ನವದೆಹಲಿ: ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್25 ಆಲ್ಟ್ರಾ, ಎಸ್24 ಆಲ್ಟ್ರಾ, ಎಸ್23 ಆಲ್ಟ್ರಾ ಸ್ಮಾರ್ಟ್‌ಫೋನಿನ (Smartphone) ಬೆಲೆ ಭಾರೀ ಕಡಿತವಾಗಿದೆ.
ಗೆಲಾಕ್ಸಿ ಎಸ್ 25 ಆಲ್ಟ್ರಾ (Samsung Galaxy S25 Ultra) 1,29,999 ರೂ. ದರದಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್ ಅಮೆಜಾನ್ ಇಂಡಿಯಾದಲ್ಲಿ ಹೆಚ್‌ಡಿಎಫ್‌ಸಿ ಕಾರ್ಡ್ ಮೂಲಕ 1,18,999 ರೂ.ಗೆ ಲಭ್ಯವಿದೆ. ಅಷ್ಟೇ ಅಲ್ಲದೇ ಹಳೆಯ ಫೋನ್ ನೀಡುವ ಮೂಲಕ ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್ 12 ಜಿಬಿ ರ‍್ಯಾಮ್, 256 ಜಿಬಿ ಆಂತರಿಕ ಮೆಮೊರಿ, ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಇದನ್ನೂಓದಿ: 25 ವರ್ಷದ ಬಳಿಕ ಪಾಕ್ ತೊರೆದ ಮೈಕ್ರೋಸಾಫ್ಟ್
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 24 ಆಲ್ಟ್ರಾ (8GB RAM + 256GB) ಫೋನ್ 1,29,999 ರೂ.ಗೆ ಬಿಡುಗಡೆಯಾಗಿತ್ತು. ಈಗ ಈ ಫೋನ್ ದರ 38% ಕಡಿಮೆಯಾಗಿದ್ದು 83,999 ರೂ.ಗೆ ಅಮೇಜಾನ್‌ನಲ್ಲಿ ಲಭ್ಯವಿದೆ. ಆಯ್ದ ಕ್ರೆಡಿಟ್ ಕಾರ್ಡ್‌ನಲ್ಲಿ 1,500 ರೂ. ಡಿಸ್ಕೌಂಟ್ ಇದೆ.
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 23 ಆಲ್ಟ್ರಾ (8GB RAM + 256GB ) ಫೋನ್ 1,24,999 ರೂ. ದರದಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್ 84,999 ರೂ.ಗೆ ಲಭ್ಯವಿದೆ.
ನವದೆಹಲಿ: ಗೂಗಲ್ (Google) ಕಂಪನಿಯೂ ತನ್ನ ಪಿಕ್ಸೆಲ್ (Pixel) ಸ್ಮಾರ್ಟ್‌ಫೋನ್‌ಗಳನ್ನು (Smartphone) ಮುಂದಿನ ತ್ರೈಮಾಸಿಕದಿಂದ ಭಾರತದಲ್ಲಿ (India) ತಯಾರಿಸಲಿದೆ ಎಂದು ವರದಿಯಾಗಿದೆ.
ಕಳೆದ ವರ್ಷದ ಗೂಗಲ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ ಭಾರತದಲ್ಲಿ ಫೋನ್ ಉತ್ಪಾದನೆ ಮಾಡುವ ಯೋಜನೆ ಪ್ರಕಟಿಸಿತ್ತು. ವರದಿ ಪ್ರಕಾರ ಪಿಕ್ಸೆಲ್ ಮಾದರಿಯಲ್ಲಿ ಹೈ ಎಂಡ್ ಫೋನ್ ಆಗಿರುವ ಪಿಕ್ಸೆಲ್ 8 ಪ್ರೊ ಭಾರತದಲ್ಲಿ ಉತ್ಪಾದನೆಯಾಗುವ ಮೊದಲ ಫೋನ್ ಎನ್ನಲಾಗುತ್ತಿದೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ BMRCL ನಿಂದ ಗುಡ್‌ನ್ಯೂಸ್
ಗೂಗಲ್‌ನ ಇಂಡಿಯಾದ ಪಿಕ್ಸೆಲ್ ಫೋನ್ ಉತ್ಪಾದನೆಯು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ. ಈ ಮೊದಲು ಚೀನಾದಲ್ಲಿ ಪಿಕ್ಸೆಲ್ ಫೋನ್ ತಯಾರಾಗುತ್ತಿತ್ತು. ಅಮೆರಿಕ (USA) ಮತ್ತು ಚೀನಾ (China) ನಡುವೆ ನಡೆಯುತ್ತಿರುವ ತಾಂತ್ರಿಕ ಯುದ್ಧದ ನಂತರ ಗೂಗಲ್ ವಿಯೆಟ್ನಾಂನಲ್ಲಿ ಫೋನ್ ತಯಾರಿಸುತ್ತಿತ್ತು.
ಭಾರತದಲ್ಲಿ ತಯಾರಾಗಲಿರುವ ಫೋನುಗಳನ್ನು ದೇಶದ ಒಳಗಡೆ ಮಾರಾಟ ಮಾಡುತ್ತದೋ ಅಥವಾ ವಿದೇಶಕ್ಕೆ ರಫ್ತು ಮಾಡುತ್ತದೋ ಎನ್ನುವುದು ತಿಳಿದು ಬಂದಿಲ್ಲ.
ನವದೆಹಲಿ: ಎಲ್ಲವೂ ನಿಗದಿಯಂತೆ ನಡೆದರೆ ಮುಂದಿನ ದಿನಗಳಲ್ಲಿ ಟಾಟಾ ಕಂಪನಿ (Tata Company) ಕೋಲಾರದಲ್ಲಿ (Kolara) ತಯಾರಿಸಿದ ಮೇಡ್ ಇನ್ ಇಂಡಿಯಾ ಐಫೋನ್ (iPhone) ಗ್ರಾಹಕರ ಕೈ ಸೇರಲಿದೆ.
ಹೌದು. ಟಾಟಾ ಕಂಪನಿ ತೈವಾನಿನ ವಿಸ್ಟ್ರಾನ್ ಕಂಪನಿಯ ಭಾರತದ ಘಟಕವನ್ನು ಖರೀದಿಸುವ ಮಾತುಕತೆ ಅಂತಿಮ ಹಂತದಲ್ಲಿದೆ. ಎಲ್ಲವೂ ನಿಗದಿಯಂತೆ ನಡೆದರೆ ಈ ಆಗಸ್ಟ್‌ನಲ್ಲೇ ಟಾಟಾ ಕಂಪನಿ ವಿಸ್ಟ್ರನ್ ಕಂಪನಿಯನ್ನು (Wistron Corp) ಖರೀದಿಸಲಿದೆ.
155 ವರ್ಷ ಇತಿಹಾಸ ಹೊಂದಿರುವ ಟಾಟಾ ಗ್ರೂಪ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಆದರೆ ಈಗ ಮೊದಲ ಬಾರಿಗೆ ಫೋನ್ ಉತ್ಪದನಾ ಕ್ಷೇತ್ರಕ್ಕೆ ಕೈ ಹಾಕಿದೆ. ಈ ಡೀಲ್ ಪೂರ್ಣಗೊಂಡ ಬಳಿಕ ಐಫೋನ್ ತಯಾರಿಸಿದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಟಾಟಾ ಗ್ರೂಪ್ ಪಾತ್ರವಾಗಲಿದೆ.
ಇದು 600 ದಶಲಕ್ಷ ಡಾಲರ್ (ಅಂದಾಜು 4,950 ಕೋಟಿ ರೂ.) ಮೊತ್ತದ ಖರೀದಿ ಡೀಲ್ ಆಗಿದ್ದು ಕಳೆದ ವರ್ಷವೇ ಮಾತುಕತೆ ಆರಂಭವಾಗಿತ್ತು. ಈಗ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆ ಎಂದು ವರದಿಯಾಗಿದೆ.
2022-23ರ ಹಣಕಾಸು ವರ್ಷದಲ್ಲಿನ ಮೊಬೈಲ್ ರಫ್ತುಗಳ ಪೈಕಿ ಐಫೋನ್ ಪಾಲು ಶೇ.40 ರಷ್ಟಿದೆ ಎಂದು ನೀತಿ ಆಯೋಗದ ಮಾಜಿ ಸಿಇಒ, ಜಿ20 ಶೆರ್ಪಾ ಅಮಿತಾಬ್ ಕಾಂತ್(Amitabh Kant) ಈ ಹಿಂದೆ ತಿಳಿಸಿದ್ದರು.
2008ರಲ್ಲಿ ಐಫೋನ್ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾರಾಟವಾಗಿತ್ತು. 2021ರಲ್ಲಿ 50 ಲಕ್ಷ ಐಫೋನ್ ಮಾರಾಟವಾಗಿದ್ದರೆ 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್ ಮಾರಾಟವಾಗಿದೆ. ಮಾರಾಟ ಹೆಚ್ಚಾಗುತ್ತಿದ್ದಂತೆ ಆಪಲ್ ಭಾರತದಲ್ಲೇ ಹೆಚ್ಚು ಐಫೋನ್ ಉತ್ಪಾದನೆಗೆ ಮುಂದಾಗಿದೆ.
ವಿಶ್ವದ ಐಫೋನ್ ಮಾರಾಟದಲ್ಲಿ ಕಳೆದ ವರ್ಷ ಭಾರತದ ಘಟಕದ ಪಾಲು ಶೇ.3 ಇದ್ದರೆ 2022ರಲ್ಲಿ ಶೇ.5-7ಕ್ಕೆ ಏರಿಕೆಯಾಗಿದೆ. 2022ರಲ್ಲಿ ಭಾರತದಲ್ಲಿ ಮಾರಾಟವಾದ ಐಫೋನ್ ಪೈಕಿ ಶೇ.85 ರಷ್ಟು ಫೋನುಗಳು ಮೇಡ್ ಇನ್ ಇಂಡಿಯಾ ಫೋನ್ ಆಗಿರುವುದು ವಿಶೇಷ.
ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕಿ ಸ್ವಾವಲಂಬಿಯಾಗಲು ಆತ್ಮನಿರ್ಭರ್ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರ ಭಾರತದ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು, ಹೂಡಿಕೆಗಳನ್ನು ಆಕರ್ಷಿಸಿ ರಫ್ತುಗಳನ್ನು ಹೆಚ್ಚಿಸಲು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸಂಯೋಜಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು 14 ವಲಯಗಳಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (Production Linked Incentive) ಯೋಜನೆ ಪ್ರಾರಂಭಿಸಿದೆ.
ಭಾರತವನ್ನು ಮೊಬೈಲ್ ಉತ್ಪಾದನಾ ಹಬ್ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್‍ಐ) ಯೋಜನೆಯನ್ನು 2021 ರಿಂದ ಆರಂಭಿಸಿತ್ತು. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‍ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಮತ್ತು ವಿಶ್ವದ ಹಲವು ಕಂಪನಿಗಳು ಆಯ್ಕೆಯಾಗಿವೆ.
ಹೈದರಾಬಾದ್: ಅತಿಯಾದ ಸ್ಮಾರ್ಟ್ ಫೋನ್ (Smartphone) ಬಳಕೆಯಿಂದ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡಿದ್ದ ಘಟನೆ ಹೈದರಾಬಾದ್‍ನಲ್ಲಿ (Hyderabad) ನಡೆದಿದೆ.
30 ವರ್ಷದ ಮಂಜು ಒಂದೂವರೆ ವರ್ಷಗಳಿಂದ ದೃಷ್ಟಿ ದೋಷದ ಲಕ್ಷಣಗಳನ್ನು ಹೊಂದಿದ್ದರು. ಮಂಜು ಕತ್ತಲೆಯಲ್ಲಿ ತನ್ನ ಸ್ಮಾರ್ಟ್‍ಫೋನ್ ಅನ್ನು ಅತಿಯಾಗಿ ಬಳಸುತ್ತಿದ್ದಳು. ಇದರಿಂದಾಗಿ ಆಕೆ ದೃಷ್ಟಿ ಕಳೆದುಕೊಂಡಿದ್ದಳು.
ತನ್ನ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಆಕೆ ಬ್ಯೂಟಿಷಿಯನ್ ಕೆಲಸವನ್ನು ತೊರೆದಿದ್ದಾಳೆ. ನಂತರ ತನ್ನ ಮೊಬೈಲ್‍ನಲ್ಲೇ ಗಂಟೆಗಟ್ಟಲೆ ಕಳೆಯಲು ಪ್ರಾರಂಭಿಸಿದಳು. ಅದಾದ ಬಳಿಕ ಆಕೆಗೆ ಈ ರೋಗಲಕ್ಷಣಗಳು ಪ್ರಾರಂಭವಾದವು.
ಅದಾದ ಬಳಿಕ ಆಕೆ ವೈದ್ಯರನ್ನು ಸಂಪರ್ಕಿಸಿದಳು. ಅ ಸಂದರ್ಭದಲ್ಲಿ ಆ ವೈದ್ಯರು (Doctor) ಯಾವುದೇ ಮಾತ್ರೆಯನ್ನು ನೀಡಿಲ್ಲ. ಜೊತೆಗೆ ಚಿಕಿತ್ಸೆಯನ್ನು ನೀಡಲಿಲ್ಲ. ಬದಲಾಗಿ ಮೊಬೈಲ್ ಬಳಕೆ ಕಡಿಮೆ ಮಾಡಲು ತಿಳಿಸಿದರು. ಇದಾದ ಬಳಿಕ ಆಕೆ ಸಂಪೂರ್ಣವಾಗಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿದ್ದರಿಂದ ಒಂದೂವರೆ ವರ್ಷದ ಬಳಿಕ ಆಕೆಯ ಕಣ್ಣು ಸಹಜ ಸ್ಥಿತಿಗೆ ಮರಳಿತು. ಇದನ್ನೂ ಓದಿ: ರಿಯಾಯ್ತಿ ದಂಡ ವಸೂಲಿಗಿಂದು ಕೊನೆ ದಿನ- ಬೆಂಗ್ಳೂರಲ್ಲಿ ನಕಲಿ ನಂಬರ್ ಜಾಲ ಬೆಳಕಿಗೆ
ಅತಿಯಾದ ಸ್ಮಾರ್ಟ್‍ಫೋನ್ ಬಳಕೆಯಿಂದ ಕೆಲವರು ದೃಷ್ಟಿದೋಷದ ಸಮಸ್ಯೆಗೆ ಒಳಗಾಗುತ್ತಾರೆ. ಇದನ್ನು ಸ್ಮಾರ್ಟ್‍ಫೋನ್ ಮಿಷನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಅದರಲ್ಲೂ ರಾತ್ರಿ ಹೊತ್ತು ಲೈಟ್ ಆಫ್ ಮಾಡಿಕೊಂಡು ಸ್ಮಾರ್ಟ್‍ಫೊನ್ ನೋಡುವುದರಿಂದ ಈ ರೋಗ ಹೆಚ್ಚಾಗಿ ಬರುತ್ತದೆ. ಈ ಬಗ್ಗೆ ಹೈದರಾಬಾದ್ ಮೂಲದ ಡಾ. ಸುಧೀರ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹತ್ಯೆ ಮಾಡಲು ಬಂದವನೇ ಭೀಕರವಾಗಿ ಕೊಲೆಯಾದ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಡಿಜಿಟಲ್ ಯುಗದಲ್ಲಿ ಏನ್ ಇಲ್ಲ ಅಂದ್ರೂ ನಡೆಯುತ್ತೆ. ಆದರೆ ಕೈಯಲ್ಲಿ ಒಂದು ಫೋನ್ (Phone) ಇರಲೇಬೇಕು. ಹಳ್ಳಿಯಿಂದ ಡೆಲ್ಲಿವರೆಗೆ ಸಹ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ (Mobile) ಇದೆ. ಇದರಿಂದ ಎಷ್ಟು ಲಾಭವೋ ಅಷ್ಟೇ ಅಪಾಯವು ಇದೆ. ಜನ ವಂಚನೆಗೆ ಒಳಗಾಗುತ್ತಿರುವ ಘಟನೆಯು ಹೆಚ್ಚಾಗುತ್ತಿದೆ. ಇದೀಗ ಸ್ಮಾರ್ಟ್ ಫೋನ್‌ಗೆ (Smartphone) ಹೊಸ ವೈರಸ್ ಒಂದು ಲಗ್ಗೆ ಇಟ್ಟಿದೆ.
ಸೈಬರ್ ಕ್ರೈಮ್ ಬಗ್ಗೆ ಸಾರ್ವಜನಿಕರಿಗೆ ಅಷ್ಟಾಗಿ ಮಾಹಿತಿ ಇರಲ್ಲ. ಅದರಲ್ಲೂ ಮೊಬೈಲ್‍ನಲ್ಲಿರೋ ಡೇಟಾ, ಬ್ಯಾಂಕ್ ಡಿಟೈಲ್ಸ್ ಸೇರಿದಂತೆ ಫೋಟೋ, ವೀಡಿಯೋ ಕದಿಯಬಲ್ಲ ವೈರಸ್ ಒಂದು ನಮ್ಮ ದೇಶಕ್ಕೆ ಕಾಲಿಟ್ಟಿದೆ. ಹೌದು ಈ ಖತರ್ನಾಕ್ ವೈರಸ್‍ಗೆ ಸೋವಾ (SOVA) ಎಂದು ಕರೆಯುತ್ತಿದ್ದು ಇದು ರಷ್ಯಾದಿಂದ ಬಂದಿರುವ ಮೊಬೈಲ್ ವೈರಸ್. ರಷ್ಯಾ (Russia) ಭಾಷೆಯಲ್ಲಿ ಸೋವಾ ಅಂದ್ರೆ ಗೂಬೆ ಅನ್ನೋ ಅರ್ಥವಿದೆ. ಸೈಬರ್ ಖದೀಮರು ಈ ವೈರಸ್‌ನ್ನು 2021ರಲ್ಲಿ ಅಭಿವೃದ್ಧಿ ಪಡಿಸಿ ಈಗ ಅದರ ಹೊಸ ವರ್ಷನ್ 5.0ವನ್ನು (SOVA-5.0) ಹಣ ಮಾಡಲು ಬಳಸುತ್ತಿದ್ದಾರೆ. ಆ್ಯಂಡ್ರಾಯ್ಡ್, ಸ್ಮಾರ್ಟ್‌ಫೋನ್‌ಗಳಲ್ಲಿನ ಮೊಬೈಲ್ ಬ್ಯಾಂಕಿಂಗ್ (Mobile Banking) ಅಪ್ಲಿಕೇಶನ್‌ಗಳನ್ನು ಗುರಿಯಾಗಿಸಿಕೊಂಡು ಈ ವೈರಸ್ ದಾಳಿ ಮಾಡುತ್ತಿದೆ. ಅಮೆರಿಕ (America), ರಷ್ಯಾ ಮತ್ತು ಸ್ಪೇನ್‌ನ ಬಳಿಕ ಈಗ ಭಾರತೀಯ ಬ್ಯಾಂಕಿಂಗ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಇದನ್ನೂ ಓದಿ: ಜ್ಯೂಸ್ ಜಾಕಿಂಗ್ ಮೂಲಕ ಡೇಟಾ ಕಳವು – ಪವರ್ ಬ್ಯಾಂಕ್ ಚಾರ್ಚಿಂಗ್‍ನಿಂದ ಆಪತ್ತು!
ಡೇಟಾಗೆ ಗುನ್ನಾ:
ಹೌದು ಇದು ಮೊಬೈಲ್‍ಗೆ ಹೊಸ ಹೊಸ ಆ್ಯಪ್ ಡೌನ್ಲೋಡ್ ಮಾಡುವಾಗ ಎಂಟ್ರಿ ಕೊಡುವ ವೈರಸ್ ಆಗಿದ್ದು, ಇದು ಒಮ್ಮೆ ಮೊಬೈಲ್‍ಗೆ ಬಂದ ನಂತರ ಅದನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲದಂತೆ ಅಭಿವೃದ್ಧಿ ಪಡಿಸಿದ್ದಾರೆ. ಇದು ಮೊಬೈಲ್‍ನಲ್ಲಿ ಇರುವುದು ತಿಳಿಯದಂತೆ ಕೆಲಸ ಮಾಡತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ ನಿಮ್ಮ ಖಾತೆಯಿಂದ ಹಣವನ್ನು ದೋಚುವುದರಿಂದ ಹಿಡಿದು ನಿಮ್ಮ ಮೊಬೈಲ್‍ನಲ್ಲಿ ಏನೇಲ್ಲ ಡೇಟಾ ಇದೇ ಅದನ್ನು ಕದಿಯಲಿದೆ. ಈಗಾಗಲೇ ಇಂತಹ ಅನೇಕ ಪ್ರಕರಣಗಳು ನಮ್ಮ ದೇಶದಲ್ಲೂ ಆಗಿದೆ. ಇದು ಹೇಗೆ ಬರುತ್ತೆ ಇದು ಯಾವ ರೀತಿ ಕೆಲಸ ಮಾಡುತ್ತೆ ಅನ್ನೋದನ್ನು ಸೈಬರ್ ತಜ್ಞೆ ಆಗಿರುವ ಡಾ. ಶೋಭಾ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕರ್ನಾಟಕವನ್ನು ಬಿಟ್ಟು ಗುಜರಾತ್ ಆಯ್ಕೆ ಮಾಡಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ವೇದಾಂತ ಕಂಪನಿ
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶೋಭಾ, ಈ ವೈರಸ್ ಬರದಂತೆ ಹೇಗೆ ತಡೆಯೋದು ಅನ್ನೋ ಪ್ರಶ್ನೆ ಸಹಜವಾಗಿಯೇ ನಿಮಗೂ ಬಂದಿರುತ್ತೆ. ಹೌದು ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ. ಹೊಸ ಆ್ಯಪ್ ಡೌನ್ಲೋಡ್ ಮಾಡುವಾಗ ಅದು ಸರಿಯಾದ ಆ್ಯಪ್ ಅನ್ನೋದನ್ನು ಪರಿಶೀಲಿಸಿ. ಬೇಕಾಬಿಟ್ಟಿ ಸಿಕ್ಕಸಿಕ್ಕ ಆ್ಯಪ್ ಇನ್‍ಸ್ಟಾಲ್ ಮಾಡಬೇಡಿ. ಗೊತ್ತಿಲ್ಲದ ಲಿಂಕ್‍ಗಳನ್ನು ಓಪನ್ ಮಾಡಬೇಡಿ. ಯಾರೋ ಗೊತ್ತಿಲ್ಲದವರು ಕಳುಹಿಸಿದ ಆ್ಯಪ್ ಡೌನ್‍ಲೋಡ್ ಮಾಡಬೇಡಿ. ಜಾಹೀರಾತಿನಲ್ಲಿ ಬರುವ ಫೋಟೋ ವೀಡಿಯೋಗಳನ್ನು ಡೌನ್‍ಲೋಡ್ ಮಾಡಬೇಡಿ. ಅಧಿಕೃತ ವೈರಸ್ ರಿಮೂವ್ ಆ್ಯಪ್ ಆಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಅಟೋಮೊಬೈಲ್, ಸಾಫ್ಟ್‌ವೇರ್ ಸೇರಿದಂತೆ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಟಾಟಾ ಸಮೂಹ (Tata Group) ಸ್ಮಾರ್ಟ್‌ಫೋನ್ ಉದ್ಯಮಕ್ಕೆ ಕೈ ಹಾಕುವ ಸಾಧ್ಯತೆಯಿದೆ.
ಆಪಲ್(Apple) ಕಂಪನಿಯ ಐಫೋನ್‌ಗಳನ್ನು(iPhone) ಉತ್ಪಾದನೆ ಮಾಡಲು ಟಾಟಾ ಕಂಪನಿ ಚಿಂತನೆ ನಡೆಸಿದ್ದು, ಈ ಸಂಬಂಧ ಮಾತುಕತೆ ನಡೆಯುತ್ತಿದೆ ಎಂಬ ವರದಿ ಪ್ರಕಟವಾಗಿದೆ.
ಪ್ರಸ್ತುತ ಐಫೋನ್‌ಗಳನ್ನು ತೈವಾನ್ ಮೂಲದ ಫಾಕ್ಸ್‌ಕಾನ್ (Foxconn) ಮತ್ತು ವಿಸ್ಟ್ರಾನ್(Wistron ) ಕಂಪನಿ ತಯಾರಿಸುತ್ತಿದೆ. ಬಹುತೇಕ ಐಫೋನ್‌ಗಳ ಉತ್ಪಾದನೆ ಚೀನಾ ಮತ್ತು ತೈವಾನ್‌ನಲ್ಲಿ ಆಗುತ್ತಿದೆ. ಪ್ರಸ್ತುತ ಬಹುತೇಕ ದೇಶಗಳು ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಮುಂದಾಗುತ್ತಿದೆ. ಈ ಸಂದರ್ಭದಲ್ಲೇ ಟಾಟಾ ಭಾರತದಲ್ಲೇ ಐಫೋನ್ ಉತ್ಪಾದನೆ ಮಾಡುವ ಕುರಿತು ಮಾತುಕತೆ ಆರಂಭಿಸಿದೆ.
ಈಗಾಗಲೇ ಫಾಕ್ಸ್‌ಕಾನ್ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್ ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಘಟಕ ತೆರೆದಿದೆ. ಈಗ ವಿಸ್ಟ್ರಾನ್ ಕಂಪನಿಯ ಜೊತೆ ಟಾಟಾ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಯಶಸ್ವಿಯಾದರೆ ಜಂಟಿ ಪಾಲುದಾರಿಕೆಯಲ್ಲಿ ಐಫೋನ್ ಉತ್ಪಾದನೆಯಾಗಲಿದೆ. ಅಷ್ಟೇ ಅಲ್ಲದೇ ಐಫೋನ್ ಉತ್ಪಾದಿಸಿದ ಮೊದಲ ದೇಶೀಯ ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಪಾತ್ರವಾಗಲಿದೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್‌ವೇರ್ ಸ್ಟ್ರೈಕ್ – ಐಫೋನ್ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ
2008ರಲ್ಲಿ ಐಫೋನ್ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾರಾಟವಾಗಿತ್ತು. 2021ರಲ್ಲಿ 50 ಲಕ್ಷ ಐಫೋನ್ ಮಾರಾಟವಾಗಿದ್ದರೆ 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್ ಮಾರಾಟವಾಗಿದೆ. ಮಾರಾಟ ಹೆಚ್ಚಾಗುತ್ತಿದ್ದಂತೆ ಆಪಲ್ ಭಾರತದಲ್ಲೇ ಹೆಚ್ಚು ಐಫೋನ್ ಉತ್ಪಾದನೆಗೆ ಮುಂದಾಗಿದೆ.
2021ರಲ್ಲಿ ಆಪಲ್ ಕಂಪನಿ ಭಾರತದಲ್ಲಿ 75 ಲಕ್ಷ ಐಫೋನ್ ಉತ್ಪಾದನೆ ಮಾಡಿತ್ತು. 2022ರಲ್ಲಿ 1-2 ಕೋಟಿ ಫೋನ್ ಉತ್ಪಾದನೆ ಮಾಡಲು ಮುಂದಾಗಿದೆ.
ವಿಶ್ವದ ಐಫೋನ್ ಮಾರಾಟದಲ್ಲಿ ಕಳೆದ ವರ್ಷ ಭಾರತದ ಘಟಕದ ಪಾಲು ಶೇ.3 ಇದ್ದರೆ 2022ರಲ್ಲಿ ಶೇ.5-7ಕ್ಕೆ ಏರಿಕೆಯಾಗಿದೆ. 2022ರಲ್ಲಿ ಭಾರತದಲ್ಲಿ ಮಾರಾಟವಾದ ಐಫೋನ್ ಪೈಕಿ ಶೇ.85 ರಷ್ಟು ಫೋನುಗಳು ಮೇಡ್ ಇನ್ ಇಂಡಿಯಾ ಫೋನ್ ಆಗಿರುವುದು ವಿಶೇಷ.
Live Tv
[brid partner=56869869 player=32851 video=960834 autoplay=true]
ನವದೆಹಲಿ: 12 ಸಾವಿರ ರೂ. ಒಳಗಿನ ಚೀನಾ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
12 ಸಾವಿರ ರೂ. ಒಳಗಿನ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವ ಯಾವುದೇ ಯೋಜನೆಯನ್ನು ಭಾರತ ಸರ್ಕಾರ ಹೊಂದಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಫೋನ್ ನಿಷೇಧ ಕುರಿತಂತೆ ಕೇಳಲಾದ ಪ್ರಶ್ನೆಗೆ, ನಮ್ಮಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ ಮತ್ತು ಅದು ಎಲ್ಲಿಂದ ಬಂತು ಎಂದು ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.
ಭಾರತದಿಂದ ರಫ್ತುಗಳನ್ನು ಹೆಚ್ಚಿಸಲು ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಸರ್ಕಾರ ಮನವಿ ಮಾಡಿದೆ. ಮುಂಬರುವ ನಾಲ್ಕು ವರ್ಷಗಳಲ್ಲಿ 300 ಬಿಲಿಯನ್ ಡಾಲರ್ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ತಲುಪಲು ಸರ್ಕಾರ ಎದುರು ನೋಡುತ್ತಿದೆ. ಪ್ರಸ್ತುತ ಉತ್ಪಾದನೆಯು ಸುಮಾರು 76 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: 10 ಸಾವಿರ ಟವರ್ ಮಾರಾಟಕ್ಕೆ ಮುಂದಾದ ಬಿಎಸ್‌ಎನ್‌ಎಲ್
ದೇಶಿ ಮೊಬೈಲ್ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 12 ಸಾವಿರ ರೂ.ಗಿಂತ ಕಡಿಮೆ ಮೌಲ್ಯದ ವಿದೇಶಿ ಫೋನ್‌ಗಳ ಮಾರಾಟದ ಮೇಲೆ ನಿರ್ಬಂಧ ಹೇರಲು ಚಿಂತನೆ ನಡೆಸಿದೆ. 4ಜಿ ಬರುವ ಮೊದಲು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೇಶೀಯ ಕಂಪನಿಗಳು ಟಾಪ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದವು. ಆದರೆ 4ಜಿ ಮಾರುಕಟ್ಟೆಯಲ್ಲಿ ಚೀನಿ ಫೋನ್‌ಗಳ ಮುಂದೆ ಸ್ಪರ್ಧಿಸಲಾಗದೇ ಸೋತು ಹೋಗಿದ್ದವು. ಈ ಕಾರಣಕ್ಕೆ ಭಾರತ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವುದರಿಂದ ಕೇಂದ್ರ ಸರ್ಕಾರ ನಿಷೇಧದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು.
Live Tv
[brid partner=56869869 player=32851 video=960834 autoplay=true]
ಬೀಜಿಂಗ್: ಆರ್ಥಿಕ ಹಿಂಜರಿತ ಭೀತಿ ಬೆನ್ನಲ್ಲೇ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಕ್ಸಿಯೋಮಿ 900 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ.
ಕ್ಸಿಯೋಮಿ ಶೇ.3 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಆದರೆ ಆದಾಯ ಕುಸಿತದಿಂದ ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗುತ್ತದೆ.
ಜೂನ್ ತಿಂಗಳಿಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕ್ಸಿಯೋಮಿ ಶೇ.20 ರಷ್ಟು ಆದಾಯ ಕುಸಿತ ಕಂಡಿತ್ತು. ಕ್ಸಿಯೋಮಿ ಕಂಪನಿಗೆ ಅರ್ಧಕ್ಕಿಂತಲೂ ಹೆಚ್ಚಿನ ಆದಾಯ ಸ್ಮಾರ್ಟ್‌ಫೋನ್ ಮಾರಾಟದಿಂದಲೇ ಬರುತ್ತದೆ. ಸ್ಮಾರ್ಟ್‌ಫೋನ್ ಮಾರಾಟ ಶೇ.29 ರಷ್ಟು ಕುಸಿತ ಕಂಡಿದೆ. ಐಪಿಒ ಲಿಸ್ಟಿಂಗ್ ಆದ ಬಳಿಕ ಮೊದಲ ಬಾರಿಗೆ ಕ್ಸಿಯೋಮಿ ಆದಾಯ ಇಳಿಕೆಯಾಗಿದೆ.
ಜಾಗತಿಕ ಹಣದುಬ್ಬರ, ವಿದೇಶಿ ವಿನಿಮಯ ಏರಿಳಿತ, ಸಂಕೀರ್ಣ ರಾಜಕೀಯ ಪರಿಸರದಿಂದಾಗಿ ಆದಾಯ ಕುಸಿತಗೊಂಡಿದೆ ಎಂದು ಕ್ಸಿಯೋಮಿ ಅಧ್ಯಕ್ಷ ವಾಂಗ್ ಕ್ಸಿಯಾಂಗ್ ತಿಳಿಸಿದ್ದಾರೆ.
ಚೀನಾ ಬಿಟ್ಟರೆ ಕ್ಸಿಯೋಮಿಯ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ಆದರೆ ತೆರಿಗೆ ವಂಚನೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕ್ಸಿಯೋಮಿ ಕಂಪನಿ ಮೇಲೆ ಈ ಹಿಂದೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿತ್ತು.
Live Tv
[brid partner=56869869 player=32851 video=960834 autoplay=true]