Tag: smartphone

  • ವಿಶ್ವದ ಮೊದಲ 4ಕೆ  ಎಚ್‍ಡಿ ಆರ್  ಸ್ಕ್ರೀನ್ ಫೋನ್ ಬಿಡುಗಡೆ: ವಿಶೇಷತೆ ಏನು? ಬೆಲೆ ಎಷ್ಟು?

    ವಿಶ್ವದ ಮೊದಲ 4ಕೆ ಎಚ್‍ಡಿ ಆರ್ ಸ್ಕ್ರೀನ್ ಫೋನ್ ಬಿಡುಗಡೆ: ವಿಶೇಷತೆ ಏನು? ಬೆಲೆ ಎಷ್ಟು?

    ಬಾರ್ಸಿಲೋನಾ: ವಿಶ್ವದ ಮೊದಲ 4ಕೆ ಎಚ್‍ಡಿ ಆರ್  ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಫೋನನ್ನು ಜಪಾನ್‍ನ ಸೋನಿ ಕಂಪೆನಿ ಬಿಡುಗಡೆ ಮಾಡಿದೆ.  ಸ್ಪೇನ್ ರಾಜಧಾನಿ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮ್ಮೇಳನದಲ್ಲಿ ಎಕ್ಸ್ ಪೀರಿಯಾ ಎಕ್ಸ್ ಝಡ್ ಪ್ರೀಮಿಯಂ ಫೋನನ್ನು ಬಿಡುಗಡೆ ಮಾಡಿದೆ.

    ಈ ಫೋನಿಗೆ ಸೋನಿ 3840 * 2160 ಪಿಕ್ಸೆಲ್, 801 ಪಿಪಿಐ( ಪಿಕ್ಸೆಲ್ ಪರ್ ಇಂಚ್) ಇರುವ 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟಿವ್ ಸ್ಕ್ರೀನ್ ನೀಡಿದೆ. ಒಂದು ಸೆಕೆಂಡ್‍ಗೆ 960 ಫ್ರೇಂನಲ್ಲಿ ಸ್ಲೋ ಮೋಷನ್ ವಿಡಿಯೋಗಳನ್ನು ಸೆರೆಹಿಡಿಯಬಲ್ಲ ಸಾಮರ್ಥ್ಯ ಈ ಫೋನಿಗೆ ಇದೆ. ವರ್ಲ್ಡ್  ಫಾಸ್ಟೆಸ್ಟ್ ಇಮೇಜ್ ಕ್ಯಾಪ್ಚುರ್ ಟೆಕ್ನಾಲಜಿಯನ್ನು ಈ ಫೋನ್ ಹೊಂದಿದೆ ಎಂದು ಸೋನಿ ಹೇಳಿದೆ. ಅಷ್ಟೇ ಅಲ್ಲದೇ ಈ ಫೋನ್ ಕ್ಯಾಮೆರಾ ಮೂರು ಸೆನ್ಸರ್ ವ್ಯವಸ್ಥೆಯನ್ನು ಹೊಂದಿದೆ.

    ಇಮೇಜ್ ಸೆನ್ಸರ್(ಹೈ ಕ್ವಾಲಿಟಿ ಫೋಟೋ ಮತ್ತು ಅಟೋಫೋಕಸ್ ಸ್ಪೀಡ್ ಬಳಸಿ ಬ್ಲರ್ ಆಗದಂತೆ ತಡೆಯುವ ಸೆನ್ಸರ್) ಲೇಸರ್ ಅಟೋ ಫೋಕಸ್ ಸೆನ್ಸರ್(ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ತೆಗೆಯಲು ಸಹಾಯ ಮಾಡಬಲ್ಲ ಸೆನ್ಸರ್) ಆರ್‍ಜಿಬಿಸಿ ಐಆರ್ ಸೆನ್ಸರ್(ವೈಟ್ ಬ್ಯಾಲೆನ್ಸ್ ಸರಿ ಹೊಂದಿಸಬಲ್ಲ ಸೆನ್ಸರ್) ವ್ಯವಸ್ಥೆ ಈ ಫೋನಿನಲ್ಲಿ ಇದೆ.

    ಸೋನಿ ಕ್ವಾಲಕಂ ಕಂಪೆನಿಯ ಚಿಪ್ ಬಳಸಿದ್ದು, ಒಂದು ಸೆಕೆಂಡ್‍ಗೆ ಒಂದು ಗಿಗಾಬೈಟ್ ವೇಗದಲ್ಲಿ ಡೌನ್‍ಲೋಡ್ ಮಾಡುವ ಸಾಮರ್ಥ್ಯವನ್ನು ಈ ಫೋನ್ ಹೊಂದಿದೆ. ಹೀಗಾಗಿ ಸಿನಿಮಾಗಳು ವಿಡಿಯೋಗಳು ಕೆಲವೇ ಸೆಕೆಂಡ್‍ಗಳಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಗಿಗಾಬೈಟ್ ಎಲ್‍ಟಿಇ ವೇಗವನ್ನು ಹೊಂದಿರುವ ವಿಶ್ವದ ಮೊದಲ ಫೋನ್ ಇದಾಗಿದೆ.

    4ಕೆ ವಿಡಿಯೋಗಳು ಸುಲಭವಾಗಿ ಸಿಗದ ಹಿನ್ನೆಲೆಯಲ್ಲಿ ಸೋನಿ ಅಮೆಜಾನ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅಮೇಜಾನ್ ಪ್ರೈಂನಲ್ಲಿರುವ ಕೆಲ ವಿಡಿಯೋಗಳನ್ನು ಗ್ರಾಹಕರು ವೀಕ್ಷಿಸಬಹುದು.

    ಬೆಲೆ ಎಷ್ಟು?
    ಸೋನಿ ಈಗ ಬಿಡುಗಡೆ ಮಾಡಿದ್ದರೂ, ಏಪ್ರಿಲ್ 5ರಂದು ವಿಶ್ವದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಬೆಲೆಯನ್ನು ಕಂಪೆನಿ ಅಧಿಕೃತವಾಗಿ ಪ್ರಕಟಿಸದೇ ಇದ್ದರೂ 799 ಡಾಲರ್(ಅಂದಾಜು 53 ಸಾವಿರ ರೂ.) ದರವನ್ನು ನಿಗದಿಪಡಿಸುವ ಸಾಧ್ಯತೆಯಿದೆ.

    ಪಿಕ್ಸೆಲ್,ಪಿಪಿಐ ಜಾಸ್ತಿ ಇದ್ರೆ ಏನು ಲಾಭ?
    ಪಿಕ್ಸೆಲ್ ಮತ್ತು ಪಿಪಿಐ ಜಾಸ್ತಿ ಇದ್ದಷ್ಟು ಗ್ರಾಹಕರು ಉತ್ತಮ ಗುಣಮಟ್ಟದ ವಿಡಿಯೋ, ಫೋಟೋಗಳನ್ನು ನೋಡಬಹುದು. ಸಾಧಾರಣ ಈಗ ಬರುತ್ತಿರುವ ಹೆಚ್ಚಿನ ಫೋನ್‍ಗಳು 1920*1080 ಪಿಕ್ಸೆಲ್, 1440*2560 ಪಿಕ್ಸೆಲ್, 441 ಪಿಪಿಐ, 518 ಪಿಪಿಐ ನೊಂದಿಗೆ ಬಿಡುಗಡೆಯಾಗುತ್ತದೆ. ಆದರೆ ಈ  ಫೋನ್  3840 * 2160 ಪಿಕ್ಸೆಲ್, 801 ಪಿಪಿಐ ನೊಂದಿಗೆ ಬಿಡುಗಡೆಯಾಗಿದೆ.

    ಇದನ್ನೂ ಓದಿ: 4ಜಿಬಿ ರಾಮ್, 5000 ಎಂಎಎಚ್ ಬ್ಯಾಟರಿ, ಡ್ಯುಯಲ್ ಸಿಮ್ ಫೋನ್ ಭಾರತದಲ್ಲಿ ಈಗ ಲಭ್ಯ

    ಎಕ್ಸ್ ಪೀರಿಯಾ ಎಕ್ಸ್ ಝಡ್ ಪ್ರೀಮಿಯಂ ಗುಣವೈಶಿಷ್ಟ್ಯಗಳು

    ಬಾಡಿ:
    – ಸಿಂಗಲ್ ಸಿಮ್/ ಡ್ಯುಯಲ್ ಸಿಮ್
    – 156*77*7.9 ಮಿ.ಮೀ ಗಾತ್ರ
    – 195 ಗ್ರಾಂ

    ಡಿಸ್ಪ್ಲೇ:
    – 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟಿವ್ ಟಚ್‍ಸ್ಕ್ರೀನ್
    – 3840*2160 ಪಿಕ್ಸೆಲ್,801 ಪಿಪಿಐ
    – ಕಾರ್ನಿಂಗ್ ಗ್ಲಾಸ್ 5

    ಪ್ಲಾಟ್‍ಫಾರಂ:
    – ಆಂಡ್ರಾಯ್ಡ್ 7.1 ನೂಗಟ್ ಓಎಸ್
    – ಕ್ವಾಲಕಂ ಸ್ನಾಪ್‍ಡ್ರಾಗನ್ 835 ಅಕ್ಟಾಕೋರ್ ಪ್ರೊಸೆಸರ್
    – Adreno 540 ಗ್ರಾಫಿಕ್ಸ್ ಪ್ರೊಸೆಸರ್

    ಮೆಮೊರಿ
    – 64 ಜಿಬಿ ಆಂತರಿಕ ಮೆಮೊರಿ
    – 4ಜಿಬಿ ರಾಮ್
    – 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

    ಕ್ಯಾಮೆರಾ
    – 19 ಎಂಪಿ ಮೋಷನ್ ಐ ಹಿಂದುಗಡೆ ಕ್ಯಾಮೆರಾ
    – 1/2.3” Exmor ಮೊಬೈಲ್ ಮೆಮೊರಿ stacked ಸೆನ್ಸರ್
    – ಪೇಸ್ ಡಿಟೆಕ್ಷನ್,ಲೇಸರ್ ಅಟೋಫೋಕಸ್, ಎಲ್‍ಇಡಿ ಫ್ಲಾಶ್
    – ಪಿಕ್ಸೆಲ್ ಪಿಚ್ 1.22μm
    – ಎಕ್ಸ್ 8 ಡಿಜಿಟಲ್ ಝೂಮ್,
    – ಲೋ ಲೈಟ್ ಫೋಟೋ : ISO 12800 / 4000 (ವಿಡಿಯೋ)
    – 0.5 ಸೆಕೆಂಡ್ ಕ್ವಿಕ್ ಲಾಂಚ್ ಆಂಡ್ ಲಾಂಚರ್
    – ಟಚ್ ಫೋಕಸ್, ಫೇಸ್ ಡಿಟೆಕ್ಷನ್
    – ಮುಂದುಗಡೆ 13 ಎಂಪಿ ಕ್ಯಾಮೆರಾ

    ಇತ್ಯಾದಿ
    – ಫಿಂಗರ್ ಪ್ರಿಂಟ್ ಸೆನ್ಸರ್,ಎನ್‍ಎಫ್‍ಸಿ,
    – ಫಾಸ್ಟ್ ಬ್ಯಾಟರಿ ಚಾರ್ಜಿಂಗ್
    – ತೆಗೆಯಲು ಸಾಧ್ಯವಿಲ್ಲದ 320 ಎಂಎಎಚ್ ಲಿಯಾನ್ ಬ್ಯಾಟರಿ

    ಇದನ್ನೂ ಓದಿ: 17 ವರ್ಷಗಳ ಬಳಿಕ ಮತ್ತೆ ನೋಕಿಯಾ 3310 ಫೀಚರ್ ಫೋನ್ ರಿಲೀಸ್: ಬೆಲೆ ಎಷ್ಟು? ವಿಶೇಷತೆ ಏನು?

     

    ಸೋನಿ ಕ್ಯಾಮೆರಾದ ಮೂರು ಸೆನ್ಸರ್ ಗಳು

    ಎಚ್ ಡಿ ಮತ್ತು 4ಕೆ ರೆಸೊಲೂಶನ್ ಹೀಗಿರುತ್ತೆ

    https://www.youtube.com/watch?v=wlboZNEP6bs

    https://www.youtube.com/watch?v=z-MQ6UKVYlU

  • ಭೀಮ್ ಆ್ಯಪ್‍ನಲ್ಲಿ ಕನ್ನಡ ಸೇರ್ಪಡೆ: ಇದೂವರೆಗೂ ಈ ಆ್ಯಪ್‍ನಲ್ಲಿ ಎಷ್ಟು ವಹಿವಾಟು ನಡೆದಿದೆ?

    ನವದೆಹಲಿ: ಸುಲಭವಾಗಿ ಮೊಬೈಲ್‍ನಲ್ಲಿ ವಹಿವಾಟು ನಡೆಸುವ ಉದ್ದೇಶದಿಂದ ಪರಿಚಯಿಸಲಾಗಿದ್ದ ಭೀಮ್ ಆ್ಯಪ್ ಮೂಲಕ ಒಟ್ಟು 361 ಕೋಟಿ ರೂ. ವಹಿವಾಟು ನಡೆದಿದೆ ಎಂದು ಸರ್ಕಾರ ಹೇಳಿದೆ.

    ಭೀಮ್ (ಭಾರತ್ ಇಂಟರ್‍ಫೇಸ್ ಫಾರ್ ಮನಿ) ಅಪ್ಲಿಕೇಶನ್ ಮೂಲಕ ಜನರು ಒಟ್ಟು 361 ಕೋಟಿ ರೂ, ವಹಿವಾಟು ನಡೆಸಿದ್ದಾರೆ ಎಂದು ಯೋಜನಾ ಖಾತೆ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದರು.

    ಸ್ಕಾಂಡಿನೇವಿಯನ್ ದೇಶಗಳಲ್ಲಿ(ಡೆನ್ಮಾರ್ಕ್, ನಾರ್ವೆ, ಸ್ವೀಡನ್) ನಗದು ರಹಿತ ವಹಿವಾಟು ಶೇ. 90 ರಷ್ಟು ಇದ್ದರೆ, ಭಾರತದಲ್ಲಿ ಅದರ ಪ್ರಮಾಣ ಶೇ. 3 ರಷ್ಟಿದೆ. ಒಂದು ವೇಳೆ ಈ ಪ್ರಮಾಣ ಶೇ.23ಕ್ಕೆ ತಲುಪಿದರೆ ನಾವು ಕಪ್ಪುಹಣವನ್ನು ತಡೆಗಟ್ಟಿ ದೇಶದ ಆರ್ಥಿಕತೆ ಸುಧಾರಣೆಯಾಗಲಿದೆ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಅವರು ಹೇಳಿದರು.

    ಕನ್ನಡದಲ್ಲೂ ಲಭ್ಯ: ಆರಂಭದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದ್ದ ಈ ಸೇವೆಗೆ ಈಗ ಕನ್ನಡ ಸೇರಿದಂತೆ, ಬೆಂಗಾಳಿ, ಗುಜರಾತಿ, ಮಲೆಯಾಳಂ, ತಮಿಳು, ತೆಲುಗು ಭಾಷೆ ಸೇರ್ಪಡೆಗೊಂಡಿದೆ.

    ಆನ್‍ಲೈನ್ ವಹಿವಾಟು ನಡೆಸಲು ಗ್ರಾಹಕರು ಖಾಸಗಿ ಕಂಪೆನಿಗಳ ಆ್ಯಪ್‍ಗಳನ್ನು ಬಳಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 2016ರ ಡಿಸೆಂಬರ್ 30ರಂದು ಭೀಮ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದರು.

    ಇದನ್ನೂ ಓದಿ: ಭೀಮ್ ಆ್ಯಪ್ ಬಳಸೋದು ಹೇಗೆ?

  • 4ಜಿಬಿ ರಾಮ್, 5000 ಎಂಎಎಚ್ ಬ್ಯಾಟರಿ, ಡ್ಯುಯಲ್ ಸಿಮ್ ಫೋನ್ ಭಾರತದಲ್ಲಿ ಈಗ ಲಭ್ಯ

    4ಜಿಬಿ ರಾಮ್, 5000 ಎಂಎಎಚ್ ಬ್ಯಾಟರಿ, ಡ್ಯುಯಲ್ ಸಿಮ್ ಫೋನ್ ಭಾರತದಲ್ಲಿ ಈಗ ಲಭ್ಯ

    ನವದೆಹಲಿ: ಹೈ ಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್, 4ಜಿ ರಾಮ್ ಹೊಂದಿರುವ ಝಡ್‍ಟಿಇ ಬ್ಲೇಡ್ ಪ್ಲೇಟ್ ಎ2 ಪ್ಲಸ್ ಫೋನನ್ನು  ಈಗ ನೀವು ಖರೀದಿಸಬಹುದು. ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ಈ ಫೋನ್ ಖರೀದಿಗೆ ಲಭ್ಯವಾಗಲಿದೆ.

    4ಜಿಬಿ ರಾಮ್ 5000 ಎಂಎಎಚ್ ಬ್ಯಾಟರಿ ಹೊಂದಿರುವ ಈ ಫೋನಿಗೆ ಕಂಪೆನಿ 11,999 ರೂ. ಬೆಲೆಯನ್ನು ನಿಗದಿ ಪಡಿಸಿದೆ. ಮೆಟಲ್ ಬಾಡಿ, ಫಾಸ್ಟ್ ಚಾರ್ಜಿಂಗ್, ಅಕ್ಟಾ ಕೋರ್ ಪ್ರೊಸೆಸರ್ ಹೊಂದಿರುವ ಈ ಫೋನ್ ಆಂಡ್ರಾಯ್ಡ್ ಮಾರ್ಶ್‍ಮೆಲೋ ಆಪರೇಟಿಂಗ್ ಸಿಸ್ಟಂ ಹೊಂದಿದೆ.

    ಎಲ್‍ಟಿ ನೆಟ್‍ವರ್ಕಿಗೆ ಸಪೋರ್ಟ್ ಮಾಡುವ ಕಾರಣ ಈ ಫೋನಿನಲ್ಲಿ ಜಿಯೋ ಸಿಮ್ ಹಾಕಬಹುದು.

    ಝಡ್‍ಟಿಇ ಬ್ಲೇಡ್ ಪ್ಲೇಟ್ ಎ2 ಪ್ಲಸ್ ಗುಣವೈಶಿಷ್ಟ್ಯಗಳು
    ಬಾಡಿ:
    155*76.2*9.8 ಮಿ.ಮೀ
    189 ಗ್ರಾಂ ತೂಕ
    ಡ್ಯುಯಲ್ ಸಿಮ್(2 ಸಿಮ್ ಅಥವಾ 1 ನ್ಯಾನೋ ಸಿಮ್+ ಮೈಕ್ರೋ ಎಸ್‍ಡಿ ಕಾರ್ಡ್)

    ಡಿಸ್ಪ್ಲೇ:
    ಐಪಿಎಸ್ ಎಲ್‍ಸಿಡಿ ಕೆಪಾಸಿಟಿವ್ ಟಚ್‍ಸ್ಕ್ರೀನ್
    5.5 ಇಂಚಿನ ಸ್ಕ್ರೀನ್(1080*1920 ಪಿಕ್ಸೆಲ್)
    401 ಪಿಪಿಐ ಪಿಕ್ಸೆಲ್ ಡೆನ್ಸಿಟಿ

    ಪ್ಲಾಟ್‍ಫಾರಂ:
    ಆಂಡ್ರಾಯ್ಡ್ ಮಾರ್ಶ್‍ಮೆಲೋ ಆಪರೇಟಿಂಗ್ ಸಿಸ್ಟಂ
    ಮೀಡಿಯಟೆಕ್ ಅಕ್ಟಾಕೋರ್ 1.5 GHz  ಕಾರ್ಟೆಕ್ಸ್ ಎ53 ಪ್ರೊಸೆಸರ್
    Mali-T860MP2 ಗ್ರಾಫಿಕ್ಸ್ ಪ್ರೊಸೆಸರ್

    ಮೆಮೊರಿ:
    2ನೇ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದರೆ 256 ಜಿಬಿವರೆಗಿನ ಸಾಮರ್ಥ್ಯದ ಮೆಮೊರಿ ಕಾರ್ಡ್ ಹಾಕಬಹುದು
    32 ಜಿಬಿ ಆಂತರಿಕ ಮಮೊರಿ, 4ಜಿಬಿ ರಾಮ್

    ಕ್ಯಾಮೆರಾ
    ಹಿಂದುಗಡೆ ಡ್ಯುಯಲ್ ಎಲ್‍ಇಡಿ ಫ್ಲಾಶ್ ಹೊಂದಿರುವ 13 ಎಂಪಿ ಕ್ಯಾಮೆರಾ
    ಮುಂದುಗಡೆ 8 ಎಂಪಿ ಕ್ಯಾಮೆರಾ

    ಇತರೇ:
    ಫಿಂಗರ್ ಪ್ರಿಂಟ್, ಎಕ್ಸಲರೋಮೀಟರ್, ಪ್ರಾಕ್ಸಿಮಿಟಿ, ಕಂಪಾಸ್ ಸೆನ್ಸರ್
    ತೆಗೆಯಲು ಸಾಧ್ಯವಿಲ್ಲದ 5000 ಎಂಎಎಚ್ ಬ್ಯಾಟರಿ