Tag: Smart Bangle

  • ಮಹಿಳೆಯರ ಸುರಕ್ಷತೆಗಾಗಿ ಬಂತು ಸ್ಮಾರ್ಟ್ ಬಳೆ, ಮುಟ್ಟಿದ್ರೆ ಹೊಡೆಯುತ್ತೆ ಶಾಕ್

    ಮಹಿಳೆಯರ ಸುರಕ್ಷತೆಗಾಗಿ ಬಂತು ಸ್ಮಾರ್ಟ್ ಬಳೆ, ಮುಟ್ಟಿದ್ರೆ ಹೊಡೆಯುತ್ತೆ ಶಾಕ್

    ಹೈದರಾಬಾದ್: ಮಹಿಳೆಯರ ಸುರಕ್ಷತೆಗಾಗಿ ಹೈದರಾಬಾದ್‍ನ ಯುವಕ ಸ್ಮಾರ್ಟ್ ಬಳೆಯೊಂದನ್ನು ಕಂಡುಹಿಡಿದಿದ್ದಾರೆ.

    ಹೈದರಾಬಾದ್‍ನ 23 ವರ್ಷದ ಗಡಿ ಹರೀಶ್ ಅವರು ಸ್ನೇಹಿತ ಸಾಯಿ ತೇಜಾ ಅವರೊಂದಿಗೆ ಸೇರಿ ಮಹಿಳೆಯರ ಸುರಕ್ಷತೆಗಾಗಿ ಸ್ಮಾರ್ಟ್ ಬಳೆಯನ್ನು ಕಂಡುಹಿಡಿದಿದ್ದಾರೆ. ಈ ಬಳೆಯ ವಿಶೇಷತೆ ಏನೆಂದರೆ ಮಹಿಳೆ ಅಪಾಯದಲ್ಲಿದ್ದರೆ ಸಂಬಂಧಿಕರು, ಪೊಲೀಸರಿಗೆ ಘಟನಾ ಸ್ಥಳ ಹಾಗೂ ಎಚ್ಚರಿಕೆ ಸಂದೇಶವನ್ನು ಕಳುಹಿಸುತ್ತದೆ.

    ಮಹಿಳೆಯು ನಿರ್ದಿಷ್ಟ ಕೋನದಲ್ಲಿ ‘ಸ್ವಯಂ-ಭದ್ರತಾ ಬ್ಯಾಂಗಲ್’ ಸಾಧನವನ್ನು ಹಾಕಿಕೊಂಡರೆ ಅದು ಸಕ್ರಿಯವಾಗುತ್ತದೆ. ಒಂದು ವೇಳೆ ಯಾರಾದರು ಆಕೆಯ ಮೇಲೆ ದಾಳಿ ಮಾಡಲು ಕೈಯನ್ನು ಹಿಡಿದರೆ ವಿದ್ಯುತ್ ಶಾಕ್ ಹೊಡೆಯುತ್ತದೆ. ಜೊತೆಗೆ ಅದೇ ಸಮಯದಲ್ಲಿ ಘಟನಾ ಸ್ಥಳವನ್ನು ಸಂಬಂಧಿಕರು ಹಾಗೂ ಹತ್ತಿರದ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸುತ್ತದೆ ಎಂದು ಗಡಿ ಹರೀಶ್ ತಿಳಿಸಿದ್ದಾರೆ.

    ಮಹಿಳೆಯರಿಗಾಗಿ ಸ್ವಯಂ-ಭದ್ರತಾ ಬಳೆ ಎಂಬ ಯೋಜನೆ ಅಡಿ ಬಳೆಯನ್ನು ಅಭಿವೃದ್ಧಿಪಡಿಸಿದ್ದೇನೆ. ಈ ಸಾಧನವು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧನಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ನನ್ನ ಸ್ನೇಹಿತ ಸಾಯಿ ತೇಜಾ ಅವರ ಸಹಾಯದಿಂದ ಸ್ಮಾರ್ಟ್ ಬಳೆಯನ್ನು ಅಭಿವೃದ್ಧಿಪಡಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕಾಣೆಯಾದ ಅಥವಾ ಅತ್ಯಾಚಾರಕ್ಕೆ ಒಳಗಾದ ಪ್ರಕರಣಗಳನ್ನು ನಾವು ಗಮನಿಸುತ್ತಿದ್ದೇವೆ. ಹೀಗಾಗಿ ಮಹಿಳೆಯರ ಸುರಕ್ಷತೆಗಾಗಿ ಸ್ಮಾರ್ಟ್ ಬಳೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಮಹಿಳೆಯರ ರಕ್ಷಣೆ ನಮ್ಮ ಯೋಜನೆಯ ಪರಿಕಲ್ಪನೆಯಾಗಿದೆ ಎಂದು ಹರೀಶ್ ತಿಳಿಸಿದ್ದಾರೆ.

    ಒಂದು ಸ್ಮಾರ್ಟ್ ಬಳೆಯ ಬೆಲೆ ಎರಡು ಸಾವಿರ ರೂ. ಆಗಿದೆ. ಈ  ಯೋಜನೆಯನ್ನು ಪೂರ್ಣಗೊಳಿಸಲು ನಮಗೆ  ಆರ್ಥಿಕ ನೆರವು ಅಗ್ಯವಿದೆ. ಜೊತೆಗೆ ಮಹಿಳೆಯರ ಸುರಕ್ಷಿತೆಯ ಉದ್ದೇಶವನ್ನು ಸಾಕಾರಗೊಳಿಸಲು ಸರ್ಕಾರ ಸಹಾಯ ನೀಡಲು ಮುಂದಾಗಬೇಕು ಎಂದು ಹರೀಶ್ ಕೋರಿದ್ದಾರೆ.