Tag: Slum Development Board

  • ಕೊಳಗೇರಿ ನಿವಾಸಿಗಳಿಗೆ ಶಾಸಕರಿಂದ ಹಕ್ಕು ಪತ್ರ ವಿತರಣೆ

    ಕೊಳಗೇರಿ ನಿವಾಸಿಗಳಿಗೆ ಶಾಸಕರಿಂದ ಹಕ್ಕು ಪತ್ರ ವಿತರಣೆ

    ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಅವರು ಹೆಬ್ಬಾಳದ ಕುಂತಿಗ್ರಾಮ ಎ-ಬ್ಲಾಕ್ ಮತ್ತು ಬಿ-ಬ್ಲಾಕ್ ನ ಘೋಷಿತ ಕೊಳಗೇರಿ ನಿವಾಸಿಗಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಕ್ಕುಪತ್ರ ವಿತರಿಸಿದರು.

    ಈ ವೇಳೆ ಮಾತನಾಡಿದ ಶಾಸಕರು, ಕ್ಷೇತ್ರದಾದ್ಯಂತ ಸುಮಾರು 2,000 ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಇದಕ್ಕೆ ಅಗತ್ಯವಿರುವ 60 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದೇನೆ. ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ತಲಾ 2 ಸಾವಿರ ಹಾಗೂ ಇತರೇ ವರ್ಗದ ಫಲಾನುಭವಿಗಳಿಗೆ ತಲಾ 4 ಸಾವಿರ ರೂಪಾಯಿ ಶುಲ್ಕವನ್ನು ಕೊಳಗೇರಿ ಮಂಡಳಿಗೆ ಪಾವತಿ ಮಾಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಮುಸ್ಲಿಂ ಸಮಾಜ ಹಠ ಮಾಡದೇ ಅನುಭವ ಮಂಟಪ ಬಿಟ್ಟು ಕೊಡಬೇಕು: ಮುತಾಲಿಕ್

    LETTER 02

    ಇದೇ ವೇಳೆ ಹೆಬ್ಬಾಳದ ವಾರ್ಡ್‌ನ ಗುಂಡಪ್ಪರೆಡ್ಡಿ ಬಡಾವಣೆಯಲ್ಲಿ ನೂತನ ಬೋರ್‌ವೆಲ್ ಕೊರೆಯುವ ಕಾಮಗಾರಿಗೆ ಚಾಲನೆ ನೀಡಿದರು. ಇದನ್ನೂ ಓದಿ: ಕಾವೇರಿ ನದಿಯಲ್ಲಿ ಬಿಎಂಡಬ್ಲ್ಯೂ ಕಾರು ಮುಳುಗಿಸಿ ನಾಪತ್ತೆಯಾದ!

    ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್, ಮಾಜಿ ಸದಸ್ಯ ಆನಂದ್‌ ಕುಮಾರ್, ಹೆಬ್ಬಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಾಜಿ, ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು, ಫಲಾನುಭವಿಗಳು, ಕಾರ್ಯಕರ್ತರು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.