೆ ಹೇಳಿ ಪಾಸ್ ಕೊಡುವಂತೆ ಮನವಿ ಮಾಡಿಕೊಂಡರು. ನನಗೆ ಹಾಗೂ ನನ್ನ ಸ್ನೇಹಿತ ಸಾಗರ್ ಶರ್ಮಾಗೆ ಪಾಸ್ ಕೊಡುವಂತೆ ಕೋರಿದ್ದ. ಒಂದೇ ಪಾಸ್‍ನಲ್ಲಿ ಇಬ್ಬರಿಗೂ ಸಂಸತ್ ಪ್ರವೇಶಕ್ಕೆ ಅವಕಾಶ ಕೊಟ್ಟಿದ್ದಾರೆ. ಮನೋರಂಜನ್ ಅರ್ಜಿಯನ್ನ ಪರಿಗಣಿಸಿದ ಪ್ರತಾಪ್ ಸಿಂಹ ಕಚೇರಿ, ಅರ್ಜಿಯನ್ನ ಸಂಸತ್ ಅನುಮತಿಗೆ ಕಳುಹಿಸಿದ್ದ. ಸಂಸತ್‍ನಿಂದ ಅನುಮತಿ ಸಿಕ್ಕ ನಂತರ ಮನೋರಂಜನ್‍ಗೆ ಪಾಸ್ ವಿತರಣೆ ಮಾಡಲಾಗಿದೆ. ಮನೋರಂಜನ್‍ನನ್ನು ಒಮ್ಮೆಯೂ ಭೇಟಿ ಮಾಡಿರದ ಸಂಸದ ಪ್ರತಾಪ್ ಸಿಂಹಗೆ ಮನೋರಂಜನ್ ತಂದೆ ದೇವರಾಜೇಗೌಡರ ಮುಖ ಪರಿಚಯ ಅಷ್ಟೇ ಇರೋದು.

    ಮಗ ಸಂಸತ್‍ಗೆ ನುಗ್ಗಿದ ಕುರಿತು ತಂದೆ ದೇವರಾಜೇಗೌರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಯಾವತ್ತಿಗೂ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡುತ್ತಿದ್ದ. ಸ್ವಾಮಿ ವಿವೇಕಾನಂದರ ಪುಸ್ತಕ ಸೇರಿದಂತೆ ಸಮಾಜ ಸುಧಾರಕರ ಪುಸ್ತಕ ಓದುತ್ತಿದ್ದ. ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಅಂತ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಇತ್ತ ಸಂಸತ್ ಒಳಗೆ ಯುವಕರ ಪ್ರವೇಶಕ್ಕೆ ಪ್ರತಾಪ್ ಸಿಂಹ ಪಾಸ್ ಕೊಟ್ಟಿದ್ದೇ ಕಾರಣ ಅಂತಾ ಕಾಂಗ್ರೆಸ್ ನಾಯಕರು ಮೈಸೂರಿನ ಪ್ರತಾಪ್ ಸಿಂಹ ಕಚೇರಿ ಮುಂದೆ ಪ್ರತಿಭಟನೆ ಮಾಡಿ, ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಸಂಸದರ ಕಚೇರಿ ಮುಂಭಾಗದ ರಸ್ತೆ ತಡೆದು, ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದರು.

  • ಸಾಗರ್ ಶರ್ಮಾ ಇ-ರಿಕ್ಷಾ ಓಡಿಸುತ್ತಿದ್ದ: ಆರೋಪಿ ಮಗನ ಬಗ್ಗೆ ತಾಯಿ ಹೇಳಿದ್ದೇನು?

    ಸಾಗರ್ ಶರ್ಮಾ ಇ-ರಿಕ್ಷಾ ಓಡಿಸುತ್ತಿದ್ದ: ಆರೋಪಿ ಮಗನ ಬಗ್ಗೆ ತಾಯಿ ಹೇಳಿದ್ದೇನು?

    ನವದೆಹಲಿ: ಭದ್ರತಾ ಲೋಪದಿಂದ ಸಂಸತ್ ಭವನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಇಬ್ಬರು ಯುವಕರು ಏಕಾಏಕಿ ಬಂದು ಸ್ಮೋಕ್ ಬಾಂಬ್ (Smoke Bomb) ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರು ಸೇರಿ ಒಟ್ಟು 6 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

    ಈ ಹಿನ್ನೆಲೆ ಆರೋಪಿಗಳ ಪೈಕಿ ಪ್ರಮುಖರಾದ ಸಾಗರ್ ಶರ್ಮಾ (Sagar Sharma) ಹಾಗೂ ಮೈಸೂರಿನ ಮನೋರಂಜನ್ ಕುರಿತು ತೀವ್ರ ತನಿಖೆ ನಡೆಯುತ್ತಿದೆ. ಈ ಕುರಿತು ಆರೋಪಿ ಸಾಗರ್ ಶರ್ಮಾ ತಾಯಿ ರಾಣಿ ಶರ್ಮಾ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ. ಸಾಗರ್ ಶರ್ಮಾ ಇ-ರಿಕ್ಷಾ (E-Rickshaw) ಓಡಿಸುತ್ತಿದ್ದ. ನಾವು ಕುಟುಂಬದಲ್ಲಿ ನಾಲ್ಕು ಜನರಿದ್ದೇವೆ. ನನ್ನ ಪತಿ ಕಾರ್ಪೆಂಟರ್ ಕೆಲಸ ಮಾಡುತ್ತಾರೆ. ಸಾಗರ್ ತನ್ನ ಸ್ನೇಹಿತರ ಜೊತೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಎರಡು ದಿನಗಳ ಹಿಂದೆ ಮನೆಯಿಂದ ಹೋಗಿದ್ದಾನೆ ಎಂದರು. ಇದನ್ನೂ ಓದಿ: Security Breach in LokSabha- ಸಂಸತ್ ಒಳಗೆ, ಹೊರಗೆ ಇಂದು ಏನೇನಾಯ್ತು?

    ಇನ್ನು ಈ ಕುರಿತು ಮಾತನಾಡಿದ ಎಸ್‌ಹೆಚ್‌ಒ, ಒಂದು ದಶಕದಿಂದ ಆರೋಪಿ ಸಾಗರ್ ಕುಟುಂಬವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಶರ್ಮಾ ಇ-ರಿಕ್ಷಾ ಓಡಿಸುತ್ತಿದ್ದ ಎಂದು ತಿಳಿದುಬಂದಿದೆ ಎಂದು ಹೇಳಿದರು. ಅಲ್ಲದೇ ಲೋಕಸಭೆಯಲ್ಲಿ ನಡೆದ ಘಟನೆಯಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ನಾವು ಅವರಿಂದ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ನಿರುದ್ಯೋಗದಿಂದ ಬೇಸತ್ತು ಸಾಯೋದೇ ಲೇಸು ಅನ್ನುತ್ತಿದ್ದಳು- ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟವಳ ತಾಯಿ ಮಾತು

  • Security Breach in LokSabha- ಸಂಸತ್ ಒಳಗೆ, ಹೊರಗೆ ಇಂದು ಏನೇನಾಯ್ತು?

    Security Breach in LokSabha- ಸಂಸತ್ ಒಳಗೆ, ಹೊರಗೆ ಇಂದು ಏನೇನಾಯ್ತು?

    – ವೈಫಲ್ಯದ ಹೊಣೆ ಹೊತ್ತ ಸ್ಪೀಕರ್

    ನವದೆಹಲಿ: ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದ ಕರಾಳ ನೆನಪಿಗೆ ಇಂದು ಭರ್ತಿ 22 ವರ್ಷ. ಇದೇ ದಿನವೇ ಸಂಸತ್ (Parliament)  ಭವನದಲ್ಲಿ ಭಾರೀ ಭದ್ರತಾ ಲೋಪ (Security Breach in LokSabha) ನಡೆದಿದ್ದು, ದಾಳಿ ಪ್ರಯತ್ನ ನಡೆದಿದೆ.

    ಲೋಕಸಭೆ (Loksabha) ಕಲಾಪ ನೋಡುವ ನೆಪದಲ್ಲಿ ವೀಕ್ಷಕರ ಗ್ಯಾಲರಿಗೆ ಬಂದಿದ್ದ ಇಬ್ಬರು ಕಿಡಿಗೇಡಿಗಳು ಮತ್ತು ಸಂಸತ್‍ನ ಟ್ರಾನ್ಸ್ ಪೋರ್ಟ್ ಭವನದ ಬಳಿ ಮತ್ತಿಬ್ಬರು ಕಿಡಿಗೆಡಿಗಳು ಹಲಚಲ್ ಸೃಷ್ಟಿಸಿದ್ದಾರೆ. ಲೋಕಸಭೆಯಲ್ಲಿ ಝೀರೋ ಹವರ್ ನಡೆಯತ್ತಿದ್ದ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಕಿಡಿಗೇಡಿಗಳ ಪೈಕಿ ಒಬ್ಬ ಏಕಾಏಕಿ ಸಂಸದರತ್ತ ಹಾರಿದ್ರೆ, ಮತ್ತೊಬ್ಬ ತನ್ನ ಶೂನಲ್ಲಿದ್ದ `ಸ್ಮೋಕ್ ಬಾಂಬ್’ ಸಿಡಿಸಿದ. ಇದನ್ನು ನಿರೀಕ್ಷೆ ಮಾಡದ ಸಂಸದರು ಕೂಡ್ಲೇ ಗಾಬರಿಗೊಂಡಿ ಓಡಿದ್ರು.

    ಕೆಲವರು ಧೈರ್ಯ ಮಾಡಿ ಇಬ್ಬರನ್ನು ಹಿಡಿದು ಸಖತ್ತಾಗಿ ಬಾರಿಸಿದ್ರು. ಭದ್ರತಾ ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದರು. ಕೂಡಲೇ ಸ್ಪೀಕರ್ ಕಲಾಪವನ್ನು ಎರಡು ಗಂಟೆಗೆ ಮುಂದೂಡಿದರು. ಲೋಕಸಭೆಯಲ್ಲಿ ಹಲಚಲ್ ಸೃಷ್ಟಿಸಿದವರನ್ನು ಮೈಸೂರಿನ ಮನೋರಂಜನ್ ಮತ್ತು ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. ವಿಶೇಷ ಅಂದ್ರೆ ಈ ಇಬ್ಬರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ವಿಸಿಟರ್ಸ್ ಪಾಸ್ ಪಡೆದು ಸಂಸತ್‍ಗೆ ಬಂದಿದ್ರು. ಈ ಹೊತ್ತಲ್ಲಿ ಪ್ರಧಾನಿ ಮೋದಿಯಾಗ್ಲಿ (Narendra Modi), ಗೃಹ ಸಚಿವರಾಗ್ಲಿ ಇರಲಿಲ್ಲ.

    ಇದೇ ಹೊತ್ತಲ್ಲಿ ಸಂಸತ್ ಭವನದ ಹೊರಗೆ ಕೂಡ ಇಬ್ಬರು, ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಾ, ಸ್ಮೋಕ್ ಬಾಂಬ್ ಸಿಡಿಸಿದರು. ಇದು ಕೂಡ ಗಾಬರಿಗೆ ಕಾರಣವಾಯ್ತು. ಕೂಡಲೇ ಭದ್ರತಾ ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದರು. ನಾಲ್ವರಲ್ಲದೆ, ಪರಾರಿಯಾಗಿದ್ದ ಇನ್ನಿಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಅದೃಷ್ಟವಶಾತ್ ಯಾರ ಬಳಿಯೂ ಯಾವುದೇ ಶಸ್ತಾಸ್ತ್ರ ಇರಲಿಲ್ಲ. ಅವರು ಬಿಡುಗಡೆ ಮಾಡಿದ ಗ್ಯಾಸ್ ಕೂಡ ಅಪಾಯಕಾರಿ ಆಗಿರಲಿಲ್ಲ. ಇನ್ನೂ, ಸರ್ವಪಕ್ಷಗಳ ಸಭೆ ನಡೆಸಿದ ಸ್ಪೀಕರ್, ಸದ್ಯಕ್ಕೆ ವಿಸಿಟರ್ಸ್ ಪಾಸ್ ನೀಡಿಕೆಯನ್ನು ರದ್ದು ಮಾಡಿದ್ದಾರೆ. ಸಮಗ್ರ ತನಿಖೆಗೆ ಸ್ಪೀಕರ್ ಆದೇಶ ನೀಡಿದ್ದಾರೆ. ಈ ವೈಫಲ್ಯದ ಹೊಣೆ ನನ್ನದೇ ಎಂದು ಸ್ಪೀಕರ್ ತಿಳಿಸಿದ್ದಾರೆ.

  • ನನ್ನ ಮಗ ಯಾವತ್ತಿಗೂ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡ್ತಿದ್ದ: ಮನೋರಂಜನ್ ತಂದೆ ಮಾತು

    ನನ್ನ ಮಗ ಯಾವತ್ತಿಗೂ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡ್ತಿದ್ದ: ಮನೋರಂಜನ್ ತಂದೆ ಮಾತು

    ಮೈಸೂರು: ಪಾರ್ಲಿಮೆಂಟ್‌ನಲ್ಲಿ (Parliament) ಸ್ಮೋಕ್ ಬಾಂಬ್ (Smoke Bomb) ಹಾಕಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನೋರಂಜನ್ ಅವರ ತಂದೆ ದೇವರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ಯಾವತ್ತಿಗೂ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ.

    ಸಂಸತ್ ಭವನದಲ್ಲಿ ಕಲಾಪದ ವೇಳೆ ಇಬ್ಬರು ಯುವಕರು ಏಕಾಏಕಿ ವೀಕ್ಷಕರ ಗ್ಯಾಲರಿಯಿಂದ ಹಾರಿ ಸ್ಮೋಕ್ ಬಾಂಬ್ ಹಾಕಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಮನೋರಂಜನ್ ಹಾಗೂ ಸಾಗರ್ ಶರ್ಮಾನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಆರೋಪಿ ಮನೋರಂಜನ್ ತಂದೆ ತಮ್ಮ ಮಗನ ಕುರಿತು ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಲಾಪದ ವೇಳೆ ನುಗ್ಗಿದ ಯುವಕನನ್ನು ಹಿಡಿದು ಥಳಿಸಿದ ಸಂಸದರು

    ನನ್ನ ಮಗ ಸ್ವಾಮಿ ವಿವೇಕಾನಂದರ ಪುಸ್ತಕ ಸೇರಿದಂತೆ ಸಮಾಜ ಸುಧಾರಕರ ಪುಸ್ತಕ ಓದುತ್ತಿದ್ದ. ಅಲ್ಲದೇ ಐಟಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಮದುವೆ ಆಗಿಲ್ಲ. ನನ್ನ ಮಗನಿಗೆ ಯಾರಾದರೂ ಪ್ರಚೋದನೆ ಕೊಟ್ಟಿರಬೇಕು. ರೈತಾಪಿ ಮಗನಾಗಿ ನನ್ನ ಮಗ ಈ ರೀತಿ ಮಾಡಿರುವುದು ಖಂಡನೀಯ. ಯಾರ ಮಕ್ಕಳಾದರೂ ಈ ರೀತಿ ಮಾಡಬಾರದು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಕಚೇರಿಗೆ ಮುತ್ತಿಗೆ ಯತ್ನ

    ನಾವೂ ಅಲ್ಪಸ್ವಲ್ಪ ರಾಜಕೀಯದಲ್ಲಿದ್ದೇವೆ. ಸಂಘಟನೆ ಎಲ್ಲ ಆಗಲ್ಲ. ನಾವೇನಿದ್ದರೂ ದುಡಿದು ತಿನ್ನಬೇಕು ಎಂದು ಹೇಳಿದ್ದೆ. ಆದರೆ ಅವನು ಅತಿಯಾದ ವಿದ್ಯಾಭ್ಯಾಸವೇ ಅವನಿಗೆ ಮುಳುವಾಯಿತಾ ಎಂಬುದು ನನಗೆ ಗೊತ್ತಿಲ್ಲ. ಸಂಘಟನೆ ಕಟ್ಟುವ ಕೆಲಸ ಬಿಟ್ಟರೇ ಬೇರೆ ಯಾವುದೇ ಸಮಾಜಘಾತುಕ ಕೆಲಸದಲ್ಲಿ ನನ್ನ ಮಗ ತೊಡಗಿಸಿಕೊಂಡಿಲ್ಲ. ಇವತ್ತು ಅವನು ಏನು ಮಾಡಿದ್ದಾನೋ ಅದು ಖಂಡನೀಯ, ನಾನು ಅದನ್ನ ಒಪ್ಪಲ್ಲ. ನನ್ನ ಮಗ ಆಗಿರಲಿ ಅಥವಾ ಯಾವನೇ ಆಗರಿಲಿ ಅವರನ್ನ ಗಲ್ಲಿಗೇರಿಸಿ ಎಂದರು. ಇದನ್ನೂ ಓದಿ: ಸಂಸತ್ ದಾಳಿ ಘಟನೆಯನ್ನು ಎಲ್ಲರೂ ಖಂಡಿಸಬೇಕು: ಸಿದ್ದರಾಮಯ್ಯ

    ಪ್ರಧಾನಿ ನಮ್ಮ ದೇವರು. ಅವರ ಬಗ್ಗೆ ನನ್ನ ಮಗನಿಗೆ ಭಾರೀ ಅಭಿಮಾನವಿತ್ತು. ಚಿಕ್ಕಮಕ್ಕಳನ್ನು ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಬಹುದು. ಆದರೆ ದೊಡ್ಡವರನ್ನು ಹಾಗೆ ಕೇಳಲು ಆಗುವುದಿಲ್ಲ. ಪಾಸ್ ಕೊಡುವುದು ಒಳ್ಳೆಯದಕ್ಕೆ. ಅದನ್ನು ಒಳ್ಳೆಯದಕ್ಕೆ ಉಪಯೋಗಿಸಿಕೊಳ್ಳಬೇಕು. ಪ್ರತಾಪ್ ಸಿಂಹ ಅವರು ಒಳ್ಳೆಯ ಮನುಷ್ಯ. ಅವರನ್ನು ಕೆಟ್ಟವರು ಎಂದು ಹೇಳಲಾಗುವುದಿಲ್ಲ. ನಾವು ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನೇ ಕೊಡಿಸಿದ್ದೇವೆ. ಅದರೂ ಈ ರೀತಿಯ ಕೃತ್ಯ ಮಾಡಿರುವುದು ಖಂಡನೀಯ ಎಂದು ಹೇಳಿದರು. ಇದನ್ನೂ ಓದಿ: ಪ್ರತಾಪ್ ಸಿಂಹ ಬಹಳ ಬುದ್ಧಿವಂತ, ಅವರ‍್ಯಾಕೆ ಇಂಥವರಿಗೆ ಪಾಸ್ ಕೊಟ್ರೋ?: ಡಿಕೆಶಿ ಕಿಡಿ

  • ಕಲಾಪದ ವೇಳೆ ನುಗ್ಗಿದ ಯುವಕನನ್ನು ಹಿಡಿದು ಥಳಿಸಿದ ಸಂಸದರು

    ಕಲಾಪದ ವೇಳೆ ನುಗ್ಗಿದ ಯುವಕನನ್ನು ಹಿಡಿದು ಥಳಿಸಿದ ಸಂಸದರು

    ನವದೆಹಲಿ: ಲೋಕಸಭಾ (Loksabha) ಕಲಾಪದ ವೇಳೆ ಗ್ಯಾಲರಿಯಿಂದ ಹಾರಿ ಸ್ಮೋಕ್ ಬಾಂಬ್ (Smoke Bomb) ಸಿಡಿಸಿದ ಯುವಕರಲ್ಲಿ ಓರ್ವನನ್ನು ಹಿಡಿದ ಸಂಸದರು ಗೂಸಾ ನೀಡಿದ್ದಾರೆ.

    ಯುವಕ ಸಾಗರ್ ಶರ್ಮಾ ಗ್ಯಾಲರಿಯಿಂದ ಹಾರಿ ಸಂಸತ್‍ನಲ್ಲಿ ಓಡಾಡುತ್ತಿದ್ದಾಗಲೇ ಸಂಸದರೆಲ್ಲ ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಸಾಗರ್ ಶರ್ಮಾ ಕೈಗೆ ಸಿಗುತ್ತಿದ್ದಂತೆಯೇ ಸಂಸದರೆಲ್ಲ ಗುಂಪು ಗುಂಪಾಗಿ ಆರೋಪಿಗೆ ಗೂಸಾ ಕೊಟ್ಟಿದ್ದಾರೆ.

    ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು. ಇದಾದ ಬಳಿಕ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಲೋಕಸಭೆ ಗ್ಯಾಲರಿಯಿಂದ ಜಿಗಿದು ಕಲರ್ ಬಾಂಬ್ ಸಿಡಿಸಿದ್ದಾರೆ. ಇತ್ತ ಇಬ್ಬರು ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಒಟ್ಟು ನಾಲ್ವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.

    https://twitter.com/Politics_2022_/status/1734883598476673452

    ಕಲಾಪದ ವೇಳೆ ನುಗ್ಗಿರುವವರನ್ನು ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. ಈ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ – ವೀಕ್ಷಕರಿಗೆ ಇನ್ಮುಂದೆ ಪಾಸ್‌ ಸಿಗಲ್ಲ

     

  • ಪ್ರತಾಪ್ ಸಿಂಹ ಬಹಳ ಬುದ್ಧಿವಂತ, ಅವರ‍್ಯಾಕೆ ಇಂಥವರಿಗೆ ಪಾಸ್ ಕೊಟ್ರೋ?: ಡಿಕೆಶಿ ಕಿಡಿ

    ಪ್ರತಾಪ್ ಸಿಂಹ ಬಹಳ ಬುದ್ಧಿವಂತ, ಅವರ‍್ಯಾಕೆ ಇಂಥವರಿಗೆ ಪಾಸ್ ಕೊಟ್ರೋ?: ಡಿಕೆಶಿ ಕಿಡಿ

    ಬೆಂಗಳೂರು: ಪ್ರತಾಪ್ ಸಿಂಹ (Prathap Simha) ಬಹಳ ಬುದ್ಧಿವಂತ. ಅರ‍್ಯಾಕೆ ಇಂಥವರಿಗೆ ಪಾಸ್ ಕೊಟ್ಟರೋ? ಅವರ ಹೆಸರು ಹೇಳಲು ಇಲ್ಲಿ ನನಗೆ ಇಷ್ಟವಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ.

    ಕಲಾಪ ನಡೆಯುತ್ತಿದ್ದ ಹೊತ್ತಿನಲ್ಲೇ ಪಾರ್ಲಿಮೆಂಟ್ (Parliament) ಒಳಗೆ ಕಲರ್ ಸ್ಮೋಕ್ ಸಿಡಿಸಿದ ಯುವಕರಿಗೆ ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್ಲರೂ ಫೋನ್ ಮಾಡುತ್ತಿದ್ದಾರೆ. ಏನು? ಯಾಕೆ? ಅಂತ ಕೇಳುತ್ತಿದ್ದಾರೆ. ನಾನು ಟಿವಿಯಲ್ಲಿ ನೋಡಿದೆ. ಮೇಲಿಂದಲೇ ಅವರು ಹಾರಿದ್ದಾರೆ. ಸಂಸದರೆಲ್ಲ ಇಲಿಗಳಂತೆ ಬಚ್ಚಿಕೊಳ್ಳುತ್ತಿದ್ದಾರೆ. ನಮ್ಮ ಪ್ರತಿಪಕ್ಷದವರೇ ಇದರ ಹೊಣೆ ತೆಗೆದುಕೊಳ್ಳಬೇಕು. ಅವರು ಏನು ಬುದ್ಧಿವಾದ ಹೇಳುತ್ತಾರೋ ಹೇಳಲಿ ಎಂದು ಹರಿಹಾಯ್ದರು. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್- ಸಂಸತ್ತಿನ ಹೊರಗಡೆ ಪ್ರತಿಭಟಿಸುತ್ತಿದ್ದ ಇಬ್ಬರ ಬಂಧನ

    ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬ ಇಬ್ಬರು ಯುವಕರು ಕಲಾಪದ ವೇಳೆ ನುಗ್ಗಿರುವುದು ಎಂದು ತಿಳಿದು ಬಂದಿದೆ. ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಲೋಕಸಭಾ (Lok Sabha) ವೀಕ್ಷಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಮೇಲಿನಿಂದ ಜಿಗಿದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಇಬ್ಬರನ್ನು ಹಿಡಿದಿದ್ದಾರೆ. ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ – ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆ

    ಮಾಹಿತಿ ಪ್ರಕಾರ ಒಟ್ಟು ಎರಡು ಘಟನೆ ನಡೆದಿದೆ. ಇಬ್ಬರು ವ್ಯಕ್ತಿಗಳು ಲೋಕಸಭೆ ಗ್ಯಾಲರಿಯಿಂದ ಜಿಗಿದು ಕಲರ್ ಬಾಂಬ್ ಸಿಡಿಸಿದರೆ, ಇಬ್ಬರು ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಈಗ ನಾಲ್ವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ – ಲೋಕಸಭಾ ಕಲಾಪ ನಡೆಯುವಾಗಲೇ ಮೇಲಿನಿಂದ ಜಿಗಿದ ಅನಾಮಿಕರು

  • ಲೋಕಸಭೆಯಲ್ಲಿ ಸ್ಮೋಕ್ ಬಾಂಬ್- ಸಂಸತ್ತಿನ ಹೊರಗಡೆ ಪ್ರತಿಭಟಿಸುತ್ತಿದ್ದ ಇಬ್ಬರ ಬಂಧನ

    ಲೋಕಸಭೆಯಲ್ಲಿ ಸ್ಮೋಕ್ ಬಾಂಬ್- ಸಂಸತ್ತಿನ ಹೊರಗಡೆ ಪ್ರತಿಭಟಿಸುತ್ತಿದ್ದ ಇಬ್ಬರ ಬಂಧನ

    ನವದೆಹಲಿ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ (Smoke Bomb in Loksabha) ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಹಿಸಾರ್ ನ ನೀಲಂ (42) ಮತ್ತು ಮಹಾರಾಷ್ಟ್ರದ ಲಾತೂರ್ ನ ಅಮೋಲ್ ಶಿಂಧೆ (25) ಎಂದು ಪೊಲೀಸರು ಗುರುತಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ – ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆ

    ನಡೆದಿದ್ದೇನು..?: ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು. ಇದಾದ ಬಳಿಕ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಲೋಕಸಭೆ ಗ್ಯಾಲರಿಯಿಂದ ಜಿಗಿದು ಕಲರ್ ಬಾಂಬ್ ಸಿಡಿಸಿದರೆ, ಇಬ್ಬರು ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಒಟ್ಟು ನಾಲ್ವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.

    ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬ ಯುವಕರು ಕಲಾಪದ ವೇಳೆ ನುಗ್ಗಿರುವುದು ಎಂದು ತಿಳಿದು ಬಂದಿದೆ. ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.