Tag: Slogan

  • ಮೂವರನ್ನು ಯಾಕೆ ಅರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ: ಪ್ರಿಯಾಂಕ್‌ ಖರ್ಗೆ

    ಮೂವರನ್ನು ಯಾಕೆ ಅರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ: ಪ್ರಿಯಾಂಕ್‌ ಖರ್ಗೆ

    ಬೆಂಗಳೂರು: ಮೂವರನ್ನು ಪೊಲೀಸರು ಯಾಕೆ ಬಂಧನ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

    ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಪೊಲೀಸರು ಇಂದು ಮೂವರನ್ನು ಬಂಧನ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಪ್ರಿಯಾಂಕ್‌ ಖರ್ಗೆಯವರನ್ನು ಕೇಳಿದಾಗ, ಇವಾಗಲೂ FSL ರಿಪೋರ್ಟ್ ನಲ್ಲಿ‌ ಏನು ಬಂದಿದೆಯೋ ಗೊತ್ತಿಲ್ಲ. ಗೃಹ ಸಚಿವರು ಬಂದ ಮೇಲೆ‌ ಗೊತ್ತಾಗುತ್ತೆ. ವಿಚಾರಣೆ ಆಗಲಿ ಯಾಕೆ ಆತಂಕ ಎಂದಿದ್ದಾರೆ.

    ಮಾಧ್ಯಮಗಳ ಮೇಲೆ ಎಫ್ ಐಆರ್ ಹಾಕಲಿ ಅಂತ ಯಾರು ಹೇಳಿದ್ದಾರೆ. ಎಫ್ ಎಸ್ ಎಲ್ ರಿಪೋರ್ಟ್ ನಲ್ಲೂ ಕೂಗಿ‌ದ್ದಾರೆ ಅಂತ ಇದೆಯಾ..?, ಖಾಸಗಿ ರಿಪೋರ್ಟ್ ನ ಅಧಿಕೃತ ಅಂತ ನಾನು ಬಹಿರಂಗ ಪಡಿಸಿದ್ನಾ?. ಸರ್ಕಾರದ ಎಫ್ ಎಸ್ ಎಲ್ ವರದಿಯನ್ನು ನಾನು ನೋಡಿಲ್ಲ. ನಾಳೆ ಸರ್ಕಾರದ ಎಫ್ ಎಸ್ ಎಲ್ ರಿಪೋರ್ಟ್ ಬರಲಿ ಎಂದು ತಿಳಿಸಿದ್ದಾರೆ.

    ಮೂರು ಜನರನ್ನು ಯಾಕೆ ಆರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ. ಎಫ್ ಎಸ್ ಎಲ್ ಬಂದಿದೆಯಾ ವಾಯ್ಸ್ ಮ್ಯಾಚ್ ಆಗಿದೆಯಾ ಗೊತ್ತಿಲ್ಲ. ಸರ್ಕಾರದ ವರದಿಯೇ ಅಂತಿಮ. ಇವಾಗ್ಲೆ ಕಂಕ್ಲೂಶನ್ ಗೆ ಬರೋದು ಬೇಡ. ಅವರನ್ನ ಕರೆದುಕೊಂಡು ಹೋಗಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲದೆ ನಾನು ಮಾತನಾಡಲ್ಲ. ಹಕ್ಕು ಚ್ಯುತಿ ಮಂಡನೆ ಬಗ್ಗೆ ಮಾತನಾಡಿದ್ದು ನನಗೆ ಗೊತ್ತಿಲ್ಲ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ಫೋರೆನ್ಸಿಕ್ ವರದಿ ತರಿಸಿ ಬಹಿರಂಗಪಡಿಸಿದ ಬಿಜೆಪಿ ನಡೆ ದೇಶದ್ರೋಹದ ಕೆಲಸ: ಪ್ರಿಯಾಂಕ್‌ ಖರ್ಗೆ

    ಡಿಸಿಪಿ ಸ್ಪಷ್ಟನೆ: ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶದ ಸಂದರ್ಭದಲ್ಲಿ’ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಿದ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈSಐ ವರದಿ, ಸಾಂದರ್ಭಿಕ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯ ಸಾಕ್ಷಾಧಾರಗಳ ಮೇರೆಗೆ ಮೂವರನ್ನು ಬಂಧಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗಿರುತ್ತದೆ ಎಂದು ಈ ಸಂಬಂಧ ಸೆಂಟ್ರಲ್ ಡಿಸಿಪಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

  • ವಸತಿ ಶಾಲೆಯಲ್ಲಿ ಘೋಷವಾಕ್ಯ ಬದಲು; ಅಧಿಕಾರಿಯ ವಿರುದ್ಧ ಕ್ರಮ ವಹಿಸಿ: ಅಶೋಕ್ ಒತ್ತಾಯ

    ವಸತಿ ಶಾಲೆಯಲ್ಲಿ ಘೋಷವಾಕ್ಯ ಬದಲು; ಅಧಿಕಾರಿಯ ವಿರುದ್ಧ ಕ್ರಮ ವಹಿಸಿ: ಅಶೋಕ್ ಒತ್ತಾಯ

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದಲ್ಲಿ ಎಲ್ಲಾ ಅಧಿಕಾರ ಅಧಿಕಾರಿಗಳ ಕೈಯಲ್ಲೇ ಇದ್ದು, ಸಚಿವರು ಮನೆಯಲ್ಲಿ ಮಜಾ ಮಾಡುತ್ತಿದ್ದಾರೆ. ವಸತಿ ಶಾಲೆಯಲ್ಲಿ (Residential School) ರಾಷ್ಟ್ರಕವಿ ಕುವೆಂಪು ಅವರ ವಾಣಿಯನ್ನು ಬದಲಿಸಿದ ಅಧಿಕಾರಿಯ ವಿರುದ್ಧ ಕೂಡಲೇ ಕ್ರಮ ವಹಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಹುಚ್ಚುಚ್ಚಾಗಿ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದಾರೆ. ವಿಧಾನಸೌಧದ ಮುಂಭಾಗ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಘೋಷವಾಕ್ಯವಿದೆ. ಯಾರೋ ಕಾರ್ಯದರ್ಶಿಗಳು ಬಂದು ಅದನ್ನು ತೆಗೆದುಹಾಕಿ ಎಂದರೆ ಹೇಗಿರುತ್ತದೆ? ಶಾಲೆಯಲ್ಲಿ ಕೈ ಮುಗಿದು ಒಳಗೆ ಬನ್ನಿ ಎಂದರೆ ತಪ್ಪೇನು? ಬೇರೆ ದೇಶದ ಅಧ್ಯಕ್ಷರು ನಮ್ಮ ದೇಶಕ್ಕೆ ಬಂದರೆ ಕೈ ಮುಗಿಯುತ್ತಾರೆ. ಇದೇ ನಮ್ಮ ಸಂಸ್ಕೃತಿ ಎಂದರು. ಇದನ್ನೂ ಓದಿ: ಬಿಎಂಟಿಸಿ ನೌಕರರಿಗೆ 1 ಕೋಟಿ ರೂ. ಅಪಘಾತ ವಿಮೆ ಜಾರಿ

    ಈ ಕಾಂಗ್ರೆಸ್ ಸರ್ಕಾರಕ್ಕೆ ಕೇಡುಗಾಲ ಬಂದಿದೆ. ಯಾವುದೇ ಆದೇಶವೇ ಇಲ್ಲದೆ ಈ ಘೋಷವಾಕ್ಯವನ್ನು ಬದಲಿಸಿದ್ದಾರೆ. ಇಲ್ಲಿ ಸರ್ಕಾರ ಸತ್ತಿದೆಯೇ ಬದುಕಿದೆಯೇ ಎಂದು ಗೊತ್ತಿಲ್ಲ. ಕಳೆದ ಬಾರಿ ಇದ್ದ ಸಿದ್ದರಾಮಯ್ಯ ಈಗ ಇಲ್ಲ. ಅವರಿಗೆ ಸರ್ಕಾರದ ಮೇಲೆ ಯಾವುದೇ ಹಿಡಿತವೂ ಇಲ್ಲ. ಅವರು ಆಯವ್ಯಯವನ್ನು ಮಂಡಿಸಿದಾಗಲೇ ಅವರು ಮಂಡಿಸಿದ್ದಲ್ಲ ಎಂದು ಗೊತ್ತಾಯಿತು ಎಂದು ಕಿಡಿಕಾರಿದರು. ಇದನ್ನೂ ಓದಿ: ಕುವೆಂಪು ಘೋಷವಾಕ್ಯ ತೆಗೆದುಹಾಕಲು ಸರ್ಕಾರ ಆದೇಶಿಸಿಲ್ಲ: ಸಚಿವ ಮಹದೇವಪ್ಪ

    ಅಧಿಕಾರಿಗಳು ಸಚಿವರು, ಮುಖ್ಯಮಂತ್ರಿಗಳನ್ನು ಕೇಳದೆ ಬೇಕಾಬಿಟ್ಟಿಯಾಗಿ ಆದೇಶ ಮಾಡುತ್ತಿದ್ದಾರೆ ಎಂದರೆ, ಇಲ್ಲಿ ಯಾರಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಮಕ್ಕಳಿಗೆ ಪಾಠ ಅರ್ಥವಾಗಿಲ್ಲ ಎಂದರೆ ಶಿಕ್ಷಕರ ಬಳಿ ಪ್ರಶ್ನೆ ಮಾಡಬೇಕು. ಆದರೆ ಮಕ್ಕಳು ಧೈರ್ಯದಿಂದ ಯಾರಿಗೆ ಪ್ರಶ್ನೆ ಮಾಡಬೇಕು? ಇಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ ಎಂದು ಎಲ್ಲೂ ಬಳಸಿಲ್ಲ. ಈ ಸರ್ಕಾರ ದಿಕ್ಕು ದೆಸೆ ಇಲ್ಲದೆ ಎಡಬಿಡಂಗಿಯಾಗಿದ್ದು, ಅಧಿಕಾರಿಗಳ ಕೈಗೆ ಅಧಿಕಾರ ನೀಡಿ ಎಲ್ಲರೂ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಒಂದು ಉದಾಹರಣೆಯಲ್ಲೇ ಸರ್ಕಾರಿ ಇಲಾಖೆಗಳು ಹೇಗೆ ಕೆಲಸ ಮಾಡುತ್ತಿದೆ ಎಂದು ತಿಳಿಯುತ್ತದೆ ಎಂದು ದೂರಿದರು. ಇದನ್ನೂ ಓದಿ: ʻಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ – ಬರಹ ಬದಲಾವಣೆ ಸಮರ್ಥಿಸಿಕೊಂಡ ಲಕ್ಷ್ಮಿ ಹೆಬ್ಬಾಳ್ಕರ್‌

  • ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು

    ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು

    ಬೆಳಗಾವಿ: ನಾಡದ್ರೋಹಿ ಎಂಇಎಸ್ ಪುಂಡರು ಮತ್ತೆ ಬಾಲ ಬಿಚ್ಚಿದ್ದು ನಗರಕ್ಕೆ ಆಗಮಿಸಿರುವ ಮಹಾರಾಷ್ಟ್ರದ ಮಾಜಿ ಸಿಎಂ ಶರದ್ ಪವಾರ್ ಎದುರು ಪುಂಡಾಟಿಕೆ ಪ್ರದರ್ಶಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಾಡದ್ರೋಹಿ ಘೋಷಣೆ ಕೂಗಿದ ಘಟನೆ ನಡೆಯಿತು.

    ಶರದ್ ಪವಾರ್ ಎರಡು ದಿನಗಳ ಕಾಲ ನಗರದ ಪ್ರವಾಸ ಕೈಗೊಂಡಿದ್ದು ಇಂದು ಬೆಳಗಾವಿಯ ಮರಾಠಾ ಬ್ಯಾಂಕಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶರದ್ ಪವಾರ್ ಭಾಷಣ ಆರಂಭವಾಗುತ್ತಿದ್ದಂತೆ ಎಂಇಎಸ್ ಪುಂಡರು, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದು ಘೋಷಣೆ ಕೂಗಿದರು. ಇದನ್ನೂ ಓದಿ: ಲವ್ವರ್‌ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್‌ಮ್ಯಾನ್

    ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗುವ ವೇಳೆ ಶರದ್ ಪವಾರ್ ಸುಮ್ಮನೆ ನಿಂತರು. ನಾಡದ್ರೋಹಿಗಳ ಹಾರಾಟ ಮುಗಿದ ನಂತರ ಭಾಷಣ ಪ್ರಾರಂಭ ಮಾಡಬಹುದಾ ಎಂದು ಎಂಇಎಸ್ ಪುಂಡರನ್ನು ಶರದ್ ಪವಾರ್ ಕೇಳಿ, ನಿಮ್ಮ ಅನುಮತಿ ಪಡೆದು ಭಾಷಣ ಶುರುಮಾಡ್ತಿನಿ ಅಂತಾ ಹೇಳಿದರು. ಈ ವೇಳೆ ಎಂಇಎಸ್ ಮುಖಂಡ ದೀಪಕ್ ದಳವಿ, ಕೃಷ್ಣ ಮೊಪಸೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: 80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ? 

  • ತಾಜ್ ಮಹಲ್‍ನಲ್ಲಿ ಪಾಕ್ ಪರ ಘೋಷಣೆ- ಆರೋಪಿಗಳು ಪೊಲೀಸರ ವಶಕ್ಕೆ

    ತಾಜ್ ಮಹಲ್‍ನಲ್ಲಿ ಪಾಕ್ ಪರ ಘೋಷಣೆ- ಆರೋಪಿಗಳು ಪೊಲೀಸರ ವಶಕ್ಕೆ

    ಲಕ್ನೋ: ತಾಜ್ ಮಹಲ್‍ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ, ಪ್ರವಾಸಿಗರು ಇಬ್ಬರು ಆ ವ್ಯಕ್ತಿಗಳಿಗೆ ಥಳಿಸಿ ತಾಜ್ ಗಂಜ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರಲ್ಲಿ ಒಬ್ಬ ಫಿರೋಜಾಬಾದ್ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಖೆರ್ಸನ್ ನಗರ ರಷ್ಯಾ ವಶ, ಏಕಕಾಲದಲ್ಲಿ ಮೂರು ಕಡೆ ವೈಮಾನಿಕ ದಾಳಿ- 21 ಜನ ಸಾವು

    POLICE JEEP

    ಈ ಬಗ್ಗೆ ಮಾತನಾಡಿರುವ ತಾಜ್ ಗಂಜ್ ಪೊಲೀಸರು ಠಾಣೆಯ ಅಧಿಕಾರಿ ಭೂಪೇಂದ್ರ ಸಿಂಗ್ ಬಲಿಯಾನ್, ಪ್ರವಾಸಿಗರ ದೂರಿನಲ್ಲಿ ಆ ವ್ಯಕ್ತಿಗಳು ಯಾವ ಘೋಷಣೆ ಕೂಗಿದ್ದಾರೆ ಎನ್ನುವ ಉಲ್ಲೇಕ ಮಾಡಿಲ್ಲ. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ಉಂಟು ಮಾಡಿದ ಆರೋಪದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

  • ಮೋದಿ ಒಳ್ಳೆಯವರಲ್ಲ, RSS ಭಯೋತ್ಪಾದಕ ಸಂಘಟನೆ- ಕಾರ್ ಪೊಲೀಸ್ ವಶಕ್ಕೆ

    ಮೋದಿ ಒಳ್ಳೆಯವರಲ್ಲ, RSS ಭಯೋತ್ಪಾದಕ ಸಂಘಟನೆ- ಕಾರ್ ಪೊಲೀಸ್ ವಶಕ್ಕೆ

    ತಿರುವನಂತಪುರಂ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಳ್ಳೆಯವರಲ್ಲ. RSS   ಭಯೋತ್ಪಾದಕ ಸಂಘಟನೆಯಾಗಿದೆ ಎಂದು ಬರೆದಿದ್ದ ಕಾರನ್ನು ಪೊಲೀಸರು ತಿರುವನಂತಪುರಂನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

    ನಡೆದಿದ್ದೇನು?: ಹೋಟೆಲ್ ಒಂದಕ್ಕೆ ವ್ಯಕ್ತಿಯೊಬ್ಬ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ಬಳಿಕ ಹೋಟೆಲ್ ಒಳಗೆ ಬಂದು ಮದ್ಯ ಕೇಳಿ ಸಿಬ್ಬಂದಿ ಜೊತೆ ಜಗಳವಾಡಿಕೊಂಡಿದ್ದಾನೆ. ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಷ್ಟರಲ್ಲಿ ಆ ವ್ಯಕ್ತಿ ಕಾರನ್ನು ಅಲ್ಲಿಯೇ ಬಿಟ್ಟು ಆಟೋ ಹತ್ತಿ ಪರಾರಿಯಾಗಿದ್ದಾನೆ. ಇದನ್ನೂ ಓದಿ:  ಪಂಜಾಬ್‌ ಚುನಾವಣೆ – ನಟ ಸೋನು ಸೂದ್‌ ಸಹೋದರಿ ಕಾಂಗ್ರೆಸ್‌ ಸೇರ್ಪಡೆ

    ಸ್ಥಳಕ್ಕೆ ಬಂದ ಪೊಲೀಸರು ಕಾರು ತಪಾಸಣೆ ನಡೆಸಿದಾಗ ಅದರಲ್ಲಿ ಹಳೆಯ ಬಟ್ಟೆಗಳು, ಕೇಬಲ್‍ಗಳು, ಎಲೆಕ್ಟ್ರಾನಿಕ್ ವಸ್ತುಗಳು ದೊರೆತಿವೆ. ಆದರೆ ಕಾರ್ ಮೇಲೆ ವಿಚಿತ್ರವಾಗಿ ಬರೆಯಲಾಗಿತ್ತು. ಅನುಮಾನಗೊಂಡ ಪೊಲೀಸರು ಬಾಂಬ್ ಪತ್ತೆ ದಳ, ಶ್ವಾನ ದಳವನ್ನು ಕರೆಯಿಸಿ ತಪಾಸಣೆ ನಡೆಸಿದ್ದಾರೆ. ಬಳಿಕ ಕಾರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ – ಫೆ.10ರಿಂದ ಮತದಾನ, ಮಾ.10ರಂದು ಮತ ಎಣಿಕೆ

    ಕಾರ್ ಮೇಲೆ ಪ್ರಧಾನಿ ನರೇಂದ್ರ ರೈತರ ಹೋರಾಟದ ವೇಳೆ 750 ಜನರನ್ನು ಕೊಂದಿದ್ದಾನೆ. ಪ್ರಧಾನಿ ಒಳ್ಳೆಯವರಲ್ಲ. ಆರ್‌ಎಸ್‌ಎಸ್‌ ಒಂದು ಭಯೋತ್ಪಾದಕ ಸಂಘಟನೆಯಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಖೀಂಪುರದಲ್ಲಿ ನಾಲ್ವರನ್ನು ಹತ್ಯೆ ಮಾಡಿದ್ದಾರೆ ಎಂದು ಕಾರ್ ಮೇಲೆ ಬರೆಯಲಾಗಿತ್ತು.

  • ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ನನ್ನ ಪ್ರತ್ಯುತ್ತರ: ಸಿಎಂ

    ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ನನ್ನ ಪ್ರತ್ಯುತ್ತರ: ಸಿಎಂ

    ಬೀದರ್: ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ನನ್ನ ಪ್ರತ್ಯುತ್ತರ ಎಂದು ಗ್ರಾಮ ವಾಸ್ತವ್ಯದ ಬಗ್ಗೆ ಕೇಳಿಬಂದ ವಿಪಕ್ಷಗಳ ಟೀಕೆಗಳಿಗೆ ಸಿಎಂ ಅವರು ಕುವೆಂಪು ಅವರ ಸ್ಲೋಗನ್ ಮೂಲಕ ಟಾಂಗ್ ನೀಡಿದರು.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಯಾದಗಿರಿ ಜಿಲ್ಲೆಯ ಚಂಡರಕಿ ಶಾಲೆಯಲ್ಲಿ ಮಲಗಿದ್ದಾಗ ಕುವೆಂಪುರವರ ಸ್ಲೋಗನ್ ಓದಿದ್ದೆ. ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ ಎಂದು ಬರೆದಿತ್ತು. ಹೀಗಾಗಿ ಟೀಕೆ ಮಾಡುವವರಿಗೆ ಉತ್ತರ ನೀಡದಿರುವುದೇ ಸೂಕ್ತ ಎಂಬುದು ನನ್ನ ಅಭಿಪ್ರಾಯ ಎನ್ನುವ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದರು.

    ಗ್ರಾಮವಾಸ್ತವ್ಯದ ಕ್ರೆಡಿಟ್ ಜೆಡಿಎಸ್‍ಗೆ ಬರುತ್ತಿದೆ ಎನ್ನುವುದು ತಪ್ಪು. ಇದು ಸಮ್ಮಿಶ್ರ ಸರ್ಕಾರದ ಕ್ರೆಡಿಟಾಗಿದ್ದು ಗುರುವಾರದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲೆಯ ಮೂವರು ಮಂತ್ರಿಗಳು ಬಂದಿದ್ದರು. ಹಾಗಾಗಿ ಒಟ್ಟಾರೆ ಇದು ಸಮ್ಮಿಶ್ರ ಸರ್ಕಾರದ ಕ್ರೆಡಿಟ್ ಎಂದು ಸಿಎಂ ಸ್ಪಷ್ಟನೆ ನೀಡಿದರು.

    ವಿದೇಶ ಪ್ರವಾಸ ವಿಚಾರ ಮಾತನಾಡಿದ ಸಿಎಂ, ಆದಿಚುಂಚನಗಿರಿಯ ಶ್ರೀಗಳು ನ್ಯೂಜೆರ್ಸಿಯಲ್ಲಿ ಮಠವೊಂದನ್ನ ಕಟ್ಟಿಸುತ್ತಿದ್ದಾರೆ. ಅದರ ಶಂಕುಸ್ಥಾಪನೆಗಾಗಿ ನಾನು ಬರಲೇಬೇಕೆಂದು ಶ್ರೀಗಳು ಒತ್ತಾಯ ಮಾಡುತ್ತಿದ್ದಾರೆ. ನಾನೇನೂ ಸರ್ಕಾರದ ವೆಚ್ಚದಲ್ಲಿ ಹೋಗುತ್ತಿಲ್ಲ, ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

  • ಭಾರತ್ ಮಾತಾ ಕೀ ಜೈ ಘೋಷಣೆ ನಮ್ಮದು ಎಂದ ಕಾಂಗ್ರೆಸ್

    ಭಾರತ್ ಮಾತಾ ಕೀ ಜೈ ಘೋಷಣೆ ನಮ್ಮದು ಎಂದ ಕಾಂಗ್ರೆಸ್

    ಗಾಂಧಿನಗರ: ಭಾರತ್ ಮಾತಾ ಕೀ ಜೈ… ಇದು ಪ್ರತಿಯೊಬ್ಬ ಭಾರತೀಯರು ಎದೆಯುಬ್ಬಿಸಿ ಮೊಳಗಿಸೋ ಘೋಷಣೆ. ಆದರೆ ಈ ಘೋಷಣೆಗೂ ಪೇಟೆಂಟ್ ಅಥವಾ ಕಾಪಿರೈಟ್ ಆಗ್ಬಿಟ್ರೇ ಏನಾಗ್ಬೇಡ.

    ಗುಜರಾತ್‍ನ ಗಾಂಧಿನಗರದದಲ್ಲಿ ನಡೆದ ಸಮಾವೇಶದಲ್ಲಿ ಮಾತಾಡುವಾಗ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿಸಿನ್ಹಾ ಗೋಯಲ್ ಅವರು, `ಭಾರತ್ ಮಾತಾಕೀ ಜೈ’ ಎನ್ನುವುದು ನಮ್ಮ ಘೋಷಣೆ. ಸ್ವಾತಂತ್ರ್ಯ ಹೋರಾಟದ ವೇಳೆ ಮೊದಲಿಗೆ ನಾವು ಈ ಘೋಷಣೆಯನ್ನು ಬಳಸಿದ್ದು ಅಂತ ಪ್ರತಿಪಾದಿಸಿದ್ದಾರೆ. ಈ ಮೂಲಕ ರಾಷ್ಟ್ರೀಯತೆಯನ್ನು ಬಿತ್ತಲು ಯತ್ನಿಸಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಾರೆ.

    ಕಾಂಗ್ರೆಸಿಗರ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು, ಭಾರತ್ ಮಾತಾಕೀ ಜೈ ಎನ್ನುವುದು ಈಗ ನೆನಪಿಗೆ ಬಂತಾ ಎಂದು ಕೇಳಿದೆ. 2018ರ ರಾಜಸ್ಥಾನ ಚುನಾವಣೆ ವೇಳೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾರ್ಯಕರ್ತನೋರ್ವ ಈ ಘೋಷಣೆ ಕೂಗಿದ್ದಕ್ಕೆ ಅಲ್ಲಿದ್ದ ನಾಯಕರು ಅವರ ಬಾಯಿ ಮುಚ್ಚಿಸಿದ್ದರು. ಅಂದಹಾಗೆ, ಪ್ರಧಾನಿ ಮೋದಿ ಅವರು ತಮ್ಮ ಭಾಷಣದ ಅಂತ್ಯದಲ್ಲಿ ಎಲ್ಲಿ ಹೋದರೂ `ಭಾರತ್ ಮಾತಾ ಕೀ ಜೈ’ ಎಂದು ಹೇಳಿ ಭಾಷಣವನ್ನು ಮುಗಿಸುತ್ತಾರೆ.

    ಈ ಸುದ್ದಿಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv