Tag: Small Traders

  • ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ – ರಾಮನಗರದಲ್ಲಿ ವಾಟಾಳ್ ಪ್ರತಿಭಟನೆ

    ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ – ರಾಮನಗರದಲ್ಲಿ ವಾಟಾಳ್ ಪ್ರತಿಭಟನೆ

    – ಜಿಎಸ್‌ಟಿ ನಿರ್ಧಾರದಿಂದ ಹಿಂದೆ ಸರಿಯದಿದ್ರೆ ಕರ್ನಾಟಕ ಬಂದ್ ಎಚ್ಚರಿಕೆ

    ರಾಮನಗರ: ಸಣ್ಣ ವ್ಯಾಪಾರಿಗಳಿಗೆ (Small Traders) ಜಿಎಸ್‌ಟಿ ನೋಟಿಸ್ (GST Notice) ನೀಡುತ್ತಿರುವ ಹಿನ್ನೆಲೆ ರಾಮನಗರದಲ್ಲಿ (Ramanagara) ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ.

    ತಳ್ಳುವ ಗಾಡಿಯಲ್ಲಿ ತರಕಾರಿ, ಬೇಕರಿ ಉತ್ಪನ್ನಗಳ ಮಾರಾಟ ಮಾಡಿ ವಿನೂತನ ಪ್ರತಿಭಟನೆ ನಡೆಸಿದ ವಾಟಾಳ್ (Vatal Nagaraj), ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ರಾಜ್ಯ ಸರ್ಕಾರ ತೆರಿಗೆ ಬ್ರಹ್ಮಾಸ್ತ್ರ ಹೂಡುತ್ತಿದೆ. ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಜಿಎಸ್‌ಟಿ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರದ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ಕಾರಣಕ್ಕೆ ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ದುಪ್ಪಟ್ಟು ಟ್ಯಾಕ್ಸ್ ಹಾಕಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಂತರಿಕ ತನಿಖಾ ಸಮಿತಿ ವರದಿ ಅಸಿಂಧುಗೊಳಿಸುವಂತೆ ನ್ಯಾ.ವರ್ಮಾ ಅರ್ಜಿ – ವಿಶೇಷ ಪೀಠ ರಚಿಸುವ ಭರವಸೆ ನೀಡಿದ ಸಿಜೆಐ

    ಮುಂದಿನ ದಿನಗಳಲ್ಲಿ ಮೂತ್ರ ವಿಸರ್ಜನೆಗೂ ಜಿಎಸ್‌ಟಿ ಹಾಕುತ್ತಾರೆ. ಉಸಿರಾಡುವುದಕ್ಕೂ ಸರ್ಕಾರ ಜಿಎಸ್‌ಟಿ ಹಾಕಬಹುದು. ಕೂಡಲೇ ಸಿಎಂ ಸಿದ್ದರಾಮಯ್ಯ ಸಣ್ಣ ವ್ಯಾಪಾರಿಗಳ ರಕ್ಷಣೆ ಮಾಡಬೇಕು. ಈ ಜಿಎಸ್‌ಟಿ ವಿಧಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 15 ಕುಟುಂಬಗಳು ಹಿಂದೂ ಧರ್ಮಕ್ಕೆ ಘರ್ ವಾಪ್ಸಿ

  • ಇಂದು, ನಾಳೆ ಹಾಲು ಮಾರಾಟ ಬಂದ್ – ಟೀ, ಕಾಫಿ ಇಲ್ಲ.. ಓನ್ಲಿ ಲೆಮನ್, ಬ್ಲ್ಯಾಕ್ ಟೀ ಸಿಗುತ್ತೆ ಅಂತ ಬೋರ್ಡ್

    ಇಂದು, ನಾಳೆ ಹಾಲು ಮಾರಾಟ ಬಂದ್ – ಟೀ, ಕಾಫಿ ಇಲ್ಲ.. ಓನ್ಲಿ ಲೆಮನ್, ಬ್ಲ್ಯಾಕ್ ಟೀ ಸಿಗುತ್ತೆ ಅಂತ ಬೋರ್ಡ್

    – ಬೆಂಗಳೂರಿನ ಹಲವೆಡೆ ಹಾಲು, ಮೊಸರು ಮಾರಾಟ ಇಲ್ಲ; ಕಪ್ಪುಪಟ್ಟಿ ಧರಿಸಿ ವರ್ತಕರ ಪ್ರತಿಭಟನೆ
    – ಕೆಲವೆಡೆ ಎಂದಿನಂತೆ ನಡೆಯುತ್ತಿದೆ ಹಾಲು ಮಾರಾಟ

    ಬೆಂಗಳೂರು: ಜಿಎಸ್‌ಟಿ ಟ್ಯಾಕ್ಸ್ (GST Tax) ನೋಟಿಸ್‌ಗೆ ಅಸಮಾಧಾನ ಹೊರಹಾಕಿರುವ ಸಣ್ಣ ವರ್ತಕರು (Small Traders) ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಮತ್ತು ನಾಳೆ ಹಾಲು ಮಾರಾಟ ನಿಲ್ಲಿಸಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ಸಣ್ಣ ಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಕೊಟ್ಟ ಬೆನ್ನಲ್ಲೆ ಇಂದಿನಿಂದ ಬೇಕರಿ ಕಾಂಡಿಮೆಂಟ್‌ಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನ ಬಳಕೆ ಮತ್ತು ಮಾರಾಟ ನಿಲ್ಲಿಸಲಾಗಿದೆ. ಹಲವು ಕಾಂಡಿಮೆಂಟ್, ಬೇಕರಿಗಳಲ್ಲಿ ಬೆಳಗ್ಗೆಯೇ ನೋ ಟೀ ಕಾಫಿ, ಓನ್ಲಿ ಲೆಮನ್ ಟೀ, ಬ್ಲ್ಯಾಕ್ ಟೀ ಅನ್ನೋ ಬೋರ್ಡ್ಗಳನ್ನ ಹಾಕಲಾಗಿದೆ. ಇದನ್ನೂ ಓದಿ: GST ನೋಟಿಸ್‌ ಕೊಟ್ಟ ಕೋತಿ ಕೆಲಸ ರಾಜ್ಯ ಸರ್ಕಾರದ್ದು- ನೋಟಿಸ್ ವಾಪಸ್ ಪಡೆಯಬೇಕು: ಸಿ.ಟಿ.ರವಿ

    ಬೆಂಗಳೂರಿನ ರಾಜಾಜಿನಗರದ ಕಾಂಡಿಮೆಟ್ಸ್ಗಳಲ್ಲಿ ಇಂದು, ನಾಳೆ ಹಾಲು ಮಾರಾಟ ಸ್ಥಗಿತಗೊಳಿಸಲಾಗಿದೆ. ಟೀ, ಕಾಫಿ ಸಿಗಲ್ಲ.. ಏನಿದ್ರೂ ಲೆಮೆನ್ ಮತ್ತು ಬ್ಲ್ಯಾಕ್ ಟೀ ಸಿಗುತ್ತೆ ಎಂದು ಗ್ರಾಹಕರಿಗೆ ಬೋರ್ಡ್ ಮೂಲಕ ತಿಳಿಸಲಾಗಿದೆ.

    ಇಂದಿನಿಂದ ಮೂರು ದಿನ ಹಾಲು, ಮೊಸರು ಮಾರುವುದಿಲ್ಲ. ಟ್ಯಾಕ್ಸ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ. ಟೀ, ಕಾಫಿಯಲ್ಲಿ ಹಾಲು ಬಳಸುವುದಿಲ್ಲ. ಲೆಮೆನ್ ಮತ್ತು ಬ್ಲ್ಯಾಕ್‌ ಟೀ ಅಷ್ಟೇ ಮಾರುತ್ತೇವೆ ಎಂದು ಸಣ್ಣ ವರ್ತಕರು ‘ಪಬ್ಲಿಕ್ ಟಿವಿ’ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಕಾಂಡಿಮೆಂಟ್ಸ್ ವ್ಯಾಪಾರಿಗಳು ಬೋರ್ಡ್ ಕೂಡ ಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ನಂದಿನಿ ಬೂತ್‌ಗೆ 1 ಕೋಟಿ 3 ಲಕ್ಷ ಟ್ಯಾಕ್ಸ್!

    ಆದರೆ, ಹಲವು ಕಡೆ ಎಂದಿನಂತೆ ಹಾಲು ಮಾರಾಟ ನಡೆಯುತ್ತಿದೆ. ಇಂದು ಕಾರ್ಮಿಕ ಪರಿಷತ್‌ನಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಮನವಿ ಮಾಡಲಿದ್ದಾರೆ. ಬಸವೇಶ್ವರ ನಗರ, ಮಾಗಡಿ ರಸ್ತೆ ಸುತ್ತಮುತ್ತ ಪ್ರತಿಭಟನೆಗೆ ಮುಂದಾಗಲಿದ್ದಾರೆ.

    ರಾಜಾಜಿನಗರದ 10ನೇ ಮುಖ್ಯ ರಸ್ತೆಯಲ್ಲಿ ಇರುವ ಕಾಂಡಿಮೆಂಟ್ಸ್‌ಗಳಲ್ಲಿ ಹಾಲು ಮಾರಾಟ ಬಂದ್ ಮಾಡಲಾಗಿದೆ. 10ನೇ ಕ್ರಾಸ್‌ನ ಬ್ರಹ್ಮಶ್ರೀ ಕಾಫಿ ಬಾರ್ ಸೇರಿದಂತೆ ಹಲವು ಕಡೆ ಹಾಲು ಮಾರಾಟ ಮಾಡುತ್ತಿಲ್ಲ. ಎರಡು ದಿನ ಹಾಲು ಮಾರಾಟ ಆಗದೇ ಹೋದರೆ ನಷ್ಟ ಆದರೂ ಪರವಾಗಿಲ್ಲ, ನ್ಯಾಯ ಸಿಗಬೇಕು ಎನ್ನುತ್ತಿದ್ದಾರೆ ವರ್ತಕರು.