ವಾಷಿಂಗ್ಟನ್: ಆಪಲ್ ಬ್ರ್ಯಾಂಡ್ ನೋಡಿಕೊಂಡು ಗ್ಯಾಜೇಟ್ ಖರೀದಿಸುತ್ತಾರೆ. ಆದರೆ ಆಪಲ್ ವಾಚ್‍ನ ಬ್ಯಾಟರಿಯ ತಾಪಮಾನ ಹೆಚ್ಚಿದ್ದರಿಂದ ಸ್ಫೋಟಗೊಂಡಗೊಂಡ ಘಟನೆ ಅಮೆರಿಕದ ಅಮೆರಿಕದಲ್ಲಿ (US) ನಡೆದಿದೆ.
ಆಪಲ್ ವಾಚ್‍ನಲ್ಲಿ (Apple Watch) ತಾಪಮಾನ ಹೆಚ್ಚಿದ ಪರಿಣಾಮ ವಾಚ್‍ನ ಹಿಂಬದಿ ಬಿರುಕು ಬಿಟ್ಟಿದೆ. ಇದನ್ನು ಗಮನಿಸಿದ ತಕ್ಷಣ ಬಳಕೆದಾರ ಆಪಲ್ ಬೆಂಬಲಕ್ಕೆ ಕರೆ ಮಾಡಿದ್ದಾನೆ. ಇದಾದ ಬಳಿಕ ಮುಂದಿನ ಆದೇಶವನ್ನು ತಿಳಿಸುವವರೆಗೆ ಆ ವಾಚ್‍ನ್ನು ಮುಟ್ಟಬೇಡಿ ಎಂದು ಆತನಿಗೆ ಕಂಪನಿ ತಿಳಿಸಿದೆ. ಇದನ್ನೂ ಓದಿ:ಯುವತಿಯ ಪ್ರೀತಿಯ ಜಾಲದಲ್ಲಿ ಬೀಳಿಸಲಾಗುತ್ತೆ, ಬನಶಂಕರಿ ಮಸೀದಿ ಕೆಳಗಡೆ ಮತಾಂತರ – ಮುತಾಲಿಕ್
An Apple Watch Series 7 user is speaking out after their device overheated, started smoking, and eventually exploded. The case was brought to Apple’s attention and the company confirmed it would investigate what happened. pic.twitter.com/dVIyEj0zMH
ಈ ಹಿನ್ನೆಲೆಯಲ್ಲಿ ವಾಚ್‍ನ್ನು ಸ್ವಲ್ಪ ದೂರದಲ್ಲಿ ಇಟ್ಟು ಮಲಗಿದ್ದಾನೆ. ನಂತರ ಬೆಳಗ್ಗೆ ತಾಪಮಾನ ಇನ್ನೂ ಹೆಚ್ಚಾಗಿ ವಾಚ್‍ನ ಮುಂದಿನ ಭಾಗವೂ ಬಿರುಕು ಬಿಟ್ಟಿದೆ. ಇದನ್ನು ಗಮನಿಸಿದ ಆತ ವಾಚ್‍ನ್ನು ತೆಗೆದು ಕಿಟಕಿಯಿಂದ ಆಚೆ ಎಸೆದಿದ್ದಾನೆ. ಆ ವೇಳೆ ಆಪಲ್ ವಾಚ್ ಸರಣಿ 7ರ ಬ್ಯಾಟರಿ ಸ್ಫೋಟಗೊಂಡಿದೆ. ಘಟನೆಗೆ ಸಂಬಂಧಿಸಿ ಆಪಲ್ ಕಂಪನಿ ಸ್ಪಷ್ಟನೆ ನೀಡಿದ್ದು, ಬಳಕೆದಾರನ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ ಎಂದು ತಿಳಿಸಿದೆ. ಇದನ್ನೂ ಓದಿ:ಬಿಜೆಪಿ ಆಡಳಿತದಲ್ಲಿ ರೈತರ ಸಂಕಷ್ಟ, ಆತ್ಮಹತ್ಯೆ ಡಬಲ್ ಆಗಿದೆ – ಕಾಂಗ್ರೆಸ್ ವಾಗ್ದಾಳಿ
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ನಾಗನೂರ ಗ್ರಾಮದ ಸಿದ್ದಪ್ಪ ಮದಿಹಳ್ಳಿ, ಬೆನಚಿನಮರಡಿ ಗ್ರಾಮದ ಸಿದ್ದಪ್ಪ ಕೊತ್ತಲ, ಮಾಲದಿನ್ನಿ ಗ್ರಾಮದ ರೇಣುಕಾ ಜವಾರಿ, ಸುನೀಲ ಭಂಗಿ, ಸಂತೋಷ ವೀರನಗಡ್ಡಿ, ಬಸವಣ್ಣಿ ಡೊಣವಾಡ, ಗದಗ ಮೂಲದ ಮಾರುತಿ ಸೋನವಣಿ, ಸಮೀತಕುಮಾರ್ ಸೋನವಣಿ ಹಾಗೂ ಅಮರೇಶ ರಾಜೂರ ಬಂಧಿತರು.
ಕಳೆದ ಆಗಸ್ಟ್ 7ರಂದು ನಡೆದಿದ್ದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಗೋಕಾಕ್ ಜಿ.ಎಸ್. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಯಿಂದ ಸ್ಮಾರ್ಟ್ ವಾಚ್ ಬಳಸಿ ಅಕ್ರಮ ಎಸಗಿದ ಆರೋಪದಡಿ ಸಿದ್ದಪ್ಪ ಮದಿಹಳ್ಳಿ ಎಂಬ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿ ಸಿದ್ದಪ್ಪ ಮದಿಹಳ್ಳಿ ಸ್ಮಾರ್ಟ್ ವಾಚ್‍ನಲ್ಲಿ ಪ್ರಶ್ನೆ ಪತ್ರಿಕೆ ಫೋಟೋ ತೆಗೆದು ಟೆಲಿಗ್ರಾಂ ಆ್ಯಪ್ ಮೂಲಕ ಮತ್ತೊಬ್ಬ ಆರೋಪಿ ಸುನೀಲ್ ಭಂಗಿ ಎಂಬುವವರಿಗೆ ರವಾನಿಸಿದ್ದನು.
ಸಿಸಿ ಕ್ಯಾಮೆರಾ ದೃಶ್ಯಾವಳಿ ಗಮನಿಸಿ ಅನುಮಾನಗೊಂಡ ಪರೀಕ್ಷಾ ಕೇಂದ್ರದ ಸಿಬ್ಬಂದಿ ಆ. 9ರಂದು ಗೋಕಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮೊದಲಿಗೆ ಸಿದ್ದಪ್ಪ ಮದಿಹಳ್ಳಿ ಎಂಬಾತನನ್ನು ಬಂಧಿಸಿದ್ದಾರೆ. ಬಳಿಕ ತೀವ್ರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸುನೀಲ್ ಭಂಗಿಗೆ ಬಂಧಿತ ಆರೋಪಿ ಸಿದ್ದಪ್ಪ ಪ್ರಶ್ನೆ ಪತ್ರಿಕೆ ಕಳುಹಿಸುತ್ತಿದ್ದ ಬಗ್ಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಗೋಕಾಕ್ ಪೊಲೀಸರು ಹುಕ್ಕೇರಿ ತಾಲೂಕಿನ ಬಿ.ಕೆ. ಶಿರಹಟ್ಟಿ ಗ್ರಾಮದ ತೋಟದ ಮನೆಯ ಮೇಲೆ ದಾಳಿ ನಡೆಸಿ ಸುನಿಲ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಲ್ಲೊಬ್ಬ ನಕಲಿ ಸ್ವಾಮಿಯ ಕಾಮ ಪುರಾಣ – 7 ವರ್ಷದಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ
ಸುನೀಲ್ ಭಂಗಿಯನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದಾಗ, ಈತ ಮನೆಯಲ್ಲಿ ಕುಳಿತು ಬ್ಲೂ ಟೂತ್‍ನಲ್ಲಿ ಹಲವರಿಗೆ ಉತ್ತರ ಹೇಳಿದ್ದಾನೆ. ಇದರ ಜೊತೆಗೆ ಗದಗ ನಗರಸಭೆ ಪಿಯು ಕಾಲೇಜಿನ ಕೇಂದ್ರದಿಂದಲ್ಲೂ ಪ್ರಶ್ನೆ ಪತ್ರಿಕೆ ಲಭ್ಯವಾಗಿತ್ತು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಆ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದ ಗದಗ ಮೂಲದ ಮಾರುತಿ ಸೋನವಣಿ, ಸಮೀತಕುಮಾರ್ ಸೋನವಣಿ ಬಂಧಿಸಿ ಬೆಳಗಾವಿಗೆ ಕರೆತಂದಿದ್ದಾರೆ. ತಂದೆ ಮತ್ತು ಮಗ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್ ಡಿವೈಸ್ ಮೂಲಕವೇ ಉತ್ತರ ಹೇಳಿದ ಆರೋಪವಿದೆ.
ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಪ್ರಕರಣ ಬೆನ್ನತ್ತಿರುವ ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ್ ನೇತೃತ್ವದ ತಂಡ ಪ್ರತ್ಯೇಕ ಎರಡು ತಂಡಗಳನ್ನು ರಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಾಧಿಕಾರಕ್ಕೆ ಸಮಗ್ರ ವರದಿ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದ್ದು, ಅಭ್ಯರ್ಥಿಗಳು ಬ್ಲೂಟೂನ್ ಡಿವೈಸ್ ಬಳಸಿ ಪರೀಕ್ಷೆ ಬರೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಮಡಿಕೇರಿ ಚಲೋಗೆ ನಿಷೇಧಾಜ್ಞೆ ಅಡ್ಡಿ – ಕಾಂಗ್ರೆಸ್ ಮುಂದಿನ ನಡೆ ಏನು?
ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಬೆಳಗಾವಿ, ಗದಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾಲ ಸಕ್ರಿಯವಾಗಿದೆ. ಹೀಗಾಗಿ ಪೊಲೀಸರು ಸದ್ಯ ತನಿಖೆಯನ್ನು ಮತ್ತಷ್ಟು ಚುರುಕಿಗೊಳಿಸಿದ್ದಾರೆ. ಸದ್ಯ ಬೆಳಗಾವಿ ಪೊಲೀಸರಿಂದ 9 ಆರೋಪಿಗಳನ್ನು ಬಂಧಿಸಲಾಗಿದ್ದು, ಕೆಪಿಟಿಸಿಎಲ್ ಪರೀಕ್ಷೆ ಅಕ್ರಮದಲ್ಲಿ 13 ಅಭ್ಯರ್ಥಿಗಳು ಉತ್ತರ ಬರೆದಿರುವ ಮಾಹಿತಿ ಇದ್ದು, ಹೀಗಾಗಿ ತನಿಖೆ ಮುಂದುವರೆದಿದೆ.
Live Tv
[brid partner=56869869 player=32851 video=960834 autoplay=true]
ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಲುಕ್ ನೀಡುವ ವಾಚ್‌ಗಳಿಗಿಂತ ಸ್ಮಾರ್ಟ್ ವಾಚ್‌ಗಳು ಹೆಚ್ಚು ಟ್ರೆಂಡಿಯಾಗಿವೆ. ಇವು ನೂತನ ತಂತ್ರಜ್ಞಾನಗಳೊಂದಿಗೆ ವಿಶಿಷ್ಟ ರೂಪದಲ್ಲಿ ಕೆಲಸ ನಿರ್ವಹಿಸುತ್ತಿವೆ. ಅದಕ್ಕಾಗಿಯೇ ಉತ್ತಮ ಗುಣಮಟ್ಟ ಹಾಗೂ ದೀರ್ಘಕಾಲ ಬಾಳಿಕೆ ಬರುವ ವಾಚ್‌ಗಳು ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ದೊರೆಯುತ್ತಿವೆ.
ಬ್ಲೂಟೂತ್ ಕನೆಕ್ಟ್ ಸ್ಮಾರ್ಟ್ ವಾಚ್, ಮೆಟಲ್ ಬಾಡಿ ವಾಚ್, ಡಿಜಿಟಲ್ ವಾಚ್, ಚೈನ್ ವಾಚ್ ಹೀಗೆ ವಿವಿಧ ಬಗೆಯ ವಾಚ್‌ಗಳು ಯುವ ಸಮೂಹದ ಅಚ್ಚುಮೆಚ್ಚಾಗಿವೆ. ಅವುಗಳ ವೈಶಿಷ್ಟ್ಯ ಹೇಗಿದೆ ಎಂಬುದನ್ನಿಲ್ಲಿ ನೋಡಿ… ಇದನ್ನೂ ಓದಿ: ಕಪಲ್ ರಿಂಗ್ ಉಡುಗೊರೆ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿ
ಬ್ಲೂಟೂತ್ ಸ್ಮಾರ್ಟ್ ವಾಚ್:
ಇದು ಮೊಬೈಲ್ ಬ್ಲೂಟೂತ್ ಸಂಪರ್ಕದೊಂದಿಗೆ ಕೆಲಸ ನಿರ್ವಹಿಸುವ ಸ್ಮಾರ್ಟ್ ವಾಚ್. ಈ ವಾಚ್ ಕಪ್ಪು, ಬಿಳಿ ಶೈನ್ ಹಾಗೂ ಬ್ರೌನ್ ಬಣ್ಣಗಳಲ್ಲಿ ಇರುತ್ತದೆ. ಯುವಕ, ಯುವತಿಯರ ಕೈಗೆ ಇದು ಆಕರ್ಷಕ ಪ್ರೀಮಿಯಂ ನೋಟವನ್ನು ನೀಡುತ್ತದೆ.
ವಾಟರ್‌ಪ್ರೂಫ್ ವಾಚ್
ನಿಮ್ಮ ಫಿಟ್ನೆಸ್ ಮತ್ತು ಆರೋಗ್ಯವನ್ನು ಟ್ರ‍್ಯಾಕ್ ಮಾಡುವುದಕ್ಕೂ ಈ ವಾಚ್ ಉಪಯೋಗ ಆಗಲಿದೆ. ಉತ್ತಮ ವೈಶಿಷ್ಟ್ಯ ಹೊಂದಿದ್ದು, ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕದ ಮಟ್ಟ ಹಾಗೂ ನಾವು ನಡೆಯುವ ಹೆಜ್ಜೆಗಳನ್ನೂ ಮಾನಿಟರ್ ಮಾಡುತ್ತದೆ.
ಡಿಜಿಟಲ್ ವಾಚ್:
ವಿದ್ಯುತ್ ಮೀಟರ್ ನಂತೆಯೇ ನಿಮಿಷ, ಸೆಕೆಂಡುಗಳು ಹಾಗೂ ಗಂಟೆ ಸಮಯವನ್ನೂ ತೋರಿಸುವ ಈ ಡಿಜಿಟಲ್ ವಾಚ್ ಹೆಚ್ಚು ಯೂತ್‌ಫುಲ್ ಆಗಿದೆ. ಜೊತೆಗೆ ಕಲರ್ ಫ್ಲ್ಯಾಶ್ ಸಹ ಹೊಂದಿದ್ದು, ಅಲಾರಂ ಸೆಟ್ಟಿಂಗ್ಸ್ ಸಹ ಇರುತ್ತದೆ. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದ ಯುವಜನರು ಇದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.
ಡ್ರೆಸ್‌ವಾಚ್
ಸೂಟ್ ಡ್ರೆಸ್‌ಗಳಿಗೆ ಪಕ್ಕಾ ಲುಕ್ ನೀಡುವ ವಾಚ್. ನೀವು ಯಾವುದೇ ಸೂಟ್ ಧರಿಸಿದ್ರೂ ಅದರ ಔಟ್‌ಲುಕ್ ಫಿಟ್ ಆಗಿ ಕಾಣಬೇಕು ಅಂದ್ರೆ ಈ ರೀತಿಯ ವಾಚ್ ಧರಿಸಲೇ ಬೇಕು. ಆದರೆ ಟ್ರೆಂಟ್ ಬಯಸುವವರು ಇದನ್ನ ಹೆಚ್ಚು ಇಷ್ಟಪಡಲ್ಲ.
Live Tv
[brid partner=56869869 player=32851 video=960834 autoplay=true]