Tag: Smoke

  • ಭಾರೀ ಗಾಳಿ ಮಳೆಯಿಂದ ಶಾರ್ಟ್ ಸರ್ಕ್ಯೂಟ್ – ನೂರಾರು ಮನೆಗಳ ಟಿವಿ, ಫ್ರಿಡ್ಜ್‌ಗಳಿಗೆ ಹಾನಿ

    ಭಾರೀ ಗಾಳಿ ಮಳೆಯಿಂದ ಶಾರ್ಟ್ ಸರ್ಕ್ಯೂಟ್ – ನೂರಾರು ಮನೆಗಳ ಟಿವಿ, ಫ್ರಿಡ್ಜ್‌ಗಳಿಗೆ ಹಾನಿ

    ಯಾದಗಿರಿ: ಬಿರುಗಾಳಿ ಸಹಿತ ಮಳೆಗೆ (Rain) ಶಾರ್ಟ್ ಸರ್ಕ್ಯೂಟ್ (Short Circuit) ಸಂಭವಿಸಿ ವಿದ್ಯುತ್ ಕಂಬದ ವೈರ್ ಹಾಗೂ ನೂರಾರು ಮನೆಗಳ ಟಿವಿ, ಫ್ರಿಡ್ಜ್‌ಗಳಿಗೆ ಹಾನಿಯಾದ ಘಟನೆ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.

    ಭಾರೀ ಗಾಳಿಗೆ ವಿದ್ಯುತ್ ಕಂಬಗಳಲ್ಲಿನ ತಂತಿಗಳು ಒಂದಕ್ಕೊಂದು ತಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದರಿಂದ ವಿದ್ಯುತ್ ಕಂಬ ಹಾಗೂ ಗ್ರಾಮದ ಮನೆಗಳಲ್ಲಿನ ಟಿವಿ, ಫ್ರಿಡ್ಜ್, ಫ್ಯಾನ್‍ಗಳು ಸೇರಿದಂತೆ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ಘಟನೆಯಲ್ಲಿ ಓರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಸಿಂಗಾಪುರ ಶಾಲೆಯಲ್ಲಿ ಬೆಂಕಿ ಅವಘಡ – ಪವನ್ ಕಲ್ಯಾಣ್ ಕಿರಿಯ ಪುತ್ರನಿಗೆ ಗಂಭೀರ ಗಾಯ

    ಕೂಡಲೇ ಜೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ನೈಟ್‌ಕ್ಲಬ್‌ನ ಛಾವಣಿ ಕುಸಿದು 79 ಮಂದಿ ದುರ್ಮರಣ

  • ನಿವೇದಿತಾ ಗೌಡ ‘ಸ್ಮೋಕ್’ ಮಾಡಿಲ್ಲ, ಹೊಗೆ ಬಿಟ್ಟಿದ್ದಕ್ಕೆ ಕಾರಣ ಬೇರೆಯೇ ಇದೆ

    ನಿವೇದಿತಾ ಗೌಡ ‘ಸ್ಮೋಕ್’ ಮಾಡಿಲ್ಲ, ಹೊಗೆ ಬಿಟ್ಟಿದ್ದಕ್ಕೆ ಕಾರಣ ಬೇರೆಯೇ ಇದೆ

    ರಡು ದಿನಗಳ ಹಿಂದೆಯಷ್ಟೇ ‘ಗಿಚ್ಚಿ ಗಿಲಿ ಗಿಲಿ’ ರಿಯಾಲಿಟಿ ಶೋ ರನ್ನರ್ ಅಪ್ ಆಗಿ ಹೊರ ಹೊಮ್ಮಿರುವ ನಟಿ ನಿವೇದಿತಾ ಗೌಡ (Nivedita Gowda),  ಶೂಟಿಂಗ್ ಇರದೇ ಇರುವ ಕಾರಣಕ್ಕಾಗಿ ಬೆಂಗಳೂರಿನ ವಿವಿಪುರಂನಲ್ಲಿರುವ (VV Puram) ಫುಡ್ ಸ್ಟ್ರೀಟ್‍ ಗೆ ಭೇಟಿ ನೀಡಿದ್ದಾರೆ. ಅಲ್ಲಿ ಹತ್ತಾರು ಬಗೆಯ ತಿಂಡಿ, ಚಾಟ್ಸ್ ಸವಿದಿದ್ದಾರೆ. ಕೊನೆಯಲ್ಲಿ ಬಾಯಿಯಿಂದ ಹೊಗೆ ಬಿಟ್ಟು ಎಲ್ಲರನ್ನೂ ಕನ್ಫೂಸ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಟ್ರೋಲ್ ಆಗುತ್ತಿದೆ.

    ಸೋಷಿಯಲ್ ಮೀಡಿಯಾದಲ್ಲಿ ನಿವಿ ಯಾವಾಗಲೂ ಬ್ಯುಸಿ. ಒಂದಿಲ್ಲೊಂದು ಚಟುವಟಿಕೆಗಳನ್ನು ಮಾಡುತ್ತಲೇ ಅವುಗಳನ್ನು ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ರೀಲ್ಸ್ ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದವರು, ಇದೀಗ ತಿಂಡಿ, ತಿನಿಸು ಮಾಡುವುದು ಹೇಗೆ ಎನ್ನುವುದನ್ನು ಹೇಳಿಕೊಡುತ್ತಿದ್ದಾರೆ. ಮಾಡಿದ ಅಡುಗೆಯನ್ನು ಚಂದನ್ (Chandan Shetty) ಮೇಲೆ ಪ್ರಯೋಗ ಮಾಡಿಯೇ ಸೇಡು ತೀರಿಸಿಕೊಳ್ಳುತ್ತಾರೆ. ಇದನ್ನೂ ಓದಿ:ಮತ್ತೆ ಒಂದಾದ ʻಪಂಚರಂಗಿ’ ದಿಗಂತ್‌- ನಿಧಿ ಸುಬ್ಬಯ್ಯ ಜೋಡಿ

    ಫುಡ್ ಬಗ್ಗೆ ಮಾತನಾಡಿದಾಗೆಲ್ಲ ನಿವಿ ಅಭಿಮಾನಿಗಳು ನೀವು ವಿವಿಪುರಂ ಫುಡ್ ಸ್ಟ್ರೀಟ್‍ ಗೆ (Food Street) ಹೋಗಿಲ್ಲವಾ? ಎಂದು ಎಲ್ಲರೂ ಕೇಳುತ್ತಿದ್ದರಂತೆ. ಈವರೆಗೂ ಅವರು ಅಲ್ಲಿಗೆ ಹೋಗಿಲ್ಲವಂತೆ. ಹಾಗಾಗಿ ಗಿಚ್ಚಿಗಿಲಿಗಿಲಿ ಮುಗಿಯುತ್ತಿದ್ದಂತೆಯೇ ಫುಡ್ ಸ್ಟ್ರೀಟ್ ಗೆ ಬಂದು, ಅಲ್ಲಿನ ವಿವಿಧ ತಿಂಡಿ ತಿನಿಸುಗಳನ್ನು ಸವಿದಿದ್ದಾರೆ. ಮೂವತ್ತಕ್ಕೂ ಹೆಚ್ಚು ಬಗೆಯ ತಿಂಡಿಗಳು ಇಲ್ಲಿದ್ದರೂ, ನನಗೆ ಐದಾರು ಮಾತ್ರ ತಿನ್ನುವುದಕ್ಕೆ ಸಾಧ್ಯವೆಂದು ಹೇಳಿದ್ದಾರೆ. ಅಲ್ಲದೇ, ಬೇರೆ ಬೇರೆ ತಿಂಡಿ ತಿನಿಸುಗಳ ಬಗ್ಗೆಯೂ ಪರಿಚಯ ಮಾಡಿಕೊಟ್ಟಿದ್ದಾರೆ.

    ಚಾಟ್ಸ್ (Chats)ತಿನ್ನುವುದು ಮುಗಿಯುತ್ತಿದ್ದಂತೆಯೇ ಸ್ಮೋಕಿಂಗ್ (Smoke) ಐಸ್ ಕ್ರೀಮ್ ಕೂಡ ಸವಿದಿದ್ದು, ಐಸ್ ಕ್ರೀಮ್ ತಿನ್ನುವಾಗ ಬರುವ ಹೊಗೆಯನ್ನು ಕ್ಯಾಮೆರಾ ಮುಂದೆ ಬಿಟ್ಟಿದ್ದಾರೆ. ಹಾಗಾಗಿ ನಿವೇದಿತಾ ಸ್ಮೋಕ್ ಮಾಡಿದ್ದಾರೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ, ಅವರು ತಿಂದಿದ್ದು ಹೊಗೆ ಬರುವ ಐಸ್ ಕ್ರೀಮ್ ಎನ್ನುವುದು ಅವರು ಹಾಕಿರುವ ವಿಡಿಯೋ ನೋಡಿಯೇ ಗೊತ್ತಾಗುತ್ತದೆ. ಏನೇ ಆಗಲಿ, ನಿವಿ ಸಖತ್ ಎಂಜಾಯ್ ಮಾಡಿದ್ದಾರೆ ಫುಡ್ ಸ್ಟ್ರೀಟ್ ನಲ್ಲಿ.

    Live Tv
    [brid partner=56869869 player=32851 video=960834 autoplay=true]

  • ಪವಿತ್ರ ಗಂಗಾನದಿಯಲ್ಲಿ ಮೋಜು ಮಸ್ತಿ – ಹುಕ್ಕಾ ಸೇವಿಸಿ, ಚಿಕನ್‌ ಅಡುಗೆ ಮಾಡಿದ ಯುವಕರು

    ಪವಿತ್ರ ಗಂಗಾನದಿಯಲ್ಲಿ ಮೋಜು ಮಸ್ತಿ – ಹುಕ್ಕಾ ಸೇವಿಸಿ, ಚಿಕನ್‌ ಅಡುಗೆ ಮಾಡಿದ ಯುವಕರು

    ಲಕ್ನೋ: ಗಂಗಾ ನದಿಯ ಮಧ್ಯದಲ್ಲಿ ದೋಣಿ ಮೂಲಕ ಪ್ರಯಾಣಿಸುತ್ತಿದ್ದ ಕೆಲ ಯವಕರು ಹುಕ್ಕಾ ಪೈಪ್ ಉಪಯೋಗಿಸಿ ಧೂಮಪಾನ ಹಾಗೂ ಚಿಕನ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಈ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ದಾರಗಂಜ್‌ನಲ್ಲಿರುವ ನಾಗವಾಸುಕಿ ಮಂದಿರದ ಸಮೀಪ ನಡೆದಿದೆ. ಹಿಂದೂಗಳ ಪ್ರಮುಖ ಯಾತ್ರಾ ಕೇಂದ್ರದಲ್ಲಿ ಈ ರೀತಿಯ ಘಟನೆ ಸಂಭವಿಸಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

    ಘಟನೆಗೆ ಸಂಬಂಧಿಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಬೋಟ್‌ನಲ್ಲಿ ಮೋಜು ಮಸ್ತಿ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ಅಂಡರ್ ಪಾಸ್‍ನಲ್ಲಿ ಸಿಲುಕಿದ ಕಾಲೇಜ್ ಬಸ್- ವಿದ್ಯಾರ್ಥಿಗಳ ರಕ್ಷಣೆ

    POLICE JEEP

    ಕಳೆದ ವಾರ ಗಂಗಾ ಮತ್ತು ಯಮುನಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾದಾಗ ಪ್ರಯಾಗರಾಜ್‌ನ ಹಲವಾರು ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದವು. ರಾಜಾಪುರ, ಬಘರಾ, ದಾರಗಂಜ್ ಮತ್ತು ಇತರ ಹಲವಾರು ಸ್ಥಳಗಳಲ್ಲಿ ತಗ್ಗು ಪ್ರದೇಶದ ಕಾಲೋನಿಗಳಲ್ಲಿ ನೀರು ಸಂಗ್ರಹವಾಗಿದೆ. ನಗರದಲ್ಲಿ ಪ್ರವಾಹದಂತಹ ಪರಿಸ್ಥಿತಿಯ ನಡುವೆ ಆಡಳಿತವು ದೋಣಿ ವಿಹಾರಕ್ಕೆ ನಿರ್ಬಂಧಗಳನ್ನು ವಿಧಿಸಿದೆ. ಇದನ್ನೂ ಓದಿ: ಸಿದ್ದು ವಿರುದ್ಧ ಶ್ರೀರಾಮುಲು ವಾಗ್ದಾಳಿ- ಕೆಲವೇ ನಿಮಿಷದಲ್ಲಿ ಟ್ವೀಟ್ ಡಿಲೀಟ್

    Live Tv
    [brid partner=56869869 player=32851 video=960834 autoplay=true]

  • ಇಂಡಿಗೋ ವಿಮಾನದಲ್ಲಿ ಹೊಗೆ ಎಚ್ಚರಿಕೆ – ಕೋಲ್ಕತ್ತಾದಲ್ಲಿ ಲ್ಯಾಂಡಿಂಗ್

    ಇಂಡಿಗೋ ವಿಮಾನದಲ್ಲಿ ಹೊಗೆ ಎಚ್ಚರಿಕೆ – ಕೋಲ್ಕತ್ತಾದಲ್ಲಿ ಲ್ಯಾಂಡಿಂಗ್

    ಕೋಲ್ಕತ್ತಾ: ದೆಹಲಿಯಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಹೊಗೆ ಉಂಟಾಗಿರುವಂತೆ ಎಚ್ಚರಿಕೆ ಬಾರಿಸಿಕೊಂಡಿದ್ದು, ವಿಮಾನವನ್ನು ಸೂಕ್ತ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಿಕೊಂಡು ಕೋಲ್ಕತ್ತಾದಲ್ಲಿ ಇಳಿಸಲಾಗಿದೆ. ಆದರೆ ವಿಮಾನದಲ್ಲಿ ಹೊಗೆ ಅಥವಾ ಬೆಂಕಿ ಉಂಟಾಗಿರಲಿಲ್ಲ, ಅದು ಕೇವಲ ತಾಂತ್ರಿಕ ದೋಷದಿಂದ ಎಚ್ಚರಿಕೆಯ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

    ಭಾನುವಾರ ದೆಹಲಿಯಿಂದ ಹೊರಟಿದ್ದ ವಿಮಾನ 6ಇ-2513(ವಿಟಿ-ಐಜೆಎ) ನಲ್ಲಿ ಸರಕುಗಳನ್ನು ಇಡಲಾಗಿದ್ದ ಪ್ರದೇಶದಲ್ಲಿ ಹೊಗೆ ಉಂಟಾಗಿರುವಂತೆ ಎಚ್ಚರಿಕೆ ಬಾರಿಸಿಕೊಂಡಿತ್ತು. ಆದರೆ ಅದು ತಾಂತ್ರಿಕ ದೋಷದಿಂದ ಹೊಗೆ ಎಚ್ಚರಿಕೆ ನೀಡಿದ್ದು, ಘಟನೆಯ ಬಗ್ಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 720 ಹೊಸ ಕೋವಿಡ್ ಪ್ರಕರಣ ದೃಢ – 2 ಸಾವು

    ವಿಮಾನ ಕೋಲ್ಕತ್ತಾ ನಿಲ್ದಾಣವನ್ನು ತಲುಪಿದ ತಕ್ಷಣ ತಪಾಸಣೆ ನಡೆಸಲಾಯಿತು. ಬಳಿಕ ಅದು ನಕಲಿ ಎಚ್ಚರಿಕೆ ಎಂದು ದೃಢಪಡಿಸಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಇದನ್ನೂ ಓದಿ: ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಸೇರಿ 8 ಆರೋಪಿಗಳ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್

    ಕಳೆದ ಕೆಲವು ತಿಂಗಳುಗಳಲ್ಲಿ ದೇಶದ ಹಲವು ವಿಮಾನಯಾನ ಸಂಸ್ಥೆಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿವೆ. ಇಂಡಿಗೋ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, ಜುಲೈನಲ್ಲಿ ಶೇ.58.8 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಪೈಸ್‍ಜೆಟ್‌ನಲ್ಲಿ ಹೊಗೆ – ದೆಹಲಿಗೆ ವಿಮಾನ ವಾಪಸ್

    ಸ್ಪೈಸ್‍ಜೆಟ್‌ನಲ್ಲಿ ಹೊಗೆ – ದೆಹಲಿಗೆ ವಿಮಾನ ವಾಪಸ್

    ನವದೆಹಲಿ: ಪ್ರಯಾಣಿಕರನ್ನು ಹೊತ್ತು ಜಬಲ್‍ಪುರಕ್ಕೆ ಹೊರಟ್ಟಿದ್ದ ಸ್ಪೈಸ್‍ಜೆಟ್ ವಿಮಾನದ ಕ್ಯಾಬಿನ್‍ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ವಿಮಾನವು ಮರಳಿದೆ.

    ದೆಹಲಿಯಿಂದ ಜಬಲ್‍ಪುರಕ್ಕೆ ಹೊರಟಿದ್ದ ಸ್ಪೈಸ್‍ಜೆಟ್ ವಿಮಾನವು ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಮರಳಿದೆ. ವಿಮಾನವು 5,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವೇಳೆ ಕ್ಯಾಬಿನ್ ಒಳಗೆ ಹೊಗೆ ಬರುತ್ತಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಸದ್ಯ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸ್ಪೈಸ್‍ಜೆಟ್ ವಕ್ತಾರರು ತಿಳಿಸಿದ್ದಾರೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ 20 ರೂ. ಚಹಾಗೆ 50 ರೂ. ಸೇವಾಶುಲ್ಕ – ಪ್ರಯಾಣಿಕ ಶಾಕ್

    ಇದೀಗ ಕ್ಯಾಬಿನ್ ಒಳಗೆ ಹೊಗೆ ಆವರಿಸಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ದೆಹಲಿಗೆ ವಿಮಾನ ಹಿಂದುರುಗಿದ ನಂತರ ಪ್ರಯಾಣಿಕರು ನಿರ್ಗಮಿಸುತ್ತಿರುವುದನ್ನು ಕಾಣಬಹುದಾಗಿದೆ. ಸರ್ಕಾರಿ ದುಡ್ಡು, ಫ್ಯಾಮಿಲಿ ಟ್ರಿಪ್- ಅಧ್ಯಯನ ಹೆಸರಲ್ಲಿ ಶಾಸಕರ ಲಡಾಕ್ ಜಾಲಿ ರೈಡ್

    Live Tv

  • ಅಡಿಕೆ ಸಿಪ್ಪೆಗೆ ಬೆಂಕಿ – ಗ್ರಾಮದ ತುಂಬಾ ಆವರಿಸಿದ ಹೊಗೆ

    ಅಡಿಕೆ ಸಿಪ್ಪೆಗೆ ಬೆಂಕಿ – ಗ್ರಾಮದ ತುಂಬಾ ಆವರಿಸಿದ ಹೊಗೆ

    ಚಿಕ್ಕಮಗಳೂರು: ರಸ್ತೆ ಬದಿ ಹಾಕಿದ್ದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿದ ಗ್ರಾಮದ ತುಂಬಾ ಹೊಗೆ ಆವರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.

    ಮಲೆನಾಡ ಹೆಬ್ಬಾಗಿಲು ಎಂದೇ ಕರೆಯುವ ತರೀಕೆರೆ ತಾಲೂಕಿನ ಬಹುತೇಕ ಭಾಗ ಅಡಿಕೆ ಉದ್ಯಮವನ್ನೇ ಆಶ್ರಯಿಸಿದೆ. ಈಗ ಅಡಿಕೆ ಕೊಯ್ಲಿನ ಸಮಯ ಮುಗಿದಿದೆ. ಸುಲಿದ ಅಡಿಕೆಯ ಸಿಪ್ಪೆಯನ್ನ ಒಣಗಲೆಂದು ಕೆಲವರು ರಸ್ತೆ ಬದಿ ಸುರಿಯುತ್ತಾರೆ. ಹೀಗೆ ಸುರಿದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ.

    ಅಡಿಕೆ ಸಿಪ್ಪೆ ಜೋರಾಗಿ ಹೊತ್ತಿ ಉರಿಯದಿದ್ದರೂ ಬಾವಿಕೆರೆ ಗ್ರಾಮದ ತುಂಬಾ ಹೊಗೆ ಆವರಿಸಿದೆ. ಇದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಗ್ರಾಮದಲ್ಲಿ ಅಕ್ಕಪಕ್ಕ ನಿಂತಿದ್ದವರೂ ಕಾಣದಂತೆ ಆಗಿದ್ದು, ಹೊಗೆಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕೂಡ ಹರಸಾಹಸ ಪಟ್ಟಿದ್ದಾರೆ.

    ಈ ಮಧ್ಯೆ ಸ್ಥಳಿಯರು ಕೂಡ ರಸ್ತೆ ಬದಿ ಅಡಿಕೆ ಸಿಪ್ಪೆಯನ್ನು ಸುರಿಯುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಬದಿ ಅಡಿಕೆ ಸಿಪ್ಪೆ ಸುರಿಯಲು ಬಿಡಬಾರದು ಎಂದು ಸ್ಥಳೀಯ ಆಡಳಿತಕ್ಕೆ ಆಗ್ರಹಿಸಿದ್ದಾರೆ.

  • ಇಲ್ಲಿ ಕುಡಿಬೇಡಿ ಎಂದಿದ್ದಕ್ಕೆ ವ್ಯಕ್ತಿಯನ್ನು 150 ಪೀಸ್ ಮಾಡಿ, ಕಾಲು ಪುಡಿಗೈದು, ತಲೆ ಜಜ್ಜಿದರು!

    ಇಲ್ಲಿ ಕುಡಿಬೇಡಿ ಎಂದಿದ್ದಕ್ಕೆ ವ್ಯಕ್ತಿಯನ್ನು 150 ಪೀಸ್ ಮಾಡಿ, ಕಾಲು ಪುಡಿಗೈದು, ತಲೆ ಜಜ್ಜಿದರು!

    ರಾಯ್ಪುರ: ಮನೆಯ ಮುಂದೆ ಮದ್ಯಪಾನ ಮಾಡಬೇಡಿ ಎಂದಿದ್ದಕ್ಕೆ 60 ವರ್ಷದ ವ್ಯಕ್ತಿಯನ್ನು 20ರ ಆಸುಪಾಸಿನ ಯುವಕರಿಬ್ಬರು ಭಯಾನಕವಾಗಿ ಕೊಲೆ ಮಾಡಿರುವ ಘಟನೆ ಛತ್ತೀಸ್ ಗಢದ ಭಿಲೈ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ದುರ್ದೈವಿ ರಾಮ್ ಚೌಹಾಣ್ ಅವರನ್ನು ದುರ್ಗೇಶ್ ಸಾಹು ಹಾಗೂ ಲೋಕೇಶ್ ಸಾಹು ಭೀಕರವಾಗಿ ಹತ್ಯೆ ಮಾಡಿದ್ದಾರೆ. ರಾಮ್ ಚೌಹಾಣ್ ದೇಹವನ್ನು ಬ್ಲೇಡ್ ಮೂಲಕ 150 ಪೀಸ್ ಮಾಡಿದ್ದಾರೆ. ಕಾಲುಗಳನ್ನು ಪುಡಿಗೈದು, ತಲೆಯನ್ನು ಜಜ್ಜಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಮ್ ಚೌಹಾನ್ ಅವರು ಎಂದಿನಂತೆ ರಾತ್ರಿ ಊಟ ಮಗಿಸಿ ಮನೆಯ ಹೊರಗಡೆ ವಾಕ್ ಮಾಡುತ್ತಿದ್ದರು. ಈ ವೇಳೆ ಎದುರುಗಡೆ ಇಬ್ಬರು ಯುವಕರು ಸಿಗರೇಟ್ ಸೇದುತ್ತಾ, ಮದ್ಯಪಾನ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ತೆರಳಿ ಇಲ್ಲಿ ಮದ್ಯಪಾನ ಮಾಡಬೇಡಿ. ಬೇರೆ ಕಡೆ ಹೋಗಿ ಎಂದು ಹೇಳಿದ್ದಾರೆ.

    ವ್ಯಕ್ತಿಯ ಮಾತಿನಿಂದ ರೊಚ್ಚಿಗೆದ್ದ ಯುವಕರು ವಾಗ್ದಾಳಿ ನಡೆಸಿದರು. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಕುಡಿದ ಮತ್ತಿನಲ್ಲಿದ್ದ ಯುವಕರು ವ್ಯಕ್ತಿಯನ್ನು ಮನೆಯೊಳಗಡೆ ಕೂಡಿ ಹಾಕಿ ಕೊಲೆ ಮಾಡಿದ್ದಾರೆ.

    ಈ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ವ್ಯಕ್ತಿ ನಮ್ಮನ್ನು ಇಲ್ಲಿ ಕುಡಿಬೇಡಿ ಅಂದಾಗ ಅವರ ಮಾತನ್ನು ಕೇಳಲು ನಿರಾಕರಿಸಿದೆವು. ಈ ವೇಳೆ ಅವರು ನಮಗೆ ಹೊಡೆದರು. ಇದರಿಂದ ರೊಚ್ಚಿಗೊದ್ದು, ವ್ಯಕ್ತಿಯನ್ನು ಮನೆಯೊಳಗೆ ತಳ್ಳಿ ಬಾಗಿಲು ಹಾಕಿದೆವು ಎಂದಿದ್ದಾರೆ. ಅಲ್ಲದೆ ಮನೆಯೊಳಗೆ ಇದ್ದ ಮಗನನ್ನು ಬೆದರಿಕೆ ಹಾಕಿ ಹೊರಗೆ ಕಳುಹಿಸಿದ್ದಾರೆ. ಬಳಿಕ ಇಬ್ಬರಲ್ಲಿ ಒಬ್ಬ ಬ್ಲೇಡ್ ತೆಗೆದುಕೊಂಡು ವ್ಯಕ್ತಿಯನ್ನು ಕತ್ತರಿಸಲು ಆರಂಭಿಸಿದ್ದಾನೆ. ಇನ್ನೊಬ್ಬ ಅಲ್ಲೇ ಇದ್ದ ಇಟ್ಟಿಗೆಯನ್ನು ತೆಗೆದುಕೊಂಡು ಬಂದು ವ್ಯಕ್ತಿಯ ಕಾಲುಗಳನ್ನು ಪುಡಿಗೈದಿದ್ದಾನೆ. ನಂತರ ತಲೆಗೆ ಇಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆಗೈದಿದ್ದಾರೆ.

    ವ್ಯಕ್ತಿಯನ್ನು ಕೊಲೆಗೈದ ನಂತರ ಮನೆಯಿಂದ ಹೊರ ಬಂದ ಆರೋಪಿಗಳು, ಭಯಭೀತನಾಗಿದ್ದ ಮಗನ ಬಳಿ ಹೋದರು. ಅಲ್ಲದೆ ಆತನ ಎದುರು ಚೌಹಾನ್ ಕೊಲೆ ಮಾಡಿರುವುದಾಗಿ ಕೂಗಿದ್ದಾರೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ನಿನ್ನನ್ನು ಕೂಡ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತೆರಳಿದ್ದಾರೆ. ಆರೋಪಿಗಳಿಬ್ಬರೂ ಮದ್ಯದ ನಶೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇದಿದ ಎಸ್‍ಪಿ ಮುಖಂಡ

    ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇದಿದ ಎಸ್‍ಪಿ ಮುಖಂಡ

    ಲಕ್ನೋ: ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಇದನ್ನು ಸಾರ್ವಜನಿಕ ಸ್ಥಳಗಳಲ್ಲಿ ಬರೆಯಲಾಗುತ್ತದೆ. ಆದರೆ ಇದನ್ನು ಮರೆತು ಸಮಾಜವಾದಿ ಪಕ್ಷದ ಮುಖಂಡ, ಶಾಸಕ ಹಾಜಿ ಇಕ್ರಮ್ ಖುರೇಷಿ ಜಿಲ್ಲಾಸ್ಪತ್ರೆಯ ಆವರಣದಲ್ಲೇ ಸಿಗರೇಟ್ ಸೇದಿದ್ದಾರೆ.

    ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಜನ್ಮದಿನದ ನಿಮಿತ್ತ ಸಮಾಜವಾದಿ ಪಕ್ಷದ ಎಸ್‍ಪಿ ಶಾಸಕರು ಮೊರಾದಾಬಾದ್ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲು ಬಂದಿದ್ದರು. ಈ ವೇಳೆ ಶಾಸಕ ಹಾಜಿ ಇಕ್ರಮ್ ಖುರೇಷಿ ಆಸ್ಪತ್ರೆಯ ಆವರಣದಲ್ಲಿ ಸಿಗರೇಟ್ ಸೇದಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ವಿಶೇಷವೆಂದರೆ, ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಹಾಜಿ ಇಕ್ರಮ್ ಖುರೇಷಿ ತಪ್ಪನ್ನು ಸ್ವೀಕರಿಸುವ ಬದಲು, ಅಸಂಬದ್ಧ ಉತ್ತರವನ್ನು ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ತನ್ನ ಹೆಸರು ಹಾಳು ಮಾಡಲು ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಶಾಸಕರು ಆಸ್ಪತ್ರೆಯ ಆವರಣದಲ್ಲಿ ಸಿಗರೇಟ್ ಸೇದಿದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೆಲ ನೆಟ್ಟಿಗರು ತಮ್ಮದೆಯಾದ ಮಾಡಿದ್ದಾರೆ.

  • ಧೂಮಪಾನ ಬಿಡುವಂತೆ ಕುಂಭಮೇಳದಲ್ಲಿ ಸಾಧುಗಳ ಕಾಲು ಮುಟ್ಟಿ ಬೇಡಿಕೊಂಡ ಬಾಬಾ ರಾಮ್‍ದೇವ್

    ಧೂಮಪಾನ ಬಿಡುವಂತೆ ಕುಂಭಮೇಳದಲ್ಲಿ ಸಾಧುಗಳ ಕಾಲು ಮುಟ್ಟಿ ಬೇಡಿಕೊಂಡ ಬಾಬಾ ರಾಮ್‍ದೇವ್

    ಲಕ್ನೋ: ಪ್ರಯಾಗ್ ಕುಂಭ ಮೇಳದಲ್ಲಿ ಸೇರಿರುವ ಅನೇಕ ಸಾಧು ಹಾಗೂ ಭಕ್ತರ ಬಳಿಗೆ ಹೋಗಿ ಧೂಮಪಾನ ಬಿಡುವಂತೆ ಯೋಗ ಗುರು ಬಾಬಾ ರಾಮ್‍ದೇವ್ ಮನವಿ ಮಾಡಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ.

    ಶ್ರೀರಾಮ ಹಾಗೂ ಕೃಷ್ಣ ತಂಬಾಕು ಸೇವನೆ ಮಾಡುತ್ತಿರಲಿಲ್ಲ. ಅವರನ್ನು ಪೂಜಿಸುವ ನಾವು ತಂಬಾಕು ಸೇವನೆ ಹಾಗೂ ಧೂಮಪಾನ ಮಾಡುವುದು ಎಷ್ಟು ಸರಿ? ನಾವೆಲ್ಲರೂ ಧೂಮಪಾನ ಬಿಟ್ಟುಬಿಡೋಣ ಎಂದು ಬಾಬಾ ರಾಮ್‍ದೇವ್ ಸಾಧುಗಳಿಗೆ ಮನವರಿಕೆ ಮಾಡುತ್ತಿದ್ದಾರೆ.

    ಸಾಧುಗಳಾದ ನಾವು ಮನೆ, ಕುಟುಂಬ ಸೇರಿದಂತೆ ಎಲ್ಲವನ್ನೂ ಬಿಟ್ಟಿದ್ದೇವೆ. ಇದಕ್ಕಿಂತ ಮಿಗಿಲಾಗಿ ನಮ್ಮ ತಂದೆ ಹಾಗೂ ತಾಯಿಯನ್ನು ಬಿಟ್ಟು ಬಂದಿದ್ದೇವೆ. ಆದರೆ ನಮ್ಮಿಂದ ಯಾಕೆ ಧೂಮಪಾನ ಬೀಡಲು ಆಗುತ್ತಿಲ್ಲ ಎಂದು ಪ್ರಶ್ನಿಸಿ, ಸಾಧುಗಳ ಕಾಲು ಮುಟ್ಟಿ ಧೂಮಪಾನ ಮಾಡದಂತೆ ಬಾಬಾ ರಾಮ್‍ದೇವ್ ಮನವಿ ಮಾಡಿಕೊಂಡಿದ್ದಾರೆ.

    https://twitter.com/yogrishiramdev/status/1090858740046315520

    ಬಾಬಾ ರಾಮ್‍ದೇವ್ ಅವರು ಅನೇಕ ಸಾಧುಗಳ ಬಳಿ ಇದ್ದ ಚಿಲ್ಮಿ (ತಂಬಾಕು ಸೇವನೆ ಕೊಳವೆ) ಪಡೆದಿದ್ದಾರೆ. ಈ ಮೂಲಕ ಅವುಗಳನ್ನು ತಮ್ಮ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಡುತ್ತೇನೆ. ನೀವು ತಂಬಾಕು ಸೇವನೆಯನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ.

    ಧೂಮಪಾನ ಹಾಗೂ ತಂಬಾಕು ಸೇವನೆಯನ್ನು ಬಿಡುವಂತೆ ಯುವಕರಿಗೆ ಸಲಹೆ ನೀಡುತ್ತಿರುವೆ. ಹೀಗಾಗಿ ಮಹಾತ್ಮರಿಗೂ ಈ ಕುರಿತು ಮನವರಿಕೆ ಮಾಡಿಕೊಡುತ್ತಿರುವೆ ಎಂದು ಬಾಬಾ ರಾಮ್‍ದೇವ್ ತಿಳಿಸಿದ್ದಾರೆ.

    ಒಟ್ಟು 55 ದಿನಗಳ ಕಾಲ ನಡೆಯುವ ಕುಂಭ ಮೇಳವು ಮಾರ್ಚ್ 4ರಂದು ಮುಕ್ತಾಯವಾಗಲಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಜನರು ಸೇರುವ ಮೇಳ ಇದಾಗಿದೆ. ಸಾಧು, ಸಂತರು ಹಾಗೂ ಭಕ್ತರು ಸೇರಿದಂತೆ ಸುಮಾರು 13 ಕೋಟಿ ಜನರು ಪ್ರಯಾಗ್ ಕುಂಭ ಮೇಳದಲ್ಲಿ ಸೇರುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv