Tag: Smile

  • ಕಿಮ್ ಜಾಂಗ್ ಇಲ್ ಪುಣ್ಯತಿಥಿ – 11 ದಿನ ನಗೋದನ್ನ ಬ್ಯಾನ್ ಮಾಡಿದ ಉತ್ತರ ಕೊರಿಯಾ ಸರ್ಕಾರ

    ಕಿಮ್ ಜಾಂಗ್ ಇಲ್ ಪುಣ್ಯತಿಥಿ – 11 ದಿನ ನಗೋದನ್ನ ಬ್ಯಾನ್ ಮಾಡಿದ ಉತ್ತರ ಕೊರಿಯಾ ಸರ್ಕಾರ

    ಸಿಯೋಲ್: ಮಾಜಿ ನಾಯಕ ಕಿಮ್ ಜಾಂಗ್ ಇಲ್ 10ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಉತ್ತರ ಕೊರಿಯಾದಲ್ಲಿ 11 ದಿನಗಳ ಕಾಲ ನಗುವುದನ್ನು ನಿಷೇಧಿಸಲಾಗಿದ್ದು, ಶೋಕಾಚರಣೆ ನಡೆಸುವಂತೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

    ಈ ಕುರಿತಂತೆ ಈಶಾನ್ಯ ಗಡಿ ನಗರವಾದ ಸಿನುಯಿಜುವಿನ ನಾಗರಿಕರೊಬ್ಬರು ರೇಡಿಯೋ ಫ್ರೀ ಏಷ್ಯಾಗೆ ಪ್ರತಿಕ್ರಿಯಿಸಿದ್ದು, ಪ್ರಜೆಗಳು ಮದ್ಯಪಾನ, ದಿನಸಿ, ಶಾಪಿಂಗ್ ಮಾಡಬಾರದು ಮತ್ತು ವಿರಾಮ ಚಟುವಟಿಕೆಯಲ್ಲಿ ತೊಡಗಬಾರದು. ಒಂದು ವೇಳೆ 11 ದಿನಗಳ ಶೋಕಾಚರಣೆಯ ಅವಧಿಯಲ್ಲಿ ಈ ನಿಯಮಗಳನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಎಚ್ಚರಿಕೆಯಿಂದ ಮಾತಾಡ್ತೀನಿ- ಕ್ಷಮೆಯಾಚಿಸಿದ ರಮೇಶ್ ಕುಮಾರ್

    ಈ ಮುನ್ನ ಶೋಕಾಚರಣೆಯ ವೇಳೆ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಕೆಲವರನ್ನು ಬಂಧಿಸಿ ಅವರನ್ನು ಸೈದ್ಧಾಂತಿಕ ಅಪರಾಧಿಗಳೆಂದು ಪರಿಗಣಿಸಿ ಪೊಲೀಸರು ಕರೆದೊಯ್ದಿದ್ದರು. ಆದರೆ ಮತ್ತೆ ಅವರು ಕಾಣಿಸಿಕೊಂಡಿಲ್ಲ. ಅಲ್ಲದೇ ಶೋಕಾಚರಣೆಯ ಸಮಯದಲ್ಲಿ ಕುಟುಂಬದ ಸದಸ್ಯರೇ ಸತ್ತರೂ ಜೋರಾಗಿ ಅಳುವಂತಿಲ್ಲ. ಶೋಕಾಚರಣೆ ಮುಗಿದ ನಂತರವಷ್ಟೇ ದೇಹವನ್ನು ಹೊರತೆಗೆಯಬೇಕು. ಶೋಕ ದಿನಗಳಲ್ಲಿ ಜನ್ಮದಿನವನ್ನು ಆಚರಿಸಿಕೊಳ್ಳುವಂತಿಲ್ಲ. ಶೋಕಾಚರಣೆಯ ಅವಧಿಯಲ್ಲಿ ಮನಸ್ಥಿತಿಗೆ ಹಾನಿ ಮಾಡುವವರನ್ನು ಗುರುತಿಸಿ ಶಿಕ್ಷಿಸಲು ಪೊಲೀಸರಿ ಅಧಿಕಾರ ನೀಡಲಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ಲಾಮಾಬಾದ್‍ನಲ್ಲಿ 3 ದಿನ ಮೊಬೈಲ್ ಸೇವೆ ಸ್ಥಗಿತ

    ಕಿಮ್ ಜಾಂಗ್ ಇಲ್ ಅವರ ಪುಣ್ಯತಿಥಿಯ ಪ್ರಯುಕ್ತ ಉತ್ತರ ಕೊರಿಯಾದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇವುಗಳಲ್ಲಿ ಅವರ ಫೋಟೋ ಮತ್ತು ಪೇಟಿಂಗ್ ಅನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ ಮತ್ತು ಸಂಗೀತ ಕಚೇರಿಯನ್ನು ಏರ್ಪಡಿಸಲಾಗಿದೆ.

  • ದಾವೋಸ್‍ನಲ್ಲಿ ಯಡಿಯೂರಪ್ಪ ಖುಷ್ ಖುಷ್, ಸ್ಮೈಲ್ ಸ್ಮೈಲ್!

    ದಾವೋಸ್‍ನಲ್ಲಿ ಯಡಿಯೂರಪ್ಪ ಖುಷ್ ಖುಷ್, ಸ್ಮೈಲ್ ಸ್ಮೈಲ್!

    ದಾವೋಸ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಗೋದು ಅಪರೂಪ ಅನ್ನೋರೇ ಹೆಚ್ಚು. ನಗುವ ಒಂದು ಫೋಟೋ ತೆಗಿಬೇಕು ಅಂದ್ರೆ ಕಷ್ಟಕಷ್ಟ ಅಂತಿದ್ದ ಕಾಲವಿತ್ತು. ಆದ್ರೀಗ ಸಿಎಂ ಯಡಿಯೂರಪ್ಪ ಕೊಂಚ ಬದಲಾಗಿದ್ದಾರೆ ಅಂತಿದ್ದಾರೆ ಅವರ ಆಪ್ತರು. ಈ ನಡುವೆ ದಾವೋಸ್‍ನಲ್ಲಂತೂ ಯಡಿಯೂರಪ್ಪ ಅವರಿಗೆ ಸಿಟ್ಟು ಬಂದಿದ್ದೇ ಕಡಿಮೆ ಅಂತೆ. ಉದ್ಯಮಿಗಳ ಹಾಗೂ ರಾಜ್ಯದ ಅಧಿಕಾರಿಗಳ ಜೊತೆಗೆ ಫುಲ್ ಖುಷಿಯಾಗಿದ್ದಾರಂತೆ. ಜತೆಗೆ ಆಗಾಗ್ಗೆ ಫೋಟೋ ಶೂಟ್ ಕೂಡ ನಡೀತಾ ಇದೆ ಎನ್ನುವುದು ಫಾರಿನ್ ಸ್ಪೆಷಲ್.

    ಸಿಎಂ ಯಡಿಯೂರಪ್ಪ ಅವರು ದಾವೋಸ್‍ಗೆ ತೆರಳಿದ ಮೊದಲ ದಿನವೇ ಸಿಂಗಲ್ ಆಗಿ ವಾಕ್ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಕೂಲಿಂಗ್ ಕನ್ನಡಕ, ಟೋಪಿ, ಫುಲ್ ಗೌನ್ ಹಾಕೊಂಡು ವಾಕ್ ಮಾಡಿದ್ದ ಫೋಟೋ ಫುಲ್ ವೈರಲ್ ಆಗಿತ್ತು. ಸಿಎಂ ದಾವೋಸ್‍ನಿಂದ ಶುಕ್ರವಾರ ವಾಪಸ್ ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ ಇವತ್ತು ಸಂಜೆ ಆರ್ಥಿಕ ಸಮ್ಮೇಳನದ ಎಲ್ಲ ಸಭೆಗಳನ್ನು ಮುಗಿಸಿ ಯಡಿಯೂರಪ್ಪ ಅವರು ದಾವೋಸ್ ಸಿರಿಯನ್ನು ಮನಸೊರೆಗೊಂಡರು ಎನ್ನಲಾಗಿದೆ. ದಾವೋಸ್ ಸುತ್ತಮುತ್ತ ರೌಂಡ್ ಹಾಕಿದ ಅವರು ನಗು ನಗುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    ಕರ್ನಾಟಕದಲ್ಲಿದ್ದಾಗ ಸಿಎಂ ಯಡಿಯೂರಪ್ಪ ಅವರು ಯಾವ ವಿಚಾರಕ್ಕೆ ಖುಷಿಯಾಗಿ ಇರ್ತಾರೆ, ಯಾವ ವಿಚಾರಕ್ಕೆ ಗರಂ ಆಗ್ತಾರೆ ಅಂತ ತಲೆಕೆಡಿಸಿಕೊಳ್ಳುತ್ತಿದ್ದ ಅಧಿಕಾರಿಗಳು, ಆಪ್ತರು ಈಗ ಕೂಲ್ ಆಗಿದ್ದಾರಂತೆ. ದಾವೋಸ್‍ನಲ್ಲಿ ಆ ಟೆನ್ಶನ್ ಇಲ್ಲ. ಬಹುತೇಕ ಎಲ್ಲ ಉದ್ಯಮಿಗಳ ಜತೆ ನಗುನಗುತ್ತಲೇ ಮಾತನಾಡುತ್ತಾರೆ. ನಮ್ಮ ಜತೆಯಲ್ಲೂ ಖುಷಿ ಖುಷಿಯಿಂದ ಮಾತಣಾಡುತ್ತಾರೆ. ನಮ್ಮ ರಾಜಾಹುಲಿ ಫುಲ್ ಖುಷ್ ಖುಷ್. ಮುಖದಲ್ಲಿ ಸದಾ ಸ್ಮೈಲ್ ಸ್ಮೈಲ್ ಎನ್ನುತ್ತಿದೆ ದಾವೋಸ್‍ನಲ್ಲಿ ಅವರ ಜತೆ ಇರುವ ಆಪ್ತ ಬಳಗ.