Tag: Smart Card

  • ಸ್ಮಾರ್ಟ್‌ಕಾರ್ಡ್‌ಗೆ ಗ್ರಹಣ – ಸಾಫ್ಟ್‌ವೇರ್ ಅಪ್ಡೇಟ್ ನೆಪದಿಂದ ಜನ ಹೈರಾಣು

    ಸ್ಮಾರ್ಟ್‌ಕಾರ್ಡ್‌ಗೆ ಗ್ರಹಣ – ಸಾಫ್ಟ್‌ವೇರ್ ಅಪ್ಡೇಟ್ ನೆಪದಿಂದ ಜನ ಹೈರಾಣು

    ಬೆಂಗಳೂರು: ಹೊಸ ವಾಹನ ಖರೀದಿ ಮಾಡಿದವರಿಗೆ ಸಾರಿಗೆ ಇಲಾಖೆ (Department of Transport) ಟೆನ್ಶ್ಯನ್ ಕೊಟ್ಟಿದೆ. ಹೊಸ ವಾಹನದ ಡಿಎಲ್, ಆರ್‌ಸಿಗಾಗಿ ಜನರು ಅಲೆದಾಡುತ್ತಿದ್ದು, ಸ್ಮಾರ್ಟ್‌ಕಾರ್ಡ್‌ಗೆ (Smart Card) ಗ್ರಹಣ ಹಿಡಿದಿದೆ. ತಾಂತ್ರಿಕ ದೋಷದ (Technical Issue) ನೆಪಕ್ಕೆ ಇದೀಗ ಜನ ಹೈರಾಣಾಗಿದ್ದಾರೆ.

    ಹೊಸ ವಾಹನ (New Vehicle) ಖರೀದಿ ಮಾಡಿದವರಿಗೆ ಇದೀಗ ಹೊಸ ಪೀಕಲಾಟ ಶುರುವಾಗಿದೆ. ಸಾರಿಗೆ ಇಲಾಖೆ ಎಡವಟ್ಟಿನ ಎಫೆಕ್ಟ್‌ನಿಂದ ಜನ ಪರದಾಡುವಂತಾಗಿದೆ. ಯಾಕೆಂದರೆ ಹೊಸ ವಾಹನ ಖರೀದಿದಾರರಿಗೆ ಕೊಡುವ ಆರ್‌ಸಿ ಸ್ಮಾರ್ಟ್‌ಕಾರ್ಡ್‌ ಪ್ರಿಂಟ್ ಆಗಲು ಸಾಫ್ಟ್‌ವೇರ್ ಸಮಸ್ಯೆ ಎದುರಾಗಿದೆ. ಇದನ್ನೂ ಓದಿ: ಸರ್ಕಾರಿ ಅಂಗನವಾಡಿಗಳ ಕರೆಂಟ್ ಬಿಲ್ ಕಟ್ಟಲು ದುಡ್ಡಿಲ್ಲ – ಫ್ಯೂಸ್ ಕಿತ್ತ ಬೆಸ್ಕಾಂ

    ಕಳೆದ ಹತ್ತು ದಿನದಿಂದ ಈ ಸಾಫ್ಟ್‌ವೇರ್ ಸಮಸ್ಯೆ ಬಗೆಹರಿದಿಲ್ಲ. ಇದರ ಎಫೆಕ್ಟ್‌ನಿಂದಾಗಿ ಹೊಸ ವಾಹನ ಖರೀದಿದಾರರು ವಾಹನ ರಸ್ತೆಗಿಳಿಸಲು ಹಿಂದೇಟು ಹಾಕುವಂತಾಗಿದೆ. ಈ ಸ್ಮಾರ್ಟ್‌ಕಾರ್ಡ್‌ಗೆ ಗುತ್ತಿಗೆ ಕೊಟ್ಟರೂ ಇದುವರೆಗೂ ಸರಿಯಾಗಿಲ್ಲ. ಇದರ ಮಾಹಿತಿ ಇಲ್ಲದೇ ಜನ ಆರ್‌ಟಿಓ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಇದನ್ನೂ ಓದಿ: ಪಾಲಾರ್ ಬಾಂಬ್ ಸ್ಫೋಟ ಕೇಸ್‌ ಆರೋಪಿ, ಕಾಡುಗಳ್ಳ ವೀರಪ್ಪನ್ ಸಹಚರ ಅನಾರೋಗ್ಯದಿಂದ ನಿಧನ

    ಬೆಂಗಳೂರಿನ ನಾನಾ ಆರ್‌ಟಿಓ ಕಚೇರಿಯಲ್ಲಿ ಜನರ ರಷ್ ಕಾಣಿಸುತ್ತಿದೆ. ಸಾರಿಗೆ ಇಲಾಖೆಯಲ್ಲಿ ಪ್ರತಿ ಬಾರಿಯೂ ಈ ರೀತಿಯ ಸಮಸ್ಯೆ ಉದ್ಭವವಾಗುತ್ತೆ ಎಂದು ಸಾರ್ವಜನಿಕರು ಕೂಡ ಕಿಡಿಕಾರಿದ್ದಾರೆ. ನಾಳೆ ಸರಿಯಾಗುತ್ತೆ, ನಾಡಿದ್ದು ಸರಿಯಾಗುತ್ತೆ ಎಂದು ಅಧಿಕಾರಿಗಳು ಕೂಡ ಜನರನ್ನು ಕಚೇರಿಯಿಂದ ಸಾಗಹಾಕುತ್ತಿದ್ದಾರೆ. ಹೊಸ ಗಾಡಿ ತೆಗೆದುಕೊಂಡವರು ವಾಹನವನ್ನು ರಸ್ತೆಗಿಳಿಸಲು ಪೊಲೀಸರ ದಂಡದ ಭೀತಿಯಿಂದ ಸೈಲೆಂಟ್ ಆಗುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಮೈಸೂರು ಏರ್ಪೋರ್ಟ್‌ಗೆ ಟಿಪ್ಪು ಹೆಸರಿಡಲು ಚಿಂತನೆ – ಟಿಪ್ಪು ಹೆಸರು ಶೌಚಾಲಯಕ್ಕೆ ಇಡಲಿ ಎಂದ ಯತ್ನಾಳ್

  • ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕೊಡುವಾಗ ಜಾತಿ ಬಗ್ಗೆ ಮಾಹಿತಿ ಕೇಳುತ್ತೇವೆ: ಪ್ರಿಯಾಂಕ್ ಖರ್ಗೆ

    ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕೊಡುವಾಗ ಜಾತಿ ಬಗ್ಗೆ ಮಾಹಿತಿ ಕೇಳುತ್ತೇವೆ: ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಶಕ್ತಿ ಯೋಜನೆಗೆ (Shakthi Scheme) ಸ್ಮಾರ್ಟ್ ಕಾರ್ಡ್ (Smart Card) ವಿತರಣೆ ಮಾಡೋವಾಗ ಫಲಾನುಭವಿಗಳ ಜಾತಿಯನ್ನು ಕೂಡಾ ಕೇಳ್ತೀವಿ ಅಂತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

    SC-ST ಸಮುದಾಯದ SCP-TSP ಅನುದಾನವನ್ನ ಗ್ಯಾರಂಟಿ ಯೋಜನೆ ಬಳಕೆ ಮಾಡಿಕೊಳ್ತಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, SCP-TSP ಬಗ್ಗೆ ಸರಿಯಾಗಿ ಬಿಜೆಪಿ ಅವರು ಅರ್ಥ ಮಾಡಿಕೊಂಡಿಲ್ಲ. ಬಿಜೆಪಿ ಅವಧಿಯಲ್ಲಿ 10 ಸಾವಿರ ಕೋಟಿ SCP-TSP ಹಣ ಬಳಕೆ ಮಾಡಿದ್ರು. ನಾವು ಗ್ಯಾರಂಟಿ ಯೋಜನೆಗೆ ಅದನ್ನ ಬಳಸಿಕೊಳ್ತಿದ್ದೇವೆ. ಬಿಜೆಪಿ ನೆಲ ಕಚ್ಚುತ್ತೆ ಅಂತ ಇದಕ್ಕೆ ವಿರೋಧ ಮಾಡುತ್ತಿದೆ. SC-ST ಹಣ ದುರುಪಯೋಗ ಆಗುತ್ತಿಲ್ಲ. ಕಾನೂನು ಬಿಟ್ಟು ನಾವೇನು ಮಾಡುತ್ತಿಲ್ಲ. ಕಾನೂನು ಉಲ್ಲಂಘನೆಯೂ ಆಗಿಲ್ಲ ಎಂದರು.  ಇದನ್ನೂ ಓದಿ: 70 ಸಾವಿರಕ್ಕೆ ಖರೀದಿಸಿದ ಪತ್ನಿಯನ್ನು ಕೊಂದು ಶವವನ್ನು ಕಾಡಲ್ಲಿ ಎಸೆದ ಪತಿ

    ಶಕ್ತಿ ಯೋಜನೆಯಲ್ಲಿ SC-ST ಜನರನ್ನ ಹೇಗೆ ಗುರುತು ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕೊಡೋವಾಗ ಜಾತಿ ಮಾಹಿತಿ ಪಡೆಯುತ್ತೇವೆ. ಸ್ಟಾರ್ಟ್ ಕಾರ್ಡ್ ಕೊಡೋ ಸಮಯದಲ್ಲಿ ಎಲ್ಲಾ ಮಾಹಿತಿ ಪಡೆಯುತ್ತೇವೆ. ಜಾತಿ ಬಗ್ಗೆಯೂ ಮಾಹಿತಿ ಪಡೆಯುತ್ತೇವೆ. ಬಂದ ಅಂಕಿಅಂಶಗಳ ಮೇಲೆ ಆಗ ಅದಕ್ಕೆ ಹಣ ಬಿಡುಗಡೆ ಮಾಡುತ್ತೇವೆ. ಆಧಾರ್, ಓಟರ್ ಐಡಿಗೆ ಮಾಡೋವಾಗ ತೆಗೆದುಕೊಂಡಿರೋ ಮಾಹಿತಿಯನ್ನ ಶಕ್ತಿ ಯೋಜನೆ ಸ್ಮಾರ್ಟ್ ಕೊಡೋ ವೇಳೆ ಪಡೆಯುತ್ತೇವೆ ಅಂತ ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

    ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

    ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಗುಡ್ ಲಭ್ಯವಾಗಿದ್ದು, ಸ್ಮಾರ್ಟ್ ಕಾರ್ಡ್ ಗಳ ಅವಧಿಯನ್ನು ಮೆಟ್ರೋ ನಿಗಮ 10 ವರ್ಷಗಳಿಗೆ ವಿಸ್ತರಿಸಿದೆ.

    ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಮೊದಲು ಸ್ಮಾರ್ಟ್ ಕಾರ್ಡ್ ಗಳ ಅವಧಿ ಕೇವಲ ಒಂದು ವರ್ಷಕ್ಕೆ ಸೀಮಿತವಾಗಿತ್ತು. ಇದೀಗ ಈ ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸಲಾಗಿದೆ. ಈ ಹಿಂದೆ ಪಡೆದ ಹಳೆ ಕಾರ್ಡ್ ಗಳಿಗೂ ಇದು ಅನ್ವಯವಾಗಲಿದ್ದು, ಹಳೆಯ ಹಾಗೂ ಹೊಸ ಇನ್ನು ಮುಂದೆ ಪಡೆಯುವ ಹೊಸ ಸ್ಮಾರ್ಟ್ ಕಾರ್ಡ್ ಗಳಿಗೂ ಇದು ಅನ್ವಯವಾಗಲಿದೆ. ಸ್ಮಾರ್ಟ್ ಕಾರ್ಡ್‍ಗಳನ್ನು 2030ರ ವರೆಗೂ ಬಳಸಲು ಅನುಮತಿ ನೀಡಲಾಗಿದೆ.

    ಕೊರೊನಾ ಲಾಕ್‍ಡೌನ್ ಎಫೆಕ್ಟ್ ನಿಂದ ಬರೋಬ್ಬರಿ ಐದಾರು ತಿಂಗಳ ಕಾಲ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ಕೊರೊನಾ ಮುನ್ನ ಕೊಂಡುಕೊಂಡಿದ್ದ ಸಾವಿರಾರು ಪ್ರಯಾಣಿಕರ ಕಾರ್ಡ್ ಗಳ ಅವಧಿ ಮುಗಿದಿದೆ. ಹೀಗಾಗಿ ಹೊಸ ಸ್ಮಾರ್ಟ್ ಕಾರ್ಡ್ ಖರೀದಿಸಿ ಪ್ರಯಾಣ ಮಾಡಬೇಕಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. ಈ ಹಿನ್ನೆಲೆ ಹಳೆಯ ಸ್ಮಾರ್ಟ್ ಕಾರ್ಡ್ ಗಳನ್ನೂ ಒಳಗೊಂಡಂತೆ ಎಲ್ಲ ಕಾರ್ಡ್‍ಗಳ ಅವಧಿಯನ್ನು 10 ವರ್ಷಕ್ಕೆ ವಿಸ್ತರಿಸಲಾಗಿದೆ.

    ಕೊರೊನಾದಿಂದ ಐದಾರು ತಿಂಗಳಿಂದ ಸ್ಥಗಿತವಾಗಿದ್ದ ನಮ್ಮ ಮೆಟ್ರೋ ಸೆಪ್ಟೆಂಬರ್ 7 ರಿಂದ ಸಂಚಾರ ಶುರುಮಾಡಿದೆ. ಕೊರೊನಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಕೋವಿಡ್ 19 ಕಾರಣದಿಂದ ಮಾರ್ಚ್ 22 ರಿಂದ ಮೆಟ್ರೋ ಸೇವೆ ರದ್ದುಪಡಿಸಲಾಗಿತ್ತು. ಈಗ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ  ಮೆಟ್ರೋ ಸಂಚಾರ ಆರಂಭವಾಗಿದೆ. ಮೆಟ್ರೋ ಶುರುವಾಯಿತು ಎಂದು ಎಲ್ಲರೂ ಒಮ್ಮೆ ನುಗ್ಗುವಂತ್ತಿಲ್ಲ. ಯಾಕಂದರೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಲೇಬೇಕಾಗಿದೆ.

    ಮೆಟ್ರೋ ಸಂಚಾರಕ್ಕೆ ರೂಲ್ಸ್
    * ಆರೋಗ್ಯ ಸೇತು ಆಪ್ ಇದ್ದರೆ ಮಾತ್ರ ಎಂಟ್ರಿ
    * ಕ್ಯಾಶ್‍ಲೆಸ್ ಸಂಚಾರಕ್ಕೆ ಮಾತ್ರ ಅವಕಾಶ
    * ಮೆಟ್ರೋ ಸ್ಮಾರ್ಟ್ ಕಾರ್ಡ್ ಗೆ ಮಾತ್ರ ಮೆಟ್ರೋಗೆ ಎಂಟ್ರಿ
    * ಟೋಕನ್ ಬಳಸಿ ಸಂಚಾರಕ್ಕೆ ಅವಕಾಶ ಇಲ್ಲ
    * ಸ್ಯಾನಿಟೈಸರ್ ಬಳಕೆ, ಉಷ್ಣಾಂಶ ಚೆಕ್ ಆದ್ರೆ ಮಾತ್ರ ಎಂಟ್ರಿ
    * ಸ್ಟೇಷನ್‍ನಲ್ಲಿ ಪ್ರಯಾಣಿಕರ ನಿಲುಗಡೆಗೆ ಬಾಕ್ಸ್

    * ಪ್ರವೇಶ ದ್ವಾರ, ನಿರ್ಗಮನ, ಪ್ಲಾಟ್ ಫಾರ್ಮ್‍ನಲ್ಲಿ ಹಳದಿ ಗುರುತಿನ ಜಾಗದಲ್ಲಿ ನಿಲ್ಲಬೇಕು
    * ಎಸ್ಕೇಲೇಟರ್ ಬಳಸುವ ಪ್ರಯಾಣಿಕರು ಒಂದು ಮೆಟ್ಟಿಲು ಅಂತರ ಕಾಪಾಡಬೇಕು
    * ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು
    * 50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ
    * 6 ಬೋಗಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ
    * ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಮಾತ್ರ ಕೂರಬೇಕು
    * ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ ನಿಲ್ದಾಣಗಳಲ್ಲಿ ನಿಲ್ಲಿಸಲ್ಲ
    * 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಇದ್ರೆ ಮಾತ್ರ ಓಡಾಟ

  • ಚಿಗರಿ ಬಸ್‍ಗಳ ಮಾಸಿಕ ಪಾಸ್, ಸ್ಮಾರ್ಟ್ ಕಾರ್ಡ್ ಸೇವೆ ಪ್ರಾರಂಭ

    ಚಿಗರಿ ಬಸ್‍ಗಳ ಮಾಸಿಕ ಪಾಸ್, ಸ್ಮಾರ್ಟ್ ಕಾರ್ಡ್ ಸೇವೆ ಪ್ರಾರಂಭ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ಐಷಾರಾಮಿ ಚಿಗರಿ ಬಸ್ ಓಡಾಟ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಲಾಕ್‍ಡೌನ್ ಸಡಿಲಿಕೆಯಿಂದ ಬಸ್ ಸಂಚಾರ ಪುನರಾಂಭಗೊಂಡಿದ್ದು, ಈಗ ಮತ್ತೆ ಸಂಚಾರ ಪ್ರಾರಂಭಿಸಿವೆ. ಅಲ್ಲದೇ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸಲು ಲಭ್ಯವಿರುವ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಬಿ.ಆರ್.ಟಿ.ಎಸ್ ಮುಂದಾಗಿದೆ.

    ಪ್ರತಿನಿತ್ಯ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸುವ ನೌಕರರಿಗೆ ಹಾಗೂ ಇತರೇ ಶೈಕ್ಷಣಿಕ ವಾಣಿಜ್ಯ ಕೆಲಸ ಕಾರ್ಯಗಳಿಗಾಗಿ ಮೇಲಿಂದ ಮೇಲೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂಸ್ಥೆ ಹಾಗೂ ಬಿ.ಆರ್.ಟಿ.ಎಸ್ ವತಿಯಿಂದ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್, ನಗದು ರಹಿತವಾಗಿ ಪ್ರಯಾಣಿಸಲು ಇ-ಪಾಸ್ ಹಾಗೂ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್‍ದಾರರಿಗೆ ನಗರ, ಉಪನಗರ ಸಾರಿಗೆಗಳಲ್ಲಿ ವಿಶೇಷ ರಿಯಾಯಿತಿ ಮಾಸಿಕ ಪಾಸುಗಳನ್ನು ಜಾರಿಗೆ ತರಲಾಗಿದೆ.

    ಹುಬ್ಬಳ್ಳಿ ಸಿ.ಬಿ.ಟಿ ಧಾರವಾಡ ಹೊಸ ನಿಲ್ದಾಣ 1,280 ರೂ., ಹುಬ್ಬಳ್ಳಿ ರೈಲ್ವೇ ಸ್ಟೇಷನ್ ಹಾಗೂ ಸಿ.ಬಿ.ಟಿ, ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ 1200 ರೂ, ಹುಬ್ಬಳ್ಳಿ ಎಚ್.ಡಿ.ಎಮ್.ಸಿ ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ 1,120 ರೂ., ಹುಬ್ಬಳ್ಳಿ ಎಚ್.ಡಿ.ಎಮ್.ಸಿ ಧಾರವಾಡ ಹೊಸ ನಿಲ್ದಾಣ 1200ರೂ., ಹುಬ್ಬಳ್ಳಿ ಸಿ.ಬಿ.ಟಿ ಸತ್ತೂರ ನಿಲ್ದಾಣ 880 ರೂ., ಹುಬ್ಬಳ್ಳಿ ಸಿ.ಬಿ.ಟಿ ನವನಗರ 720 ರೂ., ಧಾರವಾಡ ಹೊಸ ಬಸ್ ನಿಲ್ದಾಣ ನವನಗರ 880 ರೂ., ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ ನವನಗರ 840 ರೂ., ಧಾರವಾಡ ಹೊಸ ಬಸ್ ನಿಲ್ದಾಣ ಎಸ್.ಡಿ.ಎಮ್. ಆಸ್ಪತ್ರೆ 800 ರೂ., ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ ಎಸ್.ಡಿ.ಎಮ್.ಆಸ್ಪತ್ರೆ 720 ರೂ., ಪಾಸಿನ ದರವನ್ನು ನಿಗದಿಪಡಿಸಲಾಗಿದೆ.

    ಮೊದಲ ಬಾರಿಗೆ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್ ಪಡೆಯುವರು ಆಧಾರ ಕಾರ್ಡ್ ಪ್ರತಿ ಹಾಗೂ ಒಂದು ಬಾರಿ ರೂ.150 ಸಂಸ್ಕರಣಾ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲದೇ ಧಾರವಾಡದಲ್ಲಿನ ಬಿ.ಆರ್.ಟಿ.ಎಸ್ ನಿಲ್ದಾಣ (ಮಿತ್ರ ಸಮಾಜ) ಹಾಗೂ ಹೊಸ ಬಸ್ ನಿಲ್ದಾಣ, ಹುಬ್ಬಳ್ಳಿಯಲ್ಲಿನ ಸಿಬಿಟಿ ಹಾಗೂ ಹಳೇ ಬಸ್ ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ.

  • 5 ತಿಂಗಳ ನಂತ್ರ ಇಂದಿನಿಂದ ಮೆಟ್ರೋ ಸಂಚಾರ – ಬೆಳಗ್ಗೆ, ಸಂಜೆ ಮೂರು ಗಂಟೆ ಮಾತ್ರ ಓಡಾಟ

    5 ತಿಂಗಳ ನಂತ್ರ ಇಂದಿನಿಂದ ಮೆಟ್ರೋ ಸಂಚಾರ – ಬೆಳಗ್ಗೆ, ಸಂಜೆ ಮೂರು ಗಂಟೆ ಮಾತ್ರ ಓಡಾಟ

    – ಪ್ರಯಾಣಿಕರ ಸಂಖ್ಯೆ ಬಹುತೇಕ ಇಳಿಕೆ

    ಬೆಂಗಳೂರು: ಕೊರೊನಾದಿಂದ ಐದಾರು ತಿಂಗಳಿಂದ ಸ್ಥಗಿತವಾಗಿದ್ದ ನಮ್ಮ ಮೆಟ್ರೋ ಇಂದಿನಿಂದ ಸಂಚಾರ ಶುರುಮಾಡಿದೆ. ಆದರೆ ಬೈಯ್ಯಪ್ಪನಹಳ್ಳಿಯಿಂದ ಮೈಸೂರು ಮಾರ್ಗದ ನೇರಳೆ ಮಾರ್ಗದಲ್ಲಿ ಮಾತ್ರ ಮೆಟ್ರೋ ಓಡಲಿದೆ. ಇದರ ಜೊತೆಗೆ ಕೊರೊನಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ.

    ಕೋವಿಡ್ 19 ಕಾರಣದಿಂದ ಮಾರ್ಚ್ 22 ರಿಂದ ಮೆಟ್ರೋ ಸೇವೆ ರದ್ದುಪಡಿಸಲಾಗಿತ್ತು. ಈಗ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಇಂದಿನಿಂದ ಹಂತ ಹಂತವಾಗಿ ಮೆಟ್ರೋ ಸಂಚಾರ ಆರಂಭವಾಗಿದೆ. ಮೊದಲು ಬೈಯಪ್ಪನಹಳ್ಳಿಯಿಂದ ಮೈಸೂರು ರೋಡ್‍ನ ನೇರಳ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡಲಿದೆ. ಈ ನೇರಳೆ ಮಾರ್ಗದಲ್ಲಿ 5 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಓಡಲಿದೆ. 9ನೇ ತಾರೀಖಿನಿಂದ ಹಸಿರು ಮಾರ್ಗದ ಅಂದರೆ ಯಲಚೇನಹಳ್ಳಿಯಿಂದ ನಾಗಸಂದ್ರದ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.

    ಅಷ್ಟೇ ಅಲ್ಲದೇ ಬೆಳಗ್ಗೆ 3 ಗಂಟೆ, ಸಂಜೆ 3 ಗಂಟೆ ಕಾಲ ಮಾತ್ರ ಮೆಟ್ರೋ ಓಡಾಡಲಿದೆ. ಬೆಳಗ್ಗೆ 8 ಗಂಟೆಯಿಂದ 11, ಸಂಜೆ 4.30 ರಿಂದ ರಾತ್ರಿ 7.30 ವರೆಗೆ ಮೆಟ್ರೋ ಸಂಚಾರ ಮಾಡಲಿದೆ. ಸೆಪ್ಟೆಂಬರ್ 11 ರಿಂದ ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ. ಮೆಟ್ರೋ ಶುರುವಾಯಿತು ಎಂದು ಎಲ್ಲರೂ ಒಮ್ಮೆ ನುಗ್ಗುವಂತ್ತಿಲ್ಲ. ಯಾಕಂದರೆ ಕೊರೊನಾ ರೂಲ್ಸ್‌‌ಗಳನ್ನು ಕಟ್ಟುನಿಟ್ಟಿನಿಂದ ಫಾಲೋ ಮಾಡಲೇಬೇಕು.

    ಮೆಟ್ರೋ ಸಂಚಾರಕ್ಕೆ ರೂಲ್ಸ್
    * ಆರೋಗ್ಯ ಸೇತು ಆಪ್ ಇದ್ದರೆ ಮಾತ್ರ ಎಂಟ್ರಿ
    * ಕ್ಯಾಶ್‍ಲೆಸ್ ಸಂಚಾರಕ್ಕೆ ಮಾತ್ರ ಅವಕಾಶ
    * ಮೆಟ್ರೋ ಸ್ಮಾರ್ಟ್ ಕಾರ್ಡ್ ಗೆ ಮಾತ್ರ ಮೆಟ್ರೋಗೆ ಎಂಟ್ರಿ
    * ಟೋಕನ್ ಬಳಸಿ ಸಂಚಾರಕ್ಕೆ ಅವಕಾಶ ಇಲ್ಲ
    * ಸ್ಯಾನಿಟೈಸರ್ ಬಳಕೆ, ಉಷ್ಣಾಂಶ ಚೆಕ್ ಆದ್ರೆ ಮಾತ್ರ ಎಂಟ್ರಿ
    * ಸ್ಟೇಷನ್‍ನಲ್ಲಿ ಪ್ರಯಾಣಿಕರ ನಿಲುಗಡೆಗೆ ಬಾಕ್ಸ್

    * ಪ್ರವೇಶ ದ್ವಾರ, ನಿರ್ಗಮನ, ಪ್ಲಾಟ್ ಫಾರ್ಮ್‌ನಲ್ಲಿ ಹಳದಿ ಗುರುತಿನ ಜಾಗದಲ್ಲಿ ನಿಲ್ಲಬೇಕು
    * ಎಸ್ಕೇಲೇಟರ್ ಬಳಸುವ ಪ್ರಯಾಣಿಕರು ಒಂದು ಮೆಟ್ಟಿಲು ಅಂತರ ಕಾಪಾಡಬೇಕು
    * ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು
    * 50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ
    * 6 ಬೋಗಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ
    * ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಮಾತ್ರ ಕೂರಬೇಕು
    * ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ ನಿಲ್ದಾಣಗಳಲ್ಲಿ ನಿಲ್ಲಿಸಲ್ಲ
    * 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಇದ್ರೆ ಮಾತ್ರ ಓಡಾಟ

    ಈಗಾಗಲೇ ಮೊದಲ ಮೆಟ್ರೋ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರನ್ನು ಮೆಟ್ರೋ ಸ್ಟೇಷನ್ ಒಳಗೆ ಸಿಬ್ಬಂದಿ ಕಳುಹಿಸುತ್ತಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಬೈಯಪ್ಪನಹಳ್ಳಿ ಟು ನಾಯಂಡಹಳ್ಳಿಗೆ ಮೊದಲ ಮೆಟ್ರೋ ಹೊರಟಿದೆ. ಆದರೆ ಪ್ರಯಾಣಿಕರ ಸಂಖ್ಯೆ ಬಹುತೇಕ ಇಳಿಕೆಯಾಗಿದೆ. ಮೊದಲ ಟ್ರೈನ್‍ನಲ್ಲಿ ಬೆರಳೆಕೆಯಷ್ಟು ಜನರು ಮಾತ್ರ ಪ್ರಯಾಣ ಮಾಡುತ್ತಿದ್ದಾರೆ.

  • ಸ್ಮಾರ್ಟ್ ಕಾರ್ಡ್ ಇದ್ರೆ ಮಾತ್ರ ಮೆಟ್ರೋ ಪ್ರಯಾಣಕ್ಕೆ ಅವಕಾಶ

    ಸ್ಮಾರ್ಟ್ ಕಾರ್ಡ್ ಇದ್ರೆ ಮಾತ್ರ ಮೆಟ್ರೋ ಪ್ರಯಾಣಕ್ಕೆ ಅವಕಾಶ

    – ದೆಹಲಿಯ ಕ್ರಮ ಬೆಂಗಳೂರಿನಲ್ಲೂ ಬರುತ್ತಾ?

    ನವದೆಹಲಿ: ನಾಲ್ಕನೇ ಹಂತದ ಅಲ್‍ಲಾಕ್‍ನಲ್ಲಿ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿದ್ದು, ಸೆಪ್ಟೆಂಬರ್ 7 ರಿಂದ ಕಾರ್ಯಚರಣೆ ಆರಂಭವಾಗಲಿದೆ. ಕೊರೊನಾ ಸಂಕಷ್ಟದ ನಡುವೆ ಸಂಚಾರ ಆರಂಭವಾಗುತ್ತಿರುವ ಹಿನ್ನೆಲೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

    ಈ ಹಿನ್ನೆಲೆ ದೆಹಲಿ ಮೆಟ್ರೋ ಸಂಚಾರ ನಿಗಮ ಮಂಡಳಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದು, ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿ ಪ್ರಕಾರ ಮೆಟ್ರೋ ಸಂಚಾರಕ್ಕೆ ಸ್ಮಾರ್ಟ್ ಕಾರ್ಡ್, ಹಾಗೂ ಮಾಸ್ಕ್ ಕಡ್ಡಾಯವಾಗಿದೆ. ಲಾಕ್‍ಡೌನ್ ಬಳಿಕ ಶುರುವಾಗುತ್ತಿರುವ ಮೆಟ್ರೋ ಪ್ರಯಾಣದಲ್ಲಿ ಟೋಕನ್ ಟಿಕೆಟ್‍ಗಳಿಗೆ ಅವಕಾಶ ಇರುವುದಿಲ್ಲ.

    ಟೊಕನ್ ಕಾಯಿನ್ ಟಿಕೇಟ್‍ಗಳಿಂದ ಸೋಂಕು ಹರಡುವ ಭೀತಿ ಇದ್ದು, ಸ್ಮಾರ್ಟ್ ಕಾರ್ಡ್‍ಗೆ ಮಾತ್ರ ಅವಕಾಶ ನೀಡಿದೆ. ಈಗಾಗಲೇ ಎಲ್ಲ ಮೆಟ್ರೋ ನಿಲ್ದಾಣಗಳನ್ನು ಮತ್ತು ಮೆಟ್ರೋ ಕೋಚ್‍ಗಳನ್ನು ಸ್ಯಾನಿಟೈಜ್ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ. ಪ್ರತಿ ನಿಲ್ದಾಣದಲ್ಲೂ ಥರ್ಮಲ್ ಸ್ಕಾನರ್ ಅಳವಡಿಸಲಾಗುತ್ತಿದ್ದು, ಸಾಕಷ್ಟು ಎಚ್ಚರಿಕೆ ನಡುವೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

  • ಕೊರೊನಾ ಎಫೆಕ್ಟ್: ಮಂಗಳೂರಿನ ಖಾಸಗಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ಪ್ರಯಾಣ

    ಕೊರೊನಾ ಎಫೆಕ್ಟ್: ಮಂಗಳೂರಿನ ಖಾಸಗಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ಪ್ರಯಾಣ

    – ವಿದೇಶಿ ಮಾದರಿ, ರಾಜ್ಯದಲ್ಲೇ ಪ್ರಥಮ ಪ್ರಯತ್ನ

    ಮಂಗಳೂರು: ಕೊರೊನಾ ಎಫೆಕ್ಟ್‍ನಿಂದಾಗಿ ಮಂಗಳೂರಿನಲ್ಲಿ ಖಾಸಗಿ ಬಸ್‍ಗಳು ಕ್ಯಾಶ್‍ಲೆಸ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಈ ಮೂಲಕ ಸುಗಮ ಪ್ರಯಾಣಕ್ಕೆ ಅನುಕೂಲವಾಗಿದೆ.

    ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನ ಖಾಸಗಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ವ್ಯವಹಾರಕ್ಕೆ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಚಾರ ನಡೆಸುವುದು ಖಾಸಗಿ ಬಸ್‍ಗಳು. ಆದರೆ ಲಾಕ್‍ಡೌನ್ ನಿಂದ ಎರಡು ತಿಂಗಳುಗಳ ಕಾಲ ಸಂಚಾರ ನಡೆಸದೇ ನಿಂತಿದ್ದ ಖಾಸಗಿ ಬಸ್‍ಗಳು ಮತ್ತೆ ಸಂಚಾರ ಆರಂಭಿಸುತ್ತಿವೆ. ಆದರೆ ಖಾಸಗಿ ಬಸ್‍ಗಳಲ್ಲಿ ಇನ್ನು ಕ್ಯಾಶ್‍ಲೆಸ್ ವಹಿವಾಟು ನಡೆಯಲಿದೆ.

    ಬಸ್‍ನಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಗೆ ಉಚಿತವಾಗಿ ಡಿಜಿಟಲ್ ಕಾರ್ಡ್ ಹಂಚಿಕೆ ಮಾಡಲಾಗುತ್ತಿದೆ. ನಂತರ ಪ್ರಯಾಣಿಕರು ಈ ಕಾರ್ಡ್ ಗೆ ರೀಚಾರ್ಜ್ ಮಾಡಿ ಖಾಸಗಿ ಬಸ್ ಗಳಲ್ಲಿ ಸಂಚಾರ ಮಾಡಬಹುದಾಗಿದೆ. ಪ್ರಯಾಣದ ಸಂದರ್ಭದಲ್ಲಿ ನಿರ್ವಾಹಕರ ಹತ್ತಿರದ ಮೆಷೀನ್ ಗೆ ಕಾರ್ಡ್ ತೋರಿಸಿದರೆ. ಸೆನ್ಸಾರ್ ಮೂಲಕ ಟಿಕೆಟ್ ದರ ಕಡಿತಗೊಳ್ಳುತ್ತದೆ. ಕೊರೊನಾ ವೇಗವಾಗಿ ಹರಡುತ್ತಿರುವ ಈ ಸಂಧರ್ಭದಲ್ಲಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಚಿಲ್ಲರೆ ಕಿರಿಕಿರಿ ಕೂಡ ತಪ್ಪಿದಂತಾಗುತ್ತದೆ.

  • ಮಹಿಳೆಯ ದೂರು ದಾಖಲಿಸಿಕೊಳ್ಳದೆ ಸತಾಯಿಸಿದ ಮೆಟ್ರೋ ಸಿಬ್ಬಂದಿ

    ಮಹಿಳೆಯ ದೂರು ದಾಖಲಿಸಿಕೊಳ್ಳದೆ ಸತಾಯಿಸಿದ ಮೆಟ್ರೋ ಸಿಬ್ಬಂದಿ

    ಬೆಂಗಳೂರು: ಮೆಟ್ರೋ ಸ್ಮಾರ್ಟ್ ಕಾರ್ಡ್ ಕಳೆದುಕೊಂಡು ಅದರಲ್ಲಿರುವ ಹಣ ರಿಫಂಡ್ ಮಾಡಿಕೊಡಿ ಎಂದು ದೂರು ಕೊಟ್ಟು ಕಳೆದ ನಾಲ್ಕು ದಿನಗಳಿಂದ ಮಹಿಳೆಯೊಬ್ಬರು ಬೈಯಪ್ಪನಹಳ್ಳಿ ಮೆಟ್ರೋ ಅಡ್ಮಿನ್ ಕಚೇರಿಗೆ ಅಲೆದಾಡಿ, ದುಂಬಾಲು ಬಿದ್ದರೂ ಮೆಟ್ರೋ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯ ತೋರಿಸಿದ ಘಟನೆ ನಡೆದಿದೆ.

    ಪವಿತ್ರಾ ಎಂಬವರು ಕಳೆದ ನಾಲ್ಕು ದಿನದ ಹಿಂದೆ ಬೈಯಪ್ಪನಹಳ್ಳಿಯಿಂದ ಹೊಸಹಳ್ಳಿಗೆ ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ತಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಕಳೆದುಕೊಂಡಿದ್ದಾರೆ. ಕಳೆದುಕೊಂಡಿರುವ ಮೆಟ್ರೋ ಕಾರ್ಡ್ ನಲ್ಲಿ 900 ರೂ.ಗೂ ಹೆಚ್ಚು ಹಣವಿತ್ತು. ಹೀಗಾಗಿ ಕಳೆದುಕೊಂಡಿರುವ ಕಾರ್ಡ್ ಗೆ ಮತ್ತೊಂದು ನಕಲಿ ಕಾರ್ಡ್ ಕೊಟ್ಟು, ಹಣ ರೀಫಂಡ್ ಮಾಡಿ ಅಂತ ಬೈಯಪ್ಪನ ಹಳ್ಳಿ ಮೆಟ್ರೋ ಅಧಿಕಾರಿಗಳಿಗೆ ಹಾಗೂ ಕೇಂದ್ರ ಕಚೇರಿಗೂ ಕೈಬರಹ ಹಾಗೂ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.

    ಎರಡು ಬಾರಿ ದೂರು ಕೊಟ್ಟಾಗಲೂ ಅಧಿಕಾರಿಗಳು ಸ್ಪಂದಿಸಿಲ್ಲ. ಮೂರನೇ ಬಾರಿಗೆ ಸ್ಪಂದಿಸಿದ ಕೇಂದ್ರ ಕಚೇರಿಯ ಅಧಿಕಾರಿಗಳು , ಕಳೆದುಕೊಂಡ ಕಾರ್ಡ್ ನಲ್ಲಿರುವ ಹಣವನ್ನ ಹಿಂದಿರುಗಿಸಲು ಆಗೋದಿಲ್ಲ. ಅಂತಹ ಸೇವೆ ನಮ್ಮಲ್ಲಿ ಇಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಕೆರಳಿದ ಪವಿತ್ರಾ, ಪ್ರಯಾಣಿಕರ ಅನುಕೂಲಕ್ಕಾಗಿ ಎಂದು ಸ್ಮಾರ್ಟ್ ಕಾರ್ಡ್ ಜಾರಿಗೆ ತಂದಿದ್ದೀರಾ. ಅದೇ ಕಾರ್ಡ್ ನಿಂದ ಸಮಸ್ಯೆಯಾದಾಗ ಯಾಕೆ ಪರಿಹಾರ ನೀಡಲು ಆಗುವುದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮುಖ್ಯವಾಗಿ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಕೊಂಡ ಬಳಿಕ ರಿಚಾರ್ಜ್ ಆದ ಹಣ ಬಿ.ಎಂ.ಆರ್.ಸಿ.ಎಲ್ ಹಣಕಾಸು ವಿಭಾಗಕ್ಕೆ ಹೋಗುತ್ತೆ. ಸೇವೆಯಲ್ಲಿರುವ ಕಾರ್ಡ್, ಕಳೆದುಕೊಂಡರೆ ಅದರಲ್ಲಿರುವ ಹಣವನ್ನು ಮರಳಿ ಕೊಡುವ ವ್ಯವಸ್ಥೆ ಬಿ.ಎಂ.ಆರ್.ಸಿ.ಎಲ್ ಮಾಡಿಕೊಂಡಿಲ್ಲ. ಗ್ರಾಹಕರೇ ಈ ವಿಷಯದಲ್ಲಿ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಮಹಿಳೆ ಪವಿತ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಬಿ.ಎಂ.ಆರ್.ಸಿ.ಎಲ್ ಗೆ ಹಣ ಮಾಡೋದಷ್ಟೆ ಮಾನದಂಡವಲ್ಲ. ಪ್ರಯಾಣಿಕರ ದೂರುಗಳಿಗೂ ಸ್ಪಂದಿಸಬೇಕು. ಒಂದು ಮಹಿಳೆಯ ದೂರು ಸ್ವೀಕರಿಸಲು ಇಷ್ಟೊಂದು ತಾತ್ಸರ ಮಾಡ್ತಾರೆ ಅಂತಾದರೆ, ಪ್ರಯಾಣಿಕರ ಬಗ್ಗೆ ಇವರಿಗೆಷ್ಟು ಕಾಳಜಿಯಿದೆ ಅನ್ನೋದು ಗೊತ್ತಾಗುತ್ತೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.